For Quick Alerts
ALLOW NOTIFICATIONS  
For Daily Alerts

  ಪ್ಯಾಕೇಟ್ ಹಾಲನ್ನು ಕುದಿಸದೇ ಕುಡಿಯುವುದು ಆರೋಗ್ಯಕಾರಕವೇ?

  By Prabha Bhat
  |

  ಹಾಲು ಸಸ್ತನಿ ಪ್ರಾಣಿಗಳಿಂದ ಪಡೆಯಬಹುದಾದ ಉತ್ಪನ್ನವಾಗಿದ್ದು, ಪೋಷಕಾಂಶಗಳಿಂದ ಕೂಡಿದ ಅರೋಗ್ಯಯುತವಾದ ಪೇಯವಾಗಿದೆ. ಹಾಲಿನಲ್ಲಿ ವಿಟಮಿನ್ ಎ, ಡಿ, ಬಿ1, ಬಿ2, ಬಿ12 ಮತ್ತು ವಿಟಮಿನ್ ಕೆ ವಿಟಮಿನ್‌ಗಳಿರುತ್ತವೆ. ಮನುಷ್ಯನ ದೇಹದ ಮೂಳೆಗಳ ಬೆಳವಣಿಗೆಗೆ ಮತ್ತು ಮೂಳೆಗಳ ಆರೋಗ್ಯಕ್ಕೆ ಹಾಲಿನಲ್ಲಿರುವ ಪೋಷಕಾಂಶಗಳು ಬಹಳ ಪ್ರಯೋಜನಕಾರಿಯಾದುದು.

  ಮೊದಲು ಹಾಲಿಗಾಗಿ ಪ್ರಾಣಿಗಳನ್ನು ಸಾಕುತ್ತಿದ್ದ ಕ್ರಮವಿದ್ದು, ಪ್ರಾಣಿ ಸಾಕಾಣಿಕೆಯಿಲ್ಲದವರು ತಮ್ಮ ಸುತ್ತಮುತ್ತಲಿನ ಮನೆಗಳ ರಾಸುಗಳ ಹಾಲನ್ನು ಖರೀದಿಸಿ ಅದನ್ನು ಬಳಸುವ ಕ್ರಮವಿತ್ತು. ನಗರೀಕರಣವಾಗುತ್ತಾ ಬಂದಂತೆ ಪಶುಸಂಗೋಪನೆ ಕಡಿಮೆಯಾಗುತ್ತಾ ಸಮೀಪದ ಡೈರಿಯನ್ನು ಹಾಲಿಗಾಗಿ ಅವಲಂಬಿಸುವಿಕೆಯ ಆರಂಭವಾಯಿತು. ವೈಜ್ಞಾನಿಕ ಸಂಶೋಧನೆಯ ಫಲವಾಗಿ ತಂತ್ರಜ್ಞಾನ ಹೆಚ್ಚಿದಂತೆ ಪಾಕೇಜ್ ಹಾಲುಗಳು ಮಾರುಕಟ್ಟೆಯಲ್ಲಿ ರಾರಾಜಿಸತೊಡಗಿದವು.

  Milk

  ಈ ಬಗೆಯ ಸಿದ್ಧ ಉತ್ಪನ್ನಗಳ ದೊರೆಯುವಿಕೆಯಿಂದ ಹಿಂದಿನ ಕ್ರಮಗಳನ್ನು ತಿರುಗಿ ನೋಡಲೂ ಸಾಧ್ಯವಾಗದಷ್ಟು ಮುಂದೆ ಬಂದಿದ್ದೇವೆ. ಆದರೆ ಪ್ಯಾಕೇಜ್ ಹಾಲುಗಳು ಪ್ರಚಲಿತಕ್ಕೆ ಬಂದು ಹಲವು ವರ್ಷಗಳೇ ಕಳೆದರೂ ಹಿರಿಯ ತಲೆಮಾರು ಮತ್ತು ಈ ತಲೆಮಾರಿನವರಲ್ಲಿ ವಾದಗಳಿಗೆ ಕಾರಣವಾಗಬಲ್ಲ ಅಂಶವೆಂದರೆ ಪ್ಯಾಕೆಟ್ ಹಾಲು ಆರೋಗ್ಯಕ್ಕೆ ಹಾನಿಕಾರಕವೇ? ಅದನ್ನು ಕಾಯಿಸದೇ ಕುಡಿಯುವುದು ಯೋಗ್ಯವೇ? ಎಂಬಿತ್ಯಾದಿ ಪ್ರಶ್ನೆಗಳು. ನಿಮ್ಮ ಮನೆಯಲ್ಲಿ ಹಳೆಯವರಿದ್ದರೆ ನಿಮಗೆ ಅನುಭವವಾಗಿರಬಹುದು.

