For Quick Alerts
ALLOW NOTIFICATIONS  
For Daily Alerts

ನುಗ್ಗೆ ಸೊಪ್ಪಿನ ಜಬರ್ದಸ್ತ್ ಪವರ್‍‌ಗೆ ನಮ್ಮದೊಂದು ಸಲಾಂ!

|

ಒಂದು ವೇಳೆ ನಿಮ್ಮ ಮನೆಯಂಗಳದಲ್ಲಿ ನುಗ್ಗೆಗಿಡವೊಂದಿದ್ದರೆ ಓರ್ವ ಪರೋಕ್ಷ ವೈದ್ಯನಿದ್ದಂತೆಯೇ ಆಗುತ್ತದೆ. ನುಗ್ಗೆಮರದ ಎಲೆ, ಕಾಯಿ, ಹೂವು ಮೊಗ್ಗುಗಳೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಅದರಲ್ಲೂ ನುಗ್ಗೆ ಎಲೆಗಳ ಸೇವನೆಯಿಂದ ಹಲವಾರು ತೊಂದರೆಗಳಿಗೆ ಔಷಧಿಯ ಪರಿಣಾಮವನ್ನೇ ಪಡೆಯಬಹುದು. ಇದರ ಸೇವನೆಯಿಂದ ತ್ವಚೆ ಆತ್ಯಂತ ಉತ್ತಮ ಆರೋಗ್ಯ ಪಡೆಯುತ್ತದೆ ಹಾಗೂ ಜೀರ್ಣಕ್ರಿಯೆಯೂ ಸುಲಭಗೊಳ್ಳುತ್ತದೆ.

ನುಗ್ಗೆ ಸೊಪ್ಪು+ಅರಿಶಿನ- ಬರೋಬ್ಬರಿ ಏಳು ರೋಗಕ್ಕೆ ಮದ್ದು....

ತೆಂಗಿನಮರದಂತೆಯೇ ನುಗ್ಗೆಯ ಮರದ ಪ್ರತಿಯೊಂದೂ ಭಾಗ ವಿವಿಧ ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ. ಅಜೀರ್ಣತೆ ಅಥವಾ ಹೊಟ್ಟೆಯಲ್ಲಿ ನೋವು ಇರುವ ವ್ಯಕ್ತಿಗಳಿಗೆ ನುಗ್ಗೆಕಾಯಿಯ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಮಧುಮೇಹಿಗಳಿಗೂ ನುಗ್ಗೆ ಎಲೆಗಳು ಸೂಕ್ತವಾಗಿವೆ. ಮರದ ಕಾಂಡದ ತೊಗಟೆಯ ಬಿರುಕುಗಳಿಂದ ಒಸರುವ ಗೋಂದು ಸಹಾ ಗಾಯಗಳನ್ನು ಮಾಗಿಸಲು ನೆರವಾಗುತ್ತದೆ. ತೊಗಟೆ ಹಲ್ಲುಗಳನ್ನು ಗಟ್ಟಿಗೊಳಿಸಿದರೆ ಎಲೆಗಳಲ್ಲಿರುವ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಹಲವು ರೀತಿಯ ಪೋಷಣೆ ಒದಗಿಸುತ್ತವೆ...

