'ಜೇನು' ಎಂಬ ಅಮೃತ ದ್ರವ್ಯ, ಎಷ್ಟು ಹೊಗಳಿದರೂ ಸಾಲದು!!

Posted By: Deepu
Subscribe to Boldsky

ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ.  ಜೇನನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ.

ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ ಎಂದೂ ಹಾಳಾಗದ ಆಹಾರ ಎಂದು ಪವಿತ್ರ ಕುರಾನಿನಲ್ಲಿ ತಿಳಿಸಿರುವ ಜೇನು ನಿಜಕ್ಕೂ ಒಂದು ಅದ್ಭುತವಾದ ಆಹಾರವಾಗಿದೆ.

ಪುರಾಣಗಳಲ್ಲಿ ಜೇನಿನ ಆರೋಗ್ಯಕರ ಗುಣಗಳ ಬಗ್ಗೆ ಉಲ್ಲೇಖವಿದೆ. ವಿಶ್ವದಾದ್ಯಂತ ಜೇನನ್ನು ಕೃಷಿ ಮಾಡಲಾಗುತ್ತದೆ. ಜೇನುಸಾಕಣೆಯ ಇತಿಹಾಸ ಸುಮಾರು ಕ್ರಿಸ್ತಪೂರ್ವ ಏಳುನೂರಕ್ಕೂ ಹಿಂದಿನದು ಎಂದು ತಿಳಿದುಬರುತ್ತದೆ. ಜೇನು ಸವಿಯುವುದು ಜೇನುಹುಳಗಳ ಆಹಾರವನ್ನು ಕದ್ದಂತೆ ಎಂಬ ಅಪವಾದವೂ ಇದೆ. ವೈಜ್ಞಾನಿಕವಾಗಿ ಜೇನು ಮಾನವನ ದೇಹಕ್ಕೆ ಉತ್ತಮವಾದ ಆಹಾರದ ಜೊತೆ ಉತ್ತಮವಾದ ಔಷಧಿಯೂ ಆಗಿದೆ. ಇದರ ಸರಿಯಾದ ಬಳಕೆಯಿಂದ ಹಲವು ರೋಗಗಳನ್ನು ಬರದಂತೆ ತಡೆಗಟ್ಟಬಹುದು.

ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲು ಮತ್ತು ಜೇನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಪೇಯವಾಗಿದೆ. ಜೇನಿನ ಮತ್ತು ಜೇನನ್ನು ಸರಿಯಾಗಿ ಸೇವಿಸುವ ಕ್ರಮದ ಕುರಿತು ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ... 

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಜೇನಿನಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಇದರ ಸೇವನೆಯಿಂದ ಕೊಲೆಸ್ಟಾಲ್ ಏರುವ ಸಂಭವ ಇಲ್ಲವೇ ಇಲ್ಲ. ಬದಲಿಗೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ನೆರವಾಗುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳನ್ನು ಕಿರಿದಾಗಿಸುವುದನ್ನು ತಡೆಗಟ್ಟುತ್ತದೆ. ರಕ್ತನಾಳಗಳು ಕಿರಿದಾಗುವ ಮೂಲಕ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ಕೆಲವಾರು ತೊಂದರೆಗಳು ಎದುರಾಗುತ್ತದೆ. ಅಧಿಕ ರಕ್ತದೊತ್ತಡ, ಸ್ಮರಣಶಕ್ತಿ ಕುಂದುವುದು, ತಲೆನೋವು ಮೊದಲಾದವು ಇದರ ಪರೋಕ್ಷ ಕೊಡುಗೆಗಳಾಗಿವೆ. ಪ್ರತಿದಿನವೂ ಒಂದು ಲೋಟ ನೀರಿನಲ್ಲಿ ಒಂದು ಅಥವಾ ಎರಡು ಚಿಕ್ಕಚಮಚ ಜೇನು ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು.

