For Quick Alerts
ALLOW NOTIFICATIONS  
For Daily Alerts

ರೆಡ್ ವೈನ್ ಕುಡಿದ್ರೆ ಈ 10 ಆರೋಗ್ಯ ಲಾಭಗಳನ್ನು ಪಡ್ಕೊಬಹುದು!

|

ಸಾಮಾನ್ಯವಾಗಿ ಕೆಂಪು ವೈನ್ ಎಂದರೆ 'ಮಹಿಳೆಯರು ಕುಡಿಯುವ ಮದ್ಯ' ಎಂದೇ ಹೆಚ್ಚಿನವರು ಕುಹಕವಾಡುತ್ತಾರೆ. ಮಹಿಳೆಯರು ಮದ್ಯಕ್ಕೆ ವ್ಯಸನರಾಗುವ ಬದಲು ಕೆಂಪು ವೈನ್ ಅನ್ನೇ ಹೆಚ್ಚಾಗಿ ಬಯಸುವುದು ಈ ಕುಹಕಕ್ಕೆ ಕಾರಣವಾಗಿದೆ. ಕೆಂಪು ವೈನ್ ಗೆ ನೂರಾರು ವರ್ಷಗಳ ರೋಚಕ ಇತಿಹಾಸವಿದೆ. ಕೆಂಪು ವೈನ್ ಅನ್ನು ವಿವಿಧ ತಳಿಯ ಕಪ್ಪು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಈ ದ್ರಾಕ್ಷಿಗಳು ಗಾಢ ಕೆಂಪು ಬಣ್ಣದಿಂದ ಹಿಡಿದು ನೇರಳೆ ಅಥವಾ ಇಟ್ಟಿಗೆಯ ಕೆಂಪು ಅಥವಾ ಗಾಢ ಕಂದು ಬಣ್ಣದವೂ ಆಗಿರಬಹುದು.

ದ್ರಾಕ್ಷಿಗಳು ಚೆನ್ನಾಗಿ ಹಣ್ಣಾದ ಬಳಿಕ ಇವನ್ನು ಹಿಂಡಿ ರಸವನ್ನು ಸಂಗ್ರಹಿಸಲಾಗುತ್ತದೆ ಹಾಗೂ ನೈಸರ್ಗಿಕವಾಗಿ ಕೊಂಚವೇ ಹುಳಿ ಬರುವಂತೆ ಮಾಡಲಾಗುತ್ತದೆ. ಹೀಗೆ ಹುಳಿಬರುವಾಗ ಇದರಲ್ಲಿ ಹಲವಾರು ಆಂಟ್ ಆಕ್ಸಿಡೆಂಟುಗಳು ಉತ್ಪತ್ತಿಯಾಗುತ್ತವೆ. ಒಂದು ವೇಳೆ ಈ ಹುಳಿ ಇನ್ನೂ ಹೆಚ್ಚಾಗಿ ಹುದುಗು ಬಂದರೆ ಇದು ಮದ್ಯವಾಗಿ ಪರಿವರ್ತಿತವಾಗುತ್ತದೆ. ಆದರೆ ಇದಕ್ಕೂ ಮುಂಚೆಯೇ ಸಂಗ್ರಹಿಸುವ ಕೆಂಪು ವೈನ್ ನಲ್ಲಿ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ವೃದ್ಧಾಪ್ಯವನ್ನು ಮುಂದೂಡುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಹೃದಯದ ಆರೋಗ್ಯವನ್ನು ಹೆಚ್ಚಿಸುವುದು ಇದರಲ್ಲಿ ಪ್ರಮುಖವಾಗಿವೆ.

