For Quick Alerts
ALLOW NOTIFICATIONS  
For Daily Alerts

ಯೋನಿ ಶಿಲೀಂಧ್ರ ಸೋಂಕು ನಿವಾರಣೆಗೆ ಮನೆಮದ್ದುಗಳು

By Hemanth
|

ಮಹಿಳೆಯರ ದೇಹದ ಅತೀ ಪ್ರಮುಖ ಅಂಗವಾಗಿರುವಂತಹ ಯೋನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಯೋನಿಯ ಸ್ವಚ್ಛತೆ ಬಗ್ಗೆ ಗಮನಹರಿಸದೆ ಇದ್ದರೆ ಆಗ ಹಲವಾರು ರೀತಿಯ ಕಾಯಿಲೆಗಳು ಬರಬಹುದು. ಇದರಲ್ಲಿ ಪ್ರಮುಖವಾಗಿ ಯೋನಿಯೊಳಗೆ ಇರುವಂತಹ ಕ್ಯಾಂಡಿಡ ಅಲ್ಬಿಕಾನ್ ಎನ್ನುವ ಶಿಲೀಂಧ್ರ ಅತಿಯಾದಾಗ ಕಾಣಿಸಿಕೊಳ್ಳುವುದೇ ಯೋನಿಯ ಶಿಲೀಂಧ್ರ ಸೋಂಕು. ಇದರಿಂದಾಗಿ ಯೋನಿಯಲ್ಲಿ ತುರಿಕೆ, ಉರಿಯೂತ, ನೋವಿನ ಡಿಸ್ಚಾರ್ಚ್ ಮತ್ತು ಕಿರಿಕಿರಿ ಉಂಟಾಗಬಹುದು. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುವುದು.

ಇದು ಯಾವುದೇ ಸಮಯದಲ್ಲೂ ಬರಬಹುದು. ನಿಮಗೆ ಈ ಮೊದಲು ಸಮಸ್ಯೆ ಇಲ್ಲದೇ ಇದ್ದರೂ ಇದು ಬರಹುದು. ಯೋನಿಯ ಸೋಂಕು ಕಾಣಿಸಿಕೊಂಡರೆ ಆಗ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ. ಇದು ಯೋನಿಯ ಶಿಲೀಂಧ್ರ ಸೋಂಕೇ ಎಂದು ದೃಢಪಡಿಸಿಕೊಳ್ಳಿ. ನಿಮಗೆ ಹಿಂದೆ ಶಿಲೀಂಧ್ರ ಸೋಂಕು ಸಮಸ್ಯೆ ಕಾಣಿಸಿಕೊಂಡಿದ್ದರೆ ಮತ್ತು ವೈದ್ಯರನ್ನು ಭೇಟಿಯಾಗಲು ನಿಮಗೆ ಮನಸ್ಸಿಲ್ಲದೆ ಇದ್ದರೆ ಆಗ ನೀವು ಕೆಲವೊಂದು ಮನೆಮದ್ದುಗಳನ್ನು ಪರೀಕ್ಷಿಸಬಹುದು. ಇದು ಯೋನಿ ಸೋಂಕಿಗೆ ತುಂಬಾ ಒಳ್ಳೆಯದು. ಯೋನಿಯ ಶಿಲೀಂಧ್ರ ಸೋಂಕಿಗೆ ಕೆಲವು ಮನೆಮದ್ದುಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಇದನ್ನು ನೀವು ಬಳಸಿ ಪ್ರಯೋಜನ ಪಡೆದುಕೊಳ್ಳಿ....

