For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

By Sushma Charhra
|

ಮಾನ್ಸೂನ್ ಕಾಲ ಆರಂಭವಾಗಿಯಾಗಿದೆ. ತುಂತುರು ಹನಿಗಳ ನಿನಾದ ಎಲ್ಲಾ ಕಡೆ ಜೋರಾಗಿದೆ. ಈ ಕಾಲ ಕೇವಲ ವಾತಾವರಣವನ್ನು ತಂಪಾಗಿಸಿ ಆಹ್ಲಾದಕರ ಅನುಭವ ನೀಡುವುದು ಮಾತ್ರವಲ್ಲ ಜೊತೆಗೊಂದಿಷ್ಟು ಕಾಯಿಲೆಗಳನ್ನು ಹೊತ್ತು ತಂದಿರುತ್ತದೆ. ಹಾಗಾಗಿ ನಾವಿಲ್ಲಿ ಮಳೆಗಾಲದಲ್ಲಿ ಹೇಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬ ಬಗ್ಗೆ ಒಂದಿಷ್ಟು ಚರ್ಚೆ ನಡೆಸಲಿದ್ದೇವೆ ಮತ್ತು ಆ ಮೂಲಕ ನಿಮಗೆ ಸರಿಯಾದ ಮಾಹಿತಿಗಳನ್ನು ನೀಡಲಿದ್ದೇವೆ. ಮಳೆಗಾಲವು ಒಂದಷ್ಟು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತದೆ ಮತ್ತು ನಾವು ಅತೀ ಹೆಚ್ಚು ತೊಂದರೆಗಳಿಗೆ ಒಳಗಾಗುವ ಕಾಲ ಇದು. ನೀರಿನಿಂದ ಹರಡುವ ಕಾಯಿಲೆಗಳಾದ ವೈರಲ್ ಜ್ವರ, ಟೈಫೈಡ್, ವಾಂತಿ, ಭೇದಿ, ಇನ್ನಿತರೆ ಸೋಂಕುಗಳು ಈ ಕಾಲದಲ್ಲಿ ಅತೀ ಹೆಚ್ಚಾಗಿರುತ್ತದೆ.

ಈ ಕಾಲದಲ್ಲಿ ಅನಾರೋಗ್ಯಕಾರಿಯಾದ ಮತ್ತು ಹಾನಿಕಾರಕವಾದ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗಿ ಸೋಂಕು ಮತ್ತು ಕಾಯಿಲೆ ಹರಡುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಸಾಮಾನ್ಯ ಆರೋಗ್ಯ ಸಮಸ್ಯೆಗಳೆಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸೋಂಕುಗಳು, ಫ್ಲೂ, ಮತ್ತು ಶೀತದ ಬಗ್ಗೆ ಆದಷ್ಟು ಜಾಗೃತರಾಗಿರಬೇಕು. ಆಯುರ್ವೇದದ ಪ್ರಕಾರ ಆಹಾರ ಪಥ್ಯ ಕ್ರಮಗಳು ಮಳೆಗಾಲದಲ್ಲಿ ಹೇಗಿರಬೇಕು?

how to take care of health in rainy season

ಮಳೆಗಾಲದಲ್ಲಿ, ಫಾಸ್ಟ್ ಫುಡ್ ಮತ್ತು ರಸ್ತೆ ಬದಿಯ ಆಹಾರಗಳನ್ನು ಸೇವಿಸಬಾರದು. ಅಷ್ಟೇ ಅಲ್ಲ, ಎಣ್ಣೆಯಂಶದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದಾಗಿ ಹೊಟ್ಟೆಯ ಸೋಂಕು ಕಾಣಿಸಿಕೊಳ್ಳಬಹುದು. ಮಾನ್ಸೂನ್ ನಲ್ಲಿ ಹೆಚ್ಚಿನ ಜನರು ಅಜೀರ್ಣ ಸಮಸ್ಯೆಯನ್ನು ಎದುರಿಸುತ್ತಾರೆ ಯಾಕೆಂದರೆ ಗಾಳಿಯಲ್ಲಿ ಹರಡುವ ಬ್ಯಾಕ್ಟೀರಿಯಾಗಳು ಈ ಸಂದರ್ಭದಲ್ಲಿ ಬಹಳ ಚಟುವಟಿಕೆಯಿಂದ ಇರುತ್ತದೆ ಮತ್ತು ಸುಲಭದಲ್ಲಿ ನಿಮ್ಮ ದೇಹದೊಳಕ್ಕೆ ಆಹಾರದ ಮೂಲಕ ಇಲ್ಲವೇ ಉಸಿರಾಟದ ಮೂಲಕ ಸೇರುವ ಸಾಧ್ಯತೆಗಳಿರುತ್ತದೆ..

