Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಒಂದು ವೇಳೆ ಜೇಡ ಕಚ್ಚಿದರೆ, ತಕ್ಷಣ ಈ ಮನೆಮದ್ದುಗಳನ್ನು ಅನುಸರಿಸಿ

ಭಾರತದಲ್ಲಿ ಕಂಡುಬರುವ ಯಾವುದೇ ಪ್ರಕಾರದ ಜೇಡ ವಿಷಕಾರಿಯಾಗಿದ್ದು ಇವು ಕಚ್ಚಿದರೆ ಮನುಷ್ಯರಿಗೂ ಮಾರಕವಾಗಬಲ್ಲುದು. ಜೇಡ ತನ್ನ ಬಲೆಯಲ್ಲಿ ಬಿದ್ದ ಕೀಟದ ದೇಹದಲ್ಲಿ ತನ್ನ ವಿಷವನ್ನು ತೂರಿಸುತ್ತದೆ. ಕೆಲವೇ ದಿನಗಳಲ್ಲಿ ಒಳಗಿನ ಭಾಗವೆಲ್ಲಾ ಕರಗಿ ನೀರಾಗುತ್ತದೆ. ಬಳಿಕ ಜೇಡ ಎಳನೀರಿನಿಂದ ನೀರನ್ನು ಹೀರುವಂತೆ ಈ ದ್ರವವನ್ನು ಹೀರಿ ಕೀಟದ ಕೇವಲ ಟೊಳ್ಳಾದ ಹೊರಕವಚವನ್ನು ಬಲೆಯಿಂದ ನಿವಾರಿಸಿ ತ್ಯಜಿಸುತ್ತದೆ. ಅಮೇರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಜೇಡಗಳು ಚಿಕ್ಕವಾಗಿದ್ದು ಮನುಷ್ಯರಿಗೆ ಕಚ್ಚುವ ಸಾಧ್ಯತೆ ಕಡಿಮೆ. ಆದರೆ ಬೆಚ್ಚಗಿನ ವಾತಾವರಣದಲ್ಲಿ ಬೆಳೆಯುವ ಕೊಂಚ ದೊಡ್ಡ ಜೇಡಗಳು ಮಾತ್ರ ಅಪಾಯಕಾರಿಯಾಗಿವೆ. ಅದರಲ್ಲೂ ಬ್ಲಾಕ್ ವಿಡೋ (ಅಥವಾ ಕಪ್ಪು ವಿಧವೆ) ಎಂಬ ಪ್ರಜಾತಿಯ ಜೇಡ ಅತ್ಯಂತ ವಿಷಕಾರಿಯಾಗಿದೆ.
ವಿಶೇಷವಾಗಿ ಕೆಂಪು-ಕಪ್ಪು ಪಟ್ಟೆಯಿಂದ ಭಯಾನಕವಾಗಿ ಕಾಣುವ ಜೇಡದ ಕಡಿತ ತಕ್ಷಣ ಉರಿಯನ್ನುಂಟುಮಾಡುತ್ತದೆ. ಬಳಿಕ ಊದಿಕೊಂಡು ಚರ್ಮ ಕೆಂಪಗಾಗುತ್ತದೆ. ಜೇಡ ಕಚ್ಚಲು ಎರಡು ಹಲ್ಲುಗಳನ್ನು ಬಳಸುತ್ತದೆ. ಕೆಲವೊಮ್ಮೆ ಎರಡೂ ಹಲ್ಲುಗಳು ಕಚ್ಚಿದ ಗುರುತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಟೊರಾಂಟುಲ ಎಂಬ ಜೇಡವಂತೂ ಎರಡೂ ಹಸ್ತಗಳಲ್ಲಿ ಹಿಡಿಯುವಷ್ಟು ದೊಡ್ಡದಾಗಿದ್ದು ಇದರ ಕಡಿತ ಪ್ರಾಣಾಂತಿಕವಾಗಬಲ್ಲುದು.
ಅಯ್ಯಯ್ಯೋ ವಿಷಪೂರಿತ ಜೇಡ ರಾತ್ರಿ ಕನಸಿನಲ್ಲಿ ಕಂಡುಬಂದರೆ..?
