For Quick Alerts
ALLOW NOTIFICATIONS  
For Daily Alerts

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಚೆರ್ರಿ ಜ್ಯೂಸ್ ಕುಡಿಯಿರಿ

|

ರಾತ್ರಿ ನಿದ್ದೆ ಬರದೇ ಇರುವುದು ಪ್ರಮುಖವಾದ ತೊಂದರೆಯಾಗಿದ್ದು ಇದರಿಂದ ಆರೊಗ್ಯಕ್ಕೆ ಹಲವು ರೀತಿಯ ತೊಂದರೆಗಳು ಎದುರಾಗುತ್ತವೆ. ರಾತ್ರಿಯ ನಿದ್ದೆ ಇಲ್ಲದಿದ್ದರೆ ಹಗಲಿನಲ್ಲಿ ತೂಕಡಿಕೆ ಎದುರಾಗುವುದು ಹಾಗೂ ಒಟ್ಟಾರೆ ಆರೋಗ್ಯವೇ ಏರುಪೇರುಗೊಳ್ಳುತ್ತದೆ. ಆದ್ದರಿಂದ ರಾತ್ರಿಯ ಗಾಢನಿದ್ದೆ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ.

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದ ಬಳಿಕ ತಲಾ ಒಂದು ಲೋಟ ಚೆರ್ರಿ ಹಣ್ಣುಗಳ ಜ್ಯೂಸ್ ಕುಡಿಯುವ ಮೂಲಕ ರಾತ್ರಿಯ ಸಮಯದಲ್ಲಿ ಗಾಢ ನಿದ್ದೆ ಆವರಿಸಲು ನೆರವಾಗುತ್ತದೆ. ಒಂದು ವೇಳೆ ನಿಮಗೆ ಅಥವಾ ನಿಮ್ಮ ಅಪ್ತರು, ಹಿರಿಯರಲ್ಲಿ ಯಾರಿಗಾದರೂ ನಿದ್ರಾರಾಹಿತ್ಯದ ತೊಂದರೆ ಇದ್ದರೆ ಅವರಿಗೂ ಚೆರ್ರಿ ಹಣ್ಣುಗಳ ಜ್ಯೂಸ್ ಕುಡಿಯುವ ಮಹತ್ವವನ್ನು ವಿವರಿಸಿ, ಈ ಮೂಲಕ ಅವರಿಗೂ ಅನುಕೂಲವಾಗಬಹುದು.

ಸಂಶೋಧನೆಯಲ್ಲಿ ವಿವರಿಸಿದ ಪ್ರಕಾರ ಚೆರ್ರಿ ಹಣ್ಣುಗಳ ಜ್ಯೂಸ್ ಸೇವನೆಯಿಂದ ಗಾಢವಾದ ನಿದ್ದೆ ಆವರಿಸುವುದು ಮಾತ್ರವಲ್ಲ, ನಿದ್ದೆಯ ಅವಧಿಯೂ ಸುಮಾರು ಒಂದರಿಂದ ಒಂದೂವರೆ ಘಂಟೆ ಹೆಚ್ಚಾಗುತ್ತದೆ. ಅಲ್ಲದೇ ವಿಶೇಷವಾಗಿ ಐವತ್ತು ವರ್ಷ ದಾಟಿದ ಹಿರಿಯರಲ್ಲಿಯೂ ಈ ಜ್ಯೂಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಸಂಶೋಧನೆ ಸ್ಪಷ್ಟಪಡಿಸಿದೆ.

ಈ ಸಂಶೋಧನೆಯಲ್ಲಿ ಸಂಶೋಧಕರು ಐವತ್ತು ದಾಟಿದ ಸುಮಾರು ಎಂಟು ಆರೋಗ್ಯವಂತ ಆದರೆ ನಿದ್ರಾರಾಹಿತ್ಯದಿಂದ ಬಳಲುತ್ತಿರುವ ಪುರುಷರು ಮತ್ತು ಮಹಿಳೆಯರನ್ನು ಪರೀಕ್ಷೆಗಾಗಿ ಆಯ್ದುಕೊಂಡರು. ಇವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯ್ತು. ಒಂದು ಗುಂಪಿನ ವ್ಯಕ್ತಿಗಳಿಗೆ ಚೆರ್ರಿ ಜ್ಯೂಸ್ ಸೇವಿಸುವಂತೆ ಸೂಚನೆ ನೀಡಲಾಯಿತು ಹಾಗೂ ಇನ್ನೊಂದು ಗುಂಪಿನವರನ್ನು ನಿತ್ಯದ ಆಹಾರವನ್ನು ಮಾತ್ರವೇ ಸೇವಿಸುವಂತೆ ಸೂಚಿಸಲಾಯಿತು. ಮೊದಲ ಗುಂಪಿನ ವ್ಯಕ್ತಿಗಳಿಗೆ 240ಮಿಲೀ ಚೆರ್ರಿ ಜ್ಯೂಸ್ ನೊಂದಿಗೆ ಒಂದು ಅಳತೆಯ ಮಟ್ಟದಲ್ಲಿ ಪ್ರೋಸಯನೈಡಿನ್ ಎಂಬ ಔಷಧಿಯನ್ನು ಬೆರೆಸಿ ಮುಂಜಾನೆ ಮತ್ತು ರಾತ್ರಿ ಸೇವಿಸಲು ನೀಡಲಾಯಿತು.

