ಪುರುಷರಿಗೂ ಸಂತಾನ ನಿಯಂತ್ರಣ ಮಾತ್ರೆ ಬಂದಿದೆಯಂತೆ!!

Posted By: Deepu
Subscribe to Boldsky

ಅನೈಚ್ಛಿಕ ಗರ್ಭ ಧರಿಸುವುದನ್ನು ತಪ್ಪಿಸಲು ದಶಕಗಳಿಂದಲೇ ಮಹಿಳೆಯರೇ ಸೇವಿಸುವ ಗುಳಿಗೆಗಳನ್ನು ಒದಗಿಸಲಾಗುತ್ತಿತ್ತು. ಈಗ, ಮಾರುಕಟ್ಟೆಯಲ್ಲಿ ಪುರುಷರು ಸೇವಿಸಬಹುದಾದ ಮಾತ್ರೆಯೊಂದು ಪ್ರವೇಶ ಪಡೆದಿದೆ ಎಂದು ಚಿಕಾಗೋ ನಗರದಲ್ಲಿ ನಡೆಸಿದ ಸಂಶೋಧನೆಯ ವಿವರಗಳಲ್ಲಿ ಪ್ರಕಟಿಸಲಾಗಿದೆ.

ಈ ಮಾತ್ರೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಕಂಡುಕೊಳ್ಳಲಾಗಿದೆ. ಸಂಶೋಧನೆಯಲ್ಲಿ ವಿವರಿಸಿದ ಪ್ರಕಾರ, ದಿನಕ್ಕೊಂದು ಈ ಮಾತ್ರೆಯನ್ನು ಸೇವಿಸಿದ ಪುರುಷರಲ್ಲಿ ಕೆಲವು ರಸದೂತಗಳ ಮಟ್ಟಗಳನ್ನು ಇತರ ದೀರ್ಘಾವಧಿಯ ಪರಿಣಾಮ ಬೀರುವ ಮಾತ್ರೆಗಳಂತೆಯೇ ಕಡಿಮೆ ಮಾಡುತ್ತದೆ.

ಈ ಮಾತ್ರೆ ಸೇವಿಸಿದವರಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಪ್ರಮಾಣದಲ್ಲಿ ಕೊರತೆಯಾಗದಿರುವುದನ್ನು ಅಥವಾ ಹೆಚ್ಚಾಗದಿರುವುದನ್ನೂ ಖಚಿತಪಡಿಸಿದೆ. ಸಧ್ಯಕ್ಕಿನ್ನೂ ಈ ಮಾತ್ರೆ ಪ್ರಾಯೋಗಿಕ ಹಂತದಲ್ಲಿದ್ದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡದೇ ಕೇವಲ ಸಂತಾನಫಲದ ಸಾಧ್ಯತೆಯನ್ನು ಮಾತ್ರವೇ ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ...

ಅಷ್ಟಕ್ಕೂ ಪುರುಷ ಸಂತಾನ ನಿಯಂತ್ರಣ ಮಾತ್ರೆ ಎಂದರೇನು?

ಅಷ್ಟಕ್ಕೂ ಪುರುಷ ಸಂತಾನ ನಿಯಂತ್ರಣ ಮಾತ್ರೆ ಎಂದರೇನು?

ಕಳೆದ ಐವತ್ತು ವರ್ಷಗಳಿಂದ ಗರ್ಭನಿರೋಧಕ ಆಯ್ಕೆಗಳಲ್ಲಿ ಪುರುಷರಿಗೆ ಅತಿ ಕಡಿಮೆ ಆಯ್ಕೆ ಇತ್ತು ಹಾಗೂ ಮಹಿಳೆಯರಿಗಾಗಿ ಹಲವಾರು ಆಯ್ಕೆಗಳನ್ನು ಒದಗಿಸಲಾಗಿದೆ. ಇದುವರೆಗೆ ಪುರುಷರಿಗಾಗಿ ಕಾಂಡೋಮ್ ಅಥವಾ ವ್ಯಾಸೆಕ್ಟಮಿ ಅಥವಾ ಸಂತಾನಹರಣ ಶಸ್ತ್ರಚಿಕಿತ್ಸೆಯೇ ಆಯ್ಕೆಯಾಗಿತ್ತು. ಈಗ ತಾತ್ಕಾಲಿಕ ಅವಧಿಗಾಗಿ ಬಳಸಲಾಗುವ ಮಾತ್ರೆಯನ್ನು ಪ್ರಸ್ತುತಪಡಿಸಲಾಗುತ್ತಿದೆ.

ಈ ಮಾತ್ರೆಗೇಕೆ ಹೆಚ್ಚಿನ ಪುರುಷರು ಒಲವು ತೋರುತ್ತಿದ್ದಾರೆ?

ಈ ಮಾತ್ರೆಗೇಕೆ ಹೆಚ್ಚಿನ ಪುರುಷರು ಒಲವು ತೋರುತ್ತಿದ್ದಾರೆ?

