ತುಂಬಾನೇ ಹಿಂಸೆ ನೀಡುವ ಎದೆಯುರಿ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

Posted By: Arshad Hussain
Subscribe to Boldsky

ಕರುಳಿನಲ್ಲಿ ಉತ್ಪತ್ತಿಯಾದ ಕೆಲವು ವಾಯುಗಳ ಒತ್ತಡ ಹೆಚ್ಚಾದರೆ ಇದು ಜಠರ ಹಾಗೂ ಅನ್ನನಾಳಗಳ ಮೂಲಕ ಹಿಮ್ಮುಖ ಚಲಿಸಿ ಹೊರಬರಲು ಯತ್ನಿಸುವಾಗ ಜಠರ, ಅನ್ನನಾಳಗಳಲ್ಲಿ ಅಪಾರ ಉರಿಯುಂಟುಮಾಡುತ್ತದೆ. ಇದೇ ಎದೆಯುರಿ. ಈ ಉರಿ ಸಾಮಾನ್ಯವಾಗಿ ಎದೆಯ ನಡುವಿನಲ್ಲಿ ಕಾಣಿಸಿಕೊಳ್ಳುವುದರಿಂದ ಹೆಚ್ಚಿನವರು ಇದು ಹೃದಯದ ತೊಂದರೆಯೇ ಇರಬಹುದು ಎಂದು ಆತಂಕಕ್ಕೊಳಗಾಗುತ್ತಾರೆ. ಆದರೆ ಈ ಉರಿ ತಾತ್ಕಾಲಿಕವಾಗಿದ್ದು ವಾಯುವಿಗೆ ಹೊರಹೋಗಲು ಅವಕಾಶ ಸಿಕ್ಕ ಬಳಿಕ ಈ ಉರಿ ತನ್ನಿಂತಾನೇ ಕಡಿಮೆಯಾಗುತ್ತದೆ.

ಕೆಲವೊಮ್ಮೆ ವಾಯುವಿಗೆ ಹೊರಹೋಗಲು ಸೂಕ್ತ ಅವಕಾಶ ದೊರಕದೇ ಅಥವಾ ಯಾವುದೋ ಕಾರಣದಿಂದ ಜಠರದ ಆಮ್ಲೀಯತೆಯೂ ಹೆಚ್ಚಾದರೆ ಈ ಉರಿ ಹೆಚ್ಚು ಹೊತ್ತು ಕಾಡುತ್ತದೆ. ಸದ್ಯಕ್ಕೆ ನಮ್ಮ ಬಳಿ ಈ ತೊಂದರೆಯನ್ನು ಸಮರ್ಥವಾಗಿ ನಿವಾರಿಸುವ ಮನೆಮದ್ದುಗಳಿಗೆ. ಈ ಅಮೂಲ್ಯ ಮಾಹಿತಿಯನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಅಷ್ಟಕ್ಕೂ ಹೊಟ್ಟೆ, ಜಠರದಲ್ಲಿ ವಾಯು ಉತ್ಪತ್ತಿಯಾದರೂ ಏಕಾಗುತ್ತದೆ? ಅಜೀರ್ಣತೆ, ಆಹಾರವನ್ನು ನುಂಗುವ ಸಮಯದಲ್ಲಿ ಕೊಂಚ ಗಾಳಿಗುಳ್ಳೆಗಳು ನುಸುಳುವುದು, ಎಣ್ಣೆಜಿಡ್ಡಿನ ಹಾಗೂ ಸಂಸ್ಕರಿಸಿದ ಆಹಾರ ಸೇವನೆ, ಪಿಷ್ಟ ಅಥವಾ ಕರಗುವ ನಾರು ಅತಿ ಹೆಚ್ಚಾಗಿರುವುದು, ಕೆಲವು ಆಹಾರಗಳ ಅಲರ್ಜಿ ಮೊದಲಾದವು ಇದಕ್ಕೆ ಕಾರಣವಾಗಿವೆ.

