For Quick Alerts
ALLOW NOTIFICATIONS  
For Daily Alerts

ದೇಹದ ಬಿಳಿರಕ್ತ ಕಣಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸರಳ ಟಿಪ್ಸ್

By Arshad
|

ನಮ್ಮ ರಕ್ತ ಕೆಂಪಗಾಗಿದ್ದರೂ ಇದರಲ್ಲಿ ಬಿಳಿರಕ್ತಕಣಗಳೂ (White blood cells (WBCs) ಇವೆ. ಇವುಗಳನ್ನು ಲ್ಯೂಕೋಸೈಟ್ಸ್ ('leukocytes') ಎಂದು ಕರೆಯಲಾಗುತ್ತದೆ. ಇದೇ ಪದವನ್ನು ಆಧರಿಸಿ ರಕ್ತದ ಕ್ಯಾನ್ಸರ್ ಗೆ ಲ್ಯುಕೀಮಿಯಾ ಎಂದು ಹೆಸರು ನೀಡಲಾಗಿದೆ. ಕೆಂಪುರಕ್ತಕಣಗಳು ಅಮ್ಲಜನಕ ಹಾಗೂ ಪೋಷಕಾಂಶಗಳನ್ನು ಸಾಗುವ ಕೆಲಸ ಮಾಡಿದರೆ ಬಿಳಿರಕ್ತಣಗಳ ಕೆಲಸವೆಂದರೆ ದೇಹದ ಮೇಲೆ ಎರಗುವ ಕ್ರಿಮಿಗಳ ವಿರುದ್ಧ ಹೋರಾಡಿ ರೋಗ ಬಾರದಂತೆ ನೋಡಿಕೊಳ್ಳುವುದು.

ಒಂದರ್ಥದಲ್ಲಿ ನಮ್ಮ ಆರೋಗ್ಯದ ಕೋಟೆಯನ್ನು ಸುತ್ತುವರೆದು ಕಾಪಾಡುವ ಸೈನಿಕರಂತೆ. ಇದೊಂದು ನಮ್ಮ ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು ಸತತವಾಗಿ ಹೋರಾಡುತ್ತಿರುವ ಮೂಲಕ ನಮ್ಮ ದೇಹವನ್ನು ನೂರಾರು ಬಗೆಯ ಸೋಂಕುಗಳಿಂದ ರಕ್ಷಿಸುತ್ತಿರುತ್ತಾ ಇರುತ್ತದೆ. ಕೆಂಪುರಕ್ತಕಣಗಳಂತೆಯೇ ಈ ಕಣಗಳೂ ನಮ್ಮ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತವೆ ಹಾಗೂ ರಕ್ತದ ಹರಿವಿನಲ್ಲಿಯೇ ಸದಾ ಸಾಗುತ್ತಿರುತ್ತವೆ. ಬಿಳಿರಕ್ತಕಣಗಳಲ್ಲಿ ಒಟ್ಟು ಬಗೆಗಳಿವೆ, ಅವೆಂದರೆ: ನ್ಯೂಟ್ರೋಫಿಲ್ಸ್, ಲಿಂಫೋಸೈಟ್ಸ್, ಮೋನೋಸೈಟ್ಸ್, ಯೋಸಿನೋಫಿಲ್ಸ್ ಹಾಗೂ ಬೇಸೋಫಿಲ್ಸ್.

how to boost white blood cells in the body in kannada

ಬಿಳಿರಕ್ತಕಣಗಳ ಸಂಖ್ಯೆಯ ಏರಿಳಿತ ಏನನ್ನು ತಿಳಿಸುತ್ತದೆ?

