For Quick Alerts
ALLOW NOTIFICATIONS  
For Daily Alerts

ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ಇದನ್ನೆಲ್ಲಾ ನಂಬಲೇಬೇಡಿ!

|

ಹಸ್ತಮೈಥುನವೆನ್ನುವುದು ಇಂದು ನಿನ್ನೆಯ ಮಾತಲ್ಲ, 18ನೇ ಶತಮಾನದಿಂದಲೂ ಇದರ ಬಗ್ಗೆ ಚರ್ಚೆಯಾಗುತ್ತಲಿತ್ತು. ಆದರೆ ಜನರು ಇದನ್ನು ನೈತಿಕವಾಗಿ ಒಳ್ಳೆಯದಲ್ಲವೆಂದು ಹೇಳಿದರೆ, ಇನ್ನು ಕೆಲವರು ಇದರಿಂದ ಹಲವಾರು ಅಡ್ಡಪರಿಣಾಮಗಳು ಇದೆ ಎಂದು ವಾದಿಸಲು ಆರಂಭಿಸಿದರು.

ಆದರೆ ಇದು ಒಂದು ರೀತಿಯಲ್ಲಿ ಯಾವುದೇ ಲೈಂಗಿಕ ರೋಗಗಳನ್ನು ಆಹ್ವಾನಿಸದೆ ಕಾಮನೆಗಳನ್ನು ತಣಿಸುವುದು ಮತ್ತು ದೇಹಕ್ಕೆ ಲೈಂಗಿಕ ತೃಪ್ತಿ ಒದಗಿಸುವುದು. ಇದನ್ನು ಎಲ್ಲಾ ವರ್ಗದ ಜನರು ಮಾಡುವರು. ಇದರ ಬಗ್ಗೆ ಇರುವ ಕೆಲವೊಂದು ತಪ್ಪು ಅಭಿಪ್ರಾಯಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಜನನೇಂದ್ರಿಯವು ಹಸ್ತಮೈಥುನದಿಂದ ಕುಗ್ಗುವುದಿಲ್ಲ

ಜನನೇಂದ್ರಿಯವು ಹಸ್ತಮೈಥುನದಿಂದ ಕುಗ್ಗುವುದಿಲ್ಲ

ಪುರುಷರು ತಮ್ಮ ಶಿಶ್ನವನ್ನು ಅಲುಗಾಡಿಸುವುದರಿಂದ ಮತ್ತು ಮಹಿಳೆಯರು ಚಂದ್ರನಾಡಿಯನ್ನು ಉಜ್ಜುವುದರಿಂದ ಯಾವುದೇ ರೀತಿಯ ಹಾನಿಯಾಗದು. ಅದಾಗ್ಯೂ, ಸೆಕ್ಸ್ ಆಟಿಕೆ ಬಳಸಿಕೊಂಡು ಅಥವಾ ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಆಗ ಜನನೇಂದ್ರೀಯದ ಭಾಗದ ಚರ್ಮದಲ್ಲಿ ತುರಿಕೆ ಕಾಣಿಸಬಹುದು.

ಹಸ್ತಮೈಥುನ ಲೈಂಗಿಕ ಅನುಭವ ಹಾಳು ಮಾಡುವುದು

ಹಸ್ತಮೈಥುನ ಲೈಂಗಿಕ ಅನುಭವ ಹಾಳು ಮಾಡುವುದು

ಹೆಚ್ಚಿನ ಸಣ್ಣ ವಯಸ್ಸಿನಲ್ಲೇ ಹುಡುಗರು ಹಾಗೂ ಹುಡುಗಿಯರು ತಮಗೆ ಇದು ಹಸ್ತಮೈಥುನವೆಂದು ಅರಿವಿಲ್ಲದೆ ದೇಹದೊಂದಿಗೆ ಆಡುತ್ತಿದ್ದರು. ಇದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಇದು ಬಂಜೆತನಕ್ಕೆ ಕಾರಣವಾಗುವುದಿಲ್ಲ.

Most Read:ಆರು ವರ್ಷಗಳ ಕಾಲ ಸೆಕ್ಸ್ ನಡೆಸದೇ ವನವಾಸ ಅನುಭವಿಸಿದ ಜೋಡಿ!!

