For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ತಂಪಾದ ಲಿಂಬೆ ನೀರು ಕುಡಿದರೆ ಸಾಕು!!

By Hemanth
|

ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಹೆಚ್ಚು ಶ್ರಮ ಪಡಬೇಕಿಲ್ಲದಿದ್ದರೂ ತೂಕ ಇಳಿಸಿಕೊಳ್ಳಲು ಮಾತ್ರ ಕೆಲವರು ಆಕಾಶ ಭೂಮಿಯನ್ನು ಒಂದಾಗಿಸುವರು. ಸಿಟ್ರಸ್ ಹಣ್ಣುಗಳಲ್ಲಿ ಒಂದಾಗಿರುವ ಲಿಂಬೆ ಕೂಡ ತೂಕ ಇಳಿಸಲು ಪ್ರಮುಖ ಪಾತ್ರ ವಹಿಸುವುದು ಎಂದು ತಿಳಿದಿರಬಹುದು. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವ ಹೆಚ್ಚಿನ ಜನರು ಲಿಂಬೆಯನ್ನು ಬಳಸಿಕೊಳ್ಳುವರು.

cold lemon water weight loss

ತೂಕ ಇಳಿಕೆ ಮಾಡಬೇಕಾದರೆ ಲಿಂಬೆರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ತಂಪಾದ ನೀರಿಗೆ ಲಿಂಬೆರಸ ಹಾಕಿದರೂ ಅದರಿಂದ ತೂಕ ಇಳಿಕೆ ಮಾಡಬಹುದು. ಈ ಲೇಖನದಲ್ಲಿ ಲಿಂಬೆ ನೀರಿನಿಂದ ತೂಕ ಇಳಿಕೆ ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ತೂಕ ಕಳೆದುಕೊಳ್ಳಲು ಇದು ಸಹಕಾರಿಯಾಗುವುದರೊಂದಿಗೆ ಏಕಾಗ್ರತೆಗೆ ನೆರವಾಗುವುದು, ದೇಹಕ್ಕೆ ತೇವಾಂಶ ನೀಡುವುದು, ಹೊಟ್ಟೆ ತುಂಬಿದಂತೆ ಮಾಡುವುದು, ದೇಹದಲ್ಲಿ ಶಕ್ತಿ ಮಟ್ಟ ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಿಸುವುದು. ತಂಪಾದ ಲಿಂಬೆನೀರು ಕುಡಿದರೆ ಆಗ ತೂಕ ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಯುವ.

ಕ್ಯಾಲರಿ ಕಡಿಮೆ

ಕ್ಯಾಲರಿ ಕಡಿಮೆ

ಲಿಂಬೆರಸಕ್ಕೆ ತಂಪಾದ ನೀರು ಹಾಕಿದರೆ ಆಗ ಅದು ಕ್ಯಾಲರಿ ಮುಕ್ತವಾಗುವುದು. ಈ ನೀರಿನಲ್ಲಿ ಕ್ಯಾಲರಿ ಶೂನ್ಯವೆನ್ನುವುದರಲ್ಲಿ ಯಾವುದೇ ಸಂಶಯಬೇಡ. ಒಂದು ಲಿಂಬೆಯಲ್ಲಿ 17 ಕ್ಯಾಲರಿ ಮಾತ್ರ ಇರುವುದು. ಅರ್ಧ ಲೋಟ ನೀರಿಗೆ ಹಾಕಿದರೂ ಕ್ಯಾಲರಿ ಅಷ್ಟೇ ಇರುವುದು. ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ 39 ಕ್ಯಾಲರಿ ಇದೆ. ಕಿತ್ತಳೆ ಹಣ್ಣಿನ ಜ್ಯೂಸ್ ಬದಲು ಲಿಂಬೆನೀರು ನಿಮ್ಮ ಕ್ಯಾಲರಿ ಸೇವನೆ ಕಡಿಮೆ ಮಾಡುವುದು.