  ಪ್ಯಾಕೆಟ್ ಹಾಲು ಎಂದ ಕೂಡಲೆ ಮೂಗು ಮುರಿಯುತ್ತಾರೆ. "ಮಕ್ಕಳಿಗೆ ಕೊಡಬೇಡಿ, ಅದು ಜೀರ್ಣವಾಗುವುದಿಲ್ಲ, ಪ್ಯಾಕೆಟ್ ಹಾಲನ್ನು ಇಂಗಿಸಿ ಕಾಯಿಸಿ, ಹಲವು ಬಾರಿ ಕಾಯಿಸಿ" ಎಂಬಿತ್ಯಾದಿ ಸಲಹೆಗಳನ್ನು ಕೊಡುತ್ತಾರೆ. ಆದರೆ ವೈಜ್ಞಾನಿಕವಾಗಿ ಪಾಶ್ಚರೀಕರಿಸಿದ ಹಾಲುಗಳೆಂಬ ಹೆಸರಿನಿಂದ ಕರೆಯಲ್ಪಡುವ ಪ್ಯಾಕೆಜ್ ಹಾಲು ಹಾಲಿನಲ್ಲಿರುವ ಎಲ್ಲಾ ಜೀವಸತ್ವಗಳನ್ನೂ ಹೊಂದಿರುತ್ತದೆ. ಇಂದು ಮಾರುಕಟ್ಟೆಯಲ್ಲಿ ದೊರೆಯುವ ಹಾಲಿನ ಪ್ಯಾಕೆಟುಗಳ ಮೇಲೆ ಪಾಶ್ಚರೀಕರಿಸಿದ ಹಾಲು ಎಂಬ ಅಡಿಬರಹವನ್ನು ನೋಡಿರುತ್ತೇವೆ.

  Milk

  ಪಾಶ್ಚರೀಕರಿಸಿದ ಹಾಲಿಗೂ ಹಸಿ ಹಾಲಿಗೂ ಇರುವ ವ್ಯತ್ಯಾಸಗಳೇನು?

  ಡೈರಿಯಲ್ಲಿ ದೊರೆಯುವ ರಾಸುಗಳಿಂದ ನೇರವಾಗಿ ದೊರೆಯುವ ಹಾಲು ಹಸಿ ಹಾಲು ಎಂದು ಕರೆಸಿಕೊಳ್ಳುತ್ತದೆ. ಇದರಲ್ಲಿ ನಮ್ಮ ಅರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಹಲವು ಬ್ಯಾಕ್ಟೀರಿಯಾಗಳಿರುತ್ತವೆ. ಪ್ಯಾಕೆಟುಗಳಲ್ಲಿ ದೊರೆಯುವ ಹಾಲು ಪಾಶ್ಚರೀಕರಿಸಿದ ಹಾಲೆನಿಸುತ್ತದೆ.

  ಪಾಶ್ಚರೀಕರಣ ಎಂದರೇನು?

  ಪಾಶ್ಚರೀಕರಣ ಪ್ರಕ್ರಿಯೆಯು 19ನೇ ಶತಮಾನದಲ್ಲಿ ಆವಿಷ್ಕರಿಸಿದ ವಿಧಾನ. ಹಾಲನ್ನು ಅತ್ಯಧಿಕ ಉಷ್ಣತೆಯಲ್ಲಿ ಕಾಯಿಸಿ ತಕ್ಷಣವೇ ತಣಿಸುವ, ಹಾಲನ್ನು ಸಂರಕ್ಷಿಸುವ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಪ್ರಕ್ರಿಯೆಗೆ ಪಾಶ್ಚರೀಕರಣ ಎನ್ನುವರು. ಹೀಗೆ ಪಾಶ್ಚರೀಕರಿಸಿದ ಹಾಲು ಪ್ಲ್ಯಾಸ್ಟಿಕ್ ಪ್ಯಾಕೆಟುಗಳಲ್ಲಿ, ಗ್ಲಾಸ್ ಬಾಟಲಿಗಳಲ್ಲಿ ತುಂಬಿಸಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

  ಪಾಶ್ಚರೀಕಣದ ಹಂತಗಳು ಯಾವುವು?