ಬೋರಿಕ್ ಆಮ್ಲ

ಬೋರಿಕ್ ಆಮ್ಲ

ಪ್ರಬಲ ನಂಜು ನಿರೋಧಕವಾಗಿರುವ ಇದನ್ನು ಯೋನಿಯ ಶಿಲೀಂಧ್ರ ಸೋಂಕಿಗೆ ಬಳಸಿಕೊಳ್ಳಬಹುದು. ಆದರೆ ಅತಿಯಾಗಿ ಬೋರಿಕ್ ಆಮ್ಲವನ್ನು ಬಳಸಿದರೆ ಅದರಿಂದ ರಕ್ತಪರಿಚಲನಾ ವ್ಯವಸ್ಥೆಗೆ ಹಾನಿಯಾಗಿ ಕಿಡ್ನಿಗೆ ತೊಂದರೆಯಾಗಬಹುದು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಪ್ರಾಣಹಾನಿ ಉಂಟು ಮಾಡಬಹುದು. ಇದನ್ನು ಯಾರೂ ಸೇವನೆ ಮಾಡಬಾರದು ಮತ್ತು ಹಾನಿಯಾಗಿರುವ ಚರ್ಮಕ್ಕೆ ನೇರವಾಗಿ ಬಳಸಬಾರದು. ಬೋರಿಕ್ ಆಮ್ಲವನ್ನು ಗರ್ಭಿಣಿ ಮಹಿಳೆಯರು ಬಳಸಲೇಬಾರದು. ಸ್ವಲ್ಪ ಪ್ರಮಾಣದಲ್ಲಿ ಬೋರಿಕ್ ಆಮ್ಲ ತೆಗೆದುಕೊಂಡು ಅದನ್ನು ನೀರಿಗೆ ಬೆರೆಸಿಕೊಳ್ಳಿ ಮತ್ತು ಯೋನಿಯ ಭಾಗಕ್ಕೆ ಹಚ್ಚಿ.

ಪ್ರೊಬಯೋಟಿಕ್ ಸಪ್ಲಿಮೆಂಟ್ಸ್ ಮತ್ತು ಸಪ್ಪೊಸಿಟೊರಿಸ್

ಪ್ರೊಬಯೋಟಿಕ್ ಸಪ್ಲಿಮೆಂಟ್ಸ್ ಮತ್ತು ಸಪ್ಪೊಸಿಟೊರಿಸ್

ದೇಹದಲ್ಲಿ ಕಿಣ್ವ ಮತ್ತು ಬ್ಯಾಕ್ಟೀರಿಯಾದ ಸಮತೋಲವನ್ನು ಕಾಪಾಡಲು ಪ್ರೊಬಯೋಟಿಕ್ ಗಳು ಅತ್ಯುತ್ತಮ ಮದ್ದಾಗಿದೆ. ಪ್ರೊಬಯೋಟಿಕ್ ನ್ನು (ಬ್ಯಾಕ್ಟೀರಿಯಾ ಒಳಗೊಂಡಿರುವ ಲ್ಯಾಕ್ಟೋಬಾಸಿಲಸ್ ಆಸಿಡೋಫಿಲಸ್) ನೀವು ದಿನನಿತ್ಯ ಸೇವನೆ ಮಾಡಿದರೆ ಆಗ ಯೋನಿಯ ಶಿಲೀಂಧ್ರ ಸೋಂಕು ಕಡಿಮೆ ಮಾಡಬಹುದು. ಬಾಯಿ ಮೂಲಕ ಸೇವನೆ ಮಾಡಿರುವ ಪ್ರೊಬಯೋಟಿಕ್ ತುಂಬಾ ನಿಧಾನವಾಗಿ ಕೆಲಸ ಮಾಡುವ ಕಾರಣದಿಂದಾಗಿ ಇದು ಫಲಿತಾಂಶ ತೋರಿಸಲು ಸುಮಾರು 10 ದಿನ ಬೇಕಾಗಬಹುದು. ಇದರಿಂದ ಯೋನಿಯ ಸಪ್ಪೊಸಿಟೊರಿಸ್ ಒಳ್ಳೆಯ ಆಯ್ಕೆ ಮತ್ತು ವೇಗದ ಫಲಿತಾಂಶ ನೀಡುವುದು. ಇದನ್ನು ಹೆಚ್ಚಿನ ಮಹಿಳೆಯರು ಬಳಸುವರು ಕೂಡ. ಯೋನಿಯ ಶಿಲೀಂಧ್ರ ಸೋಂಕು ಕಡಿಮೆ ಮಾಡಲು ಪ್ರೊಬಯೋಟಿಕ್ ಸಪ್ಪೊಸಿಟೊರಿಸ್ ಅತ್ಯುತ್ತಮವೆಂದು ಹಾವರ್ಡ್ ಆರೋಗ್ಯವು ಹೇಳಿವೆ.