ಜೇಡನ ಕಡಿತದಿಂದ ವಿಷ ರಕ್ತಕ್ಕೆ ಸೇರಿದರೂ ಹಾವಿನ ವಿಷದಷ್ಟು ಇದರ ವಿಷ ಪ್ರಬಲವಲ್ಲ. ಆದರೆ ಕೆಲವು ಜನರಿಗೆ ಇದು ಅಲರ್ಜಿಕಾರಕವಾಗಿದೆ. ಪರಿಣಾಮವಾಗಿ ಚರ್ಮದಲ್ಲಿ ದೊಡ್ಡ ದದ್ದು ಏಳುವುದು, ಬೆಂಕಿ ಬಿದ್ದಂತೆ ಉರಿಯುವುದು, ಕೆಂಪಗಾಗುವುದು, ತುರಿಕೆ ಹಾಗೂ ತುರಿಸಿದಾಗ ಚರ್ಮದ ಚಿಕ್ಕ ಚಿಕ್ಕ ತುಣುಕುಗಳು ಕಳಚಿ ಬರುವುದು ಮೊದಲಾದವು ಕಂಡುಬರುತ್ತದೆ. ಸಾಮಾನ್ಯವಾಗಿ ಈ
ಸೂಚನೆಗಳು ಸುಮಾರು ಒಂದು ಇಡೀ ದಿನ ಇರುತ್ತದೆ. ಒಂದು ವೇಳೆ ಈ ಅಲರ್ಜಿ ತೀವ್ರವಾಗಿದ್ದರೆ ಈ ವ್ಯಕ್ತಿಗಳಿಗೆ ಕಡಿತದ ಭಾಗದ ಸುತ್ತಮುತ್ತಲ ಚರ್ಮವೂ ಕೆಂಪಗಾಗುತ್ತದೆ, ಉಸಿರು ಕಟ್ಟುವುದು, ಸುಸ್ತು ಆವರಿಸುವುದು, ತಲೆ ತಿರುಗುವುದು ಮೊದಲಾದವು ಎದುರಾಗುತ್ತವೆ. ಯಾವುದೇ ಕಾರಣಕ್ಕೆ ಜೇಡದ ಕಡಿತಕ್ಕೆ ಒಳಗಾದರೆ ಕೆಳಗಿನ ಮನೆಮದ್ದುಗಳನ್ನು ಅನುಸರಿಸುವ ಮೂಲಕ ವಿಷದ ಪ್ರಭಾವದಿಂದ ಪಾರಾಗಬಹುದು...
ತಣ್ಣೀರು ಮತ್ತು ಐಸ್
ಕಡಿತದ ಭಾಗವನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಹಾಗೂ ಈ ಭಾಗದಲ್ಲಿ ಮಂಜುಗಡ್ಡೆಯ ತುಂಡನ್ನು ಇರಿಸುವ ಮೂಲಕ ಅಥವಾ ಫ್ರಿಜ್ಜಿನಲ್ಲಿರಿಸಿದ ಒದ್ದೆ ಬಟ್ಟೆಯನ್ನು ಪಟ್ಟಿ ಕಟ್ಟುವ ಮೂಲಕ ಚರ್ಮದಲ್ಲಿ ದದ್ದು ಏಳದಂತೆ ನೋಡಿಕೊಳ್ಳಬಹುದು.
ಅಡುಗೆ ಸೋಡಾ
ಒಂದು ಭಾಗ ನೀರಿಗೆ ಮೂರು ಭಾಗದಷ್ಟು ಅಡುಗೆ ಸೋಡಾ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಕಡಿತದ ಭಾಗದಲ್ಲಿ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ. ಈ ಲೇಪನವನ್ನು ಎರಡು ದಿನ ಹಾಗೇ ಇರಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಕಡಿತದ ಭಾಗ ಮೇಲೆ ಬರುವಂತೆ ಇರಿಸಿ
ಒಂದು ವೇಳೆ ಕೈಗೆ ಅಥವಾ ಕಾಲುಗಳಿಗೆ ಜೇಡ ಕಚ್ಚಿದರೆ ಕಚ್ಚಿದ ಭಾಗ ದೇಹಕ್ಕಿಂತಲೂ ಮೇಲೆ ಇರುವಂತೆ ಇರಿಸುವ ಮೂಲಕ ರಕ್ತಪರಿಚಲನೆ ಕಡಿಮೆಯಾಗಿಸಿ ಉರಿಯನ್ನೂ ಕಡಿಮೆ ಮಾಡಬಹುದು.
ಹೈಡ್ರೋಕಾರ್ಟಿಸೋನ್ 1% ಕ್ರೀಂ
ಔಷಧಿಯಂಗಡಿಯಲ್ಲಿ ಸಿಗುವ ಈ ಮುಲಾಮನ್ನು ತಕ್ಷಣವೇ ಹಚ್ಚುವ ಮೂಲಕವೂ ಉತ್ತಮ ಪರಿಹಾರ ಪಡೆಯಬಹುದು. ಔಷಧಿ ಅಂಗಡಿ ದೂರವಿದ್ದರೆ ಇದರ ಬದಲಿಗೆ ಮನೆಯಲ್ಲಿರುವ ಕ್ಯಾಲಮೈನ್ ಲೋಷನ್ (ಲ್ಯಾಕ್ಟೋ ಕ್ಯಾಲಮೈನ್) ಅನ್ನು ಸಹಾ ಬಳಸಬಹುದು.