ತೂಕ ಇಳಿಸಿಕೊಳ್ಳಲು ಸರಳ ಟಿಪ್ಸ್-ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಚಯಾಪಚಯ ಹೆಚ್ಚಿಸುವುದು

ಚಯಾಪಚಯ ಹೆಚ್ಚಿಸುವುದು

ಲಿಂಬೆನೀರು ದೇಹದಲ್ಲಿ ಚಯಾಪಚಯ ವೃದ್ಧಿಸುವುದು ಮತ್ತು ಇದರಿಂದ ತೂಕ ಇಳಿಕೆಯಾಗುವುದು. ಸರಿಯಾದ ಮಟ್ಟದಲ್ಲಿ ದೇಹಕ್ಕೆ ತೇವಾಂಶ ನೀಡಿದರೆ ಆಗ ಮೈಟೋಕಾಂಡ್ರಿಯಾದ ಚಟುವಟಿಕೆಯು ಸುಧಾರಣೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಮೈಟೋಕಾಂಡ್ರಿಯಾವು ಕೋಶಗಳಿಂದ ಪೋಷಕಾಂಶ ಹೀರಿಕೊಂಡು, ಅದನ್ನು ವಿಘಟಿಸಿ, ಶಕ್ತಿಯಾಗಿ ಪರಿವರ್ತನೆ ಮಾಡುವುದು. ಇದರಿಂದ ಚಯಾಪಚಯ ಕ್ರಿಯೆ ನಿಯಂತ್ರಿಸಲ್ಪಡುವುದು.

ಹೊಟ್ಟೆ ತುಂಬಿದಂತೆ ಇಡುವುದು

ಹೊಟ್ಟೆ ತುಂಬಿದಂತೆ ಇಡುವುದು

ಲಿಂಬೆನೀರು ಹೊಟ್ಟೆ ತುಂಬಿದಂತೆ ಇಡುವುದರಿಂದ ಅನಗತ್ಯವಾಗಿ ಹಸಿವಿನ ಬಯಕೆಯಾಗಿ ತಿನ್ನುವುದು ತಪ್ಪುವುದು. 2008ರಲ್ಲಿ ಮಾಡಿರುವ ಅಧ್ಯಯನವೊಂದರ ವರದಿ ಪ್ರಕಾರ ಉಪಾಹಾರಕ್ಕೆ ಮೊದಲು ಅರ್ಧ ಲೀಟರ್ ನೀರು ಕುಡಿದರೆ ಆಗ ಕ್ಯಾಲರಿ ಸೇವನೆ ಪ್ರಮಾಣವನ್ನು ಶೇ.13ರಷ್ಟು ಕಡಿಮೆ ಮಾಡಬಹುದು. ಊಟ ಮಾಡುವಾಗ ಲಿಂಬೆನೀರು ಕುಡಿದರೆ ಆಗ ಹೊಟ್ಟೆಗೆ ತೃಪ್ತಿ ಸಿಗುವುದು ಮತ್ತು ಹಸಿವು ಕಡಿಮೆ ಮಾಡುವುದು. ಲಿಂಬೆಯಲ್ಲಿ ಕಡಿಮೆ ಕ್ಯಾಲರಿ ಮತ್ತು ಹೊಟ್ಟೆ ತುಂಬಿದಂತೆ ಮಾಡುವ ಗುಣವಿರುವುದೇ ಇದಕ್ಕೆ ಕಾರಣ. ಇದರಿಂದ ಊಟದ ವೇಳೆ ಅಧಿಕ ಕ್ಯಾಲರಿ ಸೇವನೆ ಕಡಿಮೆ ಮಾಡುವುದು.