ಟ್ರೀ ಟ್ರೀ ಎಣ್ಣೆ

ಟ್ರೀ ಟ್ರೀ ಎಣ್ಣೆ

ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಣೆ ಮಾಡಲು ಈ ಸಾರಭೂತ ತೈಲವನ್ನು ಬಳಸಲಾಗುತ್ತದೆ. ಟ್ರೀ ಟ್ರೀ ಎಣ್ಣೆ ಇರುವಂತಹ ಕೆಲವೊಂದು ಯೋನಿಯ ಸಪ್ಪೊಸಿಟೊರಿಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಯೋನಿಯ ಶಿಲೀಂಧ್ರ ಸೋಂಕು ನಿವಾರಣೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಚಿಕಿತ್ಸಕ ತೈಲವು ಯೋನಿಯ ಸಮತೋಲನ ಕಾಪಾಡುವುದು. ಮನೆಯಲ್ಲೇ ಯೋನಿಯ ಸಪ್ಪೊಸಿಟೊರಿಸ್ ಮಾಡಲು ಬಯಸಿದ್ದರೆ ಆಗ ನೀವು ಕೆಲವು ಹನಿ ಚಹಾ ಮರದ ಎಣ್ಣೆಯನ್ನು ತೆಂಗಿನೆಣ್ಣೆ ಅಥವಾ ಜೊಜೊಬಾ ಎಣ್ಣೆಯ ಜತೆಗೆ ಮಿಶ್ರಣ ಮಾಡಿ ಮತ್ತು ಇದನ್ನು ಯೋನಿಗೆ ಹಚ್ಚಿಕೊಳ್ಳಿ. ಟ್ರೀ ಟ್ರೀ ಎಣ್ಣೆಯನ್ನು ಯಾವತ್ತೂ ಸೇವಿಸಬೇಡಿ. ಈ ಸಾರಭೂತ ತೈಲವನ್ನು ಯಾವುದಾದರೂ ಮೆಡಿಕಲ್ ಅಥವಾ ಅಂಗಡಿಯಿಂದ ಖರೀದಿಸಿ. ಆನ್ ಲೈನ್ ನಲ್ಲೂ ಇದು ಲಭ್ಯವಿದೆ.

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್

ನಂಜುನಿರೋಧಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಹೈಡ್ರೋಜನ್ ಪೆರಾಕ್ಸೈಡ್ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಕೊಂದು ಹಾಕುವುದು. ಹೆಚ್ಚಿನ ಮಹಿಳೆಯರು ಇದನ್ನು ಶಿಲೀಂಧ್ರ ಸೋಂಕಿಗೆ ಹೊರಗಿನಿಂದ ಹಚ್ಚಿಕೊಳ್ಳುವರು. ಇದನ್ನು ಯಾವುದಾದರ ಜತೆಗೆ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. ಐದು ದಿನಕ್ಕಿಂತ ಹೆಚ್ಚು ಇದನ್ನು ಬಳಸಬೇಡಿ.

ಮೊಸರು

ಮೊಸರು

ಮೊಸರಿನಲ್ಲಿ ಜೀವಂತ ಬ್ಯಾಕ್ಟೀರಿಯಾ ಲ್ಯಾಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಇದೆ. ಇದನ್ನು ಪ್ರೊಬಯೋಟಿಕ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಯೋನಿಯ ಪ್ರದೇಶದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಅತೀ ಅಗತ್ಯವಾಗಿ ಬೇಕಾಗಿದೆ. ಅಸಮತೋಲದಿಂದಾಗಿ ಉಂಟಾಗಿರುವ ಅತಿಯಾದ ಬೆಳವಣಿಗೆಯನ್ನು ಇದು ಸರಿಪಡಿಸುವುದು. ಯೋನಿಯ ಶಿಲೀಂಧ್ರ ಸೋಂಕಿಗೆ ಮೊಸರು ಅತ್ಯುತ್ತಮ ಮನೆಮದ್ದು. ಇದಕ್ಕೆ ಯಾವುದೇ ರೀತಿಯ ಸಕ್ಕರೆ ಬಳಕೆ ಮಾಡದೆ ಉಪಯೋಗಿಸಿ, ಯಾಕೆಂದರೆ ಸಕ್ಕರೆ ಬಳಸಿದರೆ ಕ್ಯಾಂಡಿಡ ಶಿಲೀಂಧ್ರ ಬೆಳೆಯುವುದು.

