For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್​ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು

By Hemanth
|

ದೇಹದ ಬಾಹ್ಯ ಅಂಗಗಳ ಬಗ್ಗೆಯೂ ನಾವು ಕಾಳಜಿ ವಹಿಸಿಕೊಳ್ಳುವೆವು. ಅದೇ ದೇಹದೊಳಗಿನ ಅಂಗಗಳು ನಮಗೆ ತಿಳಿಯದೆ ಇರುವ ಕಾರಣ ಅದರ ಗೋಜಿಗೆ ಹೋಗುವುದಿಲ್ಲ. ನಾವು ತಿನ್ನುವ ಆಹಾರದಿಂದ ಈ ಅಂಗಗಳು ಪೋಷಕಾಂಶಗಳನ್ನು ಪಡೆದುಕೊಂಡು ತಮ್ಮ ಕಾರ್ಯನಿರ್ವಹಣೆ ಮಾಡುವುದು. ಇಂತಹ ಪ್ರಮುಖ ಅಂಗವೆಂದರೆ ಯಕೃತ್(ಲಿವರ್).

ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ನಿರ್ವಹಣೆ ಮಾಡಲು, ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಂಡು ವಿಷಕಾರಿ ಅಂಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುವುದು. ಇದು ಬಿಡುಗಡೆ ಮಾಡುವಂತಹ ಪಿತ್ತರಸವು ಜೀರ್ಣಕ್ರಿಯೆ ವೇಳೆ ಕೊಬ್ಬು ಕರಗಿಸುವುದು. ಮನುಷ್ಯ ಜೀವಿಸಬೇಕಾದರೆ ಯಕೃತ್ ಸರಿಯಾಗಿ ಕಾರ್ಯನಿರ್ವಹಿಸಬೇಕು. ಕೆಲವೊಂದು ಮನೆಮದ್ದುಗಳಿಂದ ಯಕೃತ್ ನ ವೈಫಲ್ಯ ಮತ್ತು ಕೆಲವೊಂದು ಕಾಯಿಲೆಗಳನ್ನು ನಿವಾರಣೆ ಮಾಡಬಹುದು ಎನ್ನುವುದು ನಮ್ಮ ಅದೃಷ್ಟ ಎನ್ನಬಹುದು. ಇದರ ಬಗ್ಗೆ ಈ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಯಕೃತ್ ಸತ್ತ ಕೋಶಗಳನ್ನು ಪುನರುಜ್ಜೀವನಗೊಳಿಸಿ, ಮರಳಿ ಕಾರ್ಯನಿರ್ವಹಿಸುವಂತೆ ಮಾಡುವುದು. ಇದು ಯಕೃತ್ ನ ದೊಡ್ಡ ಗುಣಗಳಲ್ಲಿ ಒಂದು. ಆದರೆ ಶೇ. 75ರಷ್ಟು ಯಕೃತ್ ವೈಫಲ್ಯಕ್ಕೊಳಗಾದರೆ ಆಗ ಅದು ಕಾರ್ಯನಿರ್ವಹಿಸುವುದು ತುಂಬಾ ಕಷ್ಟ. ಆಲ್ಕೋಹಾಲ್ ಸೇವನೆ, ವೈರಲ್ ಸೋಂಕು, ಕೆಲವೊಂದು ಔಷಧಿಗಳ ಸೇವನೆ, ವಿಷಕಾರಿ ಅಂಶಗಳು ಇತ್ಯಾದಿ ಯಕೃತ್ ನ ಹಾನಿಗೆ ಕಾರಣವಾಗುವುದು. ಚರ್ಮ ಮತ್ತು ಉಗುರು ಹಳದಿಯಾಗುವುದು, ಕಾಮಾಲೆ, ವಿಟಮಿನ್ ಮತ್ತು ಖನಿಜಾಂಶಗಳ ಕೊರತೆ, ವಾಕರಿಕೆ, ವಾಂತಿ, ನಿಶ್ಯಕ್ತಿ, ಆಯಾಸ, ಅಜೀರ್ಣ ಮತ್ತು ನಿತ್ರಾಣವು ಯಕೃತ್ ನ ವೈಫಲ್ಯದ ಲಕ್ಷಣಗಳಲ್ಲಿ ಪ್ರಮುಖವಾಗಿದೆ. ಯಕೃತ್ ನ ಆರೋಗ್ಯ ಮತ್ತು ಅದರ ಕೆಲವೊಂದು ರೋಗಗಳಿಗೆ ಕೆಲವೊಂದು ಮನೆಮದ್ದುಗಳ ಬಗ್ಗೆ ತಿಳಿಯಲು ಈ ಲೇಖನ ಓದುವುದನ್ನು ಮುಂದುವರಿಸಿ.......

