For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ವಿಷಯದಲ್ಲಿ ಭಯಪಡುವುದು!

By Arshad
|

ದಾಂಪತ್ಯ ಸುಖ ಅಥವಾ ಲೈಂಗಿಕ ಕ್ರಿಯೆಯ ಮೂಲಕ ಪಡೆಯುವ ತೃಪ್ತಿಗೆ ಹಲವಾರು ಆಯಾಮಗಳಿವೆ: ವಿನೋದಕರ, ಪ್ರಚೋದಕ, ಸ್ವಾಭಾವಿಕ ಅಥವಾ ನಿರಾಳವಾಗಿಸುವಂತಹದ್ದಾಗಿದೆ. ಆದರೆ ಕೆಲವು ವ್ಯಕ್ತಿಗಳಿಗೆ ಲೈಂಗಿಕ ಕ್ರಿಯೆ ಎಂದ ತಕ್ಷಣ ಯಾವುದೋ ಬಗೆಯ ಭಯ ಆವರಿಸುತ್ತದೆ. ವಿಶೇಷವಾಗಿ, ನಾವು, ಮಹಿಳೆಯರಿಗೆ ನಮ್ಮ ಲೈಂಗಿಕ ಕಾಮನೆಗಳು ಹಾಗೂ ಆಸೆಗಳನ್ನು ಪಡೆಯುವ ಬಗ್ಗೆ ನಮಗೆ ಆತ್ಮವಿಶ್ವಾಸವಿರಬೇಕು ಹಾಗೂ ಇದಕ್ಕೆ ಬೇಕಾದ ಆಯ್ಕೆಗಳನ್ನು ಪಡೆಯುವ ಸ್ವಾತಂತ್ರ್ಯವೂ ಇರಬೇಕು. ಆದರೆ ಎಲ್ಲಾ ಮಹಿಳೆಯರಲ್ಲಿ ಈ ಗುಣ ಕಂಡುಬರುವುದಿಲ್ಲ. ಲೈಂಗಿಕ ಕ್ರಿಯೆಯ ಬಗ್ಗೆ ಭಯಪಡಲು ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಕಾರಣಗಳಿರಬಹುದು.

ಈ ಭಯ ಮೇಲ್ನೋಟಕ್ಕೆ ಕಾಣಬರುವುದಿಲ್ಲ ಹಾಗೂ ಹೆಚ್ಚಿನ ಮಹಿಳೆಯರಿಗೆ ಈ ಬಗೆಯ ಭಯವಿರುವುದೇ ಗೊತ್ತಿರುವುದಿಲ್ಲ. ಈ ಭಯ ಇವರ ಮನಸ್ಸಿನಾಳದಲ್ಲಿ ಹುದುಗಿದ್ದು ಲೈಂಗಿಕ ಕ್ರಿಯೆಯಿಂದ ದೂರವಿರಲು ಸಮಯದಂಡ, ನಿರರ್ಥಕ ಮೊದಲಾದ ತಮ್ಮದೇ ಆದ ಕಾರಣಗಳನ್ನೂ ತರ್ಕಗಳನ್ನೂ ಒಡ್ಡುತ್ತಾ ಈ ಭಯವನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತಾ ನಿಧಾನವಾಗಿ ನಿಸರ್ಗನಿಯಮದಿಂದ ದೂರಾಗುತ್ತಾ ಸಾಗುತ್ತಾರೆ.

