For Quick Alerts
ALLOW NOTIFICATIONS  
For Daily Alerts

ಬೆನ್ನು ನೋವಿನ ಸಮಸ್ಯೆಯನ್ನು ಕೆಲಸದ ಸಂದರ್ಭದಲ್ಲಿ ಎದುರಿಸುವುದು ಹೇಗೆ?

By Sushma Charhra
|

ನಿಮಗೆ ನೆನಪಿದೆಯಾ ನೀವು ಚಿಕ್ಕವರಾಗಿದ್ದಾಗ, ನಿಮ್ಮ ಪೋಷಕರು ಮತ್ತು ಶಿಕ್ಷಕರು ಯಾವಾಗಲೂ ನಿಮ್ಮನ್ನು ನೇರವಾಗಿ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಿದ್ದರು ಅಲ್ವಾ? ಬೆನ್ನು ನೆಟ್ಟಗೆ ಇರಲಿ ಎಂದು ಎಷ್ಟೋ ಸಲ ವಾರ್ನ್ ಮಾಡಿರಬಹುದು.

ಈ ರೀತಿ ನಿಮಗೆ ತಿದ್ದಿದ ತೀಡಿದ ವಿಚಾರವಿದೆಯಲ್ಲ ಅದನ್ನು ನೀವು ರೂಢಿಸಿಕೊಂಡಿದ್ದರೆ ಬಹಳ ಒಳ್ಳೆಯದು. ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಿನವರು ಬೆನ್ನನ್ನು ಬಾಗಿಸಿ ಕುಳಿತಿರುವ ಅಭ್ಯಾಸ ಹೊಂದಿರುತ್ತಾರೆ. ಇದು ಅವರಿಗೆ ಹಲವಾರು ರೀತಿಯ ಬೆನ್ನಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಕೆಲಸಕ್ಕೆ ಹೋದಾಗ ಹೇಗೆ ಬೆನ್ನು ನೋವಿನ ಸಮಸ್ಯೆಯನ್ನು ಎದುರಿಸುವುದು ಎಂಬ ಬಗ್ಗೆ ಕೆಲವು ಸರಳ ಸಲಹೆಗಳಿವೆ ಇದನ್ನು ಅನುಸರಿಸಿ ನೋಡಿ.
ನೀವು ಕುಳಿತುಕೊಳ್ಳುವ ಭಂಗಿಯ ಬಗ್ಗೆ ಇರುವ ಕೆಲವು ತಪ್ಪು ತಿಳುವಳಿಕೆಗಳ ಬಗ್ಗೆ ಇಲ್ಲಿ ನಾವು ಮೊದಲು ತಿಳಿಸಲಿದ್ದೇವೆ.

back pain at work in a chair

ತಪ್ಪು ಕಲ್ಪನೆ: ನೇರವಾಗಿ ಕುಳಿತುಕೊಳ್ಳಬೇಕು ಇಲ್ಲದೇ ಇದ್ದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ

ನೇರವಾಗಿ ಕುಳಿತುಕೊಳ್ಳುವುದು ಬೆನ್ನಿನ ಆರೋಗ್ಯದ ದೃಷ್ಟಿಯಿಂದ ಹಿತವಾದದ್ದು ಎಂದು ಹೇಳಲಾಗುತ್ತೆ. ಇದೊಂದು ಬಹಳ ಹಳೆಯ ನಂಬಿಕೆಯಾಗಿದ್ದು ವೈಜ್ಞಾನಿಕವಾಗಿ ಅನ್ನುವುದಕ್ಕಿಂತ ಸಾಂಸ್ಕೃತಿಕವಾಗಿ ಎಲ್ಲರಲ್ಲೂ ಹುಟ್ಟಿರುವ ನಂಬಿಕೆ ಅಷ್ಟೇ. ಪೋಷಕರು ತಮ್ಮ ಮಕ್ಕಳಿಗೆ ಬೆನ್ನನ್ನು ಬಗ್ಗಿಸದೇ ನೇರವಾಗಿ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಾರೆ. ಅದು ತಲೆತಲಾಂತರದಿಂದ ಬಂದಿರುವ ರೂಢಿಯೇ ಹೊರತು ಹೀಗೆ ಕುಳಿತುಕೊಳ್ಳುವುದರಿಂದ ಬೆನ್ನಿಗೆ ಒಳ್ಳೆಯದು ಎಂಬ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ.

