For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಈ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಫೋನ್ ಇಟ್ಟುಕೊಳ್ಳಬೇಡಿ

|

ನಾವೆಲ್ಲರೂ ಒಂದು ಮಾತನ್ನು ಒಪ್ಪಿಕೊಳ್ಳಲೇಬೇಕು, ಏನೆಂದರೆ ನಾವೆಲ್ಲರೂ ಒಂದಲ್ಲಾ ಒಂದು ಪ್ರಮಾಣದಲ್ಲಿ ನಮ್ಮ ಮೊಬೈಲ್ ಫೋನುಗಳಿಗೆ ಗುಲಾಮರಾಗಿಯೇ ಇದ್ದೇವೆ. ನಮ್ಮ ನಿತ್ಯದ ಹಲವು ಕಾರ್ಯಗಳಿಗಾಗಿ ಈ ಪುಟ್ಟ ಸಾಧನದವನ್ನು ಬಳಸದೇ ಇರಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಬೆಳಿಗ್ಗೆದ್ದಾಗ ನಾವು ಮೊದಲು ನೋಡುವುದು ಇದರ ಪರದೆಯನ್ನು. ಅಲಾರಾಂ ಇರಿಸಿ ಮತ್ತೆ ಮಲಗುತ್ತೇವೆ. ಏಕೆಂದರೆ ಹತ್ತು ನಿಮಿಷದ ಮತ್ತೊಮ್ಮೆ ಹೊಡೆದುಕೊಳ್ಳುವ ಮೂಲಕ ಇನ್ನಷ್ಟು ಸವಿನಿದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂಬ ಅಚಲ ನಂಬಿಕೆ ನಮ್ಮದು.

ಸಂಗೀತ ಕೇಳಲು, ಇ-ಅಂಚೆ ನೋಡಲು, ಬ್ಯಾಂಕ್ ವಹಿವಾಟು, ವಿದ್ಯುತ್ ಬಿಲ್ ಪಾವತಿ ಮೊದಲಾದ ಹತ್ತು ಹಲವು ಕೆಲಸಗಳನ್ನು ಈ ಪುಟ್ಟ ಉಪಕರಣಗಳ ಮೂಲಕವೇ ಸಾಧಿಸಿಕೊಂಡು ಈ ಮೂಲಕ ವ್ಯಯವಾಗುತ್ತಿದ್ದ ಅಪಾರ ಸಮಯ ಹಾಗೂ ಶ್ರಮ ಉಳಿತಾಯವಾಗಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ವಿಪರೀತವಾದ ಬಳಕೆ ನಮಗೆ ಒಳ್ಳೆಯದು ಮಾಡುವುದರ ಜೊತೆಗೇ ನಮ್ಮನ್ನು ತನ್ನ ಗುಲಾಮನನ್ನಾಗಿಸಿ ಕೆಟ್ಟದ್ದನ್ನೂ ಮಾಡುತ್ತಿದೆ. ನಾವು ಫೋನನ್ನು ದೇಹದ ಯಾವುದೇ ಭಾಗದಲ್ಲಿರಿಸಿದರೂ ಸರಿ, ಇದರ ವಿದ್ಯುತ್ ಆಯಸ್ಕಾಂತೀಯ ಅಲೆಗಳಿಂದ ನಮ್ಮ ಆರೋಗ್ಯಕ್ಕೆ ಅಪಾಯವಿದೆ. ಒಂದು ವೇಳೆ ನಿಮಗೆ ಆರೋಗ್ಯಕ ಕಾಳಜಿ ಇದ್ದರೆ ನಿಮ್ಮ ಫೋನನ್ನು ಇರಿಸುವ ಈ ಏಳು ಸ್ಥಳಗಳಿಂದ ದೂರವಿರಿಸಬೇಕೆಂದು ತಜ್ಞರು ವಿವರಿಸುತ್ತಾರೆ.

