ಇಂತಹ ಆರು ಬಗೆಯ ಹಾಲಿನಲ್ಲಿದೆ, ಲೆಕ್ಕಕ್ಕೂ ಸಿಗದಷ್ಟು ಪ್ರಯೋಜನಗಳು

Posted By: Hemanth Amin
Subscribe to Boldsky

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ರೀತಿಯ ಪೋಷಕಾಂಶಗಳು ಬೇಕೇಬೇಕು. ಯಾವುದಾದರೂ ವಿಟಮಿನ್ ಅಥವಾ ಖನಿಜಾಂಶದ ಕೊರತೆಯಾದಾಗ ಅದರಿಂದ ಏನಾದರೂ ಸಮಸ್ಯೆಯಾಗುವುದು. ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಆಹಾರಗಳನ್ನು ಬಳಸಿಕೊಂಡು ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಅದರಲ್ಲೂ ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಆದರೆ ಇದರಲ್ಲಿ ಕೇವಲ ಕ್ಯಾಲ್ಸಿಯಂ ಮಾತ್ರ ಇದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ.

ಹೀಗಾಗಿ ಹಾಲು ಸೇವನೆಯಿಂದ ದೂರವಿರುತ್ತಾರೆ. ಭಾರತದಲ್ಲಿ ವಿವಿಧ ಬಗೆಯ ಹಾಲು ಸಿಗುವುದು. ಬೆಳೆಯುವ ಮಕ್ಕಳಿಗೆ ಮಾತ್ರವಲ್ಲದೆ, ಎಲ್ಲಾ ವಯಸ್ಸಿನವರಿಗೂ ಇದು ತುಂಬಾ ಒಳ್ಳೆಯದು. ಕೆನೆಯುಕ್ತ ಮತ್ತು ಕೊಬ್ಬು ಕಡಿಮೆ ಇರುವ ಹಾಲಿನ ಸೇವನೆ ದೇಹಕ್ಕೆ ಒಳ್ಳೆಯದು. ಆರೋಗ್ಯಕ್ಕೆ ಹಲವಾರು ಲಾಭಗಳನ್ನು ಉಂಟುಮಾಡುವಂತಹ ಹಲವಾರು ಬಗೆಯ ಹಾಲುಗಳ ಬಗ್ಗೆ ನಿಮಗಿಂದು ತಿಳಿಸಲಿದ್ದೇವೆ...

ತೆಂಗಿನ ಹಾಲು

ತೆಂಗಿನ ಹಾಲು

ಭಾರತದಲ್ಲಿ ಸಿಗುವ ಹಾಲುಗಳಲ್ಲಿ ಇದು ಉತ್ತಮ ವಿಧದ್ದಾಗಿದೆ. ತೆಂಗಿನ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಶಿಯಂ, ವಿಟಮಿನ್ ಗಳು, ಖನಿಜಾಂಶಗಳು ಮತ್ತು ನಾರಿನಾಂಶವಿದೆ. ಇದು ಮೂತ್ರಕೋಶದ ಕಲ್ಲು ನಿವಾರಣೆ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಯಕೃತ್ ಕಾಯಿಲೆ ನಿವಾರಿಸುವುದು. ಇದು ತೂಕ ಕಳೆದುಕೊಳ್ಳಲು, ಜೀರ್ಣಕ್ರಿಯೆ ಹೆಚ್ಚಿಸಲು, ಉರಿಯೂತ ಶಮನಕ್ಕೆ ಮತ್ತು ಚರ್ಮದ ಕಾಯಿಲೆಗಳಿಗೆ ಒಳ್ಳೆಯದು. ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ, ಇ, ಮತ್ತು ಬಿ ಸಂಕೀರ್ಣದ ವಿಟಮಿನ್ ಗಳಿವೆ. ತೆಂಗಿನ ಹಾಲಿನಲ್ಲಿ ಸಾಮಾನ್ಯ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಇದೆ.

ಮನೆಯಲ್ಲಿ ತಯಾರಿಸಿದ ತೆಂಗಿನ ಹಾಲು-ಉಪಯೋಗ ಹಲವು...

 ಬಾದಾಮಿ ಹಾಲು

ಬಾದಾಮಿ ಹಾಲು

ಬಾದಾಮಿ ಹಾಲಿನಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ. ಇದು ಹೊಟ್ಟೆ ತುಂಬಿದಂತೆ ಇಡುವುದು ಮತ್ತು ಸಸ್ಯಹಾರಿಗಳಿಗೆ ಒಳ್ಳೆಯ ಆಯ್ಕೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಇ, ಮೆಗ್ನಿಶಿಯಂ, ಏಕಪರ್ಯಾಪ್ತ ಕೊಬ್ಬು, ಮೆಗ್ನಿಶಿಯಂ, ತಾಮ್ರ ಮತ್ತು ರಿಬೋಫ್ಲಾವಿನ್ ಇದೆ. ಇದರಲ್ಲಿ ದನದ ಹಾಲಿಗಿಂತ ಕ್ಯಾಲರಿ ಕಡಿಮೆ ಇದೆ. ಹೃದಯದ ಕಾಯಿಲೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವುದು.