ತಪ್ಪು ಕಲ್ಪನೆ: ಬೆನ್ನನ್ನು ಬಾಗಿಸುವುದು ಬೆನ್ನಿನ ಆರೋಗ್ಯಕ್ಕೆ ಒಳ್ಳೆಯದಲ್ಲ

ಬೆನ್ನು ಬಾಗಿರುವಾಗ ನೇರವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಯಾವುದಾದರೂ ಒಂದನ್ನು ಮಾಡಬಹುದು. ಆದರೆ ಕುಳಿತುಕೊಂಡಾಗ ಬೆನ್ನನ್ನು ಬಾಗಿಸದೇ ಇರುವಂತೆ ನೇರವಾಗಿಯೇ ಇರುವಂತೆ ಕೆಲವರು ಸಲಹೆ ನೀಡುತ್ತಾರೆ. ಆದರೆ ಇದು ನಿಜಕ್ಕೂ ಅನಾನುಕೂಲದ ಪರಿಸ್ಥಿತಿಯನ್ನು ಒಡ್ಡುತ್ತದೆ. ತಜ್ಞರು ತಿಳಿಸುವಂತೆ, ಬೆನ್ನನ್ನು ಬಾಗಿಸಿ ಕುಳಿತುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಬೆನ್ನಿನ ಮೂಳೆಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ ಮತ್ತು ಇದರಿಂದಾಗಿ ಹಿಡಿದಿಟ್ಟಂತ ಭಾವನೆ ಬೆನ್ನಿಗೆ ಇರುವುದಿಲ್ಲ.

ತಪ್ಪು ಕಲ್ಪನೆ: ಸರಿಯಾದ ಭಂಗಿ

ಯಾರೂ ಕೂಡ ಯಾವುದು ಬೆನ್ನಿನ ಸರಿಯಾದ ಭಂಗಿ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಯಾವುದೂ ಕೂಡ ಇದುವರೆಗೂ ಒಂದು ಪರಿಪೂರ್ಣ ನಿಲುವು ಎಂದು ಸಾಕ್ಷೀಕರಿಸಲು ಸಾಧ್ಯವಾಗಿಲ್ಲ. ಒಂದು ಜಡವಾದ ಜೀವನಶೈಲಿಯು ಯಾರಿಗೂ ಹಿತವಲ್ಲ, ಯಾವುದಕ್ಕೂ ಹಿತವಲ್ಲ, ಅದು ನಿಮ್ಮ ಬೆನ್ನುಹುರಿಗೂ ಕೂಡ ಅನ್ವಯಿಸುತ್ತದೆ.

ಕೆಲಸದ ಸಂದರ್ಭದಲ್ಲಿ ಸುಲಭವಾಗಿ ಬೆನ್ನು ನೋವನ್ನು ಎದುರಿಸುವ ವಿಧಾನಗಳು

ಹಲವಾರು ವಿಚಾರಗಳು ಬೆನ್ನು ನೋವಿನ ಸಮಸ್ಯೆಗೆ ಕೆಲಸದಲ್ಲಿ ಕಾರಣವಾಗುತ್ತದೆ. ಅತೀ ಹೆಚ್ಚು ದೈಹಿಕ ಶಕ್ತಿ ಬಳಸಿ ಮಾಡುವ ಕೆಲಸ, ನಿಷ್ಕ್ರಿಯತೆ ಮತ್ತು ಪುನರಾವರ್ತನೆ ಇತ್ಯಾದಿ. ಆದರೆ ಅದನ್ನು ಎದುರಿಸಬೇಕು ಎಂದರೆ ನೀವು ಕೆಲವು ಕ್ರಮಗಳನ್ನು ಅನುಸರಿಸುವುದ ಬಹಳ ಒಳ್ಳೆಯದು.

1. ನಿಮ್ಮ ದೇಹ ಹೇಳಿದಂತೆ ಕೇಳಿ

1. ನಿಮ್ಮ ದೇಹ ಹೇಳಿದಂತೆ ಕೇಳಿ

ಒಂದು ವೇಳೆ ಕೆಲವು ಚಲನೆಗಳು ನಿಮ್ಮ ಬೆನ್ನು ನೋವಿಗೆ ಕಾರಣವಾಗುತ್ತಿದ್ದರೆ, ಸ್ವಲ್ವ ಸಮಯ ನಿಲ್ಲಿ ಮತ್ತು ನಿಮ್ಮ ದೇಹದ ಬಗ್ಗೆ ಗಮನ ಹರಿಸಿ. ನಿಮ್ಮ ವೈದ್ಯರ ಬಳಿ ಯಾವ ಚಲನೆಯು ಅಥವಾ ವ್ಯಾಯಾಮವು ನಿಮಗೆ ಒಳ್ಳೆಯದು ಎಂಬುದನ್ನು ಪರೀಕ್ಷಿಸಿ ನಿಮ್ಮ ದೇಹ ಬಯಸಿದಂತೆ ನೀವು ವರ್ತಿಸಿ. ದೇಹ ಹೇಳುವುದನ್ನು ನೀವು ಕೇಳಿದರೆ ಸಮಸ್ಯೆ ತನ್ನಿಂದ ತಾನೆ ಪರಿಹಾರ ಆಗುತ್ತದೆ.

