For Quick Alerts
ALLOW NOTIFICATIONS  
For Daily Alerts

ಫಳಫಳ ಹೊಳೆಯುವ ನೀರು, ಆರೋಗ್ಯಕ್ಕೆ ಬಹಳ ಒಳ್ಳೆಯದು!

|

ನಾವು ಯಾವುದೇ ಉತ್ತಮ ಊಟದ ಹೋಟೆಲು ಅಥವಾ ಔತಣಕೂಟಕ್ಕೆ ಹೋದಾಗ ಅಲ್ಲಿನ ಪರಿಚಾರಕರು ಸಾಮಾನ್ಯ ನೀರಿನ ಬದಲು ಮಿನೆರಲ್ ಅಥವಾ ಖನಿಜಯುಕ್ತ ನೀರಿನ ಬಾಟಲಿಯನ್ನೇ ಕುಡಿಯಲು ನೀಡುವುದನ್ನು ಗಮನಿಸಿರಬಹುದು. ಹೆಚ್ಚಿನವರು ಇದಕ್ಕೂ ಕೊಂಚ ಹೆಚ್ಚು ಬೆಲೆಯುಳ್ಳ ಸ್ಪಾಕ್ಲಿಂಗ್ ವಾಟರ್ ಅಥವಾ ಹೊಳೆಯುವ ನೀರಿಗೆ ಬೇಡಿಕೆ ಸಲ್ಲಿಸಬಹುದು. ಸಾಮಾನ್ಯ ನೀರಿಗಿಂತಲೂ ಈ ನೀರು ಹೆಚ್ಚು ನೈಸರ್ಗಿಕ ಹಾಗೂ ಆರೋಗ್ಯಕರ ಎಂದು ಪರಿಗಣಿಸಲ್ಪಡುತ್ತದೆ. ನಮ್ಮ ನಲ್ಲಿ ನೀರಿಗಿಂತ ಈ ನೀರಿನಲ್ಲೇನಿದೆ ವಿಶೇಷ?

ಈ ಪ್ರಶ್ನೆಗೆ ನೀಡುವ ಸಾಮಾನ್ಯ ಉತ್ತರವೆಂದರೆ ಬಾಟಲಿ ನೀರನ್ನು ನೈಸರ್ಗಿಕ ಝರಿ, ಬಾವಿ ಅಥವಾ ಚಿಲುಮೆಗಳಿಂದ ಸಂಗ್ರಹಿಸಲಾಗಿದ್ದು ಇದರಲ್ಲಿ ಹಲವಾರು ಖನಿಜಗಳು ನೈಸರ್ಗಿಕವಾಗಿಯೇ ಕರಗಿರುತ್ತವೆ. ಆದರೆ ಇದೇ ನೀರಿಗೆ ಕೆಲವು ನೈಸರ್ಗಿಕ ಅನಿಲಗಳು ಅಥವಾ ಇಂಗಾಲದ ಡೈ ಆಕೈಡ್ ಅನಿಲವನ್ನು ಕರಗಿಸಿದರೆ? ಇದೇ ಹೊಳೆಯುವ ನೀರು ಆಗುತ್ತದೆ.

ಬೆಳಗ್ಗೆದ್ದ ತಕ್ಷಣ ಎರಡು ಲೋಟ ನೀರು ಕುಡಿಯುವುದರ ಆರೋಗ್ಯಕರ ಪ್ರಯೋಜನಗಳು

ಆದರೆ, ಈ ನೀರು ಆರೋಗ್ಯಕರವೇ? ಖನಿಜಭರಿತ ನೀರು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದೇ ಹೌದು, ಆದರೆ ಇದರಲ್ಲಿ ಕರಗಿರುವ ಖನಿಜಗಳನ್ನು ದೇಹ ಹೀರಿಕೊಳ್ಳಲು ಸಾಧ್ಯವಾದಾಗ ಮಾತ್ರ! ಸಾಮಾನ್ಯವಾಗಿ ಈ ನೀರಿನಲ್ಲಿರುವ ಹೆಚ್ಚಿನ ಖನಿಜಗಳನ್ನು ನಮ್ಮ ದೇಹ ಹೀರಿಕೊಳ್ಳಲಾರದು.

