ಬ್ರೇಕ್ ಫಾಸ್ಟ್‌ಗೆ ಮೊಟ್ಟೆ ಹಾಗೂ ಹಾಲು ಆರೋಗ್ಯಕ್ಕೆ ಒಳ್ಳೆಯದೇ?

Posted By: Hemanth
Subscribe to Boldsky

ಇಂಗ್ಲಿಷ್‌ ನಲ್ಲಿ ಬ್ರೇಕ್ ಫಾಸ್ಟ್ ಎಂದರೆ ಉಪವಾಸ ಬಿಡುವುದು. ಅಂದರೆ ರಾತ್ರಿ ನಾವು ಮಲಗಿದ ಬಳಿಕ ದೇಹವು ಸುಮಾರು ಎಂಟು ಗಂಟೆಗಳ ಕಾಲ ಯಾವುದೇ ರೀತಿಯ ಆಹಾರ ಸೇವಿಸದೆ ಇರುವುದು ಒಂದು ರೀತಿಯ ಉಪವಾಸವಿದ್ದಂತೆ. ಇದರಿಂದ ಬೆಳಗ್ಗಿನ ಉಪಾಹಾರವು ನಮ್ಮ ದಿನದ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನಿಂದಲೂ ನಮ್ಮ ಹಿರಿಯ ಬೆಳಗ್ಗಿನ ಉಪಾಹಾರಕ್ಕೆ ಹೆತ್ತು ಒತ್ತು ನೀಡುತ್ತಿದ್ದರು. ಇದು ಯಾಕೆ ಎಂದು ಲೇಖನವನ್ನು ಓದುತ್ತಿರುವಂತೆ ನಿಮಗೂ ತಿಳಿದುಬರಲಿದೆ.

ಉಪಾಹಾರವು ಯಾಕೆ ಅತೀ ಅಗತ್ಯ?

ಬೆಳಗ್ಗೆ ನೀವು ಏನು ತಿನ್ನುತ್ತೀರಿ ಎನ್ನುವುದು ನಿಮ್ಮ ಹೊಟ್ಟೆಯ ಪರಿಸ್ಥಿತಿ ಮಾತ್ರವಲ್ಲದೆ, ಮೆದುಳಿನ ಮೇಲೂ ಅದು ಪರಿಣಾಮ ಬೀರುವುದು. ದೇಹವು ಸಾಮಾನ್ಯವಾಗಿ ತನ್ನ ಕಾರ್ಯಚಟುವಟಿಕೆ ಮಾಡಿಕೊಳ್ಳಲು ಬೇಕಾಗುವಷ್ಟು ಶಕ್ತಿಯನ್ನು ಇದು ಒದಗಿಸುವುದು. ಹೊಟ್ಟೆಗೆ ಆರೋಗ್ಯಕರ, ತೃಪ್ತಿನೀಡುವ ಮತ್ತು ಸರಿಯಾದ ಆಹಾರವು ಅತೀ ಅಗತ್ಯ. ಇದರಿಂದಲೇ ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಆದರೆ ಕೈಗೆ ಸಿಕ್ಕಿದ್ದನ್ನು ಮತ್ತು ಸೂಪರ್ ಮಾರ್ಕೆಟ್ ನಲ್ಲಿ ಸಿಗುವ ರೆಡಿಮೇಡ್ ಆಹಾರ ಸೇವನೆ ಸರಿಯಾದ ಕ್ರಮವಲ್ಲ. ನಿಮ್ಮ ದೇಹಕ್ಕೆ ಯಾವ ರೀತಿಯ ಆಹಾರದ ಅಗತ್ಯವಿದೆ ಎಂದು ಮೊದಲು ಯೋಜನೆ ಹಾಕಿಕೊಳ್ಳಬೇಕು. ಪ್ರೋಟೀನ್ ಹೆಚ್ಚಾಗಿರುವ ಆಹಾರ ಬೆಳಗ್ಗಿನ ಉಪಾಹಾರದಲ್ಲಿ ಸೇವನೆ ಮಾಡಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಇದರಲ್ಲಿ ಕಂಡುಬರುವ ಎರಡು ಆಹಾರವೆಂದರೆ ಮೊಟ್ಟೆ ಮತ್ತು ಹಾಲು. ಆದರೆ ಇವೆರಡನ್ನು ಜತೆಯಾಗಿ ಸೇವಿಸಿದರೆ ಅದು ಒಳ್ಳೆಯ ಆಹಾರದ ಕ್ರಮವಲ್ಲವೆಂದು ಹೇಳಲಾಗುತ್ತದೆ.