ಸೇಬು ಮತ್ತು ಎಲೆ ತರಕಾರಿಗಳು

ಸೇಬು ಮತ್ತು ಎಲೆ ತರಕಾರಿಗಳು

ಯಕೃತ್ ನಲ್ಲಿ ಪಿತ್ತರಸದ ಸ್ರವಿಸುವಿಕೆಯನ್ನು ಇವು ಹೆಚ್ಚಿಸುವುದು. ಇದರಿಂದ ಪಿತ್ತರಸದ ಮೂಲಕ ವಿಷವು ಹೊರಹೋಗುವುದು. ಯಕೃತ್ ಹಾನಿಯಾಗುವುದನ್ನು ಇದು ತಡೆಯುವುದು.

ಬಸಲೆ ಮತ್ತು ಕ್ಯಾರೆಟ್ ಜ್ಯೂಸ್

ಬಸಲೆ ಮತ್ತು ಕ್ಯಾರೆಟ್ ಜ್ಯೂಸ್

ಯಕೃತ್ ಗೆ ಆಗಿರುವ ಹಾನಿಯನ್ನು ತಡೆಯಲು ಇದು ತುಂಬಾ ನೈಸರ್ಗಿಕವಾದ ವಿಧಾನವಾಗಿದೆ. ಬಸಲೆ ಮತ್ತು ಕ್ಯಾರೆಟ್ ನ್ನು ಜತೆಯಾಗಿ ಜ್ಯೂಸ್ ಮಾಡಿ. ಇದನ್ನು ದಿನಕ್ಕೆ ಎರಡು ಸಲ ಸೇವಿಸಿ.

ಅವಕಾಡೋ ಮತ್ತು ವಾಲ್ ನಟ್ಸ್

ಅವಕಾಡೋ ಮತ್ತು ವಾಲ್ ನಟ್ಸ್

ಇದರಲ್ಲಿ ಗ್ಲುಟಾಥಿಯೋನ್ ಎನ್ನುವ ಅಂಶವಿದ್ದು, ಇದು ಯಕೃತ್ ಗೆ ಹಾನಿಯಾಗದಂತೆ ತಡೆಯುವುದು. ಇದರಿಂದ ಯಕೃತ್ ನಲ್ಲಿರುವ ವಿಷಯ ಹೊರಹೋಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಆಗುವುದು.

ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ಇದು ಯಕೃತ್ ನ ಕಾಯಿಲೆಗಳ ನಿವಾರಣೆಗೆ ಮತ್ತು ಅದರ ಕಾರ್ಯನಿರ್ವಹಣೆ ಸರಿಯಾಗಿ ಆಗಲು ಬಳಸಲಾಗುವುದು. ಪಪ್ಪಾಯಿ ಜ್ಯೂಸ್ ಗೆ ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿದರೆ ಅದರು ರುಚಿ ಹೆಚ್ಚು ಮಾಡುವುದು. ಇದನ್ನು ದಿನದಲ್ಲಿ ಎರಡು ಸಲ ಕುಡಿಯಿರಿ.

