Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಶ್ವಾಸಕೋಶದ ಆರೋಗ್ಯಕ್ಕಾಗಿ 12 ಆರೋಗ್ಯಕಾರಿ ಆಹಾರಗಳು
ಶ್ವಾಸಕೋಶವು ದೇಹದ ಬಹುಮುಖ್ಯ ಅಂಗವಾಗಿದ್ದು, ದೇಹದ ಚಟುವಟಿಕೆಯು ಉತ್ತಮ ರೀತಿಯಲ್ಲಿ ನಡೆಯಲು ಸಹಾಯ ಮಾಡುವ ಪ್ರಮುಖವಾದ ದೇಹದ ಒಂದು ಭಾಗವಾಗಿದೆ. ಹಾಗಾಗಿ, ಈ ಲೇಖನದಲ್ಲಿ ನಾವು ಶ್ವಾಸಕೋಶದ ಆರೋಗ್ಯಕ್ಕಾಗಿ ನೀವು ಯಾವ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸುವಂತೆ, ಸುಮಾರು 235 ಮಿಲಿಯನ್ ಮಂದಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಅಧಿಕವಾಗುತ್ತಿದೆ ಮತ್ತು ಈ ಹೊಗೆಯಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗುತ್ತಿದೆ.
ಹಾಗಾಗಿ, ಶ್ವಾಸಕೋಶದ ಈ ಮಾಲಿನ್ಯದ ಗಾಳಿಯಿಂದಾಗಿ ತನ್ನ ಚಟುವಟಿಕೆ ಮಾಡಲು ಅಶಕ್ತಗೊಳ್ಳುತ್ತಿದೆ. ಅದೇ ಕಾರಣದಿಂದಾಗಿ ಶ್ವಾಸಕೋಶದ ಸಮಸ್ಯೆಗಳ ಸಂಖ್ಯೆಯು ಗಣನೀಯವಾಗಿ ಏರುತ್ತಿದೆ ಉದಾಹರಣೆಗೆ ಬ್ರಾಂಕೈಟೀಸ್, ಅಸ್ತಮಾ, ನ್ಯುಮೋನಿಯಾ ಮತ್ತು ಸಿಸ್ಟಿಕ್ ಫೈಬ್ರೋಸಿಸ್ ಹೀಗೆ ಹಲವು ಹೆಸರಿನ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಹಾಗಾಗಿ, ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ನಾವು ಈ ಕೆಳಗೆ ತಿಳಿಸುವ ಆಹಾರಗಳನ್ನು ಸೇವಿಸಿದರೆ ನಿಮ್ಮ ಶ್ವಾಸಕೋಶದ ಜೋಡಿಗಳು ಉತ್ತಮವಾಗಿರಲು ಸಾಧ್ಯವಾಗುತ್ತದೆ. ಆರೋಗ್ಯಕಾರಿಯಾದ ಶ್ವಾಸಕೋಶವನ್ನು ಹೊಂದಲು ಯಾವ ಆಹಾರ ಸೇವಿಸಬೇಕು ಎಂದು ತಿಳಿದುಕೊಳ್ಳಬೇಕಾದರೆ, ಈ ಲೇಖನದ ಮುಂದಿನ ಭಾಗವನ್ನು ನೀವು ತಪ್ಪದೇ ಓದಲೇಬೇಕು.
