Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಯಟ್ ಅಥವಾ ವ್ಯಾಯಾಮ ಮಾಡದೇ ದೇಹದ ತೂಕ ಇಳಿಯುತ್ತಿದೆಯೇ? ಹಾಗಾದರೆ ಇಂತಹ ಭಯಾನಕ ಕಾಯಿಲೆಗಳ ಲಕ್ಷಣವಿರಬಹುದು!
ಇಂದು ಜಗತ್ತಿನ ಅರ್ಧದಷ್ಟು ಜನರು ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಕೆಲವರಿಗೆ ಅಪ್ರಯತ್ನವಾಗಿ ತೂಕ ಇಳಿಯುತ್ತಾ ಬಂದರೆ ಇದು ಚಿಂತೆಗೆ ಕಾರಣವಾಗಬಹುದು. ಇಂದು ಈ ತೊಂದರೆ ಹಲವಾರು ಜನರಲ್ಲಿ ಕಂಡುಬರುತ್ತಿದ್ದು ಒಂದು ವೇಳೆ ನಿಮಗೂ ಇದು ಆಗುತ್ತಿರುವುದು ಗಮನಕ್ಕೆ ಬಂದಿದ್ದರೆ ಇಂದಿನ ಲೇಖನ ಖಂಡಿತವಾಗಿಯೂ ನಿಮಗಾಗಿಯೇ ಇದೆ. ವರ್ಷದ ಅವಧಿಯಲ್ಲಿ ಹಲವಾರು ಕಾರಣಗಳನ್ನನುಸರಿಸಿ ದೇಹದ ತೂಕ ಏರುತ್ತಾ ಇಳಿಯುತ್ತಾ ಇರುತ್ತದೆ.
ಇದು ಸಾಮಾನ್ಯವಾಗಿದ್ದರೂ ಒಂದು ಅಧ್ಯಯನದ ಪ್ರಕಾರ ಒಂದು ವೇಳೆ ಆಹಾರ ಅಥವಾ ವ್ಯಾಯಾಮದಲ್ಲಿ ಬದಲಾವಣೆ ಇಲ್ಲದೇ ನಿಮ್ಮ ದೇಹದ ಒಟ್ಟು ತೂಕದ ಐದು ಶೇಖಡಾದಷ್ಟು ತೂಕವನ್ನು ನಿಮ್ಮ ಪ್ರಯತ್ನವಿಲ್ಲದೇ ಕಳೆದ ಆರು ತಿಂಗಳು ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಕಳೆದುಕೊಂಡಿದ್ದರೆ ನೀವು ವೈದ್ಯರನ್ನು ಕಾಣುವುದು ಅಗತ್ಯವಾಗಿದೆ.

ಭಾರೀ ಪ್ರಮಾಣದ ತೂಕವನ್ನು ಕದಿಮೆ ಸಮಯದಲ್ಲಿ ಕಳೆದುಕೊಳ್ಳುವುದು ಆರೋಗ್ಯಕರ ಲಕ್ಷಣವಲ್ಲ! ಸಾಮಾನ್ಯವಾಗಿ ರಜೆಯ ದಿನಗಳ ಬಳಿಕ ಕೊಂಚ ತೂಕ ಏರುವುದೂ, ಯಾವುದೋ ಕಾಯಿಲೆ ಅಥವಾ ಸೋಂಕಿಗೆ ಒಳಗಾಗಿದ್ದರೆ ಗುಣಮುಖರಾಗುವ ಹಂತದಲ್ಲಿ ತೂಕ ಕಳೆದುಕೊಳ್ಳುವುದೂ ಸಾಮಾನ್ಯವಾಗಿದೆ. ಆದರೆ ಈ ಕಾರಣಗಳಿಲ್ಲದೇ ತೂಕ ಹೆಚ್ಚಿನ ಪ್ರಮಾಣದಲ್ಲಿ ಇಳಿದಿದ್ದರೆ ನಿಮ್ಮ ಆರೋಗ್ಯದಲ್ಲಿ ಪ್ರಮುಖವಾದ ತೊಂದರೆಯೊಂದಿದ್ದು ತನ್ನ ಇರುವಿಕೆಯನ್ನು ಇದುವರೆಗೆ ಖಚಿತಪಡಿಸದೇ ಇರಬಹುದು. ಇಂದಿನ ಲೇಖನದಲ್ಲಿ ಇಂತಹ ಆರು ಪ್ರಮುಖ ಕಾರಣಗಳನ್ನು ಒದಗಿಸಲಾಗಿದ್ದು ಈ ಲಕ್ಷಣಗಳು ನಿಮ್ಮಲ್ಲಿಯೂ ಕಂಡುಬಂದರೆ ತಕ್ಷಣವೇ ತಪಾಸಣೆಗೊಳಪಟ್ಟು ವೈದ್ಯರ ಸಲಹೆಯಂತೆ ಆದಷ್ಟೂ ಬೇಗನೇ ಚಿಕಿತ್ಸೆಯನ್ನೂ ಪ್ರಾರಂಭಿಸಬೇಕು.

