For Quick Alerts
ALLOW NOTIFICATIONS  
For Daily Alerts

ಅತಿಯಾದ ಹಸ್ತಮೈಥುನ ಚಟವೇ? ಹಾಗಾದರೆ ಬಿಡಲು ಹೀಗೆ ಮಾಡಿ...

|

ದೇಹದ ಭಾಗವನ್ನು ಸ್ವಯಂ ಉದ್ರೇಕಿಸಿ ಹಿತಾನುಭವ ಪಡೆದುಕೊಳ್ಳುವ ಹಸ್ತಮೈಥುನ ವಿಷಯ ಕುರಿತು ಬಹಿರಂಗವಾಗಿ ಮಾತನಾಡಲು ಸಾಮಾನ್ಯವಾಗಿ ಎಲ್ಲರೂ ಹಿಂಜರಿಯುತ್ತಾರೆ. ಜನನಾಂಗ, ಮೊಲೆಗಳು, ತುಟಿ ಹೀಗೆ ದೇಹದ ಮೃದು ಭಾಗಗಳನ್ನು ಸವರಿಕೊಳ್ಳುವುದು ಆ ಮೂಲಕ ಹಿತ ಅನುಭವಿಸುವುದು ಹಸ್ತಮೈಥುನದ ಭಾಗವಾಗಿವೆ. ಸಂಗಾತಿ ಜೊತೆಯಿಲ್ಲದೆ ತನ್ನ ಕೈಗಳಿಂದಲೇ ಈ ಪ್ರಕ್ರಿಯೆ ನೆರವೇರುತ್ತದೆ. ಹಸ್ತಮೈಥುನ ಮಾಡಿಕೊಳ್ಳುವ ಬಯಕೆಯ ತೀವ್ರತೆ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ.

ಕೆಲವರು ವಾರಕ್ಕೊಮ್ಮೆ, ಪ್ರತಿದಿನ ಹಾಗೂ ಇನ್ನೂ ಹಲವರು ದಿನಕ್ಕೆ ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಯಾವುದೇ ಆಗಲಿ ಅತಿಯಾದರೆ ಅದರಿಂದ ಪ್ರತಿಕೂಲ ಪರಿಣಾಮಗಳು ಆಗುವುದು ನಿಶ್ಚಿತ. ಇದು ಹಸ್ತಮೈಥುನ ಚಟಕ್ಕೂ ಅನ್ವಯಿಸುತ್ತದೆ. ಕೆಲವರು ತಮ್ಮ ಲೈಂಗಿಕ ಭಾವನೆಗಳನ್ನು ತೃಪ್ತಿಪಡಿಸಿಕೊಳ್ಳಲು ಹಸ್ತಮೈಥುನದ ಅತಿಯಾದ ಚಟ ಬೆಳೆಸಿಕೊಂಡಿದ್ದು ಕಂಡು ಬರುತ್ತದೆ.

ಹಸ್ತಮೈಥುನ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಹಸ್ತಮೈಥುನದ ಉಪಯೋಗ ಹಾಗೂ ಅದರಿಂದಾಗುವ ದುಷ್ಪರಿಣಾಮಗಳು, ಸಹಜವಾಗಿ ಹಸ್ತಮೈಥುನದಿಂದ ದೂರವಾಗುವುದು, ಹಸ್ತಮೈಥುನ ಚಟವಾಗಿ ಅಂಟಿಕೊಳ್ಳಲು ಕಾರಣಗಳು ಈ ಎಲ್ಲ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ವಿಸ್ತೃತವಾಗಿ ತಿಳಿದುಕೊಳ್ಳೋಣ...

 ಹಸ್ತಮೈಥುನ ಯಾಕೆ ಮಾಡಿಕೊಳ್ಳುತ್ತಾರೆ?

ಹಸ್ತಮೈಥುನ ಯಾಕೆ ಮಾಡಿಕೊಳ್ಳುತ್ತಾರೆ?

ಹಸ್ತಮೈಥುನ ಕುರಿತು ನಡೆಸಲಾದ ಸಮೀಕ್ಷೆಯೊಂದರಲ್ಲಿ ಸಾವಿರಾರು ಮಹಿಳೆ ಹಾಗೂ ಪುರುಷರಿಗೆ ಒಂದೇ ತೆರನಾದ ಪ್ರಶ್ನೆಗಳನ್ನು ಕೇಳಲಾಯಿತು.

ಸಮೀಕ್ಷೆಯಲ್ಲಿ ಹೊರಬಿದ್ದ ಸಾಮಾನ್ಯ ಅಂಶಗಳು ಹೀಗಿವೆ:

*ಕೇವಲ ತೃಪ್ತಿ ಅನುಭವಿಸಲು

*ನಿರಾಳತೆ ಹೊಂದಲು

*ಒಬ್ಬಂಟಿಯಾಗಿದ್ದಾಗ ಇನ್ನೇನೂ ಮಾಡಲು ಇರದಿರುವುದು

*ಸೆಕ್ಸ್ ಬೇಜಾರಾದಾಗ

*ವೀರ್ಯ ದಾನ ಮಾಡಿ ಹಣ ಸಂಪಾದಿಸಲು (ಇವರ ಸಂಖ್ಯೆ ವಿರಳ)

 ಹಸ್ತಮೈಥುನದಿಂದ ದೇಹದಲ್ಲಿ ಉಂಟಾಗುವ ರಾಸಾಯನಿಕ ಪ್ರತಿಕ್ರಿಯೆಗಳು ಯಾವವು?

