For Quick Alerts
ALLOW NOTIFICATIONS  
For Daily Alerts

ಕೊಬ್ಬರಿ ಎಣ್ಣೆಯ ಹದಿನೈದು ಅಚ್ಚರಿಯ ಆರೋಗ್ಯಕರ ಪ್ರಯೋಜನಗಳು

By Arshad
|

ದಕ್ಷಿಣ ಭಾರತೀಯರಿಗೆ ಚಿರಪರಿಚಿತವಾದ ಕೊಬ್ಬರಿ ಎಣ್ಣೆಯನ್ನು ನೂರಾರು ವರ್ಷಗಳಿಂದ ಅಡುಗೆ, ಸೌಂದರ್ಯ ಹಾಗೂ ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಸುಪರ್ ಫುಡ್ ಅಥವಾ ಅದ್ಭುತ ಆಹಾರದ ಪಟ್ಟಿಯಲ್ಲಿಯೂ ಸೇರಿಸಿಕೊಳ್ಳಲಾಗಿದೆ. ಇದರಲ್ಲಿರುವ ಅಗತ್ಯ ಪ್ರಮಾಣದ ಕೊಬ್ಬಿನ ಆಮ್ಲಗಳು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನುಂಟುಮಾಡುತ್ತವೆ.

ಇದರಲ್ಲಿ ಕೊಬ್ಬು ಕರಗಿಸುವುದು, ಮೆದುಳಿನ ಕ್ಷಮತೆ ಹೆಚ್ಚುವುದು ಹಾಗೂ ಇತರ ಅದ್ಭುತ ಪ್ರಯೋಜನಗಳೂ ಇವೆ. ಒಣಗಿದ ಕೊಬ್ಬರಿಯನ್ನು ಹಿಂಡಿ ತೆಗೆಯಲಾಗುವ ಕೊಬ್ಬರಿ ಎಣ್ಣೆಯ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಲು ನೆರವಾಗುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಬದಲಿಸಲೂ ನೆರವಾಗುತ್ತದೆ.

ಕೊಬ್ಬರಿ ಎಣ್ಣೆಯ ನವಿರಾದ ಸುವಾಸನೆ ಆಹಾರವನ್ನು ಹೆಚ್ಚು ಇಷ್ಟವಾಗುವಂತೆ ಮಾಡುತ್ತದೆ. ಕೊಬ್ಬರಿಯ ಮಿಠಾಯಿಗಳು ಹಾಗೂ ಕೊಬ್ಬರಿ ಎಣ್ಣೆಯ ಒಗ್ಗರಣೆ ನೀಡಿದ ಖಾದ್ಯಗಳು ಹೆಚ್ಚು ರುಚಿಕರವಾಗಿರುತ್ತವೆ. ಇದರಲ್ಲಿ ಸುಮಾರು 84 ಶೇಖಡಾ ಪರ್ಯಾಪ್ತ ಕೊಬ್ಬು ಇರುತ್ತದೆ. ಈ ಕೊಬ್ಬು ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಕೊಬ್ಬರಿ ಎಣ್ಣೆಯ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ, ಇವುಗಳಲ್ಲಿ ಪ್ರಮುಖವಾದ ಹದಿನೈದನ್ನು ಇಂದು ನೋಡೋಣ...

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳ ಕಾರಣ ಈ ಎಣ್ಣೆಯನ್ನು ದಹಿಸಲು ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ಇದರಲ್ಲಿರುವ ಕೊಬ್ಬಿನ ಆಮ್ಲಗಳು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಹಸಿವನ್ನು ಕಡಿಮೆಯಾಗಿಸುವ ಮೂಲಕ ಹೆಚ್ಚಿನ ಆಹಾರ ಸೇವಿಸದಂತೆ ತಡೆಯುತ್ತದೆ. ಒಟ್ಟಾರೆಯಾಗಿ ಇದು ತೂಕ ಇಳಿಕೆಗೆ ನೆರವಾಗುತ್ತದೆ.

ಅಪಾಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಅಪಾಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಕೊಬ್ಬರಿ ಎಣ್ಣೆಯಲ್ಲಿರುವ ಒಟ್ಟು ಕೊಬ್ಬಿನ ಆಮ್ಲದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಲಾರಿಕ್ ಆಮ್ಲವಿದೆ. ಈ ಲಾರಿಕ್ ಆಮ್ಲ ವೈರಸ್, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಹೊಂದಿದ್ದು ಈ ಮೂಲಕ ಎದುರಾಗುವ ಹಲವಾರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಈ ಸೋಂಕುಗಳಿಂದ ರಕ್ಷಣೆ ಪಡೆಯಲು ನಿಮ್ಮ ನಿತ್ಯದ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮಿತಪ್ರಮಾಣದಲ್ಲಿ ಬಳಸಬೇಕು.

ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ

ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ

ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT's) ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಲು ನೆರವಾಗುತ್ತದೆ. ಅಲ್ಲದೇ ಇವು ಸ್ನಾಯುಗಳನ್ನು ಬೆಳೆಸಲೂ ನೆರವಾಗುತ್ತದೆ. ನಿಮ್ಮ ನಿತ್ಯದ ಪ್ರೋಟೀನ್ ಯುಕ್ತ ಪೇಯದಲ್ಲಿ ಸುಮಾರು ಮೂರು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕುಡಿಯುವ ಮೂಲಕ ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ.

ಅಲ್ಝೀಮರ್ಸ್ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ

ಅಲ್ಝೀಮರ್ಸ್ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ

ಇತ್ತೀಚಿನ ಅಧ್ಯಯನದಲ್ಲಿ ಕಂಡುಕೊಂಡಂತೆ ಮೆದುಳಿನ ಜೀವಕೋಶಗಳಿಗೆ ಶಕ್ತಿ ನೀಡಲು ಮೆದುಳು ತನ್ನದೇ ಸ್ವಂತದ ಇನ್ಸುಲಿನ್ ಅನ್ನು ಉತ್ಪಾದಿಸಿಕೊಳ್ಳುತ್ತದೆ. ಈ ಮೂಲಕ ಗ್ಲೂಕೋಸ್ ಅನ್ನು ಸಂಸ್ಕರಿಸಿ ಮೆದುಳಿನ ಜೀವಕೋಶಗಳಿಗೆ ಶಕ್ತಿ ನೀಡ್ತುತದೆ. ಕೊಬ್ಬರಿ ಎಣ್ಣೆಯಲಿ ಇದಕ್ಕೆ ಪರ್ಯಾಯವಾದ ಶಕ್ತಿಮೂಲವನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಮೆದುಳನ್ನು ತನ್ನ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಅಲ್ಝೀಮರ್ಸ್ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ.

ಸ್ಮರಣ ಶಕ್ತಿ ಹೆಚ್ಚುತ್ತದೆ

ಸ್ಮರಣ ಶಕ್ತಿ ಹೆಚ್ಚುತ್ತದೆ

ಇದರಲ್ಲಿರುವ ಮಧ್ಯಮ ಸಂಕೋಲೆಯ ಟ್ರೈಗ್ಲಿಸರೈಡುಗಳು (Medium-chain triglycerides (MCT's) ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಸೇವಿಸುವ ಮೂಲಕ ಮರೆತ ವಿಷಯಗಳನ್ನು ನೆನಪಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ. ಏಕೆಂದರೆ ಈ MCTಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ. ಇವು ಮೆದುಳಿಗೂ ಸುಲಭವಾಗಿ ತಲುಪಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ತನ್ಮೂಲಕ ಸ್ಮರಣ ಶಕ್ತಿ ಹೆಚ್ಚುತ್ತದೆ.