ಹಲವಾರು ಆರೋಗ್ಯ ತಜ್ಞರ ಅಭಿಪ್ರಾಯದ ಪ್ರಕಾರ ಹೊಳೆಯುವ ನೀರು ಇತರ ಯಾವುದೇ ನೀರಿನಷ್ಟೇ ಉತ್ತಮವಾಗಿ ದೇಹದ ನೀರಿನ ಅಗತ್ಯತೆಯನ್ನು ಪೂರೈಸುತ್ತದೆ. ಆದರೆ ಹೊಳೆಯುವ ನೀರಿನಲ್ಲಿ ಕೃತಕ ಪರಿಮಳ, ರುಚಿಗಳನ್ನು ಅಥವಾ ಹೆಚ್ಚುವರಿ ಅಂಶಗಳನ್ನು ಬೆರೆಸಿರುವ ನೀರನ್ನು ಮಾತ್ರ ಕುಡಿಯಬಾರದು. ಈಗ ಹೊಳೆಯುವ ನೀರಿನ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ನೋಡೋಣ...

ಇದರಲ್ಲಿ ಖನಿಜಗಳು ಸಮೃದ್ಧವಾಗಿವೆ

ಇದರಲ್ಲಿ ಖನಿಜಗಳು ಸಮೃದ್ಧವಾಗಿವೆ

ಹೊಳೆಯುವ ನೀರಿನಲ್ಲಿ ವಿವಿಧ ಬಗೆಯ ಖನಿಜಗಳಿವೆ ಹಾಗೂ ಈ ನೀರಿನ ಸೇವನೆಯಿಂದ ನೀರಡಿಕೆ ಕಡಿಮೆಯಾಗುವ ಜೊತೆಗೇ ಖನಿಜಗಳ ಕೊರತೆಯನ್ನೂ ನೀಗಿಸುತ್ತದೆ. ಈ ನೀರು ನೈಸರ್ಗಿಕ ಮೂಲದಿಂದ ಬಂದಿರುವ ಕಾರಣ ನೈಸರ್ಗಿಕವಾಗಿಯೇ ಇದರಲ್ಲಿ ಹಲವಾರು ಖನಿಜಗಳು ಕರಗಿರುತ್ತವೆ. ನೀರಿನ ಮೂಲವನ್ನು ಅವಲಂಬಿಸಿ ಈ ನೀರಿನಲ್ಲಿ ಕರಗಿರುವ ಖನಿಜಗಳು ಮತ್ತು ಲವಣಗಳು ಬದಲಾಗಬಹುದು. ನೀರಿನಲ್ಲಿ ಕರಗಿರುವ ಖನಿಜಗಳನ್ನು ಆಹಾರಗಳಲ್ಲಿರುವ ಖನಿಜಗಳಿಗಿಂತಲೂ ಸುಲಭವಾಗಿ ನಮ್ಮ ದೇಹ ಹೀರಿಕೊಳ್ಳುತ್ತದೆ. ಇದರಲ್ಲಿ ಪ್ರಮುಖವಾಗಿ ಮೆಗ್ನೀಶಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಸೇರಿವೆ.

ರಕ್ತದಲ್ಲಿ ಸಕ್ಕರೆಯ ಮಟ್ಟದ ಸಂತುಲನೆ

ರಕ್ತದಲ್ಲಿ ಸಕ್ಕರೆಯ ಮಟ್ಟದ ಸಂತುಲನೆ

ಖನಿಜಯುಕ್ತ ನೀರಿನಲ್ಲಿ ಬೈಕಾರ್ಬೋನೇಟುಗಳೂ ಇವೆ. ಇವು ನಮ್ಮ ದೇಹಕ್ಕೆ ಅಗತ್ಯವಾಗಿದ್ದು ರಕ್ತದ ಪಿ ಎಚ್ ಮಟ್ಟ ಅಥವಾ ಕ್ಷಾರೀಯ-ಆಮ್ಲೀಯ ಮಟ್ಟಗಳ ಸಂತುಲತೆಯನ್ನು ಕಾಪಾಡಲು ನೆರವಾಗುತ್ತದೆ. ಅಂದರೆ ರಕ್ತ ಎಂದಿಗೂ ಆಮ್ಲೀಯವಾಗಿರದಂತೆ ಕಾಪಾಡುತ್ತದೆ. Evidence Based Complementary and Alternative Medicine ಎಂಬ ವೈದ್ಯಕೀಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಬೈಕಾರ್ಬೋನೇಟು ಹೆಚ್ಚಿರುವ ನೀರಿನ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ.

