ದೇಹದ ಲಿವರ್‌ನ ಆರೈಕೆ ಮಾಡುವ ಪವರ್ ಫುಲ್ ಆಹಾರಗಳು

Posted By: Arshad Hussain
Subscribe to Boldsky

ನಮ್ಮ ದೇಹವನ್ನು ಪ್ರವೇಶಿಸುವ ಯಾವುದೇ ಆಹಾರವಸ್ತುಗಳು ಯಕೃತ್ ಅಥವಾ ಲಿವರ್ ಮೂಲಕ ಹಾದು ಹೋಗಲೇ ಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಉತ್ತಮವಾಗಿರಬೇಕೆಂದರೆ ಯಕೃತ್‌ನ ಆರೋಗ್ಯವೂ ಉತ್ತಮವಾಗಿರುವುದು ಅಗತ್ಯ. ನಾವು ಸೇವಿಸುವ ಆಹಾರಗಳು ಯಕೃತ್‌ನ ಕೆಲಸವಾದ ಸೋಸುವಿಕೆಯನ್ನು ಬಲಪಡಿಸುವಂತಿರಬೇಕು.

ಈ ಕ್ಷಮತೆ ಇರುವ ಆಹಾರಗಳನ್ನು ಆಗಾಗ ಸೇವಿಸುತ್ತಿರುವ ಮೂಲಕ ಯಕೃತ್ ನ ಕ್ಷಮತೆ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. ಯಕೃತ್ ದೇಹದ ಇತರ ಅಂಗಗಳಿಗೆ ಶಕ್ತಿಯನ್ನು ನೀಡುವ ಅಂಗವೂ ಆಗಿದೆ. ಪ್ರೋಟೀನುಗಳ ಉತ್ಪಾದನೆ, ಕೊಲೆಸ್ಟ್ರಾಲ್ ಉತ್ಪಾದನೆ, ಪಿತ್ತರಸ ಉತ್ಪಾದನೆಯೂ ಯಕೃತ್ ನ ಕಾರ್ಯವಾಗಿದೆ. ಅಲ್ಲದೇ ಆಹಾರದಿಂದ ಲಭಿಸಿದ ವಿಟಮಿನ್ನುಗಳು, ಖನಿಜಗಳು ಹಾಗೂ ಕಾರ್ಬೋಹೈಡ್ರೇಟುಗಳನ್ನು ಸಂಗ್ರಹಿವುದೂ ಯಕೃತ್ ನ ಕೆಲಸವಾಗಿದೆ. 

ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಆದ್ದರಿಂದ ಯಕೃತ್‌ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಯಕೃತ್ ನ ಇನ್ನೊಂದು ಪ್ರಮುಖ ಕಾರ್ಯವೆಂದರೆ ಮದ್ಯ, ಔಷಧಿ ಹಾಗೂ ಜೀವರಾಸಾಯನಿಕ ಕ್ರಿಯೆಗಳ ಸಹ ಉತ್ಪನ್ನಗಳನ್ನು ಒಡೆದು ಕಲ್ಮಶಗಳನ್ನು ಹೊರಹಾಕುವುದಾಗಿದೆ. ಇದೇ ಕಾರಣಕ್ಕೆ ಮದ್ಯಸೇವನೆಯಿಂದ ಯಕೃತ್ ಅತಿ ಹೆಚ್ಚಿನ ಹಾನಿಗೊಳಗಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಯಕೃತ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಈ ಲೇಖನದಲ್ಲಿ ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಕೆಲವು ಅತ್ಯುತ್ತಮ ಆಹಾರಗಳನ್ನು ನಾವು ಪಟ್ಟಿ ಮಾಡಿದ್ದು. ಯಕೃತ್ ನ ಆರೋಗ್ಯಕ್ಕೆ ಪೂರಕವಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ....