ದೇಹವನ್ನು ನಿರ್ವಿಷಗೊಳಿಸುವುದು

ದೇಹವನ್ನು ನಿರ್ವಿಷಗೊಳಿಸುವುದು

ಬಿಸಿ ಲಿಂಬೆನೀರು ಕುಡಿದಷ್ಟೇ ಪರಿಣಾಮಕಾರಿಯಾಗಿ ತಂಪು ಲಿಂಬೆನೀರು ಕೂಡ ಕೆಲಸ ಮಾಡುವುದು. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದರಿಂದ ದೈಹಿಕ ಚಟುವಟಿಕೆಗಳು ಸುಧಾರಣೆಯಾಗುವುದು. ದೇಹವನ್ನು ಶುದ್ಧೀಕರಿಸಿ, ತೂಕ ಕಳೆದುಕೊಳ್ಳಲು ನೆರವಾಗುವುದು.

ಫ್ರಿ ರ್ಯಾಡಿಕಲ್ ವಿರುದ್ಧ ಹೋರಾಡುವುದು

ಫ್ರಿ ರ್ಯಾಡಿಕಲ್ ವಿರುದ್ಧ ಹೋರಾಡುವುದು

ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿಯು ದೇಹದಲ್ಲಿ ಆಕ್ಸಿಡೇಟಿವ್(ಉತ್ಕರ್ಷಣಶೀಲ) ಒತ್ತಡ ವಿರುದ್ಧ ಹೋರಾಡಲು ನೆರವಾಗುವುದು. ವಿಟಮಿನ್ ಸಿಯು ಕೋಶಗಳ ಒಳಗಿನ ಉತ್ಕರ್ಷಣ ತಪ್ಪಿಸಲು ನೆರವಾಗುವುದು. ಕೆಟ್ಟ ಕೊಲೆಸ್ಟ್ರಾಲ್ ಗೂ ಫ್ರೀ ರ್ಯಾಡಿಕಲ್ ಸಂಬಂಧವಿದೆ. ಪರಿಷ್ಕರಿಸಿದ ಕೊಬ್ಬು ಮತ್ತು ಸಕ್ಕರೆಯು ಆರ್ ಒಎಸ್ ಮುಕ್ತ ಫ್ರಿ ರ್ಯಾಡಿಕಲ್ ಮತ್ತು ಉತ್ಕರ್ಷಣೆಗೊಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿ ಕಾಠಿಣ್ಯದ ಪದರ ನಿರ್ಮಾಣ ಮಾಡುವುದು. ಇದು ಹೃದಯಾಘಾತಕ್ಕೆ ಕಾರಣವಾಗುವುದು. ಇದರಿಂದ ಲಿಂಬೆ ನೀರು ಕುಡಿದರೆ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಲಿಂಬೆ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಲಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ನಿಮ್ಮ ದೇಹವು ಆರೋಗ್ಯಕಾರಿ ಆಗಿರುವುದರ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವಾಗಿರುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಲಿಂಬೆ ವಿಟಮಿನ್ ಸಿ ಮತ್ತು ಪೊಟಾಶಿಯಂ ಸತ್ವಗಳಿಂದ ಕೂಡಿದ್ದು ಮೆದುಳು ಹಾಗೂ ನರ ರಚನೆಗಳನ್ನು ಸದೃಢಗೊಳಿಸುತ್ತದೆ. ವಿಟಮಿನ್ ಸಿ ಯನ್ನು ಅಸ್ತಮಾ ಮತ್ತು ಇತರ ಉಸಿರಾಟ ತೊಂದರೆಗಳ ನಿವಾರಣೆಗೆ ಔಷಧವಾಗಿದೆ. ಲಿಂಬೆ ನೀರನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿರುವ ಅಸಿಡಿಟಿ ದೂರಾಗುತ್ತದೆ.

ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ

ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ

ಕರುಳನ್ನು ಸ್ವಚ್ಛವಾಗಿಸುತ್ತದೆ ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

ತೂಕ ಇಳಿಸಲು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಲಿಂಬೆನೀರು ಕುಡಿಯಬೇಕು?

ತೂಕ ಇಳಿಸಲು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಲಿಂಬೆನೀರು ಕುಡಿಯಬೇಕು?

