For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ತಯಾರಿಸಿ ಶಕ್ತಿವರ್ಧಕ ಎಲೆಕ್ಟ್ರೋಲೈಟ್ ಜ್ಯೂಸ್!

|

ವಿದ್ಯುದ್ವಿಚ್ಛೇದ್ಯಗಳು ಅಥವಾ ಎಲೆಕ್ಟ್ರೋಲೈಟ್ ಗಳು ನಮ್ಮ ದೇಹದ ಕಾರ್ಯನಿರ್ವಹಣೆಗೆ ಅತ್ಯಂತ ಅಗತ್ಯವಾದ ಕಣಗಳಾಗಿವೆ. ಇವು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ, ಸೋಡಿಯಂ ಹಾಗೂ ಪೊಟ್ಯಾಶಿಯಂ ರೂಪಗಳಲ್ಲಿರುತ್ತವೆ. ಆದರೆ ಹೆಚ್ಚಿನ ಬೆವರುವಿಕೆ, ಕಠಿಣ ಪರಿಶ್ರಮದ ಕೆಲಸಗಳು ಹಾಗೂ ಕೆಲವು ಚಟುವಟಿಕೆಗಳನ್ನು ಸತತವಾಗಿ ಹೆಚ್ಚು ಸಮಯದವರೆಗೆ ಮುಂದುವರೆಸುವ ಮೂಲಕ ಎಲೆಕ್ಟ್ರೋಲೈಟ್ ಗಳು ಖಾಲಿಯಾಗುತ್ತವೆ ಹಾಗೂ ದೇಹಕ್ಕೆ ದಣಿವು ಎದುರಾಗುತ್ತದೆ. ಉದಾಹರಣೆಗೆ ಸತತವಾಗಿ ನಡೆಯುವುದು, ಓಡುವುದು ಇತ್ಯಾದಿಗಳನ್ನು ಕೊಂಚ ಹೊತ್ತು ನಡೆಸಿದ ಬಳಿಕ ದಣಿವು ಎದುರಾಗುತ್ತದೆ.

ಗರ್ಭವತಿಯರಲ್ಲಿ ಈ ಎಲೆಕ್ಟ್ರೋಲೈಟ್ ಗಳು ಬೆಳೆಯುತ್ತಿರುವ ಮಗುವಿನ ಪೋಷಣೆಗೇ ಹೆಚ್ಚು ಬಳಸಲ್ಪಡುವ ಕಾರಣ ಅವರು ಏನು ಕೆಲಸ ಮಾಡದೇ ಇದ್ದರೂ ಸುಸ್ತಾಗಿರುತ್ತಾರೆ. ಎಲೆಕ್ಟ್ರೋಲೈಟ್ ಗಳು ಇಲ್ಲದೇ ಇದ್ದರೆ ದೇಹ ಅನಿವಾರ್ಯವಾಗಿ ಇವುಗಳಿಲ್ಲದೇ ಕಾರ್ಯವನ್ನು ನಿರ್ವಹಿಸಲು ಹೃದಯದ ಬಡಿತ ಹೆಚ್ಚಿಸಬೇಕಾಗುತ್ತದೆ ಹಾಗೂ ದೇಹದ ತುದಿಭಾಗಗಳಾದ ಬೆರಳುತುದಿ ಹಾಗೂ ತ್ವಚೆಗಳಿಗೆ ರಕ್ತದ ಪೂರೈಕೆ ಕಡಿಮೆಯಾಗಿ ಬಿಳಿಚಿಕೊಳ್ಳುತ್ತವೆ.

ಎಲೆಕ್ಟ್ರೋಲೈಟ್ ಗಳು ಸ್ನಾಯುಗಳನ್ನು ನಿಯಂತ್ರಿಸುತ್ತವೆ, ನರಗಳ ಕಾರ್ಯವನ್ನು ಸುಲಲಿತವಾಗಿ ನಡೆಯಲು ನೆರವಾಗುತ್ತವೆ ಹಾಗೂ ರಕ್ತದ ಕ್ಷಾರೀಯ-ಆಮ್ಲೀಯ ಸಂತುಲತೆಯನ್ನು ಕಾಪಾಡುತ್ತವೆ ಹಾಗೂ ರಕ್ತದ ಒತ್ತಡ ಆರೋಗ್ಯಕರ ಮಿತಿಯಲ್ಲಿರಲು ನೆರವಾಗುತ್ತವೆ. ದೇಹದಲ್ಲಿ ಆರೋಗ್ಯಕರ ಪ್ರಮಾಣದ ಎಲೆಕ್ಟ್ರೋಲೈಟ್ ಗಳು ಇರಬೇಕಾದರೆ ಸಾಕಷ್ಟು ಪೌಷ್ಟಿಕ ಆಹಾರದ ಸೇವನೆ ಅಗತ್ಯ. ಆದರೆ, ಎಲೆಕ್ಟ್ರೋಲೈಟ್ ಗಳು ಹೆಚ್ಚಾಗಿರುವ ಉತ್ತಮ ಪೇಯಗಳನ್ನು ನೀವೇ ಮನೆಯಲ್ಲಿ ತಯಾರಿಸಿಕೊಂಡು ಸೇವಿಸಬಹುದು.

