ಈ ಆಹಾರಗಳಿಗೆ ಎಕ್ಸ್‎ಪೈರಿ ಡೇಟ್‌ಗಳೇ ಇಲ್ಲ! ಯಾವಾಗ ಬೇಕಿದ್ದರೂ ಬಳಸಿಕೊಳ್ಳಬಹುದು

Posted By: Hemanth
Subscribe to Boldsky

ತಿನ್ನುವ ಆಹಾರವು ತಾಜಾವಾಗಿದ್ದರೆ ಅದರಿಂದ ಆರೋಗ್ಯವು ಚೆನ್ನಾಗಿರುವುದು. ಇದರಿಂದ ತಾಜಾ ಆಹಾರದ ಕಡೆ ಜನರು ಗಮನಹರಿಸುವರು. ಬೇಸಿಗೆ ಕಾಲ ಬರುತ್ತಿರುವಂತೆ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಟ್ಟು ಕಾಪಾಡುವುದು ತುಂಬಾ ಕಠಿಣ ಕೆಲಸ. ಪ್ಯಾಕೆಟ್ ಗಳಲ್ಲಿ ಸಿಗುವಂತಹ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟುಕೊಂಡರೆ ಅದರಿಂದ ಸಮಸ್ಯೆಗೆ ಪರಿಹಾರ ಸಿಗದು. ಇದರಿಂದ ಹೆಚ್ಚಾಗಿ ಆಹಾರವು ವ್ಯರ್ಥವಾಗುವುದು. ಇಷ್ಟು ಮಾತ್ರವಲ್ಲದೆ ಫ್ರಿಡ್ಜ್‌ನಲ್ಲಿ ಆಹಾರ ಇಡುವುದರಿಂದ ಅದರಲ್ಲಿ ಇರುವಂತಹ ಪೋಷಕಾಂಶಗಳು ಕೂಡ ನಷ್ಟವಾಗುವುದು. ಪ್ಯಾಕೆಟ್‌ಗಳಲ್ಲಿ ಆಹಾರ ಕೆಡುವ ದಿನಾಂಕಗಳನ್ನು ಕೂಡ ಹಾಕಿರುವರು.

ಎಕ್ಸ್‎ಪೈರಿ ಡೇಟ್ ಮುಗಿದಿದ್ದರೂ ಇವು ಹಾಳಾಗುವುದಿಲ್ಲವಂತೆ!

ಇದರ ಬಳಿಕ ಅದರ ಸೇವನೆ ಮಾಡಬಾರದು. ಆದರೆ ಕೆಲವೊಂದು ಆಹಾರಗಳಿಗೆ ಯಾವುದೇ ರೀತಿಯ ಎಕ್ಸ್‎ಪೈರಿ ಎನ್ನುವುದು ಇರುವುದಿಲ್ಲ. ಇದನ್ನು ನಿಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಇದು ದೀರ್ಘ ಬಾಳಿಕೆ ಬರುವಂತಹ ಆಹಾರಗಳು.

ದೀರ್ಘ ಬಾಳಿಕೆ ಹಾಗೂ ಕೆಡದೇ ಇರುವ ಹತ್ತು ಆಹಾರಗಳು ಯಾವುದು ಎಂದು ತಿಳಿಯುವ.

ಬೆಳ್ತಿಗೆ ಅಕ್ಕಿ

ಬೆಳ್ತಿಗೆ ಅಕ್ಕಿ

ಅಕ್ಕಿಯನ್ನು ನಾವು ದೀರ್ಘ ಕಾಲ ತನಕ ಬಳಸಿಕೊಳ್ಳಬಹುದು. ಗಾಳಿಯಾಡದೆ ಇರುವ ಡಬ್ಬದಲ್ಲಿ ಹಾಕಿಟ್ಟರೆ ಬೆಳ್ತಿಗೆ ಅಕ್ಕಿಯು ಸುಮಾರು 30 ವರ್ಷ ಕಾಲ ಕೆಡದೆ ಇರುವುದು. ತಾಪಮಾನವು 40 ಡಿಗ್ರಿಗಿಂತ ಕಡಿಮೆ ಇರುವ ಜಾಗದಲ್ಲಿ ಇದನ್ನು ಸಂಗ್ರಹಿಸಿ ಇಡಬೇಕು. ಇದರಿಂದ ಬೆಳ್ತಿಗೆ ಅಕ್ಕಿ ಹೆಚ್ಚಿದ್ದರೆ ಚಿಂತೆ ಮಾಡಬೇಡಿ.

