For Quick Alerts
ALLOW NOTIFICATIONS  
For Daily Alerts

  ವೀಳ್ಯದೆಲೆ ಎಂಬ ಹಸಿರು ಬಂಗಾರವನ್ನು ಎಷ್ಟು ಹೊಗಳಿದರೂ ಸಾಲದು!

  |

  ವೀಳ್ಯದೆಲೆ ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಮೊದಲು ಎಲೆ ಅಡಿಕೆ ಮತ್ತು ಸುಣ್ಣವನ್ನು ಮಾತ್ರವೇ ಸೇವಿಸುತ್ತಿದ್ದಾಗ ವೀಳ್ಯ ಎಂದು ಪರಿಗಣಿಸಲ್ಪಡುತ್ತಿದ್ದ ಈ ಅಭ್ಯಾಸ ಬರಬರುತ್ತಾ ಹೊಗೆಸೊಪ್ಪು ಮತ್ತು ಇತರ ಸುಗಂಧಗಳನ್ನು ಸೇರಿಸಿಕೊಳ್ಳುವ ಮೂಲಕ ಅನಾರೋಗ್ಯಕರ ಆಹಾರವಾಗಿ ಬದಲಾಗಿದೆ. ವೀಳ್ಯದೆಲೆಯ ಸೇವನೆಗೆ ಕನಿಷ್ಠ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ಮಾತ್ರವಲ್ಲ, ಶ್ರೀಲಂಕಾದ ಮಹಾವಸ್ಮ ಎಂಬ ಪುರಾತನ ಐತಿಹಾಸಿಕ ಗ್ರಂಥದಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದೆ.

  ಭಾರತದಲ್ಲಿ ಅತಿಥಿ ಸತ್ಕಾರದ ಸಮಯದಲ್ಲಿ ಊಟದ ಬಳಿಕ ನೀಡುವ ಆಹಾರಗಳಲ್ಲಿ ಹಾಲು, ಬಾಳೆಹಣ್ಣಿನ ಜೊತೆಗೆ ವೀಳ್ಯದೆಲೆ ಅಡಿಕೆ ಸುಣ್ಣವೂ ಇರುತ್ತದೆ. ಅಪ್ಪಟ ಹಸಿರು ಬಣ್ಣದ, ಹೃದಯಾಕಾರದ, ಹೊಳಪುಳ್ಳ ಹಾಗೂ ನಯವಾದ, ಬಾಯಿಯಲ್ಲಿಯೇ ಕರಗುವ ಈ ಎಲೆಯನ್ನು ಸೇವಿಸುವುದರಿಂದ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ನಿಮಗೆ ಅಚ್ಚರಿ ಮೂಡಿಸಬಹುದು. ಬಹಳ ಹಿಂದಿನಿಂದಲೇ ವೀಳ್ಯದೆಲೆಯನ್ನು ಸುವಾಸಿತ ಉದ್ದೀಪಕ ಹಾಗೂ ವಾಯುಪ್ರಕೋಪವಾಗದಿರಲು ಉಪಯೋಗಿಸಲಾಗುತ್ತಿತ್ತು. ಊಟದ ಬಳಿಕ ಎದುರಾಗುವ ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಲು ಎಲೆಯನ್ನು ಸೇವಿಸಿದರೆ ಇದರ ಸೇವನೆಯ ಬಳಿಕ ಕಾಮೋತ್ತೇಕನವಾಗುವುದನ್ನೂ ನಮ್ಮ ಹಿರಿಯರು ಕಂಡುಕೊಂಡಿದ್ದರು.

