ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸೆಕ್ಸ್ ಸಮಯದಲ್ಲಿ ಈ ಟಿಪ್ಸ್ ಅನುಸರಿಸಿ

Posted By: Arshad
Subscribe to Boldsky

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಉಸಿರಿನ ವೇಗವನ್ನು ಹೆಚ್ಚಿಸುವ ಯಾವುದೇ ಕಾರ್ಯವನ್ನು ಕೈಗೊಳ್ಳಲು ಹಿಂಜರಿಯುತ್ತಾರೆ. ಇದರಲ್ಲಿ ಸಂಗಾತಿಯೊಂದಿಗೆ ಕೂಡುವ ಆತ್ಮೀಯ ಕ್ಷಣಗಳೂ ಒಂದು. ಏಕೆಂದರೆ ಈ ಸಮಯದಲ್ಲಿ ಏರುವ ಉಸಿರಾಟದ ಗತಿ ಅವರ ಆರೋಗ್ಯವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂಬ ಅನುಮಾನ ಇವರಿಗೆ ಕಾಡುತ್ತಿರುತ್ತದೆ. ಕೆಲವರು ಮಿಲನದ ಸಮಯದಲ್ಲಿ ಈ ಸ್ಥಿತಿಗೆ ತಲುಪಿ ತಮಗೂ, ತಮ್ಮ ಸಂಗಾತಿಯೂ ಅಪಾರವಾದ ಬೇಸರ ಹಾಗೂ ಉಸಿರುಗಟ್ಟುವ ಮೂಲಕ ಆಪಾಯವನ್ನೂ ಆಹ್ವಾನಿಸಿಕೊಂಡಿದ್ದಾರೆ.

ಆದರೆ ಈ ತೊಂದರೆ ಇದೆ ಎಂದ ಮಾತ್ರಕ್ಕೇ ಇವರು ನಿಸರ್ಗದ ಈ ಅಪ್ರತಿಮ ಕೊಡುಗೆಯಿಂದ ವಂಚಿತರಾಗಬೇಕಾಗಿಲ್ಲ. ತಜ್ಞರ ಪ್ರಕಾರ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆರೋಗ್ಯಕರ ಕ್ರಮಗಳನ್ನು ಅನುಸರಿಸುವ ಮೂಲಕ ತಮ್ಮ ಸಂಗಾತಿಯೊಂದಿಗೆ ಸುಖಕರ ಕ್ಷಣಗಳನ್ನು ಕಳೆಯಬಹುದು. ಉಸಿರಾಟದ ತೊಂದರೆಯನ್ನು ನಿರ್ವಹಿಸಲು ಯೋಗಾಭ್ಯಾಸಕ್ಕಿಂತ ಉತ್ತಮವಾದ ವ್ಯಾಯಾಮ ಮತ್ತೊಂದಿಲ್ಲ.