ಜೇಬಿನಲ್ಲಿ

ಜೇಬಿನಲ್ಲಿ

ಜೇಬು, ಉಡುಪಿನ ಮುಂಭಾಗದಲ್ಲಿಯೇ ಇರಲಿ ಅಥವಾ ಹಿಂಭಾಗದಲ್ಲಿರಲಿ, ಇದರಿಂದ ಕೊಂಚ ಅನಾನುಕೂಲವಿದ್ದೇ ಇರುತ್ತದೆ. ಮೊಬೈಲು ಫೋನು ಬಳಸಲು ಪ್ರಾರಂಭಿಸಿದ ಬಳಿಕ ಆಗಾಗ ಹೊಟ್ಟೆ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಇದು ನಿಮ್ಮ ಜೇಬಿನಲ್ಲಿ ಮೊಬೈಲ್ ಇರಿಸಿದ ಪರಿಣಾಮವಿರಬಹುದು. ವೈದ್ಯರ ಪ್ರಕಾರ ಮೈಗಂಟಿದಂತೆ ಮೊಬೈಲನ್ನು ಜೇಬಿನಲ್ಲಿರಿಸಿಕೊಳ್ಳುವ ಮೂಲಕ ನಾವು ನಮ್ಮ ಆರೋಗ್ಯಕ್ಕೆ ನಮ್ಮ ಕೈಯಾರೆ ಗರಿಷ್ಟ ಅಪಾಯ ನೀಡುತ್ತಿದ್ದೇವೆ, ಏಕೆಂದರೆ ಈ ಮೂಲಕ ಮೊಬೈಲಿನಿಂದ ಹೊರಡುವ/ತಲುಪುವ ವಿವಿಧ ಬಗೆಯ ವಿಕಿರಣಗಳು ಶರೀರವನ್ನು ಬಾಧಿಸುತ್ತವೆ. ಅಲ್ಲದೇ ನಿಮ್ಮ ಮೊಬೈಲು ಸದಾ ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುತ್ತದೆ ಹಾಗೂ ಇದಕ್ಕಾಗಿ ಇದರಿಂದ ಸತತವಾಗಿ ವಿಕಿರಣಗಳು ಹೊಮ್ಮುತ್ತಲೇ ಇರುತ್ತವೆ. ಈ ವಿಕಿರಣಗಳು ಕೆಲವಾರು ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಪುರುಷರಲ್ಲಿ, ವೀರ್ಯಾಣುಗಳ ಚಲನಶೀಲತೆಯನ್ನು ಕುಂದಿಸುತ್ತದೆ. ಅಲ್ಲದೇ ಸದಾ ಪ್ಯಾಂಟಿನ ಹಿಂಭಾಗದ ಜೇಬಿನಲ್ಲಿರಿಸುವ ಮೂಲಕ sciatic pain (ಕೆಳಬೆನ್ನಿನಿಂದ ತೊಡಗಿ ತೊಡೆ, ಮೀನಖಂಡ ಹಾಗೂ ಪಾದಗಳವರೆಗೆ ಎದುರಾಗುವ ನೋವು) ಎಂಬ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