ಗರ್ಭಾವಸ್ಥೆಯಲ್ಲಿ ಎದೆಯುರಿ, ಇಂತಹ ಆಹಾರಗಳಿಂದ ದೂರವಿರಿ

ಅಲ್ಲದೇ ಬುರುಗು ಬರುವ ಪಾನೀಯಗಳಾದ ಸೋಡಾ, ಲಘುಪಾನೀಯ, ಬಿಯರ್ ಮೊದಲಾದವೂ ಇದಕ್ಕೆ ಕಾರಣವಾಗುತ್ತದೆ. ಜಠರ-ಕರುಳುಗಳಲ್ಲಿ ವಾಯು ಉತ್ಪತ್ತಿಯಾದರೆ ಇದು ಹುಳಿತೇಗು, ಅಪಾನವಾಯು, ಹೊಟ್ಟೆಯಲ್ಲಿ ನೋವು, ಎದೆಯಲ್ಲಿ ಉರಿ, ಹೊಟ್ಟೆಯುಬ್ಬರಿಕೆ, ಹಸಿವಿಲ್ಲದಿರುವುದು ಮೊದಲಾದ ತೊಂದರೆಗಳಿಗೆ ಕಾರಣವಾಗುತ್ತದೆ. ಈ ಎದೆಯುರಿಯನ್ನು ಕಡಿಮೆ ಮಾಡಲು ಬೋಲ್ಡ್ ಸ್ಕೈ ತಂಡ ಕೆಲವು ಸಮರ್ಥ ಮನೆಮದ್ದುಗಳನ್ನು ಸಂಗ್ರಹಿಸಿದ್ದು ಇವು ಜಠರ, ಕರುಳುಗಳಲ್ಲಿ ಉತ್ಪತ್ತಿಯಾದ ವಾಯುವನ್ನು ನೈಸರ್ಗಿಕ ವಿಧಾನದಲ್ಲಿ ಹೊರಹಾಕಲು ನೆರವಾಗುತ್ತವೆ....

ಏಲಕ್ಕಿ ಮತ್ತು ಜೀರಿಗೆ

ಏಲಕ್ಕಿ ಮತ್ತು ಜೀರಿಗೆ

ವಾಯುಪ್ರಕೋಪದಿಂದ ಎದುರಾದ ಎದೆಯುರಿಗೆ ಇದು ಅತ್ಯುತ್ತಮವಾದ ಪರಿಹಾರವಾಗಿದೆ. ಇವು ಅತ್ಯುತ್ತಮವಾದ ಅಪಾನವಾಯುವಿರೋಧಿಯಾಗಿವೆ. ಹೊಟ್ಟೆ ಮತ್ತು ಕರುಳುಗಳಲ್ಲಿ ಉತ್ಪತ್ತಿಯಾಗಿದ್ದ ವಾಯುಗಳನ್ನು ಈ ಸಾಮಾಗ್ರಿಗಳು ತೆರವುಗೊಳಿಸಿ ಇದರಿಂದ ಎದುರಾಗಿದ್ದ ನೋವನ್ನೂ ಕಡಿಮೆ ಮಾಡುತ್ತವೆ. ಇದಕ್ಕಾಗಿ ಏಲಕ್ಕೆ ಮತ್ತು ಜೀರಿಗೆಯನ್ನು ಬೆರೆಸಿ ಬೇಯಿಸಿದ ಟೀ ಯನ್ನು ಸೇವಿಸಬಹುದು. ಈ ಮೂಲಕ ಅಜೀರ್ಣತೆಯನ್ನು ನಿವಾರಿಸಿ ವಾಯುಪ್ರಕೋಪವಾಗದಂತೆ ತಡೆಯಬಹುದು.