ಒರೆಗಾನೊ ತೈಲ

ಒರೆಗಾನೊ ತೈಲ

ಯೋನಿಯ ಶಿಲೀಂಧ್ರ ಸೋಂಕಿಗೆ ಮತ್ತೊಂದು ಪ್ರಮುಖ ಸಾರಭೂತ ತೈಲವೆಂದರೆ ಅದು ಒರೆಗಾನೊ ತೈಲ. ನೀವು ಈ ತೈಲ ಖರೀದಿಸುವ ಮೊದಲು ಇದನ್ನು ಕಾಡಿನ ಒರೆಗಾನೋದಿಂದ ಮಾಡಲ್ಪಟ್ಟಿದೆಯಾ ಮತ್ತು ಇದರಲ್ಲಿ ಕಾರ್ವಕ್ರೊಲ್ ಮತ್ತು ಥೈಮೊಲ್ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ. ಕಾಡಿನ ಒರೆಗಾನೊವು ಕ್ಯಾಂಡಿಡ ಅಲ್ಬಿಕಾನ ಬೆಳವಣಿಗೆ ನಿಧಾನಗೊಳಿಸುವುದು ಅಥವಾ ನಿಲ್ಲಿಸುವ ಸಾಮರ್ಥ್ಯ ಹೊಂದಿದೆ. ಇದು ನೀವು ತೆಗೆದುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ.

ಸೂಚನೆ

ಸೂಚನೆ

ವಿಟಮಿನ್ ಕೆ ಕೊರತೆಯಿದ್ದರೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿದ್ದರೆ ಆಗ ಒರೆಗಾನೊ ತೈಲ ಬಳಸಬೇಡಿ. ರಕ್ತ ತೆಳುವಾಗಲು ಅಥವಾ ಬೇರೆ ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ಇದನ್ನು ಬಳಸಬೇಡಿ. ಇದು ರಕ್ತವನ್ನು ತೆಳುಗೊಳಿಸುವುದು. ಇದನ್ನು ನೇರವಾಗಿ ಸೇವನೆ ಮಾಡಬೇಡಿ. ಇದನ್ನು ನೀವು ಮೂಗಿನ ಮೂಲಕ ಎಳೆದುಕೊಂಡರೆ ಒಳ್ಳೆಯದು. ಇದನ್ನು ನೀವು ನೇರವಾಗಿ ಹಚ್ಚಲು ಬಯಸಿದರೆ ಆಗ ನೀವು ಬಾದಾಮಿ ತೈಲ ಅಥವಾ ಆಲಿವ್ ತೈಲದ ಜತೆಗೆ ಮಿಶ್ರಣ ಮಾಡಿಕೊಂಡು ಬಳಸಿ. ಒರೆಗಾನೊ ತೈಲದ 3-5 ಹನಿಯನ್ನು ಬಾದಾಮಿ ತೈಲದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸೋಂಕು ತಗುಲಿರುವ ಕಡೆಗೆ ಸರಿಯಾಗಿ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನಕಾಯಿ ತಿರುಳಿನಿಂದ ಮಾಡಲ್ಪಡುವಂತಹ ಕೊಬ್ಬುಯುಕ್ತ ತೆಂಗಿನೆಣ್ಣೆಯು ಶಿಲೀಂಧ್ರ ವಿರೋಧಿ ಗುಣಗಳೊಂದಿಗೆ ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ. ತೆಂಗಿನೆಣ್ಣೆಯು ಕ್ಯಾಂಡಿಡ ಅಲ್ಬಿಕಾನ್ ನ್ನು ದೂರ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಬೇರೆ ಎಲ್ಲಕ್ಕಿಂತಲೂ ಇದು ತುಂಬಾ ಪರಿಣಾಮಕಾರಿ. ಸಾವಯವ ಮತ್ತು ಪರಿಶುದ್ಧವಾಗಿರುವಂತಹ ತೆಂಗಿನೆಣ್ಣೆ ಖರೀದಿಸಿ ಯೋನಿ ಸೋಂಕಿಗೆ ಬಳಸಿ. ನೀವು ಶುದ್ಧವಾಗಿರುವ ಹತ್ತಿ ಉಂಡೆಯನ್ನು ತೆಂಗಿನೆಣ್ಣೆಯಲ್ಲಿ ಅದ್ದಿಕೊಂಡು ಅದನ್ನು ಯೋನಿಗೆ ಬಳಸಬಹುದು ಎಂದು ವೈದ್ಯರು ಹೇಳುತ್ತಾರೆ.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಸ್ನಾನ ಮಾಡುವಂತಹ ಬಾತ್ ಟಬ್ ಗೆ ವಿನೇಗರ್ ಹಾಕಿಕೊಳ್ಳಿ. ಬಿಸಿ ನೀರಿಗೆ ½ ಕಪ್ ಆ್ಯಪಲ್ ಸೀಡರ್ ವಿನೇಗರ್ ಹಾಕಿ. 20 ನಿಮಿಷ ಕಾಲ ಹಾಗೆ ಬಿಡಿ. ಸೂಕ್ಷ್ಮಾಣುಜೀವಿಗಳನ್ನು ಕೊಲ್ಲಲು ಈ ನೀರಿನಲ್ಲಿ ಸ್ನಾನ ಮಾಡಿ. ಅದಾಗ್ಯೂ, ಕೆಲವು ಮಂದಿ ವಿನೇಗರ್ ನ್ನು ನೇರವಾಗಿ ಹಾಕಲು ಹೇಳಬಹುದು. ಇದರಿಂದ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ಹೊರಬರುವುದು. ಆದರೆ ಇದರಿಂದ ಮತ್ತೆ ಶಿಲೀಂಧ್ರ ಸೋಂಕು ಮರುಕಳಿಸುವಂತಹ ಸಾಧ್ಯತೆಗಳು ಇವೆ. ಆ್ಯಪಲ್ ಸೀಡರ್ ನ್ನು ನೀವು ಬಿಸಿ ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಅದು ತುಂಬಾ ಪರಿಣಾಮಕಾರಿ ವಿಧಾನ.

