For Quick Alerts
ALLOW NOTIFICATIONS  
For Daily Alerts

ದಿನ ನಿತ್ಯ ಸ್ವಲ್ಪ ಪಿಸ್ತಾ ಸೇವಿಸಿ-ದೇಹದ ತೂಕ ಇಳಿಸಬಹುದು

By
|

ಇಂದಿನ ದಿನಗಳಲ್ಲಿ ದೇಹದ ತೂಕ ಮತ್ತು ಬೊಜ್ಜು ಒಂದು ರೋಗವಾಗಿ ಮನುಕುಲವನ್ನು ಕಾಡುತ್ತಿದೆ. ದೇಹದ ತೂಕವನ್ನು ಕಳೆದುಕೊಳ್ಳಲು ನೀವು ಏನೆಲ್ಲಾ ಕಸರತ್ತುಗಳನ್ನು ಮಾಡಿದರೂ ತೂಕ ಇಳಿಯುತ್ತಿಲ್ಲ ಎಂಬ ಹತಾಶೆ ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ನೀವು ಸೇವಿಸುವ ಆಹಾರ ಮತ್ತು ಮಾಡುವ ವ್ಯಾಯಾಮದ ಕಡೆಗೆ ಗಮನ ನೀಡಬೇಕು. ನಿಮ್ಮ ತೂಕ ಕಳೆದುಕೊಳ್ಳುವ ವಿಷಯದಲ್ಲಿ ಆಹಾರ 70% ಕಾರ್ಯನಿರ್ವಹಿಸಿದರೆ ವ್ಯಾಯಾಮ 30% ಕಾರ್ಯನಿರ್ವಹಿಸುತ್ತದೆ ಎಂದಾಗಿದೆ.

ಎರ್ರಾಬರ್ರಿ ಸೇವಿಸಿ ದೇಹದ ತೂಕ ಕಳೆದುಕೊಳ್ಳಬೇಕೆಂಬ ನಿಯಮ ನಿಮ್ಮದಾಗಿದ್ದರೆ ಜಪ್ಪಯ್ಯ ಅಂದರೂ ನೀವು ತೂಕ ಕಳೆದುಕೊಳ್ಳುವುದು ಕನಸಿನ ಮಾತಾಗಿರುತ್ತದೆ. ಅದಕ್ಕಾಗಿ ಆಹಾರ ಮತ್ತು ವ್ಯಾಯಾಮವನ್ನು ಸರಿಸಮನಾಗಿ ನೀವು ನಿರ್ವಹಿಸಬೇಕು. ಇಂದಿನ ಲೇಖನದಲ್ಲಿ ನಾವು ತೂಕ ಇಳಿಕೆಗೆ ನಿಮಗೆ ಸಹಾಯ ಮಾಡುವ ಒಣ ಹಣ್ಣು ಪಿಸ್ತಾದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಒಣ ಹಣ್ಣುಗಳು ನಿಮ್ಮ ದೇಹದ ತೂಕವನ್ನು ಇಳಿಸಲು ಮತ್ತು ಹೆಚ್ಚಿಸಲು ಸಹಕಾರಿಯಾಗಿದೆ. ನೀವು ಒಣ ಹಣ್ಣು ಪ್ರಿಯರಾಗಿದ್ದರೆ ಇಂದಿನಿಂದ ನಿಮ್ಮ ಡಬ್ಬದಲ್ಲಿ ಸ್ವಲ್ಪ ಪಿಸ್ತಾವನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.

ಆರೋಗ್ಯವೃದ್ಧಿಗೆ ಬಾದಾಮಿಯೇ ಬೇಕೆಂದಿಲ್ಲ, ಪಿಸ್ತಾವೂ ಸಾಕು

pistachio diet plan

ಹಸಿವಾದ ಸಮಯದಲ್ಲಿ ಈ ಒಣ ಹಣ್ಣು ನಿಮ್ಮ ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ದೇಹದ ತೂಕವನ್ನು ಇಳಿಸಲಿದೆ. ಇದು ಫೈಬರ್, ಆರೋಗ್ಯವಂತ ಕೊಬ್ಬು ಮತ್ತು ಪ್ರೊಟೀನ್ ಅನ್ನು ಒಳಗೊಂಡಿದೆ. ದೇಹದಲ್ಲಿರುವ ಉತ್ಕರ್ಷಣ ನಿರೋಧಿಯಾಗಿ ಇದು ಕೆಲಸ ಮಾಡುತ್ತದೆ ಮತ್ತು ಹಸಿವಿನ ಕಡುಬಯಕೆಯನ್ನು ನೀಗಿಸುತ್ತದೆ. ಎಲ್ಲಾ ಪ್ರೊಟೀನ್, ವಿಟಮಿನ್ ಮತ್ತು ಇನ್ನಿತರ ಆರೋಗ್ಯವಂತ ಕೊಬ್ಬಿನ ಆಗರವಾಗಿರುವ ಒಣ ಹಣ್ಣು ನಿಮ್ಮ ದೇಹದ ತೂಕವನ್ನು ಇಳಿಸಿ ನಿಮ್ಮನ್ನು ಸುಂದರ ಕಾಯರನ್ನಾಗಿ ಮಾಡುತ್ತದೆ. ಅಷ್ಟೇ ಅಲ್ಲದೆ ಪಿಸ್ತಾ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್‌ಗಳ ಮಟ್ಟ ಆರೋಗ್ಯಕರ ಮಿತಿಗಳಲ್ಲಿರಲು ಸಾಧ್ಯವಾಗುತ್ತದೆ.

