For Quick Alerts
ALLOW NOTIFICATIONS  
For Daily Alerts

ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುವ 10 ವಿಟಮಿನ್‌ಗಳು ಮತ್ತು ಖನಿಜಗಳು

By Arshad
|

ಖನಿಜಗಳು ಮತ್ತು ವಿಟಮಿನ್ನುಗಳನ್ನು ಹೊಂದಿರುವ ಕೆಲವು ವಿಶಿಷ್ಟ ಆಹಾರಗಳನ್ನು ಸೇವಿಸಿದಾಗ ಕಾಮಾಸಕ್ತಿ ಮತ್ತು ಲೈಂಗಿಕ ಜೀವನ ಉತ್ತಮಗೊಂಡಿರುವುದು ಕಂಡುಬಂದಿದೆ. ಇಂದಿನ ಲೇಖನದಲ್ಲಿ ಈ ಪೋಷಕಾಂಶಗಳು ಯಾವುದು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸುತ್ತವೆ ಎಂಬುದನ್ನು ಅರಿಯೋಣ:

ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಾಮಾಸಕ್ತಿಯಲ್ಲಿ ಸೇವಿಸಿದ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ, ವಿಶೇಷವಾಗಿ ಸಸ್ಯಜನ್ಯ ಆಹಾರಗಳು ಹೆಚ್ಚಿನ ಮಹತ್ವವುಳ್ಳದ್ದಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಇವು ನಿಮ್ಮ ದೇಹದಲ್ಲಿ ನೈಸರ್ಗಿಕ ಸುಗಂಧವನ್ನು ಉಂಟುಮಾಡುತ್ತದೆ ಹಾಗೂ ಇದು ಸಂಗಾತಿಯನ್ನು ಆಕರ್ಷಿಸಲು ನೆರವಾಗುತ್ತದೆ. ಅಲ್ಲದೇ ಸೌಮ್ಯವಾದ ತ್ವಚೆ ಪಡೆಯಲು, ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು, ಹೆಚ್ಚಿನ ಕಾಮಪರಾಕಾಷ್ಠೆಗಳನ್ನು ಪಡೆಯಲು, ನೈಸರ್ಗಿಕ ಜಾರುಕದ್ರವ ಹೆಚ್ಚಿಸಲು ಹಾಗೂ ದೇಹ ದಾರ್ಢ್ಯತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

vitamins and minerals to improve sex drive

ಕಾಮಾಸಕ್ತಿ ಹಾಗೂ ಸೆಕ್ಸ್ ಪವರ್ ಹೆಚ್ಚಿಸುವ ಆಹಾರಗಳು

ಸಂಶೋಧಕರು ಕಂಡುಕೊಂಡ ಪ್ರಕಾರ ಸಸ್ಯಾಹಾರ ಆಧಾರಿತ ಆಹಾರಕ್ರಮವನ್ನು ಅನುಸರಿಸುವ ಮೂಲಕ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ದೇಹ ಲೈಂಗಿಕ ಪ್ರಕ್ರಿಯೆಗೆ ಹೆಚ್ಚಿನ ಸಂವೇದನೆಯನ್ನು ಪ್ರಕಟಿಸಿ ಕಾಮಪರಾಕಷ್ಠೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಆಹಾರಗಳು ಹಿಸ್ಟಮೈನ್ ಎಂಬ ರಸದೂತಗಳನ್ನು ಬಿಡುಗಡೆಗೊಳಿಸಿ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಒದಗಿಸುತ್ತದೆ. ಅಲ್ಲದೇ ಈ ಅಹಾರಗಳಲ್ಲಿರುವ ವಿಟಮಿನ್ನುಗಳು ಮತ್ತು ಖನಿಜಗಳು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಲೈಂಗಿಕ ಆಸಕ್ತಿ ಮತ್ತು ಕ್ಷಮತೆಯನ್ನು ಹೆಚ್ಚಿಸಿ ದೇಹದಲ್ಲಿ ಲೈಂಗಿಕ ರಸದೂತಗಳನ್ನೂ ಸೂಕ್ತ ಪ್ರಮಾಣದಲ್ಲಿ ಹೆಚ್ಚಿಸಲೂ ನೆರವಾಗುತ್ತದೆ.