ಒಂದು ಕಪ್ 'ಏಲಕ್ಕಿ ಚಹಾ' ದಲ್ಲಿದೆ 10 ಅದ್ಭುತ ಆರೋಗ್ಯ ಪ್ರಯೋಜನಗಳು

ಏಲಕ್ಕಿ ಟೀ ತಯಾರಿಸುವ ವಿಧಾನ

ಏಲಕ್ಕಿ ಟೀ ತಯಾರಿಸುವ ವಿಧಾನ

*ಏಲಕ್ಕಿ ಟೀ ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಒಂದೆರಡು ಏಲಕ್ಕಿಗಳನ್ನು ಕುಟ್ಟಿ ಪುಡಿಮಾಡಬೇಕು.

*ಒಂದು ಪಾತ್ರೆಯಲ್ಲಿ ಒಂದು ಟೀ ಗೆ ಅಗತ್ಯವಿರುವಷ್ಟು ನೀರನ್ನು ಹಾಕಿ, ಇದರಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಕುದಿಸಿ

*ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಟೀಪುಡಿ ಮತ್ತು ಸಕ್ಕರೆ ಬೆರೆಸಿ ಈ ಟೀಯನ್ನು ಹಾಲಿಲ್ಲದೇ ಕುಡಿಯುವುದಾದರೆ ಹತ್ತು ಸೆಕೆಂಡುಗಳ ಬಳಿಕ ಟೀ ಬ್ಯಾಗ್ ನಿವಾರಿಸಿ ಅಥವಾ ಸೋಸಿ.

*ಹಾಲಿನ ಜೊತೆಗೆ ಸೇವಿಸುವುದಾದರೆ ಕುದಿಸುವುದನ್ನು ಎರಡರಿಂದ ಮೂರು ನಿಮಿಷಗಳವರೆಗೆ ಮುಂದುವರೆಸಿ. ಬಳಿಕ ಹಾಲು ಬೆರೆಸಿ ಸೋಸಿ ಬಿಸಿಬಿಸಿಯಾಗಿಯೇ ಕುಡಿಯಿರಿ.

 ಬಿಸಿ ಬಿಸಿ ಟೀ ಅಥವಾ ಕಾಫಿ ಸೇವಿಸಿ

ಬಿಸಿ ಬಿಸಿ ಟೀ ಅಥವಾ ಕಾಫಿ ಸೇವಿಸಿ

ನಿಮ್ಮ ನೆಚ್ಚಿನ ಪೇಯಗಳಾದ ಕಾಫಿ ಅಥವಾ ಟೀ ಗಳನ್ನು ಬಿಸಿಬಿಸಿಯಾಗಿ ಸೇವಿಸುವ ಮೂಲಕ ಹೊಟ್ಟೆ ಮತ್ತು ಎದೆಯಲ್ಲಿ ಎದುರಾಗಿದ್ದ ಉರಿಯನ್ನು ನೈಸರ್ಗಿಕವಾಗಿ ನಿವಾರಿಸಬಹುದು. ವಾಯುಪ್ರಕೋಪದಿಂದ ಎದುರಾದ ಎದೆಯುರಿಗೆ ಇದು ಸಹಾ ಒಂದು ಸಮರ್ಥ ವಿಧಾನವಾಗಿದೆ.

ಪಪ್ಪಾಯಿ

ಪಪ್ಪಾಯಿ

ವಾಯುಪ್ರಕೋಪದಿಂದ ಎದುರಾದ ಎದೆಯುರಿಗೆ ಪಪ್ಪಾಯಿ ಇನ್ನೊಂದು ಉತ್ತಮ ಪರಿಹಾರವಾಗಿದೆ. ಇದು ವಾಯುವಿನ ಉತ್ಪತ್ತಿಯಾಗುವುದನ್ನೇ ತಡೆದು ತೊಂದರೆಯನ್ನು ಮೂಲದಿಂದಲೇ ಇಲ್ಲವಾಗಿಸುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಗೂ ಸಹಕರಿಸುವ ಮೂಲಕ ಎದೆಯುರಿಯನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಕೊಂಚ ಹೆಚ್ಚೇ ಎದೆಯುರಿ ಇದ್ದರೆ ಪೊಪ್ಪಾಯಿಯನ್ನು ನಿತ್ಯವೂ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಪುದಿನಾ ಟೀ