ಹಸ್ತಮೈಥುನದಿಂದ ದೇಹದಲ್ಲಿ ಉಂಟಾಗುವ ರಾಸಾಯನಿಕ ಪ್ರತಿಕ್ರಿಯೆಗಳು ಯಾವವು?

ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಹಸ್ತಮೈಥುನ ಮಾಡಿಕೊಳ್ಳುವ ಸಂಖ್ಯೆಯನ್ನು ಆಧರಿಸಿ ಕೆಲ ಒಳ್ಳೆಯ ಹಾಗೂ ಕೆಟ್ಟ ರಾಸಾಯನಿಕ ಪರಿಣಾಮ ದೇಹದಲ್ಲಿ ಆಗುತ್ತವೆ. ನಿಯಂತ್ರಣದಿಂದ ಕಡಿಮೆ ಬಾರಿ ಹಸ್ತಮೈಥುನ ಅನುಭವಿಸುವವರಲ್ಲಿ ಕೆಲ ಒಳ್ಳೆಯ ಪರಿಣಾಮಗಳಾಗುತ್ತವೆ. ಆದರೆ ಅತಿಯಾದ ಚಟಕ್ಕೆ ಬಿದ್ದು ಹಸ್ತಮೈಥುನ ಮಾಡಿಕೊಂಡರೆ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ತಿಳಿದು ಬಂದಿದೆ. ಹಸ್ತಮೈಥುನ ಮಾಡಿಕೊಂಡಾಗ ಮೆದುಳಿನಿಂದ ಎಂಡಾರ್ಫಿನ್, ಸೆರೆಟೊನಿನ್ ಮತ್ತು ಡೊಪಾಮೈನ್ ಎಂಬ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ದೇಹವನ್ನು ಸಹಜವಾಗಿ ಆರೋಗ್ಯವಾಗಿಡಲು ಈ ರಾಸಾಯನಿಕಗಳು ಸಹಾಯ ಮಾಡುತ್ತವೆ. ಒತ್ತಡ, ನಿದ್ರಾಹೀನತೆ, ಕೆಟ್ಟ ಭಾವನೆಗಳು, ಒಂಟಿತನ ಹಾಗೂ ಇನ್ನಿತರ ಒತ್ತಡಗಳಿಂದ ತಾತ್ಕಾಲಿಕವಾಗಿ ಹೊರಬರಲು ಇವು ನೆರವಾಗುತ್ತವೆ. ರೋಗನಿರೋಧಕ ಶಕ್ತಿ ಸಹಜವಾಗಿಡಲು ಹಸ್ತಮೈಥುನ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ ಕಾರ್ಟಿಸಾಲ್ ಮಟ್ಟವನ್ನು ಹಸ್ತಮೈಥುನ ಹೆಚ್ಚಿಸುತ್ತದೆ. ಸೆರೆಟೊನಿನ್ ಮತ್ತು ಡೊಪಾಮೈನ್‌ಗಳು ಮಾನಸಿಕ ಖಿನ್ನತೆಯನ್ನು ನಿವಾರಿಸುತ್ತವೆ.

ಹಸ್ತಮೈಥುನ ಚಟವಾಗಿ ಅಂಟಿಕೊಳ್ಳಲು ಕಾರಣಗಳೇನು?

ಹಸ್ತಮೈಥುನ ಚಟವಾಗಿ ಅಂಟಿಕೊಳ್ಳಲು ಕಾರಣಗಳೇನು?

