For Quick Alerts
ALLOW NOTIFICATIONS  
For Daily Alerts

ಸ್ನಾಯುಗಳ ಸೆಳೆತ ತಡೆಗೆ ಇಲ್ಲಿದೆ ನೋಡಿ ಸರಳ ಟಿಪ್ಸ್

By Hemanth
|

ಸ್ನಾಯುಗಳ ಸೆಳೆತದಿಂದ ಬರುವಂತಹ ನೋವನ್ನು ಸಹಿಸಲು ಅಸಾಧ್ಯ. ದೊಡ್ಡ ದೊಡ್ಡ ಕ್ರೀಡಾಪಟುಗಳಿಂದ ಹಿಡಿದು ಸಾಮಾನ್ಯ ಮನುಷ್ಯನಿಗೂ ಸ್ನಾಯು ಸೆಳೆತದ ಅನುಭವ ಆಗಿಯೇ ಆಗುವುದು. ಇದು ನೋವು ಏನೂ ಅಲ್ಲ, ಇದಕ್ಕಿಂತ ಮಿಗಿಲಾದ ನೋವು ಇದೆ ಎಂದು ವಾದ ಮಾಡುವವರು ಇದ್ದಾರೆ. ಆದರೆ ನೋವಿಗಿಂತಲೂ ಈ ಸಮಯದಲ್ಲಿ ಅಸಾಯಕತೆ ಕಾಡುವುದು. ಆರೋಗ್ಯಕರ ಆಹಾರ ತಿಂದರೆ ಸ್ನಾಯು ಸೆಳೆತ ಉಂಟಾಗುವುದಿಲ್ಲ ಎಂದು ನೀವು ಭಾವಿಸಿರಬಹುದು.

ಸ್ನಾಯುಗಳ ಗುಂಪಿನಲ್ಲಿ ಅಸಮತೋಲನ ಉಂಟಾಗುವ ಕಾರಣದಿಂದಾಗಿ ಸ್ನಾಯು ಸೆಳೆತವು ಕಾಣಿಸಿಕೊಳ್ಳುವುದು. ಒಂದು ಸ್ನಾಯು ಗುಂಪು, ಇನ್ನೊಂದು ಸ್ನಾಯುವಿನ ಗುಂಪಿಗಿಂತ ತುಂಬಾ ಬಲಿಷ್ಠವಾಗಿದ್ದರೆ ಆಗ ಸ್ನಾಯು ಸೆಳೆತವು ಉಂಟಾಗುವುದು. ಇದರಿಂದಾಗಿ ಕೆಲವೊಂದು ಸಲ ಪದೇ ಪದೇ ಸ್ನಾಯು ಸೆಳೆತ ಕಾಣಿಸಬಹುದು. ದುರ್ಬಲವಾಗಿರುವ ಸ್ನಾಯುಗಳು ಬಲಗೊಳ್ಳುವಂತೆ ಮಾಡಿದರೆ ಆಗ ಸ್ನಾಯು ಸೆಳೆತದ ಸಮಸ್ಯೆ ನಿವಾರಣೆ ಮಾಡಬಹುದು. ಈ ಲೇಖನದಲ್ಲಿ ಸ್ನಾಯು ಸೆಳೆತವನ್ನು ದೂರವಿಡಬಲ್ಲ ಐದು ರೀತಿಯ ವಿಧಾನಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಕಲಿತುಕೊಂಡು ಸ್ನಾಯು ಸೆಳೆತದ ನೋವಿನಿಂದ ಪಾರಾಗಿ.

