For Quick Alerts
ALLOW NOTIFICATIONS  
For Daily Alerts

ಸೈನಸ್ ತೊಂದರೆಯೇ? ಬೆಳ್ಳುಳ್ಳಿ, ಈರುಳ್ಳಿ, ಮೂಲಂಗಿಯ ನೆರವು ಪಡೆಯಿರಿ

|

ಚಳಿಗಾಲ ಬಂದೇ ಬಿಟ್ಟಿದೆ, ಇದರೊಂದಿಗೆ ಚಳಿಗಾಲದ ಕಾಯಿಲೆಗಳು ಸಹಾ! ಈ ಸಮಯದಲ್ಲಿ ಗಾಳಿಯಲ್ಲಿ ಉಳಿದ ಸಮಯಕ್ಕಿಂತ ಹೆಚ್ಚೇ ವೈರಸ್ಸುಗಳು ತೇಲಾಡುತ್ತಿರುತ್ತವೆ. ವಿಶೇಷವಾಗಿ ಫ್ಲೂ ವೈರಸ್ ಹಲವರಲ್ಲಿ ಸೋಂಕು ಹರಡುತ್ತದೆ. ಈಗಾಗಲೇ ಫ್ಲೂ ಆವರಿಸಿರುವ ವ್ಯಕ್ತಿ ಸೀನಿದರೆ ಗಾಳಿಯಲ್ಲಿ ಈ ವೈರಸ್ಸುಗಳು ಹರಡುವ ಸಾಧ್ಯತೆ ಅಪಾರವಾಗಿ ಹೆಚ್ಚುವುದರಿಂದ ಈಗಾಗಲೇ ಮನೆಯಲ್ಲಿ ಕನಿಷ್ಠ ಒಬ್ಬರಿಗೆ ಸೋಂಕು ತಗಲಿದ್ದರೆ ಚಳಿಯ ನೆಪದಲ್ಲಿ ಮನೆಯಿಂದ ಹೊರಗೇ ಹೋಗದಿರುವ ವ್ಯಕ್ತಿಗಳಿಗೆ ಈ ವೈರಸ್ಸುಗಳು ಧಾಳಿ ಇಡುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.

ಮನೆಯೊಳಗೆ ಸಾಮಾನ್ಯವಾಗಿ ಬೆಚ್ಚಗಿರುವ ಕಾರಣ ಹೊರಗಿನ ಚಳಿಗಿಂತಲೂ ಮನೆಯೊಳಗೇ ಈ ವೈರಸ್ಸುಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಹೀಗೆ ಗಾಳಿಯ ಮೂಲಕ ಹರಡುವ ವೈರಸ್ಸುಗಳಿಂದ ಎದುರಾಗುವ ಇನ್ನೊಂದು ಕಾಯಿಲೆ ಎಂದರೆ ಕುಹರ ಅಥವಾ ಸೈನಸ್ ನ ಸೋಂಕು. ಮೂಗಿನ ಮೇಲೆ ಹಾಗೂ ಹಣೆಯ ನಡುವೆ ನಮ್ಮ ತಲೆಬುರುಡೆಯಲ್ಲಿ ಒಂದು ಟೊಳ್ಳು ಭಾಗವಿದೆ. ಇದೇ ಸೈನಸ್ ಅಥವಾ ಕುಹರ.

garlic juice

ಮೂಗಿನ ಮತ್ತು ಗಂಟಲ ಮೇಲ್ಭಾಗದಲ್ಲಿ ಗಾಳಿಯ ಪ್ರಮಾಣವನ್ನು ಹಾಗೂ ಕಫವನ್ನು ನಿಯಂತ್ರಿಸುವುದು ಈ ಕುಹರದ ಕೆಲಸ. ಉಸಿರಾಟದ ಮೂಲಕ ಒಳ ಬಂದ ವೈರಸ್ಸು ಮೂಗಿನ ಮೇಲ್ಭಾಗದ ತೇವಭಾಗದಲ್ಲಿ ಆಶ್ರಯ ಪಡೆದು ಉರಿಯೂತ ಉಂಟುಮಾಡುತ್ತದೆ. ಈ ಉರಿಯೂತದ ಪರಿಣಾಮವಾಗಿ ಗಾಳಿಯಾಡುವ ಭಾಗ ಕಿರಿದಾಗಿ ಕೆಲವೊಮ್ಮೆ ಮುಚ್ಚಿಯೇ ಬಿಡುತ್ತದೆ. ಇದನ್ನೇ ನಾವು ಕಟ್ಟಿಕೊಂಡ ಮೂಗು ಎಂದು ಕರೆಯುತ್ತೇವೆ.

