Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು
ನೀವು ನಿಮ್ಮ ಸಂಗಾತಿಯೊಂದಿಗೆ ವಾರಾಂತ್ಯವನ್ನು ರೋಮಾಂಚಕವಾಗಿ ಕಳೆಯಲು ನಿರ್ಧರಿಸಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತೀರಿ ಹಾಗೂ ಇಬ್ಬರೂ ಆನಂದದ ಕ್ಷಣಗಳನ್ನು ಕಳೆದು ತುಂಬಾ ಅಗತ್ಯವಿದ್ದ ಪರಸ್ಪರ ಸ್ಪರ್ಶದ ಸುಖವನ್ನೂ ಅನುಭವಿಸುತ್ತೀರಿ. ಕೊಂಚ ಕಾಲ ಹೀಗೇ ಸಮಯವನ್ನು ಜೊತೆಯಾಗಿ ಕಳೆದ ಬಳಿಕ ಮನೆಗೆ ಹಿಂದಿರುಗಿ ಮುಂದಿನ ಕಾರ್ಯಕ್ರಮದ ಅಂಗವಾಗಿ ಮಲಗುವ ಕೋಣೆಯತ್ತ ನಿರೀಕ್ಷೆಯ ಕಣ್ಣುಗಳೊಂದಿಗೆ ಧಾವಿಸುತ್ತೀರಿ.
ಆದರೆ ಆಕೆ ತನ್ನ ಉತ್ಸಾಹವನ್ನು ಈ ಕ್ಷಣಕ್ಕೆ ನಿಲ್ಲಿಸಿ ಮುಂದಿನ ಕಾರ್ಯಕ್ರಮದಲ್ಲಿ ತನಗೇ ಯಾವುದೇ ಉತ್ಸುಕತೆ ಇಲ್ಲವೆಂದು ಬಿಟ್ಟರೆ? ನೀವೊಬ್ಬ ಪುರುಷರಾಗಿದ್ದು ಒಂದು ವೇಳೆ ನಿಮ್ಮ ಸಂಗಾತಿಯಿಂದ ಇದೇ ಬಗೆಯ ಪ್ರತಿಕ್ರಿಯೆ ಲಭಿಸಿದರೆ? ನಿಮಗೆ ನಿರಾಶೆ ಎದುರಾಗುವುದಂತೂ ಖಚಿತ. ಆದರೆ ಇದಕ್ಕೆ ಕಾರಣವೇನಿರಬಹುದು ಎಂದು ಎಂದಾದರೂ ಚಿಂತಿಸಿದ್ದೀರೋ?
ಯಾವುದೇ ದಾಂಪತ್ಯದಲ್ಲಿ ಲೈಂಗಿಕ ಸಂಪರ್ಕ ಅತಿ ಅಗತ್ಯವಾಗಿದ್ದು ದಂಪತಿಗಳು ಪರಸ್ಪರರಲ್ಲಿ ಹೆಚ್ಚು ಅನುರಕ್ತರಾಗಲು ನೆರವಾಗುತ್ತದೆ. ಲೈಂಗಿಕ ಸಂಪರ್ಕವಿಲ್ಲದೇ ಹೋದರೆ ಸಂಬಂಧಗಳೂ ಹಳಸಬಹುದು. ಹತಾಶೆಯ ಮೂಲಕ ದಂಪತಿಗಳ ನಡುವ ಜಗಳ, ಅಸಮಾಧಾನ ಮೊದಲಾದವು ಎದುರಾಗಬಹುದು. ಹಸಿವು, ಬಾಯಾರಿಕೆಯಂತೆಯೇ ಲೈಂಗಿಕ ಬಯಕೆಯೂ ಮನುಷ್ಯರ ಪ್ರಾಥಮಿಕ ಅವಶ್ಯಕತೆಗಳಾಗಿವೆ. ಈ ಬಯಕೆಗಳು ಪೂರ್ಣಗೊಳ್ಳುವುದು ಭಾವನಾತ್ಮಕ ಆರೋಗ್ಯಕ್ಕೆ ತುಂಬಾ ಅಗತ್ಯವಾಗಿದೆ. ಹಲವು ದಂಪತಿಗಳ ನಡುವೆ ಇಬ್ಬರಲ್ಲೊಬ್ಬರಿಗೆ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ಉತ್ಸಾಹವಿರದೇ ಇರುವುದು ದಾಂಪತ್ಯದ ನಡುವೆ ಹುಳಿ ಹಿಂಡಬಹುದು.
ಮಿಲನಕ್ಕೆ ಬೇಡ ಎನ್ನುವ ಮಹಿಳೆಯರಿಗೆ ಈ ವೈದ್ಯಕೀಯ ಕಾರಣಗಳಿರಬಹುದು!
ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳಲು ಯಾವುದೇ ಉತ್ಸುಕತೆ ತೋರದೇ ಇರಲು ಕೆಲವು ಸಾಮಾನ್ಯ ಕಾರಣಗಳಿವೆ. ಸಂಗಾತಿಯಲ್ಲಿ ಆಕರ್ಷಣೆ ಕಳೆದುಕೊಳ್ಳುವುದು, ಲೈಂಗಿಕ ಕ್ರಿಯೆಯೇ ಬೇಸರ ಎನಿಸುವುದು, ಸಮಯದ ಆಭಾವ, ಒಂದೇ ಮನೆಯಲ್ಲಿ ಹಲವರ ಉಪಸ್ಥಿತಿ ಇತ್ಯಾದಿಗಳಾಗಿವೆ. ಆದರೆ ಕೆಲವೊಮ್ಮೆ ಈ ನಿರಾಸಕ್ತಿಗೆ ವೈದ್ಯಕೀಯ ಕಾರಣಗಳೂ ಇರಬಹುದು. ಅದರಲ್ಲೂ ಮಹಿಳೆಯರೂ ಈ ಅಗತ್ಯತೆಯನ್ನು ನಿರಾಕರಿಸಲು ಕೆಲವು ಗಂಭೀರವಾದ ವೈದ್ಯಕೀಯ ಕಾರಣಗಳಿರಬಹುದು ಹಾಗೂ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಬನ್ನಿ, ಈ ವೈದ್ಯಕೀಯ ಕಾರಣಗಳು ಏನಿರಬಹುದು ಎಂಬುದನ್ನು ನೋಡೋಣ....