ಕೆಂಪು ದ್ರಾಕ್ಷಿಯಲ್ಲಿ ರೆಸ್ವರಾಟ್ರಾಲ್, ಕ್ಯಾಟೆಚಿನ್, ಎಪಿ ಕ್ಯಾಟೆಚಿನ್ ಹಾಗೂ ಪ್ರೋಆಂಥೋಸೈಯಾನಿನಿಡಿನ್ ಮೊದಲಾದ ಆಂಟಿ ಆಕ್ಸಿಡೆಂಟುಗಳಿವೆ. ಇವುಗಳ ಸೇವನೆಯಿಂದ ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುವುದು, ಫ್ರೀ ರ್‍ಯಾಡಿಕಲ್ ಎಂಬ ಹಾನಿಕಾರಕ ಕಣಗಳ ಧಾಳಿಯನ್ನು ಎದುರಿಸುವ ಮೂಲಕ ಹೃದಯದ ಕಾಯಿಲೆಗಳ ಸಾದ್ಯತೆ ಕಡಿಮೆಯಾಗಿಸುವುದು ಮೊದಲಾದ ಪ್ರಯೋಜನಗಳಿವೆ. ಆದರೆ ಅತಿಯಾದರೆ ಅಮೃತವೂ ವಿಷವಂತೆ. ಕೆಂಪು ವೈನ್ ಸಹಾ ಮಿತ ಪ್ರಮಾಣದಲ್ಲಿದ್ದಾಗ ಮಾತ್ರವೇ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಅತಿಯಾದರೆ ಇದು ಆರೋಗ್ಯಕ್ಕೆ ಮಾರಕವಾಗಬಲ್ಲುದು. ಮಿತಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಯಕೃತ್ ನ ತೊಂದರೆ, ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಮರೆಗುಳಿತನದ ವಿರುದ್ಧ ರಕ್ಷಣೆ ಪಡೆಯಬಹುದು. ಕೆಂಪು ವೈನ್ ನಲ್ಲಿ 12 ರಿಂದ 15ಶೇಖಡಾ ಆಲ್ಕೋಹಾಲ್ ಇದೆ. ಒಂದು ಪ್ರಮಾಣದ ಕೆಂಪು ವೈನ್ ನಲ್ಲಿ ಸುಮಾರು 125 ಕ್ಯಾಲೋರಿಗಳಿವೆ ಹಾಗೂ 3.8 ಗ್ರಾಂ ಕಾರ್ಬೋಹೈಡ್ರೇಟುಗಳಿವೆ. ಹಾಗೂ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಬನ್ನಿ, ಮಿತಪ್ರಮಾಣದ ಕೆಂಪು ವೈನ್ ಸೇವನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ಚಿಕ್ಕ ಪ್ರಮಾಣದ ಸೇವನೆಯೇ ಆರೋಗ್ಯಕರ

ಚಿಕ್ಕ ಪ್ರಮಾಣದ ಸೇವನೆಯೇ ಆರೋಗ್ಯಕರ

ಕೆಂಪು ವೈನ್ ಅನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸೇವಿಸದೇ ಇರುವುದಕ್ಕಿಂತ ಒಳ್ಳೆಯದು. ಏಕೆಂದು ಗೊತ್ತೇ? ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯದ ಕಾಯಿಲೆಗಳು, ಟೈಪ್ ೨ ಮಧುಮೇಹ ಹಾಗೂ ಈ ಮೂಲಕ ಎದುರಾಗುವ ಸಾವಿನ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ. ಆದರೆ ವೈನ್ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಪ್ರಾಣಕ್ಕೇ ಕುತ್ತಾಗಬಹುದು.

ಕೆಂಪು ವೈನ್ ನಲ್ಲಿದೆ ಪಾಲಿಫೆನಾಲುಗಳು

ಕೆಂಪು ವೈನ್ ನಲ್ಲಿದೆ ಪಾಲಿಫೆನಾಲುಗಳು

ಕೆಂಪು ವೈನ್ ಅನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸೇವಿಸದೇ ಇರುವುದಕ್ಕಿಂತ ಒಳ್ಳೆಯದು. ಏಕೆಂದು ಗೊತ್ತೇ? ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೃದಯದ ಕಾಯಿಲೆಗಳು, ಟೈಪ್ ೨ ಮಧುಮೇಹ ಹಾಗೂ ಈ ಮೂಲಕ ಎದುರಾಗುವ ಸಾವಿನ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ. ಆದರೆ ವೈನ್ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಪ್ರಾಣಕ್ಕೇ ಕುತ್ತಾಗಬಹುದು.

ಗಾಯಗಳು ಅಥವಾ ಮೊಡವೆಗಳ ಕಲೆಗಳಿದ್ದರೆ...

