Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಲೈಂಗಿಕ-ಕ್ರಿಯೆ ಬಳಿಕ ಮಹಿಳೆಯರು, ಈ ಕೆಲಸಗಳನ್ನು ಮಾಡಲೇಬೇಕು!
ಮಹಿಳೆಯರು ಹೆಚ್ಚಾಗಿ ಸ್ವಚ್ಛತೆ ಬಗ್ಗೆ ಗಮನಹರಿಸುವವರು. ಮನೆಯಿಂದ ಹಿಡಿದು, ಮಕ್ಕಳು, ಕಚೇರಿ ಹೀಗೆ ಪ್ರತಿಯೊಂದು ಸ್ಥಳದಲ್ಲಿ ಮಹಿಳೆಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವರು. ಅದೇ ಅವರು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಲೈಂಗಿಕ ಕ್ರಿಯೆಗೆ ಮೊದಲು ಅಥವಾ ಬಳಿಕ ಎಷ್ಟು ಸ್ವಚ್ಛವಾಗಿರುವರು ಎನ್ನುವುದು ಕೂಡ ಅತೀ ಅಗತ್ಯವಾಗಿದೆ.
ಸ್ವಚ್ಛತೆ ಇಲ್ಲದೆ ಇರುವ ಕಾರಣದಿಂದಾಗಿ ಹೆಚ್ಚಿನ ಸಲ ಸೋಂಕು ಹರಡುವುದು. ಲೈಂಗಿಕ ಕ್ರಿಯೆ ಬಳಿಕ ನೀವು ಪಾಲಿಸಬೇಕಾದ ಕೆಲವು ಸ್ವಚ್ಛತಾ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಲೈಂಗಿಕ ಕ್ರಿಯೆ ವೇಳೆ ಯೋನಿಯ ಅಂಗಾಂಶಗಳು ಊತಗೊಂಡಿರುವುದು. ಇದು ಹೊರಗಿವ ಹವಾಮಾನಕ್ಕೆ ಹೇಗೆ ಹೊಂದಿಕೊಳ್ಳುವುದು ಎಂದು ತಿಳಿಸಲಿದೆ. ಕೆಲವು ವಿಷಯಗಳನ್ನು ನೀವು ಲೈಂಗಿಕ ಕ್ರಿಯೆ ಬಳಿಕ ಮಾಡಲೇಬಾರದು. ಯಾಕೆಂದರೆ ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದು. ಆದರೆ ಲೈಂಗಿಕ ಕ್ರಿಯೆ ಬಳಿಕ ತಕ್ಷಣ ಮಾಡಲೇಬೇಕಾದ ಕೆಲವು ವಿಚಾರಗಳನ್ನು ನೀವಿಲ್ಲಿ ತಿಳಿಯಿರಿ....
ಲೈಂಗಿಕ ಕ್ರಿಯೆ ಬಳಿಕ ಶೌಚಾಲಯಕ್ಕೆ ಹೋಗುವುದು
ಲೈಂಗಿಕ ಕ್ರಿಯೆ ವೇಳೆ ನಿಮ್ಮ ಜನನೇಂದ್ರಿಯದೊಳಗೆ ಬ್ಯಾಕ್ಟೀರಿಯಾ ಒಳಸೇರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಇದರಿಂದ ಸೋಂಕು ಬರುವ ಸಾಧ್ಯತೆ ಅಧಿಕ. ಬ್ಯಾಕ್ಟೀರಿಯಾಗಳು ಬೆಚ್ಚಗಿನ ಸ್ಥಳದಲ್ಲಿ ಬೇಗನೆ ತಮ್ಮ ಸಂತಾನ ಬೆಳೆಸುವುದು. ಇದರಿಂದ ನೀವು ಲೈಂಗಿಕ ಕ್ರಿಯೆ ಬಳಿಕ ತಕ್ಷಣ ಹೋಗಿ ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದು.
