For Quick Alerts
ALLOW NOTIFICATIONS  
For Daily Alerts

ಈ ಏಳು ವಿಟಮಿನ್‌ಗಳು ನೀವು ಉದ್ದವಾಗಿ ಬೆಳೆಯಲು ನೆರವಾಗುತ್ತದೆ!

By Sushma Charhra
|

ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆಹಾರವು ಪ್ರಮುಖವಾದ ಮಹತ್ವವನ್ನು ಪಡೆಯುತ್ತದೆ. ಆಹಾರದಲ್ಲಿ ಲಭ್ಯವಾಗುವ ವಿಟಮಿನ್ಸ್ ಗಳು ಎತ್ತರವನ್ನು ಹೆಚ್ಚಿಸುವಲ್ಲಿ ಗಣನೀಯ ಸೇವೆ ನೀಡುತ್ತದೆ ಮತ್ತು ಅನುವಂಚಿಕ ರಚನೆಗೆ ಪ್ರಮುಖ ಪಾತ್ರ ವಹಿಸುತ್ತದೆ.ಈ ಲೇಖನದಲ್ಲಿ ನಾವು ಯಾವೆಲ್ಲ ವಿಟಮಿನ್ ಗಳು ಎತ್ತರವನ್ನು ಹೆಚ್ಚಿಸುವುದಕ್ಕೆ ಸಹಕಾರ ನೀಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಪ್ರತಿಯೊಬ್ಬ ಮನುಷ್ಯನ ದೇಹವು ಸಮತೋಲಿತ ಆಹಾರ ಕ್ರಮವನ್ನು ಬೇಡುತ್ತದೆ ಅದರಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಶ್ರೀಮಂತವಾಗಿ ಇರಬೇಕಾಗುತ್ತದೆ. ವಿಟಮಿನ ಗಳಾದ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಡಿ ಮತ್ತು ವಿಟಮಿನ್ ಸಿ ಮತ್ತು ಪೋಷಕಾಂಶಗಳಾದ ಪಾಸ್ಪರಸ್ ಮತ್ತು ಕ್ಯಾಲ್ಸಿಯಂ ಕೂಡ ನಿಮ್ಮ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೆರವು ನೀಡುತ್ತದೆ.

vitamins that help you grow taller

ಹಲವಾರು ಅಧ್ಯಯನಗಳು ಸಾಬೀತು ಪಡಿಸಿರುವಂತೆ ಸ್ವಲ್ಪವೇ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ಗಳು ಎತ್ತರವಾಗಿ ಬೆಳೆಯಲು ಸಹಕಾರ ನೀಡುವುದಿಲ್ಲ, ಕೆಲವೊಮ್ಮೆ ಪೋಷಕಾಂಶಗಳ ಕೊರತೆ ಕೂಡ ಎತ್ತರವನ್ನು ಕಡಿಮೆಯಾಗುವಂತೆ ಮಾಡಬಹುದು.

ಯಾವ ಜನರು ಮಾಂಸಖಂಡ ಬಲವರ್ಧನೆಗಾಗಿ ಪೋಟೀನ್ ಯುಕ್ತ ಪಾನೀಯಗಳನ್ನು ಸೇವಿಸುತ್ತಾರೋ ಅಂತವರೂ ಕೂಡ ಉದ್ದವಾಗಿ ಬೆಳೆದುಬಿಡುತ್ತಾರೆ. ಆದರೆ ಅದು ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಹಾಗಾದ್ರೆ ಯಾವುದು ಎತ್ತರವಾಗಬೇಕು ಅಂದರೆ ಯಾವ ವಿಟಮಿನ್ ಗಳ ಅಗತ್ಯವಿರುತ್ತದೆ ಎಂಬುದನ್ನು ತಿಳಿಯೋಣ.