ಈ ಮೂಲಕ ಹೃದಯಾಘಾತ ಹಾಗೂ ಹೃದಯಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಜಿಡ್ಡು ಸಡಿಲಗೊಂಡು ನಿವಾರಣೆಯಾಗುವ ಮೂಲಕ ರಕ್ತನಾಳಗಳು ಶುದ್ದಿಗೊಂಡು ರಕ್ತಪರಿಚಲನೆ ಸರಾಗವಾಗುತ್ತದೆ ತನ್ಮೂಲಕ ಅಧಿಕ ಹೃದಯದೊತ್ತಡವೂ ಕಡಿಮೆಯಾಗುತ್ತದೆ. ಬನ್ನಿ ಈ ಲೇಖನದಲ್ಲಿ ಪಿಸ್ತಾದಿಂದ ದೇಹಕ್ಕಾಗುವ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ಅರಿತುಕೊಳ್ಳೋಣ...

ಪಿಸ್ತಾದಲ್ಲಿರುವ ನ್ಯೂಟ್ರಿನ್ ಅಂಶಗಳು

ಪಿಸ್ತಾದಲ್ಲಿರುವ ನ್ಯೂಟ್ರಿನ್ ಅಂಶಗಳು

100 ಗ್ರಾಮ್ ಪಿಸ್ತಾವು 15% ರಿಂದ 21% ದಷ್ಟು ಪ್ರೊಟೀನ್ ಅನ್ನು ಒಳಗೊಂಡಿದೆ. ಒಂದೆರಡು ಪಿಸ್ತಾವನ್ನು ಸೇವಿಸುವುದು ನಿಮ್ಮ ಸ್ನಾಯುವಿಗೆ ಸಾಕಷ್ಟು ಪ್ರಮಾಣದ ಪ್ರೊಟೀನ್ ಅನ್ನು ಒದಗಿಸುತ್ತದೆ. ಇತರ ನಟ್‌ಗಳಿಗೆ ಹೋಲಿಸಿದಾಗ 159 ಕ್ಯಾಲೋರಿಯನ್ನು ಪಡೆದುಕೊಂಡಿದೆ ಇದು ಇತರ ನಟ್‌ಗಳಲ್ಲಿ ಕಡಿಮೆ ಇದೆ. ಪಿಸ್ತಾ ಕಡಿಮೆ ಗ್ಲಿಸಮಿಕ್ ಮೌಲ್ಯವನ್ನು ಹೊಂದಿದೆ ಮತ್ತು ನಿಮ್ಮ ಇನ್ಸುಲಿನ್ ಮಟ್ಟದಲ್ಲಿ ಯಾವುದೇ ರೀತಿಯ ಏರು ಪೇರು ಉಂಟಾಗುವುದಿಲ್ಲ.

ವಿಟಮಿನ್ ಗಳ ಆಗರ

ವಿಟಮಿನ್ ಗಳ ಆಗರ

ಪಿಸ್ತಾವು ವಿಟಮಿನ್ ಎ, ಬಿ6, ಕೆ ಮತ್ತು ಫ್ಲೆವನಾಲ್‌ಗಳು, ಎಂಜೀಮ್‌ಗಳು, ಅಂತೊಕ್ಲೆನಿನ್, ಲ್ಯೂಟಿನ್ ಅನ್ನು ಹೊಂದಿದೆ ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸಲು ಸಹಾಯ ಮಾಡಲಿದೆ. ಈ ನಟ್ 3 ಗ್ರಾಮ್‌ನಷ್ಟು ಡಯೆಟರಿ ಫೈಬರ್ ಅನ್ನು ಪಡೆದುಕೊಂಡಿದೆ ನಿಮ್ಮ ತೂಕ ಇಳಿಕೆಗೆ ಈ ನಟ್ ಸಹಕಾರಿಯಾಗಿದ್ದು ನಿಮ್ಮನ್ನು ದೀರ್ಘ ಸಮಯದವರೆಗೆ ಹಸಿವಿನಿಂದ ರಕ್ಷಿಸುತ್ತದೆ. ಇನ್ನು ಪಿಸ್ತಾ ಮಿನರಲ್‌ಗಳಾದ ಕ್ಯಾಲ್ಶಿಯಮ್, ಫಾಸ್‌ಫರಸ್, ಐರನ್, ಪೊಟಾಶಿಯಮ್ ಮತ್ತು ಮೆಗ್ನೇಶಿಯಂ ಅನ್ನು ಪಡೆದುಕೊಂಡಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಲಿದೆ.