ನೀವು ಈಗಾಗಲೇ ಬಹಳಷ್ಟು ಅನುಭವಿ ಅಥವಾ ಇನ್ನೂ ಅನುಭವವೇ ಆಗದಿರುವ ಅಥವಾ ಸಾಮಾನ್ಯ ಅನುಭವ ಇರುವ ಮಹಿಳೆಯಾಗಿರಬಹುದು. ಒಂದು ವೇಳೆ ನಿಮ್ಮ ಲೈಂಗಿಕ ಜೀವನವನ್ನು ನಿಮ್ಮಲ್ಲಿ ಹುದುಗಿರುವ ಭಯ ಅಡ್ಡಿಗೊಳಿಸುತ್ತಿದ್ದರೆ ಇದೊಂದು ದೊಡ್ಡ ತೊಂದರೆಯೇ ಆಗಿದೆ. ಯಾವುದೇ ದಾಂಪತ್ಯದಲ್ಲಿ ಲೈಂಗಿಕ ಕ್ರಿಯೆ ಪ್ರಮುಖ ಘಟ್ಟವಾಗಿದ್ದು ಸಂಸಾರ ಹಾಗೂ ಸಾಂಗತ್ಯ ಸುಗಮವಾಗಿ ನಡೆಯಲು ಅಗತ್ಯವಾಗಿದೆ. ಪ್ರತಿ ಮನುಷ್ಯರಿಗೂ ಸಂಗಾತಿಯೊಬ್ಬರ ಅಗತ್ಯವಿದ್ದು ಜೀವನ ಸುಖಮಯವಾಗಲು ಸಾಧ್ಯವಾಗುತ್ತದೆ.

ಒಂದು ವೇಳೆ ನಿಮ್ಮಲ್ಲಿ ಈ ಭಯ ಈಗಾಗಲೇ ಮನೆಮಾಡಿದ್ದರೆ ಇದಕ್ಕಾಗಿ ಮೊದಲು ನೀವೇ ಮಾಡಬೇಕಾದ ಕೆಲಸವೆಂದರೆ ನಿಮ್ಮನ್ನೇ ನೀವು ಹೊರಗಿನ ವ್ಯಕ್ತಿಯಾಗಿ ಕಂಡು ಏಕಾಗಿ ನೀವು ಲೈಂಗಿಕ ಕ್ರಿಯೆಗೆ ಒಲವು ತೋರುತ್ತಿಲ್ಲ ಎಂಬುದನ್ನು ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕು. ಹಿಂದಿನ ಕಹಿ ಘಟನೆ ಅಥವಾ ಸತತವಾದ ಕಹಿ ಘಟನೆಗಳು ಇಂದೂ ಈ ಭಯಕ್ಕೆ ಕಾರಣವಾಗಿದೆಯೇ ಅಥವಾ ಬೇರಾವುದೋ ಕಾರಣಕ್ಕೆ ಇತರರಿಗೆ ಸಹ್ಯವಾಗಿರುವ ಈ ಸುಖ ನಿಮಗೆ ಅಸಹ್ಯವಾಗಿದೆಯೇ ಎಂದು ಕೇಳಿಕೊಳ್ಳಬೇಕು.

ಈ ಬಗ್ಗೆ ನೀವು ಇದುವರೆಗೆ ಅನುಭವಿಸಿಕೊಂಡು ಬರುತ್ತಿರುವ ತಪ್ಪಿತಸ್ಥ ಭಾವನೆ, ನಾಚಿಕೆ ಅಥವಾ ನಿಮ್ಮದೇ ಭಾವನೆಗಳಲ್ಲಿ ಅವಮಾನ ಅನುಭವಿಸಿದ್ದರೆ ಮೊತ್ತ ಮೊದಲಾಗಿ ಇವುಗಳನ್ನು ಒಂದು ಕಹಿಘಟನೆ ಎಂದು ಒಪ್ಪಿಕೊಂಡು ಅಷ್ಟಕ್ಕೂ ಇದರಿಂದೇನಾಯ್ತು, ಇದಕ್ಕಾಗಿ ನಾನೇಕೆ ನನ್ನ ಹಕ್ಕುಗಳಿಂದ ವಂಚಿತಳಾಗಬೇಕು? ನನ್ನದಲ್ಲದ ತಪ್ಪಿಗೆ ನಾನೇಕೆ ಶಿಕ್ಷೆ ಅನುಭವಿಸಬೇಕು? ತಪ್ಪು ಮಾಡಿದ್ದರೆ ಇಷ್ಟು ಶಿಕ್ಷೆ ಅನುಭವಿಸಿದ್ದು ಸಾಲದೇ? ಮೊದಲಾದ ಸಕರಾತ್ಮಕ ಚಿಂತನೆಗಳಿಂದ ನೀವೇ ನಿಮಗೆ ಒತ್ತಾಸೆ ನೀಡಬೇಕು. ನೆನಪಿಡಿ, ನಿಮ್ಮ ಪರಿಸ್ಥಿತಿಯನ್ನು ನೀವೇ ಹೊರಗಿನ ವ್ಯಕ್ತಿಯಾಗಿ ನಿಮ್ಮನ್ನೇ ನೋಡಿಕೊಂಡು ಈ ಪ್ರಕಾರ ಭಿನ್ನವಾದ ಚಿಂತನೆಗೆ ಒಡ್ಡಿಕೊಳ್ಳಿ, ಇತರರ ಸಹಾಯ ಪಡೆಯದಿರಿ. ಬನ್ನಿ, ಈ ಬಗ್ಗೆ ಸಾಮಾನ್ಯವಾಗಿ ಮಹಿಳೆಯರು ಎದುರಿಸುವ ಭಯಗಳು ಯಾವುವು ಎಂಬುದನ್ನು ನೋಡೋಣ:

1.ತಾನು ಬೆತ್ತಲೆಯಾಗಿದ್ದರೆ ಹೇಗೆ ಕಾಣುತ್ತೇನೋ ಎಂಬ ಹೆದರಿಕೆ

1.ತಾನು ಬೆತ್ತಲೆಯಾಗಿದ್ದರೆ ಹೇಗೆ ಕಾಣುತ್ತೇನೋ ಎಂಬ ಹೆದರಿಕೆ

ಕೆಲವು ಮಹಿಳೆಯರಿಗೆ ತಾವು ಬೆತ್ತಲೆಯಾಗಿದ್ದರೆ ಸುಂದರಳಾಗಿ ಕಾಣುವುದಿಲ್ಲ ಎಂಬ ಭಾವನೆ ಇದ್ದು ಈ ಮನಸ್ಸಿನಾಳದ ಭಾವನೆಯೇ ಭಯದ ರೂಪ ಪಡೆದು ನಿಮ್ಮ ಮನೋಭಾವನೆಯನ್ನು ಕೊಲ್ಲುತ್ತಿರುತ್ತದೆ. ಹೆಚ್ಚಿನ ಮಹಿಳೆಯರು (ಕೆಲವು ಪುರುಷರು ಸಹಾ) ತಮ್ಮ ಯಾವುದೋ ಅಂಗದ ಬಗ್ಗೆ ಕೀಳರಿಮೆ ಹೊಂದಿರುತ್ತಾರೆ. ಇದರಲ್ಲಿ ಅತಿ ಸಾಮಾನ್ಯವಾದುದು ಮುಂದೆ ಬಂದಿರುವ ಹೊಟ್ಟೆ! ಇದರ ಹೊರತಾಗಿ ಸ್ಥೂಲಕಾಯ, ಕೃಶಕಾಯ, ತ್ವಚೆಯ ಬಣ್ಣ, ತೊಡೆಗಳು ಅತಿ ಹೆಚ್ಚೇ ಊದಿಕೊಂಡಿರುವುದು, ಸ್ತನಗಳು ದೇಹದ ಗಾತ್ರಕ್ಕೆ ಸರಿಸಮಾನವಿಲ್ಲದೇ ಕಿರಿದು ಅಥವಾ ಅತಿ ಹಿರಿದೆನಿಸುವುದು, ಕೋಳಿಕಾಲಿನಂತೆ ಕಾಣುವ ಸಪೂರವಾದ ಕಾಲುಗಳು, ಪ್ಯಾಂಟ್ ತೊಟ್ಟಾಗ ಬೆಲ್ಟ್ ನಿಂದ ಹೊರದಬ್ಬಲ್ಪಡುವ ಕೊಬ್ಬು, ಮುಖದಲ್ಲಿರುವ ಮೊಡವೆ, ಕಪ್ಪುತಲೆ, ಸೌಂದರ್ಯವನ್ನು ಕುಂದಿಸುವ ದೊಡ್ಡ ಮಚ್ಚೆಗಳು