egg

ಮೊಟ್ಟೆಯಲ್ಲಿ ಕೇವಲ ಪ್ರೋಟೀನ್ ಮಾತ್ರವಲ್ಲದೆ ಕೋಲೀನ್, ಅಲ್ಬುಲಿನ್ ಎನ್ನುವ ಎರಡು ಅಂಶಗಳು ಇವೆ. ಮೊಟ್ಟೆಯನ್ನು ಹಸಿ, ಬೇಯಿಸಿ, ಅರೆ ಬೇಯಿಸಿ, ಫ್ರೈ ಮಾಡಿ, ಆಮ್ಲೆಟ್ ಮಾಡಿ ಸೇವಿಸಲಾಗುತ್ತದೆ. ಹಸಿ ಮೊಟ್ಟೆಗಳನ್ನು ಸೇವಿಸುವುದು ತುಂಬಾ ಅಪಾಯಕಾರಿ ಮಾತ್ರವಲ್ಲದೆ, ಇದರ ರುಚಿ ಕೂಡ ಕಡಿಮೆ.

ಹಸಿ ಮೊಟ್ಟೆ ಸೇವನೆ ಮಾಡುವುದರಿಂದ ವ್ಯಕ್ತಿಯೊಬ್ಬನ ಬಯೋಟಿನ್ ಕುಸಿತ, ಆಹಾರ ವಿಷವಾಗುವುದು ಮತ್ತು ಸಾಲ್ಮೊನೆಲ್ಲಾ ಸೋಂಕು ಉಂಟಾಗುವ ಸಾಧ್ಯತೆಗಳು ಇವೆ. ಇದರಿಂದಾಗಿ ಹೊಟ್ಟೆಯಲ್ಲಿ ತಳಮಳ, ವಾಂತಿ ಮತ್ತು ಭೇದಿ ಉಂಟಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಸಾಲ್ಮೆನೆಲ್ಲಾ ಸೋಂಕಿನಿಂದಾಗಿ ಸಾವು ಸಂಭವಿಸಬಹುದು.

ಬೇಯಿಸಿದ ಮೊಟ್ಟೆ ಸೇವನೆ ಮಾಡಿದರೆ ಅದರಿಂದ ಸೋಂಕು ಮತ್ತು ಆಹಾರ ವಿಷವಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಹಸಿ ಮೊಟ್ಟೆಗಿಂತ ಬೇಯಿಸಿದ ಮೊಟ್ಟೆ ತಿಂದಾಗ ಅದರಲ್ಲಿನ ಪ್ರೋಟೀನ್ ಅಂಶವನ್ನು ದೇಹವು ಬೇಗನೆ ಹೀರಿಕೊಳ್ಳುವುದು. ಇದರಿಂದ ಹೊಟ್ಟೆಗೆ ತುಂಬಾ ಹಗುರ ಮತ್ತು ಆರೋಗ್ಯಕಾರಿಯಾಗಿರುವುದು.

ಹಾಲಿನಲ್ಲಿ ಕ್ಯಾಲ್ಸಿಯಂ, ಲಿಪಿಡ್ಸ್ ಮತ್ತು ಪ್ರೋಟೀನ್ ಮತ್ತು ಇತರ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಇವೆ. ಪ್ರಾಣಿಗಳಿಂದ ಪಡೆದ ಹಾಲನ್ನು ಹಸಿಯಾಗಿ ಅಥವಾ ಅದನ್ನು ಸಂಸ್ಕರಿಸಿ, ಅದರಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಂದ ಬಳಿಕ ಸೇವನೆ ಮಾಡಲಾಗುತ್ತದೆ. ಈ ಎರಡು ಆಹಾರಗಳು ಜತೆಯಾಗಿ ಸೇವನೆ ಮಾಡಬೇಕೆಂದರೆ, ಮೊಟ್ಟೆಯನ್ನು ಬೇಯಿಸಿರಬೇಕು ಮತ್ತು ಹಾಲನ್ನು ಬ್ಯಾಕ್ಟೀರಿಯಾ ಮುಕ್ತಗೊಳಿಸಿರಬೇಕು.