ಮಾನಸಿಕ ಸಮಸ್ಯೆ ಉಂಟು ಮಾಡುವುದು

ಮಾನಸಿಕ ಸಮಸ್ಯೆ ಉಂಟು ಮಾಡುವುದು

ಹಸ್ತಮೈಥುನ ಬಗ್ಗೆ ಸರಿಯಾದ ಮಾಹಿತಿ ಕೊಡದೆ ಇರುವ ಕಾರಣದಿಂದಾಗಿ ಹೆಚ್ಚಿನವರು ಇದನ್ನು ಮುಕ್ತವಾಗಿ ಚರ್ಚಿಸುವುದಿಲ್ಲ. ಇದರಿಂದಾಗಿ ಹಸ್ತಮೈಥುನ ಮಾಡುವಂತಹ ಜನರಲ್ಲಿ ಈ ಬಗ್ಗೆ ಕೀಳರಿಮೆ ಮೂಡುವುದು. ಆದರೆ ತಜ್ಞರ ಪ್ರಕಾರ ಹಸ್ತಮೈಥುನವು ಯಾವುದೇ ಮಾನಸಿಕ ಅಥವಾ ದೈಹಿಕ ಹಾನಿಯುಂಟು ಮಾಡಲ್ಲ.

ಇದು ಚಟವಾಗುವುದು

ಇದು ಚಟವಾಗುವುದು

ವಾರದಲ್ಲಿ 3-4ರಿಂದ ಸಲ ಹಸ್ತಮೈಥುನ ಮಾಡುವುದು ಸಾಮಾನ್ಯ. ಕೆಲವು ಮಂದಿ ಪ್ರತಿನಿತ್ಯ ಹೀಗೆ ಮಾಡುವರು. ಹಸ್ತಮೈಥುನ ಎಷ್ಟು ಸಲ ಮಾಡಬೇಕು ಎನ್ನುವ ಬಗ್ಗೆ ಯಾವುದೇ ನಿಯಮಗಳು ಇಲ್ಲ. ನಿಮ್ಮ ದೈನಂದಿನ ಜೀವನದ ಮೇಲೆ ಇದು ಪರಿಣಾಂ ಬೀರುತ್ತಿದ್ದರೆ ಆಗ ನೀವು ಸಮಾಲೋಚಕರನ್ನು ಭೇಟಿಯಾಗಿ. ಕೀಳರಿಮೆಯಿಂದಾಗಿ ನಿಮಗೆ ತೊಂದರೆಯಾಗುತ್ತಿದ್ದರೆ ಅದರಿಂದ ಹೊರಬನ್ನಿ.

ಹಸ್ತಮೈಥುನದಿಂದ ಅತಿಯಾದ ಕೂದಲು ಬರಲ್ಲ

ಹಸ್ತಮೈಥುನದಿಂದ ಅತಿಯಾದ ಕೂದಲು ಬರಲ್ಲ

ಹಸ್ತಮೈಥುನ ಬಗ್ಗೆ ಇರುವಂತಹ ಬಹುದೊಡ್ಡ ಸುಳ್ಳು ಇದಾಗಿದೆ. ಹಸ್ತಮೈಥುನದಿಂದಾಗಿ ಬೇಡದ ಜಾಗದಲ್ಲಿ ಕೂದಲು ಬೆಳೆಯುವುದಿಲ್ಲ.

ಇದು ಮೋಸ ಮಾಡುವುದಲ್ಲ

ಇದು ಮೋಸ ಮಾಡುವುದಲ್ಲ

ಸಂಬಂಧದಲ್ಲಿ ಇದ್ದರೂ ಹಸ್ತಮೈಥುನ ಮಾಡುವುದು ನೈಸರ್ಗಿಕ ಕ್ರಿಯೆ. ಇದರಿಂದ ನೀವು ಸಂಗಾತಿಗೆ ಮೋಸ ಮಾಡುತ್ತಲಿದ್ದೀರಿ ಅಥವಾ ಇದು ಚಟವಾಗುತ್ತಿದೆ ಎಂದು ಹೇಳಲು ಆಗಲ್ಲ. ಇನ್ನು ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳೂ ಕಾಣಿಸಬಹುದು.

English summary

Masturbation Myths That You Need to Stop Believing

Masturbation is not new. It was first heard of in the 18th century. And since time immemorial, people have seen it as morally incorrect and something that comes with ghastly side effects. Well, to put matters straight, it is normal to satisfy and please yourself sexually. And it is done by people of all age groups.
X
Desktop Bottom Promotion