ಮೊದಲಾದ ಹತ್ತು ಹಲವು ಕಾರಣಗಳಿವೆ. ಮಾನವರಾಗಿ ನಮ್ಮಲ್ಲಿರುವ ದೊಡ್ಡ ದೌರ್ಬಲ್ಯವೆಂದರೆ ಬಿಳಿಸೀರೆಯಲ್ಲಿರುವ ಒಂದೇ ಒಂದು ಕಪ್ಪು ಚುಕ್ಕೆ ಇದ್ದರೆ ಆ ಚುಕ್ಕೆಯನ್ನೇ ದೊಡ್ಡದಾಗಿಸುವುದೇ ಹೊರತು ಆ ಚುಕ್ಕೆಯ ಹೊರತಾಗಿ ಇಡಿಯ ಸೀರೆಯಷ್ಟೂ ಶುಭ್ರ ಬಿಳಿಯಾಗಿರುವ ಬಗ್ಗೆ ಒಂದು ಮಾತೂ ಆಡದೇ ಇರುವುದು. ವಾಸ್ತವವಾಗಿ, ನಮ್ಮ ಭಯಕ್ಕೆ ಕಾರಣವಾಗಿರುವ ಈ ಕೊರತೆಗಳೆಲ್ಲಾ ಸೀರೆಯ ಮೇಲಿನ ಚುಕ್ಕೆಯಂತೆ! ಒಂದು ಬಾರಿ ಈ ಚುಕ್ಕೆಯನ್ನು ನಿರ್ಲಕ್ಷಿಸಿ ಸೀರೆಯಲ್ಲಿರುವ ಬಿಳಿಯ ಶುಭ್ರ ಭಾಗದ ಬಗ್ಗೆ ಗಮನ ನೀಡಹತ್ತಿದರೆ ಈ ಭಯ ಎಷ್ಟು ಕ್ಷುಲ್ಲುಕ, ಏಕಾಗಿ ಈ ನಗಣ್ಯವಾದ ಶಾರೀರಿಕ ಲಕ್ಷಣಕ್ಕೆ ನಾನೆಷ್ಟು ಗಮನ ಕೊಟ್ಟೆ, ನನ್ನಲ್ಲಿರುವ ಇತರ ಒಳ್ಳೆಯ ಗುಣ ಅಥವಾ ಶಾರೀರಿಕ ಲಕ್ಷಣಗಳೇಕೆ ನನಗೆ ಕಾಣಲಿಲ್ಲ ಎಂಬ ಚಿಂತನೆಗಳು ಯಾವಾಗ ನಿಮ್ಮಲ್ಲಿ ಮೂಡುತ್ತವೆಯೋ ಈ ಭಯ ಮಂಜಿನ ಹನಿಯಂತೆ ಕರಗಿ ಹೋಗುತ್ತದೆ. ನೆನಪಿಡಿ, ಒಂದಿನಿತೂ ಶಾರೀರಿಕ ನ್ಯೂನ್ಯತೆಯಿಲ್ಲದ ಮನುಷ್ಯನೇ ಈ ಜಗತ್ತಿನಲ್ಲಿಲ್ಲ!

