Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ತೂಕ ಇಳಿಸಿಕೊಳ್ಳಬೇಕೇ? ಬದನೆಕಾಯಿ ಜ್ಯೂಸ್ ಮಾಡಿ ಕುಡಿಯಿರಿ
ಬದನೇ ಕಾಯಿ ಎಂದರೆ ಸಾಮಾನ್ಯವಾಗಿ ನಿಕೃಷ್ಟ ಎಂದೇ ಪರಿಗಣಿಸುವ ತರಕಾರಿಯಾಗಿದೆ. ವರ್ಷದ ಎಲ್ಲಾ ಕಾಲ ಸುಲಭವಾಗಿ ದೊರಕುವ ಮತ್ತು ಅಗ್ಗವಾಗಿರುವ ಬದನೆ ಸಾಂಬರ್ ಮತ್ತು ಬೇಳೆ ಸಾರುಗಳ ಒಂದು ಅವಿಭಾಜ್ಯ ಅಂಗವೇ ಆಗಿದೆ. ಇದರಲ್ಲಿ ಒಂದು ಬಗೆಯ, ಗಾಢ ಕಂದು ಬಣ್ಣದ ನೆಲಗುಳ್ಳ (eggplant ಅಥವಾ ಫ್ರೆಂಚ್ ನಲ್ಲಿ aubergine) ಎಂಬ ಬದನೆ Solanaceae ಎಂಬ ಸಸ್ಯವರ್ಗಕ್ಕೆ ಸೇರಿದ್ದು ಈ ವರ್ಗಕ್ಕೆ ಟೊಮೆಟೊ ದೊಣ್ಣೆ ಮೆಣಸು ಹಾಗೂ ಆಲುಗಡ್ಡೆಗಳೂ ಸೇರಿವೆ. ಈ ವರ್ಗದ ಪ್ರತಿ ತರಕಾರಿಯೂ ತನ್ನದೇ ಆದ ಆರೋಗ್ಯಕರ ಮಹತ್ವವನ್ನು ಹೊಂದಿದ್ದು ಇದರಲ್ಲಿ ಬದನೆಯ ಪ್ರಯೋಜನಗಳು ಹೀಗಿವೆ...
* ಮೂಳೆಗಳನ್ನು ದೃಢವಾಗಿಸುತ್ತದೆ, ತನ್ಮೂಲಕ ಮೂಳೆಗಳು ಟೊಳ್ಳಾಗುವ osteoporosis ಎಂಬ ಕಾಯಿಲೆಯಿಂದ ರಕ್ಷಿಸುತ್ತದೆ.
* ರಕ್ತಹೀನತೆಯಿಂದ ರಕ್ಷಣೆ ಒದಗಿಸುತ್ತದೆ ಹಾಗೂ ಗ್ರಹಿಕೆಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
* ಹೃದಯ, ನರವ್ಯವಸ್ಥೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
* ತೂಕ ಇಳಿಸಲು ನೆರವಾಗುತ್ತದೆ
* ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
* ನ್ಯೂನತೆಗಳಿರುವ ಮಕ್ಕಳು ಹುಟ್ಟುವುದನ್ನು ತಡೆಯುತ್ತದೆ.
* ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ
* ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.
* ಗರ್ಭಾವಸ್ಥೆಯಲ್ಲಿಯ್ ಸೇವನಿಸಲು ಸೂಕ್ತವಾಗಿದೆ.
ಬದನೆಯ ಇಷ್ಟೆಲ್ಲಾ ಪ್ರಯೋಜನಗಳಿಗೆ ಇದರಲ್ಲಿರುವ ಪೋಷಕಾಂಶಗಳೇ ಕಾರಣವಾಗಿವೆ. ವಿಶೇಷವಾಗಿ ತೂಕ ಇಳಿಸುವವರಿಗೆ ಇದು ಯೋಗ್ಯವಾದ ಆಹಾರವಾಗಿದೆ. USDA (United States Department of Agriculture) National Nutrient Database ಎಂಬ ದತ್ತಕ ಕೋಶದಲ್ಲಿ ವಿವರಿಸಿರುವಂತೆ ಪ್ರತಿ ನೂರು ಗ್ರಾಂ ಬದನೆಯಲ್ಲಿ (ಹಸಿ ಅಥವಾ ಬೇಯಿಸಿದ) ಎಷ್ಟು ಪೋಷಕಾಂಶಗಳಿವೆ ಎಂದು ನೋಡೋಣ....