  ಹಾಲನ್ನು 161.6 ಫ್ಯಾರನ್ ಹೀಟ್ ಉಷ್ಣತೆಯಲ್ಲಿ 15 ನಿಮಿಷಗಳ ಕಾಲ ಕುದಿಸಿ ಆರಿಸಲಾಗುತ್ತದೆ. ಈ ವಿಧಾನದಲ್ಲಿ ಭಾರತ ಮತ್ತು ಇನ್ನಿತರ ದೇಶಗಳಲ್ಲಿ ಹಾಲನ್ನು ಪಾಶ್ಚರೀಕರಿಸಲಾಗುತ್ತದೆ. ನಂತರ ಪಾಶ್ಚರೀಕರಿಸಿದ ಹಾಲಿನ ಪ್ಯಾಕೆಟುಗಳನ್ನ 6 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಶೀತಲೀಕರಿಸಿ, ಶೇಖರಿಸಿಟ್ಟು ಪ್ಯಾಕ್ ಮಾಡಿ ನಂತರ ನಿಗದಿತ ಪ್ರದೇಶಗಳಗೆ ಹಂಚಲಾಗುತ್ತದೆ. ಮುಖ್ಯವಾಗಿ ಮೂರು ಹಂತಗಳಲ್ಲಿ ಪಾಶ್ಚರೀಕರಣ ನೆಡೆಯುವಂತದ್ದು.

  *ಲೋಕಲ್ ಡೈರಿಗಳಿಂದ ಹಾಲಿನ ಸಂಗ್ರಹಣೆ

  *ಹಾಲಿನ ಪ್ರಯೋಗಾಲಯ ಪರೀಕ್ಷೆ

  *ಸೂಕ್ತ ಪ್ರಯೋಗಗಳಿಗೊಳಪಟ್ಟ ಹಾಲನ್ನು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಡಿಸುವುದು.

  Milk

  ಪಾಶ್ಚರೀಕರಣದಿಂದಾಗುವ ಅನುಕೂಲವೇನು?

  ಹಾಲನ್ನು ಪಾಶ್ಚರೀಕರಿಸುವುದರ ಮೂಲಕ ಹಸಿ ಹಾಲಿನಲ್ಲಿರುವ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತವೆ. ಈ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುವಂತಹ ಅಂಶಗಳು. ಅಷ್ಟೇ ಅಲ್ಲದೆ ಹಾಲನ್ನು ದೂರದ ಪ್ರದೇಶಗಳಿಗೆ ಸರಬರಾಜು ಮಾಡುವಲ್ಲಿಯೂ ಈ ವಿಧಾನ ಬಹಳ ಪ್ರಯೋಜನಕಾರಿಯಾದುದು.

  ಪ್ಯಾಕೆಟ್ ಹಾಲನ್ನು ಕಾಯಿಸದೇ ಸೇವಿಸಬಹುದೇ?

  ಪರಿಣಿತರ ಪ್ರಕಾರ ಡೈರಿಯಿಂದ ತಂದಂತಹ ಮತ್ತು ನೇರವಾಗಿ ಹಸುವಿನಿಂದ ಪಡೆದ ಹಾಲನ್ನು ಹೇಗೆ ಮೊದಲಿನಿಂದ ಕಾಯಿಸಿ ಬಳಸಲಾಗುತ್ತಿತ್ತೋ ಅದೇ ವಿಧಾನದಲ್ಲಿ ಪ್ಯಾಕೆಟ್ ಹಾಲನ್ನೂ ಕೂಡ ಕಾಯಿಸುವುದು ವಾಡಿಕೆಯಾಯಿತಷ್ಟೇ. ಪ್ಯಾಕೆಟ್ ಹಾಲು ಪಾಶ್ಚರೀಕರಿಸಿದ ಹಾಲು ಎಂಬುದಕ್ಕೆ ಪ್ಯಾಕೆಟುಗಳ ಮೇಲೆ ಅಡಿಬರಹವನ್ನು ನಮೂದಿಸಲಾಗಿರುತ್ತದೆ. ಪಾಶ್ಚರೀಕರಣದ ಮೂಲ ಉದ್ದೇಶವೇ ಹಸಿ ಹಾಲಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ನಾಶ ಮತ್ತು ಬಳಕೆದಾರನಲ್ಲಿಗೆ ಹೋಗುವ ವರೆಗೆ ಹಾಲನ್ನು ಸಂರಕ್ಷಿಸುವುದು. ಅದೇ ರೀತಿ ಹಸಿ ಹಾಲನ್ನು ಕಾಯಿಸುವುದೂ ಕೂಡ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಕ್ಕಾಗಿಯೇ ಆಗಿರುವುದರಿಂದ ಪ್ಯಾಕೆಟ್ ಹಾಲನ್ನು ಕಾಯಿಸದೇ ಸೇವಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗದೆ.