2.ಸಹಜಕ್ರಿಯೆಗಳು ಆ ಸಮಯದಲ್ಲಿ ಜರುಗುವ ಭಯ

2.ಸಹಜಕ್ರಿಯೆಗಳು ಆ ಸಮಯದಲ್ಲಿ ಜರುಗುವ ಭಯ

ಮನುಷ್ಯರಾಗಿ ನಮ್ಮ ದೇಹದ ಕೆಲವು ಅನೈಚ್ಛಿಕ ಕ್ರಿಯೆಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಉದಾಹರಣೆಗೆ ತೇಗು. ಮಿಲನ ಕ್ರಿಯೆಯ ಸಮಯದ ನಡುವೆ ಎಲ್ಲಾದರೂ ಕೊಂಚ ಹೊತ್ತು ಹಿಂದೆ ಸೇವಿಸಿದ್ದ ಸ್ವಾದಿಷ್ಟ ಊಟದ ಪ್ರಭಾವದಿಂದ ತೇಗು ಬಂದುಬಿಟ್ಟರೆ? ಈ ಬಗೆಯ ಭಯವೂ ಮಿಲನಕ್ರಿಯೆಯಿಂದ ದೂರ ತಳ್ಳಬಹುದು.

3.ಮಿಲನಕ್ರಿಯೆಯಲ್ಲಿ ಉತ್ತಮವಾಗಿ ಸ್ಪಂದಿಸದ ಬಗ್ಗೆ ಭಯ

3.ಮಿಲನಕ್ರಿಯೆಯಲ್ಲಿ ಉತ್ತಮವಾಗಿ ಸ್ಪಂದಿಸದ ಬಗ್ಗೆ ಭಯ

ಒಂದು ವೇಳೆ ನಿಮಗೆ ಇನ್ನೂ ಲೈಂಗಿಕ ಕ್ರಿಯೆಯ ಅನುಭವವಾಗಿರದೇ ಇದ್ದರೆ ಅಥವಾ ಇದುವರೆಗೆ ಅನುಭವಿಸಿದ ಅನುಭವಗಳು ಅಷ್ಟೇನೂ ಮುದ ನೀಡಿರದೇ ಇದ್ದರೆ, ನಿಮಗೆ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದು ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವೇ ಎಂಬ ಭಯ ಮೂಡಿರುತ್ತದೆ. ಸಾಮಾನ್ಯವಾಗಿ ಮಹಿಳೆಯರು ತಮಗೇನು ಬೇಕು ಅಥವಾ ತಮಗೇನು ಇಷ್ಟ ಎಂಬುದನ್ನು ನೇರವಾಗಿ ಹೇಳದೇ ಕೇವಲ ಸಂಗಾತಿಯ ಅಣತಿಗೆ ಮಾತ್ರವೇ ಸ್ಪಂದಿಸುತ್ತಿರುತ್ತಾರೆ. ಈ ಭಾವನೆಯೇ ದೊಡ್ಡ ತಪ್ಪಾಗಿದ್ದು ಮಿಲನದ ಸಮಯದಲ್ಲಿ ಮಾಲಿಕ-ಗುಲಾಮನ ಸಂಬಂಧದಂತಿರುತ್ತದೆ. ಹಾಗಾಗಿ ಮಿಲನಸಮಯದಲ್ಲಿ ದಂಪತಿಗಳಿಬ್ಬರೂ ಸಮನಾಗಿ ತಮಗೇನು ಬೇಕು ಮತ್ತು ತಮಗೇನು ಇಷ್ಟ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಪರಸ್ಪರರಿಗೆ ಅನುಕೂಲಕರವಾಗುವಂತೆ ಮುಂದುವರೆಯಬೇಕು. ನವದಂಪತಿಗಳಿಗೆ ತಮ್ಮ ಸಂಗಾತಿಗೆ ಏನು ಇಷ್ಟ ಮತ್ತು ಇಷ್ಟವಿಲ್ಲ ಎಂಬುದನ್ನು ಸಮಗ್ರವಾಗಿ ತಿಳಿದುಕೊಳ್ಳಲು ಕೊಂಚ ಸಮಯ ಬೇಕಾಗಬಹುದು. ಒಂದು ವೇಳೆ ಇದುವರೆಗೆ ಈ ನಿಟ್ಟಿನಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿಗೆ ತಿಳಿಸದೇ ಇದ್ದರೆ, ತನ್ನ ಸ್ಪಂದನೆಯ ಬಗ್ಗೆಯೇ ಅನುಮಾನಗಳು ಮೂಡುತ್ತಾ ಭಯ ಅವ್ಯಕ್ತವಾಗಿ ಮನದಲ್ಲಿ ಮನೆ ಮಾಡಿರುತ್ತದೆ.