ಮಹಿಳೆ ಹಾಗೂ ಪುರುಷ ಇಬ್ಬರಲ್ಲಿಯೂ ಹಸ್ತಮೈಥುನದ ಚಟ ಸಾಮಾನ್ಯವಾಗಿದೆ. ಇಲ್ಲಿ ಮೊಟ್ಟ ಮೊದಲಿಗೆ ತಿಳಿಯಬೇಕಾದ ಅಂಶವೆಂದರೆ, ಹಸ್ತಮೈಥುನ ಒಂದು ಪಾಪ ಅಥವಾ ಕೆಟ್ಟ ಕೆಲಸವಲ್ಲ. ಆದರೆ ಅದು ಅತಿಯಾದರೆ ಮಾತ್ರ ದುಷ್ಪರಿಣಾಮ ಉಂಟು ಮಾಡಬಲ್ಲದು.ಅತಿಯಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಅತಿಯಾದ ಹಸ್ತಮೈಥುನ ಚಟವಿರುವವರಲ್ಲಿ ಎರಡು ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ- ಹಸ್ತಮೈಥುನ ಮಾಡಿಕೊಂಡಾಗ ಬಿಡುಗಡೆಯಾಗುವ ಎಂಡಾರ್ಫಿನ್ ಹಾಗೂ ಡೊಪಾಮೈನ್ ರಾಸಾಯನಿಕಗಳು.ಖಿನ್ನತೆ ಹಾಗೂ ಒತ್ತಡ ತಡೆಗಟ್ಟುವ ಎಂಡಾರ್ಫಿನ್‌ಗಳು ಹಸ್ತಮೈಥುನ ಮಾಡಿಕೊಂಡಾಗ ದೇಹದಲ್ಲಿ ಬಿಡುಗಡೆಯಾಗುತ್ತವೆ. ಹೀಗಾಗಿ ಸ್ಖಲನದ ನಂತರ ಇವುಗಳ ಪ್ರಭಾವದಿಂದ ನಿದ್ರೆ ಆವರಿಸಿದಂತಾಗುತ್ತದೆ.ಆದರೆ ಒತ್ತಡ, ಖಿನ್ನತೆ ಹಾಗೂ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಹಸ್ತಮೈಥುನದ ಮೊರೆ ಹೋದಷ್ಟೂ ಈ ಚಟ ಹೆಚ್ಚಾಗುತ್ತ ಹೋಗುತ್ತದೆ. ಅದರಲ್ಲೂ ವ್ಯಕ್ತಿ ಒಂಟಿಯಾಗಿದ್ದಾಗ ಅಥವಾ ಒಬ್ಬಂಟಿತನ ಅನುಭವಿಸಿದಾಗ ಹಸ್ತಮೈಥುನ ಮಾಡಿಕೊಳ್ಳುವುದು ಹೆಚ್ಚು.ಒಬ್ಬಂಟಿತನದಿಂದ ಹೊರಬರಲು ಅನೇಕರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಇನ್ನು ಅತಿಯಾದ ಅಶ್ಲೀಲ ಲೈಂಗಿಕ (ಪೋರ್ನ್) ಚಲನಚಿತ್ರಗಳನ್ನು ನೋಡುವವರಲ್ಲಿ ಹಸ್ತಮೈಥುನದ ಚಟ ಹೆಚ್ಚಾಗಿರುವುದು ಕಂಡು ಬರುತ್ತದೆ.

ಹಸ್ತಮೈಥುನದ ದುಷ್ಪರಿಣಾಮಗಳು

ಹಸ್ತಮೈಥುನದ ದುಷ್ಪರಿಣಾಮಗಳು

ನಿಯಂತ್ರಣದಲ್ಲಿದ್ದರೆ ಹಸ್ತಮೈಥುನ ಕೆಟ್ಟದ್ದಲ್ಲ. ಆದರೆ ಅತಿಯಾದರೆ ಮಾತ್ರ ಸಮಸ್ಯೆ ತಪ್ಪಿದ್ದಲ್ಲ. ವಿಪರೀತ ಹಸ್ತಮೈಥುನ ದೈಹಿಕ ಹಾಗೂ ಮಾನಸಿಕ ಎರಡೂ ರೀತಿ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.ಪ್ರತಿಯೊಬ್ಬರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳು ಭಿನ್ನವಾಗಿರುವುದರಿಂದ ಹಸ್ತಮೈಥುನದ ಪರಿಣಾಮಗಳೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಡಾ. ಅನೂಪ್ ಅವರು ಹೇಳುವ ಹಾಗೆ - ಅತಿಯಾದ ಹಸ್ತಮೈಥುನ ಎಂಡೊಕ್ರೈನ್ ಹಾಗೂ ನರಮಂಡಲ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹಾರ್ಮೋನ್‌ಗಳ ಏರುಪೇರು ಹಾಗೂ ಮೆದುಳು ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ. ಜೀವನದಲ್ಲಿ ಸಂಬಂಧಗಳು ಹಾಳಾಗುತ್ತವೆ. ಅಲ್ಲದೆ ಲೈಂಗಿಕ ಸಂಬಂಧಗಳು ಸಹ ಹಾಳಾಗುತ್ತವೆ. ಬಾರಿ ಸತತವಾಗಿ ಹಸ್ತಮೈಥುನ ಮಾಡಿಕೊಂಡ ಹದಿಹರೆಯದ ವ್ಯಕ್ತಿಯೊಬ್ಬ ಅದರಿಂದಲೇ ಸತ್ತು ಹೋದ ಘಟನೆ ನಿಮಗೆ ಗೊತ್ತಿರಬಹುದು. ಹೀಗಾಗಿ ಹಸ್ತಮೈಥುನದ ದುಷ್ಪ ರಿಣಾಮಗಳ ಬಗ್ಗೆ ತಿಳಿಯುವುದು ಅಗತ್ಯ. ಅತಿಯಾದ ಹಸ್ತಮೈಥುನದಿಂದ ಪುರುಷ ಹಾಗೂ ಮಹಿಳೆಯರಲ್ಲಿ ಆಗುವ ದುಷ್ಪರಿಣಾಮಗಳು ಯಾವವು ಎಂಬುದನ್ನು ನೋಡೋಣ...