ಸಂಶೋಧನೆಯಲ್ಲಿ ಕಂಡುಕೊಂಡಂತೆ ದಿನವೂ ಸೇವಿಸಬಹುದಾದ ಈ ಮಾತ್ರೆಯನ್ನು ಪುರುಷರು ಆಯ್ಕೆ ಮಾಡಿಕೊಳ್ಳಲು ಕಾರಣ ಇದರ ಪರಿಣಾಮ ತಾತ್ಕಾಲಿಕವಾಗಿದ್ದು ಮುಂದೆ ಸಂತಾನದ ಅಪೇಕ್ಷೆಯಿದ್ದಲ್ಲಿ ಮಾತ್ರೆಯ ಸೇವನೆ ನಿಲ್ಲಿಸಿದರೆ ಸಾಕು, ಈ ಪರಿಣಾಮ ಹಿಂದೆ ಸರಿಯುತ್ತದೆ.

ಈ ಮಾತ್ರೆಗೇಕೆ ಹೆಚ್ಚಿನ ಪುರುಷರು ಒಲವು ತೋರುತ್ತಿದ್ದಾರೆ?

ಈ ಮಾತ್ರೆಗೇಕೆ ಹೆಚ್ಚಿನ ಪುರುಷರು ಒಲವು ತೋರುತ್ತಿದ್ದಾರೆ?

ಆ ಪ್ರಕಾರ ಸಂತಾನಪಡೆಯುವ ಅಥವಾ ಪಡೆಯದ ಆಯ್ಕೆಯನ್ನು ಪುರುಷರು ಹೊಂದಿರುತ್ತಾರೆ. ಈ ಸೇವೆಯನ್ನು ನೀಡುವ ಇತರ ವಿಧಾನಗಳಾದ ಇಂಜೆಕ್ಷನ್ ಚುಚ್ಚುವಿಕೆ ಅಥವಾ ಲೇಪಿಸಿಕೊಳ್ಳಬಹುದಾದ ಜಾರುಕದ್ರವಗಳನ್ನು ಹೆಚ್ಚಿನ ಪುರುಷರು ಇಷ್ಟಪಡುವುದಿಲ್ಲ.

ಈ ಮಾತ್ರೆ ಸೇವಿಸದರೆ ಏನಾಗುತ್ತದೆ?

ಈ ಮಾತ್ರೆ ಸೇವಿಸದರೆ ಏನಾಗುತ್ತದೆ?

ಒಂದು ಅಥವಾ ಎರಡು ಮಾತ್ರೆಗಳನ್ನು ಸೇವಿಸಿದ ತಕ್ಷಣ ಏನೂ ಆಗುವುದಿಲ್ಲ. ಆದರೆ ಈ ಮಾತ್ರೆಯ ಸೇವನೆ ನಿತ್ಯವೂ, ಒಂದು ನಿಗದಿತ ಅವಧಿಯವರೆಗೆ ಸತತವಾಗಿದ್ದರೆ ಮಾತ್ರ ಇದರ ಪರಿಣಾಮ ಸೂಕ್ತವಾಗಿರುತ್ತದೆ. ಆದರೆ ಈ ಮಾತ್ರೆಯ ಪ್ರಮಾಣ ವೈದ್ಯರು ನಿಗದಿ ಪಡಿಸಿದಕ್ಕಿಂತಲೂ ಹೆಚ್ಚು ಕಾಲ ಸೇವಿಸಿದರೆ ಪುರುಷರ ಸ್ತನಗಳು ಬೆಳೆಯುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಮುಖದ ಕೂದಲ ದಟ್ಟಣೆ ಕಡಿಮೆಯಾಗುವುದು ಹಾಗೂ ವೃಷಣಗಳು ಕುಗ್ಗುವುದು ಮೊದಲಾದ ಅಡ್ಡ ಪರಿಣಾಮಗಳು ಎದುರಾಗಬಹುದು.

ಇತರ ವಿಧಾನಗಳೇಕೆ ಬೇಡ?

ಇತರ ವಿಧಾನಗಳೇಕೆ ಬೇಡ?

ಇತರ ವಿಧಾನಗಳನ್ನು ಹೆಚ್ಚಿನ ಪುರುಷರು ಇಷ್ಟಪಡುವುದಿಲ್ಲ. ಏಕೆಂದರೆ ಈ ಮೂಲಕ ಅವರು ಪರಿಪೂರ್ಣವಾದ ಸುಖವನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ. ಉದಾಹರಣೆಗೆ ಕಾಂಡೊಂ ಬಳಕೆಯಿಂದ ಸಂವೇದನೆ ಪೂರ್ಣವಾಗಿ ಸಿಗುವುದಿಲ್ಲ ಹಾಗೂ ವ್ಯಾಸೆಕ್ಟಮಿ ಎಂದರೆ ಒಂದು ಪೂರ್ಣ ಪ್ರಮಾಣದ ಶಸ್ತ್ರಚಿಕಿತ್ಸೆಯೇ ಆಗಿದೆ.