1. ಸೇಬು ಹಣ್ಣು
2. ಸಾಲ್ಮನ್
3. ಆಲಿವ್ ಎಣ್ಣೆ
4. ಗ್ರೀನ್ ಟೀ
5. ಕಾಫಿ
6. ಬೀಜಗಳು
7. ಕೇಸರಿ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು
8. ಧಾನ್ಯಗಳು
9. ಬೆಳ್ಳುಳ್ಳಿ
10. ಶುಂಠಿ
11. ಕಾಳುಮೆಣಸು
12. ಬ್ರಕೋಲಿ
1. ಸೇಬು ಹಣ್ಣುಗಳು
ಅಧ್ಯಯನವೊಂದು ತಿಳಿಸುವಂತೆ, ಯಾವ ವ್ಯಕ್ತಿಗಳು ಪ್ರತಿದಿನ ಒಂದು ಲೋಟದಷ್ಟು ಸೇಬುಹಣ್ಣಿ ಜ್ಯೂಸ್ ಸೇವಿಸುತ್ತಾರೋ ಅವರಲ್ಲಿ ಉಬ್ಬಸ ಬರುವ ಸಮಸ್ಯೆಯು ಬಹಳವಾಗಿ ಕಡಿಮೆ ಇರುತ್ತದೆಯಂತೆ. ಇನ್ನೊಂದು ಪ್ರಮುಖ ಅಧ್ಯಯನವು ಯಾವ ಗರ್ಭಿಣಿ ಸ್ತ್ರೀಯರು ಪ್ರತಿದಿನ ಆಪಲ್ ಸೇವಿಸುತ್ತಾರೋ ಅವರಿಗೆ ಅಸ್ತಮಾ ರೋಗದಿಂದ ಬಳಲುವ ಮಕ್ಕಳು ಹುಟ್ಟುವುದಿಲ್ಲ ಎಂಬ ಮಾಹಿತಿಯನ್ನು ನೀಡಿದೆ .ಇದು ಯಾಕೆಂದರೆ ಸೇಬು ಹಣ್ಣಿನಲ್ಲಿ ಫೆನೋಲಿಕ್ ಎಂಬ ಅಂಶವಿರುತ್ತದೆ ಮತ್ತು ಫ್ಲೆವನಾಯ್ಡ್ಸ್ ಗಳು ಗಾಳಿ ಹೋಗುವ ಕೊಳವೆಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ತಡೆಯುತ್ತದೆ ಅಥವಾ ಆಗಲು ಬಿಡುವುದೇ ಇಲ್ಲ.
2. ಸಾಲ್ಮನ್
ಸಾಲ್ಮನ್ ನಲ್ಲಿ ಒಮೆಗಾ- 3 ಫ್ಯಾಟಿ ಆಸಿಡ್ ಗಳಿದ್ದು ಇದು ಶ್ವಾಸಕೋಶದ ಉರಿಯೂತದ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಸೋಂಕು ಉಂಟುಮಾಡಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಇದು ಸೆಟಸಾಡುತ್ತದೆ. ಸಾಲ್ಮನ್ ಮಾತ್ರವಲ್ಲದೆ,ಮೆಕೆರೆಲ್, ಟ್ರೌಟ್, ಸಾರ್ಡೀನ್ಗಳು, ಮತ್ತು ಇತರೆ ಹಲವು ಮೀನುಗಳು ಶ್ವಾಸಕೋಶದ ಆರೋಗ್ಯಕ್ಕೆ ಹಿತವಾದುದ್ದೇ ಆಗಿದೆ.
3. ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಮೋನೋಸ್ಯಾಚುರೇಡೆಟ್ ಫ್ಯಾಟ್ ಇರುತ್ತದೆ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ ಗಳು ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ ಮತ್ತು ಕೆನೋಲಾ ಎಣ್ಣೆಯಲ್ಲಿ ಇರುತ್ತದೆ ಮತ್ತು ಇವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಬಹಳವಾಗಿ ನೆರವಾಗುತ್ತದೆ.ವಾಯು ಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳಾದ ರಕ್ತದೊತ್ತಡ ಮತ್ತು ರಕ್ತದ ನಾಳಗಳಲ್ಲಾಗುವ ಸಮಸ್ಯೆಗಳ ವಿರುದ್ದ ಹೋರಾಡುವ ತಾಕತ್ತನ್ನು ಆಲಿವ್ ಎಣ್ಣೆಯು ಹೊಂದಿರುವುದರಿಂದಾಗಿ, ಇದು ಈ ಸಮಸ್ಯೆಗಳು ಉಧ್ಭವವಾಗುವುದನ್ನು ತಡೆಯುತ್ತದೆ. ಈ ಸಮಸ್ಯೆಯಿಂದಾಗಿ ಹೃದಯಕ್ಕೆ ಮತ್ತು ಶ್ವಾಸಕೋಶ ಕ್ಕೆ ಆಮ್ಲಜನಕ ಪೂರೈಕೆ ಮಾಡುವುದನ್ನು ತಡೆಯಲಾಗುತ್ತದೆ.
4. ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಗಳ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ದೇಹವನ್ನು ಶಾಂತಗೊಳಿಸಲು ನೆರವಾಗುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ, ನೋವು ನಿವಾರಕ ಶಕ್ತಿಯನ್ನು ಹೊಂದಿದೆ. ಉತ್ಕರ್ಷಣ ನಿರೋಧಕ ಕ್ವೆರ್ಸೆಟಿನ್ ಅಂಶವು ನೈಸರ್ಗಿಕ ಆಂಟಿಹಿಸ್ಟಾಮೈನ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಅಲರ್ಜಿಯ ರೋಗಲಕ್ಷಣಗಳನ್ನು ಉಂಟುಮಾಡುವ ಹಿಸ್ಟಾಮೈನ್ ಬಿಡುಗಡೆಯನ್ನು ನಿಧಾನವಾಗಿಸುತ್ತದೆ.
5. ಕಾಫಿ
ನಿಮಗೆ ಗೊತ್ತಾ ಒಂದು ಲೋಟ ಕಾಫಿ ಸೇವನೆಯು ನಿಮ್ಮ ಅಸ್ತಮಾ ಸಮಸ್ಯೆಯನ್ನು ತಹಬದಿಗೆ ತರುತ್ತದೆ ಎಂಬ ವಿಷಯ? ಕೆಫೀನ್ ಅಂಶವು ಬ್ರೋಕೈಯಲ್ಟರ್ ನಂತೆ ವರ್ತಿಸುತ್ತದೆ, ಅಂದರೆ ಉಸಿರಾಟದ ಸ್ನಾಯುವಿನ ಆಯಾಸವನ್ನು ಇದು ತಡೆಯುತ್ತದೆ ಮತ್ತು ಅಸ್ತಮಾಟಿಕ್ ನಲ್ಲಿ ಬಿಗಿಗೊಳ್ಳುವ ಗಾಳಿ ಹೋಗುವ ಮಾರ್ಗವು ಬಿಗಿಗೊಂಡಿದ್ದರೆ ಅದನ್ನು ತೆರೆಯುವ ಕೆಲಸವನ್ನು ಮಾಡುತ್ತದೆ. ಅಧ್ಯಯನವು ತಿಳಿಸುವಂತೆ, ಒಂದು ಲೋಟ ಕಾಫಿಯನ್ನು ಬೆಳಗಿನ ಮುಂಜಾವಲ್ಲಿ ಸೇವನೆ ಮಾಡುವುದರಿಂದಾಗಿ ನಿಮ್ಮ ಉಸಿರಾಟ ಪ್ರಕ್ರಿಯೆಯು ಉತ್ತಮಗೊಳ್ಳುತ್ತದೆ ಮತ್ತು ಶ್ವಾಸಕೋಶದ ಕಾರ್ಯಚಟುವಟಿಕೆಯನ್ನು ಉತ್ತಮ ರೀತಿಯಲ್ಲಿ ಇಡಲು ನೆರವಿಗೆ ಬರುತ್ತದೆ.