ತಲೆದಿಂಬಿನ ಕೆಳಗೆ

ತಲೆದಿಂಬಿನ ಕೆಳಗೆ

ಮಲಗುವ ಮುನ್ನ ತಲೆದಿಂಬಿನಡಿ ಮೊಬೈಲ್ ಇರಿಸಿ ಮಲಗುವುದು ಹೆಚ್ಚಿನವರ ಅಭ್ಯಾಸವಾಗಿದೆ. ಇದರಲ್ಲೇನು ತೊಂದರೆ ಎಂದು ಕೇಳುವವರೇ ಹೆಚ್ಚು! ಆದರೆ ಇಲ್ಲಿ ಮೊಬೈಲ್ ಇರಿಸುವುದ ರಿಂದಲೂ ಅಪಾಯ ತಪ್ಪಿದ್ದಲ್ಲ. ಕೆಲವರಂತೂ ಚಾರ್ಜರಿಗೆ ಸಿಕ್ಕಿಸಿಯೇ ತಲೆದಿಂಬಿನಡಿ ಇಡುತ್ತಾರೆ. ಇದರಿಂದ ಮೊಬೈಲ್ ಬಿಸಿಯಾಗುವುದು ಮಾತ್ರವಲ್ಲ ಸಿಡಿಯುವ ಅಪಾಯವೂ ಇದೆ! ರಾತ್ರಿಯ ಹೊತ್ತಿನಲ್ಲಿ ಮೊಬೈಲಿನ ಸ್ಕ್ರೀನ್ ನಿಂದ ಹೊಮ್ಮುವ ನೀಲಿ ಬೆಳಕನ್ನು ನಮ್ಮಲ್ಲಿ ಹೆಚ್ಚಿನವರು ಅಲಕ್ಷಿಸಿಬಿಡುತ್ತೇವೆ. ಆದರೆ ಈ ನೀಲಿ ಬೆಳಕಿಗೆ ನಮ್ಮ ಮೆದುಳಿನಲ್ಲಿ ಸ್ರವಿಸುವ ಮೆಲಟೋನಿನ್ ಎಂಬ ರಸದೂತದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿದೆ. ಈ ರಸದೂತವೇ ಗಾಢನಿದ್ದೆಯ ಸಮಯದಲ್ಲಿ ಕಣ್ಣುಗುಡ್ಡೆಗಳ ಚಲನೆಗೆ ಕಾರಣ ಹಾಗೂ ಈ ರಸದೂತ ಇಲ್ಲವಾದರೆ ನಿದ್ದೆ ಪಡೆಯಲು ಸಾಧ್ಯವಾಗದೇ ಹೋಗುತ್ತದೆ ಮತ್ತು ಮರುದಿನ ನಿದ್ದೆಯ ಕೊರತೆಯಿಂದ ಮಂಪರು ಕವಿದಿರುತ್ತದೆ. ಹಾಗಾಗಿ ಮಲಗುವ ಮುನ್ನ ನಿಮ್ಮ ಮೊಬೈಲು ಗರಿಷ್ಟ ಅಂತರದಲ್ಲಿರಿಸಿದ್ದಷ್ಟೂ ಗಾಢ ನಿದ್ದೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Most Read:ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!

ಶರ್ಟ್/ಕಂಚುಕದ ಅಡಿಯಲ್ಲಿಡುವುದು

ಶರ್ಟ್/ಕಂಚುಕದ ಅಡಿಯಲ್ಲಿಡುವುದು

ಕೆಲವರಿಗೆ ಶರ್ಟ್ ಅಥವಾ ಕಂಚುಕದ ಒಳಭಾಗದಲ್ಲಿ ಹಣದೊಂದಿಗೆ ಮೊಬೈಲನ್ನೂ ಇರಿಸಿಕೊಳ್ಳುವ ಅಭ್ಯಾಸವಿರುತ್ತದೆ (ಹೌದು!) ಆದರೆ ಇದು ಅಪಾಯಕಾರಿಯಾಗಿದೆ. ವಿಶೇಷವಾಗಿ ಕಂಚುಕದೊಳಗೆ ಮೊಬೈಲ್ ಇರಿಸಿಕೊಳ್ಳುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅತಿ ಹೆಚ್ಚಾಗುತ್ತದೆ. ಅಲ್ಲದೇ ಕರೆ ಅಥವಾ ಸಂದೇಶ ಬಂದಾಗ ಅದುರುವ (ವೈಬ್ರೇಟ್) ಮೂಲಕ ಚರ್ಮದ ಸಂವೇದನೆಯೂ ಕುಂದುತ್ತಾ ಹೋಗುತ್ತದೆ. ಅಲ್ಲದೇ ಕ್ರೀಡಾಪಟುಗಳು ಧರಿಸುವ ಕ್ರೀಡಾ ಕಂಚುಕದೊಳಗಿರಿಸಿದರೆ ಈ ಭಾಗದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗುವುದು ಸಾವಿರಾರು ಪಟ್ಟು ಹೆಚ್ಚುತ್ತದೆ.