ಹೆಚ್ಚಿನ ನಾರು, ಕಡಿಮೆ ಕ್ಯಾಲೋರಿ....
ನೂರು ಗ್ರಾಂ ಬದನೆಯಲ್ಲಿ 3.40 ಗ್ರಾಂ ಕರಗುವ ನಾರು ಹಾಗೂ ಕೇವಲ 24 ಕ್ಯಾಲೋರಿಗಳಿವೆ. ಈ ನಾರು ನಮ್ಮ ಜೀರ್ಣಾಂಗಗಳಲ್ಲಿ ನಿಧಾನವಾಗಿ ಚಲಿಸುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ. ಒಂದು ಕಪ್ ಅಥವಾ 82 ಗ್ರಾಂ ಬದನೆಯಲ್ಲಿ ಮೂರು ಗ್ರಾಂ ಕರಗದ ನಾರು ಹಾಗೂ ಕೇವಲ ಇಪ್ಪತ್ತು ಕ್ಯಾಲೋರಿಗಳಿವೆ.

ಗ್ರೆಲಿನ್ ರಸದೂತಗಳನ್ನು ಕಡಿಮೆ ಮಾಡುತ್ತದೆ
ಬದನೆಯ ಸೇವನೆಯಿಂದ ಗ್ರೆಲಿನ್ (ghrelin) ಎಂಬ ರಸದೂತ ಸ್ರವಿಸುವ ಪ್ರಮಾಣವನ್ನು ಕಡಿಮೆಯಾಗುತ್ತದೆ. ಹಸಿವಿನ ಸಂದೇಶವನ್ನು ನೀಡುವ ಈ ರಸದೂತ ಹೆಚ್ಚಿದ್ದಷ್ಟೂ ಹಸಿವಾಗುವ ಭಾವನೆ ಹೆಚ್ಚುತ್ತಾ ಹೋಗುತ್ತದೆ. ಬದನೆ ಸೇವನೆಯ ಮೂಲಕ ಹಸಿವಾಗುವ ಸಂಕೇತವೂ ಕಡೆಮೆಯಾಗಿ ಅನಗತ್ಯ ಆಹಾರ ಸೇವನೆಯಿಂದ ತಡೆಗಟ್ಟಿದಂತಾಗುತ್ತದೆ ಹಾಗೂ ತೂಕ ಇಳಿಸುವ ಪ್ರಯತ್ನಗಳು ಹೆಚ್ಚು ಫಲ ನೀಡುತ್ತವೆ.

ಹೆಚ್ಚಿನ ನೀರಿನಂಶವಿದೆ
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬದನೆಯಲ್ಲಿ ಸುಮಾರು 90% ನೀರಿದೆ ಹಾಗೂ ಇದು ತೂಕ ಇಳಿಸಲು ಪ್ರತ್ಯಕ್ಷವಾಗಿ ನೆರವಾಗುತ್ತದೆ. ಬದನೆಯಲ್ಲಿರುವ ನೀರು ಕೆಲವು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ ಹಾಗೂ ಆರೋಗ್ಯವನ್ನು ಕಾಪಾಡುತ್ತದೆ.