 

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಂ ಎಂಬ ಖನಿಜ ಯಕೃತ್‌ನ ಆರೋಗ್ಯಕ್ಕೆ ತುಂಬಾ ಅಗತ್ಯವಾದ ಪೋಷಕಾಂಶವಾಗಿದೆ. ಆಂಟಿ ಆಕ್ಸಿಡೆಂಟುಗಳ ಪ್ರಭಾವವನ್ನು ಇವು ಹೆಚ್ಚಿಸುತ್ತವೆ ಹಾಗೂ ದೇಹದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ. ಯಕೃತ್‌ಗೆ ಇದು ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ ಬೆಳ್ಳುಳ್ಳಿಯಲ್ಲಿ ಆರ್ಜಿನೈನ್ ಎಂಬ ಅಮೈನೋ ಆಮ್ಲವೂ ಇದೆ. ಇದು ರಕ್ತನಾಳಗಳನ್ನು ನಿರಾಳಗೊಳಿಸಿ ಯಕೃತ್ ನ ಒಳಗೆ ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಆಲಿವ್ ಎಣ್ಣೆಯನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ಯಕೃತ್ ಗೆ ಹೆಚ್ಚಿನ ನೆರವು ದೊರಕುತ್ತದೆ. ಕಲ್ಮಶಗಳನ್ನು ಕರಗಿಸಿಕೊಳ್ಳುವ ಕೆಲವು ಕಿಣ್ವಗಳು ಈ ಎಣ್ಣೆಯಲ್ಲಿದ್ದು ಯಕೃತ್ ನ ಕೆಲಸದ ಹೊರೆಯನ್ನು ತಾನು ಹೊರುವ ಮೂಲಕ ಯಕೃತ್‌ನ ಹೊರೆಯನ್ನು ಕಡಿಮೆ ಮಾಡುತ್ತದೆ.

ಹಸಿರು ಸೊಪ್ಪು ಹಾಗೂ ತರಕಾರಿಗಳು

ಹಸಿರು ಸೊಪ್ಪು ಹಾಗೂ ತರಕಾರಿಗಳು

ಹಸಿರು ಸೊಪ್ಪು ಹಾಗೂ ತರಕಾರಿಗಳು ಯಕೃತ್‌ಅನ್ನು ರಕ್ಷಿಸುತ್ತದೆ ಹಾಗೂ ಆಹಾರದ ಮೂಲಕ ಆಗಮಿಸಿದ ಕೆಲವು ಖನಿಜಗಳು, ರಾಸಾಯನಿಕಗಳು ಹಾಗೂ ಕೀಟನಾಶಕಗಳನ್ನು ತಟಸ್ಥಗೊಳಿಸಲು ನೆರವಾಗುತ್ತದೆ. ಪಾಲಕ್, ಬೀಟ್ರೂಟ್, ಬ್ರೊಕೋಲಿ, ಹೂಕೋಸು ಮತ್ತು ಬ್ರಸಲ್ಸ್ ಮೊಳಕೆ ಮೊದಲಾದ ಆಹಾರಗಳು ಯಕೃತ್ ಗೆ ಪೂರಕವಾಗಿವೆ.

ಹಸಿರು ಟೀ

ಹಸಿರು ಟೀ

ಹಸಿರು ಟೀಯಲ್ಲಿ ಸಾವಯವ ಫ್ಲೇವಯಾಯ್ಡುಗಳ ಗುಂಪಿಗೆ ಸೇರಿದ ಕ್ಯಾಟೆಚಿನ್ ಎಂಬ ಆಂಟಿ ಆಕ್ಸಿಡೆಂಟ್ ಇದೆ. ವಿಜ್ಞಾನಿಗಳ ಪ್ರಕಾರ ಈ ಪೋಷಕಾಂಶ ದೇಹಕ್ಕೆ ಆವರಿಸುವ ಕೆಲವಾರು ಕ್ಯಾನ್ಸರುಗಳಿಂದ ರಕ್ಷಣೆ ಒದಗಿಸುತ್ತದೆ ಹಾಗೂ ಯಕೃತ್ ನ ಆರೋಗ್ಯವನ್ನು ಕಾಪಾಡುತ್ತದೆ.

