ಸ್ನಾಯು ದೌರ್ಬಲ್ಯದ ನಿವಾರಣೆಗೆ ಮನೆ ಔಷಧಿಗಳು

Posted By: Divya pandit Pandit
Subscribe to Boldsky

ಉತ್ತಮ ಕೆಲಸ ನಿರ್ವಹಣೆಯ ಹಿಂದೆ ಆರೋಗ್ಯಕರವಾದ ಆರೋಗ್ಯ ನಮ್ಮದಾಗಿರಬೇಕು. ಹಾಗೊಮ್ಮೆ ಅಸ್ವಸ್ಥತೆ ಎನ್ನುವುದನ್ನು ನಾವು ಹೊಂದಿದ್ದರೆ ನಮ್ಮ ಶಕ್ತಿಯು ಕುಂದುತ್ತಾ ಸಾಗುತ್ತದೆ. ಜೊತೆಗೆ ಕೆಲಸವನ್ನು ಏಕಾಗ್ರತೆಯಿಂದ ಮಾಡಿ ಮುಗಿಸಲು ಸಾಧ್ಯವಾಗದು. ಅದರಲ್ಲೂ ಸ್ನಾಯುಗಳ ಸಮಸ್ಯೆ ಉಂಟಾದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು. ಇದು ದೈಹಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಸಹ ಹಾಳುಮಾಡುತ್ತದೆ. ಒಮ್ಮೆ ದೇಹದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಯಿತು ಎಂದಾದರೆ ಪದೇ ಪದೇ ಸ್ನಾಯು ಸಮಸ್ಯೆ ಉಲ್ಭಣಗೊಳ್ಳುತ್ತದೆ.

ಸ್ನಾಯು ಸಮಸ್ಯೆ ಕಾಣಿಸಿಕೊಳ್ಳಲು ಅಥವಾ ಸ್ನಾಯುವಿನ ಆರೋಗ್ಯ ಹದಗೆಡಲು ಅನೇಕ ಕಾರಣಗಳಿವೆ. ಸರಿಯಾದ ಸಮಯಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡದಿದ್ದರೆ ಸ್ನಾಯುವಿನ ವಿರೂಪತೆಯನ್ನು ಉಂಟುಮಾಡಬಹುದು. ಸ್ನಾಯುಗಳ ಸಮಸ್ಯೆಗಳಿಗೆ ಅನೇಕ ಔಷಧಗಳಿವೆ. ಈ ಒಂದು ಸಮಸ್ಯೆಗೆ ಕೆಲವು ಸರಳವಾದ ಮನೆ ಔಷಧ ಮಾಡುವುದರ ಮೂಲಕ ಬಹುಬೇಗ ಚೇತರಿಕೆ ಕಾಣಬಹುದು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವುದರ ಕುರಿತು ಸೂಕ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗಾಗಿ ಈ ಮುಂದೆ ವಿವರಿಸಿದೆ.

1.ಹಾಲು, ಜೇನುತುಪ್ಪ ಮತ್ತು ಲಿಕ್ವರೈಸ್

1.ಹಾಲು, ಜೇನುತುಪ್ಪ ಮತ್ತು ಲಿಕ್ವರೈಸ್

ಹಾಲು, ಜೇನುತುಪ್ಪ ಮತ್ತು ಲಿಕ್ವರೈಸ್ ಸ್ನಾಯು ದೌರ್ಬಲ್ಯವನ್ನು ಗುಣಪಡಿಸುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತದೆ. ಇದರಿಂದ ದೇಹದಲ್ಲಿ ಹೆಚ್ಚು ಶಕ್ತಿಯನ್ನು ಉದ್ಪಾದನೆ ಮಾಡುತ್ತದೆ.

- ಒಂದು ಗ್ಲಾಸ್ ಹಾಲಿಗೆ 2 ಟೇಬಲ್ ಚಮಚ ಜೇನುತುಪ್ಪ ಮತ್ತು 1 ಟೇಬಲ್ ಚಮಚ ಲಿಕ್ವರೈಸ್ ಸೇರಿಸಿ, ಮಿಶ್ರಗೊಳಿಸಿ.

- ಹೀಗೆ ದಿನದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಿ.

2. ಎಣ್ಣೆಯ ಮಸಾಜ್

2. ಎಣ್ಣೆಯ ಮಸಾಜ್

ಸಾಮಾನ್ಯವಾಗಿ ಎಣ್ಣೆಯಿಂದ ಸ್ನಾಯುಗಳನ್ನು ಮಸಾಜ್ ಮಾಡುವುದು ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದೆ. ಇದು ಸ್ನಾಯುವಿನ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

- ಬೆಚ್ಚಗಿನ ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಗೊಳಿಸಿ.

- ಪೀಡಿತ ಪ್ರದೇಶಕ್ಕೆ ಮಿಶ್ರಣದ ಎಣ್ಣೆಯನ್ನು ಅನ್ವಯಿಸಿ, 15 ನಿಮಿಷಗಳ ಕಾಲ ಮಸಾಜ್ ಮಾಡಿ.