  ಎಫ್.ಸಿ.ಐ (ಫುಡ್ ಕೋ.ಆಪರೇಶನ್ ಆಫ್ ಇಂಡಿಯಾ) ದ ತಜ್ಞರ ಪ್ರಕಾರ "ಪಾಶ್ಚರೀಕರಣದ ಸಂದರ್ಭದಲ್ಲಿ ಅಧಿಕ ಉಷ್ಣತೆಯಲ್ಲಿ ಹಾಲನ್ನು ಕಾಯಿಸುವುದರ ಮೂಲಕ ಹಾಲಿನ ಬಾಳಿಕೆಯ ದಿನಗಳನ್ನು ಹೆಚ್ಚಿಸಬಹುದು, ಪಾಶ್ಚರೀಕರಿಸಿದ ಹಾಲನ್ನು ಪುನಹ ಕಾಯಿಸುವದರ ಮೂಲಕ ಹಾಲಿನ ಬಾಳಿಕಾ ದಿನಗಳನ್ನು ಕಡಿಮೆಗೊಳಿಸಿದಂತಾಗುತ್ತದೆ." ಫುಡ್ ಸೇಫ್ಟಿ ಹೆಲ್ಪ್ ಲೈನ್ ಡಾಟ್ ಕಾಮ್ ನ ಫೌಂಡರ್ ಅವರ ಪ್ರಕಾರ "ಪಾಶ್ಚರೀಕರಿಸಿದ ಹಾಲನ್ನು ಕಾಯಿಸುವ ಅವಶ್ಯಕತೆ ಇಲ್ಲ. ಪಾಶ್ಚರೀಕರಣದ ಸಂದರ್ಭದಲ್ಲಿ ಕಾಯಿಸಲಾದ್ದರಿಂದ ಈ ಹಾಲು ಬ್ಯಾಕ್ಟೀರಿಯಾರಹಿತವಾಗಿರುತ್ತದೆ" ಎನ್ನಲಾಗಿದೆ.

  ಪಾಶ್ಚರೀಕರಿಸಿದ ಹಾಲನ್ನು ಕಾಯಿಸುವುದರಿಂದ ಆಗುವ ಪರಿಣಾಮಗಳೇನು?

  ಪಾಶ್ಚರೀಕರಿಸಿದ ಹಾಲನ್ನು ಕಾಯಿಸುವುದರಿಂದ ಹಾಲಿನ ಬಾಳಿಕೆ ಕಡಿಮೆಯಾಗುವುದಷ್ಟೇ ಅಲ್ಲದೆ ಹಾಲಿನಲ್ಲಿರು ಪೋಷಕ ಸತ್ವಗಳೂ ಕೂಡ ತಗ್ಗುತ್ತವೆ ಎನ್ನಲಾಗುತ್ತದೆ. ಹೇಗೆ ಒಮ್ಮೆ ಕುದಿ ಬಿಂದು ಕಾದ ನೀರನ್ನು ಕಾಯಿಸುವುದರ ಮೂಲಕ ಪ್ರಯೋಜನವಿಲ್ಲವೆಂದು ನಮ್ಮ ವಿಜ್ಞಾನ ಹೇಳುತ್ತದೆಯೋ ಅಂತೆಯೇ ಒಮ್ಮೆ ಕಾಯಿಸಿದ ಹಾಲನ್ನು ಮತ್ತೆ ಮತ್ತೆ ಕಾಯಿಸುವುದರಿಂದ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ.

  ಪಾಶ್ಚರೀಕರಿಸಿದ ಹಾಲನ್ನು ಸೇವಿಸುವುದರಿಂದ ದೇಹಕ್ಕಾಗುವ ಪ್ರಯೋಜನಗಳೇನು?

  ಕಾಯಿಸಿದ ಹಸಿ ಹಾಲಿನಂತೆಯೇ ಪಾಶ್ಚರೀಕರಿಸಿದ ಹಾಲೂ ಕೂಡ ದೇಹಕ್ಕೆ ಅಗತ್ಯವಿರುವ ಪೋಷಕಾಂಷಗಳನ್ನು ಒದಗಿಸುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.ಅಂತಹ ಕೆಲವು ಪ್ರಯೋಜನಗಳನ್ನು ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.