'ಬಾದಾಮಿ ಹಾಲು' ಪ್ರಿಯರಿಗೆ ಇಲ್ಲಿದೆ ನೋಡಿ ಸಿಹಿ-ಸಿಹಿ ಸುದ್ದಿ

ದನದ ಹಾಲು

ದನದ ಹಾಲು

ಭಾರತದಲ್ಲಿ ಹೆಚ್ಚಾಗಿ ಬಳಸುವಂತಹ ಹಾಲು ದನದ ಹಾಲು. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಐಯೋಡಿನ್, ಪೊಟಾಶಿಯಂ, ಕೊಬ್ಬುಗಳು, ವಿಟಮಿನ್ ಡಿ, ವಿಟಮಿನ್ ಬಿ ಮತ್ತು ಖನಿಜಾಂಶಗಳು ಇವೆ. ಇದು ಥೈರಾಯ್ಡ್ ಕ್ರಿಯೆಗೆ ಸಹಕರಿಸುವುದು. ಮೂಳೆಗಳಿಗೆ ಶಕ್ತಿ ನೀಡಿ ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು.

ಮೇಕೆ ಹಾಲು

ಮೇಕೆ ಹಾಲು

ಮೇಕೆ ಹಾಲಿನಲ್ಲಿ ಕಬ್ಬಿನಾಂಶ, ಕ್ಯಾಲ್ಸಿಯಂ, ಪ್ರೋಸ್ಪರಸ್ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದ್ದು, ಕೊಬ್ಬು ಕಡಿಮೆಯಿದೆ. ಇದು ಎಲುವು ತೆಳುವಾಗದಂತೆ ನೋಡಿಕೊಂಡು ಪ್ರತಿರೋಧಕ ಶಕ್ತಿ ಹೆಚ್ಚಿಸಿ, ರಕ್ತಹೀನತೆ ನಿವಾರಿಸುವುದು. ಭಾರತೀಯ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಕಬ್ಬಿನಾಂಶ ಕೊರತೆಯನ್ನು ಮೇಕೆ ಹಾಲಿನ ಸೇವನೆಯಿಂದ ಕಡಿಮೆ ಮಾಡಬಹುದು. ಇದು ಜೀರ್ಣಕ್ರಿಯೆಗೆ ಸಹಕರಿಸಿ, ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಇಷ್ಟು ಮಾತ್ರವಲ್ಲದೆ ಕಬ್ಬಿಣ, ಕ್ಯಾಲ್ಸಿಯಂ. ಪ್ರೋಸ್ಫೊರಸ್ ಮತ್ತು ಮೆಗ್ನಿಶಿಯಂ ಹೀರಿಕೊಳ್ಳಲು ನೆರವಾಗುವುದು. ಇದು ಹೊಟ್ಟೆಯ ಉರಿಯೂತ ಶಮನಕ್ಕೆ ಸಹಕಾರಿ.

ಹಸಿ ಹಾಲು

ಹಸಿ ಹಾಲು

ಹಸಿ ಹಾಲಿನಲ್ಲಿ ಪ್ರೋಟೀನ್, ಕಾರ್ಬ್ರೋಹೈಡ್ರೇಟ್ಸ್, ಕೊಬ್ಬು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇರುವುದು. ಇದರಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇರುವುದು ಮತ್ತು ಹೊಟ್ಟೆಯ ಆರೋಗ್ಯ ಕಾಪಾಡುವುದು. ಇದು ಪ್ರತಿರೋಧಕ ಶಕ್ತಿ ಹೆಚ್ಚು ಮಾಡಿ ದೇಹಕ್ಕೆ ವಿಟಮಿನ್ ಮತ್ತು ಖನಿಜಾಂಶಗಳ ಲಾಭ ಸಿಗುವಂತೆ ಮಾಡುವುದು. ಪಾಶ್ಚರೀಕರಿಸಿದ ಹಾಲು ಒಳ್ಳೆಯ ಆಯ್ಕೆ.

ಸೋಯಾ ಹಾಲು

ಸೋಯಾ ಹಾಲು

ಸಸ್ಯಹಾರಿಗಳು ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರಿಗೆ ಇದು ಒಳ್ಳೆಯ ಪರಿಹಾರ. ಸೋಯಾ ಹಾಲಿನಲ್ಲಿ ಕೊಬ್ಬಿನಾಮ್ಲಗಳು, ಪ್ರೋಟೀನ್, ನಾರಿನಾಂಶ, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದು ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡುವ ಕಾರಣ ಹೃದಯಕ್ಕೂ ಒಳ್ಳೆಯದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ. ಒಮೆಗಾ3 ಮತ್ತು ಒಮೆಗಾ6 ಕೊಬ್ಬಿನಾಮ್ಲವಿರುವ ಸೋಯಾ ಹಾಲು ರಕ್ತನಾಳಗಳನ್ನು ಬಲಪಡಿಸುವುದು, ಜನನಾಂಗದ ಕ್ಯಾನ್ಸರ್, ಅಸ್ಥಿರಂಧ್ರತೆ ಮತ್ತು ಋತುಚಕ್ರದ ಮೊದಲಿನ ಸಮಸ್ಯೆ ನಿವಾರಿಸುವುದು.

ಹಾಲಿಗೂ, ಸೋಯಾಗೂ ಬಿಪಿಗೂ ಏನು ಸಂಬಂಧ?

English summary

Health Benefits Of Different Types Of Milk

Most of the people think that milk provides only calcium and is one of the healthy drinks for growing children. But did you know that no matter what the age, we can always benefit from skimmed or other varieties of low-fat milk.There are a lot of milk choices available these days. So you can utilise the benefits of milk from any of your favourite variety of milk. So we share with you today the different types of milk available in the grocery stores these days and their immense health benefits.