ಸ್ಮರಣಶಕ್ತಿ ಹೆಚ್ಚುತ್ತದೆ

ಸ್ಮರಣಶಕ್ತಿ ಹೆಚ್ಚುತ್ತದೆ

ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಪ್ರತಿದಿನವೂ ಕೊಂಚ ಜೇನನ್ನು ಸೇವಿಸುವ ಮೂಲಕ ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಜೀವಕೋಶದ ಮಟ್ಟದಲ್ಲಿ ಆಂಟಿ ಆಕ್ಸಿಡೆಂಟುಗಳ ರಕ್ಷಣಾ ವ್ಯವಸ್ಥೆ ಉತ್ತಮಗೊಳ್ಳುವ ಮೂಲಕ ಸ್ಮರಣ ಶಕ್ತಿಯೂ ಹೆಚ್ಚುತ್ತದೆ.

ಗಾಢ ನಿದ್ದೆ ಆವರಿಸುತ್ತದೆ

ಗಾಢ ನಿದ್ದೆ ಆವರಿಸುತ್ತದೆ

ಜೇನಿನಲ್ಲಿರುವ ಸಕ್ಕರೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಸೆರೋಟೋನಿನ್ ಎಂಬ ಕಣಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಸೆರೋಟೋನಿನ್ ಬಳಿಕ ಇದು ಮೆಲಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುತ್ತದೆ. ಈ ಮೆಲಟೋನಿನ್ ಗಾಢನಿದ್ದೆಗ ಅಗತ್ಯವಿರುವ ರಸದೂತವಾಗಿದೆ. ಪ್ರತಿದಿನವೂ ಜೇನನ್ನು ಕೊಂಚವಾಗಿ ಸೇವಿಸುವ ಮೂಲಕ ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕರುಳಿನ ಹುಣ್ಣುಗಳನ್ನು ಕಡಿಮೆಗೊಳಿಸುತ್ತದೆ

ಕರುಳಿನ ಹುಣ್ಣುಗಳನ್ನು ಕಡಿಮೆಗೊಳಿಸುತ್ತದೆ

ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಜೇನಿನ ಸೇವನೆಯಿಂದ ಕರುಳುಗಳ ಹುಣ್ಣು ಹಾಗೂ ಕರುಳುಗಳ ಒಳಭಾಗದಲ್ಲಿ ಎದುರಾಗುವ ಬ್ಯಾಕ್ಟೀರಿಯಾಗಳ ಸೋಂಕು (bacterial gastroenteritis) ಮೊದಲಾದ ತೊಂದರೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕೆಂದರೆ ಪ್ರತಿದಿನವೂ ಮುಂಜಾನೆ ಪ್ರಥಮ ಆಹಾರವಾಗಿ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಅಗತ್ಯ.

ಮಕ್ಕಳ ಆರೋಗ್ಯಕ್ಕೆ

ಮಕ್ಕಳ ಆರೋಗ್ಯಕ್ಕೆ

ಹಿರಿಯರು ಕಂಡುಕೊಂಡ ಪ್ರಕಾರ ಮಕ್ಕಳಿಗೆ ದಿನಕ್ಕೆ ಮೂರು ಬಾರಿ ಒಂದೊಂದು ಚಿಕ್ಕ ಚಮಚ ಜೇನು, ಹಾಗೂ ವಯಸ್ಕರಿಗೆ ದಿನಕ್ಕೆ ಮೂರು ಬಾರಿ ಒಂದೊಂದು ದೊಡ್ಡ ಚಮಚ ಜೇನು ತಿನ್ನಿಸುವುದು ಆರೋಗ್ಯಕ್ಕೆ ಉತ್ತಮ.

ಅಜೀರ್ಣದ ತೊಂದರೆಗೆ

ಅಜೀರ್ಣದ ತೊಂದರೆಗೆ

ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಜೇನು ಹಾಗೂ ಲಿಂಬೆ ರಸ

ಜೇನು ಹಾಗೂ ಲಿಂಬೆ ರಸ

ಕೊಂಚ ನೀರು ಮತ್ತು ಲಿಂಬೆರಸದಲ್ಲಿ ಚಿಕ್ಕ ಪ್ರಮಾಣದ (ಸುಮಾರು ಅರ್ಧ ಚಿಕ್ಕ ಚಮಚ) ಜೇನನ್ನು ನಿತ್ಯವೂ ಊಟದ ಜೊತೆಯಲ್ಲಿ ನೀರಿನ ಬದಲಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಕೆಲವರು ಊಟದೊಂದಿಗೆ ವೈನ್ ಸೇವಿಸುತ್ತಾರೆ. ಆರೋಗ್ಯಕ್ಕೆ ಮಾರಕವಾದ ಈ ಅಭ್ಯಾಸವನ್ನು ತೊಡೆಯಲು ಜೇನು, ಲಿಂಬೆರಸ ಸೇರಿಸಿದ ಪೇಯ ನೆರವಿಗೆ ಬರುತ್ತದೆ.