ಗಾಯಗಳು ಅಥವಾ ಮೊಡವೆಗಳ ಕಲೆಗಳಿದ್ದರೆ...

ಗಾಯಗಳು ಅಥವಾ ಮೊಡವೆಗಳು ಒಣಗಿದ ಬಳಿಕ ಕಪ್ಪನೆಯ ಕಲೆಗಳನ್ನು ಶಾಶ್ವತವಾಗಿ ಉಳಿಸುತ್ತದೆ. ಆದರೆ ಒಂದು ವೇಳೆ ಕೆಂಪು ವೈನ್ ನ ಆರೈಕೆ ಸಿಕ್ಕರೆ ಏಳೇ ದಿನದಲ್ಲಿ ಈ ಕಲೆಗಳು ಬಹುತೇಕವಾಗಿ ಮಾಯವಾಗುತ್ತವೆ. ಇದಕ್ಕಾಗಿ ಕೆಂಪು ವೈನ್ ಬೆರೆಸಿದ ನೀರನಿಂದ ದಿನಕ್ಕೆರಡು ಬಾರಿ ಸ್ನಾನ ಮಾಡಿ. ಆದರೆ ಸ್ನಾನದ ಬಳಿಕ ಯಾವುದೇ ಲೋಶನ್ ಅಥವಾ ದ್ರಾವಣಗಳನ್ನು ಬಳಸಬೇಡಿ.

ಲೈಂಗಿಕ ಜೀವನನ್ನು ಉತ್ತಮಗೊಳಿಸುತ್ತದೆ

ಲೈಂಗಿಕ ಜೀವನನ್ನು ಉತ್ತಮಗೊಳಿಸುತ್ತದೆ

ಕೆಂಪು ವೈನ್ ನ ಪ್ರಯೋಜನಗಳಲ್ಲಿ ಇದೊಂದು ಕುತೂಹಲಕರವಾದ ಮಾಹಿತಿಯಾಗಿದೆ. ಒಂದು ವೇಳೆ ಕೆಂಪು ವೈನ್ ಅನ್ನು ನಿಯಮಿತವಾಗಿ ಹಾಗೂ ಮಿತಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಾಗಿ ಕಂಡುಕೊಳ್ಳಲಾಗಿದೆ. ನಿತ್ಯವೂ ಎರಡು ಲೋಟ ಕೆಂಪು ವೈನ್ ಸೇವಿಸುವ ಮಹಿಳೆಯರು ಲೈಂಗಿಕ ಸಂವೇದನೆಯನ್ನು ಇತರರಿಗಿಂತ ಹೆಚ್ಚು ಅನುಭವಿಸುತ್ತಾರೆ.