ಪುದಿನಾ ಟೀ

ಪುದಿನಾದಲ್ಲಿರುವ ಅಪಾನವಾಯುನಿರೋಧಕ ಗುಣ ಹೊಟ್ಟೆಯಲ್ಲಿರುವ ವಾಯುವನ್ನು ಹೊರಹಾಕಲು ನೆರವಾಗುತ್ತದೆ. ಅಲ್ಲದೇ ಇದು ಅಜೀರ್ಣತೆಯ ತೊಂದರೆಯನ್ನೂ ನಿವಾರಿಸುತ್ತದೆ. ಒಂದು ವೇಳೆ ವಾಕರಿಕೆ ಹಾಗೂ ವಾಂತಿಯ ತೊಂದರೆ ಇದ್ದರೆ ಪುದಿನಾ ಟೀ ಕುಡಿಯುವ ಮೂಲಕ ಎದೆಯುರಿ ಕಡಿಮೆಯಾಗುತ್ತದೆ. ಆದ್ದರಿಂದ ವಾಂತಿ-ವಾಕರಿಕೆ ಇದ್ದರೆ ಪುದಿನಾ ಟೀ ಅತ್ಯುತ್ತಮ ಆಯ್ಕೆಯಾಗಿದೆ.

ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಶುಂಠಿ ಅಥವಾ ಕ್ಯಾಮೋಮೈಲ್ ಟೀ

ಶುಂಠಿ ಅಥವಾ ಕ್ಯಾಮೋಮೈಲ್ ಟೀ

ಅಪಾನವಾಯು ತೊಂದರೆಗೆ ಶುಂಠಿ ಮತ್ತು ಕ್ಯಾಮೋಮೈಲ್ ಸಹಾ ಉತ್ತಮ ಆಯ್ಕೆಯಾಗಿವೆ. ಒಂದು ವೇಳೆ ವಾಯುಪ್ರಕೋಪ ನಿತ್ಯವೂ ಕಾಡುವ ತೊಂದರೆಯಾಗಿದ್ದರೆ ನಿತ್ಯವೂ ಊಟದ ಬಳಿಕ ಕೊಂಚ ಪ್ರಮಾಣದಲ್ಲಿ ಈ ಟೀಗಳನ್ನು ಸೇವಿಸುವ ಮೂಲಕ ವಾಯು ಉತ್ಪತ್ತಿಯಾಗದಂತೆ ತಡೆಯಬಹುದು. ಒಂದು ವೇಳೆ ವಾಯು ಉತ್ಪತ್ತಿಯಾದರೂ ಈ ಟೀಗಳಲ್ಲಿರುವ ಪೋಷಕಾಂಶಗಳು ಈ ವಾಯು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ.

ವ್ಯಾಯಾಮ

ವ್ಯಾಯಾಮ

ಒಂದು ವೇಳೆ ಅಜೀರ್ಣತೆಯಿಂದ ವಾಯುಪ್ರಕೋಪ ಎದುರಾಗಿದ್ದರೆ ಕೊಂಚ ವ್ಯಾಯಾಮ ಈ ತೊಂದರೆಯಿಂದ ಬಿಡುಗಡೆ ನೀಡುತ್ತದೆ. ವಿಶೇಷವಾಗಿ ಹೆಚ್ಚು ಚಲನೆಗೆ ಅವಕಾಶವಿಲ್ಲದ ಜೀವನಕ್ರಮದಲ್ಲಿ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ವ್ಯಕ್ತಿಗಳು ಸುಲಭವಾದ ಮುಂದೆ, ಹಿಂದೆ, ಪಕ್ಕಕ್ಕೆ ಬಾಗುವ ವ್ಯಾಯಾಮಗಳನ್ನು ನಿತ್ಯವೂ ಕೊಂಚ ಹೊತ್ತಿನ ಕಾಲ ಅನುಸರಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು.

