For Quick Alerts
ALLOW NOTIFICATIONS  
For Daily Alerts

ತುರಿಕೆ ಸಮಸ್ಯೆಗೆ ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದುಗಳು

By Arshad
|

ಒಂದು ವೇಳೆ ನಿಮ್ಮ ತ್ವಚೆ ಒಣತ್ವಚೆಯಾಗಿದ್ದರೆ ನಿಮಗೆ ತುರಿಕೆಯ ಅನುಭವ ಇತರರಿಗಿಂತ ಹೆಚ್ಚೇ ಇರುತ್ತದೆ. ತುರಿಕೆಯಿಂದ ಯಾವ ರೀತಿಯ ಮುಜುಗರ ಎದುರಾಗುತ್ತದೆ ಎಂದು ಇದನ್ನು ಅನುಭವಿಸಿದವರಿಗೇ ಗೊತ್ತು. ತುರಿಕೆ ಬಹುತೇಕ ಪ್ರತಿಯೊಬ್ಬರಿಗೂ ದಿನದಲ್ಲಿ ಕೆಲವು ಬಾರಿಯಾದರೂ ಎದುರಾಗುವ ಸಾಮಾನ್ಯ ತೊಂದರೆಯಾಗಿದೆ.

ಆದರೆ ಇದು ಒಂದು ವೇಳೆ ಹೆಚ್ಚಾದರೆ ನಿತ್ಯದ ಚಟುವಟಿಕೆಗಳಿಗೆ ತೊಂದರೆಯುಂಟಾಗಬಹುದು. ತ್ವಚೆಯ ತುರಿಕೆಗೆ ಹಲವು ಕಾರಣಗಳಿವೆ. ಅಲರ್ಜಿಕಾರಕ ಪ್ರತಿಕ್ರಿಯೆಗಳು, ಕೀಟಗಳ ಕಡಿತ, ಚರ್ಮದ ಸೋಂಕು, ಒಣ ಪರಿಸರ, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ಕೆಲವು ಸೋಪುಗಳು ಮತ್ತು ಡಿಟರ್ಜೆಂಟುಗಳು, ಅಥವಾ ಕೆಲವೊಮ್ಮೆ ಸೋರಿಯಾಸಿಸ್ ನಂತಹ ಚರ್ಮದ ಕಾಯಿಲೆಯೂ ತುರಿಕೆಗೆ ಕಾರಣವಾಗಬಹುದು.

ತುರಿಕೆಯ ಸಮಸ್ಯೆಯೇ? ಮಧುಮೇಹದ ಸಂಜ್ಞೆಯಾಗಿರಬಹುದು!

ಒಂದು ವೇಳೆ ತುರಿಕೆಯ ಜೊತೆಗೇ ಚರ್ಮದಲ್ಲಿ ದದ್ದುಗಳು, ಚಿಕ್ಕ ಬೊಕ್ಕೆಗಳು, ಕೆಂಪಗಾದ ಚರ್ಮ, ತುರಿಸಿದಲ್ಲಿ ಗೆರೆಗಳಂತೆ ಗಾಯವಾಗುವುದು ಇತ್ಯಾದಿಗಳು ಎದುರಾದರೆ ಮಾತ್ರ ಇದು ಚಿಂತೆಗೆ ಕಾರಣವಾಗಿದೆ. ಕೆಲವೊಮ್ಮೆ ಒಂದೇ ಕಡೆ ಪದೇ ಪದೇ ತುರಿಸಿ ಗಾಯವಾಗಿ ಚರ್ಮ ಹರಿಯಲೂ ಬಹುದು ಅಥವಾ ಚಿಕ್ಕ ಚಿಕ್ಕ ಚೂರುಗಳಾಗಿ ಉಗುರುಗಳಲ್ಲಿ ಸಿಲುಕಿಕೊಳ್ಳಬಹುದು. ಇದು ಚರ್ಮಕ್ಕೆ ಅತಿ ಹೆಚ್ಚು ಘಾಸಿ ಮಾಡಬಹುದು. ಹೀಗಾದಾಗ ಚರ್ಮವೈದ್ಯರ ಭೇಟಿ ಅಗತ್ಯವಾಗಿದೆ. ಒಂದು ವೇಳೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕಿನಿಂದ ತುರಿಕೆ ಉಂಟಾಗಿದ್ದರೆ ಇದನ್ನು ನಿವಾರಿಸಲು ಕೆಲವು ಸಮರ್ಥವಾದ ಮನೆಮದ್ದುಗಳಿವೆ. ಬನ್ನಿ, ಈ ವಿಧಾನಗಳ ಬಗ್ಗೆ ಅರಿಯೋಣ...