- ದಿನದಲ್ಲಿ ಹಲವು ಬಾರಿ ಈ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯು ಗುಣಮುಖವಾಗುವುದು.

3. ಎಪ್ಸಮ್ ಉಪ್ಪು

3. ಎಪ್ಸಮ್ ಉಪ್ಪು

ಎಪ್ಸಮ್ ಉಪ್ಪು ಮೆಗ್ನಿಸಿಯಮ್ ಗುಣವನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ದೇಹದಲ್ಲಿ ಮೆಗ್ನಿಸಿಯಮ್ ಮಟ್ಟವನ್ನು ಹೆಚ್ಚಿಸಿ ಸ್ನಾಯು ಸಮಸ್ಯೆಯನ್ನು ನಿವಾರಿಸುತ್ತದೆ.

- ಸ್ನಾನದ ನೀರಿಗೆ ಎರಡು ಕಪ್ ಎಪ್ಸಮ್ ಉಪ್ಪನ್ನು ಬೆರೆಸಿ.

- ಬಳಿಕ 20 ಮಿನಿಷಗಳ ಕಾಲ ಸ್ನಾನವನ್ನು ಮುಂದುವರಿಸಿ.

- ವಾರದಲ್ಲಿ ಒಮ್ಮೆ ಈ ವಿಧಾನವನ್ನು ಅನುಸರಿಸುವುದರಿಂದ ಅತ್ಯುತ್ತಮ ಪರಿಹಾರ ಕಂಡುಕೊಳ್ಳಬಹುದು.

4. ವಿಟಮಿನ್ ಡಿ

4. ವಿಟಮಿನ್ ಡಿ

ಉತ್ತಮವಾದ ಎಲುಬನ್ನು ಪಡೆದುಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ಬಲವಾದ ಎಲುಬನ್ನು ಹೊಂದುವುದರ ಮೂಲಕ ಸ್ನಾಯು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

- 15 ನಿಮಿಷಗಳ ಕಾಲ ಸೂರ್ಯನ ಕಿರಣಕ್ಕೆ ನಿಮ್ಮ ದೇಹವನ್ನು ಒಡ್ಡಿ.

- ಅಲ್ಲದೆ ಡಿ ವಿಟಮಿನ್‍ಗಳಿಂದ ಕೂಡಿರುವ ಆಹಾರಪದಾರ್ಥಗಳು, ಕಿತ್ತಳೆ ಹಣ್ಣು, ಮೀನು ಸೇರಿದಂತೆ ಇನ್ನಿತರ ಹಣ್ಣು ತರಕಾರಿಗಳನ್ನು ಸೇವಿಸಿ.

5. ನೆಲ್ಲಿಕಾಯಿ

5. ನೆಲ್ಲಿಕಾಯಿ

ನೆಲ್ಲಿಕಾಯಿ ಸ್ನಾಯುಗಳ ಶಕ್ತಿ ಹೆಚ್ಚಿಸಲು ಉತ್ತಮವಾದ ಸಹಕಾರ ನೀಡುತ್ತದೆ.

-ನೆಲ್ಲಿಕಾಯನ್ನು ಹಾಗೆಯೇ ಸೇವಿಸಬಹುದು. ರುಚಿಯ ಬದಲಾವಣೆ ಬೇಕೆಂದರೆ ನೆಲ್ಲಿಕಾಯಿ ಚೂರಿನ ಜೊತೆಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು.

6. ಬಾಳೆಹಣ್ಣು

6. ಬಾಳೆಹಣ್ಣು

ಬಾಳೆಹಣ್ಣು ಪೊಟ್ಯಾಸಿಯಮ್ ಮತ್ತು ಉತ್ತಮ ಖನಿಜಗಳನ್ನು ಒಳಗೊಂಡಿದೆ. ಇದರ ಸೇವನೆಯಿಂದ ಸ್ನಾಯು ಸಮಸ್ಯೆಯನ್ನು ನಿವಾರಿಸಬಹುದು.

- ನಿತ್ಯವೂ ಜೇನುತುಪ್ಪದೊಂದಿಗೆ ಬಾಳೆಹಣ್ಣನ್ನು ಸೇವಿಸಿ.

- ಬಾಳೆ ಹಣ್ಣಿನ ಮಿಲ್ಕ್ ಶೇಕ್ ಸೇವಿಸಿ.

7. ವ್ಯಾಯಾಮ

7. ವ್ಯಾಯಾಮ

ಸ್ನಾಯು ಸಮಸ್ಯೆ ನಿವಾರಿಸುವಲ್ಲಿ ವ್ಯಾಯಾಮವೂ ಸಹ ಒಂದು ಅತ್ಯುತ್ತಮ ವಿಧಾನವಾಗಿದೆ.

- ಉತ್ತಮ ನಡಿಗೆ, ಓಟ, ಲಘುವಾದ ವಾಯಾಮಗಳನ್ನು ನಿತ್ಯವೂ 30 ನಿಮಿಷಗಳ ಕಾಲ ಮಾಡಿ. ಸ್ನಾಯುಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ.

