For Quick Alerts
ALLOW NOTIFICATIONS  
For Daily Alerts

ಮುಂಜಾನೆ ಎದ್ದು ಖಾಲಿಹೊಟ್ಟೆಗೆ ಬಾಳೆಹಣ್ಣು ತಿನ್ನಬಹುದೇ?

|

ಒಂದು ಅತ್ಯುತ್ತಮ ಉಪಾಹಾರದಲ್ಲಿ ಕೊಂಚ ಓಟ್ಸ್ ರವೆ, ಮೊಟ್ಟೆಗಳು, ಬ್ರೆಡ್, ಧಾನ್ಯಗಳು, ಕೊಂಚ ಹಣ್ಣುಗಳು ಅಥವಾ ಹಣ್ಣಿನ ರಸ ಇರಬೇಕೆಂದು ನಮಗೆಲ್ಲಾ ಗೊತ್ತು. ಆದರೆ ಈ ಉಪಾಹಾರ ತೂಕ ಇಳಿಸುವವರಿಗೆ ಅಥವಾ ಏರಿಸಿಕೊಳ್ಳುವವರ ಆಯ್ಕೆಯ ಪ್ರಕಾರ ಸದಾ ಬದಲಾಗುತ್ತಿರುತ್ತದೆ. ತೂಕ ಇಳಿಸುವವರಿಗೆ ಇಡಿಯ ಧಾನ್ಯಗಳು ಹಾಗೂ ಹೆಚ್ಚು ನಾರಿನ ಮತ್ತು ಪೌಷ್ಟಿಕ ಆಹಾರ ಉತ್ತಮವಾಗಿವೆ. ಇದಕ್ಕೊಂದು ಪರ್ಯಾಯವೆಂದರೆ ಕೇವಲ ಒಂದೆರಡು ಬಾಳೆಹಣ್ಣುಗಳನ್ನು ಉಪಾಹಾರದ ರೂಪದಲ್ಲಿ ಸೇವಿಸುವುದು. ಕೆಲವೊಮ್ಮೆ ಉಪಾಹಾರಕ್ಕೆ ಸಮಯವಿಲ್ಲದ ಧಾವಂತದ ಜನರು ಈ ವಿಧಾನವನ್ನೇ ಅನಿವಾರ್ಯವಾಗಿ ಆಯ್ದುಕೊಂಡಿರುತ್ತಾರೆ.

ಬಾಳೆಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಹಾಗೂ ಸುಸ್ತು ನಿವಾರಣೆ, ಖಿನ್ನತೆಯಿಂದ ಹೊರಬರಲು ನೆರವಾಗುವುದು ಮಲಬದ್ಧತೆಯನ್ನು ನಿವಾರಿಸುವುದು ಮೊದಲಾದ ಹಲವಾರು ಪ್ರಯೋಜನಗಳಿವೆ. ಈ ಅದ್ಭುತ ಹಣ್ಣಿನ ಸೇವನೆಯಿಂದ ದೇಹವೂ ತಂಪಾಗಿರುತ್ತದೆ ಹಾಗೂ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯಾಗದಂತೆ ರಕ್ಷಣೆ ಒದಗಿಸುತ್ತದೆ.

ಬಾಳೆಹಣ್ಣು: ಆರೋಗ್ಯಕ್ಕೂ ಸೈ-ಸೌಂದರ್ಯಕ್ಕೂ ಜೈ!

ಇದರಲ್ಲಿರುವ ಅತ್ಯುತ್ತಮ ಪ್ರಮಾಣದ ಪೊಟ್ಯಾಶಿಯಂ, ಕರಗದ ನಾರು ಹಾಗೂ ಮೆಗ್ನೇಶಿಯಂ ಹಲವಾರು ಕಾರ್ಯಗಳಿಗೆ ಬಳಕೆಯಾಗುವ ಕಾರಣ ಬಾಳೆಹಣ್ಣನ್ನು ಮುಂಜಾನೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಸರಿಯೇ ಎಂಬ ಪ್ರಶ್ನೆ ಕಾಡಬಹುದು. ಬನ್ನಿ, ಈ ಪ್ರಶ್ನೆಗೆ ತಜ್ಞರು ಏನು ಉತ್ತರ ನೀಡುತ್ತಾರೆ ಎಂಬುದನ್ನು ನೋಡೋಣ...