ತುಂಬಾ ಹೊತ್ತು ನಿದ್ದೆ ಮಾಡುವವರಿಗಾಗಿ ಈ ಲೇಖನ

ಸತತವಾಗಿ ಹದಿನಾಲ್ಕು ದಿನಗಳವರೆಗೆ ಈ ಸಂಶೋಧನೆಯನ್ನು ಮುಂದುವರೆಸಲಾಯಿತು ಹಾಗೂ ನಿದ್ದೆಯ ಗಾಢತನ ಮತ್ತು ಅವಧಿಯನ್ನು ಅಳೆಯಲಾಯಿತು. ಅಚ್ಚರಿ ಎಂಬಂತೆ ಚೆರ್ರಿ ಜ್ಯೂಸ್ ಸೇವಿಸಿದ ಗುಂಪಿನ ವ್ಯಕ್ತಿಗಳೆಲ್ಲರೂ ಸರಾಸರಿ 84 ನಿಮಿಷ ಹೆಚ್ಚು ಕಾಲ ಗಾಢ ನಿದ್ದೆಗೆ ಒಳಗಾಗಿದ್ದರು. ಈ ವಿವರಗಳನ್ನು American Journal of Therapeutics ಎಂಬ ವೈದ್ಯಕೀಯ ನಿಯತಕಾಲಿಕೆ ಪ್ರಕಟಿಸಿದೆ. ಬನ್ನಿ, ಈ ಜ್ಯೂಸ್ ನ ಸೇವನೆಯಿಂದ ಇನ್ನೂ ಯಾವ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಚೆರ್ರಿ ಜ್ಯೂಸ್ ನಲ್ಲಿ ಫ್ಲೇವನಾಯ್ಡುಗಳಿವೆ, ಇವು ಇದುವರೆಗೆ ಗೊತ್ತಿರುವ ಆಂಟಿ ಆಕ್ಸಿಡೆಂಟುಗಳಲ್ಲಿಯೆ ಅತ್ಯಂತ ಉತ್ತಮವಾದವುಗಳಾಗಿವೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಸೋಂಕುಗಳ ವಿರುದ್ದ ಹೋರಾಡಲು ದೇಹ ಬಲಗೊಳ್ಳುತ್ತದೆ.

ದೇಹದ ಕೊಬ್ಬು ಕರಗಿಸಲು ನೆರವಾಗುತ್ತದೆ

ದೇಹದ ಕೊಬ್ಬು ಕರಗಿಸಲು ನೆರವಾಗುತ್ತದೆ

ಒಂದು ವೇಳೆ ನಿಮ್ಮ ದೇಹದ ತೂಕ ಹೆಚ್ಚಾಗಿದ್ದು ಕೊಬ್ಬು ಸಹಾ ಹೆಚ್ಚೇ ಇದ್ದರೆ ನಿತ್ಯವೂ ಚೆರ್ರಿ ಹಣ್ಣುಗಳ ಜ್ಯೂಸ್ ಸೇವನೆಯಿಂದ ನಿಮಗೆ ಹೆಚ್ಚಿನ ಪ್ರಯೋಜನವಿದೆ. ಇದರಲ್ಲಿರುವ ಆಂಥೋಸೈಯಾನಿನ್ ಎಂಬ ಫ್ಲೇವನಾಯ್ಡು ಚೆರ್ರಿ ಹಣ್ಣುಗಳ ಕೆಂಪು ಬಣ್ಣಕ್ಕೆ ಕಾರಣವಾಗಿದೆ ಹಾಗೂ ದೇಹದ ಕೊಬ್ಬನ್ನು ಕರಗಿಸಿ ಸ್ಥೂಲಕಾಯ ಕಡಿಮೆಗೊಳಿಸಲು ನೆರವಾಗುತ್ತದೆ.