 ಚಕ್ಕೋತ

ಚಕ್ಕೋತ

ಚಕ್ಕೋತ (Grapefruit) ನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹಾಗೂ ಯಕೃತ್ ಸ್ರವಿಸುವ ಗ್ಲುಟಾಥಿಯೋನ್ ಎಂಬ ಪೋಷಕಾಂಶವೂ ಇದೆ. ಒಂದು ಪ್ರಮಾಣದ ಚಕ್ಕೋತದಲ್ಲಿ 70 mg ನಷ್ಟು ಗ್ಲುಟಾಥಿಯೋನ್ ಇದೆ. ಇದು ಯಕೃತ್ ನ ವಿಷಕಾರಿ ವಸ್ತುಗಳನ್ನು ನಿವಾರಿಸುವ ಕಿಣ್ವಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಯಕೃತ್ ನ ಆರೋಗ್ಯ ಕಾಪಾಡಲು ಈ ಆಹಾರ ಅತ್ಯುತ್ತಮವಾಗಿದೆ.

ಅಕ್ರೋಟು

ಅಕ್ರೋಟು

ಅಕ್ರೋಟುಗಳಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಉತಮ ಪ್ರಮಾಣದಲ್ಲಿವೆ ಹಾಗೂ ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳೂ ಉತ್ತಮ ಪ್ರಮಾಣದಲ್ಲಿವೆ ಹಾಗೂ ಇವು ಯಕೃತ್ ನಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ಆರೋಗ್ಯಕರ ಕೊಬ್ಬುಗಳು ಯಕೃತ್ ನ ಜೀವಕೋಶಗಳ ಹೊರಪದರವನ್ನು ಇನ್ನಷ್ಟು ದೃಢಗೊಳಿಸಲು ನೆರವಾಗುತ್ತವೆ.

ಸೇಬು

ಸೇಬು

ಸೇಬುಹಣ್ಣಿನಲ್ಲಿ ಪೆಕ್ಟಿನ್ ಎಂಬ ಪೋಷಕಾಂಶ ಸಮೃದ್ಧವಾಗಿವೆ, ಅದು ದೇಹವನ್ನು ಶುದ್ಧೀಕರಿಸುವುದು ಮತ್ತು ಜೀರ್ಣಾಂಗದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.ತನ್ಮೂಲಕ ಇದು ಯಕೃತ್ತಿನ ಮೇಲಿನ ಭಾರವನ್ನು ತಡೆಯಲು ಸಹಾಯ ಮಾಡುತ್ತದೆ.

ಅರಿಶಿನ ಪುಡಿ

ಅರಿಶಿನ ಪುಡಿ

ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಸಕ್ರಿಯ ಪೋಷಕಾಂಶ ಒಂದು ಉತ್ತಮ ಆಂಟಿ ಆಕ್ಸಿಡೆಂಟು ಹಾಗೂ ಉರಿಯೂತ ನಿವಾರಕವಾಗಿದೆ. ಇದು ಪಿತ್ತಜನಕಾಂಗದ ನಾಳಗಳನ್ನು ಘಾಸಿಗೊಳ್ಳುವುದರಿಂದ ರಕ್ಷಿಸುತ್ತದೆ, ಪಿತ್ತರಸದ ಸ್ರಾವದ ಗತಿ ಹೆಚ್ಚಿಸುತ್ತದೆ ಹಾಗೂ ಯಕೃತ್ ಅನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಯಕೃತ್ ನ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಅರಿಶಿನವೂ ಅತ್ಯುತ್ತಮ ಆಹಾರವಾಗಿದೆ.

ದೇಹದ ಲಿವರ್‌ನ ಕಲ್ಮಶಗಳನ್ನು ನಿವಾರಿಸುವ ಅದ್ಭುತ ಆಹಾರಗಳು...

English summary

Foods That Can Take The Best Care Of Your Liver's Health

Keeping the liver in good shape is important for keeping the liver in good health. The liver also helps break down toxins, like alcohol, medications and other natural byproducts of metabolism. Giving utmost importance to your liver is very necessary. In this article we have listed some of the best foods to improve the liver's health. Read further to know about the top foods that are good for the liver.