For Quick Alerts
ALLOW NOTIFICATIONS  
For Daily Alerts

ಬಾಸ್ಮತಿ ಅಕ್ಕಿಯ ಅನ್ನ-ಹೆಸರುಬೇಳೆ ಸಾರ್, ಆರೋಗ್ಯಕ್ಕೆ ಬಹಳ ಒಳ್ಳೆಯದು..

By Arshad
|

ಬಾಸ್ಮತಿ ಅಕ್ಕಿ ಮತ್ತು ಹೆಸರುಬೇಳೆಯನ್ನು ಜೊತೆಯಾಗಿಸಿ ತಯಾರಿಸಿದ ಖಾದ್ಯ ಭಾರತ ಮತ್ತು ಮದ್ಯಪ್ರಾಚ್ಯ ದೇಶಗಳಲ್ಲಿ ಒಂದು ಸಾಂಪ್ರಾದಾಯಿಕ ಮತ್ತು ವ್ಯಾಪಕವಾಗಿ ಸೇವಿಸಲ್ಪಡುವ ಖಾದ್ಯವಾಗಿದೆ. ಹೆಸರು ಬೇಳೆಯಿಂದ ಸೂಪ್, ಸಾರು ಮೊದಲಾದ ದ್ರವರೂಪದ ಖಾದ್ಯಗಳನ್ನು ತಯಾರಿಸಿದರೆ ನೀಳವಾದ ಬಾಸ್ಮತಿ ಅಕ್ಕಿಯಿಂದ ಬಿರಿಯಾನಿ, ಪಲಾವ್ ಮತ್ತು ಇತರ ಅನ್ನ ಆಧಾರಿತ ಖಾದ್ಯಗಳನ್ನೂ ಕೆಲವು ಸಿಹಿಪದಾರ್ಥಗಳನ್ನೂ ತಯಾರಿಸಲಾಗುತ್ತದೆ. ಆದರೆ ಇವೆರಡೂ ಜೊತೆಗೂಡಿದ ಆಹಾರವನ್ನು ತಯಾರಿಸಿದಾಗ ಇದೊಂದು ಅತಿ ಕಡಿಮೆ ಕೊಬ್ಬಿನ, ಅತಿ ಹೆಚ್ಚು ಪ್ರೋಟೀನ್ ಮತ್ತು ಕರಗುವ ನಾರು ಹೊಂದಿರುವ ಅದ್ಭುತ ಖಾದ್ಯ ದೊರಕುತ್ತದೆ.

ಹೆಸರು ಬೇಳೆಯಲ್ಲಿ ಯಾವ ಪೋಷಕಾಂಶಗಳಿವೆ?

ಹೆಸರು ಬೇಳೆಯಲ್ಲಿ ಹೆಚ್ಚಿನ ಪ್ರೋಟೀನುಗಳು ಮತ್ತು ಕಡಿಮೆ ಕಾರ್ಬೋಹೈಡ್ರೇಟುಗಳಿವೆ. ಸುಮಾರು ನೂರು ಗ್ರಾಂ ಹೆಸರುಬೇಳೆಯಲ್ಲಿ 351 ಕ್ಯಾಲೋರಿಗಳೂ, 1.2 ಗ್ರಾಂ ಒಟ್ಟು ಕೊಬ್ಬು, 28 ಮಿಲಿಗ್ರಾಂ ಸೋಡಿಯಂ, 12 ಗ್ರಾಂ ಕರಗುವ ನಾರು, 3 ಗ್ರಾಂ ಸಕ್ಕರೆ ಮತ್ತು 25 ಗ್ರಾಂ ಪ್ರೋಟೀನ್ ಇವೆ. ಇದರ ಜೊತೆಗೇ ಇತರ ಅವಶ್ಯಕ ವಿಟಮಿನ್ನುಗಳು ಮತ್ತು ಖನಿಜಗಳೂ ಇವೆ.

basmati rice benefits

ಬಾಸ್ಮತಿ ಅಕ್ಕಿಯಲ್ಲಿ ಯಾವ ಪೋಷಕಾಂಶಗಳಿವೆ?