ಇದರಲ್ಲಿದೆ ಸಾಪೋನಿನ್
ಬದನೆಯಲ್ಲಿರುವ ಸಾಪೋನಿನ್ ಎಂಬ ಪೋಷಕಾಂಶ ಆಹಾರದಲ್ಲಿರುವ ಕೊಬ್ಬನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. ಕೊಬ್ಬನ್ನು ದೇಹ ಹೀರಿಕೊಂಡಷ್ಟೂ ತೂಕ ಏರುವ ಸಾಧ್ಯತೆಯೂ ಹೆಚ್ಚುತ್ತದೆ. ಕೊಬ್ಬನ್ನು ಹೀರಿಕೊಳ್ಳದಂತೆ ತಡೆಯುವ ಮೂಲಕ ದೇಹದ ತೂಕವೂ ಕಡಿಮೆಯಾಗುತ್ತದೆ. ಅಲ್ಲದೇ ಕರುಳುಗಳು ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನೂ ಕಡಿಮೆ ಮಾಡುತ್ತದೆ.

ತೂಕ ಇಳಿಸಲು ಬಳಸಿ ಬದನೆಯ ಜ್ಯೂಸ್
ಬದನೆಯ ಎಲ್ಲಾ ಪೋಷಕಾಂಶಗಳ ಪ್ರಯೋಜನವನ್ನು ಪಡೆದು ತೂಕ ಇಳಿಸಬೇಕೆಂದರೆ ಇದನ್ನು ಜ್ಯೂಸ್ ಮಾಡಿಕೊಂಡು ಪ್ರಮುಖ ಊಟಗಳಿಗೂ ಸುಮಾರು ಹದಿನೈದು ನಿಮಿಷ ಮುನ್ನ ಕುಡಿಯಬೇಕು. ಬನ್ನಿ, ಇದನ್ನು ತಯಾರಿಸುವುದು ಹೇಗೆ ಎಂದು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:
ಒಂದು ಸುಮಾರು ದೊಡ್ಡದೇ ಇರುವ ನೆಲಗುಳ್ಳ
ಸುಮಾರು ಅರ್ಧ ಲೀಟರ್ ನೀರು
ಒಂದು ಲಿಂಬೆ (ಐಚ್ಛಿಕ)

ವಿಧಾನ
*ಬದನೆಯ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ
*ಈ ತುಂಡುಗಳನ್ನು ನೀರಿನಲ್ಲಿ ಕೆಲವು ಘಂಟೆಗಳವರೆಗೆ ನೆನೆಸಿಡಿ. ಈ ನೀರನ್ನು *ಸುಮಾರು ಹದಿನೈದು ನಿಮಿಷ ಬೇಯಿಸಿ ಸೋಸಿ ತಣಿಸಿ ಮದ್ಯಾಹ್ನದ ಹಾಗೂ *ರಾತ್ರಿಯ ಊಟಕ್ಕೂ ಮುನ್ನ ಸೇವಿಸಿ. ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಸೇವಿಸಲು ರಾತ್ರಿಯೇ ನೆನೆಸಿಡುವುದು ಉತ್ತಮ.
*ಈ ನೀರು ಕೊಂಚ ಕಹಿಯಾಗಿರುವ ಕಾರಣ ಒಂದು ಲಿಂಬೆಯ ರಸವನ್ನು ಬೆರೆಸುವ ಮೂಲಕ ರುಚಿಯನ್ನೂ ಹೆಚ್ಚಿಸಬಹುದು.

ಜೊತೆಗೇ ಸಾಕಷ್ಟು ವ್ಯಾಯಾಮವನ್ನೂ ಮಾಡಿ...
ತೂಕ ಇಳಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸಲು ಬದನೆಯ ನೀರಿನ ಸೇವನೆಯ ಜೊತೆಗೇ ಸಾಕಷ್ಟು ವ್ಯಾಯಾಮವನ್ನೂ ಮಾಡಬೇಕು ಹಾಗೂ ಕ್ಯಾಲೋರಿಗಳು ಕಡಿಮೆ ಇರುವ ಆಹಾರಗಳನ್ನು ಸೇವಿಸಬೇಕು.



Click it and Unblock the Notifications