  ಇದರ ಆರೋಗ್ಯಕರ ಗುಣಗಳು ವಿಶೇಷವಾಗಿ ಗರ್ಭಿಣಿಯರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಬಾಣಂತಿಯರು ಎಲೆಯನ್ನು ಸೇವಿಸುವ ಮೂಲಕ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ. ವಿಶೇಷವಾಗಿ ಬಾಯಿಯ ಆರೋಗ್ಯ ಎಲೆಯ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಬಾಯಿಯಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಬಾಯಿಯ ದುರ್ವಾಸನೆಯಿಂದ ಮುಕ್ತಿ ನೀಡುವುದು, ಒಸಡುಗಳಲ್ಲಿ ಒಸರುವ ರಕ್ತವನ್ನು ನಿಲ್ಲಿಸುವುದು ಮೊದಲಾದ ಪ್ರಯೋಜನಗಳಿವೆ. ಇಷ್ಟು ಮಾತ್ರವಲ್ಲ, ಇನ್ನೂ ಹಲವಾರು ಪ್ರಯೋಜನಗಳಿದ್ದು ಇಂದಿನ ಲೇಖನದಲ್ಲಿ ಪ್ರಮುಖವಾದುದನ್ನು ವಿವರಿಸಲಾಗಿದೆ. ಆದರೆ ಈ ಎಲೆಯನ್ನು ಹಸಿಯಾಗಿ ಮತ್ತು ಏನನ್ನೂ ಜೊತೆಗೆ ಬೆರೆಸದೇ ತಿಂದಾಗಲೇ ಇದರ ಪ್ರಯೋಜನಗಳು ಲಭಿಸುತ್ತವೆ. ಎಲೆಯನ್ನು ಪಾನ್ ಬೀಡಾ, ಅಡಿಕೆ, ಹೊಗೆಸೊಪ್ಪು, ಗುಲ್ಕಂದ್ ಮೊದಲಾದ ಯಾವುದೇ ಸಾಮಾಗ್ರಿಗಳ ಜೊತೆಗೆ ಸೇವಿಸಿದರೆ ಎಲೆಯ ಪ್ರಯೋಜನಗಳು ಪೂರ್ಣವಾಗಿ ಲಭಿಸುವುದಿಲ್ಲ. 

  ಮೂತ್ರವರ್ಧಕ

  ಮೂತ್ರವರ್ಧಕ

  ಒಂದು ವೇಳೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ವೀಳ್ಯದೆಲೆಗಳನ್ನು ಸೇವಿಸಿ. ಇದೊಂದು ನೈಸರ್ಗಿಕ ಮೂತ್ರವರ್ಧಕವಾಗಿದೆ. ಸಮಪ್ರಮಾಣದಲ್ಲಿ ನೀರು ಬೆರೆಸಿದ ಒಂದು ಲೋಟ ಹಾಲಿಗೆ ಒಂದು ವೀಳ್ಯದೆಲೆ ಎಂಬ ಪ್ರಮಾಣದಲ್ಲಿ ಎಲೆಯನ್ನು ಅಗಿದು ನೀರುಹಾಲನ್ನು ಕುಡಿದರೆ ದೇಹದ ನಿರ್ಜಲೀಕರಣದ ತೊಂದರೆ ಇಲ್ಲವಾಗುತ್ತದೆ.

  ಆಂಟಿ ಆಕ್ಸಿಡೆಂಟುಗಳು

  ಆಂಟಿ ಆಕ್ಸಿಡೆಂಟುಗಳು

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಗಳನ್ನು ದೇಹದಿಂದ ನಿವಾರಿಸುವ ಮೂಲಕ ಹಲವು ಬಗೆಯ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

  ಮಲಬದ್ಧತೆ

  ಮಲಬದ್ಧತೆ

  ವೀಳ್ಯದೆಲೆ ಉತ್ತಮ ಮೂತ್ರವರ್ಧಕವಾಗಿರುವ ಜೊತೆಗೇ ಮಲವಿಸರ್ಜನೆಯೂ ಸುಲಭವಾಗಿಸುವ ಮೂಲಕ ಮಲಬದ್ಧತೆಯಿಂದಲೂ ರಕ್ಷಿಸುತ್ತದೆ.