2. ಅತಿಯಾಗಿ ವಿರಾಮ ತೆಗೆದುಕೊಳ್ಳಬೇಡಿ

2. ಅತಿಯಾಗಿ ವಿರಾಮ ತೆಗೆದುಕೊಳ್ಳಬೇಡಿ

ಒಂದು ವೇಳೆ ಪುಟ್ಟ ಗಾಯಗಳಾಗಿದ್ದರೆ ಅತೀ ಹೆಚ್ಚು ದಿನ ಹಾಸಿಗೆಯಲ್ಲಿ ಮಲಗಿಕೊಳ್ಳಬೇಡಿ. ಎರಡು ಅಥವಾ ಅದಕ್ಕಿಂತ ಹೆಚ್ಚು ದಿನ ನೀವು ಹೀಗೆ ಮಲಗಿಕೊಂಡರೆ, ನಿಮ್ಮ ಮಾಂಸಖಂಡಗಳು ಕ್ರಮೇಣ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಅದು ನಿಮ್ಮ ಬೆನ್ನಿನ ಭಾಗಕ್ಕೆ ನೀಡುವ ಬೆಂಬಲವೂ ಕಡಿಮೆಯಾಗುತ್ತದೆ. ಹಾಗಾಗಿ ಆದಷ್ಟು ಕ್ರಿಯಾಶೀಲರಾಗಿ ಇರುವುದನ್ನು ಕಲಿತುಕೊಳ್ಳಿ. ವಿರಾಮ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

3. ಕುಳಿತುಕೊಳ್ಳುವಾಗ ಮತ್ತು ನಿಂತುಕೊಳ್ಳುವಾಗ ಸುರಕ್ಷಿತವಾಗಿರಿ

3. ಕುಳಿತುಕೊಳ್ಳುವಾಗ ಮತ್ತು ನಿಂತುಕೊಳ್ಳುವಾಗ ಸುರಕ್ಷಿತವಾಗಿರಿ

ನಿಮ್ಮ ಬೆನ್ನಿನ ಕೆಳಭಾಗವನ್ನು ಉತ್ತಮ ಭಂಗಿಯಿಂದ ಕಾಪಾಡಿಕೊಳ್ಳಿ. ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ ಆದರೆ ನಿಮ್ಮ ಭಂಗಿ ನೇರವಾಗಿರಲಿ. ಕುಳಿತುಕೊಳ್ಳುವಾಗ ಅಥವಾ ನಿಂತುಕೊಳ್ಳುವಾಗ ಬೆನ್ನಿನ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.

• ನೀವು ಡ್ರೈವಿಂಗ್ ಮಾಡುವಾಗ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನಿನ ಕೆಳತುದಿಯಲ್ಲಿ ಕುಳಿತುಕೊಳ್ಳುವುದನ್ನು ಆದಷ್ಟು ತಪ್ಪಿಸಿ

• ಕೆಲಸ ಮಾಡುವ ಸಂದರ್ಬದಲ್ಲಿ ಕುಳಿತುಕೊಳ್ಳುವಾಗ, ನಿಮ್ಮ ಕೆಲಸ ಮಾಡುವ ಮೇಲ್ಮೈ ನಿಮಗೆ ಆರಾಮದಾಯದವಾದ ಎತ್ತರದಲ್ಲಿ ಇದಿಯಾ ಪರೀಕ್ಷಿಸಿ, ಆದಷ್ಟು ಆರಾಮದಾಯಕವಾಗಿ ಕುಳಿತುಕೊಳ್ಳಿ.

• ಸೊಂಟಕ್ಕೆ ಹೆಚ್ಚಿನ ಬೆಂಬಲ ನೀಡುವ ಖುರ್ಚಿಗಳನ್ನು ಬಳಸಿ ಮತ್ತು ದಿಂಬುಗಳನ್ನು ಖುರ್ಚಿಯಲ್ಲಿ ಬಳಸಿ ಬೆನ್ನಿಗೆ ಬೆಂಬಲ ಪಡೆಯಿರಿ.