ತೂಕ ಇಳಿಕೆಯಲ್ಲಿ ಪಿಸ್ತಾ ಹೇಗೆ ಸಹಕಾರಿ?

ತೂಕ ಇಳಿಕೆಯಲ್ಲಿ ಪಿಸ್ತಾ ಹೇಗೆ ಸಹಕಾರಿ?

ಫೈಬರ್ ಮತ್ತು ಪ್ರೊಟೀನ್ ಅನ್ನು ಪಿಸ್ತಾ ಒಳಗೊಂಡಿದ್ದು ನಿಮ್ಮನ್ನು ದೀರ್ಘ ಸಮಯದವರೆಗೆ ಇದು ಹಸಿವಾಗದಂತೆ ಕಾಪಾಡುತ್ತದೆ ಮತ್ತು ಕಡಿಮೆ ತಿನ್ನುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. 12 ವಾರದ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಪಿಸ್ತಾವನ್ನು ಸೇವಿಸಿದವರು ಉತ್ತಮ ರೀತಿಯಲ್ಲಿ ತೂಕವನ್ನು ಇಳಿಸಿಕೊಂಡಿದ್ದಾರೆ. 24 ವಾರದ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಪಿಸ್ತಾದಿಂದ 20% ಕ್ಯಾಲೊರಿ ಸೇವನೆಯನ್ನು ಮಾಡಿದವರು ತಮ್ಮ ಸೊಂಟದ ಸುತ್ತಳತೆಯನ್ನು 1.5 ಸೆಮೀಗಿಂತ ಕಡಿಮೆ ಮಾಡಿಕೊಂಡಿದ್ದಾರೆ. ಇನ್ನು ತಜ್ಞರ ಪ್ರಕಾರ ಪಿಸ್ತಾವು ಕೊಬ್ಬು, ಫೈಬರ್ ಮತ್ತು ಪ್ರೊಟೀನ್ ಅನ್ನು ಒಳಗೊಂಡಿದ್ದು ನಿಮ್ಮನ್ನು ದೀರ್ಘ ಸಮಯದವರೆಗೆ ಹಸಿವಾಗದಂತೆ ಕಾಪಾಡುತ್ತದೆ. ಇನ್ನು ಪಿಸ್ತಾದಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಹಾಗೂ ಅತಿ ಕದಿಮೆ ಪ್ರಮಾಣದಲ್ಲಿ ಸಂತುಲಿತ ಕೊಬ್ಬು ಇರುವ ಕಾರಣ ತೂಕ ಹೆಚ್ಚದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಪ್ರೋಟೀನುಗಳು ಕೊಂಚ ಕಷ್ಟದಲ್ಲಿ ಜೀರ್ಣವಾಗುವ ಕಾರಣ ಇದಕ್ಕಾಗಿ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದು ತೂಕ ಇಳಿಸಲು ನೆರವಾಗುತ್ತದೆ.

ಕವಚವಿರುವ ಪಿಸ್ತಾ ಸೇವಿಸಿ

ಕವಚವಿರುವ ಪಿಸ್ತಾ ಸೇವಿಸಿ

ತೂಕ ಇಳಿಕೆಗಾಗಿ ನೀವು ಪಿಸ್ತಾವನ್ನು ಸೇವಿಸುತ್ತಿದ್ದಲ್ಲಿ ಕವಚವಿರುವ ಪಿಸ್ತಾ ಸೇವನೆ ಮಾಡಿ. ಇದು ಉತ್ತಮ ಸಾರವನ್ನು ಹೊಂದಿದ್ದು ನಿಮ್ಮ ಹೊಟ್ಟೆಯಲ್ಲಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಸಮಯ ನಿಮಗೆ ಹೊಟ್ಟೆ ತುಂಬಿದಂತೆ ಮಾಡುತ್ತದೆ. ನಿಮ್ಮ ವ್ಯಾಯಾಮದಲ್ಲಿ ಕೂಡ ಶಕ್ತಿಯನ್ನು ಹೆಚ್ಚಿಸಲಿದ್ದು ಸುಸ್ತನ್ನು ನಿವಾರಿಸಲಿದೆ.