ಆಲ್ಝೈಮರ್ ನ ಸಾಧ್ಯತೆ ಕಡಿಮೆ ಮಾಡುತ್ತದೆ

ಆಲ್ಝೈಮರ್ ನ ಸಾಧ್ಯತೆ ಕಡಿಮೆ ಮಾಡುತ್ತದೆ

ರೆಡ್ ವೈನ್ ನ ಮತ್ತೊಂದು ಆರೋಗ್ಯಕಾರಿ ಲಕ್ಷಣವೆಂದರೆ ಇದು ಆಲ್ಝೈಮರ್ ನ ಸಾಧ್ಯತೆ ಕಡಿಮೆ ಮಾಡುತ್ತದೆ. ಯಾವತ್ತೂ ಒಂದು ಹನಿ ಆಲ್ಕೋಹಾಲ್ ಸೇವನೆ ಮಾಡದಿರುವಂತಹ ವ್ಯಕ್ತಿಗಳು ಆಲ್ಝೈಮರ್ ನಿಂದ ಹೊರಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಇರುತ್ತಾರೆ. ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಫ್ರಾನ್ಸ್ ನ ಜನರು ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವಿಸುತ್ತಾರೆ ಮತ್ತು ಅವರು ಹೃದಯದ ಸಮಸ್ಯೆಗೆ ಒಳಗಾಗುವುದು ಅತೀ ಕಡಿಮೆ. ಇದು ಯಾಕೆಂದರೆ ರೆಡ್ ವೈನ್ ಸೇವನೆಯಿಂದ. ಆಲ್ಝೈಮರ್ ಗೆ ಬಂದರೆ ರೆಡ್ ವೈನ್ ನ ಆರೋಗ್ಯಕರ ಗುಣಗಳು ತುಂಬಾ ಅಚ್ಚರಿಯನ್ನುಂಟು ಮಾಡುತ್ತದೆ. ರೆಡ್ ವೈನ್ ನಲ್ಲಿರುವ ರೆಸ್ವೆರಾಟ್ರೊಲ್ ಗುಣಲಕ್ಷಣಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ಮೂಲ ಸ್ವಭಾವ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇದುವರೆಗೆ ತಿಳಿದಿಲ್ಲ. ಆದಾಗ್ಯೂ ವಿಜ್ಞಾನಿಗಳು ನಂಬಿರುವ ಪ್ರಕಾರ ಇದರಲ್ಲಿರುವ ಸಂಯುಕ್ತವು ಒಂದು ವಂಶವಾಹಿಯನ್ನು ಜೀವಂತವಾಗಿರಿಸಿ ಮೆದುಳಿಗೆ ವಯಸ್ಸಾಗದಂತೆ ತಡೆಯುತ್ತದೆ.

ಕೆಂಪು ವೈನ್ ನಲ್ಲಿ ಕ್ಯಾಲೋರಿ ಅತಿ ಕಡಿಮೆ ಇದೆ

ಕೆಂಪು ವೈನ್ ನಲ್ಲಿ ಕ್ಯಾಲೋರಿ ಅತಿ ಕಡಿಮೆ ಇದೆ

ಕೆಂಪು ವೈನ್ ಸೇವನೆಯಿಂದ ಸ್ಥೂಲಕಾಯ ಎದುರಾಗುವುದಿಲ್ಲ. ನಿತ್ಯವೂ ಒಂದು ಲೋಟ ಕೆಂಪು ವೈನ್ ಸೇವಿಸುವ ಮಹಿಳೆಯರಲ್ಲಿ ಇತರ ಮಹಿಳೆಯರಿಗಿಂತ ಸುಮಾರು ಹತ್ತು ಪೌಂಡುಗಳಷ್ಟು ಕಡಿಮೆ ಕೊಬ್ಬು ಹೊಂದಿರುತ್ತಾರೆ. ಕೆಂಪು ವೈನ್ ನಲ್ಲಿ ಕ್ಯಾಲೋರಿಗಳು ಅಥವಾ ಕೊಬ್ಬು ಇಲ್ಲವೇ ಇಲ್ಲ.

ಕೆಂಪು ವೈನ್ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಕೆಂಪು ವೈನ್ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಕೆಂಪು ವೈನ್ ನಲ್ಲಿರುವ ರೆಸ್ವರೆಟ್ರಾಲ್ ಎಂಬ ಪೋಷಕಾಂಶಕ್ಕೆ ಘಾಸಿಗೊಂಡ ಡಿ ಎನ್ ಎ ಗಳನ್ನು ಸರಿಪಡಿಸುವುದು, ಗಡ್ಡೆಯಾಗುವ ಅನುವಂಶಿಕ ಧಾತುಗಳ ಬೆಳವಣಿಗೆ ಪ್ರತಿಬಂಧಿಸುವುದು ಹಾಗೂ ಆಯಸ್ಸನ್ನು ವೃದ್ದಿಸುವುದು ಮೊದಲಾದ ಗುಣಗಳಿವೆ. ದಿನಕ್ಕೊಂದು ಲೋಟ ಕೆಂಪು ವೈನ್ ಸೇವಿಸುವುದರಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನುಕಡಿಮೆಗೊಳಿಸಬಹುದು. ಸಾಧ್ಯವಾದರೆ ನಿತ್ಯವೂ ರಾತ್ರಿಯೂಟದೊಂದಿಗೆ ಒಂದು ಲೋಟ ಕೆಂಪು ವೈನ್ ಸೇವಿಸಬಹುದು.