• ನಿಮ್ಮ ಖುರ್ಚಿಯ ಎತ್ತರವನ್ನು ಸರಿಯಾಗಿ ಇಟ್ಟುಕೊಳ್ಳಿ ಮತ್ತು ಅದು ನಿಮ್ಮ ಕೆಲಸಕ್ಕೆ ಸರಿಯಾಗಿ ಬೆಂಬಲ ನೀಡುವಂತೆ ಇರಬೇಕು . ಸ್ಟೂಲ್ ನಲ್ಲಿ ನಿಮ್ಮ ಕಾಲುಗಳಿಗೆ ವಿರಾಮ ನೀಡಿ.

• ಯಾವಾಗ ಎದ್ದು ನಿಲ್ಲುತ್ತೀರೋ, ಆದ ನಿಮ್ಮ ಸೀಟಿನ ತುದಿಗಿಗೆ ನಿಧಾನವಾಗಿ ತೆರಳಿ ಮತ್ತು ಕಾಲುಗಳನ್ನು ಸರಿಯಾಗಿ ಇಟ್ಟುಕೊಂಡು ಯಾವುದಾದರೂ ವಸ್ತುವಿನ ಬೆಂಬಲದೊಂದಿಗೆ ಎದ್ದುನಿಲ್ಲುವ ಅಭ್ಯಾಸ ಹೊಂದಿರಿ,

• ನೀವು ಡ್ರೈವಿಂಗ್ ಮಾಡುವಾಗ, ನಿಮ್ಮ ಸೀಟು ಹೇಗಿರಬೇಕು ಎಂದರೆ ಬೆನ್ನಿನ ಕೆಳಭಾಗವನ್ನು ತಿರುವಿನಂತೆ ಇಟ್ಟುಕೊಳ್ಳಲು ಸಹಕಾರಿಯಾಗಿರಬೇಕು.

• ತುಂಬಾ ದೂರದ ಡ್ರೈವಿಂಗ್ ಮಾಡುವ ಸಂದರ್ಬದಲ್ಲಿ., ಆಗಾಗ ವಿರಾಮ ತೆಗೆದುಕೊಳ್ಳಿ ಮತ್ತು ವೆಹಿಕಲ್ ನಿಲ್ಲಿಸಿ ಸ್ವಲ್ಪ ಆಚೀಚೆ ತಿರುಗಾಡಿ ರೆಸ್ಟ್ ಮಾಡಿ.

4. ವಸ್ತುವನ್ನು ಹಿಡಿದುಕೊಳ್ಳಿ ಮತ್ತು ಸುರಕ್ಷಿತವಾಗಿ ಮುನ್ನಡೆಯಿರಿ

4. ವಸ್ತುವನ್ನು ಹಿಡಿದುಕೊಳ್ಳಿ ಮತ್ತು ಸುರಕ್ಷಿತವಾಗಿ ಮುನ್ನಡೆಯಿರಿ

ನೀವು ಕುಳಿತುಕೊಂಡೇ ಮಾಡುವ ಕೆಲಸವನ್ನು ಮಾಡುವವರಾದರೆ, ಆಗಾಗ ನಿಮ್ಮ ಭಂಗಿಯನ್ನು ಬದಲಾಯಿಸುತ್ತಾ ಇರಿ. ಎದ್ದು ನಿಲ್ಲಿ, ಆಗಾಗ ಸುತ್ತಾಡುತ್ತಿರಿ ಮತ್ತು ಪ್ರತಿ ಒಂದು ಗಂಟೆಗೆ ಒಮ್ಮೆ ನಿಮ್ಮನ್ನು ನೀವು ಸ್ಟ್ರೆಚ್ ಮಾಡಿಕೊಳ್ಳುತ್ತಾ ಇರಿ. ನಿಮ್ಮ ಬೆನ್ನಿನ ಭಾಗಕ್ಕೆ ಸೌಮ್ಯವಾದ ವಸ್ತುಗಳನ್ನು ಇರಿಸಿ ಬಲ ನೀಡಿ. ಇತರೆ ಮನೆಕೆಲಸವನ್ನು ಮಾಡುವಾಗ ಉದಾಹರಣೆಗೆ ಒರೆಸುವುದು, ಗುಡಿಸುವುದು ಇತ್ಯಾದಿ ಆಗ ನಿಮ್ಮ ಬೆನ್ನಿನ ಭಾಗವು ಸರಿಯಾಗಿ ಬಾಗಿರುವಂತೆ ನೋಡಿಕೊಳ್ಳಿ. ಅತಿಯಾಗಿ ಒತ್ತಡ ಹೇರಿಕೊಳ್ಳಬೇಡಿ.