ಬಾಳೆಹಣ್ಣಿನಲ್ಲಿ ಅಧಿಕ ಪೋಷಕಾಂಶಗಳಿವೆ

ಬಾಳೆಹಣ್ಣಿನಲ್ಲಿ ಅಧಿಕ ಪೋಷಕಾಂಶಗಳಿವೆ

ತೂಕ ಇಳಿಸುವವರಿಗೆ ಒಂದು ಬಾಳೆಹಣ್ಣನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸುವುದು ಉತ್ತಮವಾದ ಆಯ್ಕೆಯಾಗಿದೆ. ವಿಶೇಷವಾಗಿ ಬೆಳಗ್ಗಿನ ಹೊತ್ತು, ಉಪಾಹಾರದ ಬಳಿಕ ಒಂದು ಬಾಳೆಹಣ್ಣನ್ನು ತಿನ್ನುವ ಮೂಲಕ ಮುಂದಿನ ಮುಖ್ಯ ಆಹಾರಸೇವನೆಯವರೆಗೂ ಹಸಿವಾಗದಂತೆ ತಡೆಯುವ ಮೂಲಕ ತೂಕ ಇಳಿಸುವ ಯತ್ನಗಳಿಗೆ ಬೆಂಬಲ ನೀಡುತ್ತದೆ. ಇದಕ್ಕೂ ಉತ್ತಮ ಎಂದರೆ ಬಾಳೆಹಣ್ಣು ಮತ್ತು ಉಗುರುಬೆಚ್ಚನೆಯ ನೀರನ್ನೇ ಉಪಾಹಾರದ ರೂಪದಲ್ಲಿ ಸೇವಿಸುವುದು. ಇದು ತೂಕ ಇಳಿಸುವವರ ಆಹಾರಾಭ್ಯಾಸವನ್ನು ಸರಳಗೊಳಿಸುತ್ತದೆ ಹಾಗೂ ಇಡಿಯ ದಿನ ಹಸಿವಾಗದ ಕಾರಣ ಮಧ್ಯಾಹ್ನದ ಮತ್ತು ರಾತ್ರಿಯ ಊಟಗಳನ್ನು ಸರಳ ಮತ್ತು ಕಡಿಮೆ ಕ್ಯಾಲೋರಿಗಳಿರುವ ಆಹಾರಕ್ಕೆ ಸಂತೃಪ್ತಿ ಪಡುವಂತೆ ಮಾಡುವ ಮೂಲಕ ತೂಕ ಇಳಿಸಲು ಪರೋಕ್ಷವಾಗಿ ನೆರವಾಗುತ್ತದೆ.

ಆದರೆ ಬಾಳೆಹಣ್ಣಿನೊಂದಿಗೆ ನೀರನ್ನೇಕೆ ಕುಡಿಯಬೇಕು?

ಆದರೆ ಬಾಳೆಹಣ್ಣಿನೊಂದಿಗೆ ನೀರನ್ನೇಕೆ ಕುಡಿಯಬೇಕು?

ಬಾಳೆಹಣ್ಣಿನೊಂದಿಗೆ ಕೊಂಚ ಉಗುರುಬೆಚ್ಚನೆಯ ನೀರು ಸಹಾ ಇದ್ದರೆ ಇದು ದೇಹದ ಜಲದ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಬಾಳೆಹಣ್ಣಿನಲ್ಲಿರುವ ಕಿಣ್ವಗಳು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತವೆ. ಇದಕ್ಕೆ ನೀರು ಅಗತ್ಯ. ಅಲ್ಲದೇ ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಯಾದ ಫ್ರುಕ್ಟೋಸ್ ಮತ್ತು ಕರಗದ ನಾರು ಮಲಬದ್ಧತ್ತೆಯಿಂದ ರಕ್ಷಣೆ ನೀಡುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲೂ ನೆರವಾಗುತ್ತವೆ.

ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಉತ್ತಮ ಆಯ್ಕೆಯೇ?

ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಉತ್ತಮ ಆಯ್ಕೆಯೇ?

ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನು ನಿರೀಕ್ಷಿಸುತ್ತಿದ್ದವರಿಗೆ ಕೊಂಚ ನಿರಾಶೆಯಾಗಲಿದೆ. ಏಕೆಂದರೆ ಬಾಳೆಹಣ್ಣನ್ನು ಖಾಲಿಹೊಟ್ಟೆಯಲ್ಲಿ ಎಂದೂ ಸೇವಿಸಬಾರದು. ಏಕೆಂದರೆ ಬಾಳೆಹಣ್ಣಿನಲ್ಲಿರುವ ಸಕ್ಕರೆ ಹಾಗೂ ಇತರ ಪೋಷಕಾಂಶಗಳು ಹೆಚ್ಚೇ ಇರುವ ಕಾರಣ ಏಕಾಏಕಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುತ್ತದೆ ಹಾಗೂ ಇದು ವಿಪರೀತ ಸುಸ್ತು ಆವರಿಸಲು ಕಾರಣವಾಗಬಹುದು. ಅಲ್ಲದೇ ತಾತ್ಕಾಲಿಕ ಅವಧಿಗೆ ಅಪಾರ ಸುಸ್ತು ಹಾಗೂ ತಕ್ಷಣ ನಿದ್ದೆಗೆ ಜಾರಬಹುದು. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಆಮ್ಲೀಯವಾಗಿದ್ದು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಜಠರದ ಜೀರ್ಣರಸಗಳನ್ನು ಇನ್ನಷ್ಟು ಆಮ್ಲೀಯವಾಗಿಸಿ ಹೊಟ್ಟೆಯ ತೊಂದರೆ ಎದುರಾಗಬಹುದು.

ಅಂತಿಮ ನಿರ್ಣಯ

ಅಂತಿಮ ನಿರ್ಣಯ

ನೀವು ಮುಂಜಾನೆಯ ಉಪಾಹಾರದಲ್ಲಿ ಬಾಳೆಹಣ್ಣುಗಳನ್ನು ಇತರ ಆಹಾರಗಳೊಂದಿಗೆ ಸೇವಿಸಬಹುದು. ರಾತ್ರಿ ನೆನೆಸಿಟ್ಟ ಒಣಫಲಗಳು, ಒಂದು ಸೇಬು ಇದ್ದರೆ ಇದರ ಆಮ್ಲೀಯತೆ ಕಡಿಮೆಯಾಗಿ ಖಾಲಿಹೊಟ್ಟೆಯಲ್ಲಿ ಸೇವಿಸಲು ಯೋಗ್ಯವಾಗುತ್ತದೆ. ಪರ್ಯಾಯವಾಗಿ ಬಾಳೆಹಣ್ಣಿನೊಂದಿಗೆ ಓಟ್ಸ್ ರವೆಯ ಕುಕ್ಕೀಸ್, ಬೆರ್ರಿಗಳು ಮತ್ತು ಧಾನ್ಯಗಳು, ಚಾಕಲೇಟು-ಹಾಲು ಬಾಳೆಹಣ್ಣಿನ ಸ್ಮೂಥಿ ಮೊದಲಾದವು ಉತ್ತಮ ಆಯ್ಕೆಗಳಾಗಿವೆ.

ಅಂತಿಮ ನಿರ್ಣಯ

ಅಂತಿಮ ನಿರ್ಣಯ

ಆದರೆ ಎಂದಿಗೂ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣನ್ನು ಮಾತ್ರವೇ ಸೇವಿಸಬಾರದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

should-you-eat-banana-in-the-morning-on-an-empty-stomach

Banana has numerous health benefits from maintaining a healthy heart and reducing fatigue to reducing depression and constipation. The incredible fruit also has a cooling effect on the body and helps in stimulating the production of haemoglobin and thus, cures anaemia. Being an excellent source of potassium, fibre and magnesium, the most important question is should you eat a banana in the morning on an empty stomach? Should you eat a banana in the morning on an empty stomach?Have a look.
X
Desktop Bottom Promotion