ಅಡುಗೆ ಸೋಡಾ

ಅಡುಗೆ ಸೋಡಾ

ಒಂದು ವೇಳೆ ತುರಿಕೆ ಸತತವಾಗಿದ್ದು ತುರಿಸಿದ ಬಳಿಕ ಚಿಕ್ಕದಾಗಿ ಗಾಯಗಳಾಗಿದ್ದರೆ ಇದಕ್ಕೆ ಅಡುಗೆ ಸೋಡಾ ಉತ್ತಮ ಪರಿಹಾರವಾಗಿದೆ. ಇದರ ಉರಿಯೂತ ನಿವಾರಕ ಗುಣ ತ್ವಚೆಗೆ ತಂಪು ನೀಡುತ್ತದೆ. ಒಂದು ಕಪ್ ಅಡುಗೆ ಸೋಡಾವನ್ನು ಸ್ನಾನದ ತೊಟ್ಟಿಯ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಸುಮಾರು ಅರ್ಧ ಘಂಟೆಯಾದರೂ ದೇಹವನ್ನು ಮುಳುಗಿಸಿಡಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ತ್ವಚೆಯ ತುರಿಕೆ ಹಾಗೂ ಗಾಯಗಳಿಂದ ಉತ್ತಮ ಶಮನ ನೀಡಲು ಕೊಬ್ಬರಿ ಎಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ. ತುರಿಕೆಯ ತೊಂದರೆಯಿಂದ ತಕ್ಷಣದ ಶಮನ ಒದಗಿಸಲು ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ ಸಾಕಾಗುತ್ತದೆ. ಕೊಂಚ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ತುರಿಕೆ ಇರುವ ತ್ವಚೆಯ ಮೇಲೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಎಣ್ಣೆಯನ್ನು ಸಂಜೆ ಹಚ್ಚಿ ಇಡಿಯ ರಾತ್ರಿ ಹಾಗೇ ಇರಲು ಬಿಟ್ಟು ಮರುದಿನ ಸ್ನಾನ ಮಾಡಿ.

ಓಟ್ಸ್ ರವೆಯ ಪುಡಿ

ಓಟ್ಸ್ ರವೆಯ ಪುಡಿ

ತುರಿಕೆ ಕಡಿಮೆಗೊಳಿಸಲು ಓಟ್ಸ್ ರವೆಯ ಪುಡಿಯೂ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ತುರಿಕೆಯನ್ನು ತಕ್ಷಣವೇ ಶಮನಗೊಲಿಸುತ್ತದೆ. ಒಂದು ಕಪ್ ನೀರಿಗೆ ಓಟ್ಸ್ ಪುಡಿಯನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ತುರಿಕೆ ಇರುವ ತ್ವಚೆಯ ಮೇಲೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಘಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ತುರಿಕೆ ಇಲ್ಲವಾಗುವವರೆಗೂ ನಿತ್ಯವೂ ಅನುಸರಿಸಿ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿರುವ ತುರಿಕೆ ನಿವಾರಿಸಲು ಇದರಲ್ಲಿರುವ ಕೆಲವು ಪೋಷಕಾಂಶಗಳು ನೆರವಾಗುತ್ತವೆ. ಸುಮಾರು ಆರು ತುಳಸಿ ಎಲೆಗಳನ್ನು ಅರೆದು ಇದಕ್ಕೆ ಕೊಂಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ತುರಿಕೆ ಇರುವ ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ.