ಸುಸ್ತು ಹಾಗೂ ನಿಶ್ಯಕ್ತಿ

ಸುಸ್ತು ಹಾಗೂ ನಿಶ್ಯಕ್ತಿ

ದಿನಕ್ಕೊಮ್ಮೆ ನೀವು ಹಸ್ತಮೈಥುನ ಮಾಡುತ್ತೀರಾದರೆ ನಿಮ್ಮ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುತ್ತದೆ. ದೇಹಕ್ಕೆ ಬೇಕಾದ ರಾಸಾಯನಿಕಗಳ ಬಿಡುಗಡೆಯಿಂದ ಹಿತವೆನಿಸುತ್ತದೆ.ಆದರೆ ಪದೇ ಪದೇ ಹಸ್ತಮೈಥುನ ಮಾಡಿದರೆ ದೇಹ ಹಾಗೂ ಮೆದುಳಿಗೆ ವಿಶ್ರಾಂತಿ ಸಿಗದೆ ಸುಸ್ತು ಹಾಗೂ ನಿಶ್ಯಕ್ತಿ ಮೂಡುತ್ತದೆ.

ಅಸ್ಪಷ್ಟ ದೃಷ್ಟಿ ಹಾಗೂ ಕಪ್ಪು ವರ್ತುಲ

ಅಸ್ಪಷ್ಟ ದೃಷ್ಟಿ ಹಾಗೂ ಕಪ್ಪು ವರ್ತುಲ

ಹೆಚ್ಚು ಬಾರಿಯ ಹಸ್ತಮೈಥುನದಿಂದ ಕಣ್ಣಿನ ನರಮಂಡಲದಲ್ಲಿ ನೈಟ್ರಿಕ್ ಆಕ್ಸೈಡ್, ಸಿಜಿಎಂಪಿ ಮತ್ತು ಅಸಿಟೈಲ್‌ಕೊಲೈನ್‌ಗಳ ಕೊರತೆ ಉಂಟಾಗಿ ದೃಷ್ಟಿ ಅಸ್ಪಷ್ಟವಾಗುತ್ತದೆ ಹಾಗೂ ಕಣ್ಣುಗಳ ಸುತ್ತ ಕಪ್ಪು ವರ್ತುಲ ನಿರ್ಮಾಣವಾಗುತ್ತದೆ. ಹಸ್ತಮೈಥುನದ ಅತಿಯಾದ ಚಟವಿರುವವರ ಮುಖ ಕಳೆಗುಂದಿದ್ದು, ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಕೆಲ ಬಾರಿ ಕೈಗಳ ಅತಿಯಾದ ಬಳಕೆಯಿಂದ ಕಣ್ಣಿನ ದೃಷ್ಟಿ ದೋಷವೂ ಬರಬಹುದು.

ಒತ್ತಡ ಹಾಗೂ ಮನಸ್ಥಿತಿ ಏರುಪೇರು

ಒತ್ತಡ ಹಾಗೂ ಮನಸ್ಥಿತಿ ಏರುಪೇರು

ಹಸ್ತಮೈಥುನದಿಂದ ದೇಹದ ಒತ್ತಡ ನಿವಾರಿಸುವ ಕಾರ್ಟಿಸಾಲ್ ಮಟ್ಟ ಹೆಚ್ಚಾಗಿ ಆರಾಮ ಎನಿಸುತ್ತದೆ. ಆದರೆ ಚಟ ಹೆಚ್ಚಾದರೆ ಅದೇ ಕಾರ್ಟಿಸಾಲ್‌ನಿಂದ ಒತ್ತಡವೂ ಹೆಚ್ಚಾಗುತ್ತದೆ. ಅಲ್ಲದೆ ಟೆಸ್ಟೊಸ್ಟಿರಾನ್ ಹೆಚ್ಚಾಗಿ ಮನಸ್ಥಿತಿಯಲ್ಲಿ ಏರುಪೇರು ಗಳಾಗುತ್ತವೆ. ಇದು ತಾತ್ಕಾಲಿಕವಾಗಿದ್ದರೂ ಸಾಮಾಜಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ.

ಹಾಳಾಗುವ ದಿನಚರಿ

ಹಾಳಾಗುವ ದಿನಚರಿ

ಹಸ್ತಮೈಥುನದ ಬಯಕೆ ಉಂಟಾದಾಗ ನಿಮ್ಮ ದಿನಚರಿ ಏರುಪೇರಾಗುವುದನ್ನು ನೀವು ಸ್ವತಃ ಅನುಭವಿಸಿರಬಹುದು ಅಥವಾ ನಿಮ್ಮ ಗೆಳೆಯರ ವರ್ತನೆಯಲ್ಲಿಯೂ ಇದನ್ನು ಕಂಡಿರಬಹುದು. ಗೆಳೆಯರು ಕರೆದಾಗ ಅನೇಕ ಬಾರಿ ಅವರೊಂದಿಗೆ ಹೋಗದೆ ಒಬ್ಬಂಟಿಯಾಗಿ ಇದ್ದು ಹಸ್ತಮೈಥುನ ಮಾಡಿರಬಹುದು. ನಿಯಮಿತ ದಿನಚರಿಯನ್ನು ಬದಿಗೊತ್ತಿ ಕೇವಲ ಹಸ್ತಮೈಥುನಕ್ಕಾಗಿಯೇ ಕಾತರಿಸುವಂತಾಗುತ್ತದೆ. ಇದು ಖಂಡಿತವಾಗಿಯೂ ನಿತ್ಯದ ಸುಗಮ ಜೀವನಕ್ಕೆ ಅಪಾಯಕಾರಿಯಾಗಿದೆ.