ಬಿಸಿ ನೀರಿನ ಸ್ನಾನ ಕಡೆಗಣಿಸಿ
ಲೈಂಗಿಕ ಕ್ರಿಯೆ ಬಳಿಕ ಯೋಗಿಯು ಸ್ವಲ್ಪ ಹೆಚ್ಚಾಗಿ ತೆರೆದುಕೊಳ್ಳುವುದು. ಇದರಿಂದ ಲೈಂಗಿಕ ಕ್ರಿಯೆ ಬಳಿಕ ಬಿಸಿ ನೀರಿನ ಸ್ನಾನ ಮಾಡಲು ಹೋದರೆ ಅದರಿಂದ ಸೋಂಕು ಹೆಚ್ಚಾಗುವುದು. ಇದನ್ನು ನೀವು ಮಾಡಲೇಬಾರದು.
ಚೆನ್ನಾಗಿ ನೀರು ಕುಡಿಯಿರಿ
ಲೈಂಗಿಕ ಕ್ರಿಯೆ ವೇಳೆ ನಿಮಗೆ ಹೆಚ್ಚು ವ್ಯಾಯಾಮ ಸಿಗುವುದು. ಇದರಿಂದಾಗಿ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ತೇವಾಂಶ ಸಿಗುವುದು ಮತ್ತು ಬ್ಯಾಕ್ಟೀರಿಯಾ ಉಂಟುಮಾಡುವ ಯುಟಿಐಯನ್ನು ಹೊರಹಾಕಲು ನೆರವಾಗುವುದು.
ಪ್ರೋಬಯೋಟಿಕ್ ಅಧಿಕವಾಗಿರುವ ಆಹಾರ ಸೇವಿಸಿ
ಲೈಂಗಿಕ ಕ್ರಿಯೆ ಬಳಿಕ ಏನು ತಿನ್ನುತ್ತೀರಿ ಎನ್ನುವುದು ತುಂಬಾ ಮುಖ್ಯ. ಅತ್ಯುತ್ತಮವಾಗಿರುವ ಆಯ್ಕೆಯೆಂದರೆ ಮೊಸರು, ಕೊಂಬುಚ ಅಥವಾ ಕಿಮ್ಚಿ ಸೇವಿಸಿ. ಇದನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯಾ ಸಿಗುವುದು ಮತ್ತು ನಿಮನ್ನು ಕಿಣ್ವದ ಸೋಂಕಿನಿಂದ ತಡೆಯುವುದು.
ಆ ಭಾಗಕ್ಕೆ ತಕ್ಷಣ ಸೋಪು ಹಾಕಬೇಡಿ
ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ನೀವು ನೇರವಾಗಿ ಹೋಗಿ ಆ ಭಾಗಕ್ಕೆ ಸೋಪು ಹಾಕಬೇಡಿ. ಲೈಂಗಿಕ ಕ್ರಿಯೆ ಬಳಿಕ ಮಾತ್ರವಲ್ಲದೆ ಲೈಂಗಿಕ ಕ್ರಿಯೆಯ ಯಾವುದೇ ಹಂತದಲ್ಲೂ ಇದು ಸಲ್ಲ. ಯೋನಿಯು ತನ್ನನ್ನು ತಾನು ಸ್ವಚ್ಛಗೊಳಿಸುವ ಗುಣವಿರುವುದು ಮತ್ತು ಅದು ಅದರಷ್ಟಕ್ಕೆ ಸ್ವಚ್ಛವಾಗುವುದು. ಸೋಪ್ ನಿಮ್ಮ ಪಿಎಚ್ ಮಟ್ಟದಲ್ಲಿ ಮಧ್ಯಪ್ರವೇಶ ಮಾಡುವುದು ಮತ್ತು ಇದರಿಂದ ಕಿರಿಕಿರಿ, ಒಣಗುವುದು ಅಥವಾ ಹೆಚ್ಚು ಸೋಂಕು ಉಂಟಾಗಬಹುದು.