ಇತರ ವಿಧಾನಗಳೇಕೆ ಬೇಡ?

ಇತರ ವಿಧಾನಗಳೇಕೆ ಬೇಡ?

ಅಲ್ಲದೇ ಈ ವಿಧಾನಗಳು ಲೈಂಗಿಕ ರೋಗಗಳಿಂದ ಸಂಪೂರ್ಣವಾದ ಸುರಕ್ಷತೆ ಒದಗಿಸುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಬದಲಿಗೆ ಈ ಮಾತ್ರೆಗಳು ಹೆಚ್ಚು ಸುರಕ್ಷಿತವಾಗಿದ್ದು ಕೆಲವಾರು ಕಾರಣಗಳಿಂದಾಗಿ ಉತ್ತಮವಾದ ಪರ್ಯಾಯ ಆಯ್ಕೆಯಾಗಿದೆ.

ಇತರ ವಿಧಾನಗಳೇಕೆ ಬೇಡ?

ಇತರ ವಿಧಾನಗಳೇಕೆ ಬೇಡ?

ಮೊದಲಿಗೆ, ಇದು ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಂತಾನ ನಿಯಂತ್ರಣದ ನಿರ್ಧಾರದಲ್ಲಿ ಸಮಾನವಾಗಿ ಪಾಲುದಾರರಾಗಿಸುತ್ತದೆ. ಅಲ್ಲದೇ ಕೆಲವೊಮ್ಮೆ ಮಹಿಳೆಯರು ಗರ್ಭನಿರೋಧಕ ವ್ಯವಸ್ಥೆಗಳನ್ನು ಹೆಚ್ಚು ಕಾಲ ಮುಂದುವರೆಸಿದ್ದ ಕಾರಣ ಎದುರಾಗಬಹುದಾದ ಪರಿಣಾಮಗಳಿಂದ ಈಗ ಬಿಡುಗಡೆ ಪಡೆಯಬಹುದು.

ಈ ಮಾತ್ರೆಗಳಲ್ಲಿರುವ ಅಡ್ಡ ಪರಿಣಾಮಗಳು

ಈ ಮಾತ್ರೆಗಳಲ್ಲಿರುವ ಅಡ್ಡ ಪರಿಣಾಮಗಳು

ಈ ಮಾತ್ರೆಗಳಲ್ಲಿ ಪ್ರಯೋಜನಗಳಿರುವಂತೆಯೇ ಕೆಲವು ಗಂಭೀರವಾದ ಅಡ್ಡ ಪರಿಣಾಮಗಳೂ ಇವೆ. ಪ್ರಮುಖವಾಗಿ ಪುರುಷರಲ್ಲಿ ಖಿನ್ನತೆ, ಹೃದಯ ಬಡಿತದಲ್ಲಿ ಅಸಾಮಾನ್ಯ ಏರಿಕೆ, ಭಾವನೆಗಳಲ್ಲಿ ವಿಪರೀತ ಬದಲಾವಣೆ, ಸ್ನಾಯುಗಳಲ್ಲಿ ನೋವು, ಲೈಂಗಿಕ ಆಸಕ್ತಿಯಲ್ಲಿ ಹೆಚ್ಚಳ, ಮುಖದಲ್ಲಿ ಮೊಡವೆ ಮೊದಲಾದವು ಎದುರಾಗಬಹುದು.

ಈ ಮಾತ್ರೆಗಳಲ್ಲಿರುವ ಅಡ್ಡ ಪರಿಣಾಮಗಳು

ಈ ಮಾತ್ರೆಗಳಲ್ಲಿರುವ ಅಡ್ಡ ಪರಿಣಾಮಗಳು

ಆದರೆ ಈ ಮಾತ್ರೆಗಳನ್ನು ನಿತ್ಯವೂ ಸುರಕ್ಷಿತವಾಗಿ ಸೇವಿಸುವಂತಾಗಲು ಸಾಧ್ಯವಾಗುವಂತೆ ಸಂಶೋಧನೆಗಳು ಇನ್ನೂ ಮುಂದುವರೆದಿದೆ ಹಾಗೂ ನಿತ್ಯವೂ ಸೇವಿಸುವ ಮೂಲಕ ವೀರ್ಯಾಣುಗಳ ಉತ್ಪನ್ನವನ್ನೇ ಆ ದಿನದ ಮಟ್ಟಿಗೆ ಸ್ಥಗಿತಗೊಳಿಸಲು ಸಾದ್ಯವೇ ಎಂಬುದನ್ನೂ ಪರಿಗಣಿಸಲಾಗುತ್ತಿದೆ.

 

English summary

MALE BIRTH CONTROL PILL FOUND TO BE EFFECTIVE AND CHEAP

The new male birth control pill is found to be an experimental oral contraceptive to be safe in men with hormone responses consistent with effective contraception. The pill would allow men and women to share contraception responsibly and equally. It could also alleviate women's concerns over female birth control's long-term impact on fertility.