ಒಂದು ವೇಳೆ ನೀವು ಯಾವುದೇ ವಸ್ತುಗಳನ್ನು ಎತ್ತುತ್ತಿದ್ದರೆ ಉದಾಹರಣೆಗೆ ಮನೆಯ ಗಿರಣಿ ಸಾಮಾನು ಗಳು ಇತ್ಯಾದಿ ಆಗ ಈ ಭಾರವನ್ನು ಎತ್ತುವಾಗ ಈ ಸಲಹೆಗಳನ್ನು ನೆನಪಿಡಿಯ..

ನಿಮ್ಮ ಅಡಿ ಭುಜವನ್ನು ಅಗಲವಾಗಿರಿಸಿ, ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ ಮತ್ತು ನಿಮ್ಮ ಕಾಲುಗಳನ್ನು ಎತ್ತಿ ದೃಢವಾಗಿ ಸರಿಯಾದ ಭಂಗಿಯನ್ನೇ ಅನುಸರಿಸಿ.

5. ಸರಿಯಾದ ತೂಕವನ್ನು ಕಾಪಾಡಿಕೊಳ್ಳಿ

5. ಸರಿಯಾದ ತೂಕವನ್ನು ಕಾಪಾಡಿಕೊಳ್ಳಿ

ಸರಿಯಾದ ತೂಕವನ್ನು ಕಾಯ್ದುಕೊಳ್ಳುವಿಕೆಯು ನಿಮ್ಮ ಬೆನ್ನಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಒಂದು ವೇಳೆ ನಿಮಗೆ ಒಬೆಸಿಟಿ ಸಮಸ್ಯೆ ಇದ್ದರೆ, ಅದರಿಂದ ನಿಮ್ಮ ಬೆನ್ನಿನ ಭಾಗಕ್ಕೆ ಸಾಕಷ್ಟು ಒತ್ತಡ ಬೀಳುತ್ತದೆ. ಅಷ್ಟೇ ಅಲ್ಲ, ಕಾಲ್ಸಿಯಂ ಮತ್ತು ವಿಟಮಿನ್ ಡಿ ಯುಕ್ತ ಆಹಾರಗಳ ಸೇವನೆಯು ನಿಮಗೆ ಬೆನ್ನಿನ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ.

6. ಧೂಮಪಾನ ಮಾಡುವುದು ಬಿಡುವುದು ಒಳ್ಳೆಯದು

6. ಧೂಮಪಾನ ಮಾಡುವುದು ಬಿಡುವುದು ಒಳ್ಳೆಯದು

ನಿಮಗೆ ಆಶ್ಚರ್ಯವಾಗಬಹುದು. ಧೂಮಪಾನವು ನಿಮ್ಮ ಬೆನ್ನಿಗೆ ಏನನ್ನೋ ಮಾಡುತ್ತದೆ ಅಂದರೆ ನಂಬೋಕೆ ಸಾಧ್ಯವೇ. ಆದರೂ ನಂಬಬೇಕು. ಧೂಮಪಾನ ಮಾಡುವುದರಿಂದಾಗಿ ಬೆನ್ನುಮೂಳೆಗೆ ರಕ್ತಸಂಚಾರವು ನಿಧಾನಗೊಳ್ಳುತ್ತದೆ ಮತ್ತು ಇದು ವಯಸ್ಸಾದಂತೆ ಬೆನ್ನಿನ ಸಮಸ್ಯೆಗೆ ಕಾರಣವಾಗುತ್ತೆ. ಇದು ನಿಮಗೆ ಬೆನ್ನಿನ ಕೆಳಭಾಗದ ನೋವಿನ ಸಮಸ್ಯೆಗೆ ಕಾರಣವಾಗಬಹುದು.

English summary

How To Deal With Back Pain At Work

Do you remember when you were a child, it so happened that your parents might have reprimanded you for slouching? Parents and teachers would always tell you to sit straight to prevent back problems. These teachings hold true. Even at work, we tend to slouch; this can lead to back problems. In this article, we will be explaining how to deal with back pain at work.
Story first published: Thursday, July 5, 2018, 16:48 [IST]
X
Desktop Bottom Promotion