For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಬೆಳಗ್ಗೆದ್ದ ತಕ್ಷಣ ಬೆಳ್ಳುಳ್ಳಿ ಟೀ ಕುಡಿಯುವ ಮಹತ್ವ

By Arshad
|

ಬೆಳ್ಳುಳ್ಳಿ ಟೀ, ಇದೇನು ವಿಚಿತ್ರ, ಮಸಾಲೆ ವಸ್ತುವಾದ ಬೆಳ್ಳುಳ್ಳಿಯನ್ನು ಟೀ ರೂಪದಲ್ಲಿ ಸೇವಿಸುವುದೇ? ಈ ಬಗ್ಗೆ ನಮ್ಮ ವೆಬ್ ತಾಣದಲ್ಲಿ ಹಲವಾರು ಬಾರಿ ಚರ್ಚಿಸಿ ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನೊಂದಿಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಪ್ರಯೋಜನಗಳ ಬಗ್ಗೆ ತಿಳಿಸಿಯೇ ಇದ್ದೇವೆ. ಆದರೆ ಇದಕ್ಕೂ ಉತ್ತಮವಾದ, ನೂರಾರು ವರ್ಷಗಳಿಂದ ಬಳಕೆಯಲ್ಲಿರುವ ಬೆಳ್ಳುಳ್ಳಿ ಟೀ ಬಗ್ಗೆ ಇಂದು ವಿವರಿಸಲಿದ್ದೇವೆ.

ಈ ಬೆಳ್ಳುಳ್ಳಿ ಟೀ ನಮಗೆ ಈಗ ಹೊಸತಾಗಿದ್ದರೂ ಪುರಾತನ ಕಾಲದ ಗ್ರೀಸ್ ನಲ್ಲಿ ಆರೋಗ್ಯವೃದ್ಧಿಗಾಗಿ ಬೆಳ್ಳುಳ್ಳಿ ಟೀಯನ್ನು ಸೇವಿಸಲಾಗುತ್ತಿತ್ತು. ಜೊತೆಗೇ ಜನತೆಗೆ ಶಕ್ತಿ ಹಾಗೂ ನವತಾರುಣ್ಯವನ್ನೂ ಒದಗಿಸುತ್ತಿತ್ತು ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಈ ವಿಷಯ ನಮ್ಮ ಕಲ್ಪನೆಗೆ ಮೀರಿದೆ. ಆದರೆ ಬೆಳ್ಳುಳ್ಳಿಯ ಪ್ರಯೋಜನಗಳನ್ನು ನಾವು ಈಗಾಗಲೇ ಬೇರೆ ರೂಪದಲ್ಲಿ ಪ್ರತ್ಯಕ್ಷವಾಗಿ ಕಂಡು ಖಾತರಿಪಡಿಸಿಕೊಂಡಿದ್ದೇವೆ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಹಾಗೂ ವಿಶೇಷವಾಗಿ ಇದರ ಆಂಟಿ ಆಕ್ಸಿಡೆಂಟ್ ಗುಣ ಇದನ್ನೊಂದು ನೈಸರ್ಗಿಕ ಗುಣಪಡಿಸುವ ಔಷಧಿಯಾಗಿ ಪರಿಗಣಿಸುವಂತೆ ಮಾಡಿದೆ. ಹೀಗಿರುವಾಗ ಬೆಳ್ಳುಳ್ಳಿ ಟೀ ಯನ್ನೂ ನಾವೇಕೆ ಪ್ರಯತ್ನಿಸಬಾರದು?

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳಿಗ್ಗೆದ್ದ ಬಳಿಕ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಯಾರಿಗೂ ಇಷ್ಟವಾಗದ ಕೆಲಸ. ಏಕೆಂದರೆ ಇದರ ರುಚಿ ಹಾಗೂ ಘಾಟು ಹೆಚ್ಚಿನವರಿ ಸಹಿಸಲಸಾಧ್ಯ. ಆದರೆ ಬೆಳ್ಳುಳ್ಳಿ ಟೀ ಈ ತೊಂದರೆಗಳನ್ನು ಇಲ್ಲವಾಗಿಸಿ ಕುಡಿಯಲು ರುಚಿಯಾಗಿಸುವ ಮೂಲಕ ಬೆಳ್ಳುಳ್ಳಿ ಸೇವನೆಗೆ ಪ್ರೇರಣೆ ನೀಡುತ್ತದೆ. ಇದರಿಂದ ಏನು ಪ್ರಯೋಜನ ಪಡೆಯಬಹುದು ಎಂದು ನೋಡೋಣ:

