ಹೊಟ್ಟೆಯ ಸಮಸ್ಯೆ ಇದ್ದರೆ, ಒಂದು ಗ್ಲಾಸ್ ಗ್ರೀನ್ ಟೀ ಕುಡಿಯಿರಿ ಸಾಕು!

Posted By: Arshad
Subscribe to Boldsky

ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ಟೀ ಗಳಲ್ಲಿ ಅತಿ ಆರೋಗ್ಯಕರವಾದುದೆಂದರೆ ಹಸಿರು ಟೀ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಪರಿಚಯಿಸಲ್ಪಟ್ಟ ಈ ಹಸಿರು ಟೀ ಶೀಘ್ರ ಸಮಯದಲ್ಲಿಯೇ ಭಾರತೀಯರ ಅಚ್ಚುಮೆಚ್ಚಿನ ಪೇಯವಾಗಿದೆ. ಇದುವರೆಗೆ ಭಾರತೀಯರ ನೆಚ್ಚಿನ ಪೇಯವಾಗಿದ್ದ ಕಪ್ಪು ಟೀ ಹಾಗೂ ಹಾಲು ಬೆರೆಸಿದ ಟೀ ಸಹಾ ಹಿನ್ನಡೆ ಪಡೆದಿವೆ. ನಿತ್ಯವೂ ಹಸಿರು ಟೀ ಸೇವಿಸುವ ವ್ಯಕ್ತಿಗಳ ಆರೋಗ್ಯ ಉಳಿದವರಿಗಿಂತ ಉತ್ತಮವಾಗಿರುದು ಕಂಡುಬಂದಿದೆ.

ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಹಸಿರು ಟೀ ಸೇವನೆಯಿಂದ ತೂಕದಲ್ಲಿ ಇಳಿಕೆ, ಕ್ಯಾನ್ಸರ್ ಬರುವುದರಿಂದ ರಕ್ಷಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಮೊದಲಾದ ಪ್ರಯೋಜನಗಳಿವೆ. ಅಲ್ಲದೇ ಹಸಿರು ಟೀ ಕೆಲವಾರು ಆರೋಗ್ಯದ ತೊಂದರೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇಂದಿನ ಲೇಖನದ ಮೂಲಕ ಪರಿಚಯಿಸುತ್ತಿದೆ. ಒಂದು ವೇಳೆ ಹೊಟ್ಟೆಯ ತೊಂದರೆ ಅಥವಾ ಸೋಂಕು ಇದ್ದರೆ ಹಸಿರು ಟೀ ಸೇವನೆಯಿಂದ ಖಂಡಿತಾ ಉತ್ತಮ ಶಮನ ದೊರಕುತ್ತದೆ.

ಹಸಿರು ಟೀಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಕರವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ವಿಶೇಷವಾಗಿ ಕರುಳುಗಳಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಬದಲಿಸುವ ಮೂಲಕ ಸೋಂಕು ಆಗದಂತೆ ನೋಡಿಕೊಳ್ಳುತ್ತದೆ. ನಿತ್ಯವೂ ಕನಿಷ್ಟ ಎರಡು ಕಪ್ ಹಸಿರು ಟೀ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಗ್ರೀನ್ ಟೀ ಫೇಸ್ ಪ್ಯಾಕ್

ಅತ್ಯುತ್ತಮ ಅಭ್ಯಾಸವೆಂದರೆ ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಜೇನು ಬೆರೆಸಿ ಹಾಗು ಸಂಜೆಯ ಊಟಕ್ಕೂ ಮೂರು ಘಂಟೆಗಳ ಮುನ್ನ ಇನ್ನೊಂದು ಕಪ್ ಸೇವಿಸಿದರೆ ಅತ್ಯುತ್ತಮ ಪ್ರಯೋಜನ ಪಡೆಯಬಹುದು. ಆದರೆ ದಿನಕ್ಕೆ ಮೂರು ಕಪ್ ಗಿಂತ ಹೆಚ್ಚು ಹಸಿರು ಟೀ ಸೇವಿಸಬಾರದು. ಹಸಿರು ಟೀ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.... 

