ಕಿರಿ ವಯಸ್ಸಿನಲ್ಲಿ ಋತುಮತಿ ಆಗುವ ಮಹಿಳೆಯರಿಗೆ ಗುಟ್ಟಾಗಿ ಕಾಡಲಿದೆ ಕಾಯಿಲೆಗಳು!!

Posted By: Deepu
Subscribe to Boldsky

ಹಿಂದೆ ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ಹುಡುಗಿ ಮೈನೆರೆದೆ ಅಥವಾ ಪ್ರೌಢಾವಸ್ಥೆ ಅಥವಾ ಮೊದಲ ಋತುಚಕ್ರವಾದಾಗ ವಿಶೇಷ ಕಾರ್ಯಕ್ರಮಗಳು ನಡೆಯುತ್ತಲಿದ್ದವು. ಆದರೆ ಆಧುನಿಕತೆ ಆವರಿಸಿಕೊಂಡಂತೆ ಇದೆಲ್ಲವೂ ಗುಟ್ಟಾಗ ತೊಡಗಿತು. ಹೆಚ್ಚಿನ ಮಹಿಳೆಯರಿಗೆ ತಮ್ಮ ಮೊದಲ ಋತುಚಕ್ರ ಯಾವಾಗ ಆಗಿದೆಯೆಂದು ಖಂಡಿತವಾಗಿಯೂ ನೆನಪಿರಲು ಸಾಧ್ಯವಿಲ್ಲ. ಆದರೆ ನಿಮ್ಮಲ್ಲಿ ವೈದ್ಯರು ಈ ಬಗ್ಗೆ ಕೇಳಿದರೆ, ಮೌನವೇ ಉತ್ತರವಾಗಿರುವುದು.

ಆದರೆ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರೆ ಪ್ರಕಾರ ಮೊದಲ ಋತುಚಕ್ರ ಮತ್ತು ಆರೋಗ್ಯಕ್ಕೆ ನೇರಾನೇರ ಸಂಬಂಧಿವದೆಯಂತೆ. ಹೌದು, ಅಲರ್ಜಿಯಿಂದ ಹಿಡಿದು ಹೃದಯದ ಕಾಯಿಲೆ ಮತ್ತು ಮಧುಮೇಹದಿಂದ ಹಿಡಿದು ಕ್ಯಾನ್ಸರ್ ತನಕ ಇದರ ಸಂಬಂಧವಿದೆ. ಆದರೆ ನಿಖರವಾದ ಸಂಬಂಧ ಏನು ಎಂದು ಮಾತ್ರ ಇದುವರೆಗೆ ತಿಳಿದುಬಂದಿಲ್ಲ.

ನಿಮ್ಮ ಮೊದಲ ಋತುಚಕ್ರಕ್ಕೆ ಅನುಗುಣವಾಗಿ ದೇಹದ ತೂಕವಿರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈಸ್ಟ್ರೋಜನ್ ಮತ್ತು ದೇಹದ ಕೊಬ್ಬು ಶೇಖರಣೆ ಮಧ್ಯೆ ನೇರ ಸಂಬಂಧವಿದೆ. ತುಂಬಾ ಕಿರಿ ವಯಸ್ಸಿನಲ್ಲಿ ಋತುಚಕ್ರವಾದರೆ ಆಗ ನೀವು ಬೇಗನೆ ವಯಸ್ಕರ ತೂಕ ಪಡೆಯಲಿದ್ದೀರಿ ಮತ್ತು ಇದರಿಂದ ಮುಂದೆ ನಿಮ್ಮಲ್ಲಿ ಬೊಜ್ಜು ದೇಹ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅನುವಂಶೀಯತೆಯು ಇದಕ್ಕೆ ಕಾರಣವಾಗಿರಬಹುದು.

ಹೃದಯದ ಕಾಯಿಲೆ

ಹೃದಯದ ಕಾಯಿಲೆ

ಜರ್ನಲ್ ಸರ್ಕ್ಯೂಲೇಷನ್‌ನಲ್ಲಿ ಪ್ರಕಟವಾಗಿರುವಂತಹ ಅಧ್ಯಯನ ವರದಿಯ ಪ್ರಕಾರ ತುಂಬಾ ಕಡಿಮೆ ಅಂದರೆ 13ರ ಹರೆಯದಲ್ಲಿ ಮೊದಲ ಋತುಚಕ್ರಕ್ಕೆ ಒಳಗಾಗುವಂತಹವರು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. 10 ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ಋತುಚಕ್ರವಾಗಿರುವ ಮಹಿಳೆಯರು ಹೃದಯದ ಕಾಯಿಲೆಗೆ ಶೇ.27ರಷ್ಟು, ಅಧಿಕ ರಕ್ತದೊತ್ತಡಕ್ಕೆ ಶೇ.20 ಮತ್ತು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯು ಶೇ.16ರಷ್ಟು ಹೆಚ್ಚಾಗಿರುವುದು.