ಗಾಳಿಯಾಡದೆ ಇರುವ ಒಳ ಉಡುಪು ಧರಿಸಬೇಡಿ
ಹೆಚ್ಚಿನ ಒಳ ಉಡುಪನ್ನು ನೈಲನ್ ಅಥವಾ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಲಾಗುತ್ತದೆ. ಲೈಂಗಿಕ ಕ್ರಿಯೆ ಬಳಿಕ ಇದನ್ನು ಧರಿಸುವುದರಿಂದ ಕೀಟಾಣುಗಳಿಗೆ ಬೆಳೆಯಲು ಒಳ್ಳೆಯ ವಾತಾವರಣ ನಿರ್ಮಿಸಿಕೊಟ್ಟಂತೆ ಆಗಬಹುದು.
ಒರೆಸಲು ಒದ್ದೆ ಬಟ್ಟೆ ಕಡೆಗಣಿಸಿ
ಲೈಂಗಿಕ ಕ್ರಿಯೆ ಬಳಿಕ ರಾಸಾಯನಿಕ ಮತ್ತು ಸುಗಂಧವು ನಿಮ್ಮ ಜನನೇಂದ್ರೀಯದ ಭಾಗಕ್ಕೆ ಕಿರಿಕಿರಿ ಉಂಟು ಮಾಡಬಹುದು. ನೀರಿನ ಜತೆಗೆ ಸ್ವಲ್ಪ ವಿನೇಗರ್ ಹಾಕಿ ಬಳಸಿ. ಲೈಂಗಿಕ ಕ್ರಿಯೆ ಬಳಿಕ ನೀವು ಇದನ್ನು ಮಾಡಬಹುದು.
ಕಿಣ್ವ ಸೋಂಕು ತಡೆಯಲು ಬ್ಲೋ ಡ್ರೈಯರ್ ಬಳಸಿ
ಹೆಚ್ಚಿನ ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ತಮ್ಮ ಗುಪ್ತಾಂಗಗಳನ್ನು ಬ್ಲೋ ಡ್ರೈ ಮಾಡುವರು. ವೈದ್ಯರ ಪ್ರಕಾರ ಈ ವಿಧಾನವು ತುಂಬಾ ಸಹಕಾರಿ. ಯುಟಿಐಗೆ ಪದೇ ಪದೇ ಗುರಿಯಾಗುವಂತಹ ಮಹಿಳೆಯರಿಗೆ ಇದು ತುಂಬಾ ಒಳ್ಳೆಯದು. ಲೈಂಗಿಕ ಕ್ರಿಯೆ ಬಳಿಕ ಮಹಿಳೆಯರು ಇದನ್ನು ಮಹಿಳೆಯರು ಮಾಡಬಹುದು.
ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ
ಲೈಂಗಿಕ ಕ್ರಿಯೆಯಾದ ತಕ್ಷಣ ಮಹಿಳೆಯರು ಮೂತ್ರವಿಸರ್ಜನೆ ಮಾಡಿಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಜನನೇಂದ್ರಿಯಗಳಲ್ಲಿ ಇರುವಂತಹ ಸೋಂಕು ಮೂತ್ರವಿಸರ್ಜನೆ ಮೂಲಕ ಹೊರಹೋಗುತ್ತದೆ. ಪುರುಷರ ವೀರ್ಯ ಮತ್ತು ಮೂತ್ರವು ಒಂದೇ ನಾಳದ ಮೂಲಕ ಬರುವ ಕಾರಣದಿಂದ ಮೂತ್ರನಾಳದಲ್ಲಿರುವ ಸೋಂಕು ಮಹಿಳೆಯರಿಗೆ ತಗುಲಬಹುದು.
ಲೈಂಗಿಕ ಕ್ರಿಯೆ ಬಳಿಕ ಯೋನಿ ತೊಳೆಯುವುದು
ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು. ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ.
ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...
ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.