4. ಕಾಮಪರಾಕಾಷ್ಠೆಯ ಸಮಯದಲ್ಲಿ ವಿಫಲರಾಗುವ ಭಯ

4. ಕಾಮಪರಾಕಾಷ್ಠೆಯ ಸಮಯದಲ್ಲಿ ವಿಫಲರಾಗುವ ಭಯ

ಕಾಮಪರಾಕಾಷ್ಠೆಯನ್ನು ಕೇವಲ ಸಂಭೋಗದಿಂದ ಮಾತ್ರವೇ ಪಡೆಯಲು ಸಾಧ್ಯವಲ್ಲಿ. (ಸರಿಸುಮಾರು 75%ದಷ್ಟು ಮಹಿಳೆಯರ ಮಟ್ಟಿಗೆ ಇದು ಸತ್ಯ). ಹೆಚ್ಚಿನ ದಂಪತಿಗಳಲ್ಲಿ ಮಹಿಳೆ ಕಾಮಪರಾಕಾಷ್ಠೆಯ ಹಂತ ತಲುಪುವ ಮುನ್ನವೇ ಪುರುಷರ ಉತ್ತಂಗದ ಸಮಯ ಕಳೆದುಹೋಗಿರುತ್ತದೆ. ಹಾಗಾಗಿ ಈ ಉತ್ತುಂಗದ ಸಮಯ ಕಳೆಯುವ ಮುನ್ನವೇ ಮಹಿಳೆಯರು ಮುನ್ನಲಿವಿನ ಇತರ ಹಂತಗಳನ್ನು ಆದಷ್ಟೂ ಹೆಚ್ಚು ಸಮಯ ಪಡೆದುಕೊಳ್ಳಬೇಕು. ಇದರ ಜೊತೆಗೇ ಮುಖ, ಕೈ ಹಾಗೂ ಕಾಮದಾಟಿಕೆಗಳನ್ನೂ ನೆರವಿಗೆ ಬಳಸಬಹುದು ಹಾಗೂ ಹಸ್ತಮೈಥುನವನ್ನೂ ಜೊತೆಯಾಗಿ ಮುಂದುವರೆಸಬಹುದು. ಒಂದು ವೇಳೆ ಹೀಗೂ ಭಯದಿಂದ ಹೊರಬರಲು ಸಾಧ್ಯವಾಗದೇ ಇದ್ದರೆ ನೀವು ನಂಬುವ ತಜ್ಞ ವೈದ್ಯರನ್ನು ಕಂಡು ಸಲಹೆ ಪಡೆಯಬೇಕು.

5.ಜನನಾಂಗದಲ್ಲಿ ನೋವಿನ ಭಯ

5.ಜನನಾಂಗದಲ್ಲಿ ನೋವಿನ ಭಯ

ಯಾವಾಗ ನೋವಿನ ಭಯ ಮೂಡುತ್ತದೆಯೋ ಮಹಿಳೆಯರು ತಮ್ಮ ಜನನಾಂಗಗಳನ್ನು ಸಂಕುಸಿಚಿಕೊಳ್ಳುತ್ತಾರೆ. ಈ ಭಯಕ್ಕೆ Vaginismus ಎಂದು ಕರೆಯುತ್ತಾರೆ. ಇದೊಂದು ಭಾವನಾತ್ಮಕ ಹಾಗೂ ಮನೋವೈಜ್ಞಾನಿಕ ತೊಂದರೆಯಾಗಿದ್ದು ಈ ಭಯ ಹೊಂದಿರುವ ಮಹಿಳೆಯೊಂದಿಗೆ ಮಿಲನ ಕ್ರಿಯೆ ಅಸಾಧ್ಯವೆನಿಸುವಷ್ಟು ಕಷ್ಟವಾಗಿದ್ದು ಸಂಗಾತಿ ಮುಂದುವರೆಯಲು ಯತ್ನಿಸಿದರೆ ಮಹಿಳೆ ಚೀರಿ ರಂಪಾಟ ಮಾಡುವ ಸಂಭವವಿದೆ. ಈ ತೊಂದರೆ ಇರುವ ಮಹಿಳೆಯರಿಗೆ ಅನೈಚ್ಛಿಕವಾಗಿ ಜನನಾಂಗಳು ಅತಿ ಹೆಚ್ಚಿನ ಒತ್ತಡದಿಂದ ಸಂಕುಚಿತಗೊಂಡಿರುತ್ತದೆ. ಈ ಭಯವನ್ನು ಹೋಗಲಾಡಿಸಲು ತಜ್ಞರ ನೆರವಿದೆ. ಇದಕ್ಕೂ ಮೊದಲು ಕೆಗೆಲ್ ವ್ಯಾಯಾಮ (Kegel exercises) ಪ್ರಯತ್ನಿಸಿದರೆ ಕೊಂಚ ಲಾಭ ಕಂಡುಬರಬಹುದು.