ತೂಕ ಇಳಿಸಿಕೊಳ್ಳಲು ಲಿಂಬೆ ನೀರು ಕುಡಿಯುವ ಮೊದಲು ಮೂರು ಅಂಶಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಪ್ರಮಾಣ, ಸಮಯ ಮತ್ತು ಉಷ್ಣತೆ. ಮಾನವ ದೇಹವು 375 ಮಿ.ಲೀ.ನಷ್ಟು ಮಾತ್ರ ಚಯಾಪಚಯಗೊಳಿಸಬಲ್ಲದು. 375 ಮಿ.ಲೀ.ಗಿಂತಲೂ ಹೆಚ್ಚಿಗೆ ನೀವು ಕುಡಿಯಲು ಬಯಸಿದರೆ ಒಂದು ಗಂಟೆ ಬಿಟ್ಟು ಕುಡಿಯಿರಿ. 68 ಕೆಜಿಗಿಂತ ಕಡಿಮೆ ಇರುವಂತಹ ವ್ಯಕ್ತಿಗಳು ಅರ್ಧ ಲಿಂಬೆರಸವನ್ನು 236-354 ಮಿ.ಲೀ ನೀರಿಗೆ ಹಾಕಿ ಕುಡಿಯಬೇಕು. ಇದಕ್ಕಿಂತ ಹೆಚ್ಚಿನ ತೂಕ ಹೊಂದಿರುವ ವ್ಯಕ್ತಿಗಳು ಇಷ್ಟೇ ಪ್ರಮಾಣದ ಲಿಂಬೆನೀರನ್ನು ದಿನಕ್ಕೆ ಎರಡು ಸಲ ಕುಡಿಯಬೇಕು. ಲಿಂಬೆನೀರನ್ನು ಬೆಳಗ್ಗೆ ಕುಡಿಯಿರಿ.

ತೂಕ ಇಳಿಸಲು ಲಿಂಬೆನೀರು ಮಾಡಿಕೊಳ್ಳುವುದು ಹೇಗೆ?

ತೂಕ ಇಳಿಸಲು ಲಿಂಬೆನೀರು ಮಾಡಿಕೊಳ್ಳುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

  • 1 ಲಿಂಬೆ
  • 1 ಲೋಟ ನೀರು
  • ವಿಧಾನ

    ಲಿಂಬೆ ಕತ್ತರಿಸಿಕೊಂಡು ಅದರ ರಸವನ್ನು ಒಂದು ಲೋಟಕ್ಕೆ ಹಾಕಿ. ಇದಕ್ಕೆ ನೀರನ್ನು ಹಾಕಿ. ನೀವು ಇದಕ್ಕೆ ತಾಜಾ ಗಿಡಮೂಲಿಕೆಗಳಾಗಿರುವ ಪುದೀನಾ, ತುಳಿಸ ಅಥವಾ ಲ್ಯಾವೆಂಡರ್ ಎಲೆಗಳನ್ನು ಹಾಕಿ. ಕೆಲವು ಗಂಟೆಗಳ ಕಾಲ ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾಗಲು ಬಿಡಿ. ಈ ಲೇಖನ ಶೇರ್ ಮಾಡಿಕೊಂಡು ನಿಮ್ಮ ಆಪ್ತರಿಗೆ ತೂಕ ಕಳೆದುಕೊಂಡು ಆರೋಗ್ಯವಾಗಿರಲು ನೆರವಾಗಿ.

English summary

How Can Drinking Cold Lemon Water Help In Weight Loss?

Lemon is a citrus fruit which is mostly consumed by infusing it in the water be it hot or cold. Most people who are looking to lose weight swear by the lemon water and they drink it warm because it is believed to help in weight loss. What many do not know is, even cold lemon water can lead to weight loss. This article will discuss how drinking cold lemon water can help in weight loss. Apart from losing weight, lemon water can be consumed to improve concentration, hydrate your body, keep your tummy satiated, boost energy levels in the body and for better digestion.
X
Desktop Bottom Promotion