ಬೆನ್ನು ಕೆಳಗಿನ ನೋವು

ಬೆನ್ನು ಕೆಳಗಿನ ನೋವು

ಅತಿ ಹಸ್ತಮೈಥುನದಿಂದ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಲಾರಂಭಿಸುತ್ತದೆ. ನ್ಯೂರೊಕೆಮಿಕಲ್ಸ್, ಟೆಸ್ಟೊಸ್ಟಿರಾನ್, ಆಕ್ಸಿಟೋಸಿನ್, ಡಿಎಚ್‌ಇಎ ಮತ್ತು ಡಿಎಚ್‌ಟಿ ರಾಸಾಯನಿಕಗಳ ಕೊರತೆಯಿಂದ ನೋವು ಉಂಟಾಗುತ್ತದೆ. ಈ ರಾಸಾಯನಿಕಗಳ ಕೊರತೆಯಿಂದ ಪ್ರೊಸ್ಟಾಗ್ಲಾಂಡಿನ್ ಇ೨ ಎಂಬ ಮತ್ತೊಂದು ಹಾರ್ಮೋನ್ ಬಿಡುಗಡೆಯಾಗಿ ಇದರಿಂದ ಬೆನ್ನು ನೋವು ಉಲ್ಬಣಗೊಳ್ಳುತ್ತದೆ.

ಶೀಘ್ರ ಸ್ಖಲನ ಹಾಗೂ ಶಿಶ್ನ ದೌರ್ಬಲ್ಯ (ಪುರುಷರಲ್ಲಿ)

ಶೀಘ್ರ ಸ್ಖಲನ ಹಾಗೂ ಶಿಶ್ನ ದೌರ್ಬಲ್ಯ (ಪುರುಷರಲ್ಲಿ)

ಪುರುಷರಲ್ಲಿ ಅತಿಯಾದ ಹಸ್ತಮೈಥುನದಿಂದ ಶೀಘ್ರ ಸ್ಖಲನ ಹಾಗೂ ಶಿಶ್ನ ದೌರ್ಬಲ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ವೀರ್ಯ ಸ್ಖಲಿಸುವ ನರಕೋಶ ದುರ್ಬಲವಾಗುವುದರಿಂದ ಶಿಶ್ನ ದುರ್ಬಲವಾಗುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ- ಅತಿಯಾದ ಕೈ ಬಳಕೆಯಿಂದ ಶಿಶ್ನ ನಿಮಿರುವಿಕೆಯನ್ನು ನಿಯಂತ್ರಿಸುವ ಪ್ಯಾರಾಸಿಂಪಥೆಟಿಕ್ ನರ್ವಸ್ ಸಿಸ್ಟಂ ಹಾಳಾಗುತ್ತದೆ. ಇನ್ನು ಕೆಲವರಲ್ಲಿ ಸ್ಖಲನದ ಸಂದರ್ಭದಲ್ಲಿ ಸಿಗಬೇಕಾದ ತೃಪ್ತಿ ಸಿಗುವುದಿಲ್ಲ.

ಲೈಂಗಿಕ ಜೀವನದ ಮೇಲೆ ದುಷ್ಪರಿಣಾಮ

ಲೈಂಗಿಕ ಜೀವನದ ಮೇಲೆ ದುಷ್ಪರಿಣಾಮ

ಅತಿಯಾದ ಹಸ್ತಮೈಥುನದ ಚಟವಿರುವವರ ಲೈಂಗಿಕ ಜೀವನ ತೃಪ್ತಿಕರವಾಗಿರುವುದಿಲ್ಲ ಎಂದು ಅಧ್ಯಯನಗಳಿಂದ ಗೊತ್ತಾಗಿದೆ. ಸಂಗಾತಿಯೊಂದಿಗೆ ಸಹಜ ಸೆಕ್ಸ್ ನಡೆಸಲು ಇವರು ಸಮಸ್ಯೆ ಎದುರಿಸುತ್ತಾರೆ. ಸೆಕ್ಸ್ ಮಾಡುವಾಗ ಸ್ಖಲಿಸಲು ಇವರಿಗೆ ಬಹಳಷ್ಟು ಸಮಯ ಬೇಕಾಗುತ್ತದೆ. ಇನ್ನು ಕೆಲ ಪುರುಷರಲ್ಲಿ ಹಸ್ತಮೈಥುನ ಮಾಡದಿದ್ದರೆ ಶಿಶ್ನ ನಿಮಿರುವುದಿಲ್ಲ.

ಮೂತ್ರ ವಿಸರ್ಜನೆಯಲ್ಲಿ ಉರಿ

ಮೂತ್ರ ವಿಸರ್ಜನೆಯಲ್ಲಿ ಉರಿ

ಹೆಚ್ಚಾದ ಹಸ್ತಮೈಥುನ ಚಟದಿಂದ ಯೂರಿನ್ ನಾಳ ದುರ್ಬಲಗೊಳ್ಳುವುದರಿಂದ ಮೂತ್ರ ವಿಸರ್ಜಿಸುವಾಗ ಉರಿಯ ಅನುಭವವಾಗುತ್ತದೆ. ನಾಳ ದುರ್ಬಲಗೊಳ್ಳುವುದರಿಂದ ಮೂತ್ರ ವಿಸರ್ಜನೆಯ ಒತ್ತಡ ತಾಳದೆ ನೋವು ಉಂಟಾಗುತ್ತದೆ. ಕೆಲ ಬಾರಿ ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ತಪ್ಪಿ, ಆಗಾಗ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ.