ಹಾಲಿನ ಹುಡಿ

ಹಾಲಿನ ಹುಡಿ

ಹಾಲಿನ ಹುಡಿಯನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಹಾಲು ಒಣಗುವಂತೆ ಮಾಡಿ ತಯಾರಿಸಲಾಗುವುದು. ಹಾಲಿಗಿಂತ ಹಾಲಿನ ಹುಡಿಗೆ ಹೆಚ್ಚಿನ ಬಾಳಿಕೆಯಿದೆ ಮತ್ತು ಇದನ್ನು ಫ್ರಿಡ್ಜ್ ನಲ್ಲಿ ಇಡಬೇಕಾಗಿಲ್ಲ.

ಒಣಗಿಸಿದ ಕಾಳುಗಳು

ಒಣಗಿಸಿದ ಕಾಳುಗಳು

ಒಣಗಿಸಿರುವ ಕಾಳುಗಳಾದ ಕಿಡ್ನಿ ಬೀನ್ಸ್, ಬಟಾಣಿ, ಸೋಯಾಬೀನ್ ಇತ್ಯಾದಿಗಳು ತುಂಬಾ ರುಚಿಕರವಾಗಿರುವುದು. ಇವುಗಳಿಗೆ ಬಾಳಿಕೆ ಹೆಚ್ಚಿರುವುದು ಮತ್ತು ಬೇಗನೆ ಕೆಡುವುದಿಲ್ಲ. ಬೇಯಿಸಿರುವ ಕಾಳುಗಳನ್ನು ಕೂಡ ದೀರ್ಘ ಕಾಲ ತೆಗೆದಿಡಬಹುದು ಮತ್ತು ಇದನ್ನು ಕೋಳಿ ಮತ್ತು ಸಲಾಡ್ ಗೆ ಬಳಸಬಹುದು.

ಸೋಯಾ ಸಾಸ್

ಸೋಯಾ ಸಾಸ್

ಚೈನೀಸ್ ಅಡುಗೆ ಮಾಡಲು ಹೆಚ್ಚಾಗಿ ಸೋಯಾ ಸಾಸ್ ಬಳಕೆ ಮಾಡಲಾಗುತ್ತದೆ. ಇದು ಆಹಾರಕ್ಕೆ ಹೆಚ್ಚಿನ ರುಚಿ ಮತ್ತು ಸುವಾಸನೆ ನೀಡುವುದು. ಫ್ರಿಡ್ಜ್ ನಲ್ಲಿ ಒಂದು ಬಾಟಲಿ ಸೋಯಾವನ್ನು ಇಟ್ಟರೆ ಅದು ವರ್ಷಗಳ ಕಾಲ ಕೆಡದೇ ಇರುವುದು. ಸೋಯಾ ಸಾಸ್ ನ್ನು ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಬಳಸುವ ಕಾರಣದಿಂದ ಇದನ್ನು ಫ್ರಿಡ್ಜ್ ನಲ್ಲಿ ಇಡಬೇಕೆಂದಿಲ್ಲ.

ಮೇಪಲ್ ಸೀರಪ್

ಮೇಪಲ್ ಸೀರಪ್

ಸಾವಯವವಾಗಿರುವ ಮೇಪಲ್ ಸೀರಪ್ ದೀರ್ಘ ಕಾಲದವರೆಗೆ ಕೆಡದೆ ಇರುವುದು. ಯಾಕೆಂದರೆ ಇದು ಶಿಲೀಂಧ್ರದ ಬೆಳವಣಿಗೆ ಆಗದಂತೆ ತಡೆಯುವುದು. ನಿಮ್ಮಲ್ಲಿ ಒಂದು ಬಾಟಲಿ ಮೇಪಲ್ ಸೀರಪ್ ಇದ್ದರೆ ಅದನ್ನು ಬಳಕೆ ಮಾಡುವ ಬಗ್ಗೆ ನಿಶ್ಚಯವಿಲ್ಲದೆ ಇದ್ದರೆ ಅದನ್ನು ಬಿಸಿ ಮಾಡಿಕೊಂಡು ಮೇಲಿನ ಭಾಗದ ಕಲ್ಮಶ ತೆಗೆದು ಶಿಲೀಂಧ್ರ ಬರದಂತೆ ಮತ್ತೆ ಬಾಟಲಿಗೆ ತುಂಬಿಡಿ.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವು ನೈಸರ್ಗಿಕ ವಸ್ತುವಾಗಿರುವ ಕಾರಣದಿಂದ ಇದು ಕೆಡುವುದಿಲ್ಲ. ಕೆಡದೇ ಇರುವಂತಹ ಆಹಾರಗಳಲ್ಲಿ ಜೇನುತುಪ್ಪ ಮೊದಲ ಸ್ಥಾನದಲ್ಲಿದೆ. ಜೇನುತುಪ್ಪ ತಯಾರಿಸಲು ಜೇನುಹುಳುಗಳು ಬಳಸುವ ವಿಧಾನವು ಇದರ ದೀರ್ಘಬಾಳಿಕೆಗೆ ಕಾರಣವಾಗಿದೆ.