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳ್ಳುಳ್ಳಿ ಟೀ ಯಲ್ಲಿರುವ ಪೋಷಕಾಂಶಗಳು ತೂಕ ಇಳಿಸಲು ಅದ್ಭುತ ನೆರವು ನೀಡುತ್ತವೆ. ಬೆಳ್ಳುಳ್ಳಿ ಟೀ ಸೇವನೆಯಿಂದ ಹೊಟ್ಟೆ ಸ್ವಚ್ಛವಾಗುತ್ತದೆ ಹಾಗೂ ಹೆಚ್ಚುವರಿ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಅಲ್ಲದೇ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆಯ ಗತಿಯನ್ನು ಚುರುಕುಗೊಳಿಸುತ್ತದೆ. ಒಟ್ಟಾರೆ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಅಂಗಸೌಷ್ಟವವನ್ನು ಕಾಪಾಡಲೂ ನೆರವಾಗುತ್ತದೆ.

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳ್ಳುಳ್ಳಿ ಟೀಯ ಅದ್ಭುತ ಗುಣಗಳು

ಬೆಳ್ಳುಳ್ಳಿ ಟೀ ಹೃದಯದ ಆರೋಗ್ಯವನ್ನು ವೃದ್ಧಿಸುವ ಗುಣವಿರುವ ಅತ್ಯಂತ ಅಗ್ಗವಾದ ಔಷಧಿಯಾಗಿದೆ. ಇದರ ಸೇವನೆಯಿಂದ ರಕ್ತಪರಿಚಲನೆಯಲ್ಲಿ ಚುರುಕುತನ ಮೂಡುತ್ತದೆ ಹಾಗೂ ಕೆಟ್ಟ ಕೊಲೆಸ್ಟಾಲ್ ಅಥವಾ ಎಲ್. ಡಿ ಎಲ್ ಅನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ರಕ್ತನಾಳಗಳನ್ನು ಹಿಗ್ಗಿಸಿ ರಕ್ತಪರಿಚಲನೆಯನ್ನು ಸುಲಭಗೊಳಿಸುವ ಮೂಲಕ arteriosclerosis ಎಂಬ ನರಸಂಬಂಧಿ ತೊಂದರೆ ಉಂಟಾಗದಿರಲು ಸಾಧ್ಯವಾಗುತ್ತದೆ.

ಬೆಳ್ಳುಳ್ಳಿ ಟೀ ತಯಾರಿಸುವುದು ಹೇಗೆ?

ಬೆಳ್ಳುಳ್ಳಿ ಟೀ ತಯಾರಿಸುವುದು ಹೇಗೆ?

ಬೆಳ್ಳುಳ್ಳಿ ಟೀ ಎಂದಾಕ್ಷಣ ಇದನ್ನು ತಯಾರಿಸುವುದು ಕಷ್ಟ ಎಂಬ ಭಾವನೆ ಬರಬಹುದು. ಆದರೆ ಇದನ್ನು ತಯಾರಿಸುವುದು ಸಾಮಾನ್ಯ ಟೀ ತಯಾರಿಸುವಷ್ಟೇ ಸುಲಭವಾಗಿದೆ. ಇದರಿಂದ ಬೆಳ್ಳುಳ್ಳಿಯ ವಾಸನೆಯೂ ಇಲ್ಲವಾಗಿ ಎಲ್ಲರಿಗೂ ಇಷ್ಟವಾಗುವಂತಹ ಟೀ ತಯಾರಾಗುತ್ತದೆ:

ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

ಒಂದು ಬೆಳ್ಳುಳ್ಳಿಯ ಎಸಳು (ಮೊಳಕೆ ಮೂಡಿರಬಾರದು)

ಒಂದು ಲೋಟ ನೀರು (200 ml ಅಥವಾ 6.5 ಔನ್ಸ್)

ಕೊಂಚ ತುರಿದ ಹಸಿಶುಂಠಿ (3 g ಅಥವಾ 0.1 ಔನ್ಸ್)

ಒಂದು ದೊಡ್ಡ ಚಮಚ ಲಿಂಬೆರಸ (15 ml ಅಥವಾ 0.5 ಔನ್ಸ್)

ಒಂದು ದೊಡ್ಡ ಚಮಚ ಜೇನು (25 g ಅಥವಾ 0.9 ಔನ್ಸ್)

ವಿಧಾನ:

ವಿಧಾನ:

*ಮೊದಲು ನೀರನ್ನು ಒಂದು ಟೀಪಾತ್ರೆಯಲ್ಲಿ ಹಾಕಿ ಕುದಿಸಿ. ನೀರು ಕುದಿಯಲು ತೆಗೆದುಕೊಳ್ಳುವ ಸಮಯದಲ್ಲಿ ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಜಜ್ಜಿ ಅಥವಾ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.

