For Quick Alerts
ALLOW NOTIFICATIONS  
For Daily Alerts

ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು

By Manohar Shetty
|

ಹೊರಗಿನಿಂದ ಬೂದು-ಹಸಿರುಮಿಶ್ರಿತ ಸಿಪ್ಪೆ ಹೊಂದಿದ್ದರೂ ಒಳಗಣ ತಿರುಳು ಕೇಸರಿ ಅಥವಾ ಕಿತ್ತಳೆ ಬಣ್ಣ ಹೊಂದಿರುವ ಕೇಸರಿ ಕರಬೂಜ (Muskmelon) ಬೇಸಿಗೆಯ ಫಲವಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುವ ಹಣ್ಣಾಗಿದೆ. ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು.

ಅಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಈ ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆಯಾಗಿದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ.

ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ಇದರಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿವೆ. ಈ ಕರಬೂಜ ಹಣ್ಣು ರುಚಿಕರ ಮಾತ್ರವಲ್ಲ, ಇದರ ವಿಶಿಷ್ಟ ಪರಿಮಳವೂ ಎಲ್ಲರ ಮನ ಸೆಳೆಯುತ್ತದೆ ಹಾಗೂ ಈ ಹಣ್ಣನ್ನು ಅಡುಗೆಯಲ್ಲಿ ಬಳಸಿದಾಗಲೂ ಈ ಪರಿಮಳ ಆಹಾರದಿಂದ ಹೊಮ್ಮುತ್ತಾ ಆಹಾರವನ್ನು ಇನ್ನಷ್ಟು ರುಚಿಕರವಾಗಿಸುತ್ತವೆ. ಇದರ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಇಪ್ಪತ್ತು ಪ್ರಯೋಜನಗಳು ನಿಮ್ಮನ್ನು ಖಂಡಿತವಾಗಿಯೂ ಚಕಿತಗೊಳಿಸಲಿವೆ....

ಕರಬೂಜ ಹಣ್ಣಿನ 15 ಆರೋಗ್ಯಕಾರಿ ಲಾಭಗಳು

1. ಮಧುಮೇಹದ ರೋಗಿಗಳು

1. ಮಧುಮೇಹದ ರೋಗಿಗಳು

ಆಗಾಗ್ಗೆ ಹಸಿವು ಎಂದು ಗೊಣಗುತ್ತಿರುತ್ತಾರೆ. ಏಕೆಂದರೆ ಅವರಲ್ಲಿ ಪಥ್ಯದ ಪರಿಣಾಮವಾಗಿ ಸಕ್ಕರೆಯ ಮಟ್ಟ ಮತ್ತು ಶಕ್ತಿಯ ಮಟ್ಟವು ಸಹ ಕುಸಿದಿರುತ್ತದೆ. ಕರ್ಬೂಜ ಹಣ್ಣಿನ ರಸವು ಇಂತಹವರಿಗೆ ಒಳ್ಳೆಯ ಪೂರಕ ಆಹಾರವಾಗಿರುತ್ತದೆ. ಪರಿಣಿತರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

2. ತೂಕವಿಳಿಸಲು

2. ತೂಕವಿಳಿಸಲು

ಕರ್ಬೂಜ ಹಣ್ಣು ತೂಕವಿಳಿಸಲು ಆಲೋಚಿಸುತ್ತಿರುವವರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಮಿತವಾಗಿರುತ್ತದೆ.ಇದು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣು ಮತ್ತು ಇದರಲ್ಲಿರುವ ಕ್ಯಾಲೋರಿಗಳು ಸಹ ಕಡಿಮೆ ( ಇಡೀ ಬಟ್ಟಲಿನ ತುಂಬ ಇರುವ ಕರ್ಬೂಜ ಹಣ್ಣು ಕೇವಲ 48 ಕ್ಯಾಲೋರಿಗಳನ್ನು ಹೊಂದಿರುತ್ತದೆ). ಇದನ್ನು ತಿಂದರೆ ಇದರಲ್ಲಿರುವ ನೀರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಕರ್ಬೂಜ ಹಣ್ಣಿನಲ್ಲಿ ಇರುವ ಸ್ವಾಭಾವಿಕ ಸಿಹಿತನವು ನಿಮ್ಮ ಬಾಯಿಯನ್ನು ಸಿಹಿಯಾಗಿಸಿ, ನೀವು ಸಿಹಿ ಪದಾರ್ಥಗಳ ಬಗ್ಗೆ ಆಸೆ ಪಡುವುದನ್ನು ನಿಯಂತ್ರಿಸುತ್ತವೆ.

3. ಕಿಡ್ನಿ ಸಮಸ್ಯೆ ಇರುವವರಿಗೆ

3. ಕಿಡ್ನಿ ಸಮಸ್ಯೆ ಇರುವವರಿಗೆ

ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ಅಲ್ಲದೆ ಕಜ್ಜಿ ಬರುವುದನ್ನು ಸಹ ತಡೆಯುತ್ತವೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತವನ್ನು ಸಹ ಗುಣಪಡಿಸಬಹುದು.