ಹಸಿ ಮೊಟ್ಟೆ ಮತ್ತು ಹಾಲನ್ನು ಜತೆಯಾಗಿ ಸೇವನೆ ಮಾಡಿದಾಗ ಪ್ರೋಟೀನ್ ಅತಿಯಾಗಿ ಅದನ್ನು ಹೀರಿಕೊಳ್ಳಲು ದೇಹವು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀರಿಕೊಳ್ಳದೆ ಉಳಿಯುವಂತಹ ಪ್ರೋಟೀನ್ ಕೊಬ್ಬಿನ ರೂಪವಾಗಿ ಪರಿವರ್ತನೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಮೊಟ್ಟೆ ಸೇವಿಸುವ ಮೊದಲು ಸರಿಯಾಗಿ ಬೇಯಿಸಿಕೊಂಡರೆ ಆಗ ಅದನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು. ಇದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗುವುದು. ಬೇಯಿಸಿರುವ ಮೊಟ್ಟೆಯನ್ನು ಹಾಲಿನೊಂದಿಗೆ ಯಾವುದೇ ಚಿಂತೆಯಿಲ್ಲದೆ ಸೇವನೆ ಮಾಡಬಹುದು. ಕೆಟ್ಟ ಕೊಲೆಸ್ಟ್ರಾಲ್ ಕೂಡ ಬರುವುದಿಲ್ಲ.

Milk and Eggs

ಬೇಯಿಸಿದ ಮೊಟ್ಟೆಯನ್ನು ಹಾಲಿನೊಂದಿಗೆ ಸೇವನೆ ಮಾಡಿದಾಗ ಅದು ತುಂಬಾ ಆರೋಗ್ಯಕಾರಿ ಹಾಗೂ ತೃಪ್ತಿಕಾರಿ ಉಪಾಹಾರವಾಗಿರುವುದು. ಇತಿಮಿತಿಯಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಅತಿಯಾಗಿ ಸೇವಿಸಿದರೆ ಅದರಿಂದ ದೇಹಕ್ಕೆ ಪ್ರೋಟೀನ್ ಅಂಶವು ಹೆಚ್ಚುವರಿಯಾಗಿ ನೀಡಿದಂತೆ ಆಗುವುದು.

ಅತಿಯಾಗಿ ಸೇವನೆ ಮಾಡಿದಾಗ ಕಿರಿಕಿರಿ, ಹೊಟ್ಟೆಯಲ್ಲಿ ತಳಮಳ ಅಥವಾ ವಾಂತಿ ಸಮಸ್ಯೆ ಕಾಡಿದರೆ ಆಗ ನೀವು ತಕ್ಷಣ ಸೇವನೆ ನಿಲ್ಲಿಸಿ. ಇದರಿಂದ ಮೊಟ್ಟೆ ಬೇಯಿಸಿ, ಹಾಲು ಕುದಿಸಿ ಮತ್ತು ಸೇವಿಸಿ. ರುಚಿಯ ಬದಲು ಪೋಷಕಾಂಶಗಳಿರುವುದನ್ನು ಸೇವನೆ ಮಾಡಿ. ಇದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುವುದು.

English summary

Is milk and egg combination good for you?

When we talk about preparing a protein-rich breakfast, the first two ingredients that come to mind are eggs and milk. And then follows the disappointment of remembering the myth that these put together are not considered a good example of healthy food pairing. Eggs are a source of choline and albumen in addition to being rich in proteins. They are eaten in various forms - raw, boiled, poached, scrambled, fried, half-boiled, etc.