ಲಿಂಬೆಜಾತಿಯ ಹಣ್ಣುಗಳು

ಲಿಂಬೆಜಾತಿಯ ಹಣ್ಣುಗಳು

ಲಿಂಬೆಜಾತಿಯ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿವೆ. ಲಿಂಬೆರಸ ಎಲೆಕ್ಟ್ರೋಲೈಟ್ ಗಳ ಅತ್ಯುತ್ತಮ ಭಂಡಾರವಾಗಿದೆ. ಇತರ ಹಣ್ಣುಗಳಾದ ಕಿತ್ತಳೆ, ಸಿಹಿಲಿಂಬೆ ಹಾಗೂ ಚಕ್ಕೋತಗಳೂ ಅಧ್ಬುತ ಹಣ್ಣುಗಳಾಗಿವೆ. ಇವುಗಳಲ್ಲಿ ಅವಶ್ಯಕ ಖನಿಜಗಳಾದ ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂಗಳಿವೆ ಹಾಗೂ ಇವುಗಳನ್ನು ಪಡೆಯಲು ಈ ಹಣ್ಣುಗಳ ತಿರುಗಳನ್ನು ಸೇವಿಸಬಹುದು ಅಥವಾ ಹಿಂಡಿ ತೆಗೆದ ರಸವನ್ನೂ ಸೇವಿಸಬಹುದು.

ಉಪ್ಪುನೀರು

ಉಪ್ಪುನೀರು

ನಮ್ಮ ದೇಹದಲ್ಲಿರುವ ಲವಣಗಳಾದ ಸೋಡಿಯಂ, ಪೊಟ್ಯಾಶಿಯಂ, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂಗಳನ್ನು ವಿದ್ಯುತ್ ಪೂರಣಗೊಳಿಸಲು ಉಪ್ಪು ಅಗತ್ಯವಾಗಿದೆ. ಅಲ್ಲದೇ ದೇಹದಿಂದ ಕಳೆದುಹೋದ ಎಲೆಕ್ಟ್ರೋಲೈಟ್ ಗಳ ಮರುಪೂರೈಕೆಗೆ ಉಪ್ಪು ಒಂದು ಕ್ರಿಯಾತ್ಮಕ ಸಾಮಾಗ್ರಿಯಾಗಿ ಅವಶ್ಯಕವಾಗಿದೆ. ಸಾಮಾನ್ಯವಾಗಿ ಸೋಡಿಯಂ ಲವಣ ಬೆವರುವಿಕೆಯಿಂದ ನಷ್ಟವಾಗುವ ಎಲೆಕ್ಟ್ರೋಲೈಟ್ ಆಗಿದೆ.

ಎಳನೀರು

ಎಳನೀರು

ಎಲೆಕ್ಟ್ರೋಲೈಟ್ ಗಳನ್ನು ಮರುಪೂರೈಸಲು ಎಳನೀರು ಸಹಾ ಅತ್ಯುತ್ತಮವಾದ ಪೇಯವಾಗಿದೆ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುತ್ತವೆ ಹಾಗೂ ಇವು ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟ್ ಗಳ ಜೊತೆಗೇ ಇತರ ಎಲೆಕ್ಟ್ರೋಲೈಟ್ ಗಳನ್ನೂ ಒದಗಿಸುವ ಮೂಲಕ ದಣಿದ ದೇಹಕ್ಕೆ ಮರುಚೈತನ್ಯ ನೀಡುತ್ತದೆ.