how to stop muscle cramps fast

1. ಹ್ಯಾಮ್ ಸ್ಟ್ರಿಂಗ್(ಮಂಡಿರಜ್ಜು) ಸ್ಟ್ರೇಚ್

ಈ ಸ್ಟ್ರೇಚ್ ಮಾಡುವುದು ತುಂಬಾ ಸುಲಭ ಮತ್ತು ನಿಮಗೆ ನಿಜವಾಗಿಯೂ ಹೆಚ್ಚು ಸಮಯ ವ್ಯಯಿಸಬೇಕಾಗಿಲ್ಲ. ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಚಾಚಿಕೊಳ್ಳಿ. ಮೆತ್ತಗಿನ ಹಾಸಿಗೆ ಮೇಲೆ ಮಾಡಿದರೆ ಒಳ್ಳೆಯದು. ನೆಲದ ಮೇಲೆ ಕೂಡ ಮಾಡಬಹುದು. ಒಂದು ವೇಳೆ ತೊಡೆಗಳ ಮುಂಭಾಗದ ಕೆಳಭಾಗ (ಅಂದರೆ ಮೊಣಗಂಟಿನ ಮೇಲಿನ ಸ್ನಾಯು) ಪೆಡಸಾಗಿದ್ದರೆ ಕುರ್ಚಿಯ ಕೈ ಅಥವಾ ಮೇಜನ್ನು ಕೈಗಳಿಂದ ಆಧಾರವಾಗಿ ಹಿಡಿದು ನಿಂತುಕೊಳ್ಳಿ ಮತ್ತು ಮುಂದಕ್ಕೆ ಬಾಗಿ. ಈಗ ಪಾದವನ್ನು ಆದಷ್ಟು ನೇರಗೊಳಿಸಿ ಕಾಲನ್ನು ಹಿಂದಕ್ಕೆ ತರಲು ಪ್ರಯತ್ನಿಸಿ. ಹೀಗೇ ಎರಡೂ ಕಾಲುಗಳಿಗೆ ಮಾಡಿ. ನಿಮ್ಮ ಅಡುಗೆ ಎಣ್ಣೆಯನ್ನು ಕೆಲದಿನಗಳಿಗಾಗಿ ಸಾಸಿವೆ ಎಣ್ಣೆಯಲ್ಲಿ ಬದಲಿಸಿ. ಕಾಲಿನ ಪೆಡಸಿಗೆ ಅಸೆಟಿಕ್ ಆಮ್ಲದ ಕೊರತೆಯೂ ಕಾರಣವಗಿರಬಹುದು. ಈ ಎಣ್ಣೆಯಲ್ಲಿರುವ ಅಸೆಟಿಕ್ ಆಮ್ಲ ಜೀರ್ಣಾಂಗಗಳ ಮೂಲಕ ರಕ್ತಸೇರಿ ಕೆಲವೇ ದಿನಗಳಲ್ಲಿ ಕಾಲಿನ ಪೆಡಸನ್ನು ಕಡಿಮೆಗೊಳಿಸುತ್ತದೆ.

2. ನಿಂತುಕೊಂಡು ಮಂಡಿರಜ್ಜು ಸ್ಟ್ರೇಚಸ್

ಇದು ಕೂಡ ಮೊದಲಿನಂತೆ ಮಾಡಬಹುದು. ಒಂದು ಕುರ್ಚಿ ತೆಗೆದುಕೊಂಡು ಅದನ್ನು ಗೋಡೆಗೆ ಒರಗಿಸಿಡಿ. ಕುರ್ಚಿ ಬದಲಿಗೆ ಹಾಸಿಗೆ ಅಥವಾ ಬೇರೆ ಏನಾದರೂ ಬಳಸಬಹುದು. ಇದರ ಬಳಿಕ ಕುರ್ಚಿ ಮುಂದೆ ನಿಂತುಕೊಳ್ಳಿ ಮತ್ತು ಬಲದ ಪಾದವನ್ನು ಅದರ ಮೇಲಿಡಿ. ಕಾಲು ನೇರವಾಗಿರಲಿ. ದೇಹದ ಮೇಲಿನ ಭಾಗವು ನೇರವಾಗಿರಲಿ ಮತ್ತು ಎಡದ ಕಾಲು ನೆಲದ ಮೇಲಿರಲಿ. ಈಗ ದೇಹವನ್ನು ಹಿಂದಕ್ಕೆ ಬಾಗಿಸಿ. ಸುಮಾರು 10-15 ಸ್ಟ್ರೇಚಸ್ ನ್ನು ಕಾಲುಗಳನ್ನು ಬದಲಾಯಿಸುತ್ತಾ ಮಾಡಿ.