ಉಸಿರಾಟವನ್ನು ಉತ್ತಮಗೊಳಿಸುವ ಕೆಲವು ಆಸನಗಳನ್ನು ನಿಯಮಿತವಾಗಿ ಅನುಸರಿಸುತ್ತಾ ಬರುವ ಮೂಲಕ ನರಗಳನ್ನು ಶಾಂತಗೊಳಿಸಲು, ಮನಸ್ಸನ್ನು ಹತೋಟಿಯಲ್ಲಿಡಲು, ಧನಾತ್ಮಕ ಧೋರಣೆ ತಳೆಯಲು ಹಾಗೂ ಮುಖ್ಯವಾಗಿ ಶ್ವಾಸಕೋಶಗಳನ್ನು ಹಿಂಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಇದರ ಜೊತೆಗೇ ನಿಧಾನಗತಿಯ ಓಟ, ವೇಗದ ನಡಿಗೆ, ಧ್ಯಾನ ಹಾಗೂ ಈಜು ಸಹಾ ಶ್ವಾಸಕೋಶಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಇವು ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಮಿಲನದ ಸಮಯದಲ್ಲಿ ಅಗತ್ಯವಾದ ತ್ರಾಣವನ್ನು ಒದಗಿಸುತ್ತದೆ. ಅಲ್ಲದೇ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೆಲವು ಆಹಾರಗಳನ್ನು ವರ್ಜಿಸಬೇಕಾಗುತ್ತದೆ. ತಜ್ಞರ ಪ್ರಕಾರ ದೇಹವನ್ನು ತಂಪುಗೊಳಿಸುವ ಯಾವುದೇ ಆಹಾರಗಳು ಅಸ್ತಮಾ ಹಾಗೂ ಶ್ವಾಸಸಂಬಂಧಿ ತೊಂದರೆಗಳಿರುವ ವ್ಯಕ್ತಿಗಳಿಗೆ ಸಲ್ಲದು. ಅನಾನಾಸು, ಐಸ್ ಕ್ರೀಂ, ಪೇರಳೆ, ಲೆಟ್ಯೂಸ್ ಮೊದಲಾದ ದೇಹವನ್ನು ತಣಿಸುವ ಆಹಾರಗಳು ಈ ವ್ಯಕ್ತಿಗಳಿಗೆ ಸೂಕ್ತವಲ್ಲ.

ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು

ಈ ಆಹಾರಗಳ ಸೇವನೆಯಿಂದ ಶೀತ ಕೆಮ್ಮು ಆವರಿಸುವ ಸಾಧ್ಯತೆ ಇವರಿಗೆ ಹೆಚ್ಚಿರುತ್ತದೆ ಹಾಗೂ ಶ್ವಾಸಸಂಬಂಧಿ ತೊಂದರೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಹಾ ತಮ್ಮ ಸಂಗಾತಿಯೊಡನೆ ಆತ್ಮೀಯ ಕ್ಷಣಗಳನ್ನು ಆರೋಗ್ಯಕರವಾಗಿ ಕಳೆಯಲು ಕೆಲವು ಸಲಹೆಗಳನ್ನು ತಜ್ಞರು ಒದಗಿಸಿದ್ದು ಇವುಗಳನ್ನು ಅನುಸರಿಸುವ ಮೂಲಕ ಎಲ್ಲರಂತೆ ನೀವೂ ಪರಿಪೂರ್ಣ ಸುಖವನ್ನು ಪಡೆಯಲು ಸಾಧ್ಯ.....

ಕಾಮಕ್ರೀಡೆಗೂ ಮುನ್ನ ಸಾಕಷ್ಟು ಕೆಮ್ಮಿಕೊಳ್ಳಿ

ಕಾಮಕ್ರೀಡೆಗೂ ಮುನ್ನ ಸಾಕಷ್ಟು ಕೆಮ್ಮಿಕೊಳ್ಳಿ

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ, ವಿಶೇಷವಾಗಿ ಎದೆಯಲ್ಲಿ ಚಳಿ ಹೊಂದಿರುವವರು ಬಲವಂತವಾಗಿಯಾದರೂ ಸರಿ, ಗಂಟಲಲ್ಲಿ ಸಂಗ್ರಹವಾಗಿದ್ದ ಕಫವನ್ನು ನಿವಾರಿಸಿಕೊಂಡೇ ಮುಂದುವರೆಯಬೇಕು. ಇದರಿಂದ ಪ್ರಣಯದ ಸಮಯದಲ್ಲಿ ಉಸಿರಾಟ ಹೆಚ್ಚು ಸರಾಗವಾಗಿರುತ್ತದೆ.