ನುಗ್ಗೆ ಎಲೆಗಳ ಖಾದ್ಯವನ್ನು ತಯಾರಿಸುವ ಬಗೆ

ನುಗ್ಗೆ ಎಲೆಗಳ ಖಾದ್ಯವನ್ನು ತಯಾರಿಸುವ ಬಗೆ

ನುಗ್ಗೆ ಎಲೆಗಳನ್ನು ಮೊದಲು ಉಪ್ಪುನೀರಿನಲ್ಲಿ ಚೆನ್ನಾಗಿ ತೊಳೆದು ಸುಮಾರು ಅರ್ಥಗಂಟೆಯ ಕಾಲ ನೀರಿನಲ್ಲಿ ನೆನೆಸಿ. ಬಳಿಕ ಒಂದು ಪಾತ್ರೆಯಲ್ಲಿ ಒಂದು ಚಿಕ್ಕದಾಗಿ ಹೆಚ್ಚಿದ ನೀರುಳ್ಳಿ, ಕೆಂಪು ಮೆಣಸು ಮತ್ತು ನುಗ್ಗೆ ಎಲೆಗಳನ್ನು ಇವು ಮುಳುಗುವಷ್ಟು ನೀರಿನಲ್ಲಿ ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ಎಲೆಗಳು ಚೆನ್ನಾಗಿ ಬೆಂದ ಬಳಿಕ ಕೊಂಚ ಉಪ್ಪು ಮತ್ತು ಕಾಯಿತುರಿ ಸೇರಿಸಿ ಮಿಶ್ರಣ ಮಾಡಿ. ಬನ್ನಿ ಇನ್ನು ನುಗ್ಗೆ ಎಲೆಗಳ ಸೇವನೆಯಿಂದ ಲಭಿಸುವ ಕೆಲವು ಪ್ರಮುಖ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ...

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಮ್ಮ ದೇಹದ ಮೇಲೆ ಸತತವಾಗಿ ಧಾಳಿ ಎಸಗುವ ಕ್ರಿಮಿಗಳಿಂದ ರಕ್ಷಣೆ ಪಡೆಯಬೇಕಾದರೆ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಈ ಶಕ್ತಿಯನ್ನು ಅತ್ಯುತ್ತಮವಾಗಿರಿಸಬೇಕೆಂದರೆ ನುಗ್ಗೆ ಎಲೆಗಳ ಖಾದ್ಯವನ್ನು ದಿನಕ್ಕೆರಡು ಬಾರಿಯಂತೆ ಸತತವಾಗಿ ನಾಲ್ಕು ವಾರ ಸೇವಿಸಬೇಕು.

ಮಧುಮೇಹಿಗಳಿಗೆ

ಮಧುಮೇಹಿಗಳಿಗೆ

ಇದರಲ್ಲಿ ಸಕ್ಕರೆ ಇಲ್ಲವೇ ಇಲ್ಲವಾದುದರಿಂದ ನುಗ್ಗೆ ಎಲೆಗಳು ಮಧುಮೇಹಿಗಳೂ ಸೇವಿಸಲು ಯೋಗ್ಯವಾಗಿವೆ. ಮಧುಮೇಹಿಗಳು ನುಗ್ಗೆ ಎಲೆಗಳು ಸಿಗುವ ಅಷ್ಟೂ ದಿನಗಳ ಕಾಲ ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಅಧಿಕ ರಕ್ತದೊತ್ತಡಕ್ಕೆ

ಅಧಿಕ ರಕ್ತದೊತ್ತಡಕ್ಕೆ

ನುಗ್ಗೆ ಎಲೆಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿವೆ. ಇದಕ್ಕಾಗಿ ಒಂದು ಮುಷ್ಠಿಯಷ್ಟು ಉಗುರುಬೆಚ್ಚನೆಯ ನೀರಿನಲ್ಲಿ ಸುಮಾರು ಅರ್ಧಘಂಟೆಯ ಕಾಲ ಮುಳುಗಿಸಿಡಿ. ಈ ನೀರನ್ನು ಕುಡಿಯುತ್ತಿದ್ದರೆ ಅಧಿಕ ರಕ್ತದೊತ್ತಡ ಶೀಘ್ರವೇ ನಿಯಂತ್ರಣಕ್ಕೆ ಬರುತ್ತದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ನುಗ್ಗೆ ಎಲೆಗಳ ಒಂದು ಅತ್ಯುತ್ತಮ ಪ್ರಯೋಜನವೆಂದರೆ ಮೂಳೆಗಳನ್ನು ದೃಢಗೊಳಿಸುವಲ್ಲಿ ನೆರವಾಗುವುದು. ಈ ಎಲೆಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಹಾಗೂ ಇತರ ಪೋಷಕಾಂಶಗಳು ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುವ ಮೂಲಕ ಸಂಧಿವಾತವಾಗುವುದರಿಂದ ರಕ್ಷಿಸುತ್ತದೆ.

ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!

ಕಾಮೋತ್ತೇಜಕವಾಗಿದೆ

ಕಾಮೋತ್ತೇಜಕವಾಗಿದೆ

ನುಗ್ಗೆ ಎಲೆಗಳ ಈ ಪ್ರಯೋಜನ ಅಚ್ಚರಿ ಮೂಡಿಸುತ್ತದೆ. ಈ ಎಲೆಗಳು ಕಾಮೋತ್ತೇಜಕವೂ ಆಗಿವೆ ಹಾಗೂ ಕಾಮಬಯಕೆಯನ್ನು ಹೆಚ್ಚಿಸುತ್ತವೆ. ತನ್ಮೂಲಕ ಇದು ನೈಸರ್ಗಿಕ ಸಂಪುಸಕತ್ವ ನಿವಾರಕವೂ ಆಗಿದೆ.

ಎದೆಹಾಲಿನ ಉತ್ಪತ್ತಿಗಾಗಿ

ಎದೆಹಾಲಿನ ಉತ್ಪತ್ತಿಗಾಗಿ

ಗರ್ಭಿಣಿಯರು ಮತ್ತು ಬಾಣಂತಿಯರು ನುಗ್ಗೆ ಎಲೆಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಎದೆಹಾಲಿನ ಉತ್ಪನ್ನ ಉತ್ತಮವಾಗಿರುತ್ತದೆ ಹಾಗೂ ಹೆರಿಗೆಯ ಬಳಿಕ ಮಗುವಿಗೆ ಕುಡಿಯಲು ಹೆಚ್ಚಿನ ಪ್ರಮಾಣದ ಹಾಲು ಲಭ್ಯವಾಗುತ್ತದೆ.

ರಕ್ತಹೀನತೆಯ ನಿವಾರಣೆಗಾಗಿ

ರಕ್ತಹೀನತೆಯ ನಿವಾರಣೆಗಾಗಿ

ನುಗ್ಗೆ ಎಲೆಗಳ ಇನೊಂದು ಪ್ರಮುಖ ಪ್ರಯೋಜನವೆಂದರೆ ಇದರ ಸೇವನೆಯಿಂದ ರಕ್ತದ ಕೆಂಪುರಕ್ತಕಣಗಳ ಸಂಖ್ಯೆ ವೃದ್ದಿಸುವುದಾಗಿದೆ. ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿದೆ ಹಾಗೂ ಇವು ಕೆಂಪುರಕ್ತಕಣಗಳ ಹೆಚ್ಚಳಕ್ಕೆ ನೆರವಾಗುತ್ತವೆ.

ಜೀರ್ಣಕ್ರಿಯೆ ಉತ್ತಮಗೊಳ್ಳಲು

ಜೀರ್ಣಕ್ರಿಯೆ ಉತ್ತಮಗೊಳ್ಳಲು

ನುಗ್ಗೆ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತವೆ. ಅಲ್ಲದೇ ವಿಶೇಷವಾಗಿ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಸಮರ್ಪಕವಾಗಿರಲು ನೆರವಾಗುತ್ತವೆ.