ಬನ್ನಿ, ಲೈಂಗಿಕ ಸಾಮರ್ಥ್ಯ ಮತ್ತು ಆಸಕ್ತಿಯನ್ನುಹೆಚ್ಚಿಸುವ ಈ ಪೋಷಕಾಂಶಗಳು ಯಾವುವು ಎಂಬುದನ್ನು ನೋಡೋಣ:

*ನೈಟ್ರೇಟುಗಳು
*ಮೆಗ್ನೀಶಿಯಂ
*ವಿಟಮಿನ್ ಬಿ6
*ವಿಟಮಿನ್ ಬಿ3
*ವಿಟಮಿನ್ ಸಿ
*ಸೆಲೆನಿಯಂ
*ವಿಟಮಿನ್ ಇ
*ವಿಟಮಿನ್ ಎ
*ಸತು
*ಕಬ್ಬಿಣ

1. ನೈಟ್ರೇಟುಗಳು

1. ನೈಟ್ರೇಟುಗಳು

ಬೀಟ್ರೂಟ್, ಪಾಲಕ್ ಸೊಪ್ಪು, ಸೆಲೆರಿ, ಲೆಟ್ಯೂಸ್ ಸೊಪ್ಪು, ಪಾರ್ಸ್ಲೆ ಎಲೆಗಳು, ಮೂಲಂಗಿ, ಹಸಿಯಾಗಿ ತಿನ್ನಬಹುದಾದ ಹಸಿರು ತರಕಾರಿಗಳು ಮೊದಲಾವುಗಳಲ್ಲಿ ನೈಟ್ರೇಟುಗಳು ಇರುತ್ತವೆ. ಈ ಆಹಾರವನ್ನು ಸೇವಿಸಿದ ಬಳಿಕ ಈ ನೈಟ್ರೇಟುಗಳು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತವೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ನೈಟ್ರಿಕ್ ಆಕ್ಸೈಡ್ ರಕ್ತದ ನಾಳಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆ ಸುಗಮಗೊಳಿಸಲು ನೆರವಾಗುತ್ತದೆ. ವಿಶೇಷವಾಗಿ ಪುರುಷರ ಜನನಾಂಗದಲ್ಲಿರುವ corpus cavernosum ಎಂಬ ಸ್ಪಂಜ್ ನಂತಹ ಅಂಗಾಂಶದಲ್ಲಿ ರಕ್ತಪರಿಚಲನೆ ಉತ್ತಮಗೊಳಿಸಿ ಅಗತ್ಯವಾದ ಒತ್ತಡವನ್ನು ಪಡೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಈ ಅಂಗಾಂಶಗಳು ಸಡಿಲಗೊಂಡು ಪೂರ್ಣಪ್ರಮಾಣದಲ್ಲಿ ರಕ್ತವನ್ನು ಪಡೆದು ಉಬ್ಬಲು ನೆರವಾಗುತ್ತದೆ ಹಾಗೂ ಆರೋಗ್ಯರಕ ನಿಮಿರುತನ ಪಡೆಯಲು ಸಾಧ್ಯವಾಗುತ್ತದೆ.

2. ಮೆಗ್ನೀಶಿಯಂ

2. ಮೆಗ್ನೀಶಿಯಂ

ಪ್ರೊಜೆಸ್ಟರಾನ್, ಟೆಸ್ಟೋಸ್ಟೆರಾನ್, ಈಸ್ಟ್ರೋಜೆನ್ ಮೊದಲಾದ ಲೈಂಗಿಕ ರಸದೂತಗಳೂ ಹಾಗೂ ಡೋಪಮೈನ್ ಮತ್ತು ಎಫಿನೆಫ್ರಿನ್ ನಂತಹ ನ್ಯೂರೋಟ್ರಾನ್ಸ್ಮಿಟರ್ ಗಳು ಸ್ರವಿಸಲು ಮೆಗ್ನೀಶಿಯಂ ನೆರವಾಗುತ್ತದೆ ಹಾಗೂ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಪಾಲಕ್, ಬಸಲೆ ಮೊದಲಾದ ಹಸಿರು ಮತ್ತು ದಪ್ಪನೆಯ ಎಲೆಗಳು, ಬ್ರೋಕೋಲಿ, ಕೇಲ್ ಮೊದಲಾದ ಎಲೆಗಳು ಲೈಂಗಿಕ ಪ್ರಚೋದನೆ ಹೆಚ್ಚಿಸುತ್ತದೆ ಹಾಗೂ ಲೈಂಗಿಕ ಕ್ರಿಯೆ ಹೆಚ್ಚು ಅಪ್ಯಾಯಮಾನವಾಗಿಸುತ್ತದೆ.

