For Quick Alerts
ALLOW NOTIFICATIONS  
For Daily Alerts

ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

|

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಎಣ್ಣೆಯೆಂದರೆ ಸಾಸಿವೆ ಎಣ್ಣೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಗೂ ಕೆಲವು ಆರೋಗ್ಯ ಸುಧಾರಣೆಯ ಆರೈಕೆಯಲ್ಲಿ ಬಳಸುತ್ತಾರೆ. ಇದನ್ನು ವೈಜ್ಞಾನಿಕವಾಗಿ ಬ್ರಾಸಿಕಾ ಜುನ್ಸಿಕಾ ಎಂದು ಕರೆಯುವರು. ತೀಕ್ಷ್ಣವಾದ ಸುವಾಸನೆಯನ್ನು ಹೊಂದಿರುವ ಈ ಎಣ್ಣೆಯನ್ನು ಉಪ್ಪಿನಕಾಯಿ ತಯಾರಿ ಸೇರಿದಂತೆ ಇನ್ನಿತರ ಆಹಾರಪದಾರ್ಥಗಳು ಹಾಳಾಗದಂತೆ ಕಾಯ್ದಿರಿಸಲು ಸಹ ಬಳಸುತ್ತಾರೆ. ಅಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳಿಗೆ ಇದರ ಲೇಪನ ಹಾಗೂ ಮಸಾಜ್ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಬೆಕ್ಕಸ ಬೆರಗಾಗಿಸುವ ಅರಿಶಿನ ಪುಡಿ+ಸಾಸಿವೆ ಎಣ್ಣೆಯ ಕರಾಮತ್ತು!

ಆಯುರ್ವೇದದ ಚಿಕಿತ್ಸಾ ವಿಧಾನದಲ್ಲಿ ಸಾಸಿವೆ ಎಣ್ಣೆ ಬಹಳ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಮೈಕೈ ನೋವು ನಿವಾರಕವಾಗಿ, ಮಸಾಜ್ ಗಳಿಗೆ, ಸೌಂದರ್ಯ ವರ್ಧಕ ಉತ್ಪನ್ನವನ್ನಾಗಿಯೂ ಸಹ ಉಪಯೋಗಿಸುತ್ತಾರೆ. ಸಮೃದ್ಧವಾದ ವಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಈ ಎಣ್ಣೆ ಆಂತರಿಕವಾಗಿ ಹಾಗೂ ಬಾಹ್ಯ ಆರೋಗ್ಯಕ್ಕೆ ಅತ್ಯುತ್ತಮ ದಿವ್ಯ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಉಪಯೋಗವನ್ನು ಅರಿತು, ನೀವು ಸಹ ಆರೈಕೆಗೆ ಒಳಗಾಗುವ ಯೋಚನೆ ಇದ್ದರೆ ಈ ಮುಂದೆ ನೀಡಿರುವ ಸಂಕ್ಷಿಪ್ತ ವಿವರಣೆಯನ್ನು ಪರಿಶೀಲಿಸಬಹುದು...

 ಹೃದಯದ ರಕ್ತನಾಳ ಕಾಯಿಲೆ

ಹೃದಯದ ರಕ್ತನಾಳ ಕಾಯಿಲೆ

ಸಾಸಿವೆ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಲ್ಲಿ ಮತ್ತು ಉತ್ತಮ ಕೊಲೆಸ್ಟರಾಲ್ ಅನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ಅಸಂಘಟಿತ ಕೊಬ್ಬುಗಳು ಮತ್ತು ಬಹುಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಸಹ ಒಳಗೊಂಡಿದೆ. ಇದು ಆರೋಗ್ಯಕರ ಹೃದಯ ಮತ್ತು ರಕ್ತನಾಳಗಳ ಸ್ಥಿತಿ ಸ್ಥಾಪಕತ್ವವನ್ನು ಕಾಪಾಡುತ್ತದೆ.ಸಾಸಿವೆ ಎಣ್ಣೆಯನ್ನು ಆರೋಗ್ಯ ಚಿಕಿತ್ಸೆಗೆ ಮತ್ತು ಉತ್ತಮ ಅಡುಗೆ ತಯಾರಿಗೆ ಬಹು ಉಪಯೋಗಿ ಎನ್ನಬಹುದು.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಸಾಸಿವೆ ಎಣ್ಣೆಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಅಧ್ಯಯನಗಳು ತೋರಿಸಿವೆ. ಸಾಸಿವೆ ತೈಲದ ಬಳಕೆಯಿಂದ ಹೊಟ್ಟೆ ಮತ್ತು ಕೊಲೊನ್ ಕ್ಯಾನ್ಸರ್ ತಡೆಯಬಹುದು. ತೈಲದಲ್ಲಿ ಕಂಡುಬರುವ ಗ್ಲುಕೋಸಿನೋಲೇಟ್, ಕ್ಯಾನ್ಸರ್ ಮತ್ತು ಗೆಡ್ಡೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ನೋವು ನಿವಾರಿಸುತ್ತದೆ