ಸೈನಸ್ ಗುಣಪಡಿಸುವ ಆಹಾರಗಳಿವು

ಈ ಉರಿಯೂತಕ್ಕೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಿನ ಕಫವನ್ನು ಉತ್ಪತ್ತಿ ಮಾಡಿ ವೈರಸ್ಸುಗಳನ್ನು ಕೊಂದು ನಿವಾರಿಸಲು ಯತ್ನಿಸುತ್ತದೆ. ಪರಿಣಾಮವಾಗಿ ಈ ಸೋಂಕು ಇನ್ನಷ್ಟು ಹೆಚ್ಚುತ್ತದೆ. ಕುಹರ ಯಾವಾಗ ಬಂದ್ ಆಯಿತೋ ಆಗ ಉಸಿರಾಟ ಕಷ್ಟಕರವಾಗುವ ಜೊತೆಗೇ ತಲೆನೋವೂ ಎದುರಾಗುತ್ತದೆ. ಏಕೆಂದರೆ ಇತರ ಸಮಯದಲ್ಲಿ ಕುಹರ ಖಾಲಿಯಾಗಿದ್ದು ತಲೆಯ ಭಾರ ಕಡಿಮೆಯಾಗಿರುತ್ತದೆ.

ಈಗ ಸೋಂಕು ಉಂಟಾದರೆ ಈ ಭಾಗ ತುಂಬಿಕೊಂಡು ತಲೆ ಭಾರವಾದಂತೆ ಅನ್ನಿಸುತ್ತದೆ. ಕುಹರದ ಸೋಂಕು ನಿತ್ಯದ ಕೆಲಸಗಳಿಗೆ ಬಾಧೆಯುಂಟುಮಾಡಬಹುದು. ವೈರಸ್ಸುಗಳ ಸೋಂಕನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಪ್ರಬಲವಾದ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಕುಹರದ ಸೋಂಕು ಗುಣಮಾಡಲು ಯತ್ನಿಸಬಹುದು.

ಬೆಳ್ಳುಳ್ಳಿಯ ಕಮಟು ವಾಸನೆ ಮತ್ತು ಒಗರು ರುಚಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಈ ಗುಣಗಳೇ ಕುಹರದ ಸೋಂಕು ನಿವಾರಿಸಲು ಅತ್ಯುತ್ತಮ ಅಸ್ತ್ರಗಲಾಗಿವೆ. ಬೆಳ್ಳುಳ್ಳಿ ಕುಹರದ ಸೋಂಕಿಗೆ ಕಾರಣವಾಗಿರುವ ಉರಿಯೂತವನ್ನು ನಿವಾರಿಸುವ ಮೂಲಕ ಈ ತೊಂದರೆಯ ಮೂಲವನ್ನು ಸರಿಪಡಿಸಿ ಸೋಂಕನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ಆಧಾರಿತ ಆಲಿಸಿನ್ ಎಂಬ ಪೋಷಕಾಂಶ ಈ ಉರಿಯೂತವನ್ನು ನಿವಾರಿಸುವ ಗುಣ ಹೊಂದಿದೆ.

ಉರಿಯೂತ ಕಡಿಮೆಯಾದ ತಕ್ಷಣವೇ ಊದಿಕೊಂಡಿದ್ದ ಭಾಗವೂ ಕಡಿಮೆಯಾಗಿ ಕಟ್ಟಿಕೊಂಡಿದ್ದ ಕಫ ಕರಗಿ ವಿಸರ್ಜನೆಗೊಳ್ಳುತ್ತದೆ ಹಾಗೂ ಉಸಿರಾಟ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳ್ಳುಳ್ಳಿ ಅತ್ಯುತ್ತಮ ಪ್ರತಿಜೀವಕವೂ ಆಗಿದೆ. ಬನ್ನಿ, ಕುಹರದ ಸೋಂಕು ಇದ್ದರೆ ಬೆಳ್ಳುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ..