ಸಂಧಿವಾತ ನಿವಾರಣೆಗೆ ನೆರವಾಗುತ್ತದೆ

ಸಂಧಿವಾತ ನಿವಾರಣೆಗೆ ನೆರವಾಗುತ್ತದೆ

ದೇಹದ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಮೂಳೆಗಳ ಸಂಧುಗಳಲ್ಲಿ ಅಪಾರವಾದ ಸಂಧಿವಾತ ಅಥವಾ ಗಂಟುಗಳಲ್ಲಿ ನೋವು ಎದುರಾಗುತ್ತದೆ. ಚೆರ್ರಿ ಹಣ್ಣಿನಲ್ಲಿರುವ ಸಂಯುಕ್ತಗಳು ಯೂರಿಕ್ ಆಮ್ಲವನ್ನು ಕಡಿಮೆಗೊಳಿಸಿ ಸಂಧಿವಾತವನ್ನು ಕಡಿಮೆಗೊಳಿಸುತ್ತದೆ.

 ಹೃದಯದ ಆರೋಗ್ಯ ವೃದ್ಧಿಸುತ್ತದೆ

ಹೃದಯದ ಆರೋಗ್ಯ ವೃದ್ಧಿಸುತ್ತದೆ

ಚೆರ್ರಿ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ. ಇಂತಹ ಒಂದು ಪ್ರಮುಖ ಆಂಟಿ ಆಕ್ಸಿಡೆಂಟು ಆಗಿರುವ ಕ್ವೆರ್ಸಟಿನ್ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ. ನಿತ್ಯವೂ ಒಂದು ಲೋಟ ಚೆರ್ರಿ ಜ್ಯೂಸ್ ಕುಡಿಯುವ ಮೂಲಕ ಹೃದಯ ಸ್ತಂಭನ ಹಾಗೂ ಆಘಾತದಿಂದ ರಕ್ಷಿಸುತ್ತದೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಿಸುತ್ತದೆ

ಚೆರ್ರಿ ಜ್ಯೂಸ್ ನಲಿರುವ ಆಂಥೋಸೈಯಾನಿನ್ ಎಂಬ ಸಂಯುಕ್ತಗಳು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಉತ್ತಮಗೊಳಿಸುತ್ತದೆ ಹಾಗೂ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಆದರೆ ಈ ಜ್ಯೂಸ್ ನಲ್ಲಿ ಸಕ್ಕರೆ ಅಥವಾ ಇತರ ಯಾವುದೇ ರುಚಿಕಾರಕಗಳನ್ನು ಬೆರೆಸಬಾರದು. ಸಕ್ಕರೆ ಬೆರೆಸಿದರೆ ಇದು ರಕ್ತವನ್ನು ರಕ್ಷಿಸುವ ಬದಲು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ವಿರುದ್ದವಾಗಿ ಕಾರ್ಯನಿರ್ವಹಿಸಬಹುದು.

ಸ್ನಾಯುಗಳ ಸೆಡೆತವನ್ನು ಸಡಿಲಿಸುತ್ತದೆ

ಸ್ನಾಯುಗಳ ಸೆಡೆತವನ್ನು ಸಡಿಲಿಸುತ್ತದೆ

ಕೆಲವೊಮ್ಮೆ ಹೆಚ್ಚಿನ ವ್ಯಾಯಾಮ ಅಥವಾ ಕೆಲವೇ ಸ್ನಾಯುಗಳಿಗೆ ಹೆಚ್ಚು ಕೆಲಸ ನೀಡುವ ಮೂಲಕ ಆ ಸ್ನಾಯುಗಳು ಸೆಟೆದುಕೊಂಡು ಮಡಚಿಕೊಳ್ಳುತ್ತವೆ. ಹೀಗೆ ಸೆಟೆದುಕೊಂಡ ಸ್ನಾಯುಗಳನ್ನು ಮತ್ತೆ ಮೊದಲಿನಂತಾಗಿಸಲು ಚೆರ್ರಿ ಹಣ್ಣುಗಳು ಉತ್ತಮವಾದ ನೆರವು ನೀಡುತ್ತದೆ. ಚೆರ್ರಿಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣ ಆಕ್ಸಿಡೀಕೃತ ಕಿಣ್ವಗಳನ್ನು ಕಡಿಮೆಗೊಳಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸೆಡೆತಕ್ಕೊಳಗಾದ ಸ್ನಾಯುಗಳನ್ನು ಮೊದಲಿನಂತಾಗಿಸಿ ನೋವನ್ನು ಇಲ್ಲವಾಗಿಸುತ್ತದೆ.

English summary

Suffering From Insomnia? Drink Cherry Juice, It Helps

Suffering from insomnia is one of the worst feeling that one could ever have. If you fail to have a proper sleep then it can have a serious impact on your overall health. Hence, having a good night's sleep is very essential.A new study has found that drinking a glass of cherry juice in the morning and a glass before bedtime helps to better your sleep. So if your parents and grand-parents have been suffering from insomnia then make it a point to give them cherry juice, it helps to extend their sleep by near about one and half hour.
X
Desktop Bottom Promotion