ಆರೋಗ್ಯಕ್ಕೆ ಬಹಳ ಒಳ್ಳೆಯದು

ಆರೋಗ್ಯಕ್ಕೆ ಬಹಳ ಒಳ್ಳೆಯದು

ಜಠರ ಮತ್ತು ಕರುಳುಗಳ ಮೂಲಕ ಜೇನು ಅತ್ಯಂತ ಸುಲಭವಾಗಿ ಹೀರಲ್ಪಡುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಕ್ಯಾಲ್ಸಿಯಂ ಗಳನ್ನು ಸಿದ್ಧರೂಪದಲ್ಲಿ ನೀಡಲು ಅತ್ಯುತ್ತಮವಾದ ಆಹಾರವಾಗಿದೆ. ಇದೇ ಕಾರಣದಿಂದಾಗಿ ದೇಹ ಸುಲಭವಾಗಿ ಹೀರದ ಔಷಧಿಗಳನ್ನು ಜೇನಿನೊಂದಿಗೆ ನೀಡಿದಾಗ ಆ ಔಷಧಿಗಳೂ ಜೇನಿನ ಮೂಲಕ ಸುಲಭವಾಗಿ ಪಚನಗೊಂಡು ರಕ್ತಕ್ಕೆ ಸೇರುತ್ತವೆ.

ಹಾಲು-ಜೇನಿನ ಜೋಡಿ

ಹಾಲು-ಜೇನಿನ ಜೋಡಿ

ಹಾಲಿನಲ್ಲಿ ಕ್ಯಾಲ್ಸಿಯಂ ಇದೆ ನಿಜ. ಆದರೆ ಅದನ್ನು ಆಹಾರದಿಂದ ಮೂಳೆಗಳವರೆಗೆ ತಲುಪಿಸಲು ಹಾಲಿನಲ್ಲಿ ಯಾವುದೇ ಪೋಷಕಾಂಶವಿಲ್ಲ. ಆದರೆ ಇದು ಜೇನಿನಲ್ಲಿದೆ! ಜೇನಿನಲ್ಲಿರುವ ವಿವಿಧ ಪೋಷಕಾಂಶಗಳು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹದೆಲ್ಲೆಡೆ ರಕ್ತದ ಮೂಲಕ ಕೊಂಡೊಯ್ದು ಮೂಳೆಗಳಿಗೆ ತಲುಪಿಸುತ್ತದೆ. ಆದ್ದರಿಂದ ಮೂಳೆಗಳ ದೃಢತೆಗೆ ಹಾಲು ಕುಡಿಯುವ ಬದಲು ಹಾಲುಜೇನನ್ನು ಕುಡಿಯುವುದೇ ಉತ್ತಮ.

ನಿದ್ದೆ ಬರದಿದ್ದರೆ

ನಿದ್ದೆ ಬರದಿದ್ದರೆ

ನಿದ್ದೆ ಬರದಿದ್ದರೆ ಬಿಸಿ ಹಾಲನ್ನು ಕುಡಿದು ಮಲಗಿ ಎಂದು ಹಿರಿಯರು ಹೇಳುತ್ತಾರೆ. ಕೇವಲ ಹಾಲನ್ನು ಸೇವಿಸುವ ಬದಲು ಜೇನು ಸೇರಿಸಿದ ಹಾಲನ್ನು ಸೇವಿಸುವ ಮೂಲಕ ಇನ್ನಷ್ಟು ಸುಖನಿದ್ದೆ ಆವರಿಸುತ್ತದೆ. ನಿದ್ರಾಹೀನತೆ, ತಡವಾಗಿ ನಿದ್ದೆ ಬರುವುದು, ಚಿಕ್ಕ ಶಬ್ದಕ್ಕೂ ಬೆಚ್ಚಿ ನಿದ್ದೆಯಿಂದೇಳುವುದು ಮೊದಲಾದ ತೊಂದರೆಗಳಿಗೆ ಹಾಲು ಜೇನು ಉತ್ತಮ ಪರಿಹಾರವಾಗಿದೆ.