ಇದ್ದಲಿನ ಮಾತ್ರೆಗಳು (Charcoal Capsules)

ಇದ್ದಲಿನ ಮಾತ್ರೆಗಳು (Charcoal Capsules)

ಈ ಮಾತ್ರೆಗಳಲ್ಲಿರುವ ಇಂಗಾಲ ಹೊಟ್ಟೆಯಲ್ಲಿರುವ ಗಾಳಿಯನ್ನು ಹೀರಿಕೊಳ್ಳುವ ಕ್ಷಮತೆ ಹೊಂದಿವೆ. ಈ ಮೂಲಕ ಎದೆಯುರಿ ಮತ್ತು ಹೊಟ್ಟೆನೋವನ್ನು ತಕ್ಷಣ ಕಡಿಮೆ ಮಾಡುತ್ತವೆ. ಈ ಮಾತ್ರೆಗಳು ಸಿದ್ದರೂಪದಲ್ಲಿ ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿಯ ಅಗತ್ಯವಿಲ್ಲದೇ ಸುಲಭದರದಲ್ಲಿ ದೊರಕುತ್ತದೆ. ಎದೆಯುರಿಗೆ ಈ ವಿಧಾನವೂ ಒಂದು ಸಮರ್ಥ ನೈಸರ್ಗಿಕ ಪರಿಹಾರ ಒದಗಿಸುತ್ತದೆ.

ಅಡುಗೆ ಸೋಡಾ

ಅಡುಗೆ ಸೋಡಾ

ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಿಕ್ಕ ಚಮಚದಷ್ಟು ಅಡುಗೆ ಸೋಡಾವನ್ನು ಬೆರೆಸಿ ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರಿಕೆಗೆ ಕಾರಣವಾದ ವಾಯು ತಕ್ಷಣ ಇಲ್ಲವಾಗುವ ಮೂಲಕ ಎದೆಯುರಿ ಕಡಿಮೆಯಾಗುತ್ತದೆ.

ಬಸ್ಕಿ ಹೊಡೆಯಿರಿ!

ಬಸ್ಕಿ ಹೊಡೆಯಿರಿ!

ಕೆಲವೊಮ್ಮೆ ಕರುಳುಗಳ ನಡುವೆ ಸಿಲುಕಿಕೊಂಡ ವಾಯು ವಿಮೋಚನೆಗೊಳ್ಳದೇ ಒಳಗೆ ಗುಡುಗಾಡುತ್ತಾ ಇರುತ್ತದೆ. ಈ ವಾಯುವನ್ನು ತಕ್ಷಣ ಹೊಟ್ಟೆಗೆ ಕಳುಹಿಸಲು ಬಸ್ಕಿ ಹೊಡೆಯುವುದು ಅತ್ಯುತ್ತಮವಾದ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ನಿತ್ಯವೂ ಅನುಸರಿಸುವ ಮೂಲಕ ವಾಯುಪ್ರಕೋಪದಿಂದ ಶಮನ ಪಡೆಯುವ ಜೊತೆಗೇ ಹೊಟ್ಟೆಯ ಸ್ನಾಯುಗಳೂ ದೃಢಗೊಳ್ಳುತ್ತವೆ.

ಸೇಬಿನ ಶಿರ್ಕಾ

ಸೇಬಿನ ಶಿರ್ಕಾ

ಒಂದು ದೊಡ್ಡ ಚಮಚ ಸೇಬಿನ ಶಿರ್ಕಾವನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಿರಿ. ತಕ್ಷಣವೇ ಹೊಟ್ಟೆಯಲ್ಲಿ ಸಂಗ್ರಹಗೊಂಡಿದ್ದ ವಾಯು ಬಿಡುಗಡೆಗೊಳ್ಳುತ್ತದೆ. ಅಲ್ಲದೇ ಜೀರ್ಣಕ್ರಿಯೆಯೂ ಸುಲಭಗೊಳ್ಳುತ್ತದೆ ಹಾಗೂ ಇನ್ನಷ್ಟು ವಾಯು ಉತ್ಪತ್ತಿಯಾಗುವುದನ್ನು ತಪ್ಪಿಸುತ್ತದೆ. ವಾಯುಪ್ರಕೋಪದಿಂದ ಹುಳಿತೇಗು ಉಂಟಾಗಿದ್ದರೆ ಈ ವಿಧಾನ ಅತ್ಯುತ್ತಮವಾದ ಆಯ್ಕೆಯಾಗಿದೆ.