1.ವಿಟಮಿನ್ ಬಿ1 (Thiamine)
2. ವಿಟಮಿನ್ ಬಿ2 (Riboflavin)
3. ವಿಟಮಿನ್ ಡಿ
4. ವಿಟಮಿನ್ ಸಿ
5. ವಿಟಮಿನ್ ಎ
6. ಪಾಸ್ಪರಸ್
7. ಕ್ಯಾಲ್ಸಿಯಂ

ಎತ್ತರವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಪ್ರೋಟೀನ್‌ಯುಕ್ತ ಆಹಾರಗಳು

1. ವಿಟಮಿನ್ ಬಿ1 (ಥಯಾಮಿನ್)

ವಿಟಮಿನ್ ಬಿ1 ಒಟ್ಟಾರೆ ದೇಹದ ಬೆಳವಣಿಗೆ ಮತ್ತು ಎತ್ತರವಾಗಿ ಬೆಳೆಯಲು ಸಹಾಯಕವಾಗಿದೆ.ಇದು ಜೀರ್ಣಕ್ರಿಯೆಯು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ದೇಹದ ಬೆಳವಣಿಗೆಗೆ ಸಹಕಾರ ನೀಡುವ ದೇಹದ ಅಂಗಾಂಶಗಳಿಗೆ ರಕ್ತದ ಸರಬರಾಜು ಮಾಡುವ ಕಾರ್ಯವನ್ನು ವಿಟಮಿನ್ ಬಿ1 ನಡೆಸುತ್ತದೆ. ಈ ವಿಟಮಿನ್ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನರವ್ಯೂಹ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

ವಿಟಮಿನ್ ಬಿ1 ನ ಮೂಲಗಳು: ಕಡಲೆ ಬೀಜ, ಸೋಯಾ ಬಿನ್ಸ್, ಅಕ್ಕಿ, ಓಟ್ಸ್, ಹಂದಿಯ ಮಾಂಸ, ಕಾಳುಗಳು, ಬೀಜಗಳು, ಮೊಟ್ಟೆ ಇತ್ಯಾದಿ
ಎಷ್ಟು ಮತ್ತು ಹೇಗೆ ಸೇವಿಸಬೇಕು?: ನಿಮ್ಮ ಡಯಟ್ ನಲ್ಲಿ ವಾರಕ್ಕೆ ಮೂರು ಬಾರಿಯಾದರೂ ಇಂತಹ ಆಹಾರಗಳನ್ನು ಸೇವಿಸಿ ವಿಟಮಿನ್ ಬಿ1 ನ್ನು ಪಡೆಯಿರಿ.. ಪೌಲ್ಟ್ರೀ ಆಹಾರಗಳಲ್ಲಿ ಇದು ಹೆಚ್ಚಾಗಿ ಲಭ್ಯವಿರುತ್ತದೆ.

2. ವಿಟಮಿನ್ ಬಿ2 (Riboflavin)

ವಿಟಮಿನ್ ಬಿ2 ಅಥವಾ ರಿಬೋಫ್ಲೇವಿನ್ ಕೂಡ ಮತ್ತೊಂದು ಪೋಷಕಾಂಶವಾಗಿದ್ದು ನಿಮ್ಮ ಎತ್ತರವನ್ನು ಹೆಚ್ಚಿಸುವುದಕ್ಕೆ ನೆರವು ನೀಡುತ್ತದೆ.ಇದು ಹೆಚ್ಚಾಗಿ ಹಸಿರೆಲೆ ತರಕಾರಿಗಳಲ್ಲಿ ಲಭ್ಯವಿರುತ್ತೆ. ಈ ವಿಟಮಿನ್ ನಿಮ್ಮ ಚರ್ಮ, ಉಗುರು, ಮೂಳೆ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ.