ಕೇವಲ ನಿರಾಳರಾಗಿದ್ದ ಸಮಯದಲ್ಲಿ ಮಾತ್ರವೇ ಈ ಕ್ರಿಯೆಗೆ ಮುಂದಾಗಿ

ಕೇವಲ ನಿರಾಳರಾಗಿದ್ದ ಸಮಯದಲ್ಲಿ ಮಾತ್ರವೇ ಈ ಕ್ರಿಯೆಗೆ ಮುಂದಾಗಿ

ಲೈಂಗಿಕ ಕ್ರಿಯೆ ಸರಾಗವಾಗಿ ನಡೆಯಲು ದೇಹ ಮತ್ತು ಮನಸ್ಸುಗಳೆರಡೂ ನಿರಾಳವಾಗಿದ್ದು ಯಾವುದೇ ಒತ್ತಡದಲ್ಲಿರದೇ ಇರುವುದು ಅವಶ್ಯ. ಈ ಸಮಯದಲ್ಲಿ ಕೂಡುವ ಮೂಲಕ ಶ್ವಾಸಕೋಶಗಳ ಮೇಲೆ ಅತಿ ಕಡಿಮೆ ಒತ್ತಡವಿರುವ ಕಾರಣ ಆತ್ಮೀಯ ಕ್ಷಣಗಳಲ್ಲಿಯೂ ಏನೂ ತೊಂದರೆಯಾಗುವುದಿಲ್ಲ.

ಮುಂಜಾನೆ ಕೂಡುವುದರಿಂದ ತಪ್ಪಿಸಿಕೊಳ್ಳಿ

ಮುಂಜಾನೆ ಕೂಡುವುದರಿಂದ ತಪ್ಪಿಸಿಕೊಳ್ಳಿ

ಮುಂಜಾನೆಯ ಹೊತ್ತಿನ ಕೂಡುವಿಕೆ ಈ ವ್ಯಕ್ತಿಗಳಿಗೆ ಸಲ್ಲದು. ಏಕೆಂದರೆ ರಾತ್ರಿಯ ಸಮಯದಲ್ಲಿ ದೇಹ ಸಾಕಷ್ಟು ಕಫವನ್ನು ಉತ್ಪಾದಿಸಿ ಉಸಿರು ಆಡುವ ನಾಳಗಳ ಒಳಭಾಗದಲ್ಲೆಲ್ಲಾ ಸಂಗ್ರಹಿಸಿ ಉಸಿರಾಟವನ್ನು ಕೊಂಚ ಕಷ್ಟಕರವಾಗಿರಿಸುತ್ತದೆ. ಹಾಗಾಗಿ ಈ ಸಮಯ ನಿಮಗೆ ಸರ್ವಥಾ ಸೂಕ್ತವಲ್ಲ. ಬದಲಿಗೆ ನಿದ್ರೆ ಬರುವ ಮುನ್ನಾ ಸಮಯ ಉತ್ತಮವಾಗಿದೆ.

ಊಟದ ಬಳಿಕವೂ ಕೂಡುವಿಕೆ ಬೇಡ

ಊಟದ ಬಳಿಕವೂ ಕೂಡುವಿಕೆ ಬೇಡ

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಊಟದ ಬಳಿಕ ಕೂಡುವುದು ಅಪಾಯಕರವಾಗಿದೆ. ಊಟದ ಬಳಿಕ ಹೊಟ್ಟೆ ತುಂಬಿರುವ ಕಾರಣ ಶ್ವಾಸಕೋಶ ವಿಸ್ತರಿಸಲು ಕೊಂಚ ಕಡಿಮೆ ಸ್ಥಳಾವಕಾಶ ಪಡೆಯುವ ಕಾರಣ ಕೊಂಚ ಶಕ್ತಿಗುಂದಿರುತ್ತವೆ. ಆದ್ದರಿಂದ ಮಿಲನದ ಬಳಿಕವೇ ಊಟದ ಕಾರ್ಯಕ್ರಮವಿಟ್ಟುಕೊಂಡರೆ ಉತ್ತಮ.