ತೂಕ ಇಳಿಸಿಕೊಳ್ಳುವಲ್ಲಿ ಎತ್ತಿದ ಕೈ

ತೂಕ ಇಳಿಸಿಕೊಳ್ಳುವಲ್ಲಿ ಎತ್ತಿದ ಕೈ

ತೂಕ ಇಳಿಸಲು ಇನ್ನೊಂದು ಸುಲಭ ವಿಧಾನವೆಂದರೆ ನಿಮ್ಮ ಅಡುಗೆಗಳಲ್ಲಿ ಎಲ್ಲೆಲ್ಲಿ ಸಕ್ಕರೆ ಮತ್ತು ಎಣ್ಣೆಗಳನ್ನು ಬಳಸುತ್ತೀರೋ ಅಲ್ಲೆಲ್ಲಾ ಜೇನು ಬಳಸಿ. ಉದಾಹರಣೆಗೆ ಚಪಾತಿಯ ಎರಡೂ ಬದಿ ಸವರಲು ಎಣ್ಣೆ ಬಳಸುತ್ತಿದ್ದರೆ ಅದರ ಬದಲಿಗೆ ಕೊಂಚವೇ ಜೇನು ಬಳಸಿದರೆ ಚಪಾತಿ ಚೆನ್ನಾಗಿ ಉಬ್ಬುತ್ತದೆ ಹಾಗೂ ತಿನ್ನಲೂ ರುಚಿಯಾಗಿರುತ್ತದೆ. ಎಣ್ಣೆ ಬಳಸುವ ಕೆಲವು ಫ್ರೈ ಗಳಿಗೂ ಜೇನು ಬಳಸಬಹುದು,ಪ್ರಯತ್ನಿಸಿ ನೋಡಿ. ಸಕ್ಕರೆ ಬಳಸುತ್ತಿದ್ದಲ್ಲೆಲ್ಲಾ ಸಕ್ಕರೆಯ ಪ್ರಮಾಣದ ಅರ್ಧದಷ್ಟು ಜೇನು ಬಳಸಿದರೂ ಸಾಕು, ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ತನ್ಮೂಲಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

 ಒಬೆಸಿಟಿ

ಒಬೆಸಿಟಿ

ಜೇನು ಬೊಜ್ಜು ಅಥವಾ ತೂಕ ಜಾಸ್ತಿ ಹೆಚ್ಚಾಗುವಿಕೆಯನ್ನು ಜೇನು ಅತ್ಯಂತ ಸಮರ್ಥವಾಗಿ ನಿಯಂತ್ರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣಕ್ರಿಯೆನ್ನು ವೃದ್ಧಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಹೆಚ್ಚಾದ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಸ್ಮರಣಶಕ್ತಿ ಹೆಚ್ಚುತ್ತದೆ

ಸ್ಮರಣಶಕ್ತಿ ಹೆಚ್ಚುತ್ತದೆ

ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಪ್ರತಿದಿನವೂ ಕೊಂಚ ಜೇನನ್ನು ಸೇವಿಸುವ ಮೂಲಕ ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಜೀವಕೋಶದ ಮಟ್ಟದಲ್ಲಿ ಆಂಟಿ ಆಕ್ಸಿಡೆಂಟುಗಳ ರಕ್ಷಣಾ ವ್ಯವಸ್ಥೆ ಉತ್ತಮಗೊಳ್ಳುವ ಮೂಲಕ ಸ್ಮರಣ ಶಕ್ತಿಯೂ ಹೆಚ್ಚುತ್ತದೆ.

English summary

Health Benefits Of Honey You Have Not Heard Before!

Honey can be that magic pill that you have always been looking for. You can reap its immense benefits by enjoying its delicious taste at the same time. Honey is known to be one of the oldest sweeteners on earth. It's time you took full advantage of the nutritional and medicinal properties of honey, as it is an incredible healing agent for many ailments.
Story first published: Tuesday, February 20, 2018, 23:34 [IST]