ಅಗಸೆ ಬೀಜಗಳು

ಅಗಸೆ ಬೀಜಗಳು

ಇದು ಯಕೃತ್ ನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಇದು ಹಾಗೆ ತಿನ್ನಬಹುದು ಅಥವಾ ಸಲಾಡ್ ಗೆ ಹಾಕಿಕೊಂಡು ಸೇವಿಸಬಹುದು. ಇದು ಯಕೃತ್ ನ ಕಾಯಿಲೆಗಳ ನಿವಾರಣೆಗೆ ನೈಸರ್ಗಿಕ ವಿಧಾನ.

ಅರಿಶಿನ

ಅರಿಶಿನ

ಇದು ಉರಿಯೂತ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಯಕೃತ್ ನಲ್ಲಿರುವ ವಿಷ ತೆಗೆಯಲು ಇದು ತುಂಬಾ ಪರಿಣಾಮಕಾರಿ ಆ್ಯಂಟಿಆಕ್ಸಿಡೆಂಟ್. ಯಕೃತ್ ಗೆ ಆಗಿರುವಂತಹ ವೈರಲ್ ಸೋಂಕಿಗೆ ಇದು ತುಂಬಾ ಪರಿಣಾಮಕಾರಿ. ಇದು ಹೆಪಟಿಟಿಸ್ ಚಿಕಿತ್ಸೆಗೆ ನರವಾಗುವುದು. ಒಂದು ಚಮಚ ಅರಶಿನವನ್ನು ಜೇನುತುಪ್ಪ ಮತ್ತು ಹಾಲಿನೊಂದಿಗೆ ಹಾಕಿ ಪ್ರತಿನಿತ್ಯ ಕುಡಿಯಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ಇದರಲ್ಲಿ ವಿಟಮಿನ್ ಸಿ ಇದೆ ಮತ್ತು ಇದು ಯಕೃತ್ ಗೆ ಹಾಗಿರುವ ಹಾನಿ ತಪ್ಪಿಸುವುದು. ಇದರ ಯಕೃತ್ ನ ಕಾರ್ಯ ಮರುಸ್ಥಾಪಿಸಲು ನೆರವಾಗುವುದು. ನೆಲ್ಲಿಕಾಯಿ ತಿನ್ನಬಹುದು ಅಥವಾ ದಿನದಲ್ಲಿ ಹಲವಾರು ಸಲ ಇದರ ಜ್ಯೂಸ್ ಕುಡಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅತ್ಯುತ್ತಮ ಆಂಟಿ ಆಕ್ಸಿಡೆಂಟುಗಳಿದ್ದು ಯಕೃತ್ ನ ಸ್ವಚ್ಛತೆಗೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಆಲಿಸಿನ್ ಮತ್ತು ಸೆಲೆನಿಯಂ ಎಂಬ ಪೋಷಕಾಂಶಗಳು ಯಕೃತ್ ನ ಕಲ್ಮಶಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಗಿಡಮೂಲಿಕೆ ಮತ್ತು ತರಕಾರಿಗಳು

ಗಿಡಮೂಲಿಕೆ ಮತ್ತು ತರಕಾರಿಗಳು

ಹಸಿರೆಲೆ ತರಕಾರಿಗಳು ಯಕೃತ್ ಗೆ ತುಂಬಾ ಒಳ್ಳೆಯದು. ನಾವು ತಿನ್ನುವಂತಹ ಆಹಾರ ಮತ್ತು ವಾತಾವರಣದಿಂದ ದೇಹ ಸೇರುವ ಲೋಹ, ರಾಸಾಯನಿಕ ಮತ್ತು ಕೀಟನಾಶಗಳನ್ನು ಇದು ತಟಸ್ಥಗೊಳಿಸುವುದು. ಬಸಲೆ, ಬೀಟ್ ರೂಟ್, ಬ್ರಾಕೋಲಿ, ಹೂಕೋಸು ಮತ್ತು ಬ್ರಸಲ್ಸ್ ಮೊಗ್ಗುಗಳು ತುಂಬಾ ಒಳ್ಳೆಯದು.