  •ಪ್ಯಾಕೆಜ್ ಹಾಲು ಕ್ಯಾಲ್ಶಿಯಮ್ ನಿಂದ ಪೂರಿತವಾಗಿದ್ದು ನಮ್ಮ ದೇಹದ ಮೂಳೆಯನ್ನು ಸುಸ್ಥತಿಯಲ್ಲಿರಿಸುತ್ತದೆ.

  •ಕ್ಯಾಲ್ಶಿಯಮ್ ಮತ್ತು ಫಾಸ್ಫರ್‌ಗಳು ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಎರಡು ಅತಿ ಮುಖ್ಯವಾದ ಅಂಶವಾಗಿದ್ದು, ಹಾಲಿನಲ್ಲಿರುವ ಕ್ಯಸಿನ್ (ಹಾಲಿನಲ್ಲಿರುವ ಒಂದು ಬಗೆಯ ಫಾಸ್ಫೋಪ್ರೋಟೀನು) ಹಲ್ಲುಗಳ ಮೇಲೆ ತೆಳುವಾದ ಪದರವನ್ನು ಮಾಡುವುದರ ಮೂಲಕ ಹಲ್ಲು ಬೇಗ ಹಾಳಾಗದಂತೆ ರಕ್ಷಿಸುತ್ತದೆ.

  •ಪ್ಯಾಕೆಜ್ ಹಾಲಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶವಿರುವುದರಿಂದ ರಕ್ತದೊತ್ತಡ ಇರುವವರೂ ಕೂಡ ಇದನ್ನು ಸೇವಿಸಬಹುದು

  •ಇವುಗಳು ಲಘುವಾಗಿದ್ದು ಹಲವು ಬಗೆಯ ಜೀವಸತ್ವವನ್ನು ಹೊಂದಿರುವುದರಿಂದ ಹೃದಯಸಂಬಂಧಿ ಕಾಯಿಲೆಯಿರುವವರೂ ಕೂಡ ಸೇವಿಸಬಹುದು.

  ಹಾಲಿನ ಜೀವಸತ್ವಗಳನ್ನು ಕಾಯ್ದಿರಿಸುವ ಬಗೆ ಹೇಗೆ?

  ಹಾಲಿನಲ್ಲಿರುವ ಜೀವಸತ್ವವನ್ನು ಕಾಯ್ದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಅವಶ್ಯವಾದುದಾಗಿದೆ.

  •ಅಧಿಕ ಉಷ್ಣತೆಯಲ್ಲಿ ಹಾಲನ್ನು ಕಾಯಿಸದಿರುವುದು.

  •ಪ್ಯಾಕೆಟ್ ಹಾಲನ್ನು ಕಾಯಿಸದೇ ಇರುವುದು.

  •ಕಾಯಿಸಿದ ನಂತರ ಬಹಳ ಕಾಲ ಗಾಳಿಯಲ್ಲಿ ಇಡದೆ, ಕೂಡಲೆ ರೆಫ್ರಿಜರೇಟರಿನಲ್ಲಿರಿಸುವುದು.

  •ಪದೇ ಪದೇ ಹಾಲನ್ನು ಕಾಯಿಸದೇ ಇರುವುದು.

  •ಕಾಯುವಾಗ ಕೈಯಾಡಿಸದೇ ಇರವುದು.

  •ಮೈಕ್ರೋ-ವೇವ್ ಓವನನ್ನು ಹಾಲನ್ನು ಕಾಯಿಸಲು ಬಳಸದೇ ಇರುವುದು.

  ಹೀಗೆ ಪ್ಯಾಕೇಜ್ ಹಾಲೂ ಕೂಡ ಆರೋಗ್ಯಯುತವಾದ ಪೇಯವೆಂದೇ ನಿರೂಪಿಸಲ್ಪಟ್ಟಿರುವುದರಿಂದ ಇವುಗಳ ನೇರ ಸೇವನೆಯಿಂದ ದೇಹಕ್ಕೆ ಯಾವುದೇ ಹಾನಿಯನ್ನುಂಟಾಗುವುದಿಲ್ಲ.

  English summary

  Is It Healthy To Drink Packaged Milk Without Boiling It?

  Milk also offers benefits related to muscle growth, strengthening and repair of muscle tissues and so on. As a custom in India, raw milk has been consumed for generations, owing to its various health-related advantages. Raw milk, being raw, is termed high on nutrition, however, it contains certain harmful bacteria as well, that are most likely to cause serious diseases. Therefore, it has always been a general practice to boil the raw milk.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more