ನೋವು ನಿವಾರಿಸುತ್ತದೆ

ಸಂಧಿ ನೋವು ಮತ್ತು ಊತವನ್ನು ಸರಾಗಗೊಳಿಸುವಲ್ಲಿ ಸಾಸಿವೆ ತೈಲ ಬಹು ಉಪಯೋಗಿ. ಇದು ಉರಿಯೂತ ಹಾಗೂ ಸಂಧಿವಾತಗಳಿಗೆ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

ಬಾಯಿಯ ಆರೋಗ್ಯಕ್ಕೆ

ಬಾಯಿಯ ಆರೋಗ್ಯಕ್ಕೆ

ಸಾಸಿವೆ ಎಣ್ಣೆ ಹಲ್ಲುಗಳ ಬಲಪಡಿಸಲು, ಒಸಡುಗಳಲ್ಲಿನ ಬ್ಯಾಕ್ಟೀರಿಯ ಮತ್ತು ಹಲ್ಲಿನ ಬ್ಯಾಕ್ಟೀರಿಯವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಇದು ಹಲ್ಲುನೋವು ನಿವಾರಣೆಗೆ ಸಹ ಸಹಾಯ ಮಾಡುತ್ತದೆ. ಬಾಯಿಯ ವಾಸನೆಯನ್ನು ತಡೆಗಟ್ಟುತ್ತದೆ. ಹಲ್ಲುಗಳನ್ನು ನೈಸರ್ಗಿಕ ಹೊಳಪಿನಿಂದ ಕೂಡಿರುವಂತೆ ಮಾಡುವುದು.

 ಶೀತ ಮತ್ತು ಕೆಮ್ಮು ನಿವಾರಕ

ಶೀತ ಮತ್ತು ಕೆಮ್ಮು ನಿವಾರಕ

ಸಾಸಿವೆ ಎಣ್ಣೆ ದೇಹವನ್ನು ಬೆಚ್ಚಗಿಡುತ್ತದೆ. ಹಾಗಾಗಿಯೇ ಶಿತ ಮತ್ತು ಕೆಮ್ಮುಗಳಿಗೆ ಅತ್ಯುತ್ತಮ ಔಷಧ ಎನ್ನಲಾಗುವುದು. ಶೀತ ಮತ್ತು ಕೆಮ್ಮಿಗೆ ಕಾರಣವಾಗುವ ಸೋಂಕುಗಳನ್ನು ತಡೆಯಲು ಇದು ಬಹು ಸಹಕಾರಿ. ಅಸ್ತಮಾ ಮತ್ತುಸೈನಸ್ ಚಿಕಿತ್ಸೆಗೆ ದಿವ್ಯ ಔಷಧ ಎನ್ನಬಹುದು. ಇದು ಬೆವರು ಗ್ರಂಥಿಗಳನ್ನು ಉತ್ತೇಜಿಸುವುದರಿಂದ ದೇಹದ ತಾಪವನ್ನು ಕಡಿಮೆ ಮಾಡಿ ಜ್ವರವನ್ನು ನಿಯಂತ್ರಣಕ್ಕೆ ತರುತ್ತದೆ.

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯಕ್ಕೆ

ಸಾಸಿವೆ ಎಣ್ಣೆ ಚರ್ಮವನ್ನು ಪೋಷಿಸುತ್ತದೆ. ಸಾಸಿವೆ ಎಣ್ಣೆಯನ್ನು ಶಿಶುಗಳ ಮಸಾಜ್ ಪ್ರಕ್ರಿಯೆಗೆ ಬಳಸಲಾಗುವುದು. ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸಲು ಸಾಸಿವೆ ಎಣ್ಣೆಯನ್ನು ಬಳಸಿ ಮಸಾಜ್ ಮಾಡಲಾಗುತ್ತದೆ. ದೇಹವನ್ನು ಬೆಚ್ಚಗಿಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಬಳಸುತ್ತಾರೆ, ಅಲ್ಲದೆ ಈ ತೈಲವು ಬ್ಯಾಕ್ಟೀರಿಯ ಮತ್ತು ಆಂಟಿಫಂಗಲ್ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಚರ್ಮದ ಸೋಂಕು ಮತ್ತು ದದ್ದುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಕೇಶರಾಶಿಯ ಆರೋಗ್ಯಕ್ಕೆ