ಹೊಟ್ಟೆಯನೋವಿಗೆ ಹಸಿರು ಟೀ

ಹೊಟ್ಟೆಯನೋವಿಗೆ ಹಸಿರು ಟೀ

ನಿಮ್ಮ ನಿತ್ಯದ ಹಾಲು ಬೆರೆಸಿದ ಕಪ್ಪು ಟೀ ಬದಲಿಗೆ ಹಸಿರು ಟೀ ಸೇವಿಸಿದರೆ ಹೊಟ್ಟೆನೋವು ತಕ್ಷಣವೇ ಕಡಿಮೆಯಾಗುತ್ತದೆ. ಇನ್ನೂ ಉತ್ತಮವೆಂದರೆ ಈ ಪೇಯದಲ್ಲಿ ಒಂದು ಚಿಕ್ಕ ಚೂರು ಹಸಿಶುಂಠಿಯನ್ನು ಜಜ್ಜಿ ಬೆರೆಸಿ ಕುಡಿದರೆ ಅತ್ಯುತ್ತಮ ಪರಿಹಾರ ದೊರಕುತ್ತದೆ.

ಹೊಟ್ಟೆಯ ಹುಣ್ಣಿಗೆ ಹಸಿರು ಟೀ

ಹೊಟ್ಟೆಯ ಹುಣ್ಣಿಗೆ ಹಸಿರು ಟೀ

ಒಂದು ವೇಳೆ ಹೊಟ್ಟೆಯಲ್ಲಿ ಹುಣ್ಣು ಆಗಿದ್ದರೆ ಆ ಸಮಯದಲ್ಲಿ ಹಸಿರು ಟೀ ಸೇವನೆಯಿಂದ ಉತ್ತಮ ಪರಿಹಾರ ಪಡೆಯಬಹುದು. ಆದರೆ ಬಿಸಿನೀರಿಗಿಂತಲೂ ತಣಿಸಿ ಪೂರ್ಣವಾಗಿ ತಣ್ಣಗಾದ ಬಳಿಕ ಈ ಟೀ ಕುಡಿಯಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉರಿಯುತ್ತಿರುವ ಹುಣ್ಣನ್ನು ತಂಪುಗೊಳಿಸಿ ಶೀಘ್ರವೇ ಮಾಗಿಸಲು ನೆರವಾಗುತ್ತವೆ.

ಕೆಟ್ಟಿರುವ ಹೊಟ್ಟೆಗೆ ಹಸಿರು ಟೀ

ಕೆಟ್ಟಿರುವ ಹೊಟ್ಟೆಗೆ ಹಸಿರು ಟೀ

ಒಂದು ವೇಳೆ ಅಜೀರ್ಣತೆಯಿಂದ ಹೊಟ್ಟೆಯಲ್ಲಿ ಗುಡುಗುಡು ಎನ್ನುತ್ತಿದ್ದರೆ ಹಸಿರು ಟೀ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಒಂದು ಕಪ್ ಬಿಸಿಯಾದ ಹಸಿರು ಟೀ ಜೊತೆಗೆ ಅರ್ಧ ಲಿಂಬೆ ಅಥವಾ ಕೊಂಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುಡಿದರೆ ಉತ್ತಮ ಪ್ರಯೋಜನ ಪಡೆಯಬಹುದು. ಈ ಸಂಯೋಜನೆಯಿಂದ ಹೊಟ್ಟೆಯ ಗುಡುಗುಡು ತಕ್ಷಣವೇ ಕಡಿಮೆಯಾಗುತ್ತದೆ.

ಹೊಟ್ಟೆಯ ಫ್ಲೂ ಗುಣವಾಗಲು ಹಸಿರು ಟೀ

ಹೊಟ್ಟೆಯ ಫ್ಲೂ ಗುಣವಾಗಲು ಹಸಿರು ಟೀ

ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಮೊಸರಿನಲ್ಲಿರುವಂತಹ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಹಸಿರು ಟೀ ಯಲ್ಲಿಯೂ ಇವೆ. ಆದ್ದರಿಂದ ಹೊಟ್ಟೆಯ ಫ್ಲೂ ಎಂಬ ತೊಂದರೆ ಎದುರಾದರೆ ಒಂದು ಲೋಟ ಬಿಸಿ ಬಿಸಿ ಹಸಿರು ಟೀ ಕುಡಿಯುವ ಮೂಲಕ ಹೊಟ್ಟೆಯ ಈ ಸ್ಥಿತಿಗೆ ಕಾರಣವಾದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ಆ ಸ್ಥಳದಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ಸೇರಿಸುತ್ತದೆ. ಈ ಮೂಲಕ ಹೊಟ್ಟೆಯ ಫ್ಲೂ ಕಡಿಮೆಯಾಗುತ್ತದೆ.