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ

12ರ ಹರೆಯಕ್ಕಿಂತ ಮೊದಲೇ ಋತುಚಕ್ರಕ್ಕೆ ಒಳಗಾಗಿರುವ ಮಹಿಳೆಯರು ವಯಸ್ಸಾಗುತ್ತಾ ಇರುವಂತೆ ಟೈಪ್ 2 ಮಧುಮೇಹಕ್ಕೆ ಒಳಗಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು ಎಂದು 4,600 ಮಧ್ಯವಯಸ್ಕ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿರುವಂತಹ ಅಧ್ಯಯನವು ಹೇಳಿದೆ. ಈ ಸಮೀಕ್ಷೆಯು ಡಯಾಬಿಟಿಕ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. ಋತುಚಕ್ರ ಬೇಗವಾದರೆ ಆಗ ಮಧುಮೇಹ ಬರುವ ಸಾಧ್ಯತೆಯು ಹೆಚ್ಚಾಗಿರುವುದು.

ಪ್ರಿಕ್ಲಾಂಪ್ಸಿಯ

ಪ್ರಿಕ್ಲಾಂಪ್ಸಿಯ

ಪ್ರಿಕ್ಲಾಂಪ್ಸಿಯ ಎನ್ನುವುದು ಗರ್ಭಧಾರಣೆಯ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಮತ್ತು ಮೂತ್ರದಲ್ಲಿ ಪ್ರೋಟೀನ್ ಕಂಡುಬರುವಂತಹ ಸಮಸ್ಯೆಯಾಗಿದೆ. ಇದು ಮುಂದೆ ಪಾರ್ಶ್ವವಾಯುವಿಗೂ ಕಾರಣವಾಗಬಹುದು. 12ರ ಹರೆಯದ ಮೊದಲೇ ನೀವು ಋತುಚಕ್ರಕ್ಕೆ ಒಳಗಾಗಿದ್ದರೆ ಆಗ ಗರ್ಭಧಾರಣೆ ವೇಳೆ ಈ ಸಮಸ್ಯೆಯು ಬರುವಂತಹ ಸಾಧ್ಯತೆಯು ಶೇ.28ರಷ್ಟು ಇರುವುದು ಎಂದು ಜರ್ನಲ್ ಆಫ್ ಕ್ಲಿನಿಕಲ್ ಆ್ಯಂಟ್ ಡೈಗ್ನಾಸ್ಟಿಕ್ ರಿಸರ್ಚ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ.

ಥೈರಾಯ್ಡ್ ಕ್ಯಾನ್ಸರ್

ಥೈರಾಯ್ಡ್ ಕ್ಯಾನ್ಸರ್

ಅಮೆರಿಕನ್ ಜರ್ನಲ್ ಆಫ್ ಎಪಿರ್ಡಮಿನಾಲಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನದ ಪ್ರಕಾರ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಋತುಚಕ್ರದ ಆರಂಭವಾಗುವ ಮಹಿಳೆಯರಲ್ಲಿ ಥೈರಾಯ್ಡ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯವು ಹೆಚ್ಚಾಗಿರುವುದು.

 ಮೆದುಳಿನ ಗಡ್ಡೆ

ಮೆದುಳಿನ ಗಡ್ಡೆ

ಅಧ್ಯಯನಗಳು ಹಲವಾರು ರೀತಿಯ ಮರುಉತ್ಪತ್ತಿ ವಿಧಾನಗಳನ್ನು ಪರೀಕ್ಷಿಸಿದ್ದಾರೆ ಮತ್ತು ಇದು ಮೆದುಳಿನ ಗಡ್ಡೆಗೆ ಹೇಗೆ ಭಾಗಿಯಾಗುವುದು ಎಂದು ಗಮನಿಸಿದ್ದಾರೆ. 17ರ ಹರೆಯ ಅಥವಾ ಅದರ ಬಳಿಕ ಋತುಚಕ್ರಕ್ಕೆ ಒಳಗಾಗುವಂತಹ ಹುಡುಗಿಯರು ಜೀವನದ ಮುಂದಿನ ಹಂತದಲ್ಲಿ ಮೆದುಳಿನ ಗಡ್ಡೆಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿವೆ.

English summary

surprising-things-your-first-period-says-about-you

We bet you did not know that there is a term for your “first period”. Yes, there is and it’s called “menarche”. So, do you remember when you got your first period? Can’t recall? Well, you may have to think harder because your doctor might soon be asking you this question. Wondering why? According to a study conducted last year, researchers found a link between the age of first menstruation and health risks, ranging from allergies to heart problems to diabetes and cancer.