ಸೋಡಾ ನೀರಿಗೆ ಅತ್ಯುತ್ತಮ ಬದಲಿ ದ್ರವ

ಸೋಡಾ ನೀರಿಗೆ ಅತ್ಯುತ್ತಮ ಬದಲಿ ದ್ರವ

ಡಯೆಟ್ ಸೋಡಾ, ಲಘುಪಾನೀಯ ಎಂದು ಅನಾರೋಗ್ಯಕರ ಪೇಯಗಳನ್ನು ಕುಡಿಯುವ ಬದಲು ಖನಿಜಯುಕ್ತ ನೀರನ್ನು ಕುಡಿಯಲು ಪ್ರಾರಂಭಿಸಿ. ಇದು ಸೋಡಾ ಅಥವಾ ಡಯೆಟ್ ಸೋಡಾ ಕುಡಿಯುವುದಕ್ಕಿಂತಲೂ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಸೋಡಾ ಬೆರೆತ ಲಘುಪಾನೀಯಗಳಲ್ಲಿ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಸಕ್ಕರೆಗಳಿರುತ್ತವೆ ಅಥವಾ ಆರೋಗ್ಯಕ್ಕೆ ಮಾರಕವಾದ ಸಕ್ಕರೆಗಿಂತಲೂ ಸಿಹಿಯಾದ ಆಸ್ಪರ್ಟೇಮ್ ಎಂಬ ರಾಸಾಯನಿಕವಿರುತ್ತದೆ. ಸಕ್ಕರೆ ಬೆರೆತ ಪಾನೀಯಗಳು ಹೃದಯದ ಕಾಯಿಲೆಗಳು, ಹೆಚ್ಚಿಸುತ್ತದೆ, ಮಧುಮೇಹ ಆವರಿಸುವ ಅಥವಾ ಇತರ ಮಾಕರ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಮಧುಮೇಹ ಆವರಿಸುವ ಅಥವಾ ಇತರ ಮಾಕರ ಕಾಯಿಲೆಗಳು

ಮಲಬದ್ಧತೆ ಹಾಗೂ ಅಜೀರ್ಣತೆಯಿಂದ ರಕ್ಷಿಸುತ್ತದೆ

ಮಲಬದ್ಧತೆ ಹಾಗೂ ಅಜೀರ್ಣತೆಯಿಂದ ರಕ್ಷಿಸುತ್ತದೆ

ಬ್ರಿಟನ್ನಿನಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಕೇಂದ್ರ ನರವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಾದ ಪಾರ್ಕಿನ್ಸನ್ ಕಾಯಿಲೆ ಅಥವಾ ಮೆದುಳಿನ ಘಾಸಿಯಿಂದ ಎದುರಾದ ಪಾರ್ಶ್ವವಾಯು ಮೊದಲಾದ ತೊಂದರೆ ಇರುವ ವ್ಯಕ್ತಿಗಳಿಗೆ ಮಲಬದ್ಧತೆಯ ತೊಂದರೆಯೂ ಇರುತ್ತದೆ. ಈ ಅಧ್ಯಯನದಲ್ಲಿ ಕಂಡುಕೊಂಡಂತೆ ಈ ವ್ಯಕ್ತಿಗಳು ಹೊಳೆಯುವ ನೀರನ್ನು ಸೇವಿಸುವ ಮೂಲಕ ಮಲಬದ್ದತೆಯಾಗುವ ತೊಂದರೆ ಇಲ್ಲವಾಗುತ್ತದೆ. ಅಲ್ಲದೇ, ಹೊಳೆಯುವ ನೀರಿನ ಸೇವನೆಯಿಂದ ಅಜೀರ್ಣತೆಯ ತೊಂದರೆಯೂ ಇಲ್ಲವಾಗುತ್ತದೆ.