ನಿದ್ರಾಹೀನತೆ

ನಿದ್ರಾಹೀನತೆ

ಪದೇ ಪದೇ ಹಸ್ತಮೈಥುನದಿಂದ ಹಾರ್ಮೋನ್‌ಗಳಲ್ಲಿ ಏರುಪೇರಾಗುತ್ತದೆ. ದೇಹಕ್ಕೆ ಬೇಕಾದ ಮೆಲಾಟೊನಿನ್ ಎಂಬ ಹಾರ್ಮೋನ್ ಕಡಿಮೆಯಾಗುತ್ತದೆ. ಮೆಲಾಟೊನಿನ್ ಇದು ಸುಖಕರ ನಿದ್ರೆಗೆ ಅವಶ್ಯಕವಾದ ಹಾರ್ಮೋನ್ ಆಗಿದೆ. ಇದರ ಕೊರತೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬಾರದೆ ಸಮಸ್ಯೆಗಳು ಆರಂಭವಾಗುತ್ತವೆ. ಇದರೊಂದಿಗೆ ಅತಿಯಾದ ಹಸ್ತಮೈಥುನ ಎರಡು ಹಂತಗಳಲ್ಲಿ ನಿದ್ರಾಹೀನತೆಯನ್ನು ತರಬಲ್ಲದು. ಮೊದಲನೆಯದಾಗಿ ನಿದ್ರೆ ಬಾರದೆ ಏಕಾಗ್ರತೆ ಹಾಳಾಗುವುದು. ಇದರ ನಂತರ ತೀರಾ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗುತ್ತದೆ. ಇವು ಹಸ್ತಮೈಥುನದ ದುಷ್ಪರಿಣಾಮಗಳಾಗಿವೆ.

ಪುರುಷರ ಶಿಶ್ನ ಚಿಕ್ಕದಾಗುವುದು

ಪುರುಷರ ಶಿಶ್ನ ಚಿಕ್ಕದಾಗುವುದು

ವೈದ್ಯಶಾಸ್ತ್ರದ ಪ್ರಕಾರ ಅತಿಯಾದ ಹಸ್ತಮೈಥುನದಿಂದ ಶಿಶ್ನದ ಗಾತ್ರ ಚಿಕ್ಕದಾಗುತ್ತದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ.ಬೊಜ್ಜು ಶೇಖರಣೆಯಾಗಿ ರಕ್ತ ಪರಿಚಲನೆಗೆ ಅಡ್ಡಿ ಉಂಟಾಗುವುದರಿಂದ ಹಾಗೂ ಹಿಗ್ಗಲಾರದ ಕೋಶದ ಬೆಳವಣಿಗೆಯಿಂದ ರಕ್ತನಾಳಗಳ ಬೆಳವಣಿಗೆ ಕುಂಠಿತವಾಗುವುದರಿಂದ ಶಿಶ್ನದ ಗಾತ್ರ ಚಿಕ್ಕದಾಗುತ್ತ ಹೋಗುತ್ತದೆ.ಕಡಿಮೆ ಅಥವಾ ಹೆಚ್ಚು ಪ್ರಮಾಣದ ಹಸ್ತಮೈಥುನ ಎರಡೂ ವಿಧಗಳಲ್ಲಿ ಶಿಶ್ನದ ಕೋಶಗಳಿಗೆ ಹಾನಿಯಾಗುವುದರಿಂದ ಹಾಗೂ ಅಗತ್ಯವಾದ ಹಾರ್ಮೋನ್ ಕೊರತೆ ಉಂಟಾಗಿ ಶಿಶ್ನದ ಗಾತ್ರ ಚಿಕ್ಕದಾಗಲು ಕಾರಣವಾಗುತ್ತದೆ.