ಲಿಂಬೆ

ಲಿಂಬೆ

ಲಿಂಬೆಯಲ್ಲಿರುವ ಪ್ರತಿಜೀವಕ, ಉರಿಯೂತ ನಿವಾರಕ ಹಾಗೂ ತುರಿಕೆ ನಿವಾರಕಾ ಗುಣಗಳು ಚರ್ಮದ ತುರಿಕೆಯನ್ನು ನಿವಾರಿಸಲು ಅತ್ಯುತ್ತಮವಾಗಿವೆ. ಇದಕ್ಕಾಗಿ ಎರಡು ಚೆನ್ನಾಗಿ ಹಣ್ಣಾದ ಲಿಂಬೆಗಳಿಂದ ರಸವನ್ನು ಸಂಗ್ರಹಿಸಿ ಈ ರಸವನ್ನು ತ್ವಚೆಯ ಮೇಲೆ ಹತ್ತಿಯುಂಡೆಯನ್ನು ಬಳಸಿ ತೆಳುವಾಗಿ ಲೇಪಿಸಿಕೊಳ್ಳಿ. ಇದು ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬೇವಿನ ಎಲೆಗಳು

ಬೇವಿನ ಎಲೆಗಳು

ಇದರ ಶಿಲೀಂಧ್ರ ನಿವಾರಕ, ಪ್ರತಿಜೀವಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯುತ ನಿವಾರಕ ಗುಣಗಳು ಹಲವಾರು ತ್ವಚೆಯ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ ಬೇವಿನ ಎಣ್ಣೆಯನ್ನು ತೆಳುವಾಗಿ ಲೇಪಿಸಿಕೊಳ್ಳಬಹುದು ಅಥವಾ ಕೊಂಚ ಎಲೆಗಳನ್ನು ಅರೆದು ಲೇಪನದಂತೆಯೂ ಬಳಸಬಹುದು.

ಸೇಬಿನ ಶಿರ್ಕಾ

ಸೇಬಿನ ಶಿರ್ಕಾ

ಸೇಬಿನ ಶಿರ್ಕಾ ( Apple Cider Vinegar)ದಲ್ಲಿಯೂ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಪ್ರತಿಜೀವಕ ಹಾಗೂ ತುರಿಕೆ ನಿವಾರಕ ಗುಣಗಳೀವೆ. ಇದಕ್ಕಾಗಿ ಮೂರು ಕಪ್ ಸೇಬಿನ ಶಿರ್ಕಾವನ್ನು ಸ್ನಾನದ ತೊಟ್ಟಿಯಲ್ಲಿ ಹಾಕಿ ಈ ನೀರಿನಲ್ಲಿ ಸುಮಾರು ಮೂವತ್ತು ನಿಮಿಷ ದೇಹವನ್ನು ಮುಳುಗಿಸಿಡಿ. ತುರಿಕೆ ಇಲ್ಲವಾಗುವವರೆಗೂ ನಿತ್ಯವೂ ಅನುಸರಿಸಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ತುರಿಕೆ ಇರುವ ಚರ್ಮಕ್ಕೆ ಸಾಸಿವೆ ಎಣ್ಣೆಯೂ ಉತ್ತಮವಾದ ಉಪಶಮನ ಒದಗಿಸ್ತುತದೆ ಹಾಗೂ ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ. ತುರಿಕೆ ಇರುವ ಭಾಗದಲ್ಲಿ ಕೊಂಚ ಸಾಸಿವೆ ಎಣ್ಣೆಯನ್ನು ತೆಳ್ಳಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಪುದಿನಾ

ಪುದಿನಾ

ಪುದಿನಾದಲ್ಲಿ ತಂಪುಗೊಳಿಸುವ, ಉರಿಯೂತ ನಿವಾರಕ, ಪ್ರತಿಜೀವಕ ಹಾಗೂ ಗುಣಪಡಿಸುವ ಗುಣಗಳಿವೆ. ಈ ಗುಣಗಳು ತುರಿಕೆಯನ್ನೂ ಕಡಿಮೆಗೊಳಿಸಲು ನೆರವಾಗುತ್ತವೆ. ಕೊಂಚ ತಾಜಾ ಪುದಿನಾ ಎಲೆಗಳನ್ನು ನುಣ್ಣಗೆ ಅರೆದು ಹಿಂಡಿ ಇದರ ರಸವನ್ನು ಸಂಗ್ರಹಿಸಿ. ಈ ರಸವನ್ನು ತೆಳ್ಳಗೆ ತುರಿಕೆ ಇರುವ ಭಾಗದ ಮೇಲೆ ಹಚ್ಚಿಕೊಳ್ಳಿ.