WBC count ಅಥವಾ ಬಿಳಿರಕ್ತಕಣಗಳ ಸಂಖ್ಯೆ ನಮ್ಮ ದೇಹದಲ್ಲಿ ಒಟ್ಟು ಎಷ್ಟಿದೆ ಎಂಬ ಮಾನದಂಡವಾಗಿದೆ. ಸಂಪೂರ್ಣ ರಕ್ತಪರೀಕ್ಷೆಯಲ್ಲಿ ಈ ಅಂಶವನ್ನು ವಿವರಿಸಲಾಗುತ್ತದೆ. ಓರ್ವ ಆರೋಗ್ಯವಂತ ವಯಸ್ಕರದಲ್ಲಿ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 4500 ರಿಂದ 11,000 ರಷ್ಟು ಕಣಗಳಿರಬೇಕು. ಕೆಲವೊಮ್ಮೆ, ಈ ಸಂಖ್ಯೆ ಉತ್ತಮ ಆರೋಗ್ಯವಿದ್ದಾಗಲೂ ಸಾಮಾನ್ಯಕ್ಕಿಂತಲೂ ಕಡಿಮೆ ಇರಬಹುದು. ಏಕೆಂದರೆ ಯಾವುದೋ ಸೋಂಕಿಗೆ ಕಾರಣವಾದ ಕ್ರಿಮಿಗಳನ್ನು ಸದೆಬಡಿಯಬೇಕಾದರೆ ಬಿಳಿರಕ್ತಣಗಳೂ ಕ್ರಿಮಿಯೊಂದಿಗೇ ಅಪಾರ ಸಂಖ್ಯೆಯಲ್ಲಿ ನಷ್ಟ ಹೊಂದುತ್ತವೆ. ಹಾಗಾಗಿ ಹೊಸದಾಗಿ ಈ ಕಣಗಳು ಮತ್ತೊಮ್ಮೆ ಹುಟ್ಟುವವರೆಗೂ ಒಟ್ಟು ಸಂಖ್ಯೆ ಕೊಂಚ ಕಡಿಮೆ ಇರಬಹುದು. ಯಾವುದೋ ಸೋಂಕು ಇಲ್ಲದಿದ್ದಾಗ ಹೆಚ್ಚಿನ ಸಂಖ್ಯೆಯ ಬಿಳಿರಕ್ತಕಣಗಳು ಜೀವಂತವಾಗಿರಬಹುದು. ಹಾಗಾಗಿ ಸರಿಸಾಮಾನ್ಯ ಮಟ್ಟ ಇಷ್ಟೇ ಎಂದು ಹೇಳುವುದು ಕಷ್ಟ.

ಆದರೂ, ಸಾಮಾನ್ಯ ಆರೋಗ್ಯಕ್ಕೆ 3500 WBC count ಗಿಂತಲೂ ಕಡಿಮೆ ಇದ್ದರೆ ಇದು ಮಿತಿಗಿಂತಲೂ ಕಡಿಮೆ ಇದೆ ಎಂದು ಪರಿಗಣಿಸಬಹುದು. ಆದರೆ ಇದು ಸಾವಿರಕ್ಕೂ ಕಡಿಮೆಮಾದರೆ ಮಾತ್ರ ಇದು ಅತ್ಯಂತ ಅಪಾಯಕಾರಿ ಮಟ್ಟವೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಇಷ್ಟು ಕಡಿಮೆ ರಕ್ತಕಣಗಳು ದೇಹದ ಮೇಲೆ ಸದಾ ಧಾಳಿ ಇಡುವ ವೈರಸ್ಸುಗಳನ್ನು ತಡೆಯಲಾರದು ಹಾಗೂ ದೇಹ ಸುಲಭವಾಗಿ ವೈರಸ್ಸುಗಳ ಧಾಳಿಗೆ ಮಣಿದು ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಬಿಳಿ ರಕ್ತ ಕಣ ಹೆಚ್ಚಿಸುವ ಆಹಾರಗಳಿವು!