4. ಜೀರ್ಣಶಕ್ತಿಗೆ ಪ್ರಯೋಜನಕಾರಿ

4. ಜೀರ್ಣಶಕ್ತಿಗೆ ಪ್ರಯೋಜನಕಾರಿ

ಕರ್ಬೂಜವು ಜಠರದಲ್ಲಿ ಪಚನ ಕ್ರಿಯೆಯನ್ನು ಉದ್ದೀಪಿಸುತ್ತದೆ. ನಿಮಗೆ ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜವನ್ನು ತಿನ್ನಿ. ಆಗ ಜೀರ್ಣಕ್ರಿಯೆ ಸರಾಗವಾಗಿ ಆಗುವುದನ್ನು ನೀವು ಗಮನಿಸುವಿರಿ. ಕರ್ಬೂಜದಲ್ಲಿರುವ ನೀರಿನಂಶವು ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ದೇಹದಲ್ಲಿನ, ಅದರಲ್ಲೂ ಮುಖ್ಯವಾಗಿ ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ (ಅಸಿಡಿಟಿ) ಯನ್ನು ನಿವಾರಿಸುತ್ತದೆ.

5. ಹೃದಯದ ಕಾಯಿಲೆಗೆ

5. ಹೃದಯದ ಕಾಯಿಲೆಗೆ

ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಎಂಬ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿರುವ ಕಾರಣ ರಕ್ತ ತೆಳುವಾಗಿರಲು ಹಾಗೂ ರಕ್ತನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಈ ಮೂಲಕ ಬರಬಹುದಾಗಿದ್ದ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.

6. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

6. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದ್ದು ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರಮುಖ ಕಾರಣವಾಗಿದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿಸಲು ಪ್ರಚೋದನೆ ದೊರಕುತ್ತದೆ. ಬಿಳಿರಕ್ತಕಣಗಳು ನಮ್ಮ ದೇಹವನ್ನು ರೋಗಾಣುಗಳಿಂದ ರಕ್ಷಿಸುವ ಸೈನಿಕರಾಗಿದ್ದು ಈ ಸೈನ್ಯ ಬಲವಾಗಿದ್ದಷ್ಟೂ ವೈರಿಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯುವಂತಾಗುತ್ತದೆ.

7. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

7. ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಒಂದು ವೇಳೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟಗಳು ಸಾಮಾನ್ಯಕ್ಕೂ ಹೆಚ್ಚಿದ್ದರೆ ಇಂದಿನಿಂದಲೇ ನಿತ್ಯವೂ ಕೊಂಚ ಕೇಸರಿ ಕರಬೂಜ ಹಣ್ಣುಗಳನ್ನು ಸೇವಿಸುತ್ತಾ ಬನ್ನಿ. ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಇಲ್ಲವೇ ಇಲ್ಲ. ಹಾಗಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಈಗಿರುವುದಕ್ಕಿಂತ ಏರದೇ, ಸಾಮಾನ್ಯ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.

8. ಮಲಬದ್ಧತೆಯಿಂದ ರಕ್ಷಿಸುತ್ತದೆ

8. ಮಲಬದ್ಧತೆಯಿಂದ ರಕ್ಷಿಸುತ್ತದೆ

ಇದರಲ್ಲಿ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ಇಲ್ಲವಾಗಿಸಲು ಸೂಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಜೀರ್ಣಕ್ರಿಯೆಯ ತೊಂದರೆಗಳನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.

9. ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ

9. ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ

ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಕ್ಷಮತೆ ಹೊಂದಿದ್ದು ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರೆದರೆ ಕ್ಯಾನ್ಸರ್ ಗೂ ತಿರುಗಬಹುದು. ಈ ಮೂಲಕ ಕರಬೂಜದ ಹಣ್ಣು ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.

10. ಗರ್ಭಿಣಿಯರಿಗೂ ಬಹಳ ಒಳ್ಳೆಯದು

10. ಗರ್ಭಿಣಿಯರಿಗೂ ಬಹಳ ಒಳ್ಳೆಯದು

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ. ಹಾಗೂ ಗರ್ಭಿಣಿಯಾಗಬಯಸುವ ಮಹಿಳೆಯರಲ್ಲಿ ಒಂದು ವೇಳೆ ಗರ್ಭನಾಳದ ತೊಂದರೆ (neural tube defect) ಇದ್ದು ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚುತ್ತದೆ.

11. ಹಲ್ಲು ನೋವಿನಿಂದ ರಕ್ಷಿಸುತ್ತದೆ

11. ಹಲ್ಲು ನೋವಿನಿಂದ ರಕ್ಷಿಸುತ್ತದೆ

ಈ ಹಣ್ಣಿನ ಸಿಪ್ಪೆಯಲ್ಲಿ ಹಲ್ಲುನೋವನ್ನು ಗುಣಪಡಿಸಲು ಸಮರ್ಥವಾದ ಪೋಷಕಾಂಶಗಳಿವೆ. ಹಲ್ಲು ನೋವಿದ್ದಾಗ ಈ ಸಿಪ್ಪೆಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಣಿಸಿ ಸೋಸಿ ಸಂಗ್ರಹಿಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳಬೇಕು.