ಬಾಸ್ಮತಿ ಅಕ್ಕಿ ಎರಡು ಬಗೆಯಲ್ಲಿ ದೊರಕುತ್ತವೆ. ಅವೆಂದರೆ ಬಿಳಿ ಮತ್ತು ಕಂದು ಅಕ್ಕಿ. ಬಿಳಿ ಅಕ್ಕಿಗಿಂತಲೂ ಕಂದು ಅಕ್ಕಿಯಲ್ಲಿ ಹೆಚ್ಚಿನ ಸ್ವಾದ ಮತ್ತು ಹೆಚ್ಚಿನ ಕರಗದ ನಾರು ಇರುತ್ತದೆ. ಈ ಅಕ್ಕಿಯಲ್ಲಿ ಹೆಚ್ಚಿನ ಕರಗದ ನಾರು ಮತ್ತು ಕಡಿಮೆ ಕೊಬ್ಬು ಇದೆ. ನೂರು ಗ್ರಾಂ ಅಕ್ಕಿಯಲ್ಲಿ 349 ಕ್ಯಾಲೋರಿಗಳೂ, 8.1 ಗ್ರಾಂ ಪ್ರೋಟೀನ್, 77.1 ಗ್ರಾಂ ಕಾರ್ಬೋಹೈಡ್ರೇಟುಗಳು, ಕೇವಲ 0.6 ಗ್ರಾಂ ಕೊಬ್ಬು ಮತ್ತು 2.2 ಗ್ರಾಂ ಕರಗದ ನಾರು ಇದೆ.

ಹೆಸರುಬೇಳೆ ಮತ್ತು ಬಾಸ್ಮತಿ ಅಕ್ಕಿಯ ಸೇವನೆಯಿಂದ ಯಾವ ಬಗೆಯ ಆರೋಗ್ಯಕರ ಪ್ರಯೋಜನಗಳಿವೆ?

1. ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.
2. ತೂಕ ಇಳಿಸಲು ನೆರವಾಗುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.
3. ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
4. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
5. ರಕ್ತಹೀನತೆಯಿಂದ ರಕ್ಷಿಸುತ್ತದೆ.
6. ಕೂದಲ ಮತ್ತು ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

1. ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

1. ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

ನಮ್ಮ ದೇಹಕ್ಕೆ ಆಗಮಿಸುವ ಪ್ರೋಟೀನುಗಳನ್ನು ಸಂಸ್ಕರಿಸಲು ಸುಮಾರು ಇಪ್ಪತ್ತು ಬಗೆಯ ಅಮೈನೋ ಆಮ್ಲಗಳನ್ನು ನಮ್ಮ ದೇಹ ಬಳಸಿಕೊಳ್ಳುತ್ತದೆ. ಆದರೆ ಇವುಗಳಲ್ಲಿ ಒಂಭತ್ತು ಬಗೆಯ ಅಮೈನೋ ಆಮ್ಲಗಳನ್ನು ನಮ್ಮ ದೇಹ ಉತ್ಪಾದಿಸಲು ಅಸಮರ್ಥವಾಗಿದೆ. ಇವುಗಳನ್ನು ಸಸ್ಯಜನ್ಯ ಆಹಾರಗಳಿಂದಲೇ ದೇಹ ಪಡೆಯಬೇಕಾಗುತ್ತದೆ. ದ್ವಿದಳಧಾನ್ಯಗಳು ಮತ್ತು ಏಕದಳಧಾನ್ಯಗಗಳಲ್ಲಿ ಲೈಸೀನ್ ಎಂಬ ಅಮೈನೋ ಆಮ್ಲವಿದೆ ಹಾಗೂ ಬಾಸ್ಮತಿ ಅಕ್ಕಿಯಲ್ಲಿ ಸಿಸ್ಟೈನ್ ಮತ್ತು ಮೀಥಿಯೋನೈನ್ ಎಂಬ ಗಂಧಕ ಆಧಾರಿತ ಅಮೈನೋ ಆಮ್ಲಗಳಿವೆ. ಹಾಗಾಗಿ, ಇವೆರಡನ್ನೂ ಬೆರೆಸಿದ ಖಾದ್ಯವನ್ನು ಸೇವಿಸಿದಾಗ ಇವು ಪ್ರೋಟಿನುಗಳನ್ನು ಸಂಸ್ಕರಿಸಲು ಹಾಗೂ ತನ್ಮೂಲಕ ಹೆಚ್ಚಿನ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ.