6.ವಂಚನೆಗೊಳಗಾಗುವ ಭಯ

6.ವಂಚನೆಗೊಳಗಾಗುವ ಭಯ

ಒಂದು ವೇಳೆ ಪರಸ್ಪರ ಬದ್ದತೆಯ ಉದ್ದೇಶದಿಂದ ಮಾತ್ರವೇ ವ್ಯಕ್ತಿಗಳಿಬ್ಬರು ಲೈಂಗಿಕ ಸಂಪರ್ಕ ನಡೆಸಿದರೆ ಇಂದು ಜಗತ್ತಿನಲ್ಲಿ ಅನೈತಿಕ ಸಂಬಂಧವಾಗಲೀ ಇದರಿಂದ ಎದುರಾಗುವ ಪ್ರತ್ಯಕ್ಷ-ಪರೋಕ್ಷ ಕೆಡುಕುಗಳಾಗಲೀ ಇರುತ್ತಲೇ ಇರಲಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಅನೈತಿಕ ಸಂಬಂಧಗಳಿಗೆ ಲೈಂಗಿಕ ಆಕರ್ಷಣೆ ಅಥವಾ ಕಾಮತೃಷೆಯೇ ಕಾರಣವಾಗಿರುತ್ತದೆ. ಕಾಮತೃಷೆಯನ್ನು ತಣಿಸಲು ಕೆಲವರು ಮದುವೆಯ ಸುಳ್ಳು ಭರವಸೆ ನೀಡು ಮುಂದುವರೆಯುತ್ತಾರೆ. ಆದರೆ ಕೆಲಸವಾದ ಬಳಿಕ ನುಣುಚಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಬಗ್ಗೆ ಇರುವ ಸತ್ಯವನ್ನು ಹೇಳದೇ (ತಾನು ಮದುವೆಯಾಗಿರುವ, ಸಂಬಂಧಕ್ಕೆ ಒಳಗಾಗಿರುವ) ಲೈಂಗಿಕ ಸಂಬಂಧ ಮುಂದುವರೆಸಿ ಕೊನೆಗೊಮ್ಮೆ ಈ ಸತ್ಯ ಗೊತ್ತಾಗಿ ವಂಚನೆಗೊಳಗಾದ ಭಾವನೆಯಲ್ಲಿ ಖಿನ್ನರಾಗುತ್ತಾರೆ. ಈ ವಂಚನೆಗೊಳಗಾಗುವ ಭಯವೇ ಹೆಚ್ಚಿನ ಮಹಿಳೆಯರಿಗೆ ಲೈಂಗಿಕ ಕ್ರಿಯೆಗೊಳಗಲು ಹಿನ್ನಡೆ ತೋರುತ್ತಾರೆ. ನೈತಿಕತೆಯ ದೃಷ್ಟಿಯಿಂದ ವಿವಾಹಪೂರ್ವ ಸಂಬಂಧಕ್ಕೆ ಈ ಹಿನ್ನಡೆ ಒಳ್ಳೆಯದೇ ಹೌದು. ಆದರೆ ವಿವಾಹದ ಬಳಿಕವೂ ಈ ಭಯ ಕಾಡಿದರೆ ಮಾತ್ರ ಇದಕ್ಕೆ ಚಿಕಿತ್ಸೆ ಅಗತ್ಯ. ಒಂದು ವೇಳೆ ಅರಿವಿಲ್ಲದೇ ವಂಚನೆಗೊಳಗಾಗಿದ್ದರೆ, ಈ ಭಾವನೆಯನ್ನು ಮರೆತು ಜೀವನದಲ್ಲಿ ದೊಡ್ಡ ಪಾಠವನ್ನು ಕಲಿತು ಈ ತಪ್ಪನ್ನು ಮುಂದೆಂದೂ ಪುನರಾವರ್ತಿಸದಂತೆ ಮುಂದುವರೆಯುವುದೇ ಜಾಣತನದ ಕ್ರಮವಾಗಿದೆ.

English summary

These Fears Preventing You From Enjoying Your Sex Life!

Sex can be many things: fun, spontaneous, exciting, and relaxing, but for some people, sex is a source of fear and anxiety. We all want to be sexually confident women who feel good about their desires and choices, but not everybody is like that. And there can be many different reasons that women fear sex. Sex fears aren't always visible, and you may not even know you have them. They can lurk deep down in your subconscious, and you might find yourself avoiding sex and rationalizing the reasons for you not having any such as your time-consuming job or a low sex drive.
Story first published: Thursday, July 26, 2018, 8:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more