1. ರಸದೂತಗಳ ಏರುಪೇರು
ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಲೈಂಗಿಕ ಕಾಮನೆಗಳನ್ನು ಪ್ರಚೋದಿಸಲು ಕೆಲವು ರಸದೂತಗಳು ಸ್ರವಿಸಬೇಕಾಗುತ್ತದೆ. ಮಹಿಳೆಯರಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಉತ್ಪಾದನೆ ಕಡಿಮೆಯಾದರೆ ಲೈಂಗಿಕ ಬಯಕೆಯೂ ಕಡಿಮೆಯಾಗುತ್ತದೆ. ಈ ನಿರಾಸಕ್ತಿ ಯಾವುದೇ ವಯಸ್ಸಿನಲ್ಲಿ ಎದುರಾಗಬಹುದು.

2. ಶಿಲೀಂಧ್ರದ ಸೋಂಕು
ಶಿಲೀಂಧ್ರದ ಸೋಂಕು ಒಂದು ಬಗೆಯ ಬ್ಯಾಕ್ಟೀರಿಯಾದಿಂದ ಎದುರಾಗುವ ಕಾಯಿಲೆಯಾಗಿದ್ದು ಮಹಿಳೆಯರ ಗುಪ್ತಾಂಗಗಳಲ್ಲಿ ಸೋಂಕು ಹರಡಿಸುತ್ತದೆ. ಈ ಭಾಗದಲ್ಲಿ ಶಿಲೀಂಧ್ರದ ಸೋಂಕು ಎದುರಾಗಲು ಸ್ವಚ್ಛತೆಯ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕ ಕಾರಣವಾಗಿವೆ. ಈ ಸೋಂಕಿನ ಪರಿಣಾಮವಾಗಿ ಅತೀವವಾದ ತುರಿಕೆ, ವಾಸನೆಯುಕ್ತ ದ್ರವದ ಸ್ರಾವ ಹಾಗೂ ಈ ಭಾಗದಲ್ಲಿ ಎದುರಾಗುವ ನೋವು ಲೈಂಗಿಕ ಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