3. ಲುಂಗೆ ಸ್ಟ್ರೇಚಸ್

ಇಲ್ಲಿ ದೇಹವನ್ನು ನೇರವಾಗಿಟ್ಟುಕೊಂಡು ಕಾಲುಗಳನ್ನು ಜತೆಯಾಗಿಸಿಕೊಂಡು ನಿಲ್ಲಬೇಕು. ಈಗ ಒಂದು ಕಾಲನ್ನು ಮುಂದಕ್ಕೆ ಕೊಂಡುಹೋಗಿ ಮತ್ತು ಆದಷ್ಟು ಎರಡು ಕಾಲುಗಳ ನಡುವಿನ ಅಂತರವು ಹೆಚ್ಚಾಗಿರಲಿ. ಮೊಣಕಾಲನ್ನು ಮಡಚಬಹುದು ಅಥವಾ ಹಾಗೆ ಇಡಬಹುದು. ಇನ್ನೊಂದು ಕಾಲು ನೇರವಾಗಿರಬೇಕು ಮತ್ತು ಪಾದವು ನೆಲದ ಮೇಲಿರಬೇಕು. ದೇಹದ ಮೇಲ್ಭಾಗಕ್ಕೆ ನೀವು ಕೈಗಳನ್ನು ನೆಲದ ಮೇಲಿಡಿ ಮತ್ತು ಇನ್ನೊಂದು ಬದಿಗೆ ಬಾಗಿಸಿ, ಈಗ ಒಂದು ಕೈಯು ಆಗಸದತ್ತ ಇರಲಿ. ಇದನ್ನು ನೀವು 10 ಸಲ ಮಾಡಬೇಕು. ಒಂದು ಬದಿಯಿಂದ ಇನ್ನೊಂದು ಬದಿಗೆ ಬದಲಾಯಿಸಿಕೊಳ್ಳಿ.

4. ನಿಂತಿರುವ ಕರುವಿನ ಸ್ಟ್ರೆಚ್

ಗೋಡೆಯ ಮುಂದೆ ನಿಂತು ಅದರ ಮೇಲೆ ನಿಮ್ಮ ಅಂಗೈಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವಾಗ ನಿಮ್ಮ ಎರಡು ಕೈಗಳು ವ್ಯಾಪಿಸಿರಲಿ. ಈಗ ಮೊಣಕಾಲುಗಳನ್ನು ಬಗ್ಗಿಸಿಕೊಂಡು ಬಲದ ಕಾಲನ್ನು ಮುಂದಕ್ಕೆ ಚಾಚಿ. ಈ ವೇಳೆ ನಿಮ್ಮ ಎಡದ ಕಾಲು ಹಿಂದಕ್ಕೆ ವ್ಯಾಪಿಸಿಕೊಂಡಿರಬೇಕು ಮತ್ತು ನೇರವಾಗಿ ಇರುವುದನ್ನು ದೃಢಪಡಿಸಿಕೊಳ್ಳಿ. ಇದರ ಬಳಿಕ ಬಲದ ಮೊಣಕಾಲನ್ನು ಸ್ವಲ್ಪ ಆರಾಮಕೊಟ್ಟು ಗೋಡೆಯನ್ನು ಅಂಗೈಯಿಂದ ಮುಂದಕ್ಕೆ ದೂಡುವಂತೆ ಮಾಡಿ. ಈ ಭಂಗಿಯಲ್ಲಿ ಸುಮಾರು 30-40 ಸೆಕೆಂಡುಗಳ ಕಾಲ ಇರಿ. ಇದರ ಬಳಿಕ ಮತ್ತೆ ನೇರವಾದ ಭಂಗಿಗೆ ಬನ್ನಿ. ಇದನ್ನು 3-5 ಸಲ 4-5 ದಿನಗಳ ಕಾಲ ಮಾಡಿ.