ಹಣ್ಣುಗಳು

ಸರಿಯಾದ ಪ್ರಮಾಣದ ಮತ್ತು ಸರಿಯಾದ ಅಂದರೆ ಸ್ವಚ್ಛವಾದ ಹಣ್ಣುಗಳ ಸೇವನೆಯೂ ಕೂಡ ಈ ಕಾಲದಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ಹಣ್ಣುಗಳು ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಡಲು ನೆರವಾಗುತ್ತದೆ ಯಾಕೆಂದರ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು, ವಿಟಮಿನ್ ಗಳು ಮತ್ತು ಪೋಷಕಾಂಶಗಳಿರುತ್ತದೆ ಮತ್ತು ಇದು ನಿಮ್ಮ ರೋಗ ನಿರೋಧಕ ಶಕ್ತಿಯ ವರ್ಧನೆಗೆ ಸಹಕರಿಸಿ ಕಾಯಿಲೆಗೆ ಬೀಳುವುದನ್ನು ತಪ್ಪಿಸುತ್ತದೆ. ಹಾಗಾಗಿ ಹಣ್ಣುಗಳಾದ ಸೇಬು, ಮಾವು, ದಾಳಿಂಬೆ ಮತ್ತು ಪಿಯರ್ಸ್ ಗಳನ್ನು ಸೇವಿಸುವುದು ಮರೆಯಬೇಡಿ.

ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ರೋಗ ನಿರೋಧಕ ಶಕ್ತಿ ಒಂದು ವೇಳೆ ಕಡಿಮೆ ಇದ್ದರೆ, ನೀವು ಕಾಯಿಲೆಗೆ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಂದರೆ ಗಾಳಿಯಿಂದ ಹರಡುವ ಮತ್ತು ನೀರಿನಿಂದ ಹರಡುವ ಸೋಂಕುಗಳು ನಿಮ್ಮನ್ನು ಸುಲಭದಲ್ಲಿ ಬಾಧಿಸುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಆದಷ್ಟು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಸೂಪು ಇತ್ಯಾದಿ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ ಸೇವಿಸುವುದರಿಂದ ಇದನ್ನು ಸಾಧಿಸಬಹುದು.

ಡ್ರೈ ಆಹಾರಗಳನ್ನು ಸೇವಿಸಿ

ಮಳೆಗಾಲದಲ್ಲಿ ಆದಷ್ಟು ನೀರಿನಂಶದ ಆಹಾರಗಳನ್ನು ಸೇವಿಸದೇ ಇರುವುದು ಬಹಳ ಒಳ್ಳೆಯದು ಉದಾಹರಣೆಗೆ ಹಣ್ಣಿನ ಜ್ಯೂಸ್ ಗಳು, ಕತ್ತರಿಸಿದ ಹಣ್ಣುಗಳು, ಮತ್ತು ಲಸ್ಸಿಗಳು ರಸ್ತೆ ಬದಿಯಲ್ಲಿ ಸಿಗುತ್ತದೆ ಮತ್ತು ಇವುಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಇಂತಹ ಆಹಾರಗಳ ಸೇವನೆ ಡಮಾಡುವ ಬದಲು ಆದಷ್ಟು ಡ್ರೈ ಆಹಾರಗಳನ್ನು ಸೇವಿಸಿ. ಕಾಳುಗಳು, ಜೋಳ ಇತ್ಯಾದಿ. ಮಳೆಗಾಲದಲ್ಲಿ ಈ ರೀತಿಯ ನೀರಿನಂಶದ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದಾಗಿ ಅಜೀರ್ಣ ಸಮಸ್ಯೆ ಮತ್ತು ಸೋಂಕು ಹರಡುವ ಸಮಸ್ಯೆಗಳು ಹೆಚ್ಚಾಗಬಹುದು.