ಕ್ರ್ಯಾನ್ಬೆರಿ ಹಣ್ಣಿನ ರಸ

ಕ್ರ್ಯಾನ್ಬೆರಿ ಹಣ್ಣಿನ ರಸ

ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟ್ ಗಳನ್ನು ಮರುತುಂಬಿಸಲು ಕ್ರ್ಯಾನ್ಬೆರಿ ಹಣ್ಣುಗಳ ರಸವೂ ಉತ್ತಮವಾಗಿದೆ. ಇದರ ಹುಳಿಮಿಶ್ರಿತ ಸಿಹಿಯಾದ ರುಚಿ ಈ ಪೇಯವನ್ನು ಕುಡಿಯಲು ಇಷ್ಟವಾಗಿಸುತ್ತದೆ. ಅಲ್ಲದೇ ಈ ಹಣ್ಣಿನ ರಸದ ಸೇವನೆಯಿಂದ ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಹಾಗೂ ಮೂತ್ರಕೋಶದ ಸೋಂಕು ನಿವಾರಣೆಯೂ ಸಾಧ್ಯವಾಗುತ್ತದೆ. ಅಲ್ಲದೇ ದೇಹದ ದುಗ್ಧಗ್ರಂಥಿಗಳ ವ್ಯವಸ್ಥೆಯಿಂದ ಕಲ್ಮಶಗಳು ಹೊರಹೋಗಲೂ ನೆರವಾಗುತ್ತದೆ.

ಶುಂಠಿಯ ರಸ

ಶುಂಠಿಯ ರಸ

ಹೆಚ್ಚಿನ ಶ್ರಮದಾಯಕ ಕೆಲಸದ ಬಳಿಕ ಎದುರಾಗುವ ದಣಿವನ್ನು ಆರಿಸಲು ಮತ್ತು ಶಕ್ತಿಯನ್ನು ಮರುಪಡೆಯಲು ಶುಂಠಿಯ ರಸ ಉತ್ತಮವಾದ ಪೇಯವಾಗಿದೆ. ಈ ರಸದ ಸೇವನೆಯಿಂದ ದೇಹದಲ್ಲಿ ಕಡಿಮೆಯಾಗಿದ್ದ ಎಲೆಕ್ಟ್ರೋಲೈಟ್ ಗಳು ಮರುಪೂರೈಕೆಗೊಳ್ಳುತ್ತವೆ. ಶ್ರಮದಿಂದಾಗಿ ಸ್ನಾಯುಗಳು ಬಳಲಿ ನೋವು ಎದುರಾಗಿದ್ದರೆ ಈ ಪೇಯದಲ್ಲಿರುವ ಉರಿಯುತ ನಿವಾರಕ ಗುಣ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಈ ಬಳಲಿಕೆಯನ್ನು ಇಲ್ಲವಾಗಿಸಲು ನೆರವಾಗುತ್ತವೆ.

ಕಲ್ಲಂಗಡಿ ಹಣ್ಣಿನ ರಸ

ಕಲ್ಲಂಗಡಿ ಹಣ್ಣಿನ ರಸ

ಕಲ್ಲಂಗಡಿ ಹಣ್ಣಿನಲ್ಲಿ ನರಗಳ ಕಾರ್ಯಕ್ಷಮತೆಯನ್ನು ಸಮರ್ಪಕವಾಗಿಸುವ ಹಾಗೂ ಹೃದಯದ ಆರೋಗ್ಯವನ್ನು ವೃದ್ಧಿಸುವ ಎಲೆಕ್ಟ್ರೋಲೈಟ್ ಗಳಿವೆ. ಸಾಮಾನ್ಯವಾಗಿ ಈ ಎಲೆಕ್ಟ್ರೋಲೈಟ್ ಗಳು ಶ್ರಮದಾಯಕ ಕೆಲಸದಲ್ಲಿ ಖಾಲಿಯಾಗಿರುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ ಈ ಎಲೆಕ್ಟ್ರೋಲೈಟ್ ಗಳು ಹೆಚ್ಚೇ ಖರ್ಚಾಗುವ ಕಾರಣ ದಣಿವೂ ಹೆಚ್ಚೇ ಆಗಿರುತ್ತದೆ. ಈ ಸಮಯದಲ್ಲಿ ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸುವ ಮೂಲಕ ದೇಹದಲ್ಲಿ ಎಲೆಕ್ಟ್ರೋಲೈಟ್ ಮತ್ತು ವಿಟಮಿನ್ನುಗಳ ಕೊರತೆಯುಂಟಾಗುವುದಿಲ್ಲ.