ಬೆಳ್ಳುಳ್ಳಿ ಮತ್ತು ಮೂಲಂಗಿ ಪೇಯ
ಈ ಪೇಯದಲ್ಲಿ ಬೆಳ್ಳುಳ್ಳಿಯೊಂದಿಗೆ ಈರುಳ್ಳಿ ಮತ್ತು ಮೂಲಂಗಿಗಳನ್ನು ಬಳಸಲಾಗಿದ್ದು ಇವೆರಡೂ ಹೆಚ್ಚಿನ ಗಂಧಕದ ಅಂಶ ಹೊಂದಿರುವ ಆಹಾರಗಳಾಗಿವೆ. ಕುಹರದ ಸೋಂಕು ಇಳಿಸಲು ಗಂಧಕ ಪ್ರಮುಖ ಪಾತ್ರ ವಹಿಸುತ್ತದೆ. ಈರುಳ್ಳಿಯ ಘಾಟು ಕಟ್ಟಿಕೊಂಡಿದ್ದ ಮೂಗನ್ನು ತೆರೆಯಲು ಸಹಕರಿಸುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಈ ಸೋಂಕಿನಲ್ಲಿ ಆಶ್ರಯಪಡೆದಿದ್ದ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳನ್ನು ಕೊಂದು ಕಫವನ್ನು ನಿವಾರಿಸಿ ದೇಹದಿಂದ ವಿಸರ್ಜಿಸಲು ನೆರವಾಗುತ್ತದೆ.


ನೈಸರ್ಗಿಕ ಎಣ್ಣೆ: ಸೈನಸ್ ಸಮಸ್ಯೆಗೆ ಶೀಘ್ರ ಪರಿಹಾರ...

ಅಗತ್ಯವಿರುವ ಸಾಮಾಗ್ರಿಗಳು
-5-6 ಬೆಳ್ಳುಳ್ಳಿ ಎಸಳು
-1 ದೊಡ್ಡ ಚಮಚ ಲಿಂಬೆರಸ
-1 ಈರುಳ್ಳಿ
-2-3 ಮೂಲಂಗಿಗಳು
-1 ದೊಡ್ಡ ಚಮಚ ಜೇನು

ವಿಧಾನ:
1) ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಸಿಪ್ಪೆ ಸುಲಿಯಿರಿ
2) ಈರುಳ್ಳಿ ಮತ್ತು ಮೂಲಂಗಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ
3) ಒಂದು ಪಾತ್ರೆಯಲ್ಲಿ ಇವು ಮುಳುಗುವಷ್ಟು ನೀರು ಹಾಕಿ ಕುದಿಸಿ


4) ಸುಮಾರು ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದ ಬಳಿಕ ಈ ನೀರನ್ನು ಸೋಸಿ
5) ಈ ನೀರಿಗೆ ಲಿಂಬೆರಸ ಮತ್ತು ಜೇನು ಬೆರೆಸಿ ಕುಡಿಯಿರಿ.

ಈ ನೀರು ಕುಡಿಯಲು ಸಾಧ್ಯವಾಗುವಷ್ಟು ಬಿಸಿ ಇರಬೇಕು. ಆಗಲೇ ಇದರ ಗುಣಗಳನ್ನು ಪಡೆಯಲು ಸಾಧ್ಯ. ಕುಹರದ ಸೋಂಕು ಇರುವ ವ್ಯಕ್ತಿ ಸೀನಿದಾಗ ಆ ಸ್ಥಳದಲ್ಲಿರುವ ಇತರರಿಗೂ ಸುಲಭವಾಗಿ ಸೋಂಕು ಹರಡುತ್ತದೆ. ಆದ್ದರಿಂದ ಸೀನುವಾಗ ಬಟ್ಟೆ ಅಥವಾ ಆ ಸಮಯದಲ್ಲಿ ತಕ್ಷಣಕ್ಕೆ ಏನು ಸಿಗದೇ ಇದ್ದರೆ ಕೇವಲ ಕೈಗಳಿಂದಲಾದರೂ ಸೀನುವಾಗ ಅಡ್ಡ ಹಿಡಿದು ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನೀರು ಲಭ್ಯವಿಲ್ಲದಿದ್ದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟೈಜರ್ ಗಳನ್ನೂ ಬಳಸಬಹುದು. ಹಾಗೂ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧಿಯನ್ನು ಸೇವಿಸಬೇಕು.

English summary

How To Use Garlic To Treat Sinus

Winter is fast approaching. And so is the season of various illnesses. People are more prone to infections and flu during this season because of a simple fact. People like to stay indoors in the cold weather. This makes them more prone to catching infections from an already sick person. The ventilation is poor during the season which makes indoors warmer than the outdoors and this is where the micro-organisms thrive. Here is an excellent recipe for garlic drink which will reduce the symptoms of sinus infections.
X
Desktop Bottom Promotion