ಉತ್ತಮ ತರಕಾರಿಗಳನ್ನು ಸೇವನೆಯನ್ನು ಅಧಿಕಗೊಳಿಸಿ

ನಿಮ್ಮ ಊಟದಲ್ಲಿ ಕಹಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಹಾಗಲಕಾಯಿ, ಬೇವಿನ ಸೊಪ್ಪು ಇತ್ಯಾದಿಗಳು ಹೆಚ್ಚಿರಲಿ. ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳನ್ನು ತಡೆಯಲು ಇದು ಬಹಳವಾಗಿ ನೆರವಾಗುತ್ತದೆ. ನೀವಿದನ್ನು ಬೇಯಿಸಿ ಸೇವಿಸಿದರೆ ನಿಮಗೆ ಹಲವಾರು ರೀತಿಯ ಲಾಭಗಳಾಗಲಿವೆ. ಒಂದು ವೇಳೆ ಬೇಯಿಸಿದ ರೂಪದಲ್ಲಿ ನಿಮಗೆ ಇದು ತಿನ್ನಲು ಇಷ್ಟವಾಗದೇ ಇದ್ದರೆ ಅಲ್ಪವೇ ಪ್ರಮಾಣದ ಎಣ್ಣೆ ಸೇರಿಸಿ ಹುರಿದು ರುಚಿಯನ್ನು ಸೇರಿಸಿ ತಿನ್ನಬಹುದು. ಕಹಿ ತರಕಾರಿಗಳನ್ನು ನಿಮ್ಮ ಊಟದಲ್ಲಿ ಸೇವಿಸುವುದರಿಂದಾಗಿ ನಿಮಗೆ ಚರ್ಮದ ಸೋಂಕುಗಳು ಆಗದೇ ಇರುವಂತೆ ಇದು ನೋಡಿಕೊಳ್ಳುತ್ತದೆ.

ಹಾಲನ್ನು ಕುದಿಸಿ ಕುಡಿಯಿರಿ

ಮಳೆಗಾಲದಲ್ಲಿ ಹಾಲನ್ನು ಆದಷ್ಟು ಕಡಿಮೆ ಕುಡಿದು ಹಾಲಿನ ಉಥ್ಪನ್ನಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದಂತೆ. ಮೊಸರು, ಯೋಗರ್ಟ್ ಅಥವಾ ಹಾಲಿನ ಸಿಹಿತಿಂಡಿಗಳನ್ನು ಸೇವಿಸಬೇಕಂತೆ. ಒಂದು ವೇಳೆ ನೀವು ಹಾಲನ್ನು ಅತಿಯಾಗಿ ಸೇವಿಸುವವರಾಗಿದ್ದು ಅದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂಬುದಾದರೆ 100 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ ಸೇವಿಸಬೇಕು. ಇದು ನಿಮ್ಮನ್ನು ಹಾನಿಕಾರಕ ಕೀಟಾಣುಗಳು ನಿಮ್ಮ ದೇಹ ಪ್ರವೇಶಿಸಿ ತೊಂದರೆ ನೀಡುವುದರಿಂದ ರಕ್ಷಿಸಿಕೊಳ್ಳಲು ನೆರವಾಗುತ್ತದೆ.

ಆಯುರ್ವೇದದ ಪ್ರಕಾರ ನೀವು ಸೇವಿಸಬಹುದಾಗ ಆಹಾರಗಳ ಪಟ್ಟಿ ಇಲ್ಲಿದೆ

1. ಕಾಳುಗಳಾದ ಕೆಂಪು ಅಕ್ಕಿ, ಸಿರಿಧಾನ್ಯಗಳು ಮತ್ತು ಜೋಳ,

2. ತರಕಾರಿಗಳಾದ ಸೋರೆಕಾಯಿ, ಪಡವಲಕಾಯಿ, ಬೆಂಡೆಕಾಯಿ

3. ಬೇಳೆಗಳಾದ ಹೆಸರುಕಾಳು, ತೊಗರಿ ಬೇಳೆ ಮತ್ತು ಕಪ್ಪು ಉದ್ದಿನ ಬೇಳೆ

4. ಬೆಳ್ಳುಳ್ಳಿ, ಈರುಳ್ಳಿ ಮತ್ತು ಶುಂಠಿ

5. ಹಣ್ಣುಗಳಾದ ದ್ರಾಕ್ಷಿ, ಖರ್ಜೂರ,ನೇರಳೆ ಹಣ್ಣು

6. ತೆಂಗಿನಕಾಯಿಯ ಸೇವನೆ ಒಳ್ಳೇದು

7. ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ತುಪ್ಪ

8. ಕಲ್ಲುಪ್ಪು,ಕೊತ್ತುಂಬರಿ, ಜೀರಿಗೆ, ಬೆಲ್ಲ, ಪುದೀನಾ, ಇಂಗು ಮತ್ತು ಕಪ್ಪು ಮೆಣಸು ಅಥವಾ ಕಾಳುಮೆಣಸು