2.ತೂಕ ಇಳಿಸಲು ನೆರವಾಗುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

2.ತೂಕ ಇಳಿಸಲು ನೆರವಾಗುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

ಬಾಸ್ಮತಿ ಅಕ್ಕಿ ಮತ್ತು ಹೆಸರು ಬೇಳೆ ಎರಡರಲ್ಲಿಯೂ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಮಧುಮೇಹ, ಹೊಟ್ಟೆಯ ಉರಿಯೂತ, ಮಲಬದ್ದತೆ ಹಾಗೂ ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ. ವಿಶೇಷವಾಗಿ ಹೆಸರುಬೇಳೆಯಲ್ಲಿರುವ ನಾರು ಕರಗದ ನಾರು ಮತ್ತು ಪಿತ್ತರಸದೊಂದಿಗೆ ಮಿಳಿತಗೊಂಡು ಕರುಳುಗಳ ಒಳಗೆ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ನೆರವು ನೀಡುತ್ತದೆ ಹಾಗೂ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ. ಈ ಮೂಲಕ ಮಲಬದ್ದತೆ ಇಲ್ಲವಾಗುತ್ತದೆ ಹಾಗೂ ಕಗರದ ನಾರಿನ ಇರುವಿಕೆಯಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವವವಾಗುತ್ತದೆ ಹಾಗೂ ಇದು ಅನಗತ್ಯ ಆಹಾರಸೇವನೆಯಿಂದ ತಡೆಯುತ್ತದೆ. ಪರಿಣಾಮವಾಗಿ ತೂಕ ಇಳಿಕೆಗೆ ನೆರವಾಗುತ್ತದೆ.

3. ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

3. ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಹೆಸರು ಬೇಳೆಯನ್ನು ಅರಿಶಿನ, ಜೀರಿಗೆ ಅಥವಾ ಧನಿಯ ಪುಡಿಯೊಂದಿಗೆ ಬೇಯಿಸಿ ತಯಾರಿಸಿದ ಖಾದ್ಯವನ್ನು ಸೇವಿಸಿದಾಗ ಜೀವ ರಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಅರಿಶಿನ ಮತ್ತು ಜೀರಿಗೆ ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಬಾಸ್ಮತಿ ಅಕ್ಕಿಯಲ್ಲಿರುವ ಥಿಯಾಮಿನ್ ಮತ್ತು ನಿಯಾಸಿನ್ ಎಂಬ ಪೋಷಕಾಂಶಗಳೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಗುಣವನ್ನು ಹೊಂದಿವೆ.

4. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಹೆಸರು ಬೇಳೆಯಲ್ಲಿ ಉರಿಯೂತ ನಿವಾರಕ ಗುಣ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣವೂ ಇದೆ. ಈ ಬೇಳೆಯನ್ನು ಇತರ ಸಾಂಬಾರ ಪದಾರ್ಥಗಳೊಂದಿಗೆ ಬೇಯಿಸಿದಾಗ ಇವು ದೇಹಕ್ಕೆ ಆಗಮಿಸಿದ ಬ್ಯಾಕ್ಟೀರಿಯಾ, ವೈರಸ್ಸುಗಳು ಮತ್ತಿತರ ಸೂಕ್ಷ್ಮಜೀವಿಗಳ ವಿರುದ್ದ ಹೋರಾಡುತ್ತವೆ. ಬಾಸ್ಮತಿ ಅಕ್ಕಿಯಲ್ಲಿಯೂ resistant starch ಎಂಬ ಪಿಷ್ಟಪದಾರ್ಥವಿದ್ದು ಒಂದು ಬಗೆಯ ನಾರು ಸಹಾ ಆಗಿದೆ. ಈ ನಾರು ಹೊಟ್ಟೆ ಮತ್ತು ಕರುಳುಗಳ ಒಳಭಾಗದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತವೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತದೆ.

5. ರಕ್ತಹೀನತೆಯಿಂದ ರಕ್ಷಿಸುತ್ತದೆ.