ವಿಟಮಿನ್ ಬಿ2 ಮೂಲಗಳು: ಹಸಿರೆಲೆ ತರಕಾರಿಗಳು, ಮೊಟ್ಟೆ, ಮೀನು, ಹಾಲು ಇತ್ಯಾದಿ
ಎಷ್ಟು ಮತ್ತು ಹೇಗೆ ಸೇವಿಸಬೇಕು?: ನಿಮ್ಮ ಸಲಾಡ್ ಗಳಲ್ಲಿ ಇವುಗಳನ್ನು ಸೇರಿಸಿಕೊಳ್ಳಿ

3. ವಿಟಮಿನ್ ಡಿ

ವಿಟಮಿನ್ ಡಿ ಯನ್ನು ಸೂರ್ಯನಿಂದ ಲಭ್ಯವಾಗುವ ವಿಟಮಿನ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಮೂಳೆಗಳನ್ನು ಬಲವರ್ಧಿಸಲು ಸಹಕಾರಿಯಾಗಿರುತ್ತದೆ. ವಿಟಮಿನ್ ಡಿ ಪೋಷಕಾಂಶದ ಕೊರತೆಯಿಂದ ಮೂಳೆಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳುತ್ತದೆ. ವಿಟಮಿನ್ ಡಿ ಒಂದು ಅಗತ್ಯ ಮಿನರಲ್ ಆಗಿದ್ದು ಇದು ಕ್ಯಾಲ್ಸಿಯಂ ಅನ್ನು ಮತ್ತು ಪಾಸ್ಪರಸ್ ನ್ನು ಹೀರಿಕೊಳ್ಳಲು ನೆರವು ನೀಡಿ ವ್ಯಕ್ತಿಯು ಎತ್ತರವಾಗಿ ಬೆಳೆಯಲು ಸಹಕರಿಸುತ್ತದೆ.

ವಿಟಮಿನ್ ಡಿ ಮೂಲಗಳು: ಹಾಲು, ಟೋಮೆಟೋ, ಆಲೂಗಡ್ಡೆ, ಸಿಟ್ರಸ್ ಹಣ್ಣುಗಳು, ಹೂಕೋಸು, ಕೊಬ್ಬಿರುವ ಮೀನುಗಳು, ಚೀಸ್ ಇತ್ಯಾದಿಗಳಲ್ಲೂ ಇದು ಲಭ್ಯ.ಎಷ್ಟು ಮತ್ತು ಹೇಗೆ ಸೇವಿಸಬೇಕು?: ಟ್ಯೂನಾ, ಸಲಮಾನ್, ಮತ್ತು ಮ್ಯಾಕೇರೇಲ್ ಗಳಂತ ಫ್ಯಾಟಿ ಮೀನುಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ.

4. ವಿಟಮಿನ್ ಸಿ

ವಿಟಮಿನ್ ಲಿ ಯನ್ನು ಆಸ್ಕೋಬಿಕ್ ಆಮ್ಲ ಎಂದು ಕೂಡ ಕರೆಯಲಾಗುತ್ತೆ ಮತ್ತು ಇದು ಸಹಜವಾಗಿ ಎಲ್ಲಾ ಸಿಟ್ರಸ್ ಹಣ್ಣುಗಳಲ್ಲೂ ಲಭ್ಯವಿರುತ್ತೆ. ಇದು ದೇಹದ ಟಾಕ್ಸಿನ್ ಅಂಶಗಳನ್ನು ದೇಹದಿಂದ ಹೊರಹಾಕಲು ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಇದು ಮೂಳೆಗಳ ಬೆಳವಣಿಗೆ ಮತ್ತು ಮೂಳೆಗಳನ್ನು ಬಲಿಷ್ಟಗೊಳಿಸುವುದಕ್ಕೆ ನೆರವು ನೀಡುತ್ತದೆ. ವಿಟಮಿನ್ ಸಿ ಮೂಲಗಳು: ಸಿಟ್ರಸ್ ಹಣ್ಣುಗಳು, ಸೀಬೆಹಣ್ಣು, ಟೋಮೆಟೋ, ಬೆರ್ರೀ ಹಣ್ಣುಗಳು ಆಲೂಗಡ್ಡೆ ಇತ್ಯಾದಿ ಎಷ್ಟು ಮತ್ತು ಹೇಗೆ ಸೇವಿಸಬೇಕು?: ಒಂದು ಬೌಲ್ ನಲ್ಲಿ ಎಲ್ಲಾ ರೀತಿಯ ಹಣ್ಣುಗಳನ್ನು ಅಂದರೆ ಸೀಬೆ ಹಣ್ಣು, ಕಿತ್ತಲೆ, ಕಿವಿ ಫ್ರೂಟ್, ಮತ್ತು ದ್ರಾಕ್ಷಿ ಇತ್ಯಾದಿಗಳನ್ನು ಪ್ರತಿ ದಿನ ಫ್ರೂಟ್ ಸಲಾಡ್ ಮಾಡಿ ಸೇವಿಸಿ. ಇದು ನಿಮ್ಮ ಎತ್ತರವನ್ನು ಗಣನೀಯವಾಗಿ ಹೆಚ್ಚಿಸಲು ನೆರವು ನೀಡುತ್ತದೆ.

