For Quick Alerts
ALLOW NOTIFICATIONS  
For Daily Alerts

ಸಣ್ಣ ತುಂಡು ಶುಂಠಿ ಇದ್ದರೆ ಸಾಕು- ಇದು ಬೆನ್ನು ನೋವಿಗೆ ಪರ್ಫೆಕ್ಟ್ ಮನೆಮದ್ದು

By Hemanth
|

ಸಾವಿಲ್ಲದ ಮನೆಯ ಸಾಸಿವೆ ತಾ ಎಂದು ಬುದ್ಧ ಮಹಿಳೆಯೊಬ್ಬಳಿಗೆ ಹೇಳಿದ್ದನಂತೆ. ಯಾಕೆಂದರೆ ಸಾವು ಎನ್ನುವುದು ಪ್ರತಿಯೊಬ್ಬರಿಗೂ ನಿಶ್ಚಿತ. ಅದೇ ರೀತಿ ನಮ್ಮ ದೇಹಕ್ಕೆ ನೋವು, ಕಾಯಿಲೆಗಳು ಕೂಡ ಸಾಮಾನ್ಯ. ನಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮಕ್ಕೆ ಅನುಗುಣವಾಗಿ ಕಾಯಿಲೆಗಳು ಕಾಡಬಹುದು. ಅದರಲ್ಲೂ ಇಂದಿನ ಹೈಸ್ಪೀಡ್ ಯುಗದಲ್ಲಿ ಬೆನ್ನು ನೋವು ಎನ್ನುವ ಮಾರಿಯು ಪ್ರತಿಯೊಬ್ಬರನ್ನು ಕಾಡುತ್ತಲಿರುತ್ತದೆ.

ವಿಶ್ವದಲ್ಲಿ 30ರಲ್ಲಿ ಒಬ್ಬರು ವಯಸ್ಕರಿಗೆ ಬೆನ್ನು ನೋವು ಕಾಡುತ್ತಲಿರುವುದು ಎಂದು ಅಧ್ಯಯನಗಳು ಹೇಳುತ್ತಿವೆ. 40 ದಾಟಿದ ಬಳಿಕ ಬೆನ್ನು ನೋವು ಎನ್ನುವುದು ಹೇಳದೆ ಬರುವ ನೆಂಟನಂತಾಗಿದೆ. ದೇಹದ ಯಾವುದೇ ಭಾಗದಲ್ಲಿ ಆದರೂ ನೋವು ಕಾಣಿಸಿಕೊಂಡರೆ ಆಗ ಅದು ಆತನ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು ಖಚಿತ. ಮಧ್ಯಮ ಹಂತದ ನೋವು ಅಸ್ವಸ್ಥತೆ ಹಾಗೂ ಆಯಾಸ ಉಂಟು ಮಾಡುವುದು. ಕೆಲವೊಂದು ಸಲ ನೋವು ಅತಿಯಾದರೆ ಆಗ ನೋವು ನಿವಾರಕ ಔಷಧಿ ಅಥವಾ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಮೂಳೆಗಳು ದುರ್ಬಲಗೊಳ್ಳುವುದು, ವಯಸ್ಸು, ಕ್ಯಾಲ್ಸಿಯಂ ಕೊರತೆ, ಅಸ್ಥಿರಂಧ್ರತೆ, ಅತಿಯಾದ ತೂಕ ಅಥವಾ ಬೊಜ್ಜು, ಗಾಯಾಳು ಸಮಸ್ಯೆ, ಶಸ್ತ್ರಚಿಕಿತ್ಸೆ, ಬೆನ್ನಿನ ಮೂಳೆಗೆ ತಾಗಿರುವ ಸೋಂಕು ಇತ್ಯಾದಿ ಇದಕ್ಕೆ ಪ್ರಮುಖ ಕಾರಣವಾಗಿದೆ.