ಪಿಸ್ತಾದ ಇನ್ನಷ್ಟು ಆರೋಗ್ಯ ಪ್ರಯೋಜನಗಳು

ಪಿಸ್ತಾದ ಇನ್ನಷ್ಟು ಆರೋಗ್ಯ ಪ್ರಯೋಜನಗಳು

ಅಮೇರಿಕಾದ ನ್ಯೂಟ್ರಿಶನ್ ಕಾಲೇಜಿಗೆ ಸಂಬಂಧಪಟ್ಟ ಲೇಖನದಲ್ಲಿ ಪಿಸ್ತಾ ಸೇವನೆಯಿಂದ ಟ್ರಿಗ್ಲಿಸಿರೈಡ್ ಮಟ್ಟ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ. ಚೀನಾದ ಒಂದು ಸಂಸ್ಥೆ ಅಧ್ಯಯನ ನಡೆಸಿದ ಪ್ರಕಾರ ಮೆಟಾಬೊಲಿಕ್ ಲಕ್ಷಣದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದಾಗಿದೆ. ವಿಜ್ಞಾನಿಗಳು ಹೇಳುವಂತೆ ನಿಯಮಿತವಾಗಿ ಪಿಸ್ತಾವನ್ನು ಸೇವಿಸುವುದರಿಂದ ಹೃದಯ ರೋಗ, ಪಾರ್ಶ್ವವಾಯು, ರಕ್ತದೊತ್ತಡ, ಚಯಾಪಚಯ ವೃದ್ಧಿ ಮತ್ತು ಮಧುಮೇಹದ ನಿಯಂತ್ರಣವನ್ನು ಮಾಡಬಹುದಾಗಿದೆ. ನಿಮ್ಮ ಹಸಿವಾಗುವಿಕೆಯನ್ನು ಪಿಸ್ತಾ ತಡೆಗಟ್ಟಿ ಹೆಚ್ಚು ತಿನ್ನದಂತೆ ನಿಮ್ಮನ್ನು ತಡೆಯುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.

ತೂಕ ಇಳಿಕೆಗೆ ಪಿಸ್ತಾ ಸೇವನೆಯನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕು

ತೂಕ ಇಳಿಕೆಗೆ ಪಿಸ್ತಾ ಸೇವನೆಯನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕು

49 ಕೆರ್ನಲ್‌ಗಳಷ್ಟು ಪಿಸ್ತಾ ಸೇವನೆ ಮಾಡಬೇಕು. 24 ಕೆರ್ನಲ್‌ ಬೆಳಗ್ಗಿನ ಸಮಯದಲ್ಲಿ ಮತ್ತು 25 ಸಂಜೆಯ ಕುರುಕಲಾಗಿ ತಿನ್ನಬೇಕು.

ನಿಮ್ಮ ಆಹಾರದಲ್ಲಿ ಪಿಸ್ತಾವನ್ನು ಸೇವಿಸುವುದು ಹೇಗೆ?

ನಿಮ್ಮ ಆಹಾರದಲ್ಲಿ ಪಿಸ್ತಾವನ್ನು ಸೇವಿಸುವುದು ಹೇಗೆ?

ಉಪ್ಪು ಬೆರೆಸದೇ ಇರುವ ಹಸಿ ಪಿಸ್ತಾವನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಿ. ಅರ್ಧ ಕಪ್‌ನಷ್ಟು ಪಿಸ್ತಾ ಸೇವಿಸಬಹುದಾಗಿದೆ. ನಿಮ್ಮ ಸಲಾಡ್, ಕಡಿಮೆ ಪ್ರಮಾಣದ ಯೋಗರ್ಟ್, ನಿಮ್ಮ ವರ್ಕ್‌ಔಟ್‌ನ ಮೊದಲಿನ ಸ್ಮೂಥಿ, ಮಜ್ಜಿಗೆಯಲ್ಲಿ ಬೆರೆಸಿ ಪಿಸ್ತಾವನ್ನು ಸೇವಿಸಬಹುದು. ಇನ್ನು ಉತ್ತಮ ನಿದ್ದೆಗಾಗಿ ಕೆನೆರಹಿತ ಪಿಸ್ತಾ ಬೆರೆಸಿದ ಹಾಲಿನ ಸೇವನೆಯನ್ನು ಮಾಡಿ. ಪಿಸ್ತಾ ಸೇವನೆಯನ್ನು ಮಾಡುವುದರ ಜೊತೆಗೆ ಆರೋಗ್ಯಯುತ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮವನ್ನು ಮರೆಯಬಾರದು.

English summary

How Do Pistachios Help In Weight Loss?

Nuts have always been associated with weight gain. But, here's a nut that can actually help you lose weight. Yes, indeed, we are talking about pistachios. Although this sounds too good to be true, it is a fact that if you love snacking on nuts, then pistachios are your best bet. They can satisfy your snack time craving and at the same time help you lose weight, as they are rich in fibre, healthy fats, and protein. The healthy fats in pistachios reduce inflammation in the body, while also helping you get rid of hunger pangs.
X
Desktop Bottom Promotion