*ನೀರು ಕುದಿಯಲು ಆರಂಭವಾಗುತ್ತಿದ್ದಂತೆಯೇ ಶುಂಠಿಯ ತುರಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಉರಿಯನ್ನು ಚಿಕ್ಕದಾಗಿಸಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಕುದಿಯಲು ಬಿಡಿ. ಬಳಿಕ ಉರಿ ಆರಿಸಿ ಸುಮಾರು ಹತ್ತು ನಿಮಿಷ ಆರಲು ಬಿಡಿ.

*ಬಳಿಕ ಈ ನೀರನ್ನು ಸೋಸಿ ಲಿಂಬೆರಸ ಮತ್ತು ಜೇನು ಬೆರೆಸಿ ಕಲಕಿ.

ಕುದಿಸುವಾಗ ಪಾತ್ರೆಯ ಮುಚ್ಚಳ ಮುಚ್ಚಬೇಡಿ, ಇದರಿಂದ ಬೆಳ್ಳುಳ್ಳಿಯ ವಾಸನೆ ಹೋಗುತ್ತದೆ. ಈ ಟೀ ಈಗ ರುಚಿಕರ ಹಾಗೂ ಅತ್ಯಂತ ಆರೋಗ್ಯಕರವಾಗಿದೆ.

ಈ ಟೀ ಯಾವಾಗ ಕುಡಿಯಬೇಕು?

ಈ ಟೀ ಯಾವಾಗ ಕುಡಿಯಬೇಕು?

ಪ್ರತಿದಿನ ಬೆಳಿಗ್ಗೆದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಈ ಟೀ ಕುಡಿಯುವ ಮೂಲಕ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದೇ ಪರಿಣಾಮವನ್ನು ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಜಗಿದು ನುಂಗುವ ಮೂಲಕವೂ ಪಡೆಯಬಹುದು. ಆದರೆ ಈ ಟೀಯಲ್ಲಿರುವ ಜೇನು ಮತ್ತು ಶುಂಠಿ ಹೆಚ್ಚಿನ ಪ್ರಯೋಜನ ನೀಡುತ್ತವೆ. ಈ ಟೀಯಲ್ಲಿರುವ ವಿಟಮಿನ್ನುಗಳು, ಆಂಟಿ ಆಕ್ಸಿಡೆಂಟು ಹಾಗೂ ಖನಿಜಗಳು ಇದನ್ನೊಂದು ನಿತ್ಯವೂ ಸೇವಿಸಲು ಅಗತ್ಯವಿರುವ ಟಾನಿಕ್ ಆಗಿ ಪರಿವರ್ತಿಸುತ್ತವೆ.

ಈ ಟೀ ಯಾವಾಗ ಕುಡಿಯಬೇಕು?

ಈ ಟೀ ಯಾವಾಗ ಕುಡಿಯಬೇಕು?

ಈ ಟೀ ಯನ್ನು ನಿತ್ಯವೂ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಸಾಮಾನ್ಯ ಆರೋಗ್ಯ ತೊಂದರೆಗಳಿಂದ ಹೆಚ್ಚಿನ ರಕ್ಷಣೆ ಒದಗುತ್ತದೆ. ಪುರಾತನ ಗ್ರೀಕರು ಈ ಟೀ ಸೇವನೆಯಿಂದ ಪಡೆದಿರುವ ಆರೋಗ್ಯ ಮತ್ತು ತಾರುಣ್ಯವನ್ನು ಈಗ ನಾವೇಕೆ ಪಡೆಯಬಾರದು?

ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

English summary

Surprising Health Benefits Of Garlic tea

Garlic tea. Have you ever tried it? Numerous times in our blog we have talked about the wonderful benefits of consuming garlic on an empty stomach with a glass of water but, this time, we want to offer you a medicinal recipe that has been known since ancient times.
X
Desktop Bottom Promotion