ಕೇಶರಾಶಿಯ ಆರೋಗ್ಯಕ್ಕೆ

ಸಾಸಿವೆ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲ ಬುಡಗಳಿಗೆ ಉತ್ತಮ ಪೋಷಣೆ ದೊರಕುವುದು ಮಾತ್ರವಲ್ಲ, ಹೊಸ ಕೂದಲು ಬೆಳೆಯಲೂ ಸಹಕಾರ ದೊರಕುತ್ತದೆ. ಹಾಗಾಗಿ ಸಾಸಿವೆ ಎಣ್ಣೆಯನ್ನು ದಿನನಿತ್ಯ ಅಡುಗೆಯಲ್ಲಿ ಬಳಸುವ ಮೂಲಕ ಮತ್ತೆ ತಲೆಗೆ ಹಚ್ಚಿಕೊಳ್ಳುವ ಮೂಲಕ ಹೊರಗಿನಿಂದಲೂ ಒಳಗಿನಿಂದಲೂ ಹೆಚ್ಚಿನ ಪೋಷಣೆ ಪಡೆಯುವಂತಾಗುತ್ತದೆ.

ಪುಟ್ಟ ಹೃದಯಕ್ಕೆ ಅತ್ಯುತ್ತಮ...

ಪುಟ್ಟ ಹೃದಯಕ್ಕೆ ಅತ್ಯುತ್ತಮ...

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆಗಳ ಪಟ್ಟಿಯಲ್ಲಿ ಸಾಸಿವೆ ಎಣ್ಣೆ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ mono-saturated oil ಎಂಬ ಎಣ್ಣೆಕಣಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ. ಇದು ಹೃದಯಕ್ಕೆ ಎದುರಾಗುವ ಹಲವು ತೊಂದರೆಗಳಿಂದ ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ನಾವು ಸೇವಿಸುವ ಆಹಾರದಲ್ಲಿ ಅತಿ ಕಷ್ಟದಲ್ಲಿ ಜೀರ್ಣವಾಗುವ ಆಹಾರಗಳೆಂದರೆ ಎಣ್ಣೆ ಮತ್ತು ಉಪ್ಪು. ಸಾಸಿವೆ ಎಣ್ಣೆ ಹೊಟ್ಟೆಯಲ್ಲಿ ಕೊಂಚ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಜಠರರಸದ ಉತ್ಪತ್ತಿಯಲ್ಲಿ ಹೆಚ್ಚಳವಾಗಿ ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ.

ತ್ವಚೆಯ ಕಾಂತಿ ಹೆಚ್ಚಿಸಲು

ತ್ವಚೆಯ ಕಾಂತಿ ಹೆಚ್ಚಿಸಲು

ಹಿಂದಿನ ಕಾಲದಿಂದಲೂ ಭಾರತದಲ್ಲಿ ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಲಾಗುತ್ತಿದೆ. ಸ್ನಾನಕ್ಕೆ ಮೊದಲು ಇದನ್ನು ದೇಹಕ್ಕೆ ಹಚ್ಚಿಕೊಂಡು ಮಸಾಜ್ ಮಾಡಬಹುದು. ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಲು ಸಾಸಿವೆ ಎಣ್ಣೆಗೆ ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸವನ್ನು ಹಾಕಿಕೊಂಡು ಪ್ಯಾಕ್ ಮಾಡಿಕೊಳ್ಳಬಹುದು

ಮುಖದ ಕಾಂತಿಗೆ

ಮುಖದ ಕಾಂತಿಗೆ

ಚಳಿಗಾಲದಲ್ಲಿ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಕೆಲವು ಸಮಯದ ಬಳಿಕ ನೀರಿನಿಂದ ತೊಳೆಯಿರಿ. ಚರ್ಮವು ಈಗ ಮೃದುವಾಗಿರುತ್ತದೆ. ಈಗ ಫೌಂಡೇಶನ್ ಹಚ್ಚಿ ಮೇಕಪ್ ಮಾಡಿಕೊಳ್ಳಬಹುದು.

English summary

Health Benefits Of Mustard Oil

Mustard oil is commonly found in many of the kitchens. The oil is derived from the crushed seeds of the mustard plant (scientific name is Brassica juncea). This pungent flavoured oil has been in use for culinary purposes as well as for a holistic remedy, since centuries, and is still in use as one of the commonly preferred oils. Below are a few of the health benefits of mustard oil when used internally as well as externally. Take a look.
X
Desktop Bottom Promotion