ಸಾಂಬಾರ ಪದಾರ್ಥಗಳ ರಾಜ 'ದಾಲ್ಚಿನ್ನಿ' ಯನ್ನು ಎಷ್ಟು ಹೊಗಳಿದರೂ ಸಾಲದು!

Posted By: Arshad Hussain
Subscribe to Boldsky

ತೂಕ ಇಳಿಕೆಗೆ ದಾಲ್ಚಿನ್ನಿ ಒಂದು ಅದ್ಭುತವಾದ ಆಯ್ಕೆ ಎಂದು ನಿಮಗೆ ಮೊದಲೇ ಗೊತ್ತಿತ್ತೇ? ಅಡುಗೆಯ ರುಚಿ ಹೆಚ್ಚಿಸುವ ಈ ಸಾಂಬಾರ ಪದಾರ್ಥ ಕೇವಲ ತೂಕ ಇಳಿಸಲು ಮಾತ್ರವಲ್ಲ, ಒಟ್ಟಾರೆ ಆರೋಗ್ಯ ವೃದ್ಧಿಸಲೂ ನೆರವಾಗುತ್ತದೆ. ಆರೋಗ್ಯವೃದ್ಧಿ ಗುಣಗಳ ಜೊತೆಗೇ ಇದು ಸೌಂದರ್ಯವರ್ಧಕ ಹಾಗೂ ಔಷಧೀಯ ಗುಣಗಳನ್ನೂ ಹೊಂದಿದೆ. ಹಲವಾರು ಖಾದ್ಯಗಳಲ್ಲಿ ದಾಲ್ಚಿನ್ನಿಯನ್ನು ರುಚಿಕಾರಕವಾಗಿ ಬಳಸಲಾಗುತ್ತದೆ. ಇದರ ಪರಿಮಳ ಹಾಗೂ ರುಚಿ ಆ ಖಾದ್ಯವನ್ನು ಎಲ್ಲರ ಮನಮೆಚ್ಚಿಸುವಲ್ಲಿ ಯಶಸ್ವಿಯಾಗುತ್ತದೆ. ಕೆಲವಾರು ಸಿಹಿ ಪದಾರ್ಥದಲ್ಲಿಯೂ ದಾಲ್ಚಿನ್ನಿಯನ್ನು ಉಪಯೋಗಿಸಲಾಗುತ್ತದೆ.

ಹಲವು ಸಾಂಪ್ರಾದಾಯಿಕ ಅಡುಗೆಗಳಲ್ಲಿಯೂ ದಾಲ್ಚಿನ್ನಿಯನ್ನು ತಪ್ಪದೇ ಬಳಸಲಾಗುತ್ತದೆ. ದಾಲ್ಚಿನ್ನಿಯಲ್ಲಿ ಹಲವು ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ವಿಶೇಷವಾಗಿ ಪೊಟ್ಯಾಶಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಮೆಗ್ನೀಶಿಯಂ, ಸತು ಮತ್ತು ಕಬ್ಬಿಣ ಹೆಚ್ಚಿನ ಪ್ರಮಾಣದಲ್ಲಿವೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. 

ಆರೋಗ್ಯ ಟಿಪ್ಸ್: ದಾಲ್ಚಿನ್ನಿ-ಜೇನಿನ ಜೋಡಿಯನ್ನು ಎಷ್ಟು ಹೊಗಳಿದರೂ ಸಾಲದು!

ಅಷ್ಟೇ ಅಲ್ಲ, ಜಠರಗರುಳಿನ ತೊಂದರೆ, ಉಸಿರಾಟದ ತೊಂದರೆ ಹಾಗೂ ಜೀರ್ಣಕ್ರಿಯೆಯ ತೊಂದರೆಗಳನ್ನೂ ಗುಣಪಡಿಸಲು ನೆರವಾಗುತ್ತದೆ. ಇಂದಿನ ಲೇಖನದಲ್ಲಿ ನಾವು ದಾಲ್ಚಿನ್ನಿ ನೀರನ್ನು ಕುಡಿಯುವ ಮೂಲಕ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ. ನಿತ್ಯದ ಪೇಯಗಳ ಬದಲಿಗೆ ದಾಲ್ಚಿನ್ನಿ ನೀರನ್ನು ಕುಡಿಯುವ ಮುಲಕ ಹೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ..... 

ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ನೆರವಾಗುತ್ತದೆ

ದಾಲ್ಚಿನ್ನಿನೀರು ಮತ್ತು ಜೇನನ್ನು ಬೆರೆಸಿದ ಪೇಯ ತೂಕ ಇಳಿಕೆಗೆ ಅತ್ಯುತ್ತಮವಾದ ಪೇಯವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗುತ್ತವೆ. ಅಲ್ಲದೇ ಈ ಪೇಯದ ಸೇವನೆಯಿಂದ ಹೊಟ್ಟೆ ತುಂಬಿದಂತಹ ಭಾವನೆಯುಂಟುಮಾಡಿ ಅನಗತ್ಯ ಆಹಾರ ಸೇವನೆಯನ್ನು ತಡೆಯುತ್ತದೆ ಹಾಗೂ ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

National Center For Biotechnology ಎಂಬ ಸಂಸ್ಥೆಯ ಪ್ರಕಾರ ಮಹಿಳೆಯರ ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವನ್ನು ದಾಲ್ಚಿನ್ನಿ ನೀರಿನ ಸೇವನೆಯಿಂದ ಕಡಿಮೆಗೊಳಿಸಬಹುದು. ಇದರ ನೋವು ನಿವಾರಕ ಗುಣ ಮತ್ತು ರಕ್ತ ಹೆಪ್ಪುಗಟ್ಟದಂತೆ ತಡೆಯುವ ಗುಣಗಳು ನೋವನ್ನು ಕಡಿಮೆ ಮಾಡುತ್ತವೆ ಹಾಗೂ ಅಧಿಕ ಸ್ರಾವವನ್ನು ನಿಯಂತ್ರಿಸುತ್ತದೆ.

 ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ದಾಲ್ಚಿನ್ನಿ ನೀರಿನಲ್ಲಿ ಪಾಲಿಫಿನಾಲ್ ಮತ್ತು ಪ್ರೊಆಂಥಿಸಯನೈಡ್ ನಂತಹ ಉತ್ತಮ ಆಂಟಿ ಆಕ್ಸಿಡೆಂಟುಗಳಿವೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ, ದಾಲ್ಚಿನ್ನಿ ನೀರು ಉತ್ತಮ ಶಿಲೀಂಧ್ರ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಹಾಗೂ ವೈರಸ್ ನಿರೋಧಕ ಗುಣಗಳನ್ನು ಹೊಂದಿದೆ. ಇವು ಹೃದಯದ ತೊಂದರೆ, ಉಸಿರಾಟದ ತೊಂದರೆ ಮೊದಲಾದವುಗಳು ಎದುರಾಗದಂತೆ ರಕ್ಷಿಸುತ್ತವೆ.

 PCOS ನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ

PCOS ನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ

ಕೆಲವು ಮಹಿಳೆಯರಲ್ಲಿ ರಸದೂತದ ಏರಿಳಿತದ ಪರಿಣಾಮವಾಗಿ PCOS, ಅಥವಾ polycystic ovarian syndrome ಎಂಬ ತೊಂದರೆ ಎದುರಾಗುತ್ತದೆ. ಈ ತೊಂದರೆ ಎದುರಾದಾಗ ಗರ್ಭಾಶಯದ ಹೊರಗೋಡೆಗಳಲ್ಲಿ ಗೋಲಿಗಳಂತಹ ಭಾಗಗಳು ರಚನೆಗೊಂಡು ಊದಿಕೊಳ್ಳುತ್ತದೆ ಹಾಗೂ ಇದರಿಂದ ಅತೀವ ನೋವು, ರಕ್ತಸ್ರಾವ ಎದುರಾಗುತ್ತದೆ. ದಾಲ್ಚಿನ್ನಿ ಬೆರೆಸಿದ ನೀರನ್ನು ಕುಡಿಯುವ ಮೂಲಕ PCOS ನ ಪರಿಣಾಮಗಳನ್ನು ಕಡಿಮೆ ಮಾಡಲಾಗುತ್ತದೆ ಹಾಗೂ ಇದು ಈ ತೊಂದರೆಯಿಂದ ಬಳಲುತ್ತಿರುವ ಮಹಿಳೆಯರ ದೇಹ ಇನ್ಸುಲಿನ್ ಅನ್ನು ನಿರೋಧಿಸುವ ಗುಣವನ್ನು ಕಡಿಮೆಗೊಳಿಸುತ್ತದೆ.

 ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ದಾಲ್ಚಿನ್ನಿ ಬೆರೆಸಿದ ನೀರನ್ನು ಕುಡಿಯುವ ಮೂಲಕ ಸ್ಮರಣಶಕ್ತಿ ಹಾಗೂ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಒಂದು ನಂಬಲರ್ಹ ಸಂಶೋಧನೆಯಲ್ಲಿ ತಿಳಿಸಿದಂತೆ ದಾಲ್ಚಿನ್ನಿಯ ಸೇವನೆಯಿಂದ ಮೆದುಳಿನ ಕಾಯಿಲೆಗಳಾದ ಪಾರ್ಕಿನ್ಸನ್ಸ್ ಕಾಯಿಲೆ, ಆಲ್ಝೀಮರ್ಸ್ ಕಾಯಿಲೆ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಏಕಾಗ್ರತೆ ಮತ್ತು ತಾರ್ಕಿಕಶಕ್ತಿಯೂ ಉತ್ತಮಗೊಳ್ಳುತ್ತದೆ.