8. ಮೊಟ್ಟೆಗಳು

8. ಮೊಟ್ಟೆಗಳು

ಮೊಟ್ಟೆಯು ಸ್ನಾಯು ದೌರ್ಬಲ್ಯ ಮತ್ತು ದಣಿವುಗಳ ವಿರುದ್ಧ ಹೋರಾಡಬಹುದು. ಇವು ಉತ್ತಮ ಸ್ನಾಯುಗಳ ನಿರ್ಮಾಣಕ್ಕೆ ಉತ್ತಮ ಪ್ರೋಟಿನ್‍ಅನ್ನು ಒದಗಿಸುತ್ತದೆ.

ನಿತ್ಯವು ಉಪಹಾರದ ರೂಪದಲ್ಲಿ 2 ಮೊಟ್ಟೆಯನ್ನು ಸವಿಯಿರಿ.

9. ಹಾಲು

9. ಹಾಲು

ಸ್ನಾಯು ದೌರ್ಬಲ್ಯದ ಚಿಕಿತ್ಸೆಗೆ ಇನ್ನೊಂದು ಸುಲಭ ಉಪಾಯ ಅಥವಾ ಪರಿಹಾರ ಎಂದರೆ ಹಾಲು.

ಅತ್ಯುತ್ತಮ ಕ್ಯಾಲ್ಸಿಯಂ ಒಳಗೊಂಡಿರುವ ಹಾಲನ್ನು ನಿತ್ಯ 1-2 ಗ್ಲಾಸ್ ಕುಡಿಯಿರಿ.

10. ಆಲೂಗಡ್ಡೆ

10. ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಸಮೃದ್ಧವಾದ ಪೊಟ್ಯಾಸಿಯಮ್ ಇರುವುದರಿಂದ ಇದೊಂದು ಅತ್ಯುತ್ತಮ ಸ್ನಾಯು ಚಿಕಿತ್ಸಾಪರಿಹಾರ ಎನ್ನಬಹುದು.

- ಒಂದು ಪಾತ್ರೆಯಲ್ಲಿ ಸಿಪ್ಪೆತೆಗೆದ ಆಲೂಗಡ್ಡೆಯನ್ನು ಒಂದು ರಾತ್ರಿ ನೆನೆಯಿಡಿ.

- ಮುಂಜಾನೆ ಅದನ್ನು ರುಬ್ಬಿ ಸೇವಿಸಿ.

11. ನೀರನ್ನು ಕುಡಿಯಿರಿ

11. ನೀರನ್ನು ಕುಡಿಯಿರಿ

ಸ್ನಾಯು ದೌರ್ಬಲ್ಯದ ಮುಖ್ಯ ಕಾರಣ ನಿರ್ಜಲೀಕರಣ. ಸೂಕ್ತ ರೀತಿಯಲ್ಲಿ ನೀರನ್ನು ಸೇವಿಸುವುದರಿಂದ ಸ್ನಾಯು ದೌರ್ಬಲ್ಯವನ್ನು ಗುಣಪಡಿಸಬಹುದು.

ನಿತ್ಯವೂ 10 ಗ್ಲಾಸ್ ನೀರನ್ನು ಸೇವಿಸಿ.

ಕಲ್ಲಂಗಡಿ, ಸೌತೆಕಾಯಿ ಸೇರಿದಂತೆ ಇನ್ನಿತರ ನೀರನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಯನ್ನು ಸೇವಿಸಿ.

12. ಬ್ಲ್ಯಾಕ್ ಸ್ಟ್ರಾಪ್ ಮೊಲಾಸೆಸ್

12. ಬ್ಲ್ಯಾಕ್ ಸ್ಟ್ರಾಪ್ ಮೊಲಾಸೆಸ್

ಸ್ನಾಯು ದೌರ್ಬಲ್ಯವನ್ನು ಗುಣಪಡಿಸಲು ಬ್ಲ್ಯಾಕ್ ಸ್ಟ್ರಾಪ್ ಮೊಲಾಸೆಸ್ ಅತ್ಯುತ್ತಮ ಮನೆ ಪರಿಹಾರವಾಗಿದೆ. ಇದರಲ್ಲಿ ಅತ್ಯುತ್ತಮ ರೀತಿಯಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸ್ನಾಯುಗಳಿಗೆ ಉತ್ತಮ ಚೇತರಿಕೆ ನೀಡುವುದು.

ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.

English summary

Home Remedies To Cure Muscle Weakness Naturally

Muscle weakness is a common muscle disorder that mostly occurs after an intense workout or when your body doesn't have enough strength to perform tasks. Muscle weakness or reduced muscle strength happens when your body isn't able to produce muscle movement or contraction. You will know that you are having weakness in your muscles when you have symptoms like loss of coordination among the muscles, muscle spasms, muscle pain, frequent falls, prickling sensations and twitching to name a few.
Story first published: Friday, February 16, 2018, 23:30 [IST]