ಡೈರಿ ಉತ್ಪನ್ನಗಳನ್ನು ಸೇವಿಸದಿರಿ

ಡೈರಿ ಉತ್ಪನ್ನಗಳನ್ನು ಸೇವಿಸದಿರಿ

ಕೆಲವು ವ್ಯಕ್ತಿಗಳಿಗೆ ಡೈರಿ ಉತ್ಪನ್ನಗಳನ್ನು ಸೇವಿಸಿದ ತಕ್ಷಣವೇ ಅಜೀರ್ಣತೆ ಹಾಗೂ ವಾಯುಪ್ರಕೋಪವುಂಟಾಗುತ್ತದೆ. ನಿಮಗೆ ಯಾವ ಆಹಾರದಿಂದ ಈ ತೊಂದರೆ ಇದೆ ಎಂದು ಕಂಡುಕೊಳ್ಳಿ ಹಾಗೂ ಊಟದ ಬಳಿಕ ಈ ಆಹಾರಗಳನ್ನು ಸೇವಿಸದಿರಿ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ವಾಯು ಉತ್ಪನ್ನಕ್ಕೆ ಅಜೀರ್ಣತೆ ಪ್ರಮುಖ ಕಾರಣವಾಗಿದೆ. ಸಾಕಷ್ಟು ನೀರು ಕುಡಿಯುವ ಮೂಲಕ ಅಜೀರ್ಣಗೊಂಡ ಆಹಾರವನ್ನು ಆದಷ್ಟು ಬೇಗನೇ ವಿಸರ್ಜಿಸಲು ಸಾಧ್ಯವಾಗುತ್ತದೆ ಹಾಗೂ ಮಲಬದ್ದತೆಯಾಗದಂತೆ ಮತ್ತು ವಾಯುಪ್ರಕೋಪವಾಗದಂತೆ ತಡೆಯಬಹುದು.

ಬುರುಗುಬರುವ ಪಾನೀಯಗಳನ್ನು ಸೇವಿಸದಿರಿ

ಬುರುಗುಬರುವ ಪಾನೀಯಗಳನ್ನು ಸೇವಿಸದಿರಿ

ನಾವು ಉಸಿರಿನ ಮೂಲಕ ಹೊರಬಿಡುವ ಅನಗತ್ಯ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಬಲವಂತವಾಗಿ ನೀರಿನಲ್ಲಿ ಕರಗಿಸಿ "ಕಾರ್ಬೋನೇಟೆಡ್ ಡ್ರಿಂಕ್ಸ್' ಎಂಬ ಸುಂದರ ಹೆಸರಿನಲ್ಲಿ ಮಾರಲ್ಪಡುವ ಈ ತಂಪುಪಾನೀಯಗಳು ವಾಯುಪ್ರಕೋಪ ಹೆಚ್ಚಿಸುವ ಆಹಾರವಾಗಿವೆ. ಇದರ ಸೇವನೆಯಿಂದ ಕುಡಿಯುವಾಗ ಗಂಟಲಿನಲ್ಲಿ ಕಚಗುಳಿಯ ಅನುಭವವಾದರೂ ಹೊಟ್ಟೆ ಸೇರಿದ ಬಳಿಕ ಈ ಇಂಗಾಲದ ಡೈ ಆಕ್ಸೈಡ್ ಹೊಟ್ಟೆ ಮತ್ತು ಎದೆಯಲ್ಲಿ ಉರಿ ತರಿಸುತ್ತದೆ,. ಆದ್ದರಿಂದ ಈ ಪಾನೀಯಗಳನ್ನು ಶಾಶ್ವತವಾಗಿ ಸೇವಿಸದಿರುವುದೇ ಆರೋಗ್ಯಕ್ಕೆ ಒಳ್ಳೆಯದು.