6. ಬೀಜಗಳು
ಬೀಜಗಳು ಮತ್ತೊಂದು ಶ್ವಾಸಕೋಶದ ಆರೋಗ್ಯಕ್ಕಾಗಿ ಇರುವ ಅಧ್ಬುತ ಆಹಾರವಾಗಿದೆ. ಕುಂಬಳ ಬೀಜಗಳು, ಫ್ಲಾಕ್ಸ್ ಸೀಡ್, ಮತ್ತು ಸೂರ್ಯಕಾಂತಿ ಬೀಜಗಳು ನಿಮ್ಮ ದೇಹಕ್ಕೆ ಹಲವು ರೀತಿಯ ಮೆಗ್ನೆನಿಷಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಇವು ಅಸ್ತಮಾ ಬರದಂತೆ ತಡೆಯುತ್ತದೆ. ಮೆಗ್ನೇಷಿಯಂನಿಂದಾಗಿ ನಿಮ್ಮ ಗಾಳಿಹೋಗುವ ಜಾಗಗಳು ರಿಲ್ಯಾಕ್ಸ್ ಆಗುತ್ತದೆ ಮತ್ತು ಉರಿಯೂತ ಸಮಸ್ಯೆ ಬರದಂತೆ ತಡೆಯುತ್ತದೆ ಹಾಗಾಗಿ ನಿಮ್ಮ ಉಸಿರಾಟ ಪ್ರಕ್ರಿಯೆಯು ಬಹಳ ಸರಾಗವಾಗಿ ನಡೆಯುತ್ತದೆ. ಹಾಗಾಗಿ ಪ್ರತಿದಿನ ಒಂದು ಮುಷ್ಟಿಯಷ್ಟು ಬೀಜಗಳನ್ನು ಹಾಗೆಯೇ ಸೇವಿಸಿ ಇಲ್ಲವೇ ಸ್ಮೂತಿ ತಯಾರಿಸಿಕೊಂಡು ಬಳಸಿ
7. ಕೇಸರಿ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು
ಹಣ್ಣುಗಳು ಮತ್ತು ತರಕಾರಿಗಳು ಯಾವುದು ಕೇಸರಿ ಬಣ್ಣದಲ್ಲಿರುತ್ತವೆಯೋ ಅವುಗಳು ಅಂದರೆ ಪಪ್ಪಾಯ, ಚೀನಿಗುಂಬಳ ಇಲ್ಲವೇ ಸಿಹಿಗುಂಬಳ ಮತ್ತು ಕಿತ್ತಳೆ ಹಣ್ಣಗಳನ್ನುಸೇವಿಸಿ. ಇವುಗಳಲ್ಲಿ ಶ್ವಾಸಕೋಶಕ್ಕೆ ಅಗತ್ಯವಿರುವ ಆಂಟಿ-ಆಕ್ಸಿಡೆಂಟ್ ಗಳಿರುತ್ತದೆ ಉದಾಹರಣಗೆ ವಿಟಮಿನ್ ಸಿ ಅಂಶವಿರುತ್ತದೆ ಇದು ಸೋಂಕಿನ ವಿರುದ್ಧ ಮತ್ತು ಶ್ವಾಸಕೋಶದ ಉರಿಯೂತದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
8. ಧಾನ್ಯಗಳು
ಕಂದು ಅಕ್ಕಿ ಮತ್ತು ಸಂಪೂರ್ಣ ಗೋಧಿ ಮುಂತಾದ ಧಾನ್ಯದ ಆಹಾರಗಳನ್ನು ಹೆಚ್ಚೆಚ್ಚು ಬಳಕೆ ಮಾಡಿ. ಮಫಿನ್ಗಳು, ಪಾಸ್ತಾ, ಅಕ್ಕಿ, ಬಿಳಿ ಬ್ರೆಡ್ ಮುಂತಾದ ಸರಳವಾದ ಕಾರ್ಬೋಹೈಡ್ರೇಟ್ ಗಳಿರುವ ಆಹಾರದ ಕ್ರಮವು ಕಾರ್ಬನ್ ಡೈಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ತರುತ್ತದೆ.
9. ಬೆಳ್ಳುಳ್ಳಿ
ಬೆಳ್ಳುಳ್ಳಿಯು ಪ್ಲೆವನಾಯ್ಡ್ ಅಂಶಗಳನ್ನು ಹೊಂದಿದೆ ಮತ್ತು ಇದು ಗ್ಲುಟಾಥಿಯೋನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಜೀವಾಣು ಮತ್ತು ಕಾರ್ಸಿನೋಜೆನ್ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ಶ್ವಾಸಕೋಶಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಒಂದು ಅಧ್ಯಯನವು ತಿಳಿಸುವಂತೆ, ಯಾವ ವ್ಯಕ್ತಿಗಳು ವಾರಕ್ಕೆ ಎರಡು ಬಾರಿ ಮೂರು ಎಸಳು ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತಾರೋ ಅವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ 44 ಶೇಕಡಾ ಕಡಿಮೆ ಇರುತ್ತದೆಯಂತೆ.
