ಹಲಸಿನ ಹಣ್ಣನ್ನು ತಿಂದರೆ ಇಂತಹ ಸಮಸ್ಯೆಗಳೆಲ್ಲಾ ದೂರವಾಗುವುದು

Posted By: Divya Pandith
Subscribe to Boldsky

ಹಲಸಿನ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಅದು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಹಣ್ಣಾಗಲು ಪ್ರಾರಂಭಿಸುವ ಹಲಸು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆಯೋ ಹಾಗೆಯೇ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ. ಕೆಲವರು ಈ ಹಣ್ಣನ್ನು ತಿಂದರೆ ಹೊಟ್ಟೆ ಉಬ್ಬರ ಉಂಟಾಗುವುದು ಎನ್ನುತ್ತಾರೆ. ಆದರೆ ಯಾವುದನ್ನೇ ಆದರೂ ಮಿತಿಯಲ್ಲಿ ತಿಂದರೆ ಯಾವ ತೊಂದರೆಯೂ ಉಂಟಾಗದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಕ್ಯಾನ್ಸರ್‌ನ್ನು ಮಟ್ಟ ಹಾಕುವ ತಾಕತ್ತು-'ಹಲಸಿನ ಹಣ್ಣಿನಲ್ಲಿದೆ'!

ಈ ಹಣ್ಣು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಎನ್ನುವ ಖ್ಯಾತಿಯನ್ನು ಪಡೆದಿದೆ. ಈ ಹಣ್ಣು ಹೆಚ್ಚಾಗಿ ಉಷ್ಣವಲಯಗಳಲ್ಲಿ ಬೆಳೆಯುತ್ತದೆ. ಹಲಸಿನ ಕಾಯಿ, ಹಣ್ಣು, ಹಲಸಿನ ಬೀಜ ಎಲ್ಲವೂ ಆಹಾರ ಪದಾರ್ಥಗಳ ತಯಾರಿಗೆ ಬರುತ್ತವೆ. ಈ ಹಣ್ಣಿನಲ್ಲಿ ಸಮೃದ್ಧವಾದ ಸಪೋನಿನ್, ಲಿಗ್ನನ್ಸ್, ಫೈಟೋನ್ಯೂಟ್ರಿಯೆಂಟ್ ಮತ್ತು ಐಸೋಫ್ಲೋವೊನ್ ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಜೀವಕೋಶಗಳಿಗೆ ಸಂಬಂಧಿಸಿದ ರಾಡಿಕಲ್ಸ್‍ಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ಈ ಹಣ್ಣಿನ ಸೇವನೆ ಮಾಡಿದರೆ ಹೊಟ್ಟೆ ಹುಣ್ಣು, ಎಂಡೊಮೆಟ್ರಿಯಲ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗಳು, ಕೊಲಾನ್ ಕ್ಯಾನ್ಸರ್ ಸೇರಿದಂತೆ ಇನನೂ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಫೈಬರ್ ಅಂಶ ಸಮೃದ್ಧವಾಗಿ ಹೊಂದಿರುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸುವುದರ ಮೂಲಕ ತ್ವಚೆಯಲ್ಲಿ ಉಂಟಾಗುವ ಸುಕ್ಕು ಸಮಸ್ಯೆಯು ನಿವಾರಣೆ ಯಾಗುವುದು. ಹಲವಾರು ಅದ್ಭುತವಾದ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಈ ಹಣ್ಣಿನ ಸೇವನೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲಾ ಸನಸ್ಯೆಗಳನ್ನು ನಿವಾರಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಆರೋಗ್ಯಕರ ಚರ್ಮ