ಹೈಡ್ರೋಜನ್ ಪೆರಾಕ್ಸೈಡ್
ಈ ಭಾಗವನ್ನು ತಕ್ಷಣವೇ ಆಂಟಿ ಸೆಪ್ಟಿಕ್ ದ್ರಾವಣವನ್ನು ಬಳಸಿ ತೊಳೆದುಕೊಳ್ಳಬೇಕು. ಇದಕ್ಕಾಗಿ ಹೈಡ್ರೋಜೆನ್ ಪೆರಾಕ್ಸೈಡ್ ಉತ್ತಮ ಆಯ್ಕೆಯಾಗಿದೆ.
ಒಣಗಿದ ತುಳಸಿ ಎಲೆಗಳು
ಜೇಡನ ಕಡಿತದ ಉರಿಯನ್ನು ಕಡಿಮೆಗೊಳಿಸಲು ತುಳಸಿ ಎಲೆಗಳನ್ನು ಒಣಗಿಸಿ ಮಾಡಿದ ಪುಡಿಯನ್ನೂ ಬಳಸಬಹುದು. ಕಡಿದ ಭಾಗದ ಮೇಲೆ ಕೆಲವು ಎಲೆಗಳನ್ನು ಪುಡಿ ಮಾಡಿ ಉಜ್ಜಿಕೊಳ್ಳಿ. ಈ ಪುಡಿ ಸುಮಾರು ಮರಳಿನಷ್ಟು ನುಣ್ಣಗಾಗುವವರೆಗೆ ಉಜ್ಜಿಕೊಳ್ಳಿ. ಇದರಿಂದ ಉರಿ ಕಡಿಮೆ ಮಾಡುವುದು ಮಾತ್ರವಲ್ಲ, ಊದಿಕೊಳ್ಳುವುದನ್ನೂ ತಡೆಯಬಹುದು.
ಅರಿಶಿನ ಮತ್ತು ಆಲಿವ್ ಎಣ್ಣೆ
ಸಮಪ್ರಮಾಣದ ಆಲಿವ್ ಎಣ್ಣೆ ಮತ್ತು ಅರಿಶಿನಗಳನ್ನು ಬೆರೆಸಿ ಲೇಪನ ತಯಾರಿಸಿ ಕಡಿತದ ಭಾಗದ ಮೇಲೆ ತಕ್ಷಣವೇ ಹಚ್ಚಿಕೊಳ್ಳಿ. ಮುಂದಿನ ಏಳು ದಿನಗಳವರೆಗೂ ಈ ಲೇಪನವನ್ನು ಹಚ್ಚಿಕೊಳ್ಳುವುದನ್ನು ಮುಂದುವರೆಸಿ. ಇದರಿಂದ ವಿಷದ ಪ್ರಭಾವ ಕನಿಷ್ಟವಾಗುತ್ತದೆ ಹಾಗೂ ನೋವು ಮತ್ತು ಉರಿ ಸಹಾ ಎದುರಾಗುವುದಿಲ್ಲ. ಮುಂದಿನ ವಾರವೂ ದಿನ ಬಿಟ್ಟು ದಿನ ಹಚ್ಚಿಕೊಳ್ಳಿ.
ಆಸ್ಪಿರಿನ್
ಜೇಡನ ಕಡಿತದ ಉರಿ ಕಡಿಮೆಯಾಗಲು ಇದರ ವಿಷವನ್ನು ನಿಷ್ಫಲಗೊಳಿಸಬೇಕಾಗುತ್ತದೆ. ಇದಕ್ಕಾಗಿ ಒಂದು ಆಸ್ಪಿರಿನ್ ಮಾತ್ರೆಯನ್ನು ಪುಡಿ ಮಾಡಿ ಕೊಂಚ ನೀರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಕಡಿತದ ಭಾಗಕ್ಕೆ ಹಚ್ಚಿದ ತಕ್ಷಣವೇ ಉರಿ ಕಡಿಮೆಯಾಗುತ್ತದೆ. ಕೆಲವರಿಗೆ ಸುಮಾರು ಅರ್ಧ ಗಂಟೆ ಬೇಕಾಗಬಹುದು.
ಅಂಟಿಬಯಾಟಿಕ್ ಲೋಷನ್ ಅಥವಾ ಕ್ರೀಂ
ಒಂದು ವೇಳೆ ಮಕ್ಕಳಿಗೆ ಜೇಡ ಕಚ್ಚಿದರೆ ಕಡಿತದ ಭಾಗದಲ್ಲಿ ಪ್ರತಿಜೀಜಕ (ಅಂಟಿಬಯಾಟಿಕ್) ಲೋಷನ್ ಅಥವಾ ಕ್ರೀಂ ಅನ್ನು ತಕ್ಷಣವೇ ಹಚ್ಚುವ ಮೂಲಕ ಉರಿಯಾಗದಂತೆ ನೋಡಿಕೊಳ್ಳಬಹುದು.