  ಒಸಡುಗಳಲ್ಲಿ ಒಸರುವ ರಕ್ತ

  ಒಸಡುಗಳಲ್ಲಿ ಒಸರುವ ರಕ್ತ

  ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಕೆಲವು ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪನವನ್ನು ರಕ್ತ ಜಿನುಗುತ್ತಿರುವೆಡೆ ದಪ್ಪನಾಗಿ ಹಚ್ಚಿಕೊಂಡು ರಾತ್ರಿಯಿಡೀ ಬಿಟ್ಟರೆ ಮರುದಿನ ಗುಣವಾಗಿರುತ್ತದೆ.

  ಉರಿಯೂತದಿಂದ ರಕ್ಷಣೆ

  ಉರಿಯೂತದಿಂದ ರಕ್ಷಣೆ

  ಉರಿಯೂತದ ಕಾರಣದಿಂದ ಉಂಟಾಗಿರುವ ನೋವಿನಿಂದ ಕೂಡಿದ ಮೊಡವೆ, ಸಂಧಿವಾತ ಮೊದಲಾದವುಗಳಿಗೆ ಎಲೆಯನ್ನು ಅರೆದು ಹಚ್ಚಿಕೊಳ್ಳುವ ಮೂಲಕ ಉತ್ತಮ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ಉಪಶಮನ ದೊರಕುತ್ತದೆ.

  ಕೆಮ್ಮು

  ಕೆಮ್ಮು

  ಕೆಮ್ಮಿನ ನಿವಾರಣೆಗೆ ವೀಳ್ಯದೆಲೆ ಒಂದು ಉತ್ತಮವಾದ ಮನೆಮದ್ದಾಗಿದೆ. ಅಲ್ಲದೇ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೂ ಈ ಎಲೆಗಳು ಉತ್ತಮ ಪರಿಹಾರ ಒದಗಿಸುತ್ತವೆ.

  ಮಧುಮೇಹ

  ಮಧುಮೇಹ

  ವೀಳ್ಯದೆಲೆಯಲ್ಲಿರುವ ಮೂತ್ರವರ್ಧಕ ಗುಣ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುವ ಮೂಲಕ ಅತ್ಯುತ್ತಮ ಮನೆ ಮದ್ದಾಗಿದೆ.

  ಗಾಯಗಳನ್ನು ಮಾಗಿಸಲು

  ಗಾಯಗಳನ್ನು ಮಾಗಿಸಲು

  ಯಾವುದಾದರೊಂದು ಗಾಯವಾಗಿ ರಕ್ತ ಜಿನುಗುತ್ತಿದ್ದರೆ ತಕ್ಷಣವೇ ಒಂದೆರಡು ವೀಳ್ಯದೆಲೆಗಳನ್ನು ಅರೆದು ದಪ್ಪನಾಗಿ ಗಾಯದ ಮೇಲೆ ಹಚ್ಚಿ ರಕ್ತ ನಿಲ್ಲುವವರೆಗೂ ಒತ್ತಿ ಹಿಡಿಯಬೇಕು. ಇದು ಉರಿಯೂತ ಹಾಗೂ ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಮೂರು ನಾಲ್ಕು ದಿನಗಳಲ್ಲಿಯೇ ಗಾಯ ಮಾಗಿಸುವಂತೆ ಮಾಡುತ್ತದೆ.

  ಕೆಳಬೆನ್ನಿನ ನೋವಿಗೆ

  ಕೆಳಬೆನ್ನಿನ ನೋವಿಗೆ

  ಒಂದು ವೇಳೆ ಕೆಳಬೆನ್ನಿನಲ್ಲಿ ನೋವಿದ್ದರೆ ಕೆಲವು ವೀಳ್ಯದೆಲೆಗಳನ್ನು ಅರೆದು ಈ ಲೇಪನವನ್ನು ನೋವಿರುವ ಭಾಗಕ್ಕೆ ಕೊಂಚ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ ಮಿಶ್ರಣ ಮಾಡಿ ಹಚ್ಚಿಕೊಂಡರೆ ನೋವು ಕಡಿಮೆಯಾಗುತ್ತದೆ.