ಉಪ್ಪು-ಸಕ್ಕರೆಯ ಪಾನೀಯ

ಉಪ್ಪು-ಸಕ್ಕರೆಯ ಪಾನೀಯ

ನೀರಿನಲ್ಲಿ ಕೊಂಚ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಕುಡಿಯುವ ಮೂಲಕ ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟ್ ಗಳನ್ನು ಒದಗಿಸಬಹುದು. ವಿಶೇಷವಾಗಿ ಅತಿಸಾರ ಅಥವಾ ಅತಿಯಾದ ಬೆವರುವಿಕೆಯಿಂದ ಎದುರಾಗಿದ್ದ ದಣಿವಿನ ಸಮಯದಲ್ಲಿ ಸೇವಿಸಲು ಈ ಪೇಯ ಅತ್ಯುತ್ತಮವಾಗಿದೆ. ಅಲ್ಲದೇ ಇತರ ಸಮಯದಲ್ಲಿ ದಣಿವಾದಾಗಲೂ ಈ ಪಾನೀಯವನ್ನು ಸೇವಿಸಬಹುದು.

ಸ್ಟ್ರಾಬೆರಿ ಸ್ಮೂಥಿ

ಸ್ಟ್ರಾಬೆರಿ ಸ್ಮೂಥಿ

ಸ್ಟ್ರಾಬೆರಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ವಿಟಮಿನ್ ಎ ಹಾಗೂ ಫೋಲೇಟ್ ಗಳಿವೆ. ಈ ರಸದ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ, ಹೃದಯ ಸ್ತಂಭನದ ವಿರುದ್ದ ರಕ್ಷಣೆ ದೊರಕುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲೂ ಸಾಧ್ಯವಾಗುತ್ತದೆ. ಸ್ಟ್ರಾಬೆರಿ ಹಣ್ಣುಗಳಿಂದ ತಯಾರಿಸಿದ ಸ್ಮೂಥಿ ದಣಿವಾದಾದ ಕುಡಿಯಲು ಅತ್ಯುತ್ತಮ ಎಲೆಕ್ಟ್ರೋಲೈಟ್ ಪಾನೀಯವಾಗಿದೆ.

ಚಿಯಾ ಬೀಜಗಳ ಪಾನೀಯ

ಚಿಯಾ ಬೀಜಗಳ ಪಾನೀಯ

ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಗಂಧಕ ಹಾಗೂ ಪೊಟ್ಯಾಶಿಯಂ ಇವೆ. ಈ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳೂ ಇವೆ. ಹಾಗೂ ಕರಗದ ನಾರು ಸಹಾ ಸಮೃದ್ದವಾಗಿದೆ. ಇದರಲ್ಲಿರುವ ನೀರಿನ ಅಂಶ ದೇಹ ದಣಿವಿನ ಸಮಯದಲ್ಲಿ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟ್ ಗಳನ್ನು ಮರುತುಂಬಿಸಲು ನೆರವಾಗುವ ಜೊತೆಗೇ ಅಕಾಲಿಕ ಕೂದಲು ನೆರೆಯುವುದನ್ನೂ ತಡೆಯುತ್ತದೆ.

ಸೌತೆಕಾಯಿಯ ಪಾನೀಯ

ಸೌತೆಕಾಯಿಯ ಪಾನೀಯ

ಸೌತೆಕಾಯಿಯಲ್ಲಿ ಪೊಟ್ಯಾಶಿಯಂ, ಮ್ಯಾಂಗನೀಸ್ ಹಾಗೂ ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿವೆ. ಸ್ಮರಣಶಕ್ತಿ ಹೆಚ್ಚಿವ ಹಾಗೂ ನರದ ಜೀವಕೋಶಗಳನ್ನು ರಕ್ಷಿಸಲು ಸೌತೆಯಲ್ಲಿರುವ ಎಲೆಕ್ಟ್ರೋಲೈಟ್ ಗಳು ಅತ್ಯುತ್ತಮವಾಗಿವೆ. ಅಲ್ಲದೇ ಉರಿಯೂತದ ವಿರುದ್ದ ರಕ್ಷಣೆ ನೀಡುತ್ತದೆ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಜೊತೆಗೇ ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Homemade Electrolyte Drinks You Should Try Right Now

Electrolytes play a vital role in the proper health functioning. It is naturally present in the body in the form of calcium, sodium and potassium. But, sometimes due to sweating, because of vigorous workouts and too much of activities, electrolytes get lost. Electrolytes are lost while you do physical activities. The body faces a shortage of electrolytes during pregnancy too.
X
Desktop Bottom Promotion