ಅಂಗಗಳನ್ನು ಆರೋಗ್ಯಕರವಾಗಿರಿಸುತ್ತದೆ

ಅಂಗಗಳನ್ನು ಆರೋಗ್ಯಕರವಾಗಿರಿಸುತ್ತದೆ

ಕೊಬ್ಬರಿ ಎಣ್ಣೆಯಲ್ಲಿರುವ MCT ಹಾಗೂ ಕೊಬ್ಬಿನ ಆಮ್ಲಗಳು ಯಕೃತ್ ನ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಏಕೆಂದರೆ ಈ ಪೋಷಕಾಂಶಗಳು ಯಕೃತ್‌ಗೆ ತಲುಪಿದಾಗ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ ಹಾಗೂ ಯಕೃತ್ ನಲ್ಲಿ ಕೊಬ್ಬು ಉತ್ಪತ್ತಿಯಾಗದಂತೆ ತಡೆಯುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ ಹಾಗೂ ಪಿತ್ತಕೋಶದ ಕಾಯಿಲೆಗಳಿಂದಲೂ ರಕ್ಷಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಇದರಲ್ಲಿ ನೈಸರ್ಗಿಕ ಪರ್ಯಾಪ್ತ ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟಾಲ್ ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಪರಿವರ್ತಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಕೊಬ್ಬರಿ ಎಣ್ಣೆ ಹೆಪಟೈಟಿಸ್, ಸಿಡುಬು ಮತ್ತು ಇತರ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ವೈರಸ್ಸುಗಳನ್ನು ಕೊಲ್ಲುವ ಕ್ಷಮತೆ ಪಡೆದಿದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ನಮ್ಮ ಆಹಾರದ ಮೂಲಕ ಲಭಿಸುವ ಕೊಬ್ಬಿನಲ್ಲಿ ಕರಗುವ ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ವಿಟಮಿನ್ನುಗಳನ್ನು ಸುಲಭವಾಗಿ ಹೀರಿಕೊಳ್ಳಲು ಕೊಬ್ಬರಿ ಎಣ್ಣೆ ನೆರವಾಗುತ್ತದೆ. ಅಲ್ಲದೇ ಜೀರ್ಣಾಂಗಗಳ ಒಳಗೆ ಆಶ್ರಯ ಪಡೆದಿದ್ದ ಪರಾವಂಬಿ ಕ್ರಿಮಿಗಳನ್ನು ನಿವಾರಿಸಿ ಜೀರ್ಣಾಂಗಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಜಠರದ ಆಮ್ಲೀಯತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಹಲ್ಲುಗಳ ಆರೋಗ್ಯ ವೃದ್ಧಿಸುತ್ತದೆ

ಹಲ್ಲುಗಳ ಆರೋಗ್ಯ ವೃದ್ಧಿಸುತ್ತದೆ

ಕೊಬ್ಬರಿ ಎಣ್ಣೆ ಹಲ್ಲುಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ದೇಹ ಹೆಚ್ಚಾಗಿ ಹೀರಿಕೊಳ್ಳಲು ನೆರವಾಗುತ್ತದೆ ಹಾಗೂ ತನ್ಮೂಲಕ ಹಲ್ಲುಗಳು ಗಟ್ಟಿಯಾಗಲು ನೆರವಾಗುತ್ತದೆ. ಕೊಬ್ಬರಿ ಎಣ್ಣೆಯಿಂದ ಮುಕ್ಕಳಿಸಿಕೊಳ್ಳುವ ಮೂಲಕ ಬ್ಯಾಕ್ಟೀರಿಯಾಗಳ ನಿರ್ಮೂಲನೆ ಸಾಧ್ಯವಾಗುತ್ತದೆ ಹಾಗೂ ಒಸಡಿನ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ತಜ್ಞರ ಪ್ರಕಾರ ವಾರಕ್ಕೆ ಮೂರು ಬಾರಿಯಾದರೂ ಕೊಬ್ಬರಿ ಎಣ್ಣೆಯಿಂದ ಮುಕ್ಕಳಿಸಿಕೊಳ್ಳುವ ಮೂಲಕ ಬಾಯಿ ಹಾಗೂ ಹಲ್ಲುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.

ಹಾರ್ಮೋನುಗಳ ಸಮತೋಲನೆ ಕಾಪಾಡುತ್ತದೆ

ಹಾರ್ಮೋನುಗಳ ಸಮತೋಲನೆ ಕಾಪಾಡುತ್ತದೆ

ವಿಶೇಷವಾಗಿ ಮಹಿಳೆಯರ ದೇಹದಲ್ಲಿ ಸ್ರವಿಸುವ ರಸದೂತಗಳು ಸಮತೋಲನ ಕಳೆದುಕೊಂಡರೆ ಇದರ ಪ್ರಭಾವ ವಿಪರೀತವಾಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ರಸದೂತಗಳ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಅದರಲ್ಲೂ ರಜೋನಿವೃತ್ತಿಯ ಸಮಯದಲ್ಲಿ ಕೊಬ್ಬರಿ ಎಣ್ಣೆಯ ಸೇವನೆಯಿಂದ ಲಭಿಸುವ ಕೊಬ್ಬು ಈಸ್ಟ್ರೋಜೆನ್ ರಸದೂತದ ಪ್ರಮಾಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ.

ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಕ್ಯಾನ್ಸರ್ ಗುಣಪಡಿಸಬಲ್ಲುದು

ಕ್ಯಾನ್ಸರ್ ಗುಣಪಡಿಸಬಲ್ಲುದು

ಕೊಬ್ಬರಿ ಎಣ್ಣೆಯ ಸೇವನೆಯಿಂದ ದೇಹದಲ್ಲಿ ಕೀಟೋನುಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇವು ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳನ್ನು ಕೊಲ್ಲುವ ಕ್ಷಮತೆ ಹೊಂದಿದೆ. ಅಲ್ಲದೇ ಇದರಲ್ಲಿರುವ MCTಗಳು ಜೀರ್ಣಗೊಂಡಾಗ ಹೊಟ್ಟೆಯ ಕ್ಯಾನ್ಸರ್ ಉಂಟುಮಾಡುವ ಒಂದು ವಿಶಿಷ್ಟ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಅಪಸ್ಮಾರದ ಸೆಡೆತ ಕಡಿಮೆಯಾಗಿಸುತ್ತದೆ

ಅಪಸ್ಮಾರದ ಸೆಡೆತ ಕಡಿಮೆಯಾಗಿಸುತ್ತದೆ

ಇದರಲ್ಲಿರುವ ಕೊಬ್ಬಿನ ಆಮ್ಲಗಳು ಜೀರ್ಣಗೊಂಡಾಗ ಕೀಟೋನ್‌ಗಳಾಗಿ ಪರಿವರ್ತಿತವಗುತ್ತವೆ ಹಾಗೂ ಅಪಸ್ಮಾರದ ರೋಗಿಗಳಿಗೆ ಎದುರಾಗುವ ಸೆಡೆತವನ್ನು ತಡೆಯುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಅಪಸ್ಮಾರ ರೋಗ ಇರುವ ಮಕ್ಕಳು ಕೊಬ್ಬರಿ ಎಣ್ಣೆಯನ್ನು ಸೇವಿಸಿದಾಗ ಇವರಲ್ಲಿ ಸೆಡೆತ ಎದುರಾಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ ಹಾಗೂ ಸೂಕ್ಷಜೀವಿಗಳ ವಿರುದ್ದ ಸೆಣಸಾಡುವ ಮೇಧಸ್ಸುಗಳಿವೆ. ಕೊಬ್ಬರಿ ಎಣ್ಣೆಯಲ್ಲಿ ಶಿಲೀಂದ್ರ ನಿವಾರಕ, ಬ್ಯಾಕ್ಟೀರಿಯಾನಿವಾರಕ ಹಾಗೂ ವೈರಸ್ ನಿವಾರಕ ಗುಣಗಳಿದ್ದು ಎಲ್ಲವೂ ಒಟ್ಟಾಗಿ ದೇಹವನ್ನು ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ರಕ್ಷಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಕ್ರೀಡಾಪಟುಗಳು, ದೇಹದಾರ್ಢ್ಯ ಪಟುಗಳು ಹಾಗೂ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳು ಕೊಬ್ಬರಿ ಎಣ್ಣೆಯನ್ನು ಸೇವಿಸಿದಾಗ ಇದರ ಕೊಬ್ಬಿನ ಪ್ರಮಾಣ ಸುಲಭವಾಗಿ ಶಕ್ತಿಯಾಗಿ ಪರಿವರ್ತಿತವಾಗುತ್ತದೆ ಹಾಗೂ ಕೊಬ್ಬಾಗಿ ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಇದು ಶಕ್ತಿಯನ್ನು ನೀಡುತ್ತದೆ ಹಾಗೂ ಕ್ರಿಡಾಪಟುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಉತ್ತಮ ಸಾಧನೆ ಸಾಧಿಸಲು ಸಾಧ್ಯವಾಗುತ್ತದೆ.

ಒತ್ತಡದಿಂದ ಹೊರಬರಲು ನೆರವಾಗುತ್ತದೆ

ಒತ್ತಡದಿಂದ ಹೊರಬರಲು ನೆರವಾಗುತ್ತದೆ

ಕೊಬ್ಬರಿ ಎಣ್ಣೆ ಸಾಂತ್ವಾನಗೊಳಿಸುವ ಗುಣವನ್ನು ಹೊಂದಿದ್ದು ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ತಲೆಗೆ ಕೊಂಚ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೊಂಚ ಮಸಾಜ್ ಮಾಡಿದ ಬಳಿಕ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಇದಕ್ಕಾಗಿ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆಯನ್ನು ಬಳಸಬೇಕು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.

English summary

Impressive Health Benefits Of Coconut Oil

Coconut oil is one of the most common oils, which is being used for many purposes since ages. It is one of the few foods that can be classified as a superfood. The unique combinations of fatty acids in coconut oil can have positive effects on your health, which includes fat loss, better brain function and other amazing benefits. Coconut oil is made by pressing the fat from the white flesh of the coconut. It increases the healthy cholesterol level, and also helps in converting the bad cholesterol into good cholesterol.
X
Desktop Bottom Promotion