home remedy for back pain

ಬೆನ್ನು ನೋವು ಯಾವುದೇ ಕಾರಣದಿಂದ ಬಂದರೂ ಅದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಖಚಿತ. ಬೆನ್ನು ನೋವು ಲಘು ಅಥವಾ ತೀವ್ರವಾಗಿದ್ದರೂ ಆ ವ್ಯಕ್ತಿಗೆ ದೈಹಿಕ ಚಟುವಟಿಕೆಗಳಾದ ಓಡುವುದು, ನಡೆಯುವುದು, ವ್ಯಾಯಾಮ, ಕೆಲಸ, ಬಗ್ಗುವುದು ಇತ್ಯಾದಿ ಮಾಡಲು ತುಂಬಾ ಕಷ್ಟವಾಗುವುದು. ಇದರಿಂದ ಜೀವನ ತುಂಬಾ ದುಸ್ಥರವಾಗುವುದು ಮತ್ತು ಈ ಹಂತದಲ್ಲಿ ಕೆಲವೊಂದು ಸಲ ಬೇರೆಯವರನ್ನು ಅವಲಂಬಿಸಿಕೊಂಡಿರಬೇಕಾಗುತ್ತದೆ.

ಇದರಿಂದ ಜನರು ಬೆನ್ನು ನೋವು ನಿವಾರಣೆ ಮಾಡಲು ಪ್ರಯತ್ನಿಸುವರು. ಇದಕ್ಕಾಗಿ ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ ಮತ್ತು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವರು. ಆದರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಯಕೃತ್, ಸಾಮಾನ್ಯ ಆರೋಗ್ಯ ಮತ್ತು ಇದರ ಮೇಲೆ ಅವಲಂಬಿತವಾಗಿರಬೇಕಾಗಬಹುದು. ಇದರಿಂದ ಯಾವಾಗಲೂ ನೈಸರ್ಗಿಕವಾದ ಚಿಕಿತ್ಸೆ ಮಾಡಿಕೊಂಡರೆ ತುಂಬಾ ಒಳ್ಳೆಯದು. ಬೆನ್ನು ನೋವಿಗೆ ಕೆಲವೊಂದು ಮನೆಮದ್ದುಗಳನ್ನು ಮಾಡಲು ನಮ್ಮ ಕೈದೋಟ ಮತ್ತು ಅಡುಗೆ ಮನೆಯಲ್ಲೇ ಕೆಲವೊಂದು ಸಾಮಗ್ರಿಗಳು ಲಭ್ಯವಿದೆ. ಇದರಲ್ಲಿ ಒಂದು ಶುಂಠಿ. ಹೌದು, ಶುಂಠಿಯು ಬೆನ್ನುವ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ಶುಂಠಿ ಮತ್ತು ಅದರ ಔಷಧೀಯ ಗುಣಗಳು

ಹಿಂದಿನಿಂದಲೂ ಆಯುರ್ವೇದವು ಹಲವಾರು ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಆಯುರ್ವೇದದ ಹಲವಾರು ಔಷಧಿಗಳಿಗೆ ವಿಜ್ಞಾನವು ಬೆಂಬಲ ನೀಡಿದ್ದು, ಪರಿಣಾಮಕಾರಿ ಎಂದು ಹೇಳಿದೆ. ಹೆಚ್ಚಿನ ಖಾದ್ಯಗಳಿಗೆ ಬಳಸಲಾಗುವ ಶುಂಠಿಯು ಹಲವಾರು ರೀತಿಯ ಕಾಯಿಲೆಗಳ ನಿವಾರಣೆ ಮಾಡುವುದು.

ಶುಂಠಿಯು ಖಾದ್ಯದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ಹೊಟ್ಟೆನೋವು, ವಾಕರಿಕೆ ಇತ್ಯಾದಿಗಳನ್ನು ತಡೆಯುವುದು. ಇದು ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು, ತೂಕ ಇಳಿಸಲು, ಕ್ಯಾನ್ಸರ್ ಬರದಂತೆ ತಡೆಯಲು ಇತ್ಯಾದಿಗಳಿಗೆ ಪರಿಣಾಮಕಾರಿ. ಆದರೆ ಶುಂಠಿಯು ಬೆನ್ನು ನೋವು ನಿವಾರಣೆ ಮಾಡುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಬೆನ್ನು ನೋವಿನಿಂದ ಶುಂಠಿಯು ಯಾವ ರೀತಿ ಪರಿಹಾರ ನೀಡುವುದು ಮತ್ತು ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.....