5. 90/90 ಸ್ಟ್ರೇಚ್

ಈ ಸ್ಟ್ರೆಚ್ ಮಾಡಲು ಲಂಬವಾಗಿರುವುದು ಅಗತ್ಯವಾಗಿದೆ. ಬಲದ ಕಾಲು 90 ಡಿಗ್ರಿಯಲ್ಲಿ ಬಾಗಿರುವಂತೆ ಭಂಗಿಯಲ್ಲಿರಬೇಕು ಮತ್ತು ಸ್ನಾಯುಗಳು ದೇಹಕ್ಕೆ ಲಂಬವಾಗಿರುವಂತೆ ನೋಡಿಕೊಳ್ಳಿ. ಎಡದ ಕಾಲು ನೆಲದ ಮೇಲಿರಲಿ ಮತ್ತು ಬಲದ ಕಾಲು ಬಾಗಿಕೊಂಡಿರಲಿ. ಈ ಭಂಗಿಯಲ್ಲಿ ನೀವು ಎಡ ಮೊಣಕಾಲು ದೇಹದ ಎಡಭಾಗಕ್ಕೆ ಚಲಿಸಲಿ ಮತ್ತು ಇದರ ಬಳಿಕ ಪಾದವು ನಿಮ್ಮ ಹಿಂದಿರುವಂತೆ ಇದನ್ನು ಮಡಚಿಕೊಳ್ಳಿ. ಎಡ ಮತ್ತು ಬಲದ ಪಾದವು ಬಾಗಿಕೊಂಡಿರಲಿ. ಈ ಭಂಗಿಯಲ್ಲಿ ನೀವು ಆರಾಮವಾಗಿರಿ. ಪೃಷ್ಠದ ಭಾಗವನ್ನು ನೆಲದ ಮೇಲಿಡಿ. ಅದಾಗ್ಯೂ, ನಿಮ್ಮ ದೇಹವು ತುಂಬಾ ಬಿಗಿಯಾಗಿದ್ದರೆ ಆಗ ಸ್ಟ್ರೇಚ್ ಮಾಡಲು ತುಂಬಾ ಕಷ್ಟವೆಂದು ನೀವು ತಿಳಿದುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ತುಂಬಾ ಹತ್ತಿರಕ್ಕೆ ಬನ್ನಿ. ಈ ಸ್ಟ್ರೇಚ್ ಮಾಡುವಾಗ 30 ಸೆಕೆಂಡ್ ನಿಂದ 3 ನಿಮಿಷದ ತನಕ ಭಂಗಿಯಲ್ಲಿರಿ. ಇದರ ಬಳಿಕ ಇದನ್ನು ಎರಡು ಬದಿಗೆ ಪುನರಾವರ್ತಿಸಿ. ಒಂದು ವೇಳೆ ಕತ್ತಿನ ಭಾಗದಲ್ಲಿ ನೋವು ಕಾಣಿಸಿಕೊಂಡರೆ, ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ನಿಮ್ಮ ಎಡಗೈಯನ್ನು ತೊಡೆಯ ಮೇಲೆ ಇಟ್ಟುಕೊಳ್ಳಿ. ಈಗ ನಿಮ್ಮ ಬಲಗೈಯನ್ನು ನಿಮ್ಮ ಎಡ ಭಾಗದ ತಲೆಗೆ ಚಾಚಿ. ನಿಮ್ಮ ತಲೆಯನ್ನು ಬಲಭುಜಕ್ಕೆ ವಾಲಿಸಿ. ಈ ಪ್ರಕ್ರಿಯೆಯನ್ನು ಹಾಗೆಯೇ ಇನ್ನೊಂದು ಕಡೆ ಮಾಡುವಂತೆ ಪ್ರಯತ್ನಿಸಿ. ಈ ಪ್ರಕ್ರಿಯೆಯಿಂದ ನಿಮ್ಮ ಕತ್ತಿನ ಭಾಗದ ಮತ್ತು ಭುಜಗಳ ನೋವಿನ ಒತ್ತಡ ದೂರವಾಗಿ ಹಿತವನ್ನು ನೀಡುತ್ತದೆ. ಇನ್ನೊಂದು ವಿಧಾನ ನಿಮ್ಮ ಎರಡೂ ಕೈಗಳನ್ನು ಮುಷ್ಟಿಗೊಳಿಸಿ ಎಡ ಮೊಣಕೈ ಭಾಗಕ್ಕೆ ಚಾಚಿಕೊಳ್ಳಿ. ನಿಮ್ಮ ಎಡಗೈ ಮೇಲಿರುವಂತೆ ನೋಡಿಕೊಳ್ಳಿ. ಕೆಲಹೊತ್ತು ನಿಮ್ಮ ಉಸಿರನ್ನು ಬಿಗಿಹಿಡಿಯಿರಿ. ನಂತರ ಈ ಪ್ರಕ್ರಿಯೆಯನ್ನು ಎಡ ಭಾಗಕ್ಕೆ ಮುಂದುವರೆಸಿ. ಈ ರೀತಿಯ ಚಾಚುವಿಕೆಯಿಂದ ನಿಮ್ಮ ಎರಡೂ ಕಡೆಯ ಕತ್ತಿನ ಭಾಗಕ್ಕೆ ಹಿತವಾದ ಅನುಭವ ನೀಡಿ ನಿಮ್ಮ ಕತ್ತಿನ, ಬೆನ್ನಿನ ಮೇಲ್ಭಾಗ, ಭುಜಗಳು ಮತ್ತು ಎದೆಯ ಭಾಗದ ನೋವಿನ ಒತ್ತಡವನ್ನು ಶಮನಗೊಳಿಸಿಕೊಳ್ಳಿ.

English summary

Stretches That Aid In Preventing Cramps

There are very few of us who can claim to have never had any form of muscle cramps at all. While some of you may argue that this is not the most painful feeling in the world, the fact is that there is indeed some amount of pain associated with the same. What makes matters worse is the fact that there is a feeling of helplessness that one experiences during cramps. Indeed, all this and more is enough to justify the fact that no one really wants to suffer from cramps. Unlike most medical ailments, the prevention of cramps does not lie in a healthy diet.
Story first published: Monday, July 30, 2018, 9:33 [IST]
X
Desktop Bottom Promotion