ಥೈರಾಯ್ಡ್
ಒಂದು ವೇಳೆ ಥೈರಾಯ್ಡ್ ಗ್ರಂತಿ ಸಾಮಾನ್ಯಕ್ಕೂ ಹೆಚ್ಚು ಕಾರ್ಯಶೀಲವಾಗಿದ್ದರೆ ಇದರಿಂದ ಹೈಪರ್ ಥೈರಾಯ್ಡಿಸಂ (hyperthyroidism) ಎಂಬ ಸ್ಥಿತಿ ಎದುರಾಗುತ್ತದೆ ಹಾಗೂ ಇದು ಶೀಘ್ರ ತೂಕ ಇಳಿಕೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ತೊಂದರೆ ತನ್ನ ಇರುವಿಕೆಯನ್ನು ಪ್ರಕಟಿಸದೇ ಇರುವ ಕಾರಣ ಇದರ ಇರುವಿಕೆಯನ್ನು ಪರೀಕ್ಷೆಯ ಹೊರತಾಗಿ ಖಚಿತಪಡಿಸುವುದು ಕಷ್ಟ. ಆದರೆ ಈ ತೊಂದರೆಯ ಇರುವಿಕೆಯನ್ನು ಹಸಿವಿನಲ್ಲಿ ಹೆಚ್ಚಳ, ಉಸಿರಾಟದಲ್ಲಿ ತೀವ್ರ ಉಬ್ಬರವಿಳಿತ, ಸದಾ ಮೈ ಬಿಸಿ ಇರುವಂತಿರುವುದು ಮೊದಲಾದ ಲಕ್ಷಣಗಳ ಮೂಲಕವೂ ಅರಿಯಬಹುದು. ಆದರೆ ಈ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದು ತೀವ್ರಗೊಂಡ ಬಳಿಕವೇ ಹೊರತು ತೂಕದ ಇಳಿಕೆಯೇ ಪ್ರಮುಖ ಸೂಚನೆಯಾಗಿದೆ. ಇವುಗಳಲ್ಲೊಂದೂ ಲಕ್ಷಣವನ್ನು ನೀವು ಅನುಭವಿಸುತ್ತಿದ್ದರೆ ತಕ್ಷಣವೇ ಥೈರಾಯ್ಡ್ ಗ್ರಂಥಿಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಕರುಳಿನ ಕಾಯಿಲೆಗಳು
ಸೀಲಿಯಾಕ್ ಕಾಯಿಲೆ ಎಂಬ ಕರುಳಿಗೆ ಸಂಬಂಧಿಸಿದ ಕಾಯಿಲೆ ಇರುವ ವ್ಯಕ್ತಿಗಳು ಆಹಾರದಲ್ಲಿರುವ ಗ್ಲುಟೆನ್ ಪ್ರಮಾಣವನ್ನು ಜೀರ್ಣಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ ಹಾಗೂ ಈ ತೊಂದರೆಯಿಂದ ತೂಕ ಇಳಿಕೆಯ ಹೊರತಾಗಿ ಬೇರಾವುದೇ ಲಕ್ಷಣಗಳು ಕಾಣಬರುವುದಿಲ್ಲ. ಈ ಕಾಯಿಲೆ ಮೇದೋಜೀರಕ ಗ್ರಂಥಿಯ ಕ್ಷಮತೆಯನ್ನು ಕುಗ್ಗಿಸಿ ಜೀರ್ಣಕ್ರಿಯೆಗೆ ಅಗತ್ಯವಿರುವ ಕಿಣ್ವಗಳನ್ನು ಉತ್ಪಾದಿಸಲು ಅಸಾಧ್ಯವಾಗುವಂತೆ ಮಾಡುತ್ತದೆ. ಪರಿಣಾಮವಾಗಿ ಬಣ್ಣ ಬದಲಾದ ಮಲ, ಕೊಬ್ಬುಯುಕ್ತ ಊಟದ ಬಳಿಕ ವಾಕರಿಕೆ ಹಾಗೂ ಹೊಟ್ಟೆಯಲ್ಲಿ ಕಿವುಚಿದಂತೆ ನೋವಾಗುವುದು ಮೊದಲಾದವು ಸೀಲಿಯಾಕ್ ಕಾಯಿಲೆಯ ಇತರ ಲಕ್ಷಣಗಳಾಗಿವೆ.