ಶುಂಠಿಯಲ್ಲಿದೆ ನೋವು ನಿವಾರಕ ಗುಣಗಳು

ಶುಂಠಿಯಲ್ಲಿ ತುಂಬಾ ಪ್ರಬಲ ಜಿಂಗಲ್, ಪಾಲಿಫಿನಾಲ್ ಗಳು, ಫ್ಲೇವನಾಯ್ಡ್ ಗಳು ಮತ್ತು ಟಾನಿನ್ ಗಳು ಇದೆ. ಇಷ್ಟು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳಿಂದಾಗಿ ಶುಂಠಿಯು ಉರಿಯೂತ ಶಮನಕಾರಿ ಅಥವಾ ಉರಿಯೂತ ತಗ್ಗಿಸುವ ಅಥವಾ ನೋವು ಕಡಿಮೆ ಮಾಡುವ ಗುಣ ಹೊಂದಿದೆ.

ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ನಡೆಸಿರುವ ಅಧ್ಯಯನದ ಪ್ರಕಾರ 2-4 ಗ್ರಾಂನಷ್ಟು ಶುಂಠಿಯನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಬೆನ್ನುನೋವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.

ಬೆನ್ನು ನೋವಿನಿಂದ ಬಳಲುತ್ತಿರುವ ಜನರಿಗೆ ಶುಂಠಿಯು ತುಂಬಾ ಪರಿಣಾಮಕಾರಿ ನೈಸರ್ಗಿಕ ಔಷಧಿ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ. ಶುಂಠಿ ಸೇವನೆ ಜತೆಗೆ ಆರೋಗ್ಯಕಾರಿ ಆಹಾರ, ದಿನನಿತ್ಯ ವ್ಯಾಯಾಮ ಮತ್ತು ಆರೋಗ್ಯಕರ ತೂಕ ಕಾಪಾಡಿಕೊಂಡು ಹೋಗುವುದು ಅತೀ ಅಗತ್ಯವಾಗಿದೆ.

ತಯಾರಿಸುವ ವಿಧಾನ

2-4 ಗ್ರಾಂನಷ್ಟು ತಾಜಾ ಶುಂಠಿ ತೆಗೆದುಕೊಂಡು ತುಂಡು ಮಾಡಿ ಮತ್ತು ಇದನ್ನು ಶುಚಿಗೊಳಿಸಿ ನಿಮ್ಮ ಖಾದ್ಯಕ್ಕೆ ಹಾಕಿ. ಹಾಲು, ಚಹಾ ಮತ್ತು ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಬಹುದು.

ಸೂಚನೆ: ಗಾಯಾಳು ಸಮಸ್ಯೆ ಅಥವಾ ಸೋಂಕಿನಿಂದಾಗಿ ಬೆನ್ನು ನೋವು ತೀವ್ರವಾಗಿದ್ದರೆ ಆಗ ನೀವು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಅತೀ ಅಗತ್ಯ. ವೈದ್ಯರು ಹೇಳಿದ ಔಷಧಿಯೊಂದಿಗೆ ಇದನ್ನು ಕೂಡ ಸೇವಿಸಿ.

ಇನ್ನೊಂದು ವಿಧಾನ

*ಶುಂಠಿ ರಸ 3-4 ಚಮಚ

*ತುಳಸಿ 10 ಎಲೆಗಳು

*ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.

*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು.

*ಶುಂಠಿ ಹಾಗೂ ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮಾಂಸಖಂಡ ಮತ್ತು ಸಮಸ್ಯೆ ಉಂಟಾಗುವ ಜಾಗದಲ್ಲಿರುವ ಉರಿಯೂತವನ್ನು ಇದು ಕಡಿಮೆ ಮಾಡುವುದು.

*ಈ ಮನೆಮದ್ದು ಬೆನ್ನಿಗೆ ರಕ್ತದ ಸರಬರಾಜನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತಯಾರಿಸುವ ಹಾಗೂ ಸೇವಿಸುವ ವಿಧಾನ

*ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ. ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ.

*ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ ಮತ್ತು ಫಲಿತಾಂಶದ ಬಗ್ಗೆ ತಪ್ಪದೆ ತಿಳಿಸಿ....

English summary

How To Use Ginger For Back Pain Relief

Did you know that back pain is one of the most common ailments that people suffer from, today? It has been estimated that at least 1 in 30 adults are afflicted with various forms of back pain, globally! So, it is clear that it is a wide-spread ailment which is extremely prevalent in people, especially people over the age of 40. Now, we know that any kind of body pain, such as headaches, stomach aches or pain in any part of the body can make a person's life miserable, as a nagging pain can hinder a lot of activities, along with causing discomfort.
Story first published: Tuesday, July 24, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more