ಸಾಸಿವೆ

ಸಾಸಿವೆ

ಈ ಪುಟ್ಟ ಕಾಳುಗಳೂ ಹೊಟ್ಟೆಯಲ್ಲಿ ತುಂಬಿಕೊಂಡಿದ್ದ ವಾಯುವನ್ನು ನಿವಾರಿಸಲು ನೆರವಿನ ಹಸ್ತ ನೀಡುತ್ತವೆ. ನಿಮ್ಮ ನಿತ್ಯದ ಆಹಾರಗಳಲ್ಲಿ ಸಾಸಿವೆಯನ್ನು ಸಿಡಿಸಿ ಅಥವಾ ಬೆರೆಸಿ ಸೇವಿಸುವ ಮೂಲಕವೂ ವಾಯು ತುಂಬಿಕೊಳ್ಳದಂತೆ ನೋಡಿಕೊಳ್ಳಬಹುದು.

ದಿನಕ್ಕೊಂದು ಬಾಳೆಹಣ್ಣು ತಿನ್ನಿ

ದಿನಕ್ಕೊಂದು ಬಾಳೆಹಣ್ಣು ತಿನ್ನಿ

ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವ ಮೂಲಕ ಆಮ್ಲ ಉತ್ಪತ್ತಿಯಾಗದೇ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿದಂತೆ ಅನ್ನಿಸುವುದರಿಂದ ಅನಗತ್ಯವಾಗಿ ಹೆಚ್ಚಿನ ಆಹಾರ ಸೇವನೆಯನ್ನು ತಡೆಯುತ್ತದೆ.

ತುಳಸಿ ಎಲೆಗಳನ್ನು ಜಗಿಯಿರಿ

ತುಳಸಿ ಎಲೆಗಳನ್ನು ಜಗಿಯಿರಿ

ಎದೆಯುರಿಯನ್ನು ತಕ್ಷಣ ಕಡಿಮೆಗೊಳಿಸಲು ಉತ್ತಮ ವಿಧಾನವೆಂದರೆ ತುಳಸಿ ಎಲೆಗಳನ್ನು ಜಗಿಯುವುದು. ಅದರಲ್ಲೂ ಎದೆಯುರಿಯೊಂದಿಗೆ ವಾಕರಿಕೆಯೂ ಆವರಿಸಿದ್ದರೆ ಈ ಎಲೆಗಳು ತಕ್ಷಣ ಶಮನ ನೀಡುತ್ತವೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶೀತ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತವೆ.

ತಣ್ಣಗಿನ ಹಸಿ ಹಾಲು ಕುಡಿಯಿರಿ

ತಣ್ಣಗಿನ ಹಸಿ ಹಾಲು ಕುಡಿಯಿರಿ

ತಕ್ಷಣಕ್ಕೆ ಎದೆಯುರಿಯನ್ನು ಶಮನಗೊಳಿಸಲು ಇನ್ನೊಂದು ಸಮರ್ಥ ವಿಧಾನವೆಂದರೆ ತಣ್ಣಗಿನ ಹಸಿ ಹಾಲನ್ನು ಕುಡಿಯುವುದು. ಇದರಿಂದಲೂ ಎದೆಯುರಿ ಮತ್ತು ವಾಕರಿಕೆ ತಕ್ಷಣ ಕಡಿಮೆಯಾಗುತ್ತದೆ.

English summary

Home Remedies For Gas Pain In Chest

When intestinal gas gets trapped inside, it can raise up to chest level and cause chest pain. This pain is due to entrapped gas. Some people start worrying about the chest pain and assume that the pain may be due to heart problems. But this is a temporary pain and lasts until the gas is evacuated. Fortunately, there are some home remedies for chest pain due to gas that we will share with you today.