ಚಕ್ಕೋತ

ಚಕ್ಕೋತ

ಚಕ್ಕೋತ (Grapefruit) ನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹಾಗೂ ಯಕೃತ್ ಸ್ರವಿಸುವ ಗ್ಲುಟಾಥಿಯೋನ್ ಎಂಬ ಪೋಷಕಾಂಶವೂ ಇದೆ. ಒಂದು ಪ್ರಮಾಣದ ಚಕ್ಕೋತದಲ್ಲಿ 70 mg ನಷ್ಟು ಗ್ಲುಟಾಥಿಯೋನ್ ಇದೆ. ಇದು ಯಕೃತ್ ನ ವಿಷಕಾರಿ ವಸ್ತುಗಳನ್ನು ನಿವಾರಿಸುವ ಕಿಣ್ವಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಯಕೃತ್ ನ ಆರೋಗ್ಯ ಕಾಪಾಡಲು ಈ ಆಹಾರ ಅತ್ಯುತ್ತಮವಾಗಿದೆ.

ಅಕ್ರೋಟು

ಅಕ್ರೋಟು

ಅಕ್ರೋಟುಗಳಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಉತಮ ಪ್ರಮಾಣದಲ್ಲಿವೆ ಹಾಗೂ ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳೂ ಉತ್ತಮ ಪ್ರಮಾಣದಲ್ಲಿವೆ ಹಾಗೂ ಇವು ಯಕೃತ್ ನಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ಆರೋಗ್ಯಕರ ಕೊಬ್ಬುಗಳು ಯಕೃತ್ ನ ಜೀವಕೋಶಗಳ ಹೊರಪದರವನ್ನು ಇನ್ನಷ್ಟು ದೃಢಗೊಳಿಸಲು ನೆರವಾಗುತ್ತವೆ.

ಸೇಬು

ಸೇಬು

ಸೇಬುಹಣ್ಣಿನಲ್ಲಿ ಪೆಕ್ಟಿನ್ ಎಂಬ ಪೋಷಕಾಂಶ ಸಮೃದ್ಧವಾಗಿವೆ, ಅದು ದೇಹವನ್ನು ಶುದ್ಧೀಕರಿಸುವುದು ಮತ್ತು ಜೀರ್ಣಾಂಗದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.ತನ್ಮೂಲಕ ಇದು ಯಕೃತ್ತಿನ ಮೇಲಿನ ಭಾರವನ್ನು ತಡೆಯಲು ಸಹಾಯ ಮಾಡುತ್ತದೆ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ವಿಟಮಿನ್ ಸಿ, ಶರ್ಕರ ಪಿಷ್ಟ (ಪೆಕ್ಟಿನ್), ಆಂಟಿಯೋಡ್ಯಾಂಟ್ಸ್ ಅಂಶ ಹೆಚ್ಚು ಇರುವುದರಿಂದ ದ್ರಾಕ್ಷಿಹಣ್ಣು ಲಿವರ್ ಉತ್ತಮವಾಗಿ ಕೆಲಸ ಮಾಡಲು ಇರುವ ಅತ್ಯುತ್ತಮ ಹಣ್ಣುಗಳಲ್ಲೊಂದು. ಇದಲ್ಲದೇ ಗ್ಲುಟತೋನ್, ಶಕ್ತಿಶಾಲಿ ಅಂಶವನ್ನು ಹೊಂದಿರುವ ಆಂಟಿಯೊಡೆಂಟ್, ಕೂಲಂಕುಷವಾಗಿ ಲಿವರ್ ಭಾಗಕ್ಕೆ ಸರಬರಾಜು ಆಗುತ್ತದೆ. ದ್ರಾಕ್ಷಿಹಣ್ಣಿನಲ್ಲಿರುವ ಕೆಲವೊಂದು ಅಂಶಗಳಿಂದ ಇದು ಕೊಬ್ಬಿನಾಂಶ ಕಡಿಮೆ ಮಾಡಲೂ ಸಹಾಯಕಾರಿ.