ಹಸ್ತಮೈಥುನ ಚಟದಿಂದ ಮುಕ್ತಿಗೆ ಕೆಲ ಮನೆ ಮದ್ದುಗಳು

ಹಸ್ತಮೈಥುನ ಚಟದಿಂದ ಮುಕ್ತಿಗೆ ಕೆಲ ಮನೆ ಮದ್ದುಗಳು

ಯಾವಾಗಲಾದರೊಮ್ಮೆ ಹಸ್ತಮೈಥುನ ಒಳ್ಳೆದಾದರೂ ಇದು ಅತಿಯಾದಾಗ ದುಷ್ಪರಿಣಾಮಗಳಾಗುತ್ತವೆ ಎಂಬುದನ್ನು ತಿಳಿದಂತಾಯಿತು. ಈಗ ಇದು ಚಟವಾಗಿದ್ದರೆ ಬಿಡುವುದು ಹೇಗೆ ಎಂಬುದನ್ನು ತಿಳಿಯೋಣ. ಒಂದು ಒಳ್ಳೆಯ ವಿಷಯ ಏನೆಂದರೆ ಹಸ್ತಮೈಥುನದಿಂದ ಉಂಟಾದ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ನಿತ್ಯದ ಜೀವನದಲ್ಲಿ ನೀವು ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅನೇಕ ಸಹಜ ಕ್ರಮಗಳ ಮೂಲಕ ಈ ಚಟದಿಂದ ದೂರವಿರಬಹುದಾಗಿದ್ದು, ಇದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಯಾವೆಲ್ಲ ವಿಧಾನಗಳ ಮೂಲಕ ಚಟದಿಂದ ಹೊರಬರಬಹುದು ಎಂಬುದನ್ನು ನೋಡೋಣ..

ಆತ್ಮಬಲ

ಆತ್ಮಬಲ

ಅತಿಯಾದ ಹಸ್ತಮೈಥುನದಿಂದ ಮುಕ್ತರಾಗಲು ನಿಮ್ಮ ಆತ್ಮಬಲವೇ ದೊಡ್ಡ ಅಸ್ತ್ರವಾಗಿದೆ. ದೃಢ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತನ್ನು ಕೇಳಿಯೇ ಇದ್ದೇವೆ. ಹಸ್ತಮೈಥುನ ಮಾಡುವುದಿಲ್ಲ ಎಂಬ ದೃಢ ನಿರ್ಧಾರ ಮಾಡಿ ಅದರಂತೆ ನಡೆದುಕೊಂಡರಾಯಿತು. ಒಂದು ಗಟ್ಟಿ ನಿರ್ಧಾರ ನಿಮ್ಮ ಜೀವನವನ್ನು ಬದಲಾಯಿಸಬಲ್ಲದು.

ವ್ಯಾಯಾಮ

ವ್ಯಾಯಾಮ

ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಂಡಲ್ಲಿ ಹಸ್ತಮೈಥುನದ ಬಯಕೆ ಕಡಿಮೆಯಾಗುತ್ತ ಬರುತ್ತದೆ. ಬಹುತೇಕರಲ್ಲಿ ತಮ್ಮ ದೇಹದ ಹೆಚ್ಚಿನ ಶಕ್ತಿಯನ್ನು ಹೊರಗೆ ಹಾಕುವ ಅಸ್ತ್ರವೇ ಹಸ್ತಮೈಥುನವಾಗಿದೆ. ಈ ಹೆಚ್ಚುವರಿ ಶಕ್ತಿಯನ್ನು ವ್ಯಾಯಾಮ ಮಾಡಲು ಬಳಸಿದಲ್ಲಿ ಸಹಜವಾಗಿಯೇ ಹಸ್ತಮೈಥುನ ದೂರವಾಗುವುದು. ದಿನಾಲೂ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದರೊಂದಿಗೆ ಆರೋಗ್ಯವೂ ಸುಧಾರಿಸುತ್ತದೆ. ವ್ಯಾಯಾಮದಿಂದ ಮನಸ್ಸು ಉಲ್ಲಸಿತವಾಗುವುದರಿಂದ ಹಸ್ತಮೈಥುನದ ಕಡೆ ಗಮನ ಹರಿಯುವುದು ತಾನಾಗಿಯೇ ಕಡಿಮೆಯಾಗುತ್ತದೆ.

ಒಬ್ಬಂಟಿಯಾಗಿರಬೇಡಿ

ಒಬ್ಬಂಟಿಯಾಗಿರಬೇಡಿ

ವರದಿಗಳ ಪ್ರಕಾರ ಅನೇಕ ಜನ ಮನೆಯಲ್ಲಿ ಯಾವಾಗಲೂ ಒಂಟಿಯಾಗಿರುವ ಕಾರಣದಿದಲೇ ಪದೇ ಪದೇ ಹಸ್ತಮೈಥುನ ಮಾಡುತ್ತಾರಂತೆ. ಒಂಟಿಯಾಗಿರುವಾಗ ಇಂಥ ವಿಚಾರಗಳು ಬರುವುದು ಸಹಜವೂ ಆಗಿದೆ. ಆದ್ದರಿಂದ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಪ್ಪಿಸಲು ಪ್ರಯತ್ನಿಸಿ. ಒಬ್ಬಂಟಿಯಾಗಿದ್ದರೂ ಇಷ್ಟದ ಒಳ್ಳೆಯ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಬುದ್ಧಿ ಕೆಲಸ ಮಾಡುತ್ತಿದ್ದರೆ ಹಸ್ತಮೈಥುನದ ವಾಂಛೆ ಕಡಿಮೆಯಾಗುತ್ತದೆ. ಇಷ್ಟಾದರೂ ಕೆಲವೊಮ್ಮೆ ಹಸ್ತಮೈಥುನದ ಬಯಕೆ ಉಂಟಾದರೆ ಮನೆಯಿಂದ ಹೊರಬಂದು, ಆರಾಮವಾಗಿ ಸುತ್ತಾಡಿ. ಒಬ್ಬಂಟಿಯಾಗಿದ್ದಾಗ ಈ ಬಯಕೆಯನ್ನು ಹತ್ತಿಕ್ಕುವುದು ಕಷ್ಟಕರ ಎಂಬುದು ನೆನಪಿರಲಿ. ಬೆಡ್‌ರೂಂ ಮಲಗುವ ಕೋಣೆಯಾಗಿಯೇ ಇರಲಿ. ಅದು ಬರೀ ಹಸ್ತಮೈಥುನದ ಜಾಗವಾಗದಿರಲಿ.