 ಹೊಟ್ಟೆಯ ಉರಿಯೂತಕ್ಕೆ ಹಸಿರು ಟೀ

ಹೊಟ್ಟೆಯ ಉರಿಯೂತಕ್ಕೆ ಹಸಿರು ಟೀ

ಹೊಟ್ಟೆಯಲ್ಲಿ ಉರಿಯೂತವುಂಟಾಗಿದ್ದರೆ ಈ ಸಮಯದಲ್ಲಿ ಸೇವಿಸಲು ಅತ್ಯುತ್ತಮವಾದ ಆಹಾರವೆಂದರೆ ಹಸಿರು ಟೀ. ಒಂದು ಕಪ್ ಹಸಿರು ಟೀಯಲ್ಲಿ ಎರಡು ದೊಡ್ಡ ಚಮಚದಷ್ಟು ಪುದಿನಾ ಎಲೆಗಳನ್ನು ಬೆರೆಸಿ ಕುಡಿಯಿರಿ. ಇದರಿಂದ ಹೊಟ್ಟೆಯ ಉರಿಯೂತ ತಕ್ಷಣವೇ ಕಡಿಮೆಯಾಗುತ್ತದೆ.

ಹೊಟ್ಟೆಯ ಸೆಡೆತಕ್ಕೆ ಹಸಿರು ಟೀ

ಹೊಟ್ಟೆಯ ಸೆಡೆತಕ್ಕೆ ಹಸಿರು ಟೀ

ಸಾಮಾನ್ಯವಾಗಿ ಮಹಿಳೆಯರ ಮಾಸಿಕ ದಿನಗಳಲ್ಲಿ ಹೊಟ್ಟೆಯ ಸೆಡೆತ ಎದುರಾಗುತ್ತದೆ ಹಾಗೂ ಇದು ಬಹಳ ನೋವು ನೀಡುತ್ತದೆ. ಈ ಸಮಯದಲ್ಲಿ ಹಸಿರು ಟೀ ಕುಡಿಯುವುದು ಉತ್ತಮ. ಇದರಿಂದ ನೋವು ಕಡಿಮೆಯಾಗುತ್ತದೆ. ಹಸಿರು ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೊಟ್ಟೆಯ ಸೆಡೆತವನ್ನು ಕಡಿಮೆ ಮಾಡುವ ಜೊತೆಗೇ ಕರುಳನ್ನೂ ಶುದ್ಧೀಕರಿಸುತ್ತದೆ.

ಹೊಟ್ಟೆಯುಬ್ಬರಿಕೆಗೆ ಹಸಿರು ಟೀ

ಹೊಟ್ಟೆಯುಬ್ಬರಿಕೆಗೆ ಹಸಿರು ಟೀ

ಹಸಿರು ಟೀ ಯೊಂದಿಗೆ ಕೊಂಚ ಪುದಿನಾ ಎಲೆಗಳನ್ನು ಬೆರೆಸಿ ಸೇವಿಸುವ ಮೂಲಕ ಹೊಟ್ಟೆಯುಬ್ಬರಿಕೆ ಕಡಿಮೆಯಾಗುತ್ತದೆ. ನಿತ್ಯವೂ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ತಯಾರಿಸಿದ ಹಸಿರು ಟೀ ಸೇವಿಸುವ ಮೂಲಕ ಜಠರದಲ್ಲಿ ವಾಯು ಉತ್ಪನ್ನವಾಗುವುದು ಇಲ್ಲವಾಗುತ್ತದೆ ಹಾಗೂ ಈ ಮೂಲಕ ಹೊಟ್ಟೆಯುಬ್ಬರಿಕೆ ಕಡಿಮೆಯಾಗುತ್ತದೆ.

English summary

Is Green Tea Good For Stomach Problems?

Green tea has properties which will kill the bad bacteria in your intestine replacing it with good bacteria to fight off the infection. One must make it a habit to drink at least 2 cups of green tea on a daily dose. It is best to drink green tea when lukewarm along with honey in the morning on an empty stomach and another cup in the evening, 3 hours post lunch.