ಹಸಿರು ಟೀ

ಹಸಿರು ಟೀ

ಹಸಿರು ಟೀಯನ್ನು (ಗ್ರೀನ್ ಟೀ) ದಿನಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿರುವ ಕಲ್ಮಶ ಮತ್ತು ಕೊಬ್ಬಿನಾಂಶ ಹೊರಹೋಗುವ ಸಮಯದಲ್ಲಿ ಉತ್ವತ್ತಿಯಾಗುವ ಹೈಡ್ರೇಶನ್ ತಾಪದ ಪರಿಣಾಮದಿಂದ ಹೊರಬರಬಹುದು. 2002ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಹಸಿರು ಟೀನಲ್ಲಿರುವ ಕ್ಯಾಚಿನ್ಸ್ 2002ರ ಅಧ್ಯಯನವೊಂದು ಹಸಿರು ಚಹಾದಲ್ಲಿರುವ ಕ್ಯಾಟ್ಚಿನ್ಸ್ ಯಕೃತ್ತು ಲಿಪಿಡ್ ನ ಅಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದರು. ಇದು ಲಿವರ್ ನಲ್ಲಿರುವ ಕೊಬ್ಬಿನಾಂಶ ಶೇಖರವಾಗುವುದನ್ನು ತಡೆಗಟ್ಟುತ್ತದೆ. ಈ ಆರೋಗ್ಯದಾಯಕ ಪಾನೀಯ ದೇಹದಲ್ಲಿರುವ ಕಲ್ಮಶಗಳನ್ನು ಮತ್ತು ಮದ್ಯಪಾನ ಮುಂತಾದವುಗಳಿಂದಾಗುವ ದುಷ್ಪರಿಣಾಮಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಟೊಮೇಟೊ

ಟೊಮೇಟೊ

ಇದರಲ್ಲಿಯೂ glutathione ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಇದರಲಿರುವ ಆಂಟಿ ಆಕ್ಸಿಡೆಂಟುಗಳು ಯಕೃತ್‌ನ ಸ್ವಚ್ಛತೆಗೆ ನೆರವಾಗುತ್ತದೆ. ಅಲ್ಲದೇ ಟೊಮಾಟೋದಲ್ಲಿರುವ ಕೆಲವು ಕಣಗಳು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ.

ಬೀಟ್ರೂಟ್

ಬೀಟ್ರೂಟ್

ಲಿವರ್ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಬೀಟ್ರೂಟ್ ಕೂಡಾ ಒಂದು ಒಳ್ಳೆಯ ತರಕಾರಿ. ಭೂಮಿಯ ಕೆಳಗೆ ಬೆಳೆಯುವ ಗೆಡ್ಡೆಗೆಣಸು ಇದಾಗಿರುವುದರಿಂದ ಕ್ರೋಟೀನ್ ಅಂಶ ಇದರಲ್ಲಿ ಹೆಚ್ಚಿರುತ್ತದೆ, ಬೀಟ್ರೂಟ್ ಒಟ್ಟಾರೆಯಾಗಿ ಲಿವರ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಉತ್ತಮ ತರಕಾರಿಯಲ್ಲೊಂದು.

English summary

Make Your Liver Healthy With These Home Remedies

Liver is the main organ of metabolism in the body. It metabolises all essential nutrients and removes the toxins from the body. It produces bile juice, which helps in the digestion of fats. This organ is important for our survival. Fortunately, there are effective and safe home remedies for liver failure or liver diseases that we will share with you today. Take a look at some effective home remedies that make your liver healthy and also treat liver diseases.
X
Desktop Bottom Promotion