ಕೆಂಪು ವೈನ್ ನಿದ್ದೆಯನ್ನು ಉತ್ತಮಗೊಳಿಸುತ್ತದೆ

ಕೆಂಪು ವೈನ್ ನಿದ್ದೆಯನ್ನು ಉತ್ತಮಗೊಳಿಸುತ್ತದೆ

ಕೆಂಪು ವೈನ್ ನಲ್ಲಿ ಮೆಲಟೋನಿನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಈ ಪೋಷಕಾಂಶ ಗಾಢ ನಿದ್ದೆಗೆ ಮೂಲವಾಗಿದೆ. ಕೆಂಪು ವೈನ್ ತಯಾರಿಸುವ ದ್ರಾಕ್ಷಿಗಳಲ್ಲಿ ಈ ಪೋಷಕಾಂಶ ಹೇರಳವಾಗಿದೆ. ಒಂದು ವೇಳೆ ರಾತ್ರಿನಿದ್ದೆ ಬರುವುದು ಕಷ್ಟಕರವಾಗಿದ್ದರೆ ಅಥವಾ ತಡೆತಡೆದು ನಿದ್ದೆ ಭಂಗಗೊಳ್ಳುತ್ತಿದ್ದರೆ ದಿನದ ಅವಧಿಯಲ್ಲಿ ಒಂದು ಲೋಟ ಕೆಂಪು ವೈನ್ ಸೇವಿಸಬೇಕು. ಆದರೆ ರಾತ್ರಿ ಮಲಗುವ ಮುನ್ನ ಕೆಂಪು ವೈನ್ ಸೇವಿಸದಂತೆ ಎಚ್ಚರ ವಹಿಸಿ.

ಕೆಂಪು ವೈನ್ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ

ಕೆಂಪು ವೈನ್ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ

ನಿತ್ಯದ ಒಂದು ಲೋಟ ಕೆಂಪು ವೈನ್ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ವೃದ್ದಾಪ್ಯವನ್ನು ತಡವಾಗಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉತ್ಕರ್ಷಣಶೀಲ ಒತ್ತಡವನ್ನು ನಿಧಾನಗೊಳಿಸುತ್ತದೆ. ಒಂದು ವೇಳೆ ಈ ಒತ್ತಡಕ್ಕೆ ಸಿಲುಕಿದರೆ ಜೀವಕೋಶಗಳು ಸಡಿಲಗೊಂಡು ನೆರಿಗೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಧೂಮಪಾನದ ಹಾನಿಕಾರಕ ಪರಿಣಾಮಗಳಿಂದ ಹಿಮ್ಮರಳಿಸುತ್ತದೆ

ಧೂಮಪಾನದ ಹಾನಿಕಾರಕ ಪರಿಣಾಮಗಳಿಂದ ಹಿಮ್ಮರಳಿಸುತ್ತದೆ

ಸತತ ಧೂಮಪಾನದಿಂದ ಈಗಾಗಲೇ ನಿಮ್ಮ ದೇಹದ ಮೇಲೆ ಹಲವಾರು ಪರಿಣಾಮಗಳು ಎದುರಾಗಿದ್ದರೆ ಧೂಮಪಾನ ತ್ಯಜಿಸಿ ಕೆಂಪು ವೈನ್ ಸೇವನೆ ಪ್ರಾರಂಭಿಸುವ ಮೂಲಕ ಈ ಪರಿಣಾಮಗಳನ್ನು ಹಿಮ್ಮರಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಉರಿಯೂತ ಹಾಗೂ ತ್ವಚೆ ಸಡಿಲವಾಗುವುದನ್ನು ತಡೆದು ವೃದ್ದಾಪ್ಯದ ಚಿಹ್ನೆಗಳನ್ನು ದೂರವಾಗಿಸುತ್ತದೆ.ಒಂದು ವೇಳೆ ಈ ಲೇಖನ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳಲು ಮರೆಯದಿರಿ.

English summary

Important Facts About Red Wine That Will Blow Your Mind

Red wine is good for you, but overconsumption could be fatal. Consuming red wine in moderate quantities can prevent liver diseases, protect against prostate cancer and dementia. The alcohol content of red wine ranges from 12 percent to 15 percent and it contains 125 calories and zero cholesterol with 3.8 grams of carbohydrates. Now, let us have a look at the important facts of red wine.
X
Desktop Bottom Promotion