3. ಲೈಂಗಿಕ ರೋಗಗಳು (Sexually Transmitted Diseases)
ಗೊನೋರಿಯಾ, ಕ್ಲಾಮೈಡಿಯಾ, ಹೆಪಾಟೈಟಿಸ್ ಮೊದಲಾದ ಲೈಂಗಿಕ ರೋಗಗಳು ಗುಪ್ತಾಂಗದ ಭಾಗದಲ್ಲಿ ಅತೀವವಾದ ನೋವು ಹಾಗೂ ಉರಿಯನ್ನು ತಂದೊಡ್ಡುತ್ತವೆ. ಅಲ್ಲದೇ ತನಗೆ ಒದಗಿರುವ ರೋಗವನ್ನು ತನ್ನ ಸಂಗಾತಿಗೆ ಹರಡಿಸಲು ಇಷ್ಟಪಡದ ಮಹಿಳೆ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನಬಹುದು.

4. ಅಧಿಕ ರಕ್ತದೊತ್ತಡ
ಒಂದು ವೇಳೆ ಮಹಿಳೆಯೊಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯ ಮತ್ತು ಮೆದುಳಿಗೆ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗುವ ಕಾರಣ ಇದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚುತ್ತದೆ ಎಂಬ ಭೀತಿಯನ್ನು ಇವರು ಹೊಂದಿರುತ್ತಾರೆ. ಈ ಆತಂಕಕ್ಕೆ ವೈಜ್ಞಾನಿಕ ಕಾರಣವೂ ಇದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯದ ಮೇಲೆ ಹೇರುವ ಭಾರವೂ ಹೆಚ್ಚುತ್ತದೆ ಹಾಗೂ ಇದರಿಂದ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ಹೃದಯಸ್ತಂಭನಕ್ಕೂ ಒಳಗಾಗಬಹುದು.

5. ಮಧುಮೇಹ
ಈ ಜೀವರಾಸಾಯನಿಕ ಏರುಪೇರಿನಿಂದ ಹಲವಾರು ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ವಿಶೇಷವಾಗಿ ಮಹಿಳೆಯರಲ್ಲಿ ದ್ರವಿಸುವ ಕೊರತೆ, ರಸದೂತಗಳ ಏರುಪೇರು ಹಾಗೂ ದೈಹಿಕ ಸುಸ್ತು ಲೈಂಗಿಕ ಆಸಕ್ತಿಯನ್ನು ಕುಂದಿಸಬಹುದು.

6. ರಜೋನಿವೃತ್ತಿ ಅಥವಾ ಮುಟ್ಟಿನ ದಿನಗಳಲ್ಲಿ...
ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಲವಾರು ರಸದೂತಗಳ ಏರುಪೇರುಗಳು ಕಂಡುಬರುತ್ತವೆ. ಈ ಸಮಯದಲ್ಲಿ ಮನೋಭಾವವೂ ಅಪಾರವಾಗಿ ಬದಲಾಗುತ್ತದೆ ಹಾಗೂ ಈ ಬದಲಾವಣೆಯಿಂದ ಆಕೆ ಸಂಗಾತಿಯತ್ತ ಆಕರ್ಷಣೆಯನ್ನು ಕಳೆದುಕೊಳ್ಳಬಹುದು.

7. ಖಿನ್ನತೆ
ಲೈಂಗಿಕ ನಿರಾಸಕ್ತಿಗೆ ಖಿನ್ನತೆಯೂ ಒಂದು ಪ್ರಮುಖ ಕಾರಣವಾಗಬಹುದು. ಮಹಿಳೆಯರ ಖಿನ್ನತೆಯ ಮೂಲಕ ಮೆದುಳಿನ ರಾಸಾಯನಿಕಗಳಲ್ಲಿ ಏರುಪೇರು ಉಂಟಾಗುತ್ತದೆ ಹಾಗೂ ಈ ಏರುಪೇರಿನಿಂದ ಆಕೆಯ ಲೈಂಗಿಕ ಆಸಕ್ತಿಯೂ ಕುಂದಬಹುದು, ಇಲ್ಲವಾದರೆ ವ್ಯಕ್ತಿತ್ವ ಬಹಿರಂಗವಾಗುವುದು!



Click it and Unblock the Notifications