ಆಯುರ್ವೇದದ ಪ್ರಕಾರ ನೀವು ಮಳೆಗಾಲದಲ್ಲಿ ಸೇವಿಸಬಾರದ ಆಹಾರಗಳ ಪಟ್ಟಿ ಇಲ್ಲಿದೆ

* ರಾಗಿ, ಬಾರ್ಲಿ, ಮೆಕ್ಕೆಜೋಳದ ಕಾಳುಗಳ ಸೇವನೆ ಬೇಡ

* ತರಕಾರಿಗಳಾದ ಎಲೆಕೋಸು, ಒಣತರಕಾರಿಗಳು ಮತ್ತು ಪಲಾಕ್

* ಕಾಳುಗಳಾದ ಬಟಾಣಿ, ದ್ವಿದಳ ಧಾನ್ಯಗಳು ಮತ್ತು ಹುರುಳಿ

* ಆಲೂಗಡ್ಡೆ, ಸಾಬುದಾನ ಮತ್ತು ಕ್ಯಾರೆಟ್, ಸೌತೆಕಾಯಿ

* ಹಣ್ಣುಗಳಾದ ಕಪ್ಪು ಪ್ಲಮ್, ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು ಮತ್ತು ಕರಬೂಜ ಹಣ್ಣುಗಳು

* ಎಮ್ಮೆ ಹಾಲು, ಪನ್ನೀರು, ಸ್ವೀಟ್ಸ್, ಮತ್ತು ಕರಿದ ಆಹಾರಗಳು

ಮಳೆಗಾಲಕ್ಕೆ ಒಂದಷ್ಟು ಆರೋಗ್ಯ ಸಲಹೆಗಳು

• ಬರಿಗಾಲಿನಲ್ಲಿ ಯಾವುದೇ ಕಾರಣಕ್ಕೂ ಹೊರಗಡೆ ನಡೆದಾಡಬೇಡಿ. ಯಾಕೆಂದರೆ ನಿಮ್ಮ ಕಾಲುಗಳಿಗೆ ಸೋಂಕು ಹರಡುವ ಸಾಧ್ಯತೆಯು ಮಳೆಗಾಲದಲ್ಲಿ ಹೆಚ್ಚಾಗಿ ಇರುತ್ತದೆ.

• ರಸ್ತೆ ಬದಿಯ ಆಹಾರಗಳ ಸೇವನೆಯನ್ನು ನಿಲ್ಲಿಸಿ, ರಸ್ತೆಯ ಬದಿಯಲ್ಲಿ ಕುಡಿಯುವ ನೀರಿನ ಸೇವನೆ ಬೇಡ, ಮಳೆಗಾಲದಲ್ಲಿ ಹಸಿ ತರಕಾರಿಗಳ ಸೇವನೆಯೂ ಅಷ್ಟು ಹಿತವಲ್ಲ ಯಾಕೆಂದರೆ ಅವು ಅಷ್ಟು ಸ್ವಚ್ಛವಾಗಿ ಇರುವುದಿಲ್ಲ.

• ಕೀಟಗಳನ್ನು ತಡೆಯುವ ಸಾಧನಗಳನ್ನು ಆದಷ್ಟು ಬಳಕೆ ಮಾಡಿ .

• ಮಳೆಗಾಲದಲ್ಲಿ ಆದಷ್ಟು ಬಿಸಿಬಿಸಿಯಾಗಿರುವ ಆಹಾರ ಮತ್ತು ಪಾನೀಯಗಳ ಸೇವನೆ ಮಾಡಿ.

• ಮಳೆಗಾಲದ ನೀರಿನಿಂದ ನಿಮ್ಮ ಕಾಲು ಒದ್ದೆ ಆದ ಕೂಡಲೇ ಅದನ್ನು ಮತ್ತೆ ಒಣಗಿಸಿಕೊಳ್ಳುವುದು, ಒರೆಸಿಕೊಳ್ಳುವುದನ್ನು ಮರೆಯಬೇಡಿ .

• ಶೀತ ಮತ್ತು ಕೆಮ್ಮನ್ನು ತಡೆಯಲು ಆದಷ್ಟು ನಿಮ್ಮ ದೇಹವನ್ನು ಶುಷ್ಕವಾಗಿ ಮತ್ತು ಬೆಚ್ಚಗಿಡಿ.

• ಏರ್ ಕಂಡೀಷನ್ ಇರುವ ಕೋಣೆಗಳಲ್ಲಿ ಅತೀ ಹೆಚ್ಚು ಕಾಲ ಉಳಿಯಬೇಡಿ.

English summary

How To Take Care Of Your Health During The Rainy Season

The monsoon season has arrived and it is the season that cools the environment after the hot and humid weather as well as brings infections at the same time. So, here we are going to discuss how to take care of your health during the rainy season. The rainy season invites a lot of health problems and we tend to get more susceptible to the harmful effects of the monsoon season. The chances of water-borne diseases like typhoid, viral fever, gastrointestinal infection, diarrhea, typhoid, and dysentery are on the rise during this time.
X
Desktop Bottom Promotion