ಹಲ್ಲುನೋವು ಕಡಿಮೆಗೊಳಿಸುತ್ತದೆ

ಹಲ್ಲುನೋವು ಕಡಿಮೆಗೊಳಿಸುತ್ತದೆ

ಕೆಲವೊಮ್ಮೆ ಹಲ್ಲುನೋವು ತಡೆಯಲಾರದಷ್ಟು ಬಾಧಿಸಬಹುದು. ಈ ಸಮಯದಲ್ಲಿ ದಾಲ್ಚಿನ್ನಿಯ ಸೇವನೆಯಿಂದ ಹಲ್ಲುನೋವು ಕಡಿಮೆಯಾಗುತ್ತದೆ. ನಿತ್ಯವೂ ದಾಲ್ಚಿನ್ನಿ ನೀರನ್ನು ಕುಡಿಯುವ ಮೂಲಕ ಹಲ್ಲುನೋವು ಹಾಗೂ ಒಸಡುಗಳು ಊದಿಕೊಳ್ಳುವುದು ಮೊದಲಾದ ತೊಂದರೆಗಳೂ ಇಲ್ಲವಾಗುತ್ತದೆ.

ಮಧುಮೇಹದಿಂದ ರಕ್ಷಿಸುತ್ತದೆ

ಮಧುಮೇಹದಿಂದ ರಕ್ಷಿಸುತ್ತದೆ

ದಾಲ್ಚಿನ್ನಿ ಬೆರೆಸಿದ ನೀರಿನಲ್ಲಿ ಪಾಲಿಫೆನಾಲಿಕ್ ಸಂಯುಕ್ತಗಳಿವೆ ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ವಿಶೇಷವಾಗಿ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಮಧುಮೇಹಿಗಳೂ ಈ ನೀರನ್ನು ನಿತ್ಯವೂ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ.

 ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತದೆ

ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತದೆ

ದಾಲ್ಚಿನ್ನಿಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣಗಳಿವೆ ಎಂಬ ಮಾಹಿತಿ ಅಚ್ಚರಿ ಮೂಡಿಸಬಹುದು. ಇದರಲ್ಲಿ ಕ್ಯಾನ್ಸರ್ ನಿರೋಧಕ ಗುಣಗಳಿವೆ ಹಾಗೂ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ನಿಧಾನಗೊಳಿಸುವುದನ್ನು ಸಾಬೀತುಗೊಳಿಸಲಾಗಿದೆ. ಆದ್ದರಿಂದ ಇಂದಿನಿಂದಲೇ ದಾಲ್ಚಿನ್ನಿ ನೀರನ್ನು ಕುಡಿಯಲು ಪ್ರಾರಂಭಿಸಿ.

 ಶ್ರವಣ ಶಕ್ತಿಯನ್ನು ಹೆಚ್ಚಿಸಿ

ಶ್ರವಣ ಶಕ್ತಿಯನ್ನು ಹೆಚ್ಚಿಸಿ

ಒಂದು ವೇಳೆ ನಿಮಗೆ ಶ್ರವಣಶಕ್ತಿಯಲ್ಲಿ ಏನಾದರೂ ಕೊರತೆ ಇದ್ದರೆ ಇಂದಿನಿಂದಲೇ ದಾಲ್ಚಿನ್ನಿ ನೀರನ್ನು ಕುಡಿಯಲು ಪ್ರಾರಂಭಿಸಿ. ಏಕೆಂದು ಗೊತ್ತೇ? ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳು ಶ್ರವಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ತ್ವಚೆಯನ್ನು ಉತ್ತಮಗೊಳಿಸುತ್ತದೆ

ತ್ವಚೆಯನ್ನು ಉತ್ತಮಗೊಳಿಸುತ್ತದೆ

ದಾಲ್ಚಿನ್ನಿ ನೀರಿನ ಸೇವನೆಯಿಂದ ತ್ವಚೆಯ ರಚನೆ ಉತ್ತಮಗೊಳ್ಳುತ್ತದೆ ಹಾಗೂ ತ್ವಚೆಯ ವರ್ಣವನ್ನು ಸಹಜವರ್ಣಕ್ಕೆ ಮರಳಿಸಲು ನೆರವಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಅಲ್ಲದೇ ತ್ವಚೆಯಲ್ಲಿ ಕಲ್ಮಶಗಳು ಸಂಗ್ರಹಗೊಳ್ಳದಂತೆ ತಡೆಯುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಿತ್ಯವೂ ದಾಲ್ಚಿನ್ನಿ ನೀರನ್ನು ಕುಡಿಯುವುದನ್ನು ಪ್ರಾರಂಭಿಸಿ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Health Benefits Of Drinking Cinnamon Water

Cinnamon is a powerhouse of nutrients and antioxidants. It is a rich source of potassium, manganese, calcium, magnesium, zinc and iron.These nutrients help in lowering your blood pressure and blood sugar levels. It also treats gynaecological problems, respiratory illnesses and digestive problems. So, in this article, wewill be talking about cinnamon water. Cinnamon water is a healthy alternative and health experts have suggested that drinking cinnamon water daily has innumerable health benefits. Read below to know about the health benefits of drinking cinnamon water.