ಬಿಳಿರಕ್ತಕಣಗಳ ಸಂಖ್ಯೆ ಕಡಿಮೆ ಇರುವ ಸೂಚನೆಗಳು

ಹೆಚ್ಚಿನ ಸಂದರ್ಭದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆ ಇರುವುದು ಗಮನಕ್ಕೇ ಬರುವುದಿಲ್ಲ. ಯಾವಾಗ ಇದರ ಮೂಲಕ ಸೋಂಕು ಉಂಟಾಯಿತೋ, ಅಥವಾ ನಿಮ್ಮ ವೈದ್ಯರು ನಿಯಮಿತವಾಗಿ ನಡೆಸುವ ರಕ್ತಪರೀಕ್ಷೆಯನ್ನು ನಡೆಸಲು ಸಲಹೆ ನೀಡುತ್ತಾರೋ, ಆಗಲೇ ಈ ಅಂಶ ಗಮನಕ್ಕೆ ಬರುತ್ತದೆ. ಬಿಳಿರಕ್ತಕಣಗಳ ಸಂಖ್ಯೆ ಕನಿಷ್ಟ ಅಗತ್ಯಕ್ಕೂ ಕಡಿಮೆ ಇದ್ದು ಇವುಗಳ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಏರದೇ ಹೋದರೆ ನಿಧಾನವಾಗಿ ದೇಹ ಶಿಥಿಲಗೊಳ್ಳುತ್ತಾ ಹೋಗುತ್ತದೆ. ಇದರ ಸೂಚನೆಯನ್ನು ಸುಸ್ತು, ಪೂರ್ಣ ಉಸಿರು ಎಳೆದುಕೊಳ್ಳಲು ಸಾಧ್ಯವಾಗದೇ ಇರುವುದು, ನಿಃಶಕ್ತಿ ಹಾಗೂ ಸತತವಾಗಿ ಸೋಂಕುಗಳು ಎದುರಾಗುತ್ತಿರುವುದು ಮೊದಲಾದವು ನೀಡುತ್ತವೆ.

ಬಿಳಿರಕ್ತಕಣಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಬಗೆಗಳು

ಕಡಿಮೆ ಬಿಳಿರಕ್ತಕಣಗಳ ಸಂಖ್ಯೆಯ ಕಾರಣದಿಂದ ದೇಹ ಹಲವಾರು ಸೋಂಕುಗಳಿಗೆ ಎದುರಾಗಬಹುದು. ಒಂದು ವೇಳೆ ಈಗಾಗಲೇ ಯಾವುದಾದರೂ ಸೋಂಕು ಆವರಿಸಿದ್ದು ದೇಹ ಇದರ ವಿರುದ್ಧ ಹೋರಾಡುತ್ತಿದ್ದರೆ ಈ ಸೋಂಕನ್ನು ಎದುರಿಸುವ ಶಕ್ತಿ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆಯಾಗಿರುವ ಮೂಲಕ ಇನ್ನಷ್ಟು ಕುಸಿಯುತ್ತದೆ. ಆ ಕಾರಣ ನಮ್ಮ ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಸಾಕಷ್ಟು ಹೆಚ್ಚಿರುವಂತೆ ನೋಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಅಗತ್ಯ. ಇದಕ್ಕಾಗಿ ಕೆಲವು ಆಹಾರಗಳು/ವಿಟಮಿನ್ನುಗಳು/ಖನಿಜಗಳನ್ನು ನಿತ್ಯವೂ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಬನ್ನಿ, ಈ ಅಂಶಗಳಿರುವ ಆಹಾರಗಳು ಯಾವುವು ಎಂಬುದನ್ನು ನೋಡೋಣ:

ವಿಟಮಿನ್ ಇ ಮತ್ತು ಸತು ಇರುವ ಬೀಜಗಳು ಹಾಗೂ ಧಾನ್ಯಗಳು

ನಮ್ಮ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಜೀವಕೋಶಗಳು ('killer cells') ಹೆಚ್ಚು ಉತ್ಪಾದನೆಯಾಗಲು ವಿಟಮಿನ್ ಇ ಪ್ರಚೋದನೆ ನೀಡುತ್ತದೆ. ಅಲ್ಲದೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಪ್ರತಿಜೀವಕ (antibodies) ಗಳಾದ ಬಿ-ಜೀವಕೋಶಗಳು (B-cells) ಗಳ ಉತ್ಪತ್ತಿಗೂ ನೆರವಾಗುತ್ತದೆ. ವಿಟಮಿನ್ ಎ ಮಾತ್ರೆಗಳನ್ನು ಹೆಚ್ಚುವರಿ ಪೋಷಕಾಂಶಗಳ ರೂಪದಲ್ಲಿ ಸೇವಿಸಿದರೆ ಇದು ಪ್ರಮಾದಕ್ಕೆ ಕಾರಣವಾಗಬಹುದು. ಹಾಗೂ ಆಗಾಧ ಪ್ರಮಾಣದ ವಿಟಮಿನ್ ಇ ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನೇ ಕುಸಿಯಬಹುದು. ಆದ್ದರಿಂದ ವಿಟಮಿನ್ ಇ ನೈಸರ್ಗಿಕವಾಗಿ ಸಮೃದ್ಧವಾಗಿರುವ ಬೀಜಗಳು ಹಾಗೂ ಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಸೋಂಕಿನ ವಿರುದ್ಧ ಹೋರಾಡುವ ಬಿಳಿರಕ್ತಕಣಗಳ ಉತ್ಪತ್ತಿಗೆ ಸತು ಸಹಾ ಅಗತ್ಯವಾದ ಪೋಷಕಾಂಶವಾಗಿದೆ. ಕುಂಬಳ ಬೀಜ, ಕಲ್ಲಂಗಡಿ ಬೀಜ, ಸ್ಕ್ವಾಶ್ ಬೀಜ, ಕಡ್ಲೆ ಕಾಳು ಹಾಗೂ ಬೆಳ್ಳುಳ್ಳಿಗಳಲ್ಲಿ ಹೆಚ್ಚಿನ ಪ್ರಮಾನದ ಸತು ಇರುತ್ತದೆ. ಒಂದು ವೇಳೆ ನಿಮ್ಮ ದೇಹಕ್ಕೆ ಅಗತ್ಯವಿದ್ದಷ್ಟು ಸತು ಮತ್ತು ವಿಟಮಿನ್ ಇ ಇಲ್ಲದಿದ್ದರೆ ರಕ್ತಪರೀಕ್ಷೆಯಲ್ಲಿ ತಿಳಿದುಬಂದ ಕೊರತೆಯನ್ನು ಅನುಸರಿಸಿ ವೈದ್ಯರು ಸೂಚಿಸುವ ಹೆಚ್ಚುವರಿ ವಿಟಮಿನ್ ಇ ಮತ್ತು ಸತುವಿನ ಅಂಶವಿರುವ ಮಾತ್ರೆಗಳನ್ನು ಸೇವಿಸಬೇಕು.

ಹಸಿರು ಟೀ (ಆಂಟಿ ಆಕ್ಸಿಡೆಂಟುಗಳು)

ಹಸಿರು ಟೀಯಲ್ಲಿ ಸಮೃದ್ದವಾದ ಆಂಟಿ ಆಕ್ಸಿಡೆಂಟ್ ಗುಣವಿದೆ ಹಾಗೂ ಕಲ್ಮಶಗಳನ್ನು ನಿವಾರಿಸುವ ಗುಣದಿಂದಾಗಿ ಈ ಟೀಯನ್ನು 'ವಿರೇಚಕ ಟೀ' ಎಂದು ಕರೆಯಲಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ ಹಾಗೂ ಹಲವು ಬಗೆಯ ಸೋಂಕುಗಳಿಂದ ರಕ್ಷಿಸುತ್ತದೆ. ಅಲ್ಲದೇ ಹಸಿರು ಟೀ ಸೇವನೆಯಿಂದ ಬಿಳಿರಕ್ತಕಣಗಳ ಸಂಖ್ಯೆಯೂ ಹೆಚ್ಚುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.