ಒತ್ತಡಗಳಿಂದ ಹೊರಬನ್ನಿ

ಒತ್ತಡಗಳಿಂದ ಹೊರಬನ್ನಿ

ಅತಿಯಾದ ಒತ್ತಡದಲ್ಲಿರುವವರು ತುಸು ನಿರಾಳತೆ ಪಡೆಯಲು ಹಸ್ತಮೈಥುನದ ಮೊರೆ ಹೋಗುತ್ತಾರೆ ಎಂಬುದು ಕಂಡುಬಂದಿದೆ. ಒತ್ತಡದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯನ್ನು ಹಸ್ತಮೈಥುನದ ಮೂಲಕ ಅವರು ಹೊರ ಹಾಕಲು ಯತ್ನಿಸುತ್ತಾರೆ. ಆದರೆ ಇದರಿಂದ ಗೊತ್ತಾಗದಂತೆಯೇ ಹಸ್ತಮೈಥುನ ಚಟವಾಗಿ ಸಮಸ್ಯೆ ಸೃಷ್ಟಿಸುತ್ತದೆ.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ನೀವು ಸೇವಿಸುವ ಆಹಾರ ನಿಮ್ಮ ಸೆಕ್ಸ್ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಆಹಾರದಲ್ಲಿ ಆದಷ್ಟೂ ಹೈನು ಉತ್ಪನ್ನಗಳು, ಸಿಹಿ, ಅಲ್ಕೊಹಾಲ್ ಹಾಗೂ ಕೆಫೀನ್‌ಗಳ ಸೇವನೆಯನ್ನು ಕಡಿಮೆ ಮಾಡಿ. ಹಸ್ತಮೈಥುನದ ಬಯಕೆ ಹೆಚ್ಚು ಮಾಡಬಲ್ಲ ಅಂಶಗಳು ಈ ಆಹಾರದಲ್ಲಿ ಅಡಕವಾಗಿವೆ. ದ್ವಿದಳ ಧಾನ್ಯ, ಸೂರ್ಯಕಾಂತಿ ಬೀಜ, ಸೊಯಾಬೀನ್, ತರಕಾರಿ ಮತ್ತು ಹಣ್ಣುಗಳನ್ನು ಆದ್ಯತೆಯ ಮೇರೆಗೆ ಸೇವಿಸಿ. ಯಾವಾಗಲೂ ಸಾಕಷ್ಟು ನೀರು ಕುಡಿದು ದೇಹವನ್ನು ತೇವಾಂಶ ಭರಿತವಾಗಿ ಹಾಗೂ ಉಲ್ಲಾಸಮಯವಾಗಿ ಇಟ್ಟುಕೊಳ್ಳಿ. ಇದರಿಂದ ಹಸ್ತಮೈಥುನದ ಬಯಕೆಗಳು ದೂರವಾಗುವುದಲ್ಲದೆ, ಆರೋಗ್ಯವೂ ಹೆಚ್ಚಾಗುವುದು.

ಹಾಲಿನೊಂದಿಗೆ ಕೇಸರಿ ಸೇವಿಸಿ

ಹಾಲಿನೊಂದಿಗೆ ಕೇಸರಿ ಸೇವಿಸಿ

ಹಾಲಿನೊಂದಿಗೆ ಕೇಸರಿಯನ್ನು ಬೆರೆಸಿ ಕುಡಿಯುವುದರಿಂದ ಹಸ್ತಮೈಥುನದಿಂದಾದ ದುಷ್ಪರಿಣಾಮಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಹಾಲು ಹಾಗೂ ಕೇಸರಿಯಲ್ಲಿ ಆರೋಗ್ಯಯುತ ಸೆಕ್ಸ್ ಜೀವನಕ್ಕೆ ಬೇಕಾದ ವಿಟಾಮಿನ್‌ಗಳಿರುತ್ತವೆ. ಮಲಗುವ ಮುಂಚೆ ಪ್ರತಿದಿನ ಕೇಸರಿ ಮಿಶ್ರಿತ ಹಾಲು ಸೇವಿಸುವುದು ಪ್ರಯೋಜನಕಾರಿಯಾಗಿದೆ.

English summary

how to-get-rid-of-excessive-masturbation-using-home-remedies

Masturbation is one of those things that most of you don’t speak about publicly. It is an act of making yourself feel good by exciting the body.This process includes touching genitals, breast, lips etc. Masturbation is carried out with one’s own hand usually without the presence of a partner.There are a lot of studies going on Whether masturbation is bad or good for health?. In this article we will help you to know the positive and negative effects of masturbation, How to get rid of frequent masturbation naturally, What causes masturbation addiction and quick tips to get rid of masturbation.
X
Desktop Bottom Promotion