ಜಪಾನ್ ನಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಹಸಿರು ಎಲೆಗಳಲ್ಲಿರುವ ಮೆಗ್ನೀಶಿಯಂ ರಕ್ತನಾಳಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಜನನಾಂಗಳಿಗೆ ಹೆಚ್ಚಿನ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಪುರುಷರಲ್ಲಿ ಉತ್ತಮ ನಿಮಿರುತನ ಪಡೆಯಲು ಹಾಗೂ ಮಹಿಳೆಯರಲ್ಲಿ ಹೆಚ್ಚಿನ ಜಾರುಕ ದ್ರವ ಉತ್ಪತ್ತಿಯಾಗಲು ನೆರವಾಗುತ್ತದೆ.

3. ವಿಟಮಿನ್ ಬಿ6

3. ವಿಟಮಿನ್ ಬಿ6

ದೇಹದಲ್ಲಿ ಹೆಚ್ಚಿನ ಮಟ್ಟದ ಪ್ರೊಲಾಕ್ಟಿನ್ ಗಳನ್ನು ನಿಯಂತ್ರಿಸಲು ನೆರವಾಗುವ ಮೂಲಕ ಈ ವಿಟಮಿನ್ ದೇಹದಲ್ಲಿ ಈಸ್ಟ್ರೋಜೆನ್, ಟೆಸ್ಟಾಸ್ಟೆರಾನ್, ಸೆರೋಟೋನಿನ್, ಡೋಪಮೈನ್ ಮೊದಲಾದ ರಸದೂತಗಳನ್ನೂ ಕೆಂಪು ರಕ್ತಕಣಗಳ ಪ್ರಮಾಣವನ್ನೂ ಹೆಚ್ಚಿಸಲು ನೆರವಾಗುತ್ತದೆ. ಬೆಣ್ಣೆಹಣ್ಣು, ಬೇಯಿಸಿದ ಆಲುಗಡ್ಡೆ, ಕಾಟೇಜ್ ಚೀಸ್ ಮತ್ತು ಟೊಮಾಟೋಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಬಿ6 ಇರುತ್ತದೆ.

4. ವಿಟಮಿನ್ ಬಿ3

4. ವಿಟಮಿನ್ ಬಿ3

ನಿಯಾಸಿನ್ ಎಂಬ ಹೆಸರಿನ ಈ ವಿಟಮಿನ್ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿ ಆಮ್ಲಜನಕರಹಿತ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಿ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಒದಗಿಸುವ ಮೂಲಕ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಅಡ್ರಿನಲ್ ಗ್ರಂಥಿಯ ಸ್ರಾವವನ್ನು ಹೆಚ್ಚಿಸುವ ಮೂಲಕ ಲೈಂಗಿಕ ರಸದೂತಗಳ ಸ್ರಾವ ಹೆಚ್ಚಿಸುತ್ತದೆ ಹಾಗೂ ಲೈಂಗಿಕಾಸಕ್ತಿಯನ್ನೂ ಹೆಚ್ಚಿಸುತ್ತದೆ. ಅಣಬೆ, ದ್ವಿದಳ ಧಾನ್ಯಗಳು, ಇಡಿಯ ಧಾನ್ಯಗಳು ಮತ್ತು ಆಲುಗಡ್ಡೆಯಲ್ಲಿ ವಿಟಮಿನ್ ಬಿ3 ಉತ್ತಮ ಪ್ರಮಾಣದಲ್ಲಿವೆ.

5. ವಿಟಮಿನ್ ಸಿ

5. ವಿಟಮಿನ್ ಸಿ

ವಿಟಮಿನ್ ಸಿ ಯುಕ್ತ ಆಹಾರಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ಶೀತ, ಕೆಮ್ಮು ಮೊದಲಾದ ಕಾಯಿಲೆಗಳು ಗುಣಹೊಂದುತ್ತವೆ ಎಂದು ನಾವು ಅರಿತೇ ಇದ್ದೇವೆ. ಈ ವಿಟಮಿನ್ ಲೈಂಗಿಕ ರಸದೂತಗಳಾದ ಈಸ್ಟ್ರೋಜೆನ್, ಆಂಡ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಮೊದಲಾದವುಗಳನ್ನು ಸಂಶ್ಲೇಷಿಸಲು ನೆರವಾಗುತ್ತದೆ. ವಿಟಮಿನ್ ಸಿ ಹೆಚ್ಚಿರುವ ಆಹಾರಗಳಲ್ಲಿ ಪಾಲಕ್ ಸೊಪ್ಪು, ಬ್ರೋಕೋಲಿ, ಬ್ರಸಲ್ಸ್ ಮೊಳಕೆ ಮೊದಲಾದವು ಪ್ರಮುಖವಾಗಿವೆ.