 ಮುಖಕ್ಕೆ ಹತ್ತಿರವಾಗಿ

ಮುಖಕ್ಕೆ ಹತ್ತಿರವಾಗಿ

ಮೊಬೈಲು ಇರುವುದೇ ಮಾತನಾಡಲಿಕ್ಕಾಗಿ, ಅಂದರೆ ಕರೆಯನ್ನು ಸ್ವೀಕರಿಸಿದ ಬಳಿಕ ಇದರ ಇಯರ್ ಫೋನ್ ಕಿವಿಗೆ ಹತ್ತಿರಾಗಿ ಇರಿಸಿಕೊಳ್ಳಲೇಬೇಕಾಗುತ್ತದೆ. ಹೀಗೆ ಕೆನ್ನೆಗೆ ಅಂಟಿಸಿಕೊಂಡ ಪರದೆಯ ಮೇಲೆ ಕ್ರಮೇಣ ನೂರಾರು ವಿಧದ ಬ್ಯಾಕ್ಟೀರಿಯಾಗಳ ಆಗರವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಚರ್ಮದ ಮೇಲೆ ಆಗಾಧ ಪರಿಣಾಮ ಬೀರುತ್ತವೆ. ಸೋಂಕು, ಚರ್ಮ ಕೆಂಪಗಾಗುವುದುವು, ಮೊಡವೆಗಳು ಮೊದಲಾದವು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಸತತವಾಗಿ ಕೆನ್ನೆಗೆ ಮೊಬೈಲು ಅಂಟಿಕೊಂಡಷ್ಟೂ ವೃದಾಪ್ಯದ ಸೂಚನೆಗಳು ಆವರಿಸುವುದೂ ಶೀಘ್ರವಾಗುತ್ತದೆ. ಹಾಗಾಗಿ ಈ ತೊಂದರೆಯನ್ನು ಕನಿಷ್ಟವಾಗಿರಿಸಲು ಹೆಡ್ ಫೋನ್ ಅಥವಾ ಇಯರ್ ಫೋನ್ ಬಳಸಿಯೇ ಮಾತನಾಡಿ.ಇದರಿಂದ ಮೊಬೈಲಿನ ಪರದೆ ಮುಖದ ಚರ್ಮದ ಸಂಪರ್ಕಕ್ಕೆ ಬರುವುದು ತಪ್ಪುತ್ತದೆ.

 ಶೌಚಾಲಯದಲ್ಲಿ

ಶೌಚಾಲಯದಲ್ಲಿ

ಹಿಂದಿನ ದಿನಗಳಲ್ಲಿ ಶೌಚಾಲಯದಲ್ಲಿ ವೃತ್ತ ಪತ್ರಿಕೆ ಓದುವ ಚಟ ಕಲವರಿಗಿತ್ತು. ಇದನ್ನೇ ಅನಾರೋಗ್ಯಕರ ಎಂದು ವೈದ್ಯರು ಸಾರುತ್ತಿದ್ದರು. ಆದರೆ ಪ್ರತಿಬಾರಿಯೂ ಬೇರೆಯೇ ವೃತ್ತಪತ್ರಿಕೆ ಕೊಂಡೊಯ್ಯುತ್ತಿದ್ದುದರಿಂದ ಇದೇನೂ ಅಷ್ಟೊಂದು ಅಪಾಯಕಾರಿಯಾಗಿರಲಿಲ್ಲ. ಆದರೆ ಮೊಬೈಲನ್ನು ಶೌಚಾಲಯಕ್ಕೆ ಕೊಂಡೊಯ್ದಾಗ ಗಾಳಿಯಲ್ಲಿರುವ ಹಲವಾರು ಬಗೆಯ ಸೋಂಕುಕಾರಕ ವೈರಸ್ಸು, ಬ್ಯಾಕ್ಟೀರಿಯಾಗಳು ಪರದೆಯ ಮೇಲೆ ಅಂಟಿಕೊಳ್ಳುತ್ತವೆ. ಪ್ರತಿಬಾರಿಯೂ ಇದೇ ಮೊಬೈಲನ್ನು ಶೌಚಾಲಯಕ್ಕೆ ಕೊಂಡೊಯ್ಯುವ ಮೂಲಕ ನಾವೇ ನಮ್ಮ ಕೈಯಾರೆ ಈ ವೈರಸ್ಸು ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚುವಂತೆ ಮಾಡುತ್ತೇವೆ. ಹಾಗಾಗಿ ಶೌಚಾಲಯಕ್ಕೆ ಹೋಗುವ ಮುನ್ನ ಹೊರಗಿಟ್ಟು ಹೋಗುವುದೇ ಉತ್ತಮ.

