ಮನೆ ಔಷಧಿಗಳು: ಮಾತ್ರೆಗಳಿಲ್ಲದೆ ಬಿಪಿ ನಿಯಂತ್ರಣಕ್ಕೆ!

Posted By: Hemanth Amin
Subscribe to Boldsky

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಗರವಾಸಿಗಳಲ್ಲಿ ವಿಶ್ವದೆಲ್ಲೆಡೆಯಲ್ಲಿ ಕಂಡುಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ ಅಧಿಕ ರಕ್ತದೊತ್ತಡ. ಇಂದಿನ ದಿನಗಳಲ್ಲಿ ಇದು ಹೆಚ್ಚಿನ ಜನರನ್ನು ಕಾಡುವುದು. ಅಧಿಕ ರಕ್ತದೊತ್ತಡಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಅಧಿಕ ರಕ್ತದೊತ್ತಡ ಇದ್ದರೆ ಅದರಿಂದ ಹೃದಯ ಕಾಯಿಲೆ, ಪಾರ್ಶ್ವವಾಯು, ದೃಷ್ಟಿ ಮಂದವಾಗುವುದು ಮತ್ತು ಕಿಡ್ನಿ, ಜ್ಞಾನಗ್ರಹದ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಇದನ್ನು ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ.

ದಿನಾ ಬೆಳಿಗ್ಗೆ ಮೂರು ಖರ್ಜೂರ ತಿಂದ್ರೆ 'ಬಿಪಿ' ನಿಯಂತ್ರಣಕ್ಕೆ ಬರುತ್ತೆ!

ಇದನ್ನು ಸರಿಯಾದ ಆಹಾರ ಕ್ರಮ ಮತ್ತು ಔಷಧಿಯಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಜೀವನಶೈಲಿ ಬದಲಾವಣೆ ಮಾಡಿಕೊಂಡು ಕೆಲವೊಂದು ಮನೆಮದ್ದನ್ನು ಬಳಸಿಕೊಂಡರೆ ಅದರಿಂದ ಖಂಡಿತವಾಗಿಯೂ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಬಹುದು. ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವಂತಹ ಮನೆಮದ್ದುಗಳು ಯಾವುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ತಿಳಿಸಿಕೊಡಲಿದೆ. ಅದನ್ನು ತಿಳಿದು ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಿರಿ.

ಹಣ್ಣುಗಳು ಮತ್ತು ತರಕಾರಿಗಳು

ಹಣ್ಣುಗಳು ಮತ್ತು ತರಕಾರಿಗಳು

ಹಲವಾರು ರೀತಿಯ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ರಕ್ತದೊತ್ತಡ ನಿವಾರಣೆ ಮಾಡುವಂತಹ ಪರಿಣಾಮಕಾರಿ ಅಂಶಗಳು ಕಂಡುಬಂದಿದೆ. ಕ್ಯಾರೆಟ್, ಟೊಮೆಟೋ, ಆಲೂಗಡ್ಡೆ, ಲಿಂಬೆ, ಬಾಳೆಹಣ್ಣು ಇದರಲ್ಲಿ ಪ್ರಮುಖವಾಗಿದೆ.

ಚಹಾ

ಚಹಾ

ಶುಂಠಿ, ಏಲಕ್ಕಿ ಮತ್ತು ದಾಸವಾಳದ ಚಹಾವು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ನಾಲಗೆಗೆ ರುಚಿ ಮಾತ್ರವಲ್ಲದೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು.

ಎಳ್ಳೆಣ್ಣೆ

ಎಳ್ಳೆಣ್ಣೆ

ಎಳ್ಳೆಣ್ಣೆಯಲ್ಲಿ ಒಳ್ಳೆಯ ಕೊಬ್ಬು ಇದ್ದು, ಇದು ಕೊಲೆಸ್ಟ್ರಾಲ್ ಅನ್ನು ತೆಗೆಯುವುದು. ಇದರಲ್ಲಿ ಪೂರ್ತಿ ಆರ್ದ್ರವಾದ ಕೊಬ್ಬು ಕಡಿಮೆ ಇದೆ ಮತ್ತು ಸೆಸಮೊಲ್ ಮತ್ತು ಸೆಸಮಿನ್ ಎನ್ನುವ ರಾಸಾಯನಿಕವು ಇದರಲ್ಲಿದೆ. ಇವುಗಳು ಆ್ಯಂಟಿಆಕ್ಸಿಡೆಂಟ್ ಆಗಿದ್ದು, ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ರಕ್ತದೊತ್ತಡದವಿರುವಂತಹ ರೋಗಿಗಳು ಬೇರೆ ಎಣ್ಣೆ ಬಳಸುವುದುನ್ನು ಬಿಟ್ಟು ಈ ಎಣ್ಣೆಯನ್ನು ಬಳಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುವುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪು ಹಲವಾರು ಶಮನಕಾರಿ ಗುಣಗಳು ಇವೆ ಮತ್ತು ಇದು ರಕ್ತದೊತ್ತಡ ಕಡಿಮೆ ಮಾಡುವಲ್ಲೂ ಸಹಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ತುಂಬಾ ರುಚಿಕರ, ಸರಳ ಹಾಗೂ ಸಿಹಿ ವಿಧಾನ ಇದಾಗಿದೆ. ಜೇನುತುಪ್ಪವು ರಕ್ತನಾಳಗಳಿಗೆ ಆರಾಮವನ್ನು ನೀಡುವುದು. ಹಸಿ ಜೇನುತುಪ್ಪ ಸೇವಿಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು

ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು

ಕೆಲವೊಂದು ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯು ರಕ್ತವನ್ನು ತೆಳುವಾಗಿಸುವುದು ಮತ್ತು ರಕ್ತನಾಳಗಳಲ್ಲಿನ ತಡೆ ನಿವಾರಿಸುವುದು. ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಸೆಲರಿ ಬೀಜ ಸಾರ, ಅರ್ಜುನ, ಅಗಸೆ ಬೀಜಗಳು, ಬೆಕ್ಕಿನ ಪಂಜ, ಅರಶಿನ, ಕಲ್ಲಂಗಡಿ ಬೀಜಗಳು ಮತ್ತು ಮೆಂತ್ಯೆ ಬೀಜಗಳು ಪರಿಣಾಮಕಾರಿಯಾಗಿ ರಕ್ತದೊತ್ತಡ ನಿವಾರಣೆ ಮಾಡುವುದು.

ಎಳನೀರು

ಎಳನೀರು

ಎಳನೀರಿನಲ್ಲಿ ಇರುವಂತಹ ಪೊಟಾಶಿಯಂ ರಕ್ತದೊತ್ತಡ ಕಡಿಮೆ ಮಾಡುವುದು. ಎಳ ನೀರು ನೈಸರ್ಗಿಕ ಪಾನೀಯ ಮತ್ತು ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು.

ಕಡು ಚಾಕಲೇಟ್

ಕಡು ಚಾಕಲೇಟ್

ರೋಗಿ ಬಯಸಿದ್ದು ಹಾಲು ವೈದ್ಯ ಸೂಚಿಸಿದ್ದು ಹಾಲು ಎನ್ನುವ ಮಾತಿದೆ. ನಿಮ್ಮ ರೋಗಕ್ಕೆ ಚಾಕಲೇಟ್ ಮದ್ದಾದರೆ ಹೇಗಿರಬಹುದು ಯೋಚಿಸಿ. ಹೌದು, ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ.

ಒಮೆಗಾ3

ಒಮೆಗಾ3

ಒಮೆಗಾ3 ಕೊಬ್ಬಿನಾಮ್ಲವನ್ನು ಒಳಗೊಂಡಿರುವ ಆಹಾರಗಳು ಅಧಿಕ ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಸಹಕಾರಿ. ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವಂತಹ ಜನರಲ್ಲಿ ಒಮೆಗಾ3 ಕೊಬ್ಬಿನಾಮ್ಲದಲ್ಲಿ ಇರುವಂತಹ ಎಪಿಎ ಮತ್ತು ಡಿಎಚ್ ಎಯು ತುಂಬಾ ಪರಿಣಾಮಕಾರಿಯಾಗಿ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟಿದೆ ಎಂದು ಅಧ್ಯಯನಗಳು ಹೇಳಿವೆ.

ವ್ಯಾಯಾಮ ಮತ್ತು ಸಂಗೀತ

ವ್ಯಾಯಾಮ ಮತ್ತು ಸಂಗೀತ

ನಿಯಮಿತ ವ್ಯಾಯಾಮ ಮತ್ತು ಸಂಗೀತ ಕೇಳುತ್ತಾ ಸಮಯ ಕಳೆಯುವುದರಿಂದ ಅಧಿಕ ರಕ್ತದೊತ್ತಡನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇಡಬಹುದು. ಅಧಿಕ ರಕ್ತದೊತ್ತಡ ಇರುವಂತವರು ಈ ನೈಸರ್ಗಿಕ ವಿಧಾನವನ್ನು ಅನುಸರಿಸಬಹುದು. ಸಂಗೀತವು ಆರಾಮ ಮತ್ತು ಶಮನಕಾರಿ ಗುಣ ಹೊಂದಿದೆ. ಅದೇ ನಿಯಮಿತವಾಗಿ ನಡೆಯುವುದು, ನಿಧಾನ ಉಸಿರಾಡುವ ವ್ಯಾಯಾಮ ಇತ್ಯಾದಿಗಳು ಅಧಿಕ ರಕ್ತದೊತ್ತಡ ನಿವಾರಣೆ ಮಾಡುವುದು.

ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವವರಿಗೆ ಇದು ಕೆಲವೊಂದು ಮನೆಮದ್ದುಗಳಾಗಿವೆ. ಮನೆಮದ್ದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ ಅಧಿಕ ರಕ್ತದೊತ್ತಡವು ಸೈಲೆಂಡ್ ಕಿಲ್ಲರ್ ಆಗದು. ಅಧಿಕ ರಕ್ತದೊತ್ತಡ ಬದಿಗಿಡಲು ಈ ಮನೆಮದ್ದುಗಳನ್ನು ನಿಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳಿ.

English summary

Simple Home Remedies To Reduce High Blood Pressure

Hypertension, most popularly known as high blood pressure, is a condition that most of the population in the world is facing right now. High blood pressure can lead to stroke, heart attacks, loss of vision and also can affect the kidneys as well as the cognitive functions and so it is also termed as the "silent killer". These home remedies are natural ways to keep a check on your blood pressure levels. So, here are a few of the home remedies that can be kept in mind for lowering the blood pressure levels.