10. ಶುಂಠಿ
ಶುಂಠಿಯಲ್ಲಿ ಆಂಟಿ-ಇನ್ಫ್ಲಮೇಟರಿ ಗುಣಗಳಿದ್ದು ಅದು ಉರಿಯೂತದಂತ ಸಮಸ್ಯೆಯನ್ನು ದೇಹದಿಂದ ನಿವಾರಿಸುತ್ತದೆ.ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಮತ್ತು ಶ್ವಾಸಕೋಶದಿಂದ ಮಾಲಿನ್ಯಕಾರಕಗಳ ನಿರ್ಮೂಲನವನ್ನು ಉತ್ತೇಜಿಸುತ್ತದೆ. ಈ ಮಸಾಲೆಗೆ ಬಳಸುವ ಪದಾರ್ಥವು ಗಾಳಿ ಮಾರ್ಗಗಳಲ್ಲಿ ಸಂಚಾರ ಸುಧಾರಣೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸಕೋಶಗಳಿಗೆ ಪರಿಚಲನೆ ಸುಧಾರಿಸುತ್ತದೆ, ಇದರಿಂದಾಗಿ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ.
11. ಕೇನ್ ಕಾಳುಮೆಣಸು
ಕೇನ್ ಕಾಳುಮೆಣಸು ಕ್ಯಾಪ್ಸೈಸಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಮೇಲ್ಬಾಗ ಮತ್ತು ಕೆಳಭಾಗದ ಉಸಿರಾಟದ ಪ್ರಕ್ರಿಯೆಯಲ್ಲಿ ಲೋಳೆಯ ಪೊರೆಯನ್ನು ರಕ್ಷಿಸುತ್ತದೆ. ಆದ್ದರಿಂದ ಅಡುಗೆ ಮಾಡುವಾಗ ನಿಮ್ಮ ಊಟದಲ್ಲಿ ಯಾವಾಗಲೂ ಕೇನ್ ಪೆಪ್ಪರ್ ನ್ನು ಬಳಕೆ ಮಾಡಿ ಮತ್ತು ಇದರಿಂದ ಅಸ್ತಮಾ ಕಾಯಿಲೆಯ ಗುಣಲಕ್ಷಣಗಳಿಂದ ದೂರವಿರಲು ಸಾಧ್ಯವಿದೆ.
12. ಬ್ರಕೋಲಿ
ಬ್ರಕೋಲಿಯಲ್ಲಿ ವಿಟಮಿನ್ ಸಿ, ಫೋಲೆಟ್, ಕೆರೋಟನಾಯ್ಡ್ಸ್, ಮತ್ತು ಫೈಟೋಕೆಮಿಕಲ್ ಅಂಶಗಳು ಅಧಿಕವಾಗಿದ್ದು, ಇವು ಶ್ವಾಸಕೋಶದಲ್ಲಿರುವ ಅನಗತ್ಯ ಅಂಶಗಳ ವಿರುದ್ಧ ಸೆಣಸಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹಸಿರು ತರಕಾರಿಯಲ್ಲಿ ಎಲ್- ಸಲ್ಫೋರಾಫಾನ್ ಎಂಬ ಸಕ್ರಿಯ ಸಂಯುಕ್ತದ ಅಂಶವನ್ನು ಹೊಂದಿದ್ದು, ಇದು ಶ್ವಾಸಕೋಶದ ಕಾಯಿಲೆಗಳನ್ನು ಉಂಟುಮಾಡುವ ಉರಿಯೂತನ ಜೀನ್ಸ್ ಗಳ ಮೇಲಿನ ಜೀವಕೋಶಗಳ ಮೇಲೆ ತನ್ನ ಪ್ರಭಾವವನ್ನು ಬೀರಿ, ಒಟ್ಟಾರೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಿಗೆ ಬರುತ್ತದೆ.