ವಿಟಮಿನ್ ಸಿ

ವಿಟಮಿನ್ ಸಿ

ಬಲವಾಗಿರುವಂತಹ ಪ್ರತಿರೋಧಕ ವ್ಯವಸ್ಥೆಯಿದ್ದರೆ ಆಗ ಸಮತೋಲನ ಕಾಪಾಡಿಕೊಳ್ಳಬಹುದು ಮತ್ತು ಇದಕ್ಕಾಗಿ ನಿಮಗೆ ಹೆಚ್ಚಿನ ಮಟ್ಟದಲ್ಲಿ ವಿಟಮಿನ್ ಸಿ ಅಗತ್ಯವಿದೆ. ವಿಟಮಿನ್ ಸಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದರಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ಕ್ಯಾಂಡಿಡದ ಅತಿಯಾದ ಬೆಳವಣಿಗೆ ತಡೆಯುವುದು. ಶಿಲೀಂಧ್ರ ಸೋಂಕು ತಡೆಯಲು ನೀವು ವಿಟಮಿನ್ ಸಿ ಪೂರೈಕೆಯನ್ನು ಹೆಚ್ಚಿಸಿಕೊಳ್ಳಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕ್ಯಾಂಡಿಡವನ್ನು ದೂರವಿಡಲು ಬೆಳ್ಳುಳ್ಳಿಯು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಯೋನಿಯ ಶಿಲೀಂಧ್ರ ಸೋಂಕನ್ನು ಕಡಿಮೆ ಮಾಡಲು ನೀವು ದಿನನಿತ್ಯದ ಆಹಾರ ಕ್ರಮದಲ್ಲಿ ಹೆಚ್ಚೆಚ್ಚು ಬೆಳ್ಳುಳ್ಳಿ ಸೇವನೆ ಮಾಡಿ.

English summary

Natural Remedies To Treat Vaginal Fungal Infection

Vaginal fungal infection happens due to the overgrowth of Candida albicans (a fungus which resides in the vagina). This overgrowth results in itching, inflammation, painful discharge and irritation. This is a very common disorder and can be seen in majority of women. It can happen to you anytime. If you have never had it in the past and this is the first time that you are going through the symptoms of vaginal infection, you must consult a gynecologist. This is just to confirm that you have a vaginal fungal infection.
X
Desktop Bottom Promotion