ಸುಲಭ ಮತ್ತು ಆರಾಮದಾಯಕ ಭಂಗಿಗಳನ್ನೇ ಅನುಸರಿಸಿ

ಸುಲಭ ಮತ್ತು ಆರಾಮದಾಯಕ ಭಂಗಿಗಳನ್ನೇ ಅನುಸರಿಸಿ

ಉಸಿರಾಟದ ತೊಂದರೆ ಇರುವ ಪುರುಷರು ಗಂಡು ಮೇಲಿರುವ ಮಿಷನರಿ ಭಂಗಿಯನ್ನು ಅನುಸರಿಸಬಾರದು. ಏಕೆಂದರೆ ಈ ಭಂಗಿಯಲ್ಲಿ ಶ್ವಾಸಕೋಶಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರ ಬದಲಿಗೆ ಹೆಣ್ಣು ಮೇಲೆ ಬರುವ ಅಥವಾ ಪಕ್ಕಕ್ಕೆ ವಾಲಿರುವ ಭಂಗಿಗಳು ಸೂಕ್ತ. ಉಸಿರಾಟದ ತೊಂದರೆ ಇರುವ ಮಹಿಳೆಯ ಮೇಲೆ ಪುರುಷನ ಮೈಭಾರ ಬೀಳದ ಭಂಗಿಗಳು ಹೆಚ್ಚು ಸೂಕ್ತವಾಗಿವೆ.

ಮಿಲನದ ನಡುವೆ ಕೊಂಚ ವಿಶ್ರಾಂತಿ ಪಡೆಯಿರಿ

ಮಿಲನದ ನಡುವೆ ಕೊಂಚ ವಿಶ್ರಾಂತಿ ಪಡೆಯಿರಿ

ಮಿಲನ ಕ್ರಿಯೆ ಪ್ರಾರಂಭವಾದ ಬಳಿಕ ಉಸಿರಾಟದ ಗತಿಯೂ ಅನಿವಾರ್ಯವಾಗಿ ಹೆಚ್ಚಿಯೇ ಹೆಚ್ಚುತ್ತದೆ. ಆದರೆ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಈಗತಿ ಒಂದು ಮಿತಿಯನ್ನು ದಾಟಬಾರದು. ಆದ ಕಾರಣ ಮಿಲನ ಕ್ರಿಯೆಯನ್ನು ಉಸಿರು ಕೊಂಚ ತೀವ್ರವಾಗುತ್ತಿದ್ದಂತೆಯೇ ನಿಲ್ಲಿಸಿ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕು ಹಾಗೂ ಉಸಿರು ಮೊದಲಿನ ಗತಿಗೆ ಹಿಂದಿರುಗಲು ಬಿಡಬೇಕು. ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಇದೊಂದು ಅಮೂಲ್ಯವಾದ ಸಲಹೆಯಾಗಿದೆ.

ಉಸಿರಾಟದ ತೊಂದರೆಗೆ ಕೆಲವು ಮನೆಮದ್ದುಗಳು

ಉಸಿರಾಟದ ತೊಂದರೆಗೆ ಕೆಲವು ಮನೆಮದ್ದುಗಳು

ಯೋಗಾಭ್ಯಾಸ, ಈಜು, ಧ್ಯಾನ ಈ ಮೂರೂ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ವ್ಯಾಯಾಮಗಳಾಗಿವೆ. ಇದರ ಹೊರತಾಗಿ ಯಾವಾಗ ಉಸಿರು ಕಷ್ಟಕರ ಎನಿಸತೊಡಗಿತೋ ಆಗ ಬಿಸಿನೀರನ್ನು ನಿಧಾನವಾಗಿ ಗುಟುಕರಿಸುವುದರಿಂದಲೂ ಕೊಂಚ ಉಪಶಮನ ದೊರಕಬಹುದು.

English summary

Intimate Tips For People With Breathing Problems

People who suffer from breathing problems tend to avoid getting intimate with their partner, in fear that they will run short of breath during the process. For many who have witnessed this problem usually end up feeling embarrassed and suffocated while making love. To put an end to this health issue, experts state that those suffering from asthma and wheezing should follow healthy rules, to perform better in bed.