ಲೋಳೆಸರ

ಲೋಳೆಸರ

ಲೋಳೆಸರದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂದ್ರನಿವಾರಕ ಗುಣ ತ್ವಚೆಯ ತುರಿಕೆಯನ್ನೂ ಇಲ್ಲವಾಗಿಸುತ್ತದೆ. ಒಂದು ಲೋಳೆಸರದ ಕೋಡನ್ನು ಮುರಿದು ಇದರ ತಿರುಳನ್ನು ಸಂಗ್ರಹಿಸಿ. ಈ ತಿರುಗಳನ್ನು ನೇರವಾಗಿ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ, ಪ್ರತಿಜೀವಕ ಹಾಗೂ ಶಮನಕಾರಿ ಗುಣಗಳು ತುರಿಕೆಯಿಂದ ಶೀಘ್ರವೇ ಉಪಶಮನ ಒದಗಿಸುತ್ತದೆ. ವಿಶೇಷವಾಗಿ ಸ್ಕೇಬೀಸ್ ಹಾಗೂ ಡರ್ಮಾಟೈಟಿಸ್ ರೋಗಗಳಿಂದ ಎದುರಾದ ತುರಿಕೆಗೆ ಈ ವಿಧಾನ ಅತ್ಯುತ್ತಮವಾಗಿದೆ, ತುರಿಕೆ ಇರುವ ಭಾಗದಲ್ಲಿ ಕೆಲವು ತೊಟ್ಟು ಪುದಿನಾ ಎಣ್ಣೆಯನ್ನು ಸ್ನಾನದ ತೊಟ್ಟೆಯಲ್ಲಿ ಹಾಕಿ ಈ ನೀರಿನಲ್ಲಿ ದೇಹವನ್ನು ಅರ್ಧಘಂಟೆಯವರೆಗೆ ಮುಳುಗಿಸಿಡಿ. ಇನ್ನೊಂದು ವಿಧಾನವೆಂದರೆ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಗೆ ನಾಲ್ಕು ತೊಟ್ಟು ಪುದಿನಾ ಎಣ್ಣೆಯನ್ನು ಬೆರೆಸಿ ಈ ಎಣ್ಣೆಯನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ.

ಜೇನು ತುಪ್ಪ

ಜೇನು ತುಪ್ಪ

ಜೇನಿನಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ತುರಿಕೆಯನ್ನೂ ಇಲ್ಲವಾಗಿಸುತ್ತವೆ. ಒಂದು ವೇಳೆ ಕೀಟದ ಕಡಿತದಿಂದ ತುರಿಕೆ ಎದುರಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಕೀಟ ಕಡಿದ ಭಾಗಕ್ಕೆ ಜೇನನ್ನು ನೇರವಾಗಿ ಹಚ್ಚಿಕೊಳ್ಳಬಹುದು. ಪರ್ಯಾಯವಾಗಿ ಸಮಪ್ರಮಾಣದ ಜೇನು ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿಯೂ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಚರ್ಮದ ಉರಿಯೂತ, ತುರಿಕೆ, ಕೆಂಪಗಾದ ಚರ್ಮ ಮೊದಲಾದವುಗಳನ್ನು ಆಲಿವ್ ಎಣ್ಣೆ ಸಮರ್ಥವಾಗಿ ಕಡಿಮೆಗೊಳಿಸುತ್ತದೆ. ಇದರ ಬ್ಯಾಕ್ಟೀರಿಯಾನಿವಾರಕ, ಶಿಲೀಂಧ್ರ ನಿವಾರಕ ಗುಣಗಳು ಚರ್ಮಕ್ಕೆ ತಂಪನ್ನೆರೆಯುತ್ತವೆ. ತುರಿಕೆ ಇರುವ ಭಾಗಕ್ಕೆ ಕೊಂಚ ಆಲಿವ್ ಎಣ್ಣೆಯನ್ನು ನೇರವಾಗಿ ಹಚ್ಚಿಕೊಳ್ಳುತ್ತಾ ಬಂದರೆ ಕೆಲವೇ ದಿನಗಳಲ್ಲಿ ತುರಿಕೆ ಇಲ್ಲವಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Home Remedies For Itchy Skin

If you have an itchy skin, you will notice bumps, blisters, rashes, redness,etc., on the skin. This can be a little worrisome, as it can lead to eczema or scabies, etc. Itching of the skin can cause skin tear from scratching which actually can be dangerous for the skin. So, in order to prevent bacterial infections and further diseases in the skin due to itching, you can try out simple home remedies for treating itchy skin.
X
Desktop Bottom Promotion