ಆರೋಗ್ಯಕರ ಚರ್ಮ

ಹಲಸಿನ ಹಣ್ಣು ಚರ್ಮದ ಆರೋಗ್ಯವನ್ನು ಕಾಪಾಡಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಇದರ ಸೇವನೆಯಿಂದ ಚರ್ಮದಲ್ಲಿರುವ ಸುಕ್ಕನ್ನು ತಡೆಯುವುದು, ಅಲ್ಲದೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಅಲ್ಲದೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುವುದು. ತಣ್ಣಗಿನ ಹಾಲಿನಲ್ಲಿ ಹಲಸಿನ ಹಣ್ಣಿನ ಸೊಳೆಯನ್ನು ನೆನೆಸಿಡಿ. ನಂತರ ರುಬ್ಬಿ ಪೇಸ್ಟ್‍ಅನ್ನು ತಯಾರಿಸಿ. ಸುಕ್ಕುಗಟ್ಟಿದ ಪ್ರದೇಶ ಮತ್ತು ಮುಖಕ್ಕೆ ಅನ್ವಯಿಸುವುದರಿಂದ ಆರು ದಿನಗಳಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಹಣ್ಣನ್ನು ಸೇವಿಸುವುದರಿಂದಲೂ ಮಲಬದ್ಧತೆಯನ್ನು ನಿಯಂತ್ರಿಸಬಹುದು. ಶುಷ್ಕವಾಗಿರುವ ಹಲಸಿನ ಬೀಜವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು, ನಂತರ ಪೇಸ್ಟ್ ಮಾಡಿ ಮುಖಕ್ಕೆ ಅನ್ವಯಿಸಿ. ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ಕರ್ಷಣ ನಿರೋಧಕವಾಗಿ ಪರಿವರ್ತಿಸುತ್ತದೆ. ಜೊತೆಗೆ ವಯಸ್ಸಾದ ಕಳೆಯನ್ನು ಹೋಗಲಾಡಿಸುತ್ತದೆ.

ಉತ್ತಮ ಪ್ರೋಟೀನ್ ಮೂಲ

ಉತ್ತಮ ಪ್ರೋಟೀನ್ ಮೂಲ

ನೀವು ಸೇವಿಸುವ ಫ್ರೂಟ್ ಸಲಾಡ್, ದೈನಂದಿನ ಭೋಜನ, ಮತ್ತು ಉಪಹಾರಗಳಲ್ಲಿ ಹಲಸಿನ ಹಣ್ಣನ್ನು ಸೇರಿಸಿ. ಇದು ಉಷ್ಣವಲಯದಲ್ಲಿ ಬೆಳೆಯುವುದರಿಂದ ಅತ್ಯುತ್ತಮ ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ. ಇದನ್ನು ಹಸಿವಾದಾಗ ತಿನ್ನಲು ಅತ್ಯುತ್ತಮ ಆಹಾರವಾಗಿರುತ್ತದೆ. ಇದರ ನಿಯಮಿತವಾದ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರೋಟೀನ್‍ಗಳನ್ನು ಒದಗಿಸಬಹುದು.

ಕೂದಲ ಆರೋಗ್ಯಕ್ಕೆ

ಕೂದಲ ಆರೋಗ್ಯಕ್ಕೆ

ಕೇಶರಾಶಿಯು ನೈಸರ್ಗಿಕವಾಗಿ ಉತ್ತಮ ಬೆಳವಣಿಗೆ ಹೊಂದಲು ರಕ್ತ ಪರಿಚಲನೆಯು ಅತ್ಯಗತ್ಯವಾಗಿರುತ್ತದೆ. ರಕ್ತ ಪರಿಚಲನೆ ಕೆಲಸವನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಹಲಸಿನ ಬೀಜ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೈಸರ್ಗಿಕವಾಗಿ ಕೂದಲಿನ ಆರೋಗ್ಯ ಸುಧಾರಣೆಯನ್ನು ಕಾಣಬೇಕು ಎಂದಾದರೆ ನಿತ್ಯವೂ ಒಂದಿಷ್ಟು ಹಲಸಿನ ಹಣ್ಣಿನ ಸೊಳೆಯನ್ನು ತಿನ್ನಿರಿ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಕೇಶರಾಶಿಯು ಸಮೃದ್ಧವಾಗಿ ಬೆಳೆಯುತ್ತದೆ. ಜೊತೆಗೆ ಕೂದಲು ಶುಷ್ಕತೆಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುವುದು

ರೋಗ ನಿರೋಧಕ ಶಕ್ತಿ ಹೆಚ್ಚುವುದು

ಹಲಸಿನ ಹಣ್ಣು ಎನ್ನುವುದು ವಿಟಮಿನ್ "ಸಿ" ಇಂದ ಸಮೃದ್ಧತೆಯನ್ನು ಪಡೆದುಕೊಂಡಿದೆ. ಇದು ರೋಗ ನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಸಹಾಯ ಮಾಡುವುದು. ಸಾಮಾನ್ಯವಾಗಿ ಕಾಡುವ ಶೀತ, ನೆಗಡಿ, ಜ್ವರ, ಕೆಮ್ಮುಗಳಂತಹ ರೋಗಗಳನ್ನು ಸಂಭವಿಸದಂತೆ ತಡೆಯುತ್ತದೆ. ದೇಹದ ಸುತ್ತ ವೈರಸ್ ಸುಳಿಯದಂತೆ ರಕ್ಷಣೆ ನೀಡುವುದು. ಇದು ಪಾಲಿಸ್ಯಾಕರೈಡ್ ಅಸ್ತಿತ್ವವು ರೋಗನಿರೋಧಕ ವ್ಯವಸ್ಥೆಯಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಫ್ಯಾಗೊಸೈಟಿಕ್ ಕೋಶಗಳು ಸರಿಯಾಗಿ ಚಟುವಟಿಕೆಗಳನ್ನು ನಿರ್ವಹಿಸುವಂತೆ ಮಾಡುತ್ತದೆ.

ಶಕ್ತಿಯನ್ನು ನೀಡುತ್ತದೆ

ಶಕ್ತಿಯನ್ನು ನೀಡುತ್ತದೆ

ಈ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‍ಗಳು ಇರುವುದರಿಂದ, ಇದರ ಸೇವನೆಯು ಯಾವುದೇ ಬಗೆಯ ಕೊಲೆಸ್ಟ್ರಾಲ್‍ಗಳನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಇದನ್ನು ಒಂದು ಅತ್ಯುತ್ತಮ ನೈಸರ್ಗಿಕ ಆಹಾರ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಫ್ರಕ್ಟೋಸ್ ಮತ್ತು ಸುಕ್ರೋಸ್ ದಿನನಿತ್ಯದ ಚಟುವಟಿಕೆಗೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ.

ವೃದ್ಧಾಪ್ಯವನ್ನು ದೂರಮಾಡುತ್ತದೆ

ವೃದ್ಧಾಪ್ಯವನ್ನು ದೂರಮಾಡುತ್ತದೆ

ಹಲಸಿನ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮ ಕಾಂತಿ ಮತ್ತು ಸೆಳೆತ ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಕಳೆ, ಕೋಮಲತೆ ಮತ್ತು ಕಾಂತಿಯನ್ನು ನೀಡುವ ಮೂಲಕ ತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ದೇಹದಲ್ಲಿರುವ ಸೋಡಿಯಂ ಮಟ್ಟವನ್ನು ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ದ್ರವದ ಮಟ್ಟವನ್ನು ಸರಿಯಾಗಿಸಿ ವಿದ್ಯುದ್ವಿಚ್ಛೇದ್ಯ ವಿಷಯಕ್ಕೆ ಸಮತೋಲನಗೊಳಿಸುತ್ತದೆ. ಇದು ತನ್ಮೂಲಕ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಹೃದಯಕ್ಕೆ ಸಂಬಂಧಿಸಿದಂತೆ ಕೆಲವು ಕಾಯಿಲೆಗಳ ಅಪಾಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಸೂಕ್ತ ಜೀರ್ಣಕ್ರಿಯೆಗೆ ಸಹಕರಿಸುವುದು

ಸೂಕ್ತ ಜೀರ್ಣಕ್ರಿಯೆಗೆ ಸಹಕರಿಸುವುದು

ಹಲಸಿನ ಹಣ್ಣು ಉತ್ತಮ ನಾರಿನಂಶವನ್ನು ಪಡೆದುಕೊಂಡಿದೆ. ಇದು ಜೀರ್ಣ ಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮಲಬದ್ಧತೆಯನ್ನು ಸಹ ತಡೆಯುವುದು. ಸರಿಯಾದ ಚಯಾಪಚಯ ಕ್ರಿಯೆಗಳಿಗೆ ಉತ್ತೇಜಿಸಿ, ಕರುಳಿಗೆ ಸಂಬಂಧಿಸಿದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಹೊಟ್ಟೆ ಹುಣ್ಣು ಉಂಟಾಗದಂತೆ ಕಾಪಾಡುವುದು.