ಸೋಂಕುಗಳ ವಿರುದ್ಧ ಹೋರಾಡುತ್ತದೆ

ಸೋಂಕುಗಳ ವಿರುದ್ಧ ಹೋರಾಡುತ್ತದೆ

ನುಗ್ಗೆ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣ ಗಂಟಲು, ಎದೆ ಹಾಗೂ ಚರ್ಮದ ಸೋಂಕುಗಳನ್ನು ತಡೆಯಲು ಹಾಗೂ ಸೋಂಕು ತಗಲಿದ್ದರೆ ಇದನ್ನು ವಾಸಿಯಾಗಿಸಲು ನೆರವಾಗುತ್ತದೆ. ಇದು ನುಗ್ಗೆ ಎಲೆಗಳ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ.

ಅತಿಸಾರದಿಂದ ರಕ್ಷಿಸುತ್ತದೆ

ಅತಿಸಾರದಿಂದ ರಕ್ಷಿಸುತ್ತದೆ

ನುಗ್ಗೆ ಎಲೆಗಳ ರಸವನ್ನು ಕೊಂಚ ಜೇನು ಮತ್ತು ಎಳನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ಅತಿಸಾರ ತಕ್ಷಣ ನಿಲ್ಲುತ್ತದೆ. ಈ ವಿಧಾನವನ್ನು ಇಂದಿಗೂ ಭಾರತದ ಹಳ್ಳಿಗಾಡಿನಲ್ಲಿ ಅನುಸರಿಸಲಾಗುತ್ತಿದ್ದು ಇವರು ಬೇರೆ ಔಷಧಿಯನ್ನೇ ತೆಗೆದುಕೊಳ್ಳುವುದಿಲ್ಲ.

ತೂಕ ಇಳಿಯಲು ನೆರವಾಗುತ್ತದೆ

ತೂಕ ಇಳಿಯಲು ನೆರವಾಗುತ್ತದೆ

ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಹಾಗೂ ಕ್ಲೋರೋಜೆನಿಕ್ ಆಮ್ಲ ಎಂಬ ಆಂಟಿ ಆಕ್ಸಿಡೆಂಟು ಇದ್ದು ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ದೇಹ ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆಗೊಳಿಸಿ ತೂಕ ಇಳಿಯಲು ನೆರವಾಗುತ್ತದೆ.

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಣೆ ನೀಡುವ ಕಾರಣ ಚರ್ಮದ ಅಡಿಯಲ್ಲಿ ಕೀವು ತುಂಬಿಕೊಳ್ಳುವುದರಿಂದ ರಕ್ಷಣೆ ದೊರಕಿದಂತಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಲು ನೆರವಾಗುತ್ತದೆ.

ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ

ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ

ಈ ಎಲೆಗಳಲ್ಲಿ ಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳಿದ್ದು ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಾಧಾರವಾಗಿವೆ. ವಿಶೇಷವಾಗಿ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ನಮ್ಮ ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಮೆದುಳಿಗೆ ಮುದನೀಡುವ ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ.

ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ

ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ

ಈ ಎಲೆಗಳಲ್ಲಿರುವ ವಿಟಮಿನ್ ಸಿ ಮತ್ತು ಇ ಆರೋಗ್ಯವನ್ನು ವೃದ್ಧಿಸುತ್ತವೆ. ವಿಟಮಿನ್ ಸಿ ದೇಹದಲ್ಲಿ ನ್ಯೂರೋಟ್ರಾನ್ಸ್ ಮಿಟರ್‌ಗಳ ಹೆಚ್ಚು ಹೆಚ್ಚು ಉತ್ಪತ್ತಿಗೆ ನೆರವಾದರೆ ವಿಟಮಿನ್ ಇ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಇದರಿಂದ ಎದುರಾಗುವ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.

English summary

Health Benefits Of Eating Drumstick Leaves

When it comes to drumstick trees, it is said that the entire tree is beneficial for us in multiple ways. The drumstick is good for those who are suffering from any stomach infections, the leaves of the drumstick are good for diabetic patients, the gum emitted from the tree is good in healing wounds and the bark of the tree is used to give you strong teeth. Drumstick leaves are specially considered to have all the vitamins and proteins needed by us.
X
Desktop Bottom Promotion