6. ಸೆಲೆನಿಯಂ

6. ಸೆಲೆನಿಯಂ

ಪುರುಷರಲ್ಲಿ ಸೆಲೆನಿಯಂ ಕೊರತೆ ಇದ್ದರೆ ಇದು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು. ಸೆಲೆನಿಯಂ ಕಡಿಮೆ ಇದ್ದರೆ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಹಾಗೂ ವೀರ್ಯಾಣುಗಳ ಗುಣಮಟ್ಟವೂ ಕಡಿಮೆ ಇರುತ್ತದೆ ಹಾಗೂ ಉಳಿದ ವೀರ್ಯಾಣುಗಳ ಆಕಾರವೂ ಸರಿಯಾಗಿರುವುದಿಲ್ಲ. ಹಾಗಾಗಿ ಪುರುಷರು ಹೆಚ್ಚು ಹೆಚ್ಚು ಸೆಲೆನಿಯಂಯುಕ್ತ ಆಹಾರಗಳನ್ನು ಸೇವಿಸಬೇಕಾಗುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಪಿಂಟೋ/ಲೀಮಾ ಬೀನ್ಸ್, ಚಿಕ್ಕ ಅಣಬೆ, ಬ್ರೋಕೋಲಿ ಹಾಗೂ ಚಿಯಾ ಬೀಜಗಳಲ್ಲಿ ಸೆಲೆನಿಯಂ ಹೆಚ್ಚಿರುತ್ತದೆ.

7. ವಿಟಮಿನ್ ಇ

7. ವಿಟಮಿನ್ ಇ

ಸಾಮಾನ್ಯವಾಗಿ ಈ ವಿಟಮಿನ್ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿದೆ, ಆದರೆ ಇದೊಂದು ಲೈಂಗಿಕ ವಿಟಮಿನ್ ಕೂಡಾ ಆಗಿದೆ ಎಂದು ನಿಮಗೆ ಗೊತ್ತಿತ್ತೇ? ಜನನಾಂಗಗಳಿಗೆ ಹೆಚ್ಚಿನ ಪ್ರಮಾಣದ ರಕ್ತ ಹರಿಸುವ ಮೂಲಕ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಈ ವಿಟಮಿನ್ ನೆರವಾಗುತ್ತದೆ. ನಿತ್ಯದ ಆಹಾರದಲ್ಲಿ ವಿಟಮಿನ್ ಇ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಹಾಗೂ ಇದರಲ್ಲಿ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿರಲು ನೆರವಾಗುತ್ತದೆ. ಸಿಹಿಗೆಣಸು, ಪಾಲಕ್, ಬಾದಾಮಿ, ಶತಾವರಿ ಹಾಗೂ ಕಡ್ಲೆಕಾಳುಗಳಲ್ಲಿ ವಿಟಮಿನ್ ಇ ಹೇರಳವಾಗಿರುತ್ತವೆ.

8. ವಿಟಮಿನ್ ಎ

8. ವಿಟಮಿನ್ ಎ

ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಜೊತೆಗೇ ದೇಹದಲ್ಲಿ ಟೆಸ್ಟಾಸ್ಟೆರೋನ್ ಎಂಬ ಲೈಂಗಿಕ ರಸದೂತವನ್ನು ಹೆಚ್ಚಿಸಲೂ ವಿಟಮಿನ್ ಎ ನೆರವಾಗುತ್ತದೆ. ಅಲ್ಲದೇ ಮಹಿಳೆಯರಲ್ಲಿ ವಂಶಾಭಿವೃದ್ದಿಯ ಸಹಜ ವ್ಯವಸ್ಥೆಯನ್ನು ಉತ್ತಮಗೊಳಿಸಲೂ ನೆರವಾಗುತ್ತದೆ. ಕ್ಯಾರೆಟ್, ಸಿಹಿಗೆಣಸು, ಕುಂಬಳ ಹಾಗೂ ಹಸಿರು ಎಲೆಗಳಲ್ಲಿ ವಿಟಮಿನ್ ಎ ಸಮೃದ್ದವಾಗಿದ್ದು ಲೈಂಗಿಕ ರಸದೂತಗಳನ್ನು ಸ್ರವಿಸಲು ನೆರವಾಗುವ ಮೂಲಕ ಪುರುಷರ ಮತ್ತು ಮಹಿಳೆಯರ ಲೈಂಗಿಕ ಆರೋಗ್ಯ ವೃದ್ದಿಸಲು ನೆರವಾಗುತ್ತದೆ.