5. ಕ್ಯಾಲ್ಸಿಯಂ

ಕ್ಯಾಲ್ಸಿಯಂ ಮತ್ತೊಂದು ಮಹತ್ವಪೂರ್ಣವಾದ ಮಿನರಲ್ ಆಗಿದ್ದು, ಅದು ವ್ಯಕ್ತಿಯ ದೇಹದ ಮೂಳೆಗಳನ್ನು ಬಲ ಪಡಿಸಲು ನೆರವು ನೀಡುತ್ತದೆ. ಇದು ಎತ್ತರವನ್ನು ಹೆಚ್ಚಿಸಲು ಕೂಡ ಬಹಳ ಮುಖ್ಯವಾದ ಅಂಶವಾಗಿದೆ. ಕ್ಯಾಲ್ಸಿಯಂ ನ್ನು ಪ್ರತಿದಿನ ಸೇವಿಸಬೇಕು ಯಾಕೆಂದರೆ ಆಗ ಮಾತ್ರ ನಿಮ್ಮ ಮೂಳೆಗಳ ಆರೋಗ್ಯ ಮತ್ತು ಅದರ ಬಲಿಷ್ಟತೆ ಮತ್ತು ಆಯಸ್ಸು ಹೆಚ್ಚಾಗಲು ಸಾಧ್ಯವಾಗುತ್ತೆ. ಕ್ಯಾಲ್ಸಿಯಂ ನ ಮೂಲಗಳು: ಹಾಲು, ಡೈರಿ ಪದಾರ್ಥಗಳಾದ ಚೀಸ್, ಬೆಣ್ಣೆ, ಸ್ಪಿನಾಚ್, ಟರ್ನಿಪ್ ಗ್ರೀನ್ಸ್ ಇತ್ಯಾದಿಗಳಲ್ಲಿ ಲಭ್ಯ. ಎಷ್ಟು ಮತ್ತು ಹೇಗೆ ಸೇವಿಸಬೇಕು?: ಪ್ರತಿ ದಿನ ರಾತ್ರಿ ಒಂದು ಲೋಟ ಹಾಲು ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಿ. ಚೀಸ್, ಮೊಸರು, ಬೆಣ್ಣೆ, ತುಪ್ಪ ಇತ್ಯಾದಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

6. ಪಾಸ್ಪರಸ್

ಕ್ಯಾಲ್ಸಿಯಂ ಮಾತ್ರವೇ ನಿಮ್ಮ ಮೂಳೆಗಳನ್ನು ಬಲಿಷ್ಟಗೊಳಿಸಲು ಮತ್ತು ಟಿಶ್ಯೂಗಳನ್ನು ಹೆಚ್ಚಿಸಲು ಸಾಕಾಗುವುದಿಲ್ಲ. ಪಾಸ್ಪರಸ್ ಕೂಡ ಕ್ಯಾಲ್ಸಿಯಂ ಜೊತೆಗೆ ಬೇಕಾಗುತ್ತದೆ. ಇವೆರಡೂ ಒಟ್ಟಿಗೆ ಸೇರಿದರೆ ಮಾತ್ರ ಎತ್ತರದಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ.ದೇಹದ ಮೂಳೆಗಳಲ್ಲಿ ಶೇಕಡಾ 80 ರಷ್ಟು ಪಾಸ್ಪರಸ್ ಇರುತ್ತದೆ ಮತ್ತು ಇದು ಆಸ್ಟಿಯೋಪೋರೋಸಿಸ್ ಮತ್ತು ಮೂಳೆಗಳ ನಿಧಾನಗತಿಯ ಬೆಳವಣಿಗೆಯನ್ನು ತಡೆಯುತ್ತಿರುತ್ತದೆ.