ಪ್ರಯಾಣದ ವಾಕರಿಕೆಯನ್ನು ಇಲ್ಲವಾಗಿಸುತ್ತದೆ

ಪ್ರಯಾಣದ ವಾಕರಿಕೆಯನ್ನು ಇಲ್ಲವಾಗಿಸುತ್ತದೆ

ಪ್ರಯಾಣದ ಅವಧಿಯಲ್ಲಿ ಕೆಲವರಿಗೆ ಹೊಟ್ಟೆ ತೊಳೆಸಿದಂತಾಗುತ್ತದೆ ಹಾಗೂ ಇದು ವಾಂತಿಯಲ್ಲಿ ಪರ್ಯವಸಾನವಾಗುತ್ತದೆ. ಈ ತೊಂದರೆಗೆ ನಮ್ಮ ಒಳಗಿವಿಯಲ್ಲಿರುವ ದ್ರವ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಕುಲುಕಾಟದೊಂದಿಗೆ ಈ ದ್ರವವೂ ಕುಲುಕಾಡುವ ಮೂಲಕ ಕಣ್ಣು ನೋಡುವ ದೃಶ್ಯಕ್ಕೂ ಮೆದುಳು ಗ್ರಹಿಸುವ ದೃಶ್ಯಕ್ಕೂ ತಾಳಮೇಳ ಇಲ್ಲದೇ ಹೋಗುತ್ತದೆ ಹಾಗೂ ಹೊಟ್ಟೆ ತೊಳೆಸಲು ಕಾರಣವಾಗುತ್ತದೆ. ಕಾರು, ವಿಮಾನ, ಬಸ್ ಅಥವಾ ರೈಲು ಪ್ರಯಾಣದಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂಗಾಲದ ಡೈ ಆಕ್ಸೈಡ್ ಬೆರೆಸಿದ ನೀರನ್ನು ಕುಡಿಯುವ ಮೂಲಕ ಈ ತೊಂದರೆಯನ್ನು ಸಾಕಷ್ಟು ಕಡಿಮೆಗೊಳಿಸಬಹುದು ಹಾಗೂ ಕಡಿಮೆ ಸಮಯದಲ್ಲಿ ಸಾಮಾನ್ಯ ಆರೋಗ್ಯ ಪಡೆಯಲು ನೆರವಾಗುತ್ತದೆ.

ನಲ್ಲಿ ನೀರಿಗಿಂತಲೂ ಸುರಕ್ಷಿತ

ನಲ್ಲಿ ನೀರಿಗಿಂತಲೂ ಸುರಕ್ಷಿತ

ವಿಶ್ವದಾದ್ಯಂತ ನಲ್ಲಿಯಲ್ಲಿ ಬರುವ ನೀರಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ವಿಶೇಷವಾಗಿ ನಗರಪಾಲಿಕೆಗಳು ಒದಗಿಸುವ ನೀರಿನಲ್ಲಿ ಪ್ರಬಲ ರಾಸಾಯನಿಕಗಳಿರುತ್ತವೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಅಮೇರಿಕಾದ ನಲ್ಲಿ ನೀರಿನಲ್ಲಿ 316 ರಷ್ಟು ಬಗೆಯ ರಾಸಾಯನಿಕಗಳಿವೆ. ಭಾರತ ಇದಕ್ಕೂ ಮುಂದೆ ಹೋಗಿದೆ, ಇದರಲ್ಲಿ ಕರಗಿರುವ ರಾಸಾಯನಿಕಗಳ ಹೊರತಾಗಿ ಪ್ಲಾಸ್ಟಿಕ್ಕಿನ ಅತಿ ಸೂಕ್ಷ್ಮ ಎಳೆಗಳು ಸಹಾ ಇವೆ. ಆದ್ದರಿಂದ ನಲ್ಲಿ ನೀರಿಗಿಂತಲೂ ಹೊಳೆಯುವ ನೀರು ಉತ್ತಮ ಅಯ್ಕೆಯಾಗಿದೆ.

ಭೌತಿಕ ಜಾಗರೂಕತೆ ಹೆಚ್ಚಿಸುತ್ತದೆ

ಭೌತಿಕ ಜಾಗರೂಕತೆ ಹೆಚ್ಚಿಸುತ್ತದೆ

ಹೊಳೆಯುವ ನೀರಿನಲ್ಲಿ ವಿವಿಧ ಖನಿಜಗಳಿವೆ. ಇವೆಲ್ಲವೂ ದೇಹದ ಚಟುವಟಿಕೆಗಳಿಗೆ ಅಗತ್ಯವಾಗಿದೆ ಹಾಗೂ ಸ್ನಾಯುಗಳ ಸರಿಯಾದ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಸ್ನಾಯುಗಳು ಸಂಕುಚಿತ ಮತ್ತು ವಿಕಸಿತಗೊಳ್ಳಲು ನೆರವಾಗುತ್ತವೆ. ಅಲ್ಲದೇ ವ್ಯಕ್ತಿಯ ಒಟ್ಟಾರೆ ಆರೋಗ್ಯ ಹಾಗೂ ಬೌತಿಕ ಜಾಗರೂಕತೆ ಹೆಚ್ಚಿಸಲೂ ನೆರವಾಗುತ್ತದೆ.