ಹಣ್ಣು ಮತ್ತು ತರಕಾರಿಗಳು (ವಿಟಮಿನ್ ಎ ಮತ್ತು ವಿಟಮಿನ್ ಸಿ)

ದೇಹದಲ್ಲಿ ಬಿಳಿರಕ್ತಕಣಗಳು ಹಾಗೂ ಪ್ರತಿಜೀವಕಗಳನ್ನು ಹೆಚ್ಚು ಉತ್ಪಾದಿಸುವ ಮೂಲಕ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವಿವಿಧ ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ವಿರುದ್ದ ಹೋರಾಡುತ್ತದೆ. ಪ್ರತಿದಿನ ಉತ್ತಮ ಆರೋಗ್ಯಕ್ಕಾಗಿ ನಮಗೆ ಸುಮಾರು ಇನ್ನೂರು ಮಿಲಿಗ್ರಾಂ ವಿಟಮಿನ್ ಸಿ ಬೇಕು. ಈ ಪ್ರಮಾಣವನ್ನು ಪಡೆಯಲು ಸಾಕಷ್ಟು ವಿಟಮಿನ್ ಸಿ ಅಂಶವಿರುವ ಹಣ್ಣುಗಳಾದ ಕಿತ್ತಳೆ, ಪೇರಳೆ, ಹಸಿರು ಕಾಳುಮೆಣಸು, ಪೊಪ್ಪಾಯಿ, ಸ್ಟ್ರಾಬೆರಿ ಮೊದಲಾದವುಗಳನ್ನು ಸೇವಿಸಬೇಕು.

ಅಲ್ಲದೇ ವಿಟಮಿನ್ ಎ ಸಹಾ ಬಿಳಿರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ಹಲರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕ್ಯಾರೆಟ್, ಸಿಹಿಗೆಣಸು, ಪಾಲಕ್, ಬ್ರೋಕೋಲಿ ಮೊದಲಾದ ತರಕಾರಿಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿರುತ್ತದೆ ಹಾಗೂ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆ ಇರುವ ವ್ಯಕ್ತಿಗಳು ಈ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಮೀನು, ಅಗಸೆ ಎಣ್ಣೆ (ಒಮೆಗಾ ೩ ಕೊಬ್ಬಿನ ಆಮ್ಲಗಳು)

ಒಮೆಗಾ ೩ ಕೊಬ್ಬಿನ ಆಮ್ಲಗಳು ಸಾಲ್ಮನ್ ಮತ್ತು ಬಂಗಡೆ ಮೀನುಗಳಲ್ಲಿ ಸಮೃದ್ದವಾಗಿರುತ್ತದೆ. ಅಗಸೆ ಎಣ್ಣೆಯಲ್ಲಿಯೂ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಈ ಆಮ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹ ಯಾವುದೋ ಸೋಂಕಿಗೆ ಅತಿಯಾಗಿಯೇ ಸ್ಪಂದಿಸುವುದರಿಂದ ರಕ್ಷಿಸುತ್ತದೆ. ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಿತ್ಯವೂ ಒಂದು ಚಿಕ್ಕ ಚಮಚದಷ್ಟು ಅಗಸೆ ಎಣ್ಣೆಯನ್ನು ಸೇವಿಸಿದ ಮಕ್ಕಳು ಇತರ ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಶೀತ ಮತ್ತು ಉಸಿರಾಟದ ಸೋಂಕಿಗೆ ಒಳಗಾಗಿದ್ದಾರೆ.