Most Read: ಅತಿಯಾದ ಮೊಬೈಲ್ ಫೋನ್-ಆಪತ್ತು ಕಟ್ಟಿಟ್ಟ ಬುತ್ತಿ!

ಕಾರಿನ ಗವಸು ಇರಿಸುವ ಸ್ಥಳ (Glove compartment)

ಕಾರಿನ ಗವಸು ಇರಿಸುವ ಸ್ಥಳ (Glove compartment)

ಮೊಬೈಲನ್ನು ಈ ಸ್ಥಳದಲ್ಲಿರಿಸುವ ಮೂಲಕ ಮೊಬೈಲಿಗೂ ಘಾಸಿಯಾಗಬಹುದು ಜೊತೆಗೆ ಆರೋಗ್ಯಕ್ಕೂ ಮಾರಕವಾಗಬಹುದು. ಏಕೆಂದರೆ ಕಾರಿನ ಈ ಸ್ಥಳದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದು ಈ ಭಾಗದ ಪ್ಲಾಸ್ಟಿಕ್ಕಿನಿಂದ ಸತತವಾಗಿ ಕೆಲವು ರಾಸಾಯನಿಕಗಳು ಬಿಡುಗಡೆಯಾಗುತ್ತಲೇ ಇರುತ್ತವೆ (ಇದೇ ಕಾರಣಕ್ಕೆ ಬಿಸಿಲಿನಲ್ಲಿ ನಿಂತಿದ್ದ ಕಾರಿನಲ್ಲಿ ಕುಳಿತುಕೊಳ್ಳುವ ಮುನ್ನ ಫ್ಯಾನ್ ಜೋರಾಗಿ ಹಾಕಿ ಕಿಟಕಿ ಗಾಜುಗಳನ್ನೆಲ್ಲಾ ಇಳಿಸಿ ಒಳಗಿನ ಗಾಳಿ ಹೊರಹೋಗುವಂತೆ ಮಾಡಬೇಕು). ಅಲ್ಲದೇ ಸೂರ್ಯನ ಬಿಸಿಯಿಂದಾಗಿ ಈ ಭಾಗವೂ ಸಾಕಷ್ಟು ಬಿಸಿಯಾಗಿಯೇ ಇರುತ್ತದೆ. ಇಲ್ಲಿ ಮೊಬೈಲ್ ಇರಿಸಿದರೆ ಈ ಬಿಸಿಯ ವಾತಾವರಣದಲ್ಲಿ ಬ್ಯಾಟರಿ ಹಿಗ್ಗಿ ಸಿಡಿಯುವ ಭಯವಿರುತ್ತದೆ. ಬಿಸಿಯಾಗಿರುವ ಮೊಬೈಲನ್ನು ತಂಪೊಗೊಳಿಸುವ ಯಾವುದೇ ವ್ಯವಸ್ಥೆ (ಫ್ಯಾನ್) ಮೊಬೈಲಿನಲ್ಲಿ ಇರುವುದಿಲ್ಲವಾದುದರಿಂದ ಇದರಿಂದ ಹೊರಡುವ ವಿಕಿರಣಗಳೂ ಹೆಚ್ಚೇ ಇರುತ್ತವೆ. ಈ ಬಿಸಿಯಾಗಿರುವ ಹಿಡಿದುಕೊಂಡ ಮೊಬೈಲ್ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿಯಾಗಿದೆ.

ಮಕ್ಕಳ ತಳ್ಳುಗಾಡಿಗಳು (Strollers)

ಮಕ್ಕಳ ತಳ್ಳುಗಾಡಿಗಳು (Strollers)

ಮಕ್ಕಳ ದೇಹ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಇವರ ಆರೋಗ್ಯ ಸದಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮೊಬೈಲು ಮಕ್ಕಳಿಗೆ ಹೇಗಿದ್ದರೂ ಅಪಾಯಕಾರಿಯೇ ಆಗಿದೆ. ಇಂದಿನ ಮಕ್ಕಳಿಗೆ ಮೊಬೈಲಿನ ಆಟವೇ ಹೆಚ್ಚು ಆಕರ್ಷಕವಾಗಿರುವ ಕಾರಣ ಇದರಿಂದ ಮಕ್ಕಳನ್ನು ವಿಮುಖರಾಗಿಸುವುದು ಪಾಲಕರಿಗೆ ಬಹಳ ಕಷ್ಟದ ಕೆಲಸ. ಆದರೆ ಮಕ್ಕಳನ್ನು ಹೊರಗೆ ಕರೆದೊಯ್ಯಲು ಬಳಸುವ ತಳ್ಳುಗಾಡಿಯಲ್ಲಿ ಮೊಬೈಲನ್ನು ಇರಿಸುವ ಮೂಲಕ ಮಕ್ಕಳಿಗೆ ಎಷ್ಟು ಅಪಾಯಕಾರಿ ವಾತಾವರಣ ದಲ್ಲಿರಿಸುತ್ತಿದ್ದೇವೆ ಎಂದೇ ಪಾಲಕರಿಗೆ ಅರಿವಿರುವುದಿಲ್ಲ. ಅವಸರದಲ್ಲಿಯೋ ಗೊತ್ತಿದ್ದೋ ತಳ್ಳುಗಾಡಿಯಲ್ಲಿರಿಸಿದರೆ ಮಕ್ಕಳ ಸ್ವಭಾವದಲ್ಲಿ ಬದಲಾವಣೆ ಮತ್ತು ಗಮನ ನೀಡಲು ಸಾಧ್ಯವಾಗದೇ ಹೋಗುವ ತೊಂದರೆ ಎದುರಾಗಬಹುದು ಹಾಗೂ ಈ ಸ್ಥಿತಿ ಎದುರಾಗಿರುವುದನ್ನು ಈಗಾಗಲೇ ಗಮನಿಸಲಾಗಿದೆ. ಅಷ್ಟೇ ಅಲ್ಲ, ಗರ್ಭಾವಸ್ಥೆಯಲ್ಲಿ ಮೊಬೈಲನ್ನು ಹತ್ತಿರವಿರಿಸಿ ಕೊಂಡಿದ್ದಾಗಲೂ ಮಗುವಿನ ಮಾನಸಿಕ ಸಾಮರ್ಥ್ಯ ಕುಂದಿರುವುದು ಕಂಡುಬಂದಿದೆ.

English summary

These places you should never keep your phone!

Let's face it, phone obsession is real. We are living in an age where doing anything without our favourite gadget in hand is next to impossible. You wake up and check your phone. Set an alarm on your phone and go to sleep. We might think that phones are making our lives simple, but in reality their constant presence is doing more harm than good. Something as simple as keeping your phone in your pocket can be quite harmful for your health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more