ಹೃದಯಸ್ತಂಭನದಿಂದ ಕಾಪಾಡುತ್ತದೆ

ಹೃದಯಸ್ತಂಭನದಿಂದ ಕಾಪಾಡುತ್ತದೆ

ಖನಿಜಯುಕ್ತ ನೀರು ದೇಹದಲ್ಲಿರುವ ಕೊಬ್ಬನ್ನು ಬಳಸಿಕೊಳ್ಳಲು ನೆರವಾಗುತ್ತದೆ. ತನ್ಮೂಲಕ ದೇಹದಲ್ಲಿರುವ ಕೆಟ್ಟ ಕೊಲೆಸ್ಟಾಲ್ (LDL) ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ರಕ್ತನಾಳಗಳ ಒಳವ್ಯಾಸವನ್ನು ಕಿರಿದಾಗಿಸುವ ಸಂಭವ ಕಡಿಮೆಯಾಗುತ್ತದೆ. ಒಂದು ವೇಳೆ ಈ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚು ಹೆಚ್ಚಾಗಿ ಸಂಗ್ರಹವಾಗಿದ್ದರೆ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಹಾಗೂ ಹೃದಯ ಸ್ತಂಭನದ ಸಾಧ್ಯತೆ ಹೆಚ್ಚುತ್ತದೆ. ಹೊಳೆಯುವ ನೀರಿನ ಸೇವನೆ ಈ ಬೆಳವಣಿಗೆಯನ್ನು ತಡೆಯುತ್ತದೆ ಹಾಗೂ ರಕ್ತನಾಳಗಳ ಒಳಗೆ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ. ತನ್ಮೂಲಕ ಹೃದಯವನ್ನು ಹಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.

ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ

ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ

ಹೊಳೆಯುವ ನೀರಿನಲ್ಲಿರುವ ಸಲ್ಫೇಟುಗಳು ನಮ್ಮ ಮೇದೋಜೀರಕ ಗ್ರಂಥಿಗಳಲ್ಲಿ ಲಿಪೇಸ್ ಮತ್ತು ಅಮೈಲೇಸ್ ನಂತಹ ಜೀರ್ಣಕಾರಿ ಕಿಣ್ವಗಳ ಉತ್ಪಾದಿಸಲು ವೇಗವರ್ಧಕದಂತೆ ಕಾರ್ಯನಿರ್ವಹಿಸುತ್ತದೆ. ಈ ಜೀರ್ಣಕಾರಿ ಕಿಣ್ವಗಳು ಮಲಬದ್ದತೆ ಹಾಗೂ ಹೊಟ್ಟೆಯುಬ್ಬರಿಕೆಯಿಂದ ತಡೆಯುತ್ತದೆ ಹಾಗೂ ಕರುಳಿನಲ್ಲಿ ವಿಷಕಾರಿ ವಸ್ತುಗಳ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ಮುಂದಿನ ಬಾರಿ ನಿಮಗೆ ಆಮ್ಲೀಯತೆಯ ತೊಂದರೆ ಎದುರಾದರೆ ತಕ್ಷಣ ಹೊಳೆಯುವ ಖನಿಜ ನೀರನ್ನು ಕುಡಿಯಿರಿ.

ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ

ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ

ಖನಿಜಯುಕ್ತ ನೀರಿನಲ್ಲಿ ತ್ವಚೆಯ ಆರೋಗ್ಯ ಹೆಚ್ಚಿಸುವ ಸಿಲಿಕಾ ಕಣಗಳಿವೆ. ಈ ಸಿಲಿಕಾ ಕಣಗಳು ತ್ವಚೆಯ ಕಾಂತಿ ಹೆಚ್ಚಿಸಲು ಹಾಗೂ ಚರ್ಮದಲ್ಲಿ ಕೊಲ್ಯಾಜೆನ್ ಉತ್ಪತ್ತಿಯಾಗಲು ನೆರವಾಗುತ್ತದೆ. ತ್ವಚೆಯಲ್ಲಿ ಕೊಲ್ಯಾಜೆನ್ ಹೆಚ್ಚಿದಷ್ಟೂ ತ್ವಚೆಯಲ್ಲಿ ನೆರಿಗೆಗಳು, ಕಲೆಗಳು ಹಾಗೂ ಮಂದವಾಗುವುದರಿಂದಲೂ ರಕ್ಷಿಸುತ್ತದೆ. ಪರಿಣಾಮವಾಗಿ ಕಲೆಯಿಲ್ಲದ, ಹೊಳಪುಳ್ಳ ಹಾಗೂ ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Surprising Health Benefits Of Sparkling Mineral Water

Most often when you go to the eateries and restaurants to dine in, the waiters serve a bottle of mineral water, isn't it? Many of the people like to sip on sparkling mineral water because it is considered to be a good natural water for the body. To provide you with the basic knowledge, mineral water is simply the water collected from a spring or pumped from a well that contains naturally occurring minerals. Minerals like magnesium, potassium and calcium are mostly considered essential for the body. But sparkling mineral water contains natural gases or has been artificially carbonated by pumping carbon dioxide into it.
X
Desktop Bottom Promotion