ಸೋಯಾ, ಅಕ್ಕಿಯ ಪೇಯಗಳು, ಡೈರಿ ಉತ್ಪನ್ನಗಳು (ವಿಟಮಿನ್ ಬಿ12)

ಕಡಿಮೆ ಬಿಳಿರಕ್ತಕಣಗಳಿಗೆ ಕೆಲವಾರು ಕಾರಣಗಳಿವೆ. ಇದರ ಹೊರತಾಗಿ ಒಂದು ಬಗೆಯ ವಿಟಮಿನ್ ಕೊರತೆಯಿಂದಲೂ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದನ್ನು ಗಮನಿಸಲಾಗಿದೆ. Office of Dietary Supplements ಎಂಬ ಮಾಧ್ಯಮದ ಪ್ರಕಾರ ಬಿಳಿರಕ್ತಗಳ ಸಂಖ್ಯೆಯ ವೃದ್ದಿಗೆ ವಿಟಮಿನ್ B-6 ಎಂಬ ಪೋಷಕಾಂಶವನ್ನು ಬಳಸಿಕೊಳ್ಳುತ್ತದೆ ಹಾಗೂ ವಿಟಮಿನ್ ಬಿ12 ಅಂಶ ಕಡಿಮೆಯಾದರೆ ಬಿಳಿರಕ್ತಕಣಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಹಾಲು, ಹಾಲಿನ ಉತ್ಪನ್ನಗಳು, ಚೀಸ್, ಮೃದ್ವಂಗಿ, ಮೊಟ್ಟೆಗಳು, ಕೋಳಿಮಾಂಸ, ಸೋಯಾ ಹಾಗೂ ಅಕ್ಕಿಯಿಂದ ತಯಾರಾದ ಪೇಯಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ12 ಲಭಿಸುತ್ತದೆ.

ಒಂದು ವೇಳೆ ನಿಮ್ಮ ಆಹಾರದಲ್ಲಿ ಈ ಅಂಶ ಕಡಿಮೆ ಇರುವ ಕಾರಣದಿಂದಾಗಿ ಬಿಳಿರಕ್ತಕಣಗಳ ಸಂಖ್ಯೆಯೂ ಕಡಿಮೆಯಾಗಿದ್ದರೆ ವೈದ್ಯರು ಹೆಚ್ಚುವರಿ ವಿಟಮಿನ್ ಬಿ12 ಮತ್ತಿ ಫೋಲೇಟ್ ಪ್ರಮಾಣ ಹೆಚ್ಚಿರುವ ಮಾತ್ರೆಗಳನ್ನು ಶಿಫಾರಸ್ಸು ಮಾಡಬಹುದು. ಇವೆರಡೂ ಅಂಶಗಳು ದೇಹದಲ್ಲಿ ಹೆಚ್ಚಿನ ಸಂಖ್ಯೆಯ ಬಿಳಿರಕ್ತಕಣಗಳ ಉತ್ಪಾದನೆಗೆ ನೆರವಾಗುತ್ತವೆ. ಆದರೆ ಈ ಮಾತ್ರೆಗಳ ಪ್ರಮಾಣ ಹಾಗೂ ಸೇವನೆಯ ಸಮಯವನ್ನು ನೀವೇ ನಿರ್ಧರಿಸಬಾರದು, ಬದಲಿಗೆ ರಕ್ತಪರೀಕ್ಷೆಯ ಫಲಿತಾಂಶವನ್ನು ಅನುಸರಿಸಿ ವೈದ್ಯರು ಸಲಹೆ ಮಾಡಿದ ಮಾತ್ರೆಗಳನ್ನು, ಸೂಚಿಸಿದ ಪ್ರಮಾಣದಷ್ಟು ಮಾತ್ರವೇ ಸೇವಿಸಬೇಕು.

English summary

Here's How You Can Naturally Boost The WBC Count In Your Body

White blood cells (WBCs) help the body by protecting it from disease-causing pathogens like viruses and bacteria. Less count of WBC makes us more prone to infections and ailments. You can naturally increase the count of WBCs in your body by including nutrients like Vitamins E, C, A, B12, Omega-3 Fatty Acids, Zinc and antioxidants in your diet.
X
Desktop Bottom Promotion