12. ಮುಟ್ಟಿನ ನೋವನ್ನು ಕಡಿಮೆಗೊಳಿಸುತ್ತದೆ

12. ಮುಟ್ಟಿನ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವು ಹೆಚ್ಚಾಗಿದ್ದರೆ ಇದಕ್ಕೂ ಹಿಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಸರಿ ಕರಬೂಜಗಳನ್ನು ತಿನ್ನುವ ಮೂಲಕ ಈ ನೋವು ಕನಿಷ್ಟವಾಗುತ್ತದೆ. ಇದರಲ್ಲಿರುವ ರಕ್ತಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣ ರಕ್ತವನ್ನು ಹೆಪ್ಪುಗಟ್ಟಲು ಬಿಡದೇ ಹಾಗೂ ಹೆಪ್ಪುಗಟ್ಟಿದ್ದ ರಕ್ತವನ್ನು ಸಡಿಲಿಸಿ ಸುಲಭವಾಗಿ ವಿಸರ್ಜನೆಯಾಗುವಂತೆ ಮಾಡುವ ಮೂಲಕ ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡುತ್ತದೆ.

13. ಧೂಮಪಾನ ನಿಲ್ಲಿಸಲು ಬಯಸುವವರಿಗೆ ಬಹಳ ಒಳ್ಳೆಯದು

13. ಧೂಮಪಾನ ನಿಲ್ಲಿಸಲು ಬಯಸುವವರಿಗೆ ಬಹಳ ಒಳ್ಳೆಯದು

ಕೇಸರಿ ಕರಬೂಜದಲ್ಲಿರುವ ಕೆಲವು ಪೋಷಕಾಂಶಗಳು ವ್ಯಸನದಿಂದ ಹೊರಬರಲು ಮಾನಸಿಕ ಬಲ ನೀಡುತ್ತವೆ. ಈ ಬಲ ಧೂಮಪಾನ, ಮದ್ಯಪಾನಗಳಂತಹ ಅನಾರೋಗ್ಯಕರ ಅಭ್ಯಾಸಗಳನ್ನು ವರ್ಜಿಸಲು ನೆರವಾಗುತ್ತದೆ. ಈ ಹಣ್ಣಿನ ಸೇವನೆಯಿಂದ ಶ್ವಾಸಕೋಶಗಳಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ ಹಾಗೂ ದೇಹಕ್ಕೆ ಅಭ್ಯಾಸವಾಗಿ ಹೋಗಿರುವ ನಿಕೋಟಿನ್ ನ ಪ್ರಭಾವದಿಂದ ಶೀಘ್ರವಾಗಿ ಹೊರಬರಲೂ ನೆರವಾಗುತ್ತದೆ.

14. ಒತ್ತಡ ನಿವಾರಕ

14. ಒತ್ತಡ ನಿವಾರಕ

ಕರ್ಬೂಜ ಹಣ್ಣಿನಲ್ಲಿರುವ ರಂಜಕವು ನಿಮಗೆ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಕರ್ಬೂಜ ಹಣ್ಣಿನ ರಸದಲ್ಲಿರುವ ರಂಜಕವು ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಕರಿಸುತ್ತದೆ. ಇದರಿಂದಾಗಿ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವು ತಲುಪುತ್ತದೆ. ಇದರ ಪರಿಣಾಮವಾಗಿ ನಿಮ್ಮ ಮೆದುಳು ತನ್ನ ಕಾರ್ಯವನ್ನು ಸರಾಗವಾಗಿ ಮಾಡುತ್ತದೆ.

15. ಸೌಂದರ್ಯ ವಿಷಯದಲ್ಲೂ ಎತ್ತಿದ ಕೈ!

15. ಸೌಂದರ್ಯ ವಿಷಯದಲ್ಲೂ ಎತ್ತಿದ ಕೈ!

ಹೌದು ಸೌಂದರ್ಯ ಹೆಚ್ಚಿಸಲೂ ಖರ್ಬೂಜದ ಹಣ್ಣು ಬಳಸಬಹುದು! ಒಂದು ಮಧ್ಯಮ ಗಾತ್ರದ ಖರ್ಬೂಜದ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹೆಣ್ಣು, ಒಂದು ದೊಡ್ಡಚಮಚ ಓಟ್ಸ್, ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದ ಮೂಲಕ ಚರ್ಮ ಆರ್ದ್ರತೆ ಮತ್ತು ಪೋಷಕಾಂಶಗಳನ್ನು ಪಡೆದು ಕೋಮಲತೆ ಮತ್ತು ಕಾಂತಿಯನ್ನು ಪಡೆಯುತ್ತದೆ.

English summary

Reasons Why Muskmelon Is Healthy for You...

Muskmelon is a fruit which is also referred to as sweet melon. It is like other melons, which is known for its high water content that helps in preventing dehydration. It is also great for weight-loss lovers, as it is low in calories and rich in nutrients. Muskmelon is loaded with so manynutrients that it almost seems like the superhero of fruits. t contains dietary fibre, beta-carotene, potassium, iron, manganese, folic acid, vitamin A, vitamin C, and other vital nutrients.
X
Desktop Bottom Promotion