ಪಾಸ್ಪರಸ್ ನ ಮೂಲಗಳು : ಬೀಜಗಳು, ಬೀನ್ಸ್, ಫಿಶ್ ಇತ್ಯಾದಿಗಳಲ್ಲಿ ಅಗತ್ಯವಾಗುವಷ್ಟು ಪಾಸ್ಪರಸ್ ಅಂಶಗಳು ಇರುತ್ತದೆ. ಎಷ್ಟು ಮತ್ತು ಹೇಗೆ ಸೇವಿಸಬೇಕು?: ಒಂದು ಮುಷ್ಟಿಯಷ್ಟು ಬೀಜಗಳನ್ನು ತೆಗೆದುಕೊಳ್ಳಿ ಮತ್ತು ಪ್ರತಿದಿನ ಸೇವಿಸಿ. ಮೀನನ್ನು ವಾರಕ್ಕೆ ಮೂರು ಬಾರಿ ಮಾತ್ರ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.

7. ವಿಟಮಿನ್ ಎ

ವಿಟಮಿನ್ ಎ ಅಂಶವು ಸಹಜ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬಹಳ ಸಹಕಾರಿ. ಅಷ್ಟೇ ಅಲ್ಲ ಮಾಂಸಗಳು ಮತ್ತು ಮೂಳೆಗಳನ್ನು ಜೋಡಿಸಲು ಕೂಡ ಇದು ಬೇಕಾಗುತ್ತದೆ. ಈ ಕೊಬ್ಬು ಕರಗಬಲ್ಲ ವಿಟಮಿನ್ ಆರೋಗ್ಯಕರ ಚರ್ಮ, ಕಣ್ಣುಗಳು ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆ ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಳ್ಳೆಯದು.

ವಿಟಮಿನ್ ಎ ಮೂಲಗಳು : ಚೀಸ್, ಹಾಲು, ಮೊಟ್ಟೆಗಳು, ಕ್ಯಾರೆಟ್ ಇತ್ಯಾದಿಗಳು. ಎಷ್ಟು ಮತ್ತು ಹೇಗೆ ಸೇವಿಸಬೇಕು?: ಕ್ಯಾರೆಟ್ ಮತ್ತು ಮೊಟ್ಟೆಯನ್ನು ನಿಮ್ಮ ಸಲಾಡ್ ಗಳಲ್ಲಿ ಸೇರಿಸಿ ಅಥವಾ ಪ್ರತಿದಿನ ಒಂದು ಲೋಟ ಹಾಲು ಕುಡಿಯಿರಿ. ಪ್ರತಿ ದಿನ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡು , ತಾಜಾ ಆಹಾರಗಳನ್ನು ಎಷ್ಟು ಸಾಧ್ಯವೋ ಅಷ್ಟು ಸೇವಿಸಿ.. ಒಟ್ಟಾರೆ ಆರೋಗ್ಯಕರವಾದ ಆಹಾರ ಸೇವನೆಯಿಂದ ನೀವು ಅತೀ ಹೆಚ್ಚು ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತೆ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.

English summary

Have These 7 Vitamins For Helping You Grow Taller

There are various ways to increase your height. Food plays an important role in this regard. Vitamins in foods play a significant role in increasing height along with the genetic structure. In this article, we will be writing about the vitamins that promote height growth. The human body requires a balanced diet that is rich in vitamins and minerals. Vitamins such as vitamin B1, vitamin B2, vitamin D, and vitamin C and minerals like phosphorus and calcium are necessary for your growth and development.
Story first published: Thursday, July 5, 2018, 15:46 [IST]
X
Desktop Bottom Promotion