ಸಕ್ಕರೆ

ಸಕ್ಕರೆ

ಸಕ್ಕರೆಯು ಬ್ಯಾಕ್ಟೀರಿಯಾದ ಬೆಳವಣಿಗೆಗೆ ನೆರವಾಗದೆ ಇರುವ ಕಾರಣದಿಂದ ಅದು ಕೆಡುವುದಿಲ್ಲ. ಆದರೆ ತಾಜಾ ಸಕ್ಕರೆ ಸಂಗ್ರಹಿಸಿಡುವುದು ದೊಡ್ಡ ಸವಾಲು. ಯಾಕೆಂದರೆ ಇದು ಗಟ್ಟಿಯಾಗುವುದು. ಗಾಳಿಯಾಡದ ಡಬ್ಬದಲ್ಲಿ ಸಕ್ಕರೆ ಹಾಕಿಡಿ.

ವಿನೇಗರ್

ವಿನೇಗರ್

ಉಪ್ಪಿನಕಾಯಿಯಿಂದ ಹಿಡಿದು ಮೊಟ್ಟೆಯ ತನಕ ದೀರ್ಘ ಕಾಲ ಬಾಳಿಕೆ ಬರಲು ವಿನೇಗರ್ ಅನ್ನು ಬಳಸಲಾಗುತ್ತದೆ. ಇದರಲ್ಲಿ ಇರುವ ಸಂರಕ್ಷಕ ಗುಣಗಳು ಸ್ವಯಂ ಕೆಡದಂತೆ ಕಾಪಾಡಿಕೊಳ್ಳುವುದು. ಇದರಿಂದ ವಿನೇಗರ್ ನ ಎಕ್ಸ್ ಪಯರಿ ಬಗ್ಗೆ ಚಿಂತೆ ಮಾಡಬೇಕಿಲ್ಲ.

ಒಣ ಪಾಸ್ತಾ

ಒಣ ಪಾಸ್ತಾ

ಒಣ ಪಾಸ್ತಾವು ತುಂಬಾ ದೀರ್ಘ ಕಾಲ ಬಾಳಿಕೆ ಬರುವುದು. ಯಾಕೆಂದರೆ ಇದರಲ್ಲಿ ನೀವು ಅಡುಗೆಗೆ ಬಳಸುವ ತನಕ ಯಾವುದೇ ತೇವಾಂಶ ಇರುವುದಿಲ್ಲ. ಆದರೆ ಗಾಳಿಯಾಡದೆ ಇರುವ ಡಬ್ಬದಲ್ಲಿ ಹಾಕಿ ತಂಪಾದ ಜಾಗದಲ್ಲಿ ಇದನ್ನು ಸಂಗ್ರಹಿಸಿ. ತಿಂಗಳುಗಟ್ಟಲೆ ಇದನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ವೆನಿಲ್ಲಾ ಸಾರ

ವೆನಿಲ್ಲಾ ಸಾರ

ವೆನಿಲ್ಲಾ ಸಾರವನ್ನು ಐಸ್ ಕ್ರೀಮ್ ಮತ್ತು ಇತರ ಕೆಲವೊಂದು ಸಿಹಿ ತಿಂಡಿಗಳಲ್ಲಿ ಬಳಸಲಾಗುತ್ತದೆ. ಇದು ತುಂಬಾ ರುಚಿಕರ, ಸುವಾಸನೆ ಬೀರುವ ಮತ್ತು ಬಣ್ಣ ಹೊಂದಿರುವುದು. ವೆನಿಲ್ಲಾ ಸಾರವನ್ನು ತಿಂಗಳ ಕಾಲ ಸಂಗ್ರಹಿಸಿ ಇಡುವುದರಿಂದ ಮಾಂಸದ ಸಾಸ್‌ನ ಸುವಾಸನೆ ಹೆಚ್ಚಿಸಬಹುದು. ಆದರೆ ವೆನಿಲ್ಲಾ ಸಾರವನ್ನು ಸಿಹಿತಿಂಡಿಗಳನ್ನು ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ.

English summary

List Of 10 Foods That Do Not Expire

As the summers have already set in, it will become difficult to store foods without the refrigerator. Buying in bulk certain pocket-friendly food products to stock up the refrigerator will not solve the issue. This may result in food wastage, as some of the foods might not be used at the right time. However, there are also certain foods that do not require any expiry date. These foods have no shelf-life at all and you can stock them up when in need or during an emergency.