ಮಧುಮೇಹ
ಮಧುಮೇಹದ ಪರಿಣಾಮವಾಗಿಯೂ ತೂಕ ಇಳಿಯಬಹುದು. ಇತರ ಲಕ್ಷಣಗಳೆಂದರೆ ಸತತ ಮೂತ್ರಕ್ಕೆ ಅವಸರವಾಗುವುದು, ಸದಾ ಬಾಯಾರಿಕೆ ಅನ್ನಿಸುವುದು, ಗಾಯಗಳು ಮಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಮೊದಲಾದವು ಪ್ರಮುಖವಾಗಿವೆ. ಮಧುಮೇಹಿಗಳ ರಕ್ತದಲ್ಲಿರುವ ಗ್ಲೂಕೋಸ್ ಬಳಸಲ್ಪಡದೇ ಹೋಗುವ ಕಾರಣ ಇದನ್ನು ಆಗಾಗ ವಿಸರ್ಜಿಸಬೇಕಾದುದೇ ಸತತ ಮೂತ್ರಕ್ಕೆ ಕಾರಣ. ಮಧುಮೇಹಿಗಳ ಸ್ನಾಯುಗಳು ಗ್ಲುಕೋಸ್ ಕೊರತೆಯಿಂದ ಬಳಲುತ್ತವೆ ಹಾಗೂ ಸ್ನಾಯುಗಳು ಬೆಳೆಯದೇ ಶೀಘ್ರವಾಗಿ ತೂಕ ಇಳಿಯುತ್ತದೆ.

ಖಿನ್ನತೆ
ಮಾನಸಿಕ ತೊಂದರೆಯಾದ ಖಿನ್ನತೆಯ ಪ್ರಮುಖ ಪರಿಣಾಮವೆಂದರೆ ತೂಕದಲ್ಲಿ ಇಳಿಕೆ. ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾಗಿ ಹೆಚ್ಚು ಆಹಾರ ಸೇವನೆಗೆ ಪ್ರಚೋದಿಸುವ ಮೂಲಕ ತೂಕದಲ್ಲಿ ಹೆಚ್ಚಳಕ್ಕೂ ಕಾರಣವಾಗಬಹುದು, ಆದರೆ ಸಾಮಾನ್ಯವಾಗಿ ತೂಕ ಕೆಳೆದುಕೊಳ್ಳುವುದೇ ಪ್ರಮುಖವಾಗಿ ಕಂಡುಬರುತ್ತದೆ.

ಕ್ಯಾನ್ಸರ್
ಕೇವಲ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಹೊರತಾಗಿ ಇತರ ಅಂಗಗಳ ಕ್ಯಾನ್ಸರ್, ಹೊಟ್ಟೆಯಲ್ಲಿರುವ ಗಡ್ಡೆಗಳು, ಹೊಟ್ಟೆ ಕರುಳಿನ ಒಳಪದರದಲ್ಲಿ ಎದ್ದಿರುವ ಹುಣ್ಣುಗಳು ಮೊದಲಾದವು ಈ ಭಾಗದಲ್ಲಿ ಉರಿಯೂತವನ್ನುಂಟುಮಾಡಿ ಆಹಾರದಿಂದ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಪಡಿಸ್ತುತವೆ. ಪರಿಣಾಮವಾಗಿ ತೂಕ ಶೀಘ್ರವಾಗಿ ಇಳಿಯುತ್ತದೆ. ಅನ್ನನಾಳ, ಕರುಳು ಮತ್ತು ಹೊಟ್ಟೆಯಲ್ಲಿ ಗಡ್ಡೆ ಹಾಗೂ ಉರಿಯೂತವಿದ್ದರೂ ದೇಹದ ತೂಕ ಶೀಘ್ರವಾಗಿ ಇಳಿಯುತ್ತದೆ.

ಸಂಧಿವಾತ (Rheumatoid arthritis)
ಇದೊಂದು ಉರಿಯೂತದ ಪರಿಣಾಮವಾಗಿ ಎದುರಾಗುವ ಕಾಯಿಲೆಯಾಗಿದ್ದು ಈ ತೊಂದರೆ ಇರುವ ವ್ಯಕ್ತಿಗಳಿಗೆ ಹಸಿವು ಕಡಿಮೆಯಾಗುತ್ತದೆ. ಪರಿಣಾಮವಾಗಿ ಇವರ ಆಹಾರದ ಪ್ರಮಾಣವೂ ಕುಗ್ಗುತ್ತದೆ ತನ್ಮೂಲಕ ತೂಕವೂ ಇಳಿಯುತ್ತದೆ. ಈ ಉರಿಯೂತ ಉಲ್ಬಣಗೊಳ್ಳುತ್ತಾ ಹೋದಂತೆ ಹೊಟ್ಟೆ ಮತ್ತು ಕರುಳುಗಳ ಒಳಗೂ ಉರಿಯೂತ ವ್ಯಾಪಿಸಿ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆಯೂ ಕ್ಷೀಣಿಸುತ್ತದೆ ಹಾಗೂ ಇದೇ ತೂಕ ಇಳಿಕೆಗೆ ಕಾರಣವಾಗಬಹುದು.



Click it and Unblock the Notifications