ಮುಖದ ನೆರಿಗೆಗಳನ್ನು ದೂರ ಮಾಡಲು

ಮುಖದ ನೆರಿಗೆಗಳನ್ನು ದೂರ ಮಾಡಲು

ನೆರಿಗೆಗಳು ನಿಮ್ಮನ್ನು ವೃದ್ಧಾಪ್ಯಕ್ಕೆ ತಳ್ಳುತ್ತವೆ. ನೆರಿಗೆಗಳಿಂದ ದೂರಾಗಲು, ಹಣ್ಣಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಈ ಪೇಸ್ಟ್‎ಗೆ ಒಂದು ಚಮಚ ಹಾಲನ್ನು ಸೇರಿಸಿಕೊಳ್ಳಿ ನಂತರ ಇದನ್ನು ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ತರುವಾಯ ಅದನ್ನು ತೆಗೆಯಿರಿ. ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್‎ನಿಂದ ಮುಖಕ್ಕೆ ಮಾಲೀಸು ಮಾಡಿಕೊಳ್ಳಿ.

ತ್ವಚೆಯ ಗಾಯಗಳನ್ನು ಹೋಗಲಾಡಿಸಲು

ತ್ವಚೆಯ ಗಾಯಗಳನ್ನು ಹೋಗಲಾಡಿಸಲು

ಹಲಸಿನ ಹಣ್ಣಿನಿಂದ ಗಾಯಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹಲಸಿನ ಹಣ್ಣಿನ ಬೀಜಗಳನ್ನು ಹುಡಿ ಮಾಡಿಟ್ಟುಕೊಳ್ಳಿ ಇದಕ್ಕೆ ಒಂದು ಚಮಚ ಜೇನನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಗಾಯದ ಮೇಲ್ಭಾಗಕ್ಕೆ ಈ ಪೇಸ್ಟ್ ಅನ್ನು ಸವರಿ ನಂತರ ಒಣಗಲು ಬಿಡಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.

ಗರ್ಭಿಣಿಯರಿಗೂ ಒಳ್ಳೆಯದು...

ಗರ್ಭಿಣಿಯರಿಗೂ ಒಳ್ಳೆಯದು...

ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶ ಮತ್ತು ವಿಟಮಿನ್ ಗಳ ಅಗತ್ಯವಿದೆ. ವಿಶೇಷವಾಗಿ ವಿಟಮಿನ್ ಬಿ (niacin) ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯರಿಗೆ ದಿನವಿಡೀ ಅಗತ್ಯವಿರುವ ಪ್ರಮಾಣವನ್ನು ಪೂರೈಸುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ವಿವಿಧ ಹಾರ್ಮೋನುಗಳು ಸೂಕ್ತಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ. ಹಲಸಿನ ಹಣ್ಣಿನ ಪೋಷಕಾಂಶಗಳು ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿರುವ ತಾಯಿಹಾಲನ್ನು ಉತ್ಪಾದಿಸಲೂ ನೆರವಾಗುತ್ತವೆ.

English summary

Mind-blowing Health Benefits Of Jackfruit

Jackfruit, the national fruit of Bangladesh that is widely cultivated in the tropical belts around the world, is an ubiquitous fruit known to one and all. Known by different names in different parts of the world, Jackfruit has immense health benefits. The Jackfruit seeds are even used for cooking. The fruit is mostly available during the summer months. This fruit contains high quantity of saponins, lignans, phytonutrients, and isoflavones. All these properties make Jackfruit an anti-cancer element, which helps in the removal of the free radicals from cells that aids in the process of cancer growth reduction.
Story first published: Friday, January 26, 2018, 23:31 [IST]