9. ಸತು

9. ಸತು

ಸತುವಿನ ಕೊರತೆ ಲೈಂಗಿಕ ನಿರಾಸಕ್ತಿ ಹಾಗೂ ನಪುಂಸಕತ್ವಕ್ಕೆ ಕಾರಣವಾಗಬಲ್ಲುದು. ಸತುವಿನ ಕೊರತೆ ಇರುವ ಪುರುಷರ ರಕ್ತದಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಮಟ್ಟವೂ ಕಡಿಮೆ ಇರುತ್ತದೆ. ಒಂದು ಸಂಬಂಧಿತ ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ನಿತ್ಯವೂ 30ಮಿಲಿಗ್ರಾಂ ಸತುವನ್ನು ಸೇವಿಸುತ್ತಾ ಬರುವ ಪುರುಷರಲ್ಲಿ ಕ್ರಮೇಣ ಟೆಸ್ಟಾಸ್ಟೆರೋನ್ ಮಟ್ಟ ಹೆಚ್ಚಿರುವುದನ್ನು ಗಮನಿಸಲಾಗಿದೆ. ಹಾಗಾಗಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಪುರುಷರು ಸತು ಹೆಚ್ಚಿರುವ ಆಹಾರಗಳಾದ ಬೀನ್ಸ್, ದ್ವಿದಳ ಧಾನ್ಯಗಳು, ಬೇಳೆಗಳು ಹಾಗೂ ಒಣಬೀಜಗಳನ್ನು ಸೇವಿಸಬೇಕು.

10. ಕಬ್ಬಿಣ

10. ಕಬ್ಬಿಣ

ಲೈಂಗಿಕ ಶಕ್ತಿಯನ್ನು ವೃದ್ದಿಸಲು ಅಗತ್ಯವಿರುವ ಇನ್ನೊಂದು ಅಂಶವೆಂದರೆ ಕಬ್ಬಿಣ. ರಕ್ತ ಆಮ್ಲಜನಕವನ್ನು ಪ್ರತಿ ಜೀವಕೋಶಕ್ಕೂ ಕೊಂಡೊಯ್ಯಬೇಕಾದರೆ ಕಬ್ಬಿಣದ ಅಂಶದ ಅಗತ್ಯವಿದೆ. ಒಂದು ವೇಳೆ ಕಬ್ಬಿಣದ ಕೊರತೆ ಇದ್ದರೆ ಇದು ಸುಸ್ತು ಆವರಿಸಲು ಕಾರಣವಾಗುವ ಜೊತೆಗೇ ಲೈಂಗಿಕ ಸಾಮರ್ಥ್ಯವನ್ನೂ ಕುಂದಿಸಬಹುದು. ಪುರುಷರಲ್ಲಿ ನಿಮಿರು ದೌರ್ಬಲ್ಯ, ಮಹಿಳೆಯರಲ್ಲಿ ಜಾರುಕದ್ರವ ಉತ್ಪಾದನೆಯಾಗದೇ ಇರುವುದು ಹಾಗೂ ಕಾಮಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗದೇ ಹೋಗುವುದು ಮೊದಲಾದವು ಎದುರಾಗುತ್ತವೆ. ಈ ಕೊರತೆ ಇರುವ ವ್ಯಕ್ತಿಗಳು ಟೋಫು, ದ್ವಿದಳಧಾನ್ಯಗಳು, ಬೀನ್ಸ್, ಬಸಲೆಸೊಪ್ಪು,ಪಾಲಕ್ ಮೊದಲಾದ ದಪ್ಪ ಎಲೆಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.ಈ ಮಾಹಿತಿ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಅಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳಿ.

English summary

Ten Vitamins And Minerals For Sex Drive

Eating specific foods, which contain essential vitamins and minerals, is known to improve your sex life. In this article will write about those nutrients that help boost your sexual stamina. Studies have shown that your diet plays a vital role, especially plant-based diets, in improving your sex life. It gives your body a natural scent and attracts your partner to you, helps you to get a smooth skin, increases the blood flow in the penis and increases multiple orgasms in women, increases natural lubrication and boosts your stamina.
Story first published: Saturday, September 8, 2018, 16:19 [IST]
X
Desktop Bottom Promotion