  ತಲೆನೋವು

  ತಲೆನೋವು

  ವೀಳ್ಯದೆಲೆಯನ್ನು ಅರೆದು ಹಣೆಯ ಮೇಲೆ ಮತ್ತು ಪಕ್ಕದ ಭಾಗದಲ್ಲಿ ಹಚ್ಚಿಕೊಂಡಾಗ ಇದರ ತಂಪುಗೊಳಿಸುವ ಗುಣ ತಲೆನೋವನ್ನು ತಕ್ಷಣವೇ ಕಡಿಮೆಯಾಗಿಸುತ್ತದೆ.

  ಧೂಮಪಾನ ತ್ಯಜಿಸಲು

  ಧೂಮಪಾನ ತ್ಯಜಿಸಲು

  ಧೂಮಪಾನದ ವ್ಯಸನ ತ್ಯಜಿಸಲು ಇದಕ್ಕೆ ಪರ್ಯಾಯವಾಗಿ ವೀಳ್ಯದೆಲೆಯನ್ನು ಪರಿಗಣಿಸುವ ಮೂಲಕ ಧೂಮಪಾನದ ಚಟದಿಂದ ಹೊರಬರಲು ಸಾಧ್ಯವಾಗುತ್ತದೆ.

  ಆರೋಗ್ಯರಕ ನರಗಳು

  ಆರೋಗ್ಯರಕ ನರಗಳು

  ಒಂದು ವೇಳೆ ನರಗಳ ಸೆಳೆತ ಹಾಗೂ ನರಗಳು ದುರ್ಬಲವಾಗಿದ್ದರೆ ಹಾಗೂ ಸಂವೇದನೆ ಕಡಿಮೆಯಾಗಿದ್ದರೆ ವೀಳ್ಯದೆಲೆಯನ್ನು ಅರೆದು ಹಿಂಡಿ ಸಂಗ್ರಹಿಸಿದ ರಸ ಮತ್ತು ಸಮಪ್ರಮಾಣದ ಜೇನನ್ನು ಬೆರೆಸಿ ಕುಡಿಯುವ ಮೂಲಕ ಈ ದೌರ್ಬಲ್ಯವನ್ನು ಇಲ್ಲವಾಗಿಸುವ ಮೂಲಕ ಇದೊಂದು ಅತ್ಯುತ್ತಮ ಟಾನಿಕ್ ಆಗಿದೆ.

  ಮೊಡವೆಗಳನ್ನು ಗುಣಪಡಿಸುತ್ತದೆ

  ಮೊಡವೆಗಳನ್ನು ಗುಣಪಡಿಸುತ್ತದೆ

  ಒಂದು ವೇಳೆ ಮೊಡವೆ ದೊಡ್ಡದಾಗಿದ್ದು ನೋವುಭರಿತವಾಗಿದ್ದರೆ ವೀಳ್ಯದೆಲೆಯೊಂದನ್ನು ನುಣ್ಣಗೆ ಅರೆದು ರಾತ್ರಿ ಮಲಗುವ ಮುನ್ನ ದಪ್ಪನಾಗಿ ಹಚ್ಚಿಕೊಂಡು ಬೆಳಿಗ್ಗೆ ತೊಳೆದುಕೊಳ್ಳುವ ಮೂಲಕ ಶೀಘ್ರವೇ ಮೊಡವೆ ಯಾವುದೇ ಕಲೆಯಿಲ್ಲದೇ ಗುಣವಾಗುತ್ತದೆ.

  English summary

  Medicinal Benefits of Betel Leaves

  n India, betel leaves as well as nuts are offered to guests as courtesy. You might be surprised to know that the heart-shaped, smooth, shining and long-stalked betel leaves have numerous health benefits. Since ancient times, betel leaves has been used as an aromatic stimulant and anti-flatulent. Apart from being served as a mouth freshener, betel leaf is also used as an aphrodisiac. There are many health benefits of betel leaves which also makes it good for pregnant women. If lactating mothers apply betel leaves, it increases the production of milk in breastfeeding mothers.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more