5. ರಕ್ತಹೀನತೆಯಿಂದ ರಕ್ಷಿಸುತ್ತದೆ.

ಹೆಸರುಬೇಳೆಯ ಸಹಿತ ಎಲ್ಲಾ ಬೇಳೆ ಮತ್ತು ಕಾಳುಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ನಮ್ಮ ರಕ್ತದ ಕೆಂಪುರಕ್ತಕಣಗಳ ನಿರ್ಮಾಣಕ್ಕೆ ಕಬ್ಬಿಣದ ಅಂಶ ಅಗತ್ಯವಾಗಿದ್ದು ಬೇಳೆಗಳ ಸೇವನೆಯಿಂದ ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆಯೂ ಆರೋಗ್ಯಕರ ಮಿತಿಗಳಲ್ಲಿರುತ್ತವೆ. ಇದರಿಂದ ರಕ್ತಹೀನತೆಯ ಸಾಧ್ಯತೆ ತಗ್ಗುತ್ತದೆ.

6. ಕೂದಲ ಮತ್ತು ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

6. ಕೂದಲ ಮತ್ತು ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಮೇಲೆ ತಿಳಿಸಿದಂತೆ ಹ್ಸರು ಬೇಳೆಯಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನ್ ಇದೆ. ಅಡುಗೆಯ ಸಮಯದಲ್ಲಿ ಸೇರಿಸುವ ಮಸಾಲೆ ವಸ್ತುಗಳ ಮೂಲಕ ಈ ಖಾದ್ಯ ಆಂಟಿ ಆಕ್ಸಿಡೆಂಟ್ ಗುಣವನ್ನು ಪಡೆಯುತ್ತದೆ. ಪರಿಣಾಮವಾಗಿ ಮಸಾಲೆ ಬೆರೆಸಿದ ಹೆಸರುಬೇಳೆಯ ಖಾದ್ಯದ ಸೇವನೆಯಿಂದ ತ್ವಚೆ ಮತ್ತು ಕೂದಲ ಆರೋಗ್ಯ ಉತ್ತಮಗೊಳುತ್ತದೆ. ಬಾಸ್ಮತಿ ಅಕ್ಕಿಯಲ್ಲಿಯೂ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಕಲ್ಮಶಗಳನ್ನು ದೇಹದಿಂದ ಹೊರಹಾಕಲು ನೆರವಾಗುವ ಮೂಲಕ ದೇಹವನ್ನು ಕಲ್ಮಶರಹಿತವಾಗಿಸುತ್ತದೆ. ಈ ಮೂಲಕವೂ ಬಾಸ್ಮತಿ ಅಕ್ಕಿ ಮತ್ತು ಹೆಸರು ಬೇಳೆಯಿಂದ ತಯಾರಾದ ಖಾದ್ಯದ ಸೇವನೆಯಿಂದ ತ್ವಚೆ ಮತ್ತು ಕೂದಲು ಉತ್ತಮ ಆರೋಗ್ಯ ಪಡೆಯುತ್ತವೆ.

ಬಾಸ್ಮತಿ ಅಕ್ಕಿ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಖಾದ್ಯವನ್ನು ಸೇವಿಸಲು ಅತ್ಯುತ್ತಮ ಸಮಯವೆಂದರೆ ಮದ್ಯಾಹ್ನದ ಊಟದ ಸಮಯವಾಗಿದೆ ಹಾಗೂ ರಾತ್ರಿಯ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಈ ಖಾದ್ಯವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚಿಸ ಸಮಯ ಬೇಕಾಗಿರುವ ಕಾರಣ ಮಿತಪ್ರಮಾಣದಲ್ಲಿಯೇ ಸೇವಿಸಬೇಕು.

ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Health Benefits Of Eating Yellow Moong Dal With Basmati Rice

Moong dal and basmati rice both are a classic combination and widely eaten in India and the Middle East. The yellow moong dal is frequently used for making soups and curries and the long-grain basmati rice is used for making biriyani, pulao and other sweet dishes. However, when moong dal and basmati rice are paired together, it makes for a low-fat, high-fibre protein food.
X
Desktop Bottom Promotion